ಕಾವ್ಯಾನಂದ (ಪುಣೇಕರ)
ಗೋಚರ
ಕಾವ್ಯಾನಂದ ಎನ್ನುವ ಕಾವ್ಯನಾಮದಿಂದ ಪ್ರಸಿದ್ಧರಾದವರು ನರಸಿಂಹಾಚಾರ್ಯ ಕಿತ್ತೂರ. ಇವರ ತಾಯಿ ಭಾರತಿಬಾಯಿ; ತಂದೆ ಭೀಮಾಚಾರ್ಯರು. ಕಾವ್ಯಾನಂದರು ೧೮೭೦ರಲ್ಲಿ ರಾಣಿ ಚನ್ನಮ್ಮನ ಕಿತ್ತೂರಿನಲ್ಲಿ ಜನಿಸಿದರು. ಇವರು ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದರು. ಬೆಟಗೇರಿ ಕೃಷ್ಣಶರ್ಮರು ಕಿತ್ತೂರಿನಲ್ಲಿ ಇವರ ಶಿಷ್ಯತ್ವದಲ್ಲಿ ಕೆಲಕಾಲ ಕಳೆದಿದ್ದರು.
ಇವರ ಕೆಲವು ಕೃತಿಗಳು:
- ಸಭಾರಂಜನ ಶತಕ
- ಗೃಹವೈದ್ಯಕವು
- ಬಾಲರಂಜನ
- ಮಗನಿಗೆ ತಂದೆಯ ಪತ್ರ
- ಪ್ರಶ್ನೋತ್ತರ ಮಾಲಿಕಾ
ಇವರ ಅನೇಕ ಸಂಶೋಧನಾತ್ಮಕ ಲೇಖನಗಳು ‘ವಾಗ್ಭೂಷಣ’ ಪತ್ರಿಕೆಯಲ್ಲಿ ಪ್ರಕಟವಾಗಿವೆ.(ಉದಾ: ತಾಮ್ರ ಶಾಸನ, ಪ್ರಾಚೀನ ನಾಗರಿಕತೆ, ನಮ: ಪಂಚಮ ರಸಾಯ, ಸಂಗೊಳ್ಳಿ ರಾಯಣ್ಣ ಇತ್ಯಾದಿ.)
ಕಾವ್ಯಾನಂದರು ೧೯೨೯ರಲ್ಲಿ ನಿಧನರಾದರು.