ಕಾಟರ್
ಕಾಟರ್(Cotter (pin)) ಒಂದು ಅಗುಳಿ ಅಥವಾ ಅಲ್ಪವಸ್ತು.ಇದನ್ನು ಯಾವುದೇ ಎರಡು ಬೇರೆ ಬೇರೆ ಭಾಗಗಳ ರಂಧ್ರದ ಮೂಲಕ ಹೊರಡಿಸುವುದರಿಂದ ಅವುಗಳನ್ನು ದೃಢವಾಗಿ ಜೋಡಿಸಬಹುದು(ಹೊಂದಿಸಬಹುದು). ಬ್ರಿಟೀಶ್‍ರು ಇದೇ ಅರ್ಥದಲ್ಲಿ ಉಪಯೋಗಿಸುವರು[೧]. ಆದರೆ, ಅಮೇರಿಕ ಸಂಯುಕ್ತ ಸಂಸ್ಥಾನ ದವರಿಗೆ ಇದು ಬೇರೆಯ ಬಂಧಕ(ಪ್ಯಾಸೆನೆರ್) ಆಗಿದೆ.
ಈ ಕಾಟರ್‍ಗಳು ಗಿಡ್ಡವಾದ ಥ್ರೆಡೆಡ್ ಸೆಕ್ಶನ್(Threaded section)ಮತ್ತು ಕಿರಿದಾದ ಕೊನೆಯನ್ನು ಹೊಂದಿರುತ್ತದೆ.ಈ ಥ್ರೆಡೆಡ್ ಸೆಕ್ಶನ್(Threaded section) ವಾಷರ್ ಮತ್ತು ನೆಟ್ ಮೂಲಕ ಕಾಟರ್‍ನ್ನು ನಿಗಧಿತ ಸ್ಥಳದಲ್ಲಿ ಕೂರಿಸಲು ಉಪಯೋಗವಾಗಿದೆ.
ಇದರ ಮುಖ್ಯವಾದ ಉಪಯೋಗಗಳೆಂದರೆ ದ್ವಿಚಕ್ರವಾಹನಗಳ ಜೋಡಣೆಯಲ್ಲಿ, ತಿರುಗುಬೆಣೆ (crank) ಮತ್ತು ಕ್ರಾನ್ಕ್ ಶಾಫ಼್ಟ್(crankshaft), ಸ್ಟೀಮ್ ಎನ್ಜಿನ್ (Steam engine)ನ ಪಿಸ್ಟನ್ ರಾಡ್ (piston rod) ಮತ್ತು ಕ್ರಾಸ್ ಹೆಡ್(crosshead) ಜೋಡಣೆಯಲ್ಲಿ ಬಳಸಲಾಗುತ್ತದೆ.ಸಾಮಾನ್ಯವಾಗಿ ಇದನ್ನು ಸೈಕಲ್‍ನ ಕ್ರಾಂಕ್ ಜೋಡಣೆಯಲ್ಲಿ ಬಳಸುತ್ತಾರೆ. ಕಾಟರ್ ಪಿನ್‍ನ ಕೋನವು ಜೋಡಿಸಬೇಕಾದ ಭಾಗಗಳ ಸ್ಥಾನವನ್ನು ಸೂಚಿಸುತ್ತದೆ. ಆದುದರಿಂದ ಕಾಟರ್ ಪಿನ್ನಿನ ವೆಡ್ಜ್ ನ ಕೋನವು ಪಿನ್ನಿನ ಎರಡೂ ಕಡೆ ಸಮವಾಗಿದ್ದರೆ ಬೈಸಿಕಲ್ ನ ಮೇಲೆ ಭುಜಗಳು ೧೮೦ ಡಿಗ್ರಿ ಕೋನದಲ್ಲಿ ಮಾತ್ರ ಇರುತ್ತದೆ.
ಜನಪ್ರಿಯ ಉಪಯೋಗಗಳು
[ಬದಲಾಯಿಸಿ]ಈ ಹಿಂದೆ, ಸಾಮಾನ್ಯವಾಗಿ ಬೈಸಿಕಲ್ ನ ಕ್ರಾಂಕ್‍ನ್ನು ಕಾಟರ್‍ನ್ನು ಉಪಯೋಗಿಸಿ ಕೂರಿಸುವುದೂ ಆದರೂ, ಈಗ ಹೆಚ್ಚು ಸುಲಭವಾಗಿ ನಿರ್ವಹಿ ಸುವಂತಿರುವ ವ್ಯವಸ್ಥೆಯಾದ ಚೌಕಾಕಾರದ ಕೋಚಂಚು ಅಥವಾ ಜಾರು ಕೀಲಕ ಸಮವಾದ ಎಲ್ಲೆಯಾಗಿರುವ ಮೇಲ್ಮೈ ಇರುವಂತಿರುವುದನ್ನು ಉಪಯೋಗಿಸುವರು. ಈ ಕಾಟರ್‍ಗಳು ವಾಷರ್ ಮತ್ತು ನಟ್‍ನ ಜತೆಗೆ ಕಾಟರ್‍ನ್ನು ಅದರ ಜಾಗದಲ್ಲಿ ಕೂರಿಸಲು ಕಿರಿದಾದ ಕೊನೆಯಲ್ಲಿ ಥ್ರೆಡ್ ಭಾಗವನ್ನು ಹೊಂದಿದೆ.
ಚರಿತ್ರೆ
[ಬದಲಾಯಿಸಿ]ಕಾಟರ್ ಮೂಲ ವಿನ್ಯಾಸವನ್ನು "ರುಡೋಲ್ಫ ಕಾಟರ್" ರವರು ೧೮೩೪ ರಲ್ಲಿ ವಿನ್ಯಾಸಗೊಳಿಸಿದರು. ಮೂಲ ವಿನ್ಯಾಸವು ಒಂದು ರಂಧ್ರವುಳ್ಳ ಬೋಲ್ಟ್ (bolt) ಮತ್ತು ಒಂದು ಲೋಹದ ಭಾಗವನ್ನು ಹೊಂದಿತ್ತು.
ಕಾಟರ್ ನ ವಿಧಗಳು
[ಬದಲಾಯಿಸಿ]- ಗಿಬ್ ರಹಿತ ಕಾಟರ್
- ಎರಡು ಗಿಬ್ಗಳುಳ್ಳ ಕಾಟರ್
- ಒಂದು ಗಿಬ್ ಉಳ್ಳ ಕಾಟರ್
ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Van der Plas, Rob (1993), The Bicycle Repair Book: The New Complete Manual of Bicycle Care (2nd ed.), MBI Publishing Company, p. 66, ISBN 978-0-933201-55-2