ಕೆ.ಶ್ರೀಕಾಂತ್
ಗೋಚರ
![]() |
ಶ್ರೀಕಾಂತ್ ಕಿಡಂಬಿ (Telugu : శ్రీకాంత్ కిడంబి) | |
---|---|
— ಬ್ಯಾಡ್ಮಿಂಟನ್ ಆಟಗಾರ — | |
![]() ಕೆ.ಶ್ರೀಕಾಂತ್ 2013 French Super Series | |
ವೈಯುಕ್ತಿಕ ಮಾಹಿತಿ | |
ಹುಟ್ಟು ಹೆಸರು | ಶ್ರೀಕಾಂತ್ ನಮ್ಮಲ್ವಾರ್ ಕಿಡಂಬಿ |
ಹುಟ್ಟು | ಹುಟ್ಟಿದ ದಿನಾಂಕ :07-02-1993 ಆಂಧ್ರ ಪ್ರದೇಶದ ಗುಂಟೂರು |
ದೇಶ | ![]() |
ಪುರುಷರ ಏಕವ್ಯಕ್ತಿ ಆಟ. | |
ಅತಿಹೆಚ್ಚಿನ ಸ್ಥಾನ | 13 (29 ಮೇ/May 2014) |
ಸದ್ಯದ ಸ್ಥಾನ | 16 (13 ನವೆಂಬರ್`2014) |
ಕೆ ಶ್ರೀಕಾಂತ್ - ವ್ಯಕ್ತ್ತಿ ವಿವರ
[ಬದಲಾಯಿಸಿ]ಶ್ರೀಕಾಂತ್ ನಮ್ಮಲ್ವಾರ್ ಕಿಡಂಬಿಯವರು ಆಂಧ್ರ ಪ್ರದೇಶದ ಗುಂಟೂರಿನಲ್ಲಿ ದಿ.7-2-1993 ರಂದು ಜನಿಸಿದರು. ಅವರು ಭಾರತದ ಉನ್ನತ ಶ್ರೇಣಿಗೆ ಏರುಉತ್ತಿರುವ ಭಾರತೀಯ ಬ್ಯಾಡ್ ಮಿಂಟನ್` ಆಟಗಾರರು. ಅವರ ತಂದೆ ಕೆ.ವಿ..ಎಸ್ ಕೃಷ್ಣ ಒಬ್ಬ ಜಮೀನುದಾರರು. ತಾಯಿ ರಾಧಾ ಗೃಹಣಿ . ಶ್ರೀಕಾಂತ್ ಅವರ ಸೋದರ ,ನಂದ ಗೋಪಾಲ್ ಕೂಡಾ ಅಂತರ ರಾಷ್ಟ್ರೀಯ ಬ್ಯಾಡ್ ಮಿಂಟನ್ ಆಟಗಾರರು.. ಅವರು ಹೈದರಾಬಾದಿನಲ್ಲರುವ ಗೋಪಿಚಂದ ಬ್ಯಾಡ್ ಮಿಂಟನ್ ಅಕ್ಯಾಡಮಿಯಲ್ಲಿ ತರಬೇತಿ ಹೊಂದುತ್ತಿದ್ದಾರೆ. ಈಗ (18,ಆಗಸ್ಟ್ 2014//18-11-2014) ಅವರು ಈಗ ಅಚಿತರರಾಷ್ಟ್ರೀಯ ಉನ್ನತ ಶ್ರೇಣಿಯ ( ಣhe highesಣ ಡಿಚಿಟಿಞeಜ ) ಭಾರತೀಯ ಬ್ಯಾಡ್ ಮಿಂಟನ್ ಆಟಗಾರರು. ಅವರು ಬೆಂಗಳೂರಿನ ಗೋ-ಸ್ಪೋಟ್ರ್ಸ್ ಫೌಂಡೇಶನ್ ನಿಂದ ಪ್ರಾಯೋಜಿತರು.
ಚೀನಾ ಓಪನ್ ಸೂಪರ್ ಸೀರಿಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿ-2014
[ಬದಲಾಯಿಸಿ]- ಯುವ ಆಟಗಾರ ಕೆ.ಶ್ರೀಕಾಂತ್ ಇಲ್ಲಿ ನಡೆದ ಚೀನಾ ಓಪನ್ ಸೂಪರ್ ಸೀರಿಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.
- ಪುರುಷರ ಫೈನಲ್‌ನಲ್ಲಿ (16 ನವೆಂ,2014) ಯುವ ಆಟಗಾರ ಕೆ.ಶ್ರೀಕಾಂತ್ 21-19-21-17 ಗೇಮ್‌ಗಳ ಅಂತರದಿಂದ ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಚೀನಾದ ಲಿನ್ ಡ್ಯಾನ್ ಎದುರು ಸಾಹಸದ ಜಯ ಪಡೆದು ಟೂರ್ನಿಯಲ್ಲಿ ತಮ್ಮ ಮೊದಲ ಪ್ರಶಸ್ತಿಗೆ ಪಾತ್ರರಾದರು.
- ಲಿನ್ ವೊಡ್ಡಿದ ತೀವ್ರ ಪ್ರತಿರೋಧವನ್ನು ಎದುರಿಸಿ ಮೊದಲ ಗೇಮ್`ನ್ನು ವಶಪಡಿಸಿಕೊಂಡುರು. ಶ್ರೀಂಕಾತ್ ಎದುರಾಳಿ ಆಕ್ರಮಣ ಶೀಲತೆಯನ್ನು ಸಮರ್ಥವಾಗಿ ಮೆಟ್ಟಿನಿಂತು 15-15ರಲ್ಲಿ ಸಮಬಲ ಸಾಧಿಸಿದರಲ್ಲದೆ, ಕೊನೆಯಲ್ಲಿ ಚುರುಕಿನ ಆಟ ಪ್ರದರ್ಶಿಸಿ ಪಂದ್ಯವಶಪಡಿಸಿಕೊಳ್ಳುವ ಮೂಲಕ ಚಾರಿತ್ರಿಕ ಗೆಲವು ಪಡೆದರು.
- ಏಷ್ಯನ್ ಜೂನಿಯರ್ ಬ್ಯಾಡ್ಮಿಂಟನ್ ಮತ್ತು ಕಾಮನ್‌ವೆಲ್ತ್ ಯುವ ಕ್ರೀಡಾಕೂಟಗಳ ತಂಡ ವಿಭಾಗಗಳಲ್ಲಿ ಪದಕ ಗಳಿಸಿರುವ ಅನುಭವವನ್ನಷ್ಟೇ ಹೊಂದಿರುವ ಶ್ರೀಕಾಂತ್ ಇದೀಗ ಮಹೋನ್ನತ ಸಾಧನೆ ತೋರಿದ್ದಾರೆ. ಶ್ರೀಕಾಂತ್ ಗೆದ್ದ ಮೊದಲ ಸೂಪರ್ ಸೀರಿಸ್ ಪ್ರಶಸ್ತಿ ಇದಾಗಿದೆ.
ಭಾರತ ಪುರುಷರ ರ್‍ಯಾಕಿಂಗ್
[ಬದಲಾಯಿಸಿ]- ಪುರುಷರ ಸಿಂಗಲ್ಸ್ ರ್‍ಯಾಂಕಿಂಗ್‌ನಲ್ಲಿ ಕೆ. ಶ್ರೀಕಾಂತ್, ಅಜಯ್ ಜಯರಾಮ್ ಮತ್ತು ಎಚ್.ಎಸ್. ಪ್ರಣಯ್ ಅವರು ಕ್ರಮವಾಗಿ 11, 24 ಹಾಗೂ 28ನೇ ಸ್ಥಾನ ಹೊಂದಿದ್ದಾರೆ. ಒಂದು ಸ್ಥಾನ ಬಡ್ತಿ ಪಡೆದಿರುವ ಸಮೀರ್ ವರ್ಮಾ 36ನೇ ಸ್ಥಾನದಲ್ಲಿದ್ದಾರೆ. ಬಿ. ಸಾಯಿಪ್ರಣೀತ್ ನಾಲ್ಕು ಸ್ಥಾನ ಕುಸಿತ ಕಂಡಿದ್ದು 37ನೇ ಸ್ಥಾನಕ್ಕೆ ಇಳಿದಿದ್ದಾರೆ.[೧]
ಶ್ರೀಕಾಂತ್ ಫೈನಲ್‌ಗೆ ಮತ್ತು ಛಾಂಪಿಯನ್
[ಬದಲಾಯಿಸಿ]- ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ೨೦೧೭;
- ದಿ.25 Jun, 2017;ಭಾರತದ ಕೆ.ಶ್ರೀಕಾಂತ್ ಅವರು ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ ಶ್ರೀಕಾಂತ್ 21–10, 21–14ರ ಗೇಮ್‌ಗಳಿಂದ ಚೀನಾದ ಶಿ ಯೂಕಿ ಅವರನ್ನು ಪರಾಭವಗೊಳಿಸಿದರು.[೨]
- 25 Jun, 2017;ಭಾನುವಾರ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ಅವರು ಚೀನಾದ ಚೆನ್ ಲಾಂಗ್ ಅವರನ್ನು ಮಣಿಸುವ ಮೂಲಕ ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ವಿಜಯ ಪಡೆದರು. ಪ್ರಬಲ ಪೈಪೋಟಿ ನೀಡಿದ ಚೆನ್ ಲಾಂಗ್ ಅವರನ್ನು 22-20 ಮತ್ತು 21-16 ನೇರಸಟ್‌ನಲ್ಲಿ ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದರು.
- 5 ಲಕ್ಷ ಬಹುಮಾನ: ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಗೆದ್ದ ಶ್ರೀಕಾಂತ್ ಅವರಿಗೆ ಬ್ಯಾಡ್ಮಿಂಟನ್ ಅಸೋಷಿಯೇಷನ್ ಆಫ್ ಇಂಡಿಯಾ ಸಂಸ್ಥೆ 5 ಲಕ್ಷ ನಗದು ಬಹುಮಾನ ಘೋಷಣೆ ಮಾಡಿದೆ.[೩]
ನೋಡಿ
[ಬದಲಾಯಿಸಿ]ಆಧಾರ
[ಬದಲಾಯಿಸಿ]- http://sports.ndtv.com/badminton/news/233129-kidambi-srikanth-beats-home-favourite-lin-dan-to-win-china-open Archived 4 March 2016[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- http://www.bwfbadminton.org/page.aspx?id=14955 Archived 3 March 2016[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜಯ ಕರ್ನಾಟಕ- Nov 17, 2014,
- ಪ್ರಜಾವಾಣಿ-18 NOVEMBER, 2014
- ಇಂಗ್ಲಿಷ್ ತಾಣ -[[೧]]
ಭಾರತದ ಕ್ರೀಡಾಪಟುಗಳು
ಉಲ್ಲೇಖಗಳು
[ಬದಲಾಯಿಸಿ]- ↑ ದಿ.೧-೭-೨೦೧೬:ಪ್ರಜಾವಾಣಿ.
- ↑ "ಆರ್ಕೈವ್ ನಕಲು". Archived from the original on 26 ಜೂನ್ 2017. Retrieved 25 ಜೂನ್ 2017.
- ↑ ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿ: ಕೆ.ಶ್ರೀಕಾಂತ್ ಚಾಂಪಿಯನ್;ಪಿಟಿಐ;25 Jun, 2017