ಇದು ಉತ್ತರ ಇಂಡಿಯಾದ ಅತ್ಯಂತ ಹಳೆಯ ಔದ್ಯಮಿಕ ವಸಾಹತು.[೨] ಇದರ ಮಹಾನಗರ ವ್ಯಾಪ್ತಿಯು 1,640 square kilometres (630 sq mi) ಆಗಿದ್ದು ನಗರವ್ಯಾಪ್ತಿಯು 829 km2 ನಷ್ಟು ವಿಸ್ತಾರವಾಗಿದೆ ಹಾಗೂ ೪೮,೬೪,೬೭೪ ಜನಸಂಖ್ಯೆಯನ್ನು ಹೊಂದಿದೆ[೩]. ಆಡಳಿತಾತ್ಮಕವಾಗಿ ಈ ನಗರವನ್ನು ೬ ವಲಯಗಳು ಹಾಗೂ ೧೧೦ವಾರ್ಡುಗಳಾಗಿ ವಿಂಗಡಿಸಲಾಗಿದೆ..[೪]
ಕಾನ್ಪುರ ನಗರಾಭಿವೃದ್ಧಿ ಯೋಜನೆ (ಸಿಡಿಪಿ) ಯು ಪಾರದರ್ಶಕವಾಗಿದ್ದು ವಿಕಾಸದ ಮುನ್ನೋಟವಾಗಿದೆ. ಸಿಡಿಪಿಯ ಅಧ್ಯಯನವನ್ನು ಇತ್ತೀಚೆಗೆ [when?]ಜೆಪಿಎಸ್ ಅಸೋಸಿಯೇಟ್ಸ್ ಮೂಲಕ ಕೈಗೊಳ್ಳಲಾಗಿದೆ. ನಗರದ ಹೂಡಿಕೆದಾರರ ಮತ್ತು ನಗರಾಭಿವೃದ್ಧಿಗೆ ಸಂಬಂಧಿಸಿದ ಅಧಿಕಾರಿಗಳ ಸಲಹೆಯಾಧರಿಸಿ ವರದಿ ಸಿದ್ಧಪಡಿಸಲಾಗುವುದು. ಆದ್ಧರಿಂದ ಈ ಸಿಡಿಪಿಯು ನಿಜವಾಗಿಯೂ ಸ್ಥಳೀಯ ಜನರ, ಕೊಳಚೆನಿವಾಸಿಗಳ ಹಾಗೂ ಕಾನ್ಪುರವನ್ನು ಭವಿಷ್ಯದ ನಗರವಾಗಿಸಲು ಬದ್ದವಾಗಿರುವ ಅಧಿಕಾರಿಗಳ ಮುನ್ನೋಟವನ್ನು ಹೊಂದಿರುತ್ತದೆ.[೪]
ಸಚೆಂದಿ ರಾಜ್ಯದ ರಾಜ ಚಂದೇಲನಿಂದ ಕಾನ್ಪುರ ನಿರ್ಮಾಣವಾಯಿತೆಂಬ ಐತಿಹ್ಯವಿದೆ.[೫] ಕಾನ್ಪುರ ನಗರದ ಹೆಸರು ಕನ್ಹಯ್ಯಾಪುರದಿಂದ ವ್ಯುತ್ಪತ್ತಿಯಾಗಿರಬಹುದು ಹಾಗೂ ಕಾಲಾನಂತರದಲ್ಲಿ ಕನ್ಹಯ್ಯಾಪುರ, ಕನ್ಹಪುರ ಮತ್ತು ಕಾನ್ಪುರ ಆಗಿ ಪರಿವರ್ತಿತಗೊಂಡಿರಬಹುದು ಎನ್ನಲಾಗಿದೆ. ಬ್ರಿಟಿಷ್ ಆಡಳಿತಾವಧಿಯಲ್ಲಿ "Cawnpore" ಎಂದೂ ಕರೆಸಿಕೊಂಡಿತ್ತು. ಹಳೆಯ ಭೂಪಟಗಳಲ್ಲಿ ಈ ಹೆಸರನ್ನೂ ಕಾಣಬಹುದಾಗಿದೆ..
ಮಹಾಭಾರತದ ಕರ್ಣನೊಂದಿಗೆ ತಳಕು ಹಾಕಿಕೊಂಡಿದ್ದು, ಕರ್ಣಪುರ ಎಂಬ ಹೆಸರಿನಿಂದ ಇದು ವ್ಯುತ್ಪತ್ತಿಯಾಗಿದೆ ಎನ್ನುವುದು ಕೆಲವರ ವಾದ. ಇನ್ನೊಂದು ನಂಬಿಕೆಯ ಪ್ರಕಾರ ಇದು ಹತ್ತಿರದ ಪಟ್ಟಣ ಮಾಕನ್‌ಪುರದ ನೆವದಿಂದ ಬಂದಿರಬಹುದು ಎಂದು ಸೂಚಿಸುತ್ತದೆ. ಮದರಿಯಾಸೂಫಿ ತತ್ವದ ಅನುಯಾಯಿ ಬದಿವುದ್ದೀನ್ ಝಿಂದಾ ಶಹಾ ಮದರ (ಕ್ರಿ.ಶ. ೧೪೩೪) ಎಂಬ ಸೂಫಿ ಸಂತನು ಖೈರಾಬಾದ್ ಎಂದು ಕರೆಯಲ್ಪಡುತ್ತಿದ್ದ ಇಲ್ಲಿ ವಾಸ್ತವ್ಯ ಮಾಡಿದ್ದನು.[೬]
ಸುಮಾರು ಒಂದು ಸಾವಿರದಷ್ಟಿದ್ದ ಬ್ರಿಟಿಷ್ ಪಡೆಗಳು ಹಾಗೂ ಅವರ ಕುಟುಂಬವರ್ಗ ಮತ್ತು ನಿಷ್ಠಾವಂತ ಯೋಧರನ್ನು ಜನರಲ್ ವೀಲರ್ಸ್ ಕೂಡುಸ್ಥಳದಲ್ಲಿ ಜೂನ್ ೧೮೫೭ರಲ್ಲಿ ಮೂರುವಾರಗಳ ಕಾಲ ಸುತ್ತುವರಿದು ಸ್ಥಳೀಯ ರಾಜ ನಾನಾ ಸಾಹೇಬನು ಹಿಂಸಿಸಿದ್ದ.
೧೩ನೇ ಶತಮಾನದವರೆಗೆ ಕಾನ್ಪುರ ಅಭಿವೃದ್ಧಿ ಅಸ್ಪಷ್ಟವಾಗಿತ್ತು. ಕಾನ್ಪುರ ಕುರಿತು ಇತಿಹಾಸದಲ್ಲಿ ಯಾವುದೇ ದಾಖಲೆ ಲಭ್ಯವಾಗದಿದ್ದರೂ, ಇದರ ಎರಡು ಉಪನಗರಗಳಾದ ಜಾಜಮೌ ಮತ್ತು ಬಿಟ್ಟೂರ್ ಕುರಿತ ಕುರುಹುಗಳನ್ನು ಪೌರಾಣಿಕ ಕಾಲದಲ್ಲಿ ಗುರುತಿಸಬಹುದಾಗಿದೆ. ನದಿಯ ಮೇಲ್ಬಾಗದಲ್ಲಿ ನಗರದಿಂದ ಅಂದಾಜು ೨೦ ಕಿ.ಮೀ ಮತ್ತು ಐಐಟಿ ಕಾನ್ಪುರ ಕ್ಯಾಂಪಸ್ ನಿಂದ ೧೦ ಕಿ. ಮೀ ದೂರದಲ್ಲಿ ಬಿಟ್ಟೂರ್ ಇದೆ. ಕಾನ್ಪುರ ನಗರದಿಂದ ೮ ಕಿ. ಮೀ ಮತ್ತು ಐಐಟಿ ಕ್ಯಾಂಪಸ್ ಕೆಳ ಪ್ರದೇಶದಲ್ಲಿ ಸರಿಸುಮಾರು ೨೦ ಕಿ. ಮೀ. ಅಂತರದಲ್ಲಿ ಜಾಜಮವು ಇದೆ. ಹಿಂದು ಪೌರಾಣಿಕ ಕಥೆಯ ಪ್ರಕಾರ ವಿಶ್ವವನ್ನು ಸೃಷ್ಟಿಸಿದ ಕೂಡಲೆ ಬ್ರಹ್ಮದೇವನು ಬಿಟ್ಟೂರ್ (ಬ್ರಹ್ಮಾವರ್ತ ಎಂದೂ ಕರೆಯಲಾಗುತ್ತದೆ) ನಲ್ಲಿಅಶ್ವಮೇಧ ಯಾಗವನ್ನು ಮಾಡಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದನು. ಬಿಟ್ಟೂರ್ ನಲ್ಲಿರುವ ಇನ್ನೊಂದು ಪ್ರಖ್ಯಾತ ಸ್ಥಳ ಎಂದರೆ, ರಾಮಾಯಣ ಮಹಾಕಾವ್ಯವನ್ನು ಸಂಸ್ಕೃತದಲ್ಲಿ ಬರೆದ ಎಂದು ಹೇಳಲಾಗುವ ಪ್ರಖ್ಯಾತ ಋಷಿ ವಾಲ್ಮಿಕಿಯ ಆಶ್ರಮ. ಅಯೋಧ್ಯೆಯ ರಾಜ ರಾಮಚಂದ್ರನಿಂದ ಪರಿತ್ಯಕ್ತಳಾದ ರಾಣಿ ಸೀತೆಯು ಈ ಆಶ್ರಮದಲ್ಲಿ ದಿನಗಳನ್ನು ಕಳೆಯುತ್ತ ತನ್ನ ಅವಳಿ ಮಕ್ಕಳಾದ ಲವ ಮತ್ತು ಕುಶರನ್ನು ಬೆಳೆಸಿದಳು ಎಂದು ನಂಬಲಾಗಿದೆ.
ಜಾಜಮೌದಲ್ಲಿ ಪ್ರಾಚೀನ ಕಾಲದ ಕೋಟೆಯ ಪಳೆಯುಳಿಕೆಗಳು ಇದ್ದು, ಸದ್ಯ ಮಣ್ಣಿನ ದಿಬ್ಬವಾಗಿ ಉಳಿದುಕೊಂಡಿದೆ. ಈ ಮಣ್ಣಿನ ದಿಬ್ಬದ ಇತ್ತೀಚಿನ ಉತ್ಖನನಗಳಿಂದ ಈ ಸ್ಥಳವು ಅತ್ಯಂತ ಪ್ರಾಚೀನವಾಗಿದ್ದು, ವೇದಗಳ ಕಾಲದ್ದು ಎಂದು ಸೂಚಿಸುತ್ತಿದೆ. ಜನಪ್ರಿಯ ನಂಬುಗೆಯ ಪ್ರಕಾರ ಚಂದ್ರವಂಶದ ರಾಜ ಯಯಾತಿಗೆ ಈ ಕೋಟೆ ಸೇರಿತ್ತು.
ಕಾನ್ಪುರ ಸೆಂಟ್ರಲ್ ರೈಲುನಿಲ್ದಾಣದಿಂದ ೨೦ ಕಿ.ಮೀ ದೂರದಲ್ಲಿರುವ ಶಿವರಾಜಪುರದಲ್ಲಿ ಚಂದೇಲ್ ರಾಜನಾಗಿದ್ದ ಸತಿಪ್ರಸಾದ್ ತನ್ನ ರಾಣಿಯ ಸ್ಮರಣಾರ್ಥ ನಿರ್ಮಿಸಿದ ಪ್ರಾಚೀನ ಕಾಲದ ದೇವಸ್ಥಾನ ಇದೆ. ಗಂಗಾ ನದಿ ತೀರದಲ್ಲಿರುವ ಈ ದೇವಸ್ಥಾನವನ್ನು ರಾತ್ರಿ ನಿರ್ಮಿಸಲಾಗಿದೆ ಎಂಬ ನಂಬಿಕೆ ಇದೆ. ಸುಂದರವಾದ ಶಿಲ್ಪಕಲೆ ಕೆಲಸ ಮತ್ತು ವಿಶಿಷ್ಟ ವಿನ್ಯಾಸದ ಕೆತ್ತನೆಗಳಿಂದಾಗಿ ಈ ದೇವಸ್ಥಾನ ಪ್ರಸಿದ್ಧವಾಗಿದೆ. ಮೊಘಲ್ ಶಕೆ ಪ್ರಾರಂಭವಾಗುವುದಕ್ಕಿಂತ ಮುನ್ನ ಇತಿಹಾಸದ ಪ್ರಮುಖ ಕಾಲಾವಧಿಯಲ್ಲಿ ಕನೌಜ್‌ನ ಪ್ರತಿಹಾರರು ಈ ಪ್ರದೇಶವನ್ನು ಆಳಿದರು ಎನ್ನಲಾಗಿದೆ. ಪ್ರತಿಹಾರರ ರಾಜಧಾನಿ ಕನೌಜ್‌ಗೆ ಕಾನ್ಪುರ ಹತ್ತಿರವಾಗಿರುವ ಕಾರಣ ಈ ನಗರವನ್ನು ಪ್ರತಿಹಾರ ವಂಶದ ರಾಜನಾದ ಮಿಹೀರ್ ಭೋಜ ಆಳಿದ್ದಾನೆ ಎಂದು ಕೆಲ ಐತಿಹಾಸಿಕ ಘಟನೆಗಳು ಸೂಚಿಸುತ್ತವೆ.[೭]
(ಕನೌಜ್ ಆಧಿಪತ್ಯಕ್ಕೆ ಸಂಬಂಧ ಹೊಂದಿದ್ದ) ಪ್ರಯಾಗದ ರಾಜಾ ಕಾಂತಿದೇವ, ಕ್ರಿ.ಶ ೧೨೦೭ರಲ್ಲಿ ಕೊಹ್ನಾ ಎಂಬ ಗ್ರಾಮವನ್ನು ನಿರ್ಮಿಸಿದನು. ನಂತರ ಇದೇ ಕಾನ್ಪುರ ಎಂದಾಯಿತು. ಹರ್ಷವರ್ಧನ, ಭೋಜ, ಮಿಹೀರ್ ಜಯಚಂದ್ ಮತ್ತು ಸೂರ್ ವಂಶದ ಮುಸ್ಲಿಂ ದೊರೆಗಳ ಅವಧಿಯಲ್ಲಿ ಕಾನ್ಪುರ, ಕನೌಜ್‌ನೊಂದಿಗೆ ಬಾಂಧವ್ಯ ಹೊಂದಿತ್ತು. ೧೫೭೯ರ ಅವಧಿಯ ಶೇರ್‌ಶಹಾ, ಆಡಳಿತಾವಧಿಯಲ್ಲಿ ಮೊದಲ ಬಾರಿಗೆ ಕಾನ್ಪುರ ಉಲ್ಲೇಖ ಕಂಡುಬರುತ್ತದೆ. ೧೮ನೇ ಶತಮಾನದ ಮೊದಲಾರ್ಧದವರೆಗೆ ಕಾನ್ಪುರ ಪ್ರಾಮುಖ್ಯತೆ ಇಲ್ಲದ ಗ್ರಾಮವಾಗಿತ್ತು. ಆದರೆ ೧೮ನೇ ಶತಮಾನದ ದ್ವಿತೀಯಾರ್ಧದಲ್ಲಿ ಇದರ ಅದೃಷ್ಟ ಹೊಸ ದಿಕ್ಕಿನತ್ತ ತಿರುಗಿತು. ಮೇ ೧೭೬೫ರಲ್ಲಿ ಜಾಜಮೌ ಬಳಿ ಅವಧ್ ನ ನವಾಬ್ ಶುಜಾ-ಉದ್-ದೌಲಾ ಬ್ರಿಟಿಷರಿಂದ ಪರಾಭವಗೊಂಡನು. ೧೭೭೩ರಿಂದ ೧೮೦೧ರವರೆಗೆ ಅವಧ್ ರಾಜ್ಯದ ಭಾಗವಾಗಿದ್ದ ಕಾನ್ಪುರದ ಪ್ರಾಮುಖ್ಯತೆಯನ್ನು ಬ್ರಿಟಿಷರು ಮನಗಂಡರು. ಈ ಅವಧಿಯಲ್ಲಿ ಯುರೋಪಿನ ವ್ಯಾಪಾರಿಗಳು ಕಾನ್ಪುರದಲ್ಲಿ ತಮ್ಮ ವ್ಯವಹಾರ ಸ್ಥಾಪಿಸಲು ಪ್ರಾರಂಭಿಸಿದರು. ಈ ಯುರೋಪಿಯನ್ ಮೂಲದ ವ್ಯಾಪಾರಿಗಳ ಜೀವ ಮತ್ತು ಆಸ್ತಿಯ ಸುರಕ್ಷೆ ದೃಷ್ಟಿಯಿಂದ 'ಅವಧ್ ಸ್ಥಳೀಯ ಪಡೆ'ಗಳನ್ನು ೧೭೭೮ರಲ್ಲಿ ಸ್ಥಳಾಂತರಿಸಲಾಯಿತು.
೧೮೦೧ರಲ್ಲಿ ಅವಧ್ ನವಾಬ್ ಸಾದತ್ ಅಲಿಯೊಂದಿಗೆ ಆದ ಒಪ್ಪಂದ ಪ್ರಕಾರ ಕಾನ್ಪುರ ಬ್ರಿಟಿಷರಿಗೆ ಹಸ್ತಾಂತರವಾಯಿತು. ಕಾನ್ಪುರ ಇತಿಹಾಸದಲ್ಲಿ ಇದು ಬದಲಾವಣೆಯ ದಿಕ್ಕು. ಎಕೆಂದರೆ, ಬ್ರಿಟಿಷ್ ಇಂಡಿಯಾದ ಅವಧಿಯಲ್ಲಿ ಕಾನ್ಪುರವು ಅತ್ಯಂತ ಪ್ರಮುಖ ಮಿಲಿಟರಿ ಕೇಂದ್ರವಾಗಿ ರೂಪುಗೊಂಡಿತು. ಮಾರ್ಚ್ ೨೪, ೧೮೦೩ರಲ್ಲಿ ಇದನ್ನು ಜಿಲ್ಲೆ ಎಂದು ಘೋಷಿಸಲಾಯಿತು. ದಕ್ಷಿಣ ಪರ್ಮತ್ ಭಾಗವು ಬ್ರಿಟಿಷ್ ಪದಾತಿದಳ ಮತ್ತು ಪೆರೇಡ್ ಮೈದಾನವಾಗಿದ್ದವು. ಭಾರತೀಯ ಪದಾತಿದಳವು ಚುನ್ನಿಗಂಜ್‌ನಿಂದ ಕ್ರೈಸ್ಟ್ ಚರ್ಚ್ ಕಾಲೇಜಿನವರೆಗೆ ಇದ್ದ ಸ್ಥಳವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ೧೮೪೭ರಲ್ಲಿ ಕಂಪನಿ ಬಾಗ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಮತ್ತು ೧೮೫೪ರಲ್ಲಿ ಗಂಗಾ ಕಾಲುವೆ ನಿರ್ಮಾಣ ಕಾಮಗಾರಿ ಪ್ರಾರಂಭವಾಯಿತು. ಕಾಲಾಂತರದಲ್ಲಿ ರಾಣಿ ವಿಕ್ಟೋರಿಯಾಳ ಕನಸಿನ ಪರಿಣಾಮವಾಗಿ ಅವಧ್ ಮತ್ತು ಕಾನ್ಪುರ ಬ್ರಿಟಿಷರ ತಂತ್ರ ವಿನ್ಯಾಸದ ಕೇಂದ್ರ ಸ್ಥಾನವನ್ನು ವಹಿಸಿದವು. ಸಶಸ್ತ್ರ ಪಡೆಯ ಕೇಂದ್ರ ಸ್ಥಾನ ಮತ್ತು ಅದರ ಸಾಮ್ರಾಜ್ಯ ವಿಸ್ತರಣೆಯ ಗುರಿಗಳ ಉತ್ಪಾದನಾ ಕೇಂದ್ರವಾಗಿ ಪರಿವರ್ತಿತಗೊಂಡವು.
೧೯೯೯ರಲ್ಲಿ ಫೂಲ್‌ಭಾಗ್ ಮೈದಾನದಲ್ಲಿನ ಕೆಇಎಂ ಹಾಲ್‌ನಲ್ಲಿ ಕಾನ್ಪುರ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗಿದ್ದು ವಸಾಹತುಪೂರ್ವ ಮತ್ತು ವಸಾಹತುಶಾಹಿ ಅವಧಿಯಲ್ಲಿನ ಮೌಲಿಕ ಕಲೆ ವಸ್ತುಗಳನ್ನು ಸಂಗ್ರಹಿಸಲಾಗಿದೆ.
ಚಿತ್ರ:Kanpur 1857.jpgಭಾರತೀಯ ಹೋರಾಟಗಾರರ ಹಿಡಿತದಲ್ಲಿದ್ದ ಬ್ರಿಟೀಷ್ ತುಕಡಿಗಳನ್ನು ಬಿಡಿಸಲು ಜನರಲ್ ಹ್ಯಾವ್‌ಲಾಕ್ ನೇತೃತ್ವದಲ್ಲಿ ನಡೆದ ಹೈಲ್ಯಾಂಡರ್‌ದಾಳಿ
೧೯ನೇ ಶತಮಾನದಲ್ಲಿ ಕಾನ್ಪುರ ೭,೦೦೦ ಸೈನಿಕರನ್ನು ಒಳಗೊಂಡಿದ್ದ ಬ್ರಿಟಿಷ್ ರ ಪ್ರಮುಖ ಕೋಟೆಯಾಗಿತ್ತು. ೧೮೫೭ರ ಭಾರತೀಯ ಬಂಡಾಯದ ಅವಧಿಯಲ್ಲಿ ೯೦೦ ಬ್ರಿಟಿಷರನ್ನು ಅವರ ಕೋಟೆಯಲ್ಲಿ ನಾನಾ ಸಾಹಿಬ್ ನೇತೃತ್ವದ ಬಂಡುಕೋರರು ೨೨ ದಿನಗಳ ಕಾಲ ಸುತ್ತುವರಿದಿದ್ದರು. ಒಪ್ಪಂದದ ಪ್ರಕಾರ ಅವರು ಹತ್ತಿರದ ಸತಿಚೌರಾ ಘಾಟ್‌ವರೆಗೆ ಸುರಕ್ಷಿತ ಮಾರ್ಗವನ್ನು ಕಲ್ಪಿಸಬೇಕು ಮತ್ತು ಅಲ್ಲಿಂದ ಅಲಹಾಬಾದ್ಗೆ ಬಾರ್ಜ್ ಮೂಲಕ ತೆರಳುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಶರಣಾಗತರಾದರು. ಸತಿಚೌರಾ ಘಾಟ್‌ನಲ್ಲಿ ಯಾರು ಮೊದಲು ಗುಂಡು ಹಾರಿಸಿದರು ಎನ್ನುವ ಬಗ್ಗೆ ಗೊಂದಲಕಾರಿ ಹೇಳಿಕೆಗಳಿದ್ದರೂ, ತೆರಳುತ್ತಿದ್ದ ಬ್ರಿಟಿಷರ ಮೇಲೆ ಬಂಡುಕೋರ ಸೈನಿಕರಿಂದ ಮೊದಲ ಗುಂಡು ಹಾರಿತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ವಿಳಂಬ ಮಾಡುವ ಉದ್ದೇಶದಿಂದ ಬಂಡುಕೋರರು ನಾವೆಯನ್ನು ಸಾಧ್ಯವಾದಷ್ಟು ಎತ್ತರವಾದ ಮಣ್ಣಿನಲ್ಲಿ ಇರಿಸಿದ್ದರು ಎಂದು ಕೆಲ ಬ್ರಿಟಿಷ್ ಅಧಿಕಾರಿಗಳು ನಂತರ ಹೇಳಿದರು. ಅದು ಅಲ್ಲದೆ, ನಾನಾಸಾಹಿಬನ ಗುಂಪು ಎಲ್ಲ ಇಂಗ್ಲಿಷರನ್ನು ಕೊಲ್ಲುವುದಕ್ಕೆ ಈ ಮೊದಲೇ ಸಂಚು ಮಾಡಿತ್ತು ಎಂದು ವಾದಿಸಿದರು. ನಂತರ ಈಸ್ಟ್ ಇಂಡಿಯಾ ಕಂಪನಿಯು ನಾನಾ ಸಾಹಿಬ ದ್ರೋಹ ಎಸಗಿದ್ದಾನೆ ಮತ್ತು ಮುಗ್ಧ ಜನರ ಕೊಲೆ ಮಾಡಿದ್ದಾನೆ ಎಂದು ಆಪಾದಿಸಿತು. ಆದರೆ, ನಾನಾ ಸಾಹಿಬ್ ಮೊದಲೇ ಸಂಚು ರೂಪಿಸಿದ್ದ ಮತ್ತು ಸಾಮೂಹಿಕ ಕೊಲೆಗೆ ಆದೇಶಿಸಿದ್ದ ಎಂದು ಸಾಬೀತುಪಡಿಸುವುದಕ್ಕೆ ಕೊನೆಯವರೆಗೆ ಸಾಕ್ಷಿ ದೊರೆಯಲಿಲ್ಲ. ಸತಿಚೌರಾ ಘಾಟ್‌ನಲ್ಲಿ ನಡೆದ ಸಾಮೂಹಿಕ ಕೊಲೆಯು ಗೊಂದಲದ ಪರಿಣಾಮವಾಗಿ ಆಗಿದೆ ವಿನಃ ನಾನಾ ಸಾಹಿಬ್ ಮತ್ತು ಆತನ ಸಹವರ್ತಿಗಳ ಪಿತೂರಿಯಿಂದಾಗಿ ಅಲ್ಲ ಎಂದು ಕೆಲ ಇತಿಹಾಸಜ್ಞರು ವಾದಿಸುತ್ತಾರೆ. ಹತ್ಯಾಕಾಂಡದಲ್ಲಿ ಬದುಕುಳಿದ ನಾಲ್ವರು ಪುರುಷರ ಪೈಕಿ ಒಬ್ಬರಾಗಿರುವ ಲೆಪ್ಟಿನೆಂಟ್ ಮೌವ್‌ಬ್ರೇ ಥಾಮ್ಸನ್ ಅವರು, ತಾವು ಮಾತನಾಡಿದ ಸೈನಿಕ ಅಧಿಕಾರಿಗಳು ಮತ್ತು ಸೈನಿಕರು ಕೂಡ ಕೊಲೆ ನಡೆದಿದೆ ಎಂದು ಗೊತ್ತಿರಲಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಹಲವಾರು ಜನರನ್ನು ಕೊಲೆ ಮಾಡಲಾಯಿತು. ಮತ್ತು ಉಳಿದ ೨೦೦ ಬ್ರಿಟಿಷ್ ಮಹಿಳೆಯರು ಮತ್ತು ಮಕ್ಕಳನ್ನು ತೀರಕ್ಕೆ ಕರೆ ತಂದು ಬೀಬಿಘರ್ (ಸ್ತ್ರೀಯರ ಮನೆ)ಗೆ ಕಳುಹಿಸಿಕೊಡಲಾಯಿತು. ಕೆಲವು ಸಮಯದ ನಂತರ ಜನರಲ್ ಹೆನ್ರಿ ಹ್ಯಾವಲಾಕ್ ನೇತೃತ್ವದಲ್ಲಿ ಬ್ರಿಟಿಷರು ಕಾನ್ಪುರವನ್ನು ಮರಳಿ ಪಡೆಯಲಿದ್ದಾರೆ ಎಂದು ಅರಿವಾಗುತ್ತಲೇ ಬಂಡುಕೋರರ ನಾಯಕರು ಒತ್ತೆಯಾಳುಗಳ ಕೊಲೆ ಮಾಡುವುದಕ್ಕೆ ಮುಂದಾದರು. ಆದರೆ, ಬಂಡುಕೋರ ಸೈನಿಕರು ಆಜ್ಞೆ ಪಾಲಿಸುವುದಕ್ಕೆ ನಿರಾಕರಿಸಿದರು ಮತ್ತು ಜೂನ್ ೧೮ರಂದು ಬ್ರಿಟಿಷರು ನಗರವನ್ನು ಪ್ರವೇಶಿಸುವ ಮೂರು ದಿನ ಮೊದಲೇ ಹತ್ತಿರದ ಪಟ್ಟಣಗಳ ಕಟುಕರನ್ನು ಕರೆಸಿ ಒತ್ತೆಯಾಳುಗಳ ಕೊಲೆ ಮಾಡಲಾಯಿತು. ನಂತರ ಕೊಲೆಯಾದವರ ದೇಹಗಳನ್ನು ಹತ್ತಿರದಲ್ಲಿದ್ದ ಆಳವಾದ ಬಾವಿಯಲ್ಲಿ ಎಸೆಯಲಾಯಿತು. ಜನರಲ್ ನೇಲ್ ನೇತೃತ್ವದ ಬ್ರಿಟಿಷರ ಆರ್ಮಿ ಆಫ್ ರಿಟ್ರಿಬ್ಯೂಷನ್ ನಗರವನ್ನು ಪುನಃ ತನ್ನ ವಶಕ್ಕೆ ತೆಗೆದುಕೊಂಡು ಬಂಡುಕೋರ ಸೈನಿಕರ ಮೇಲಿನ ದ್ವೇಷದಿಂದ ಆ ಪ್ರದೇಶದಲ್ಲಿ ಸಿಕ್ಕ ನತದೃಷ್ಟ ನಾಗರಿಕರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲೂ ಅವ್ಯಾಹತವಾಗಿ ಅಮಾನವೀಯ ಕೃತ್ಯಗಳನ್ನು ಎಸಗಿತು.
ಬ್ರಿಟಿಷ್ ಪಡೆಗಳು ೧೮೫೭ರ ದಂಗೆಕೋರರನ್ನು ಕಾನ್ಪುರದಲ್ಲಿ ಬಗ್ಗುಬಡಿದ ದೃಶ್ಯ
ಕಾನ್ಪುರ ಹತ್ಯಾಕಾಂಡ, ಇದೇ ರೀತಿಯ ಬೇರೆ ಸ್ಥಳಗಳಲ್ಲಿ ನಡೆದ ಘಟನೆಗಳು ಬ್ರಿಟಿಷರಿಂದ ಮಿತಿಯಿಲ್ಲದ ದ್ವೇಷದ ಪ್ರಸಂಗ ಎಂದು ಬಣ್ಣಿಸಲಾಗಿವೆ.[೮] ಆನಂತರ ಬ್ರಿಟಿಷರು ಬೀಬಿಘರ್ ಅನ್ನು ನಾಶಪಡಿಸಿ, ಬಾವಿಯ ಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಿ ಶಿಲುಬೆಯೊಂದನ್ನು ಸ್ಥಾಪಿಸಿದರು. ಕೊಲೆಯಾದವರ ಸ್ಮರಣಾರ್ಥವಾಗಿ ಅವರು, ೧೮೬೨ರಲ್ಲಿ ಆಲ್ ಸೋಲ್ಸ್ ಚರ್ಚ್ ಅನ್ನು ನಿರ್ಮಿಸಿದರು. ಈಗ ಅದನ್ನು ಕಾನ್ಪುರ ಮೆಮೋರಿಯಲ್ ಚರ್ಚ್ ಎಂದು ಹೆಸರಿಸಲಾಗಿದೆಯಾದರೂ ಆಲ್ ಸೋಲ್ಸ್ ಕೆಥೆಡ್ರಲ್ ಎಂಬುದು ಜನಪ್ರಿಯ ಹೆಸರಾಗಿದೆ. ವ್ಹೀಲರ್ಸ್ ಎಂಟ್ರೆಂಚ್‌ಮೆಂಟ್ ಈಶಾನ್ಯ ಭಾಗದಲ್ಲಿ ಕಾನ್ಪುರ ಕ್ಲಬ್ ಬಳಿ ಇಂದಿಗೂ ಆ ಚರ್ಚ್ ಇದೆ. ಸನಿಹದಲ್ಲೇ ಇದ್ದ ’ಶೋಕದೂತ’ನ ಶಿಲ್ಪವುಳ್ಳ ಗೋಥಿಕ್ ಸ್ಮಾರಕವನ್ನು ದೇಶದ ಸ್ವಾತಂತ್ರ್ಯಾನಂತರ ಚರ್ಚ್ ಆವರಣಕ್ಕೆ ಸಾಗಿಸಲಾಯಿತು. ಅದರ ಜಾಗದಲ್ಲಿ ನಾನಾರಾವ್ ಪಾರ್ಕ್ ರಚಿಸಿ ತಾಂತ್ಯಾಟೋಪಿಯ ಎದೆಮಟ್ಟದ ಮೂರ್ತಿಯನ್ನು ನಿಲ್ಲಿಸಲಾಗಿದೆ. ಬಾವಿಯನ್ನು ಈಗ ಕಲ್ಲಿನಿಂದ ಮುಚ್ಚಲಾಗಿದೆ ಆದರೆ, ಸುತ್ತಲಿನ ಅಂಚು ಮತ್ತು 'ಬೂಧಾ ಬರ್ಗಡ್' (ಹಳೇ ಆಲದ ಮರ) ಉಲ್ಲೇಖದ ಕಲ್ಲು ಇನ್ನೂ ಇವೆ.
೧೮೫೭ರ ನಂತರ ಇದು, ಜವಳಿ ಮತ್ತು ಚರ್ಮೋದ್ಯಮ ಉದ್ದಿಮೆಯ ಪ್ರಮುಖ ಕೇಂದ್ರವಾಯಿತು. ಸೈನ್ಯಕ್ಕೆ ಚರ್ಮದ ಉತ್ಪನ್ನಗಳನ್ನು ಪೂರೈಸುವುದಕ್ಕೆ ಸರ್ಕಾರ, ೧೮೬೦ರಲ್ಲಿ ಹಾರ್ನೆಸ್ ಆಂಡ್ ಸ್ಯಾಡ್ಲರ್ ಫ್ಯಾಕ್ಟರಿಯನ್ನು ಪ್ರಾರಂಭಿಸಿತು. ನಂತರ ಕೂಪರ್ ಅಲೆನ್ & ಲೀ ೧೮೮೦ರಲ್ಲಿ ಪ್ರಾರಂಭಿಸಿತು. ಹತ್ತಿ ಬಟ್ಟೆಯ ಕಾರ್ಖಾನೆಯನ್ನು ಎಲ್ಜಿನ್ ಮಿಲ್ಸ್ ೧೮೬೨ರಲ್ಲಿ ಪ್ರಾರಂಭಿಸಿತು, ಮತ್ತು ೧೮೮೨ರಲ್ಲಿ ಮುಯಿರ್ ಮಿಲ್ಸ್ ಮತ್ತು ನಂತರದ ೪೦ ವರ್ಷಗಳ ಅವಧಿಯಲ್ಲಿ ವಿಕ್ಟೋರಿಯಾ ಮಿಲ್ಸ್ ಮತ್ತು ಅಥರ್ಟನ್ ವೆಸ್ಟ್ & ಕಂಪನಿ (ಅಥರ್ಟನ್ ಮಿಲ್ಸ್) ಸೇರಿದಂತೆ ಹಲವಾರು ಮಿಲ್‌ಗಳು ಪ್ರಾರಂಭವಾಗುವ ಮೂಲಕ ಕೌನ್‌ಪುರ್ ಅನ್ನು ಪ್ರಮುಖ ಜವಳಿ ಉತ್ಪಾದನಾ ಕೇಂದ್ರವನ್ನಾಗಿ ಮಾಡಿತು. ಕಾನ್ಪುರದ ಎಲ್ಜಿನ್ ಮಿಲ್ಸ್ ತಯಾರಿಸಿದ ಡ್ರಿಲ್ ಖಾಕಿಯು ಇಪ್ಪತ್ತನೇ ಶತಮಾನ ಪ್ರಾರಂಭಕಾಲದಲ್ಲಿ ಅತ್ಯಂತ ಜನಪ್ರಿಯವಾಗಿತ್ತು.ಖಾಕಿ ಬಟ್ಟೆಯು ತನ್ನ ಬಣ್ಣ ಹಾಗೂ ಬಾಳಿಕೆಗೆ ಹೆಸರುವಾಸಿಯಾಗಿತ್ತು. ಅದರ ಯಶಸ್ಸಿನ ಹಿಂದಿನ ವ್ಯಕ್ತಿ ಗೋಪಾಲ ಸದಾಶಿವ ಗೋಗಟೆ.
ಬ್ರಿಟಿಷ್ ಇಂಡಿಯಾ ಕಾರ್ಪೋರೇಷನ್ (ಬಿಐಸಿ) ಕೇಂದ್ರಕಚೇರಿಯು ಇಲ್ಲೇ ಇದ್ದು ಹಲವಾರು ಉದ್ದಿಮೆಗಳ ಅಭಿವೃದ್ಧಿಗೆ ಬುನಾದಿ ಹಾಕಿತು. ಭಾರತೀಯ ಮೂಲದ ಪ್ರಥಮ ವ್ಯವಹಾರಿಕ ಸಂಸ್ಥೆ ನಿಖಲ್‌ಚಂದ್ ಕಿಶೋರಿಲಾಲ್, ೧೮೫೭ರಲ್ಲಿ ಇಲ್ಲಿ ವ್ಯಾಪಾರಿ ಕೇಂದ್ರವನ್ನು ಪ್ರಾರಂಭಿಸಿತು. ಸಂಸ್ಥೆಯು ಆಯಿಲ್‌ಮಿಲ್ಲಿಂಗ್‌ನಲ್ಲಿ ಪ್ರಮುಖವಾಗಿತ್ತು ಮತ್ತು ಉತ್ತರ ಇಂಡಿಯಾದಾದ್ಯಂತ ಹಲವಾರು ಆಯಿಲ್‌ಮಿಲ್‌ಗಳನ್ನು ಹೊಂದಿದೆ. ೧೯೩೦ ಮತ್ತು ೧೯೭೦ರ ಅವಧಿಯಲ್ಲಿ ಜುಗ್ಗಿಲಾಲ್ ಕಮಲ್‌ಪತ್ ಸಿಂಘಾನಿಯಾ ಕುಟುಂಬವು ಇಲ್ಲಿ ಹಲವಾರು ಉದ್ದಿಮೆಗಳನ್ನು ಪ್ರಾರಂಭಿಸಿತು. ಇಲ್ಲಿನ ವಾಸಿಗಳಿಗೆ ಬಟ್ಟೆಯನ್ನು ಹಿಂತಿರುಗಿ ಮಾರುವುದಕ್ಕೆ ಮಾತ್ರ ವಿದೇಶಿ ದೊರೆಗಳು ಇಂಡಿಯಾದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂಬ ಆಪಾದನೆಗೆ ಪ್ರತ್ತ್ಯುತ್ತರವಾಗಿ ಮತ್ತು ದೇಶಾಭಿಮಾನದ ಪ್ರತೀಕವಾಗಿ ಜೈಪುರಿಯಾ ಕುಟುಂಬವು ಸ್ವದೇಶಿ ಕಾಟನ್ ಮಿಲ್ ಪ್ರಾರಂಭಿಸಿತು. ೨೦ನೇ ಶತಮಾನದ ಅವಧಿಯಲ್ಲಿ ಕಾನ್ಪುರ "ಇಂಡಿಯಾದ ಮ್ಯಾಂಚೆಸ್ಟರ್ " ಎಂದು ಗುರುತಿಸಿಕೊಂಡಿತು. ನಿಖಲ್‌ಚಂದ್ ಕಿಶೋರಿಲಾಲ್ ಗ್ರೂಪ್ (ಕೆಜ್ರಿವಾಲ ಗ್ರೂಪ್ ಎಂದು ಕರೆಯಲ್ಪಡುವ) ಕಾಲಾನಂತರದಲ್ಲಿ ಹಿಟ್ಟಿನ ಗಿರಣಿ, ಟೀ ತೋಟ ಮತ್ತು ಸ್ಟೀಲ್ ಉದ್ದಿಮೆಗಳನ್ನು ಪ್ರಾರಂಭಿಸಿತು. ಸ್ಕಾಟ್ ಮೂಲದ ಎಡ್ವರ್ಡ್ ಫಾಯ್ ಅವರಿಂದ ೧೮೮೬ರಲ್ಲಿ ಸ್ಥಾಪಿಸಲಾಗಿದ್ದ ಕೌನ್‌ಪೋರ್ ಫ್ಲೋರ್‌ಮಿಲ್ ಅನ್ನು ಅವರು ೧೯೪೨ರಲ್ಲಿ ಪ್ರಾರಂಭಿಸಿದರು. ಹೊಸ ಕೌನ್‌ಪುರ್ ಫ್ಲೋರ್‌ಮಿಲ್‌ಗಳು ಇನ್ನೂ ಇದ್ದು, ಉತ್ತರ ಇಂಡಿಯಾದ ಅತಿದೊಡ್ಡ ಫ್ಲೋರ್‌ಮಿಲ್ ಎಂದು ಹೆಸರುಗಳಿಸಿದೆ. ಈಗಲೂ ಅದೇ ಕುಟುಂಬದಿಂದ ನಿರ್ವಹಿಸಲ್ಪಡುತ್ತಿದೆ.ಸಿಂಗ್ ಎಂಜಿನಿಯರಿಂಗ್ ಅವರಿಂದ ಮೊದಲ ಬಾರಿಗೆ ಕಾನ್‌ಪುರ್‌ಗೆ ಸ್ಟೀಲ್ ಉದ್ದಿಮೆ ಬಂದಿತು. ಕಾನ್‌ಪುರ್‌ನ ಹೊರಭಾಗದಲ್ಲಿ ಕೆಜ್ರಿವಾಲಾಗಳು ಮಿನಿಸ್ಟೀಲ್ ಮಿಲ್ ಪ್ರಾರಂಭಿಸಿದರು. ಈಗ ಅದು ಉದ್ದದ ಉತ್ಪನ್ನಗಳ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕಾನ್ಪುರ ಇಂಡಿಯಾದ ಪ್ರಮುಖ ಚರ್ಮೋದ್ಯಮ ಕೈಗಾರಿಕೆ ಕೇಂದ್ರವಾಗಿದೆ. ಆದು ಅಲ್ಲದೇ, ಉತ್ತರ ಇಂಡಿಯಾದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಕೇಂದ್ರಗಳಲ್ಲಿ ಒಂದಾಗಿದೆ. ಸದ್ಯ ಇದೀಗ ನಗರದಲ್ಲಿ ಹಲವಾರು ಚರ್ಮ ಸಂಸ್ಕರಣ ಘಟಕಗಳು ಇದ್ದು, ಡಜನ್‌ಗಿಂತಲೂ ಹೆಚ್ಚು ಸಶಸ್ತ್ರ ಸೇನಾ ಪಡೆಯ ಕಾರ್ಖಾನೆಗಳು ಇವೆ. ಪ್ರದೇಶದ ಉದ್ದಿಮೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬದಲಾವಣೆಯಾಗಿದ್ದು. LML ಘಟಕಗಳು ಗಮನಾರ್ಹ ಪ್ರಮಾಣದಲ್ಲಿ ಉತ್ಪಾದನೆಯನ್ನು ಕಡಿತಗೊಳಿಸಿವೆ. ಪ್ಲಾಸ್ಟಿಕ್ ಮತ್ತು ಅಟೋಮೆಟಿವ್ ಉದ್ದಿಮೆಗಳು ಕೆಲಮಟ್ಟಿಗೆ ಬೆಳವಣಿಗೆಯಾಗಿವೆ. ಅರ್ಥವ್ಯವಸ್ಥೆಗೆ ಗಣನೀಯ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದ್ದರೂ ಕಾನ್ಪುರ, ಸ್ಥಳೀಯ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ಅದು ತನ್ನ ಪ್ರಾಚೀನ ಕಾಲದ ಗತವೈಭವವನ್ನು ಮರಳಿ ಪಡೆಯಬೇಕಾದರೆ ಅನುದಾನದ ನೆರವು ಮತ್ತು ಬೆಂಬಲದ ಅಗತ್ಯವಿದೆ. ಉರ್ಸುಲಾ ಹಾರ್ಸಮನ್ ಆಸ್ಪತ್ರೆ, ಹ್ಯಾಲೆಟ್ ಆಸ್ಪತ್ರೆಹಾರಕೋರ್ಟ್ ಬಟ್ಲರ್ ಟೆಕ್ನಾಲಾಜಿಕಲ್ ಇನ್ಸಿಟ್ಯಿಟ್ಯೂಟ್ ಸ್ಥಾಪನೆ ಮತ್ತು ಅಲ್ಲೇನ್ ಅರಣ್ಯ (ಇದೀಗ ಪ್ರಾಣಿ ಸಂಗ್ರಹಾಲಯ)ವನ್ನು ಸಂರಕ್ಷಿಸುವ ಕಾರ್ಯಗಳ ಮೂಲಕ ಬ್ರಿಟಿಷರು ನಗರದಲ್ಲಿ ಧರ್ಮಾರ್ಥ ಕಾರ್ಯಗಳಿಗೆ ಕೊಡುಗೆ ನೀಡಿದರು.
ಬಹುತೇಕ ಹೆಚ್ಚಿನವುಗಳಿಗೆ ಈಗ ಪುನರ್‌ನಾಮಕರಣ ಮಾಡಲಾಗಿದ್ದರೂ ಬಹಳಷ್ಟು ನಿವಾಸಿಗಳು ಇಂದಿಗೂ ಅವುಗಳನ್ನು ಹಳೇ ಹೆಸರಿನಿಂದಲೇ ಸಂಬೋಧಿಸುತ್ತಾರೆ. ರೈಲ್ವೆ ಸ್ಟೇಷನ್ ಮುಂದಿನ ರಸ್ತೆಯಲ್ಲಿರುವ ರೈಲ್ವೆ ಕ್ರಾಸಿಂಗ್ ಬ್ರಿಡ್ಜ್ ಹಳೆಯ ಹೆಸರುಗಳನ್ನು ವಿರೂಪಗೊಳಿಸಿದ್ದಕ್ಕೆ ಉತ್ತಮ ಉದಾಹರಣೆ. ಈ ಸೇತುವೆಗೆ ’ಮರಿ ಕಂಪೆನಿ ಪುಲ್’ ಎನ್ನುತ್ತಾರೆ. ಇದೀಗ ಮುಚ್ಚಲ್ಪಟ್ಟಿರುವ ಮರ್ರೆ ಕಂಪನಿಯನ್ನು ಮರಿ (ಸತ್ತ) ಕಂಪನಿ ಎಂದು ಕರೆಯುತ್ತಿರುವುದು ಐತಿಹಾಸಿಕ ವ್ಯಂಗ್ಯ.. ಚರ್ಮೋದ್ಯಮ ಕೈಗಾರಿಕೆಗಳ ಬೆಳವಣಿಗೆಯ ಕಾರಣದಿಂದಾಗಿ ಪರಿಸರ ಮಾಲಿನ್ಯದ ಮಟ್ಟವು ಅಪಾಯಕಾರಿಯಾಗಿ ಏರಿಕೆಯಾಗಿದೆ. ಯೋಜನೆಯ ಕೊರತೆಯ ಕಾರಣದಿಂದಾಗಿ ನಗರವು ದೆಹಲಿಯ ಹಾಗೆ ಅತಿಯಾದ ದಟ್ಟಣೆ ಮತ್ತು ಅತಿಯಾದ ಜನಸಾಂದ್ರತೆಗೆ ಬಲಿಪಶುವಾಗುತ್ತಿದೆ. ನಗರ ಯೋಜನೆ ಇನ್ನೂ ವಿಕಸಿತವಾಗಬೇಕಿದೆ. ಪ್ಲಾಟ್‌ಗೆ ಜಮೀನು ಮಾರುವುದರಿಂದ ಅಧಿಕೃತ ಪ್ರಾಧಿಕಾರವು ಸಾಕಷ್ಟು ಮುಂದೆ ಸಾಗಿ ಸಮಗ್ರ ಯೋಜನೆಯವರೆಗೆ ಸಾಗಬೇಕಾದ ಅಗತ್ಯವಿದೆ. ನಗರಾಭಿವೃದ್ದಿ ಜವಾಬ್ದಾರಿ ವಹಿಸಿಕೊಂಡಿರುವ ಪ್ರಾಧಿಕಾರವು, ಜಮೀನನ್ನು ಪ್ಲಾಟ್‌ಗಳಾಗಿ ಮಾರುವುದರಿಂದ ಸಾಕಷ್ಟು ಮುಂದೆ ಸಾಗಿ ಸಮಗ್ರ ಯೋಜನೆ ತಯಾರಿಸುವ ಹಂತಕ್ಕೆ ತಲುಪಬೇಕಾದ ಅಗತ್ಯವಿದೆ. ಟೈಮ್ ಎಷಿಯಾ ನಿಯತಕಾಲಿಕೆ[೯] ಯಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನವು ನಗರದಲ್ಲಿನ ಮಾಲಿನ್ಯದ ಕುರಿತು ವಿವರಿಸುತ್ತದೆ. ಹೊಸ ಕೈಗಾರಿಕೆಗಳಾದ ಡಿಟರ್ಜಂಟ್, ಸ್ಯಾಡ್ಲರಿ, ಫುಡ್ ಪ್ರೊಸೆಸಿಂಗ್, ಪಾನ್ ಮಸಾಲಾ, ಟೀ ಪ್ಯಾಕೆಜಿಂಗ್, ಪ್ಲ್ಯಾಸ್ಟಿಕ್ಸ್ ಮತ್ತು ಪ್ಯಾಕೆಜಿಂಗ್, ಆಭರಣ ತಯಾರಿಕೆ ಮತ್ತು ರಪ್ತು, ಚರ್ಮದ ವಸ್ತುಗಳ ತಯಾರಿಕೆ ಮತ್ತು ಪ್ರಕ್ರಿಯೆ ಮುಂತಾದವುಗಳು ಈ ನಗರದಲ್ಲಿ ಅಭಿವೃದ್ಧಿ ಹೊಂದಿವೆ.
ಪಾನ್ ಮಸಾಲಾ ಉದ್ಯಮವು ಅತಿಹೆಚ್ಚು ಕೆಲಸಗಾರರನ್ನು ಹೊಂದಿರುವ ಅದರಂತೆ ಸರ್ಕಾರಕ್ಕೆ ಅತಿಹೆಚ್ಚು ತೆರಿಗೆ ಕಟ್ಟುವ ಉದ್ಯಮವಾಗಿ ಬೆಳೆದಿದೆ. ವಿಶ್ವವಿಖ್ಯಾತಿ ಪಡೆದಿರುವ "ಪಾನ್ ಬಹಾರ್" ಮತ್ತು "ಪಾನ್ ಪರಾಗ್ " ಈ ನಗರದಲ್ಲಿ ಉತ್ಪನ್ನವಾಗುತ್ತಿರುವುಗಳಲ್ಲಿ ಪ್ರಮುಖವಾದವು.;ಇದೀಗ ಕಾನ್ಪುರ 'ರಪ್ತು ಉದ್ಯಮದ ಶ್ರೇಷ್ಠ ಪಟ್ಟಣ' ಸಾಧಿಸಿದೆ.ಈ ಕೇಂದ್ರವು ಕಾನ್ಪುರವನ್ನು ’ರಪ್ತು ಶ್ರೇಷ್ಠ ಪಟ್ಟಣವನ್ನಾಗಿ’ ಘೋಷಿಸಿತು. ಈ ಪ್ರಕಟಣೆಯು ನಗರದ ರಪ್ತುದಾರರಿಗೆ ಹೆಚ್ಚುವರಿ ಸೌಲಭ್ಯ ಮತ್ತು ರಿಯಾಯಿತಿ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ಚರ್ಮೋದ್ಯಮ ಮತ್ತು ರಪ್ತುದಾರರು ಈ ಸುದ್ದಿಯನ್ನು ಸ್ವಾಗತಿಸಿದರು.
ಗಂಗಾ ನದಿ ತೀರದ ಮೇಲೆ ನಿಂತಿರುವ ಕಾನ್ಪುರ, ತನ್ನದೇ ಆದ ಐತಿಹಾಸಿಕ, ಧಾರ್ಮಿಕ ಮತ್ತು ವಾಣಿಜ್ಯಿಕ ಮಹತ್ವವನ್ನು ಹೊಂದಿರುವ ಉತ್ತರ ಇಂಡಿಯಾದ ಪ್ರಮುಖ ಔಧ್ಯಮಿಕ ಕೇಂದ್ರಗಳಲ್ಲಿ ಒಂದು. ಸಂಚೇಂದಿ ರಾಜ್ಯದ ರಾಜ ಸಿಂಗ್ ನಿಂದ ಸ್ಥಾಪಿಸಲ್ಪಟ್ಟ ಕಾನ್ಪುರ ನ್ನು ಮೊದಲು 'ಕನ್ಹಪುರ' ಎಂದು ಕರೆಯಲಾಗುತ್ತಿತ್ತು. ಐತಿಹಾಸಿಕವಾಗಿ ಇಂದಿನ ಕಾನ್ಪುರ ನಗರ ಪೂರ್ವ ಭಾಗದಲ್ಲಿರುವ ಜಾಜಮೌ, ಕಾನ್ಪುರ ಜಿಲ್ಲೆಯಲ್ಲಿರುವ ಅತ್ಯಂತ ಪುರಾತನ ಪಟ್ಟಣಗಳಲ್ಲಿ ಒಂದು ಎಂದು ಗುರುತಿಸಿಕೊಳ್ಳುತ್ತದೆ. ೧೮ನೇ ಶತಮಾನದ ಪೂರ್ವಾರ್ಧದವರೆಗೆ ಕಾನ್ಪುರ ಒಂದು ಗಣನೆಗೆ ಬಾರದ ಹಳ್ಳಿಯಾಗಿ ಉಳಿದುಕೊಂಡಿತ್ತು. ಆದರೆ, ಇದರ ಅದೃಷ್ಟ, ಮೇ. ೧೭೬೫ರಲ್ಲಿ ಅವಧ್ ನ ನವಾಬ್ ಶುಜಾ-ಉದ್-ದೌಲಾ ಬ್ರಿಟಿಷರಿಂದ ಪರಾಭವಗೊಂಡ ನಂತರ ಇದರ ಹೊಸ ದಿಕ್ಕಿಗೆ ತೆರೆದುಕೊಂಡಿತು. ಬಹುಶಃ ಇದೇ ಅವಧಿಯಲ್ಲಿರಬೇಕು. ಕಾನ್ಪುರ ಕೇಂದ್ರ ಸ್ಥಾನದಲ್ಲಿದೆ ಎನ್ನುವುದನ್ನು ಬ್ರಿಟಿಷರು ಮನಗಂಡಿರಬೇಕು. ಈ ವೇಳೆಗಾಗಲೇ ಯುರೋಪಿಯನ್ ವ್ಯಾಪಾರಿಗಳು ನಿಧಾನವಾಗಿ ಕಾನ್ಪುರದಲ್ಲಿ ನೆಲೆಯೂರಲು ಪ್ರಾರಂಭಿಸಿದರು. ಹೀಗೆ ವಾಸಿಸುತ್ತಿದ್ದ ಅವರ ಜೀವ ಮತ್ತು ಅವರ ಆಸ್ತಿಗಳನ್ನು ರಕ್ಷಿಸುವುದಕ್ಕೆ "ಅವಧ್ ಸ್ಥಳೀಯ ಪಡೆ"ಗಳನ್ನು ೧೭೭೮ರಲ್ಲಿ ಇಲ್ಲಿಂದ ವರ್ಗಾಯಿಸಲಾಯಿತು. ಅವಧ್‌ನವಾಬ್, ಸಾದತ್ ಅಲಿಖಾನ್ ಮತ್ತು ಬ್ರಿಟಿಷರ್ ನಡುವೆ ೧೮೦೧ರಲ್ಲಿ ಎರ್ಪಟ್ಟ ಒಪ್ಪಂದದ ಪ್ರಕಾರ ಕಾನ್ಪುರವನ್ನು ಬ್ರಿಟಿಷರಿಗೆ ಹಸ್ತಾಂತರಿಸಲಾಯಿತು. ಈ ಘಟನೆಯು ಕಾನ್ಪುರ ಇತಿಹಾಸದ ಬದಲಾವಣೆಗೆ ದಿಕ್ಸೂಚಿಯಾಯಿತು. ಇದಾದ ಕೆಲವೇ ದಿನಗಳಲ್ಲಿ ಕಾನ್ಪುರ ಬ್ರಿಟಿಷ್ ಇಂಡಿಯಾದ ಅತ್ಯಂತ ಪ್ರಮುಖವಾದ ಮಿಲಿಟರಿ ಕೇಂದ್ರವಾಯಿತು. ಮಾರ್ಚ್ ೨೪, ೧೮೦೩ರಲ್ಲಿ ಜಿಲ್ಲೆ ಎಂದು ಘೋಷಿಸಲ್ಪಟ್ಟಿತು.
ಕಾನ್ಪುರ ಸಂಗ್ರಹಾಲಯ
1900-1950 ಅವಧಿಯಲ್ಲಿ ಕಾನ್ಪುರ್ ಸ್ವಾತಂತ್ರ್ಯ ಮತ್ತು ಸಾಕ್ಷರತಾ ಅಂದೋಲನ ಬದಲಾವಣೆಯ ಕೇಂದ್ರವಾಗಿತ್ತು. "ನವೀನ್" ಕಾವ್ಯನಾಮದೊಂದಿಗೆ ಪರಿಚಿತವಾಗಿರುವ ಕವಿ ಬಾಲಕೃಷ್ಣ ಶರ್ಮಾ ಅವರ ನೆನಪಿಗಾಗಿ ನಗರದ ಅತಿದೊಡ್ಡ ಶಾಪಿಂಗ್ ಕೇಂದ್ರಕ್ಕೆ ನವೀನ್ ಮಾರ್ಕೆಟ್ ಎಂದು ಹೆಸರಿಸಲಾಗಿದೆ. ಬಾಲಿವುಡ್ ಚಲನಚಿತ್ರಗಳಿಗಾಗಿ ಹಾಡುಗಳನ್ನು "ನೀರಜ್" ಗೋಪಾಲದಾಸ್ ಹೆಸರನ್ನು ಸೇರ್ಪಡೆ ಮಾಡಲಾಯಿತು. ಪ್ರಖ್ಯಾತ ದೇಶಭಕ್ತಿಗೀತೆ ವಿಜಯಿ ವಿಶ್ವ ತಿರಂಗಾ ಪ್ಯಾರಾ ಅನ್ನು ರಚಿಸಿದ 'ಪರಶಾದ್ ' ಶ್ಯಾಮಲಾಲ್ ಗುಪ್ತಾ ಅವರ ಜನ್ಮಸ್ಥಾನವು ಹೌದು. ಹಿಂದಿ ಸಾಹಿತಿಗಳಾದ ಆಚಾರ್ಯ ಮಹಾವೀರ ಪ್ರಸಾದ್ ದ್ವಿವೇದಿ, ಗಣೇಶ ಶಂಕರ ವಿದ್ಯಾರ್ಥಿ, ಪ್ರತಾಪ್ ನಾರಾಯಣ ಮಿಶ್ರಾ ಮತ್ತು ಆಚಾರ್ಯ ಗಯಾ ಪ್ರಸಾದ ಶುಕ್ಲಾ 'ಸನೇಹಿ' ಮುಂತಾದವರಿಂದಾಗಿ ಹಿಂದಿ ಭಾಷೆಯ ಹರಡುವಿಕೆ ಮತ್ತು ಜನಪ್ರಿಯಗೊಳಿಸುವಲ್ಲಿ ನಡೆದ ಪ್ರಯತ್ನದಲ್ಲಿ ನಗರ ಸಿಂಹಪಾಲು ಹೊಂದಿದೆ. ಕಾನ್ಪುರ್ ನಗರದಲ್ಲಿ ಸಾಕಷ್ಟು ಸಮಯವನ್ನು ಕಳೆದ ಇಬ್ಬರು ಕ್ರಾಂತಿಕಾರಗಳಾದ ಚಂದ್ರಶೇಖರ್ ಆಜಾದ್ ಮತ್ತು ಗಣೇಶ ಶಂಕರ್ ವಿದ್ಯಾರ್ಥಿಯ ಹೆಸರುಗಳನ್ನು ಕ್ರಮವಾಗಿ ಕೃಷಿ ವಿಶ್ವವಿದ್ಯಾಲಯಕ್ಕೆ ಮತ್ತು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಇಡಲಾಗಿದೆ. ಅಲಹಾಬಾದ್‌ನ ಅಲ್ಫ್ರೇಡ್‌ಪಾರ್ಕ್‌ನಲ್ಲಿ ಬ್ರಿಟಿಷ್ ಪೊಲೀಸರು ಸುತ್ತುವರೆದ ಸಂದರ್ಭದಲ್ಲಿ ತನಗೆ ತಾನೇ ಗುಂಡು ಹೊಡೆದುಕೊಂಡು ಚಂದ್ರಶೇಖರ್ ಆಜಾದ್ ಮೃತಪಟ್ಟರೆ, 1931ರಲ್ಲಿ ಕಾನ್ಪುರ್ ನಗರದಲ್ಲಿ ಹರಡಿದ ಹಿಂದು-ಮುಸ್ಲಿಂ ಕೋಮು ಗಲಭೆಯಲ್ಲಿ ಕಾನ್ಪುರ್ ನ ಮಚಲಿ ಬಜಾರ್ ನಲ್ಲಿ ಗಣೇಶ ಶಂಕರ ವಿದ್ಯಾರ್ಥಿಯು ಕೊಲ್ಲಲ್ಪಟ್ಟನು.
ಕಾನ್ಪುರ್‌ನಿಂದ 25 ಕಿ.ಮೀ. ದೂರದಲ್ಲಿರುವ ಬಿಥೂರ್ಆಯೋಧ್ಯೆಯಿಂದ ರಾಮನಿಂದ ಹೊರ ಹಾಕಿಸಿಕೊಂಡ ನಂತರ ರಾಮನ ಪತ್ನಿ ಸೀತೆಯು ಇಲ್ಲಿದ್ದ ವಾಲ್ಮೀಕಿ ಋಷಿಯ ಆಶ್ರಮದಲ್ಲಿ ಜೀವನ ಕಳೆದಳು ಎಂಬ ಖ್ಯಾತಿಯನ್ನು ಪಡೆದಿದೆ. ಇಲ್ಲಿಯೇ ಅವಳು ಅವಳಿಗಳಾದ ಲವ ಮತ್ತು ಕುಶನಿಗೆ ಜನ್ಮ ನೀಡಿದಳು. ಪರಿತಪಿಸುತ್ತಿದ್ದ ರಾಮನನ್ನು ಭೇಟಿಯಾದ ವೇಳೆ ಇಲ್ಲಿಯೇ ಭೂಮಿಯಲ್ಲಿ ಐಕ್ಯಳಾದಳು (ಎಲ್ಲಿಂದ ಜನಿಸಿದ್ದಳೋ ಅಲ್ಲಿಗೆ). ಬ್ರಿಟಿಷರು ಕಾನ್ಪುರ್ ಪುನಃ ವಶಪಡಿಸಿಕೊಂಡ ನಂತರ ಇಲ್ಲಿನ ನಾನಾ ಸಾಹಿಬ್ ಪರಾರಿಯಾದ ಕೋಟೆಯು ಕೂಡ ಬಿಥೂರ್‌ನಲ್ಲಿದೆ. ಇಂದು ಬಿಥೂರ್, ಗಂಗೆಯ ತೀರದಲ್ಲಿರುವ ಪ್ರವಾಸಿ ತಾಣವಾಗಿದ್ದು, ಎಲ್ಲೆಡೆ ಜನವಸತಿಗಳು ವಿಸ್ತರಿಸುತ್ತಿರುವ ಕಾನ್ಪುರ ಅತ್ಯಂತ ವೇಗವಾಗಿ ವಿಸ್ತಾರಗೊಳ್ಳುತ್ತಿದೆ. ಹಬ್ಬಗಳ ಪೈಕಿ, ಹೋಳಿ ಹಬ್ಬದ 7 ದಿನಗಳ ನಂತರ ಆಚರಿಸಲಾಗುವ ಗಂಗಾ ಮೇಳಾ ವಿಶಿಷ್ಟವಾದ ಹಬ್ಬವಾಗಿದ್ದು ಕಾನ್ಪುರ್‌ನಲ್ಲಿ ಮಾತ್ರ ಆಚರಿಸಲಾಗುತ್ತದೆ. 1857ರ ಕ್ರಾಂತಿಯ ವೇಳೆ ಬ್ರಿಟಿಷ್ ಸರ್ಕಾರದಿಂದ ಬಂಧಿತರಾಗಿದ್ದ ಬಿಡುಗಡೆಯಾದ ಕ್ರಾಂತಿಕಾರಿಗಳ ಸವಿನೆನಪಿಗಾಗಿ ಹಬ್ಬವನ್ನು ಕೂಡ ಇಲ್ಲಿ ಆಚರಿಸಲಾಗುತ್ತದೆ.
ನಗರವು 26.4670° ಅಕ್ಷಾಂಶ ಮತ್ತು 80.3500° ರೇಖಾಂಶದಲ್ಲಿದ್ದು, ಲಖನೌದಿಂದ 83 ಕಿ.ಮೀ. ದೂರದಲ್ಲಿದೆ. ಅಲಹಾಬಾದ್ ಮತ್ತು ಫತೇಹಪುರ್‌ದೊಂದಿಗೆ ಕಾನ್ಪುರ್ ಕೆಳದೋಅಬ್ ಪ್ರದೇಶದಲ್ಲಿದ್ದು. ಪ್ರಾಚೀನ ಕಾಲದಲ್ಲಿ ಇದು. ವತ್ಸದೇಶ ಎಂದು ಕರೆಯಲ್ಪಡುತ್ತಿತ್ತು. ಭಾರತದ ಎರಡು ಪ್ರಮುಖ ನದಿಗಳಾದ ಗಂಗೆ, ಈಶಾನ್ಯ ದಿಕ್ಕಿನಲ್ಲಿ, ಮತ್ತು ಪಾಂಡು ನದಿ ಯಮುನಾ ದಕ್ಷಿಣ ದಿಕ್ಕಿನಲ್ಲಿ ಸುತ್ತುವರೆದಿದೆ. ಕಾನ್ಪುರ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಹಮೀರ್‌ಪುರ್ ಮತ್ತು ಈಶಾನ್ಯ ದಿಕ್ಕಿನಲ್ಲಿ ಉನ್ನಾವು ಜಿಲ್ಲೆಗಳು ಸುತ್ತುವರೆದಿವೆ.
ಹಲವಾರು ವಲಸೆ ಮತ್ತು ಇಲ್ಲಿನ ಮೂಲ ಹಕ್ಕಿಗಳಿಗೆ ಕಾನ್ಪುರ್ ವಾಸಸ್ಥಾನವಾಗಿದ್ದು, ಹೆಚ್ಚಿನವುಗಳನ್ನು ಬಿಥೂರ್, ಐಐಟಿ ಕಾನ್ಪುರ್ ಕ್ಯಾಂಪಸ್ ಅಲ್ಲದೇ ಗಂಗಾ ಕೆನಾಲ್‌ನ ಉದ್ದಕ್ಕೂ ನೋಡಬಹುದಾಗಿದೆ. ನಗರವು (ಪ್ರದೇಶವಾರು) ಏಷಿಯಾದ ಅತಿದೊಡ್ಡ ಪ್ರಾಣಿ ಸಂಗ್ರಹಾಲಯವನ್ನು ಹೊಂದಿದೆ. ವಿಲಕ್ಷಣ ಗುಣಗಳನ್ನು ಉಳ್ಳ ಸಸ್ಯಸಂಪತ್ತು ಸಿಎಸ್ಎ ಕ್ಯಾಂಪಸ್‌ನಲ್ಲಿದೆ. ಕಾನ್ಪುರ್ ಪ್ರಾಣಿ ಸಂಗ್ರಹಾಲಯದಲ್ಲಿ ವಿನ್ಯಾಸಗೊಳಿಸಲಾಗಿರುವ ಬೋನುಗಳ ವಿನ್ಯಾಸಗಳು ಪ್ರಾಣಿಗಳಿಗೆ ನೈಸರ್ಗಿಕ ವಾಸಸ್ಥಾನ ಒದಗಿಸುವ ಮೂಲಕ ಪ್ರಖ್ಯಾತಿ ಪಡೆದಿವೆ. ಸಾಕಷ್ಟು ವೈವಿಧ್ಯಮಯ ಪ್ರಾಣಿಗಳನ್ನು ಹೊಂದಿದೆ. ಆ ಸಮಯದಲ್ಲಿ ಸಿಂಚಾಯಿ ಇಲಾಖೆಯಲ್ಲಿದ್ದ ಕಲಾವಿದ ಎಂಜಿನಿಯರ್ ಆಗಿದ್ದ ಮುರಳಿ ಶರಣ್ ಸಕ್ಸೆನಾ ಅವರು ಪ್ರಾಣಿ ಸಂಗ್ರಹಾಲಯದಲ್ಲಿರುವ ನೀರು ಸರಬರಾಜು ವ್ಯವಸ್ಥೆಯನ್ನು ಒಂದು ಕಲಾಕೃತಿಯಂತೆ ಸಿದ್ಧಗೊಳಿಸಿದ್ದಾರೆ. ಪ್ರಾಣಿ ಸಂಗ್ರಹಾಲಯವು ನವಾಬ್‌ಗಂಜ್‌ನ ಹಚ್ಚ ಹಸಿರಿನ ಅಲೆನ್ ಅರಣ್ಯದ ಒಂದು ಭಾಗ ಕೂಡ ಆಗಿದೆ. ಪ್ರವೇಶ ಶುಲ್ಕವು ಅತ್ಯಂತ ಕಡಿಮೆಯಿರುವ ಕಾರಣ ಕಾನ್ಪುರ್ ಪ್ರದೇಶದಲ್ಲಿ ಪ್ರಮುಖ ವಿಹಾರಿ ಕೇಂದ್ರವನ್ನಾಗಿ ಮಾಡಿದೆ. ನಗರದ ಇಂದಿರಾ ನಗರ ಪ್ರದೇಶವು ಹಸಿರಿನ ಮತ್ತು ಮಾಲಿನ್ಯ ರಹಿತ ಜನವಸತಿ ಪ್ರದೇಶವಾಗಿದೆ.
2001ರ ಜನಗಣತಿಯ ಪ್ರಕಾರ 2,551,337 ಜನಸಂಖ್ಯೆಯನ್ನು ಹೊಂದಿರುವ ಕಾನ್ಪುರ್ ಗಂಗಾ ನದಿ ತೀರದ ಮೇಲಿದೆ. ಕಳೆದ ದಶದಲ್ಲಿ ಜನಸಂಖ್ಯೆಯು ಅತ್ಯಂತ ವೇಗವಾಗಿ ಬೆಳೆದಿದ್ದು, ಈ ರೀತಿಯ ಬೆಳವಣಿಗೆಯಾಗಲು ಇತರ ಪ್ರದೇಶಗಳಿಂದ ಕಾನ್ಪುರ್ ನಗರಕ್ಕೆ ವಲಸೆ ಬರುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಒಂದು ಕಾರಣವಾಗಿದೆ. 1901ರಲ್ಲಿ ಲಖನೌ ಮತ್ತು ವಾರಾಣಾಸಿ ನಂತರದ ಮೂರನೇ ಸ್ಥಾನ ಹೊಂದಿದ್ದ ಇದು, 1961ರ ಹೊತ್ತಿಗೆ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿತು. ಆರು ದಶಕಗಳ ಅವಧಿಯಲ್ಲಿ ಇದು ಐದು ಪಟ್ಟು ಹೆಚ್ಚಳವನ್ನು ದಾಖಲಿಸಿದ್ದು, 1901ರಲ್ಲಿ 197, 170 ಇದ್ದ 1961ರಲ್ಲಿ 883,815ಕ್ಕೆ ತಲುಪಿತು.[೧೦] ಕಾನ್ಪುರ್ ವಿಸ್ತೀರ್ಣವು 1640 ಚದರ ಕಿ.ಮೀ. ಪ್ರದೇಶವನ್ನು ಹೊಂದಿದ್ದು, ಸಮುದ್ರ ಮಟ್ಟದಿಂದ 126 ಮೀಟರ್ ಎತ್ತರದಲ್ಲಿದೆ. ಕಾನ್ಪುರ್ ಮತ್ತು ಸುತ್ತಲಿನ ಪ್ರದೇಶದಲ್ಲಿ ಹಿಂದಿ, ಇಂಗ್ಲಿಷ್, ಉರ್ದು, ಬಂಗಾಲಿ ಮತ್ತು ಪಂಜಾಬಿ ಭಾಷೆಗಳನ್ನು ಮಾತನಾಡುತ್ತಾರೆ. ಹಿಂದು ಧರ್ಮವು ಇಲ್ಲಿನ ನಗರದ ಪ್ರಮುಖ ಧರ್ಮವಾಗಿದೆ. ಈದ್ಗಾ ಕಾಲನಿ, ಪರೇಡ್, ಬೆಕನಗಂಜ್ ಮತ್ತು ಕಾನ್ಪುರ್ ಸೆಂಟ್ರಲ್ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಂರಿದ್ದಾರೆ. 1947ರಲ್ಲಿ ಭಾರತದ ವಿಭಜನೆ ನಂತರ, ವಲಸೆ ಬಂದಿರುವ ಸಿಖ್ರನ್ನು ಸಮುದಾಯ ಒಳಗೊಂಡಿದೆ. ಗೋವಿಂದ ನಗರ, ಗುಮ್ಟಿ ನಂ.5 ಅಶೋಕ ನಗರ ಮತ್ತು 80 ಅಡಿ ರಸ್ತೆಯ ಬಳಿ, ನಗರದಲ್ಲಿ ಅವರು ಅತ್ತ್ಯುತ್ತಮ ವಹಿವಾಟು ನಡೆಸುತ್ತಿರುವ ವ್ಯಾಪಾರವನ್ನು ಅವರು ಹೊಂದಿದ್ದಾರೆ. ಕಾನ್ಪುರ್‌ನಲ್ಲಿ ಸಣ್ಣ ಸಂಖ್ಯೆಯಲ್ಲಿ ಕ್ರಿಶ್ಚಿಯನ್ರು ಕೂಡ ಇದ್ದಾರೆ. ಕ್ರೈಸ್ಟ್‌ಚರ್ಚ್ ಮತ್ತು ಮೆಥೋಡಿಸ್ಟ್ ಚರ್ಚ್ ಬ್ರಿಟಿಷ್ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ.
ಜವಳಿ ಮತ್ತು ಚರ್ಮ ಉತ್ಪನ್ನಗಳನ್ನು ಕಾನ್ಪುರ್‌ನಲ್ಲಿ[೧೧] ಅತಿ ಹೆಚ್ಚು ಉತ್ಪಾದಿಸಿ ಅವುಗಳನ್ನು ಸಗಟಿನಲ್ಲಿ ರಪ್ತು ಮಾಡಲಾಗುತ್ತದೆ. ಜವಳಿ ಮತ್ತು ಚರ್ಮೋದ್ಯಮ ಅಲ್ಲದೆ, ಗೊಬ್ಬರ, ರಾಸಾಯನಿಕ, ದ್ವಿಚಕ್ರ ವಾಹನ, ಸೋಪ್, ಪಾನ್‌ಮಸಾಲಾ, ಸಿದ್ಧ ವಸ್ತು ಮತ್ತು ಎಂಜಿನಿಯರಿಂಗ್ ಉದ್ಯಮಗಳು ನಗರದಲ್ಲಿವೆ. ಜೆಕೆ ಇಂಡಸ್ಟ್ರೀಸ್ ಗ್ರೂಪ್, ಲೋಹಿಯಾ ಮಶಿನ್ಸ್ ಮತ್ತು ಡಂಕನ್ಸ್ ಇತ್ಯಾದಿ ಖಾಸಗಿ ವಲಯದ ಕಂಪನಿಗಳು ಕೂಡ ಬೃಹತ್ ಪ್ರಮಾಣದ ಘಟಕಗಳನ್ನು ಇಲ್ಲಿ ಸ್ಥಾಪಿಸಿವೆ.ಭಾರತೀಯ ದ್ವಿದಳ ಸಂಶೋಧನಾ ಸಂಸ್ಥೆ (ಐಸಿಎಆರ್ ನ ಸಂಸ್ಥೆ) ಮತ್ತು ರಾಷ್ಟ್ರೀಯ ಸಕ್ಕರೆ ಸಂಸ್ಥೆಯ ಮೂರು ಘಟಕಗಳ ಪೈಕಿ ಒಂದು ಕಾನ್ಪುರ್‌ದಲ್ಲಿ ಇದೆ. ಇದು, ಪ್ರಬಲವಾದ ಕೃಷಿ ಆಧಾರಿತ ಉದ್ದಿಮೆಗಳನ್ನು ಪ್ರತಿಬಿಂಬಿಸುತ್ತದೆ. ಭಾರತದ ಅತಿದೊಡ್ಡ ಚರ್ಮ ಸಂಸ್ಕರಣಾ ಘಟಕಗಳನ್ನು ಹೊಂದಿರುವ ಕಾನ್ಪುರ್ ಅದರಿಂದಾಗುವ ಮಾಲಿನ್ಯಕ್ಕೂ ಕುಖ್ಯಾತಿಯನ್ನು ಕೆಲಮಟ್ಟಿಗೆ ಪಡೆದಿದೆ. ವಸಾಹತುಶಾಹಿ ಅವಧಿಯಲ್ಲಿ ಈ ಚರ್ಮ ಸಂಸ್ಕರಣಾ ಘಟಕಗಳು ಕಾನ್ಪುರ್‌ನ ಕೈಗಾರಿಕೀಕರಣಕ್ಕೆ ಬುನಾದಿಯಾಗಿದ್ದವು. ಆದರೆ ಕಳೆಪೆ ಮಾಲಿನ್ಯದ ದಾಖಲೆ, ತಂತ್ರಜ್ಞಾನದ ಕೊರತೆ ಮತ್ತು ಇತರ ಕ್ಷೇತ್ರಗಳಲ್ಲಿ ತೆರೆದುಕೊಂಡ ಉದ್ಯೋಗವಕಾಶಗಳು ಇದರ ಬೆಳವಣಿಗೆಗೆ ತಡೆಯಾದವು ಮತ್ತು ನಂತರ ನಿಧಾನವಾಗಿ ಈ ಘಟಕಗಳು ಸಾವನ್ನಪ್ಪಿದವು. ಅತ್ಯಂತ ಕಡಿಮೆ ವೆಚ್ಚ ಮತ್ತು ಸುಲಭವಾಗಿ ಲಭ್ಯವಿರುವ ಪ್ರತಿಭೆಗಳ ಕಾರಣದಿಂದಾಗಿ ಹಲವಾರು ಸಂಸ್ಥೆಗಳು ಪ್ರಾಧಾನ್ಯತೆಯ ಸ್ಥಳ ಎಂದು ಹೊರಗುತ್ತಿಗೆ ಕ್ಷೇತ್ರದಿಂದ ಗುರುತಿಸಲ್ಪಡುವ ಮೂಲಕ ಕಾನ್ಪುರ್ ಗಮನ ಸೆಳೆಯಲು ಪ್ರಾರಂಭಿಸಿದೆ. ರಾಷ್ಟ್ರೀಯ ಹೆದ್ದಾರಿ 2 ಮತ್ತು ರಾಷ್ಟ್ರೀಯ ಹೆದ್ದಾರಿ 25ಕ್ಕೆ ಹತ್ತಿರವಾಗಿರುವ ಆಯಕಟ್ಟಿನ ಸ್ಥಳದಲ್ಲಿದೆ. ಚರ್ಮ, ಆಹಾರ ಸಂಸ್ಕರಣೆ, ಪ್ಲಾಸ್ಟಿಕ್ ಇತ್ಯಾದಿ ಉದ್ಯಮಗಳಿಗೆ ಲಭ್ಯವಾಗುವ ಕಚ್ಚಾವಸ್ತು, ದೊಡ್ಡ ಮಾರುಕಟ್ಟೆಗಳಿಗೆ ಸಮೀಪವಾಗಿರುವುದು ಮತ್ತು ಐಐಟಿ, ಚಂದ್ರಶೇಖರ್ ಆಝಾದ್ ಕೃಷಿ ವಿಶ್ವವಿದ್ಯಾಲಯ, ಕೇಂದ್ರೀಯ ದ್ವಿದಳ ಸಂಶೋಧನಾ ಸಂಸ್ಥೆ, ಕೇಂದ್ರಿಯ ಚರ್ಮ ಸಂಶೋಧನಾ ಸಂಸ್ಥೆಯಂತಹ ಹಲವಾರು ಶೈಕ್ಷಣಿಕ ಸಂಸ್ಥೆಗಳಿರುವ ಕಾರಣ ಲಭ್ಯವಾಗುವ ಸುಶಿಕ್ಷಿತ ಮಾನವ ಸಂಪನ್ಮೂಲದಿಂದಾಗಿ ಸಾಕಷ್ಟು ಸ್ಥಳೀಯ ಸೌಲಭ್ಯಗಳನ್ನು ಹೊಂದಿರುವ ನಗರವಾಗಿದೆ.(2001ರ ಜನಗಣತಿ ಪ್ರಕಾರ) ಕಾನ್ಪುರ್(MC)ನಲ್ಲಿ ಕೇವಲ ಶೇ. 61ರಷ್ಟು ಮನೆಗಳು ಬ್ಯಾಂಕಿಂಗ್ ಸೇವೆಯನ್ನು ಪಡೆದಿವೆ. ಅಂದಾಜು ಶೇ.8ರಷ್ಟು ಮನೆಗಳು ಮುಖ್ಯ ವಸ್ತುಗಳಾದ ವಾಹನ (ಬೈಸಿಕಲ್, ಸ್ಕೂಟರ್, ಮೊಪೆಡ್. ಕಾರು, ಜೀಪ್ ಇತ್ಯಾದಿ)ಗಳನ್ನು ಹೊಂದಿಲ್ಲ
JNNURMಗೆ ಇತ್ತೀಚೆಗೆ ಸಿದ್ದಪಡಿಸಲಾಗಿರುವ ನಗರಾಭಿವೃದ್ಧಿ ಯೋಜನೆಯಲ್ಲಿ.[೧೦]
ಕಾನ್ಪುರ್ ನಗರವು ಈ ಕೆಳಗಿನ ಕಾರಣಗಳಿಂದಾಗಿ ಉಳಿದುಕೊಂಡಿದೆ ಎಂದು ವಿವರಿಸಲಾಗಿದೆ.ಓಇಎಫ್, ಎಸ್ಎಎಫ್ ಮತ್ತು ಆರ್ಡಿನನ್ಸ್ ಫ್ಯಾಕ್ಟರಿ ಇತ್ಯಾದಿ ರಕ್ಷಣಾ ಇಲಾಖೆಯ ಘಟಕಗಳಿಂದಾಗಿ 1995ರಲ್ಲಿ 300 ಇದ್ದು 2006ರಲ್ಲಿ 170ಕ್ಕೆ ಇಳಿದಿರುವ ಚರ್ಮ ಸಂಸ್ಕರಣಾ ಘಟಕಗಳು ಐಐಟಿ, ಜೆಇಇ, ಐಎಎಸ್/ಐಪಿಎಸ್ ಇತ್ಯಾದಿಗಳಿಗಾಗಿ ಇರುವ ಬೋಧನಾ ಸಂಸ್ಥೆಗಳು
ವ್ಯಾಪಾರಿ ಚಟುವಟಿಕೆಗಳು
ಕಾನ್ಪುರ್ ಹವಾಗುಣವು ಆರ್ದತೆಯಿಂದ ಕೂಡಿರುವ ಉಷ್ಣ ವಾತಾವರಣವನ್ನು ಹೊಂದಿದ್ದು, ಕೆಲಪ್ರದೇಶದಲ್ಲಿ ದೆಹಲಿಯ ಹವಾಗುಣದಂತೆ ಇದೆ. ಉತ್ತರ ಭಾರತದ ಬಯಲು ಪ್ರದೇಶದಲ್ಲಿ ಕಾನ್ಪುರ್ ಉಷ್ಣತೆಯ ಅತ್ತ್ಯುನ್ನತೆಗೂ ಸಾಕ್ಷಿಯಾಗುತ್ತದೆ. ಚಳಿಗಾಲದಲ್ಲಿ ಶೂನ್ಯ ಡಿಗ್ರಿ ಸೆಲ್ಸಿಯಸ್‌ವರಗೆ ಇಳಿಯುವ ಉಷ್ಣತೆಯು, ಬೆಸಿಗೆಯಲ್ಲಿ 47 ಡಿಗ್ರಿ ಸೆಲ್ಸಿಯಸ್‌ವರೆಗೆ ಏರುತ್ತದೆ. ಡಿಸೆಂಬರ್ ಮತ್ತು ಜನವರಿಗಳಲ್ಲಿ ದಟ್ಟವಾಗಿ ಮಂಜು ಕವಿಯುವ ವಾತಾವರಣವಿರುವುದರಿಂದ ಈ ದಿನಗಳಲ್ಲಿ ಟ್ರಾಫಿಕ್ ಮತ್ತು ಪ್ರಯಾಣದ ವಿಳಂಬ ಇಲ್ಲಿ ಸರ್ವೆ ಸಾಮಾನ್ಯ. ಬೇಸಿಗೆಯಲ್ಲಿ ಶುಷ್ಕ ಬಿಸಿಯೊಂದಿಗೆ ಸೇರಿರುವ ಸುಂಟರಗಾಳಿ ಮರುಭೂಮಿ ವಾತಾವರಣದಲ್ಲಿ ಸಾಮಾನ್ಯವಾಗಿರುತ್ತದೆ. ಜುಲೈ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆ ಬರುತ್ತದೆ ಮತ್ತು ಬಹುತೇಕ ನಿಯಮಿತ ಮಾನ್ಸೂನ್ ಅವಧಿಯೊಂದಿಗೆ ಮುಕ್ತಾಯವಾಗುತ್ತದೆ. ಮಾರ್ಚ್, ಏಪ್ರಿಲ್ ಅವಧಿಯಲ್ಲೂ ಕೂಡ ಕೆಲವು ಬಾರಿ ಮಳೆಯಾಗಿರುವ ದಾಖಲೆ ಇದೆ. ಆದರೆ,ಈ ರೀತಿಯ ವಿಚಿತ್ರಗಳು ಕೆಲ ಬಾರಿ ಈ ಪ್ರದೇಶಕ್ಕೆ ವೈವಿದ್ಯಮಯ ಉತ್ಪನ್ನಗಳನ್ನು ಮೂರು ಬಾರಿ ತೆಗೆಯುವುದಕ್ಕೆ ಅನುಕೂಲ ಕಲ್ಪಿಸುತ್ತವೆ. ಫೆಬ್ರವರಿ ಮತ್ತು ಮಾರ್ಚ್ ಅವಧಿಯಲ್ಲಿ ಕಾನ್ಪುರ್‌ಗೆ ಭೇಟಿ ನೀಡುವುದು ಅತ್ತ್ಯುತ್ತಮ.
ಕಾನ್ಪುರವು ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದ್ದು, ಅದನ್ನು ಪ್ರಸಿದ್ಧ ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಲಾಗಿದೆ. ನಗರದ ಕೆಲವು ವಿಭಾಗ-ಆಧಾರಿತ ಪ್ರಸಿದ್ಧ ಕಾಲೇಜುಗಳ ಪಟ್ಟಿ ಈ ಕೆಳಕಂಡಂತಿವೆ:-
ನಗರದಲ್ಲಿ ಅನೇಕ ಪದವಿ ಕಾಲೇಜುಗಳು ಮತ್ತು ಶಾಲೆಗಳಿವೆ(ಅಂತರ್ ಕಾಲೇಜುಗಳು).
ಕಾನ್ಪುರ್‌ದ ಕಕಡಿಯೊವು ಉತ್ತರ ಭಾರತದಲ್ಲಿನ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಸಿದ್ಧತಾ ತರಬೇತಿ ಕೇಂದ್ರಗಳಿಗೆ ಹೆಚ್ಚು ಪ್ರಸಿದ್ಧಿ.
ಕಾನ್ಪುರದ ಸಾಕ್ಷರತಾ ಪ್ರಮಾಣ 77.63%ಇದೆ, ಅದು ರಾಷ್ಟ್ರೀಯ ಸಾಮಾನ್ಯ ಮಟ್ಟಕ್ಕಿಂತಲೂ ಅಧಿಕವಾಗಿದೆ.
ಗ್ರೀನ್ ಪಾರ್ಕ್ ಸ್ಟೇಡಿಯಂ, ಕಾನ್ಪುರ್, ಉತ್ತರ ಪ್ರದೇಶ.ಹಿಂಭಾಗದಲ್ಲಿ ಗಂಗಾನದಿಯನ್ನು ಕಾಣಬಹುದು.
ಕ್ರಿಕೇಟ್ ಕಾನ್ಪುರದ ಅತ್ಯಂತ ಹೆಸರುವಾಸಿಯಾದ ಆಟವಾಗಿದೆ.45,000 ವೀಕ್ಷಕರು ಕೂರಬಹುದಾದ ಸಾಮರ್ಥ್ಯವನ್ನು ಹೊಂದಿರುವ, ಪ್ಲಡ್‌ಲೈಟ್ ಒಳಗೊಂಡಂತೆ ಬಹುಮುಖ-ಉಪಯೋಗವನ್ನು ಹೊಂದಿರುವ ಗ್ರೀನ್ ಪಾರ್ಕ್ ಸ್ಟೇಡಿಯಂ ಕಾನ್ಪುರದಲ್ಲಿ ಸ್ಥಾಪಿತವಾಗಿದೆ. ಆದಾಗ್ಯೂ, ರಾಜಕೀಯ ಮತ್ತು ಹಣಕಾಸಿನ ಕಾರಣದಿಂದಾಗಿ ಈ ಮೈದಾನವು ಬಹು ಅಪರೂಪವಾಗಿ ಉಪಯೋಗಿಸಲ್ಪಡುತ್ತಿದೆ. ಈ ನಗರದಲ್ಲಿ, ಹಾಕಿ ಮತ್ತು ಪುಟ್‌ಬಾಲ್ ಇವು ಶಾಲೆ/ಕಾಲೆಜು ಮಟ್ಟಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಇತರ ಆಟಗಳಾಗಿವೆ.
IPLನ ಎರಡು ವರ್ಷಗಳ ಸಾಫಲ್ಯತೆಯ ನಂತರ, ತಂಡಗಳ ಮೊತ್ತವನ್ನು 10ಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ, 2010-11ರಲ್ಲಿ ಎರಡು ಹೊಸ ತಂಡಗಳು IPLಅನ್ನು ಸೇರ್ಪಡೆಗೊಳ್ಳಲಿವೆ ಎಂದು ವರದಿಯಾಗಿದೆ. ನಿರ್ಧಿಷ್ಟಪಡಿಸಿದ ಹೊಸ ಪೌರತಂಡಗಳು ಮೂಲತಹಃ ಅಹಮದಾಬಾದ್ ಮತ್ತು ಕಾನ್ಪುರದಲ್ಲಿ ನೆಲೆಸಿವೆ, ಕಾನ್ಪುರ ತಂಡವನ್ನು ಕೊಳ್ಳಲು ಸಹಾರಾ ಗುಂಪು ಇವುಗಳ ಮಧ್ಯವರ್ತಿಯ ರೂಪದ ಸಾದ್ಯತಾ ಕಕ್ಷಿದಾರನಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅಹಮದಾಬಾದ್ ತಂಡದ ಮಾಲಿಕರಾಗಿ ಅನಿಲ್ ಅಂಬಾನಿಯವರ ಹೆಸರು ಸಂಯೋಗಗೊಂಡಿದೆ. (ಭಾರತೀಯ ಪ್ರೀಮಿಯರ್ ಲೀಗ್‌ನ#2010-11ರ ವಿಸ್ತರಣೆಯನ್ನು ನೋಡಿ)
ಪದ್ಮ ವಿಭೂಷಣ್ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್‌ನ, ಒಮ್ಮೆ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಿದ್ದರು ಮತ್ತು ನೇತಾಜಿಯ ಆಜಾದ್ ಹಿಂದ್ ಫೌಜ್ ಸಂಘಟನೆಯ ನಾಯಕರಾಗಿದ್ದರು.
ಸುಭಾಷಿಣಿ ಅಲಿ, ಸಾಂದರ್ಭಿಕ ವಾಸಿ, ವ್ಯಾಪಾರ ಒಕ್ಕೂಟದ ಸದಸ್ಯೆ ಮತ್ತು ಕಮ್ಯೂನಿಸ್ಟ್ ನಾಯಕಿ ಮತ್ತು ಚಿತ್ರನಟಿ (ಅಶೋಕ ಚಿತ್ರದ ಖ್ಯಾತಿ), ಚಿತ್ರ ನಿರ್ದೇಶಕ ಮುಜಾಫರ್ ಅಲಿಯ ಪತ್ನಿ ಮತ್ತು ಶಾದ್ ಅಲಿಯ ತಾಯಿ.
ಸರ್ ಪೀಟರ್ ಡೆ ನೊರೊನ್ಹ, ಪ್ರಮುಖ ವ್ಯಾಪಾರಸ್ಥ, ಲೋಕೋಪಯೋಗಿ ಕಾರ್ಯಗಳನ್ನು ಮಾಡುವವರು ಮತ್ತು ಜನಸೇವಕ. ಅವರು ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯದ ತಮ್ಮ ಕೆಲಸಕ್ಕಾಗಿ 1965ರಲ್ಲಿ ಪೋಪ್ ಪಾಲ್ VI ನಿಂದ ನೈಟ್ ಬಿರುದನ್ನು ಸಹ ಪಡೆದರು.
ನಗರದೊಳಗಿನ ಸಂಚಾರದಟ್ಟಣೆಯ ತೊಂದರೆಯನ್ನು ಸರಿಪಡಿಸುವ ಸಲುವಾಗಿ ರಾಜ್ಯ ಸರ್ಕಾರವು ರಿಂಗ್ ರೋಡ್‌ನ ನಿರ್ಮಾಣಕ್ಕೆ ಪ್ರಸ್ಥಾವನೆಯನ್ನು ನೀಡಿದೆ. ಆರ್ಟಿಯಲ್ ರಸ್ತೆಯು ಪಂಕಜ್ ಭಾವು ಸಿಂಗ್ ಅನ್ನು ಸರ್ಸಿಯಾ ಘಾಟ್ ಮುಖಾಂತರ ಸಾರಾಯಿ ಭೌತಿಗೆ ಸಂಪರ್ಕ ಕಲ್ಪಿಸುವುದಕ್ಕೆ ತೀರ್ಮಾನಿಸಲಾಯಿತು. ಕಾನ್ಪುರ್ ಮೆಟ್ರೊಪಾಲಿಟಿನ್ ಬಸ್ ಸರ್ವಿಸ್ ನಗರದ ವ್ಯಾಪ್ತಿಯಲ್ಲಿ ಪ್ರಯಾಣಿಸುವುದಕ್ಕೆ ಅತ್ಯಂತ ಕಡಿಮೆ ವೆಚ್ಚದ ಪ್ರಯಾಣ ಸೌಲಭ್ಯವಾಗಿದೆ. ಆದರೆ, ಇದು ನಗರದ ಬಹುತೇಕ ಪ್ರದೇಶಗಳಿಗೆ ಸೇವೆ ಸಲ್ಲಿಸುವ ಹಾಗೆ ಯೋಜನೆ ಮಾಡಿಲ್ಲ. ಮತ್ತು ಕೆಲವೇ ಆಯ್ದ ಮಾರ್ಗಗಳಲ್ಲಿ ಈ ಸೌಲಭ್ಯವಿದೆ. ಜೆಎನ್ಎನ್ ಯುಎನ್ಆರ್ಎಂ ಯೋಜನೆಯಡಿಯಲ್ಲಿ ಕಾನ್ಪುರ್ ನಗರಕ್ಕೆ ಕೇಂದ್ರ ಸರ್ಕಾರ 300 ಬಸ್ ಗಳನ್ನು ನೀಡುವ ಮೂಲಕ ಪರಿಸ್ಥಿತಿ ಬದಲಾಗುವ ಸ್ಥಿತಿಗೆ ತಲುಪಿದೆ. ಕೇಂದ್ರ ಸರ್ಕಾರವು ಶೇ.50, ರಾಜ್ಯಸರ್ಕಾರ ಮತ್ತು ನಗರ ನಿಗಮವು ಕ್ರಮವಾಗಿ ಶೇ.20 ಮತ್ತು ಶೇ.30ರಷ್ಟು ವೆಚ್ಚವನ್ನು ಭರಿಸಲಿದೆ. ಇತರ ಎಲ್ಲ ನಗರಗಳಲ್ಲಿ ಇರುವ ಹಾಗೆಯೇ ಇಲ್ಲಿಯೂ ತ್ರಿಚಕ್ರ ಟೆಂಪೋಗಳು ಇನ್ನೊಂದು ಜನಪ್ರಿಯತೆಗಳಿಸಿರುವ ಪ್ರಯಾಣ ಸೌಲಭ್ಯವಾಗಿದೆ. ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಂಪ್ರೆಸ್ ನ್ಯಾಚುರಲ್ ಗ್ಯಾಸ್ ಚಾಲಿತ ಟೆಂಪೋಗಳನ್ನು ಇತ್ತೀಚೆಗೆ ಪರಿಚಯಿಸಲಾಗಿದೆ. ಒಂದು ದಶಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ಮೇಟ್ರೊ ರೈಲ್ವೆ ಇರಬೇಕು ಎನ್ನುವ ಅದರ ಕಾರ್ಯಸೂಚಿ ಅಂಗವಾಗಿ ಸರ್ಕಾರವು ನಗರದಲ್ಲಿ ಮೆಟ್ರೊ ರೈಲ್ವೆ ಸೇವಾ ವ್ಯವಸ್ಥೆಯನ್ನು ಕಾನ್ಪುರ್ ನಗರದಲ್ಲಿ ಪರಿಚಯಿಸುವುದಕ್ಕೆ ಪ್ರಸ್ತಾವನೆಯನ್ನು ಗಮನಕ್ಕೆ ತೆಗೆದುಕೊಂಡಿದೆ.
ಕಾನ್ಪುರದ ಅಂತರರಾಜ್ಯ ಬಸ್ ನಿಲ್ದಾಣ(ಐಎಸ್‌ಬಿಟಿ)ವನ್ನು "ಶಹೀದ್ ಮೇಜರ್ ಸಲ್ಮಾನ್ ಖಾನ್ ಬಸ್ ಸ್ಟೇಷನ್" ಎಂದು ಅಧಿಕೃತವಾಗಿ ಹೆಸರಿಸಲಾಗಿದೆ. ಇದು ಸ್ಥಳೀಯವಾಗಿ "ಜಕಾರ್ಕತಿ ಬಸ್ ಸ್ಟೇಷನ್" ಎಂದು ಚಿರಪರಿಚಿತ. ಇದು ನಗರದ ಎಲ್ಲಾ ಪ್ರಮುಖ ಸ್ಥಳಗಳಿಗೆ ಬಸ್ಸುಗಳನ್ನು ಒದಗಿಸುತ್ತದೆ. ಈ ನಗರದ ಮೂಲಕ ಅನೇಕ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳು ಹಾದು ಹೋಗುತ್ತವೆ.
ಉತ್ತರ ಪ್ರದೇಶದ ಈ ಪ್ರದೇಶಕ್ಕೆ ಮತ್ತು ಕಾನ್ಪುರ್ ನಗರಕ್ಕೆ ಕಾನ್ಪುರ್ ವಿಮಾನ ನಿಲ್ದಾಣವೊಂದೇ ವಿಮಾನ ನಿಲ್ದಾಣವಾಗಿದೆ. ಈ ಮೊದಲು ಇಂಡಿಯನ್ ಏರಲೈನ್ಸ್ ಎಂದು ಕರೆಯಲ್ಪಡುತ್ತಿದ್ದ ಏರ್ ಇಂಡಿಯಾ 48 ಸೀಟುಗಳ ಸಾಮರ್ಥ್ಯದ ಎಟಿಆರ್ 42 ಟರ್ಬೋಟ್ರಾಪ್ ಮಾದರಿಯ ವಿಮಾನವನ್ನು ಉಪಯೋಗಿಸಿಕೊಂಡು ಪ್ರತಿದಿನ ಸೋಮವಾರದಿಂದ ಶನಿವಾರದವರೆಗೆ ಕಾನ್ಪುರ್ ಮತ್ತು ದೆಹಲಿ ನಡುವೆ ಸೌಲಭ್ಯ ನೀಡುತ್ತದೆ. ಕಾನ್ಪುರ್‌ನಿಂದ ಭಾರತದ ಇತರ ಪ್ರದೇಶಗಳಿಗೆ ವಾಯುಯಾನ ಸೌಲಭ್ಯ ವೇಗ ಪಡೆಯಬೇಕಾದ ಅಗತ್ಯವಿದೆ.
ಟ್ರಾಮ್‌ಗಳು ಭಾರತದ ಇತರ ನಗರಗಳಾದ ದೆಹಲಿ, ಮುಂಬಯಿ ಮತ್ತು ಚೆನ್ನೈ) ನಂತೆ ಕಾನ್ಪುರ್ ನಗರದಲ್ಲಿ ಕೂಡ ಪ್ರಾರಂಭದಲ್ಲಿ ಪರಿಚಯಿಸಲಾದ ಟ್ರಾಮ್‌ಗಳು ಸಿಂಗಲ್ ಕೋಚ್‌ಗಳಾಗಿದ್ದವು. ಏಕೆಂದರೆ ಈ ಮಾದರಿಯ ಪ್ರಯಾಣ ಸೌಲಭ್ಯವನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು. ಅವುಗಳು ಎಲೆಕ್ಟ್ರಿಕ್ ಟ್ರ್ಯಾಕ್ಷನ್ ಮಾದರಿಯದ್ದಾಗಿದ್ದವು.1955ರಲ್ಲಿ ಟ್ರಾಮ್ ವಿರೋದವು ಪ್ರಾರಂಭವಾಗಿ, ವೇಗವಾಗಿ ಜಗತ್ತಿನಾದ್ಯಂತ ಹರಡಿತು. ಹಲವಾರು ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟ್ರಗಳು ಟ್ರಾಮ್ ವ್ಯವಸ್ಥೆಯನ್ನು ಮುಚ್ಚಲು ಪ್ರಾರಂಭಿಸಿದವು. ಇದಕ್ಕೆ ಭಾರತ ಕೂಡ ಹೊರತಾಗಿರಲಿಲ್ಲ. 1933ರ ಹೊತ್ತಿಗೆ ನಿಧಾನವಾಗಿ ಕಾನ್ಪುರ್‌ದಲ್ಲಿ ಟ್ರಾಮ್ ಸೇವೆಯನ್ನು ಹಿಂಪಡೆಯಲಾಯಿತು. ಅಲ್ಲಿ 4 ಮೈಲ್ ಉದ್ದದ ರೈಲು ಟ್ರ್ಯಾಕ್ ಮತ್ತು 20 ತೆರೆದ ಸಿಂಗಲ್-ಡೆಕ್ ಟ್ರ್ಯಾಮ್‌ಗಳು ಇದ್ದವು. ಗಂಗಾ ನದಿ ತೀರದ ಸರ್ಸಿಯಾ ಘಾಟ್- ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ಒಂದೇ ಲೈನ್ ಇತ್ತು.[೧೨]
↑Kulke, Hermann; Rothermund, Dietmar. A history of India (4, illustrated ed.). Routledge, 2004. pp. 432 pages. ISBN 0-415-32920-5, ISBN 978-0-415-32920-0. ೯ನೇ ಶತಮಾನದಲ್ಲಿ ಪ್ರತಿಹಾರ ರಾಜರಾದ ಭೋಜ (೮೩೬-೮೮೫) ಮತ್ತು ಮಹೇಂದ್ರಪಾಲ (೮೮೫-೯೧೦) ರು ತಮ್ಮ ಸಮಕಾಲೀನ ರಾಜರಿಗಿಂತ ಬಲಿಷ್ಠರಾಗಿದ್ದರು. ಕನೌಜ್ ಆ ಕಾಲದಲ್ಲಿ ಒಂದು ಪ್ರಮುಖ ಅಧಿಕಾರಸ್ಥಾನವಾಗಿತ್ತು.
↑ಡಾಲ್ರಿಂಪಲ್, ಡಬ್ಲ್ಯೂ ೨೦೦೭. ದಿ ಲಾಸ್ಟ್ ಮುಘಲ್ - ದ ಫಾಲ್ ಆಫ್ ಎ ಡೈನಾಸ್ಟಿ: ಡೆಲ್ಲಿ, ೧೮೫೭, ಆಲ್‌ಫ್ರೆಡ್ ನಾಫ್, ನ್ಯೂಯಾರ್ಕ್