ಕಲ್ಲಪ್ಪಯ್ಯ ಮಹಾ ಶಿವಯೋಗಿಗಳು
ಕಲ್ಲಪ್ಪಯ್ಯ ಮಹಾ ಶಿವಯೋಗಿಗಳು ಜಗದ್ಗುರು ದಿಗಂಬರೇಶ್ವರ ಸಂಸ್ಥಾನ ಮಠದ ಪ್ರಭಾವಿ ಮಠಾಧೀಶರಾಗಿ ತಮ್ಮ ಅಗಾಧ ಶಕ್ತಿ ಮೂಲಕ ಭಕ್ತರ ಏಳ್ಗೆಗಾಗಿ ಶ್ರಮಿಸಿದ ವಾಕ್‌ಸಿದ್ದಿ ಪುರುಷ ಕಲ್ಲಪ್ಪಯ್ಯ ಮಹಾ ಶಿವಯೋಗಿಗಳು ತಮ್ಮ ಅಮೋಘ ತಪಸ್ಸಿನ ಮೂಲಕ ಭಕ್ತರಿಗೆ ಬೇಡಿದ ವರಗಳನ್ನು ನೀಡಿ ಭಕ್ತರ ಕಾಮಧೇನುವಾಗಿದ್ದರು.
ಚರಿತ್ರೆ
[ಬದಲಾಯಿಸಿ]ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಕೊಲ್ಹಾರದ ಆರಾಧ್ಯದೈವ ಸುಮಾರು 800 ವರ್ಷಗಳ ಹಿಂದೆ ಜನ್ಮತಾಳಿ ಈ ಭಾಗದ ಭಕ್ತರ ಆರಾಧ್ಯ ದೈವವಾಗಿ, ಭಕ್ತರ ಅನೇಕ ಇಷ್ಟಾರ್ಥಗಳನ್ನು ಈಡೇರಿಸಿದ ವಿಜಯನಗರ ಅರಸ ಪ್ರೌಢ ದೇವರಾಯನ ಬಗ್ಗೆ ಮಹಾಕಾವ್ಯ ರಚಿಸಿದ ಅದೃಶ್ಯ ಕವಿಯ ತವರು ಮತ್ತು ಮಹಿಪತಿ ದಾಸರು ತಪಗೈದ ಭೂಮಿ. ಭಕ್ತರನ್ನು ಉದ್ಧರಿಸಲು ನೆಲೆ ನಿಂತ ಪವಾಡಯೋಗಿ ಕಲ್ಲಪ್ಪಯ್ಯ ಮಹಾಶಿವಯೋಗಿಗಳ ಕರ್ಮಭೂಮಿ ಕೊಲ್ಹಾರ.
ವಾಕ್‌ಸಿದ್ದಿ ಪುರುಷ
[ಬದಲಾಯಿಸಿ]ಜಗದ್ಗುರು ದಿಗಂಬರೇಶ್ವರ ಸಂಸ್ಥಾನ ಮಠದ ಪ್ರಭಾವಿ ಮಠಾಧೀಶರಾಗಿ ತಮ್ಮ ಅಗಾಧ ಶಕ್ತಿ ಮೂಲಕ ಭಕ್ತರ ಏಳ್ಗೆಗಾಗಿ ಶ್ರಮಿಸಿದ ವಾಕ್‌ಸಿದ್ದಿ ಪುರುಷ ಕಲ್ಲಪ್ಪಯ್ಯ ಮಹಾ ಶಿವಯೋಗಿಗಳು ತಮ್ಮ ಅಮೋಘ ತಪಸ್ಸಿನ ಮೂಲಕ ಭಕ್ತರಿಗೆ ಬೇಡಿದ ವರಗಳನ್ನು ನೀಡಿ ಭಕ್ತರ ಕಾಮಧೇನುವಾಗಿದ್ದರು.
ನಾವಿಕನ ಸಹಾಯವಿಲ್ಲದೆ ಕೃಷ್ಣಾ ನದಿಯಲ್ಲಿ ಕಂಬಳಿ ಹಾಸಿ ಕೊರ್ತಿ ದಡದಿಂದ ಕೊಲ್ಹಾರ ಗ್ರಾಮಕ್ಕೆ ಬಂದು ಭಕ್ತರಿಗೆ ದರ್ಶನವನ್ನು ನೀಡಿದ ಮಹಾನ ಪುರುಷರು ತಮ್ಮ ಅಪಾರ ಶಕ್ತಿಯಿಂದ ಭಕ್ತರ ಉದ್ದಾರಕ್ಕಾಗಿ, ಧರ್ಮದ ಭಿಕ್ಷೆಗಾಗಿ ಕರ್ನಾಟಕ ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಸಂಚರಿಸಿದ್ದರು.
ಶಾಖಾ ಮಠಗಳು
[ಬದಲಾಯಿಸಿ]ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯ ಗ್ರಾಮಗಳಲ್ಲಿ ಶಾಖಾ ಮಠಗಳನ್ನು ಹೊಂದಿದೆ. ಬಾಗಲಕೋಟ ಜಿಲ್ಲೆಯ ಶಿರೂರ ಗ್ರಾಮದಲ್ಲಿ ಬರಗಾಲ ಬಿದ್ದಾಗ ಭಕ್ತರ ಅಪೇಕ್ಷೆಯಂತೆ ಮಳೆ ತರಿಸಿ ಕೆರೆಗಳನ್ನು ತುಂಬಿಸಿದ ಪವಾಡ ಪುರುಷರು. ಬಾದಾಮಿ ತಾಲೂಕಿನ ಮುರಡಿ ಗ್ರಾಮದಲ್ಲಿ ಕಲ್ಲಿನಲ್ಲಿ ಜಲ ತರಿಸಿ ಪವಾಡ ಮಾಡಿದರು. ಅಲ್ಲಿ ಇಂದಿಗೂ ನಿರಂತರವಾಗಿ ನೀರು ಹರಿಯುತ್ತಿದೆ.
ಬಾಗಲಕೋಟ ಜಿಲ್ಲೆಯ ಬೀಳಗಿ ತಾಲ್ಲೂಕಿನ ಮನ್ನಿಕೇರಿ ಗ್ರಾಮದಲ್ಲಿ ಯಮನಪ್ಪ ಕರಿಗೊಂಡ (ಮೇಟಿ) ಅವರಿಗೆ ಶ್ರೀಮಂತಿಕೆ ಕೊಟ್ಟು, ಗಂಡು ಸಂತಾನ ಕರುಣಿಸಿದ್ದರಿಂದ ಶ್ರೀಗಳಿಗೆ ಕೊಲ್ಹಾರ ಮಠಕ್ಕೆ ಮಹಾದ್ವಾರ ನಿರ್ಮಿಸಿ ಕೊಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತುಗ್ಗಳಡೊಣ್ಣಿ, ಪರಮನಹಟ್ಟಿಯ ಕೋಣಾಪುರ ಗ್ರಾಮದಲ್ಲಿ ಕಲ್ಲಪ್ಪಯ್ಯ ಮಹಾಶಿವಯೋಗಿಗಳು ಗ್ರಾಮದ ದುಷ್ಟ ಪಿಶಾಚಿಗಳನ್ನು ಸಂಹರಿಸಿ ಭಕ್ತರನ್ನು ರಕ್ಷಿಸಿದರೆಂಬ ಮಾತಿದೆ. ಇಂಥ ಮಹಾನ್ ಶಿವಯೋಗಿಗಳ ತಾಯಿಯ ಶಾಪದಂತೆ ಲಿಂಗದೊಳಗೆ ಲೀನರಾಗಿ ಇವತ್ತಿಗೆ 52 ವರ್ಷಗಳು ಗತಿಸಿದರೂ ಇಂದಿಗೂ ಭಕ್ತರ ಹದಯದಲ್ಲಿ ಚಿರಂಜೀವಿಯಾಗಿ ನೆಲೆಸಿದ್ದಾರೆ. ಪ್ರತಿವರ್ಷ ಪೂಜ್ಯರ ಸ್ಮರಣೋತ್ಸವ ನಿಮಿತ್ತ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ನೆರವೇರುವುದು ಮತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಮೆರವಣಿಗೆ ನಡೆಯುವುದು ನಂತರ ನಡೆಯುವ ಕಾರ್ಯಕ್ರಮ ಶ್ರೀ ಮಠದ ಕಲ್ಲಿನಾಥ ದೇವರ ಸಾನ್ನಿಧ್ಯದಲ್ಲಿ ನಡೆಯುತ್ತವೆ. [೧]
ಉಲ್ಲೇಖಗಳು
[ಬದಲಾಯಿಸಿ]