ವಿಷಯಕ್ಕೆ ಹೋಗು

ಕರ್ನಾಟಕ ಸಂಘ, ಮುಂಬಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕರ್ನಾಟಕ ಸಂಘ ಇಂದ ಪುನರ್ನಿರ್ದೇಶಿತ)

ಕರ್ನಾಟಕ ಸಂಘ,ಮಾಟುಂಗ (ಪಶ್ಚಿಮ), ಮುಂಬಯಿಮುಂಬಯಿ ನಗರದ ಹಳೆಯ ಕನ್ನಡ ಸಂಘಗಳಲ್ಲಿ ಒಂದು. ಮಾಟುಂಗದಲ್ಲಿರುವ(ಪೂರ್ವ),‘ ಮುಂಬಯಿ ಕನ್ನಡ ಸಂಘ’ ಈಗ ತನ್ನ ಹೊಸಕಟ್ಟಡ ನಿರ್ಮಾಣದ ಹಂತದಲ್ಲಿದೆ. ಮುಂಬಯಿನ ಇನ್ನೊಂದು ಮಹತ್ವದ 'ಕರ್ನಾಟಕ ಸಂಘ, ಮೈಸೂರ್ ಅಸೋಸಿಯೇಷನ್, ಮುಂಬಯಿ,' ಸಕ್ರಿಯವಾಗಿ ಕನ್ನಡ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಿಕೊಂಡು ಬರುತ್ತಿದೆ. ಯಕ್ಷಗಾನ, ನಾಟಕಗಳು, ನೃತ್ಯ,ಶಾಸ್ತ್ರೀಯ ಸಂಗೀತ, ಸಾಹಿತ್ಯ ಕಮ್ಮಟಗಳು, ಮುಂತಾದ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಮುಂಬಯಿ ಚಲನಶೀಲ ಸಂಘಟನೆಗಳಲ್ಲಿ ಒಂದಾದ ಕರ್ನಾಟಕ ಸಂಘ ತನ್ನ 83 ವರ್ಷಗಳ ಅವಧಿಯಲ್ಲಿ ಬಹಳ ಅರ್ಥಪೂರ್ಣ ಮತ್ತು ಅಪ್ರತಿಮ ಸಾಧನೆಗಳನ್ನು ಮಾಡಿದೆ. ಕರ್ನಾಟಕ ಸಂಘವು ಮುಂಬಯಿ–ಮಹಾರಾಷ್ಟ್ರ ರಾಜ್ಯಗಳ ನಡುವೆ ರಾಯಭಾರಿಯಾಗಿ ಕೆಲಸ ಮಾಡುತ್ತಾ ಬರುತ್ತಿದ್ದು ಕರ್ನಾಟಕದ ಜನರ ಗಮನ ಸೆಳೆಯುವಂತಹ ಅನೇಕ ಗಮನಾರ್ಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮುಂಬಯಿಯಲ್ಲಿ ಕನ್ನಡವನ್ನು ಜೀವಂತವಾಗಿರಿಸುವಲ್ಲಿ, ಕನ್ನಡದ ಜಾಗೃತಿ ಮೂಡಿಸುವಲ್ಲಿ ಸದಾಕ್ರಿಯಾಶೀಲವಾಗಿರುವ ಕರ್ನಾಟಕ ಸಂಘದ ಚಟುವಟಿಕೆಗಳಿಗೆ ಸದಸ್ಯರ ಸಹಕಾರ ನಿರಂತರ ಸಿಗುತ್ತಿರಲಿ. ಸಾಹಿತ್ಯ ಸಂಸ್ಕೃತಿ – ಸಮಾವೇಶ, ಕಲಾಭಾರತಿ, ಸಾಹಿತ್ಯ ಭಾರತಿ, ಮಕ್ಕಳ ಮೇಳ … ಇತ್ಯಾದಿ ಪ್ರಮುಖ ಕಾರ್ಯಕ್ರಮಗಳ ಜೊತೆ, ವರದರಾಜ ಆದ್ಯ ಪ್ರಶಸ್ತಿ, ಸಾಧನಾ ಶಿಖರ ಪ್ರಶಸ್ತಿ, ಡಾ. ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ… ಇಂತಹ ಪ್ರಶಸ್ತಿಗಳನ್ನೂ ನೀಡುತ್ತಿರುವ ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಗೃಹದ ಮೂಲಕ ನೂರಾರು ಪ್ರತಿಭೆಗಳು ಬೆಳಕಿಗೆ ಬಂದಿವೆ.

ವಿಳಾಸ

[ಬದಲಾಯಿಸಿ]

ಡಾ.ಎಂ.ವಿಶ್ವೇಶ್ವರಯ್ಯ ಸ್ಮಾರಕ ಮಂದಿರ, ಸಿ.ಎಸ್.ಎಮ್ ರಸ್ತೆ, ಮಾಟುಂಗಾ ರೋಡ್ (ಪಶ್ಚಿಮ), ಮುಂಬಯಿ -16.

ಕೊಂಡಿಗಳು

[ಬದಲಾಯಿಸಿ]

http://karnatakasanghamumbai.com/library.html