ವಿಷಯಕ್ಕೆ ಹೋಗು

ಕಿನ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಿನ್ಯ ಅಥವಾ ಕಿನ್ಯಾ ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಗ್ರಾಮ. ಈ ಗ್ರಾಮದಲ್ಲಿ ಪುರಾತನವಾದ ತಲಪಾಡಿ ದುರ್ಗಾ ಪರಮೇಶ್ವರಿ ದೇವಸ್ಥಾನವಿದೆ. [] ಕಿನ್ಯ ಗ್ರಾಮವು ತಲಪಾಡಿ ಗ್ರಾಮದ ಸಮೀಪದಲ್ಲಿದೆ. ಇದು ಮಂಗಳೂರು ನಗರದ ದಕ್ಷಿಣಕ್ಕೆ 23 ಕಿಮೀ ದೂರದಲ್ಲಿದೆ. ಸ್ಥಳೀಯ ತುಳು ಭಾಷೆಯಲ್ಲಿ ಕಿನ್ಯ ಎಂದರೆ ಚಿಕ್ಕದು ಎಂದರ್ಥ. ದುರ್ಗಾ ಪರಮೇಶ್ವರಿ ದೇವಸ್ಥಾನವನ್ನು ಇತ್ತೀಚೆಗೆ 2015 ರಲ್ಲಿ ನವೀಕರಿಸಲಾಯಿತು. ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವು ಅವಿಭಜಿತ ಸೌತ್ ಕೆನರಾ (ದಕ್ಷಿಣ ಕೆನರಾ) ಜಿಲ್ಲೆಯ (ಈಗ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು) ಸ್ಥಳೀಯರಾದ ಅನೇಕ ಜನರ ಕುಟುಂಬ ದೇವತೆ (ಕುಲದೇವಿ). ಕರ್ನಾಟಕ ರಾಜ್ಯದ ಡಿ ಸಿ ಓ ಪ್ರಕಟಿಸಿದ ಕರ್ನಾಟಕ ಆಡಳಿತಾತ್ಮಕ ಅಟ್ಲಾಸ್ 2001 ರ ಪ್ರಕಾರ ಗ್ರಾಮ ಕೋಡ್ 02699400 ಆಗಿದೆ. ಕಿನ್ಯಾ ಗ್ರಾಮ ಅಂಚೆ ಕಚೇರಿಯ ಪಿನ್‌ಕೋಡ್ 575023. []

ಉಲ್ಲೇಖಗಳು

[ಬದಲಾಯಿಸಿ]
  1. "Durga Parameshwari Temple, Devipura Talapdy". rcmysore-portal.kar.nic.in. Retrieved 2015-12-19.
  2. "Pincode search". www.indiapost.gov.in. Archived from the original on 2012-02-23. Retrieved 2010-01-18.


"https://kn.wikipedia.org/w/index.php?title=ಕಿನ್ಯ&oldid=1131892" ಇಂದ ಪಡೆಯಲ್ಪಟ್ಟಿದೆ