ಕಾಬೂಲಿ ಬಾಗ್ ಮಸೀದಿ
ಕಾಬೂಲಿ ಬಾಗ್ ಮಸೀದಿಯು ಹರಿಯಾಣ ರಾಜ್ಯದ ಪಾಣಿಪತ್‌ನಲ್ಲಿರುವ ಒಂದು ಮಸೀದಿಯಾಗಿದ್ದು ಇದನ್ನು 1527 ರಲ್ಲಿ ಮೊದಲ ಪಾಣಿಪತ್ ಕದನದಲ್ಲಿ ಸುಲ್ತಾನ್ ಇಬ್ರಾಹಿಂ ಲೋಧಿ ವಿರುದ್ಧ ಜಯಗಳಿಸಿದ್ದಕ್ಕಾಗಿ 1527 ರಲ್ಲಿ ಚಕ್ರವರ್ತಿ ಬಾಬರ್ ನಿರ್ಮಿಸಿದ. ಪಾಣಿಪತ್‌ನಲ್ಲಿರುವ ಈ ಮಸೀದಿಗೆ ಬಾಬರ್‌ನ ಪತ್ನಿ ಕಾಬುಲಿ ಬೇಗಮ್‍ನ ಹೆಸರಿಡಲಾಗಿದೆ.[೧][೨]
ವಾಸ್ತುಕಲೆ
[ಬದಲಾಯಿಸಿ]ಇದರ ವಾಸ್ತುಕಲೆಯು ಸ್ವಲ್ಪ ಮಟ್ಟಿಗೆ ದೊಡ್ಡ ಕಮಾನುಳ್ಳ ಗುಮ್ಮಟಗಳನ್ನು ಹೊಂದಿರುವ ಸಮರ್‌ಕಂದ್‌ನಲ್ಲಿರುವ ರಾಜಯೋಗ್ಯ ಮಸೀದಿಗಳ ಪ್ರತಿರೂಪವಾಗಿದೆ. ಈ ರೀತಿಯ ವಾಸ್ತುಕಲೆಯನ್ನು ರಚಿಸುವಲ್ಲಿ ತರಬೇತಿ ಪಡೆದ ಕುಶಲಕರ್ಮಿಗಳು ಮತ್ತು ಎಂಜಿನಿಯರ್‌ಗಳು ಭಾರತದಲ್ಲಿ ಲಭ್ಯವಿಲ್ಲದ ಕಾರಣ ಬಾಬರ್‌ಗೆ ತೈಮೂರ್‌ನಂತಹ ವಾಸ್ತುಕಲೆಯನ್ನು ಸಂಪೂರ್ಣವಾಗಿ ನಕಲು ಮಾಡಲು ಸಾಧ್ಯವಾಗಲಿಲ್ಲ.[೩]
ವೈಶಿಷ್ಟ್ಯಗಳು
[ಬದಲಾಯಿಸಿ]ಒಂದು ಸಂಯುಕ್ತ ಗೋಡೆಯೊಳಗೆ ಇಟ್ಟಿಗೆ ಮತ್ತು ಗಾರೆ ಪ್ಲ್ಯಾಸ್ಟರ್‌ನಿಂದ ನಿರ್ಮಿಸಲ್ಪಟ್ಟ ಮಸೀದಿಯು ಉತ್ತರದತ್ತ ಮುಖ ಮಾಡಿದೆ. ಮಸೀದಿಯ ಮೂಲೆಗಳಲ್ಲಿ ವಾಯವ್ಯ ಮತ್ತು ನೈಋತ್ಯ ದಿಕ್ಕುಗಳಲ್ಲಿ ಅಷ್ಟಭುಜಾಕೃತಿ ಆಕಾರದ ಗೋಪುರಗಳಿವೆ.[೪]
ಇಟ್ಟಿಗೆಗಳು ಮತ್ತು ಕೆಂಪು ಮರಳುಗಲ್ಲಿನಿಂದ ನಿರ್ಮಿಸಲ್ಪಟ್ಟ ಇದರ ಪ್ರವೇಶ ದ್ವಾರವು ಸುತ್ತುವರಿಯಲ್ಪಟ್ಟ "ನಾಗಂದಿಗೆಯಂತಹ ಉತ್ತರಂಗ" ರಂಧ್ರವನ್ನು ಹೊಂದಿದೆ. ಇದು ದೊಡ್ಡ ಕಮಾನಿನಂತಹ ಆಕಾರದಲ್ಲಿದೆ; ಇದರ ಎಡೆಗಳು ಅಲಂಕಾರಿಕತೆಯನ್ನು ಹೊಂದಿದ್ದು, ಕಮಾನುಳ್ಳ ಕುಹರಗಳು ಇರುವ ಆಯತಾಕಾರದ ಫಲಕಗಳೊಳಗೆ ಕೂಡಿಸಲ್ಪಟ್ಟಿವೆ.[೧] ಪ್ರಾರ್ಥನಾ ಮಂದಿರವು ದೊಡ್ಡದಾಗಿದ್ದು 53.75 by 16.5 metres (176 by 54 ft) ಯಷ್ಟು ಅಳತೆ ಹೊಂದಿದೆ ಮತ್ತು ದೊಡ್ಡ ಗುಮ್ಮಟದಿಂದ ಮುಚ್ಚಲ್ಪಟ್ಟಿದೆ.[೪]
ಹೊರಗಿನ ಚಿತ್ರಶಾಲೆಗಳು
[ಬದಲಾಯಿಸಿ]- 82-image online picture gallery of Kabuli Bagh Mosque taken by American Institute of Indian Studies in 2008 CE
- Online picture gallery of Indo-Islamic monuments of Haryana taken by American Institute of Indian Studies in 2008 CE
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Kabuli Bagh Mosque, Panipat". Official web site of Haryana tourism Department. Retrieved 17 November 2015.
- ↑ "Kabuli Bagh Mosque". C.P.R. Environment Education Centre, Chennai. Retrieved 17 November 2015.
- ↑ Asher & Talbot 2006.
- ↑ ೪.೦ ೪.೧ Asher 1992.
ಗ್ರಂಥಸೂಚಿ
[ಬದಲಾಯಿಸಿ]- Asher, Catherine Blanshard (24 September 1992). Architecture of Mughal India. Cambridge University Press. ISBN 978-0-521-26728-1.
{{cite book}}
: Invalid|ref=harv
(help) - Asher, Catherine B.; Talbot, Cynthia (16 March 2006). India before Europe. Cambridge University Press. ISBN 978-1-139-91561-8.
{{cite book}}
: Invalid|ref=harv
(help)