ವಿಷಯಕ್ಕೆ ಹೋಗು

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1989

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆ
1989
ಭಾರತ
1985 1994
ಎಲ್ಲಾ 224 ವಿಧಾನಸಭಾ ಸ್ಥಾನಗಳಿಗೂ ಚುನಾವಣೆ
ಬಹುಮತ ಪಡೆದ ಪಕ್ಷ ಪ್ರಮುಖ ವಿರೋಧ ಪಕ್ಷ
ನಾಯಕ ವೀರೇಂದ್ರ ಪಾಟೀಲ್
ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜನತಾ ದಳ
ಈಗ ಗೆದ್ದ ಸ್ಥಾನಗಳು 178 24
ಹಿಂದಿನ ಮುಖ್ಯಮಂತ್ರಿ ಚುನಾಯಿತ ಮುಖ್ಯಮಂತ್ರಿ
ಎಸ್. ಆರ್. ಬೊಮ್ಮಾಯಿ ಜನತಾ ಪಕ್ಷ ವೀರೇಂದ್ರ ಪಾಟೀಲ್ ಕಾಂಗ್ಪೆಸ್

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1989ಕರ್ನಾಟಕದ ಒಂಬತ್ತನೆ ವಿಧಾನಸಭೆಗೆ ಚುನಾವಣೆಗಳು 1989ರಲ್ಲಿ ನಡೆದು ಕಾಂಗ್ರೆಸ್ ಪಕ್ಷವು ಅಧಿಕಾರ ಪಡೆಯಿತು. ಹಿಂದಿನ 1983ರ ವಿಧಾನಸಭೆಯಲ್ಲಿನ ಸ್ಥಾನಗಳಿಗಿಂತ ಕಾಂಗ್ರೆಸ್ 113 ಹೆಚ್ಚಿನ ಸ್ಥಾನಗಳನ್ನು ಪಡೆಯಿತು ಮತ್ತು ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು. ಒಂಬತ್ತನೆಯ ವಿಧಾನಸಭೆಯು 18 ಡಿಸೆಂಬರ್ 1989ರಿಂದ 20 ಸೆಪ್ಟಂಬರ್ 1994ರ ವರೆಗೆ ಆಸ್ತಿತ್ವದಲ್ಲಿತ್ತು ಮತ್ತು ಕೊನೆಗೆ ವಿಸರ್ಜಿಸಲ್ಪಟ್ಟಿತು. ಈ ಅವಧಿಯಲ್ಲಿ ವೀರೇಂದ್ರ ಪಾಟೀಲ್ ಅಲ್ಲದೆ ಕಾಂಗ್ರೆಸ್‌ನ ಎಸ್. ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಸಹ ಮುಖ್ಯಮಂತ್ರಿಯಾದರು. ಒಬ್ಬತ್ತನೆಯ ವಿಧಾನಸಭೆಯ ಅವಧಿಯಲ್ಲಿ ಕಾಂಗ್ರೆಸ್‌ನ ಎಸ್. ಎಂ. ಕೃಷ್ಣ ಮತ್ತು ವಿ. ಎಸ್. ಕೌಜಲಗಿ ಅವರು ವಿಧಾನಸಭೆಯ ಸ್ಪೀಕರ್ ಆಗಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆ, 1989
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳು ಸ್ಪರ್ದಿಸಿದ
ಸ್ಥಾನಗಳು
ಗೆಲುವು ಠೇವಣಿ ನಷ್ಟ ಒಟ್ಟಾರೆ ಮತಗಳು ಶೇಕಡವಾರು
ಮತಗಳು
ಕಾಂಗ್ರೆಸ್ 221 178 7 79,90,142 43.76
ಜನತಾ ದಳ 209 24 38 49,43,854 27.08
ಭಾರತೀಯ ಜನತಾ ಪಕ್ಷ 118 4 101 7,55,032 4.14
ಜನತಾ ಪಕ್ಷ 217 2 154 20,70,341 11.34
ಕರ್ನಾಟಕ ರಾಜ್ಯ ರೈತ ಸಂಘ 105 2 84 6,54,801 3.59
ಮುಸ್ಲಿಂ ಲೀಗ್ 13 1 12 80,612 0.44
ಅಣ್ಣಾ ಡಿಎಂಕೆ 1 1 0 32,928 0.18
ಇತರ ಪಕ್ಷಗಳು 71 0 65 2,47,717 1.35
ಪಕ್ಷೇತರರು 1088 12 1054 14,82,482 8.12
ಮೊತ್ತ 2043 224 1515 1,82,57,909 100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ಆಧಾರಗಳು

[ಬದಲಾಯಿಸಿ]