ಕೆ.ಎಂ. ಚೈತನ್ಯ
ಗೋಚರ
ಕೆ.ಎಂ. ಚೈತನ್ಯ.
ಚೈತನ್ಯ, ಕನ್ನಡ ಸಾಹಿತಿ ಕೆ. ಮರುಳಸಿದ್ದಪ್ಪನವರ ಮಗ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಪತ್ರಿಕೋದ್ದಿಮೆಯಲ್ಲಿ ಪದವಿ ಪಡೆದರು.[೧] ಬಿ.ಬಿ.ಸಿ ವಾಹಿನಿಗಾಗಿ ಕಿರುಚಿತ್ರಗಳನ್ನು, ಸಾಕ್ಷ್ಯಚಿತ್ರಗಳನ್ನು ಮತ್ತು ಕನ್ನಡ-ಈಟಿವಿ ಗಾಗಿ ದೇವನೂರು ಮಹಾದೇವರ ಕುಸುಮಬಾಲೆ, ಶಾಂತಿನಾಥ ದೇಸಾಯಿಯರ ಓಂ ಣಮೋ, ಒಂದಾನೊಂದು ಕಾಲದಲ್ಲಿ, ಮುಗಿಲು ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಕಾನೂರು ಸುಬ್ಬಮ್ಮ ಹೆಗ್ಗಡತಿ ಚಿತ್ರಕ್ಕೆ, ಗಿರೀಶ ಕಾರ್ನಾಡರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದ ಚೈತನ್ಯ, ಅಗ್ನಿ ಶ್ರೀಧರ್ರ ಆ ದಿನಗಳು ಕಥೆಯನ್ನು ೨೦೦೭ರಲ್ಲಿ ನಿರ್ದೇಶಿಸಿ, ಸ್ವತಂತ್ರ ನಿರ್ದೇಶಕರಾದರು.
ಒಡಕಲು ಬಿಂಬ ಎಂಬ ನಾಟಕವನ್ನು ಗಿರೀಶ್ ಕಾರ್ನಾಡ್ ಅವರೊಂದಿಗೆ ನಿರ್ದೇಶಿಸಿದ್ದಾರೆ.
ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿ ಆಧರಿತ ಕಾನೂರು ಹೆಗ್ಗಡತಿ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಿ.ಬಿ.ಸಿ ಮತ್ತು ಸಿ.ಎನ್.ಎನ್ ನ್ಯೊಸ್ ಚಾನಲ್ ಗಳಿಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ವರ್ಷ | ಚಿತ್ರ | ಇತರೆ |
---|---|---|
೨೦೦೭ | ಆ ದಿನಗಳು | ಚಿತ್ರಕಥೆ-ನಿರ್ದೇಶನ |
೨೦೧೦ | ಸೂರ್ಯಕಾಂತಿ | ಚಿತ್ರಕಥೆ-ನಿರ್ದೇಶನ |
೨೦೧೩ | ಪರಾರಿ | ಚಿತ್ರಕಥೆ-ನಿರ್ದೇಶನ |
೨೦೧೪ | ಪರಾರಿ-೨ |
ಉಲ್ಲೇಖಗಳು
[ಬದಲಾಯಿಸಿ]