ಕೆಂಪು ಚಿಟವ
ಕೆಂಪು ಚಿಟವ | |
---|---|
From Keoladeo National Park, ರಾಜಸ್ಠಾನ, ಭಾರತ. | |
Conservation status | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | ಸಿ. ಕೊರೋಮ್ಯಾಂಡಲಿಕಸ್
|
Binomial name | |
ಕರ್ಸೋರಿಯಸ್ ಕೊರೋಮ್ಯಾಂಡಲಿಕಸ್ (Gmelin, 1789)
|
ಕೆಂಪು ಚಿಟವ ಇದು ಮುಖ್ಯವಾಗಿ ಭಾರತೀಯ ಉಪಖಂಡದಲ್ಲಿ ಕಂಡು ಬರುವ ಪಕ್ಷಿ. ಗಂಗಾ ಮತ್ತು ಸಿಂಧೂ ನದಿಯ ಬಯಲು ಪ್ರದೇಶ,ದಕ್ಶಿಣದ ಪ್ರಸ್ಥಭೂಮಿಯ ಕೆಲವೆಡೆ ಹೆಚ್ಚಾಗಿ ಕಂಡು ಬರುವ ನೆಲಪಕ್ಷಿ.
ಲಕ್ಷಣಗಳು
[ಬದಲಾಯಿಸಿ]ಇದು ಗೌಜುಗಕ್ಕಿಂತ ಚಿಕ್ಕದಾದ ಬೂದು -ಕಂದು ಪಕ್ಷಿ. ನೆತ್ತಿ ಕಡು ಕಂದು.ಬಿಳಿ ಹುಬ್ಬು.ಕಣ್ಣಿನ ಕೆಳಗೆ ಇಳಿ ಬಿಟ್ಟ ಕಪ್ಪು ಪಟ್ಟಿ. ಕತ್ತಿನ ಹಿಂಭಾಗ,ಬೆನ್ನು,ರೆಕ್ಕೆ,ಬಾಲ ಕಡು ಬೂದು ಬಣ್ಣದ್ದಾಗಿರುತ್ತದೆ.ಗದ್ದ,ಕತ್ತಿನ ಮುಂಭಾಗ ಹಾಗೂ ಎದೆ ಕೆಂಪು ಮಿಶ್ರಿತ ಕಂದು. ಕೊಕ್ಕು ಮತ್ತು ಕಾಲುಗಳು ಬೂದು ಬಣ್ಣವಿರುತ್ತದೆ.
ವೈಜ್ಞಾನಿಕ ಹೆಸರು
[ಬದಲಾಯಿಸಿ]ಇದು ಗ್ಲ್ಲಾರಿಯೋಲಿಡೇ ಕುಟುಂಬಕ್ಕೆ ಸೇರಿದ್ದು, ಕರ್ಸೋರಿಯಸ್ ಕೋರೊಮ್ಯಾಂಡಲಿಕಸ್ 'ಎಂದು ವೈಜ್ಞಾನಿಕ ಹೆಸರು. ಇದನ್ನು ಸಂಸ್ಕೃತದಲ್ಲಿ ಶ್ವೇತಚರಣ ಎಂದು ಕರೆಯುತ್ತಾರೆ.
ಆವಾಸ
[ಬದಲಾಯಿಸಿ]ಇದು ಒಂದು ನೆಲ ಪಕ್ಷಿ. ಹೆಚ್ಚಾಗಿ ಬಂಜರು ಭೂಮಿಗಳಲ್ಲಿ, ಬಯಲು ಪ್ರದೇಶಗಳಲ್ಲಿ ಒಂಟಿಯಾಗಿ ಕಂಡು ಬರುತ್ತದೆ.ಹೆಚ್ಚಾಗಿ ಮೌನಿ.
ಸಂತಾನೋತ್ಪತ್ತಿ
[ಬದಲಾಯಿಸಿ]ಹೆಚ್ಚಾಗಿ ಮಾರ್ಚ್ -ಆಗಸ್ಟ್ ತಿಂಗಳಿನಲ್ಲಿ. ಕಪ್ಪು ಚುಕ್ಕಿ ಗಳಿರುವ ೨-೩ ಮೊಟ್ಟೆ ಗಳನ್ನು ಇಡುತ್ತದೆ. ನೆಲವನ್ನು ಕೆದರಿ ಗೂಡು ಕಟ್ಟುತ್ತದೆ. ಕೀಟಗಳು ಆಹಾರ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Photos and videos Archived 2012-02-12 ವೇಬ್ಯಾಕ್ ಮೆಷಿನ್ ನಲ್ಲಿ.
ಆಧಾರ
[ಬದಲಾಯಿಸಿ]- ↑ BirdLife International (2008). Cursorius coromandelicus. In: IUCN 2008. IUCN Red List of Threatened Species. Retrieved 12 May 2006.
೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್