ವಿಷಯಕ್ಕೆ ಹೋಗು

ಕಾಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೀಟದ ಕಾಲಿನ ರೇಖಾಚಿತ್ರ

ಕಾಲು ಸಾಮಾನ್ಯವಾಗಿ ಕಂಬದ ಆಕಾರ ಹೊಂದಿರುವ, ಭಾರ ಹೊರುವ ಮತ್ತು ಚಲನೆಯ ಶಾರೀರಿಕ ರಚನೆ. ಚಲನೆಯ ಅವಧಿಯಲ್ಲಿ, ಕಾಲುಗಳು ವಿಸ್ತರಿಸಬಲ್ಲ ಆಧಾರ ದಂಡಗಳಾಗಿ ಕಾರ್ಯನಿರ್ವಹಿಸುತ್ತವೆ.

ಬಹುತೇಕ ಪ್ರಾಣಿಗಳು ಸಮ ಸಂಖ್ಯೆಯ ಕಾಲುಗಳನ್ನು ಹೊಂದಿರುತ್ತವೆ.

ಮಾನವ ಮತ್ತು ಇತರ ಸಸ್ತನಿಗಳಲ್ಲಿ, ಕಾಲು ಮೂಳೆಗಳು, ಸ್ನಾಯುಗಳು, ಸ್ನಾಯುರಜ್ಜುಗಳು, ಅಸ್ಥಿರಜ್ಜುಗಳು, ರಕ್ತನಾಳಗಳು, ನರಗಳು, ಮತ್ತು ಚರ್ಮವನ್ನು ಒಳಗೊಳ್ಳುತ್ತದೆ. ಕೀಟಗಳಲ್ಲಿ, ಕಾಲು ಬಹುತೇಕ ಈ ಎಲ್ಲವನ್ನು ಒಳಗೊಳ್ಳುತ್ತದೆ, ಒಂದನ್ನು ಹೊರತುಪಡಿಸಿ, ಅದೇನೆಂದರೆ ಕೀಟಗಳು ಮೂಳೆಗಳು ಮತ್ತು ಚರ್ಮ ಎರಡರ ಕಾರ್ಯವನ್ನೂ ಮಾಡುವ ಬಾಹ್ಯಕವಚವನ್ನು ಹೊಂದಿರುತ್ತವೆ.

ಕೆಲವೊಮ್ಮೆ ಕಾಲಿನ ತುದಿ, ಅಥವಾ ಪಾದವನ್ನು ಕಾಲಿನ ಭಾಗವೆಂದು ಪರಿಗಣಿಸಲಾಗುತ್ತದೆ, ಬೇರೆ ಸಮಯದಲ್ಲಿ ಅದನ್ನು ಪ್ರತ್ಯೇಕವೆಂದು ಪರಿಗಣಿಸಲಾಗುತ್ತದೆ. ಅದೇರೀತಿ, ಸೊಂಟದ ಕೀಲು ಅಥವಾ ಕಾಲು ಮುಖ್ಯ ಶರೀರಕ್ಕೆ ಸೇರುವ ಇತರ ಸ್ಥಳವನ್ನು ಪ್ರತ್ಯೇಕ ಅಥವಾ ಕಾಲಿನ ಭಾಗವೆಂದು ಪರಿಗಣಿಸಬಹುದು.

ಉಲ್ಲೇಖ

[ಬದಲಾಯಿಸಿ]
"https://kn.wikipedia.org/w/index.php?title=ಕಾಲು&oldid=1037023" ಇಂದ ಪಡೆಯಲ್ಪಟ್ಟಿದೆ