ಕೆಂಪರಾಜ ಅರಸ್
ಕೆಂಪರಾಜ ಅರಸ್ | |
---|---|
Born | ಕೆಂಪರಾಜ ಫೆಬ್ರವರಿ ೫. ೧೯೧೭ |
Died | ೧೮ ಮೇ ೧೯೮೨ ಕರ್ನಾಟಕ,ಭಾರತ |
Occupation(s) | ನಟ,ನಿರ್ದೇಶಕ |
Years active | ೧೯೪೨ - ೧೯೮೨ |
ಡಿ. ಕೆಂಪರಾಜ್ ಅರಸ್ (೧೯೧೭-೧೯೮೨) ಇವರು ಕನ್ನಡ ಚಲನಚಿತ್ರ ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿದ್ದಾರೆ. ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲೂ ಸಹ ಕೆಲಸ ಮಾಡಿದ್ದಾರೆ.[೧]
ಪ್ರಾರಂಭಿಕ ಜೀವನ
[ಬದಲಾಯಿಸಿ]ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ತಾಲೂಕಿನ ಕಲ್ಲಳ್ಳಿಯಲ್ಲಿ ಇವರು ಜನಿಸಿದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸ್ ಅವರ ಸಹೋದರರಾಗಿದ್ದಾರೆ.[೨]
ವೃತ್ತಿ ಜೀವನ
[ಬದಲಾಯಿಸಿ]ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಇವರು ಮೂರು ವರ್ಷಗಳ ಕಾಲ ವೈದ್ಯಕೀಯ ವ್ಯಾಸಂಗವನ್ನೂ ಮಾಡಿದ್ದರು.೧೯೪೨ರಲ್ಲಿ ಗುಬ್ಬಿ ವೀರಣ್ಣನವರು ನಿರ್ಮಿಸಿದ್ದ "ಜೀವನ ನಾಟಕ" ಎಂಬ ಚಲನಚಿತ್ರದಲ್ಲಿ ನಟನಾಗಿ ಚಿತ್ರರಂಗವನ್ನು ಪ್ರವೇಶಿಸಿದರು. ೧೯೫೧ರಲ್ಲಿ ಬಿಡುಗಡೆಯಾದ "ರಾಜಾ ವಿಕ್ರಮ" ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಲ್ಲದೇ , ಈ ಚಿತ್ರದ ನಿರ್ದೇಶಿಸಿದದ್ದರೂ ಕೂಡ. ೧೯೪೮ರಲ್ಲಿ ಭಕ್ತ ರಾಮದಾಸ ಸಿನಿಮಾದಲ್ಲಿ ಬಾದಶಹನ ಪಾತ್ರ ನಿರ್ವಹಿಸುವ ಮೂಲಕ ಕೆಂಪರಾಜ ಅರಸ್ ಹೆಸರು ಪಡೆದಿದ್ದರು.[೩]
ರಾಜಕೀಯ ಕ್ಷೇತ್ರ
[ಬದಲಾಯಿಸಿ]ಸಹೋದರ ದೇವರಾಜ್ ಅರಸ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ೧೯೮೦ರಲ್ಲಿ ನಡೆದೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ಪರವಾಗಿ ಪ್ರಚಾರ ಮಾಡಿದರು. ೧೯೭೯ರಲ್ಲಿ ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡರು.
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ವರ್ಷ | ಚಿತ್ರದ ಶೀರ್ಷಿಕೆ | ನಿರ್ವಹಿಸಿದ ಕಾರ್ಯಗಳು | ಭಾಷೆ | ಪಾತ್ರದ ಹೆಸರು | ಟಿಪ್ಪಣಿ | ||
---|---|---|---|---|---|---|---|
ನಿರ್ದೇಶನ | ನಿರ್ಮಾಣ | ನಟ | |||||
೧೯೪೨ | ಜೀವನ ನಾಟಕ | ಕನ್ನಡ | ಮೋಹನ್ | ಮೊದಲ ಚಿತ್ರ | |||
೧೯೪೭ | ಮಹಾನಂದ | ಕನ್ನಡ | |||||
೧೯೪೭ | ಕೃಷ್ಣಲೀಲಾ | ಕನ್ನಡ | ಕಂಸ | ||||
೧೯೪೮ | ಭಕ್ತ ರಾಮದಾಸ | ಕನ್ನಡ | ಬಾದಶಾ | ||||
ಟ೯೫೦ | ಶಿವ ಪಾರ್ವತಿ | ಕನ್ನಡ | |||||
೧೯೫೦ | ರಾಜಾ ವಿಕ್ರಮ | ಕನ್ನಡ ತಮಿಳು |
ವಿಕ್ರಮ | ||||
೧೯೫೩ | ಶ್ರೀ ಕೃಷ್ಣ | ಕನ್ನಡ | |||||
೧೯೫೪ | ಕಾರ್ಕೋಟೈ | ತಮಿಳು | ಜಲದುರ್ಗ ಕನ್ನಡ ಚಿತ್ರದ ತಮಿಳು ಅವತರಣಿಕೆ | ||||
೧೯೫೪ | ಜಲದುರ್ಗ | ಕನ್ನಡ | |||||
೧೯೫೭ | ನಳ ದಮಯಂತಿ | ಕನ್ನಡ ತೆಲುಗು ತಮಿಳು |
|||||
೧೯೫೯ | ಅಲಮರಲೈ ಕಾಲಂ | ತಮಿಳು | |||||
೧೯೬೪ | ನವ ಜೀವನ | ಕನ್ನಡ |
ಉಲ್ಲೇಖ
[ಬದಲಾಯಿಸಿ]