ವಿಷಯಕ್ಕೆ ಹೋಗು

ಕುತೂಹಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುತೂಹಲವು ಅನ್ವೇಷಣೆ, ತನಿಖೆ, ಮತ್ತು ಕಲಿಕೆಯಂತಹ ಜಿಜ್ಞಾಸೆಯ ಚಿಂತನೆಗೆ ಸಂಬಂಧಿಸಿದ ಒಂದು ಗುಣ. ಇದು ಮಾನವರಲ್ಲಿ ಮತ್ತು ಇತರ ಪ್ರಾಣಿಗಳಲ್ಲಿ ವೀಕ್ಷಣೆಯಿಂದ ಸ್ಪಷ್ಟವಾಗಿ ಕಾಣುತ್ತದೆ.[] ಕುತೂಹಲವು ಮಾನವ ಬೆಳವಣಿಗೆಯ ಎಲ್ಲ ಅಂಶಗಳೊಂದಿಗೆ ಅತೀವವಾಗಿ ಸಂಬಂಧಿಸಿರುತ್ತದೆ, ಇದರಲ್ಲೇ ಕಲಿಕೆಯ ಪ್ರಕ್ರಿಯೆ ಮತ್ತು ಜ್ಞಾನ ಹಾಗೂ ಕೌಶಲ ಗಳಿಸುವ ಬಯಕೆ ಹುಟ್ಟಿಕೊಳ್ಳುತ್ತದೆ. ಒಂದು ವರ್ತನೆ ಮತ್ತು ಭಾವನೆಯಾಗಿ ಸಹಸ್ರಮಾನಗಳಿಂದಲೂ ಮಾನವ ಅಭಿವೃದ್ಧಿ, ಜೊತೆಗೆ ವಿಜ್ಞಾನ, ಭಾಷೆ, ಮತ್ತು ಕೈಗಾರಿಕೆಗಳ ಅಭಿವೃದ್ಧಿಗಳ ಹಿಂದಿನ ಚಾಲಕ ಶಕ್ತಿಯಾಗಿ ಕುತೂಹಲವನ್ನು ಹೊಣೆಮಾಡಲಾಗಿದೆ.

ಕುತೂಹಲವನ್ನು ಅನೇಕ ವಿಭಿನ್ನ ಪ್ರಜಾತಿಗಳ ಸಹಜ ಗುಣವಾಗಿ ಕಾಣಬಹುದು. ಇದು ಮಾನವರಿಗೆ ಶೈಶವಾವಸ್ಥೆಯಿಂದ ವಯಸ್ಕತೆವರೆಗಿನ ಎಲ್ಲ ವಯಸ್ಸುಗಳಲ್ಲಿ ಸಾಮಾನ್ಯವಾಗಿದೆ, ಮತ್ತು ಅನೇಕ ಇತರ ಪ್ರಾಣಿ ಪ್ರಜಾತಿಗಳಲ್ಲಿ ವೀಕ್ಷಿಸುವುದು ಸುಲಭವಾಗಿದೆ; ಇವುಗಳಲ್ಲಿ ಏಪ್‍ಗಳು, ಬೆಕ್ಕುಗಳು ಮತ್ತು ದಂಶಕಗಳು ಸೇರಿವೆ. ಮುಂಚಿನ ವ್ಯಾಖ್ಯಾನಗಳು ಕುತೂಹಲವನ್ನು ಮಾಹಿತಿಗಾಗಿ ಪ್ರೇರೇಪಿತ ಬಯಕೆ ಎಂದು ಉಲ್ಲೇಖಿಸುತ್ತವೆ. ಈ ಪ್ರೇರಕ ಬಯಕೆಯು ಜ್ಞಾನ, ಮಾಹಿತಿ, ಮತ್ತು ತಿಳುವಳಿಕೆಗಾಗಿ ಉತ್ಕಟ ಭಾವ ಅಥವಾ ಹಸಿವಿನಿಂದ ಉದ್ಭವಿಸುತ್ತದೆ ಎಂದು ಹೇಳಲಾಗಿದೆ.

ಪ್ರಬಲ ಅಪೇಕ್ಷೆಯ ಗುಣವನ್ನು (ಉದಾ. ಆಹಾರ) ತೆಗೆದುಕೊಳ್ಳುವ ಇತರ ಬಯಕೆಗಳು ಮತ್ತು ಅಗತ್ಯತಾ ಸ್ಥಿತಿಗಳಂತೆ, ಕುತೂಹಲವನ್ನು ಅನ್ವೇಷಣಕಾರಿ ವರ್ತನೆ ಮತ್ತು ಪ್ರತಿಫಲದ ಅನುಭವಗಳೊಂದಿಗೆ ಸಂಬಂಧಿಸಲಾಗುತ್ತದೆ. ಕುತೂಹಲವನ್ನು ಸಕಾರಾತ್ಮಕ ಭಾವನೆಗಳು ಮತ್ತು ಜ್ಞಾನ ಪಡೆಯುವಿಕೆ ಎಂದು ವಿವರಿಸಬಹುದು; ಒಬ್ಬರ ಕುತೂಹಲವು ಜಾಗೃತಗೊಂಡಾಗ ಅದನ್ನು ಅಂತರ್ಗತವಾಗಿ ಲಾಭದಾಯಕ ಮತ್ತು ಸಂತೋಷಕರ ಎಂದು ಪರಿಗಣಿಸಲಾಗುತ್ತದೆ. ಹೊಸ ಮಾಹಿತಿಯನ್ನು ಕಂಡುಹಿಡಿಯುವುದು ಕೂಡ ಲಾಭದಾಯಕವಾಗಿರಬಹುದು ಏಕೆಂದರೆ ಅದು ಆಸಕ್ತಿಯನ್ನು ಉತ್ತೇಜಿಸುವ ಬದಲಾಗಿ ಅನಿಶ್ಚಿತತೆಯ ಅನಪೇಕ್ಷಿತ ಸ್ಥಿತಿಗಳನ್ನು ಕಡಿಮೆಮಾಡುವಲ್ಲಿ ನೆರವಾಗಬಹುದು. ಅನಿಶ್ಚಿತತೆಯ ಸ್ಥಿತಿಗಳನ್ನು ಸರಿಪಡಿಸುವ ಮತ್ತು ಅನ್ವೇಷಣಕಾರಿ ವರ್ತನೆಗಳ ಸಂತೋಷಕರ ಅನುಭವಗಳಲ್ಲಿ ಭಾಗವಹಿಸುವ ಬಯಕೆಯ ಈ ಅಗತ್ಯವನ್ನು ಮತ್ತಷ್ಟು ತಿಳಿದುಕೊಳ್ಳುವ ಪ್ರಯತ್ನಗಳಾಗಿ ಸಿದ್ಧಾಂತಗಳು ಹುಟ್ಟಿಕೊಂಡಿವೆ.

ಕುತೂಹಲ ಚಾಲಕ ಸಿದ್ಧಾಂತವು "ಅನಿಶ್ಚಿತತೆಯ" ಅನಪೇಕ್ಷಿತ ಅನುಭವಗಳಿಗೆ ಸಂಬಂಧಿಸಿರುತ್ತದೆ. ಈ ಅಹಿತಕರ ಅನಿಸಿಕೆಗಳ ಕಡಿತವು ಲಾಭದಾಯಕವಾಗಿರುತ್ತದೆ. ಜನರು ತಮ್ಮ ಚಿಂತನಾ ಪ್ರಕ್ರಿಯೆಗಳಲ್ಲಿ ಸುಸಂಬದ್ಧತೆ ಮತ್ತು ತಿಳುವಳಿಕೆಯನ್ನು ಬಯಸುತ್ತಾರೆ ಎಂದು ಈ ಸಿದ್ಧಾಂತವು ಸೂಚಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Berlyne DE. (1954). "A theory of human curiosity". Br J Psychol. 45 (3): 180–91. doi:10.1111/j.2044-8295.1954.tb01243.x. PMID 13190171.


"https://kn.wikipedia.org/w/index.php?title=ಕುತೂಹಲ&oldid=865869" ಇಂದ ಪಡೆಯಲ್ಪಟ್ಟಿದೆ