ಕೆ. ಅನಂತಸುಬ್ಬರಾಯರು
ಕನ್ನಡ ಬೆರಳಚ್ಚು ಯಂತ್ರದ ಜನಕ ಶ್ರೀ. ಅನಂತಸುಬ್ಬರಾಯರು (೧೯೦೭ ರ ಡಿಸೆಂಬರ್,೯-೧೯೯೫). ತಮ್ಮ ಜೀವಮಾನದ ಬಹುಭಾಗ ಸಮಯವನ್ನು ಅವರು ಕನ್ನಡ ಟೈಪ್ ರೈಟರನ್ನು ಸಂಯೋಜಿಸಿ, ಅದರಲ್ಲಿ ಕೆಲವಾರು ಸುಧಾರಣೆಗಳನ್ನು ಅಳವಡಿಸುವುದರಲ್ಲೇ ಕಳೆದರು. ಈಗ ನಾವು ಬಳಸುತ್ತಿರುವ ಕಂಪ್ಯೂಟರ್ ಕೀಲಿ ಕೈಗಳೂ ಹಳೆಯ ಬಳಕೆಯಲ್ಲಿದ್ದ ಕನ್ನಡ ಟೈಪ್ ರೈಟರ್ ನ ತರಹವೇ ಆಗಿರುವು ನಮಗೆಲ್ಲಾ ಗೊತ್ತಿದೆ. ಆಗಿನ ಕಾಲದಲ್ಲಿ ಮಹತ್ವವೆಷ್ಟೆಂಬುದನ್ನು ತಿಳಿದವರೇ ಬಲ್ಲರು. ಸುಬ್ಬರಾಯರು ಸರ್ಕಾರದ ಆಡಳಿತಯಂತ್ರಕ್ಕೆ ಅಗತ್ಯವಾಗಿದ್ದ ಶೀಘ್ರಲಿಪಿ ಯನ್ನೂ ರೂಪಿಸಿಕೊಟ್ಟರು. ಇಂದು ರೂಢಿಯಲ್ಲಿರುವ ಶಾರದಾ ಶೀಘ್ರಲಿಪಿ ಹಾಗೂ 'ಅನಂತ ಕೀಬೋರ್ಡ್ ಟೈಪ್ ರೈಟರ್', ಕೆ. ಅನಂತ ಸುಬ್ಬರಾಯರ ಅಮೂಲ್ಯ ಕೊಡುಗೆಗಳು.
ಜನನ ಹಾಗೂ ಬಾಲ್ಯ
[ಬದಲಾಯಿಸಿ]ಹಾಸನ ಜಿಲ್ಲೆಯ ಅದೇ ಹೆಸರಿನ ತಾಲ್ಲೂಕಿನ ಅನುಗನಹಾಳು ಎಂಬ ಗ್ರಾಮದಲ್ಲಿ ಕೇಶವಯ್ಯ ಮತ್ತು ಸಾವಿತ್ರಮ್ಮ ದಂಪತಿಗಳಿಗೆ ೧೯೦೭ ರ ಡಿಸೆಂಬರ್, ೯ ರಂದು ಜನಿಸಿದರು. ಬಾಲ್ಯದಲ್ಲೇ ತಂದೆಯವರು ಗತಿಸಿದ್ದರಿಂದ ತಾಯಿಯವರ ಆಶ್ರಯದಲ್ಲಿಯೇ ಜೋಡಿ-ಕೃಷ್ಣಾಪುರ, ಹಾಸನ, ಶಿವಮೊಗ್ಗಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಶಿವಮೊಗ್ಗದ ೧೯೨೮ ರಲ್ಲಿ 'ಅಪ್ಪರ್ ಸೆಕೆಂಡರಿ' ಪರೀಕ್ಷೆ'ಯಲ್ಲಿ ಉತ್ತೀರ್ಣರಾದರು. ತಕ್ಷಣವೇ ಅವರಿಗೆ ದೊರೆತದ್ದು ಉಪಾಧ್ಯಾಯ ವೃತ್ತಿ. ಅನಂತ ಸುಬ್ಬರಾಯರು ಬಾಲ್ಯದಿಂದಲೇ ಚುರುಕುಬುದ್ಧಿಯವರು. ಏನಾದರೂ ಹೊಸದನ್ನು ಕಂಡರೆ ಅದನ್ನು ಸೂಕ್ಷ್ಮವಾಗಿ ಅವಲೋಕಿಸಿ, ಕಲಿಯಲು ಪ್ರಯತ್ನಿಸುತ್ತಿದ್ದರು. ಶಾಲೆಯ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಗಾಂಧೀಜಿಯವರ ಆದರ್ಶ ಅವರ ಮೇಲೆ ಅವರ್ಣನೀಯವಾಗಿತ್ತು. ಉಪಾಧ್ಯಾಯವೃತ್ತಿಯಲ್ಲಿ ಹೆಚ್ಚೇನೂ ಸಾಧಿಸಲಾಗದೆ ಅವರು ಪತ್ರಿಕೋದ್ಯಮದ ಕಡೆ ವಾಲಿದ ರು. ಪತ್ರಿಕೆಗಳಿಗೆ ದಿನಪ್ರತಿ ಕೊಡುವ ಸುದ್ದಿಸಾರಗಳ ಜೊತೆಗೆ, ಹೊಸ ವಿಚಾರಗಳ ಹುಡುಕಾಟ ಮತ್ತು ಗ್ರಹಿಕೆ ಅವರಿಗೆ ಹಿಡಿಸಿದವು. ಸುದ್ದಿಗಳನ್ನು ಸ್ಫುಟವಾಗಿ ಮತ್ತು ಶೀಘ್ರವಾಗಿ ಬರೆಯಲು ಅಗತ್ಯವಾದ ಹೊಸ ಸಾಧನೆಯ ಹುಡುಕಾಟದ ಫಲಿತಾಂಶವಾಗಿ, 'ಅನಂತ ಕನ್ನಡ ಕೀಬೋರ್ಡ್' ನ ಆವಿಷ್ಕಾರವಾಯಿತು. ಇಂಗ್ಲೀಷ್ ಟೈಪ್ ರೈಟರ್ ಅಂದಿನ ದಿನಗಳಲ್ಲಿ 'ಕೋರ್ಟ್ ಕಛೇರಿ'ಯಲ್ಲಿ ಇಂಗ್ಲೀಷಿನ ಬಳಕೆ ಇತ್ತು. ಇಂಗ್ಲೀಷ್ ನ ವ್ಯಾಪಕ ಬಳಕೆ ಹಾಗೂ ಅದರ ವ್ಯಾಪ್ತಿ ಅವರಿಗೆ ಹಿಡಿಸಿತು. ಕನ್ನಡ ಬರವಣಿಗೆಗೂ ಇದರಲ್ಲೇ ಏಕೆ ಪರಿವರ್ತನೆ ಮಾಡಬಾರದು ? ಎಂದು ಆಲೋಚಿಸಿ ಅದನ್ನು ಜಾರಿಗೆ ತಂದರು. ತಾಲ್ಲೂಕ್ ಕಛೇರಿಗಳಲ್ಲಿ ಶ್ಯಾನುಭೋಗರ ಕಡತಗಳು ಅಮೂಲ್ಯ ಮಾಹಿತಿ ಸಂಗ್ರಹದ ಕಣಜಗಳಾಗಿದ್ದವು. ಅವನ್ನು ಸ್ಫುಟವಾದ ಅಕ್ಷರಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲು ಆವಶ್ಯಕತೆ ಇತ್ತು. ಆದರೆ ಮಾರ್ಗ ಕನ್ನಡ ಪ್ರಾಚಾರ್ಯ, ಬಿ.ಎಂ.ಶ್ರೀ ಅವ ರು, ಬೆರಳಚ್ಚು ಯಂತ್ರದ ಆಂಗ್ಲ ಆವೃತ್ತಿಯ ಸಾಧ್ಯತೆಗಳನ್ನು ಕನ್ನಡಕ್ಕೆ ಅಳವಡಿಸಬೇಕಾದರೆ, ಕನ್ನಡ ಲಿಪಿಯಲ್ಲಿ ಸುಧಾರಣೆಯ ಅಗತ್ಯವನ್ನು ಮನಗಂಡರು. ಕನ್ನಡದ ೫೨ ಅಕ್ಷರಗಳ ವಿಶಾಲ ಮಂಚಕ್ಕೆ, ಇಂಗ್ಲೀಷಿನ ೨೬ ಅಕ್ಷರದ ಮಣೆಯ ಉಪಯೋಗ ಸ್ವಲ್ಪ ತೊಡಕಾಗಿ ತೋರಿತು. ಗುಣಿತಾಕ್ಷರಗಳ ವೈವಿಧ್ಯತೆಯಿಂದಾಗಿ ಅಂದಿನ ಬಳಕೆಯಲ್ಲಿದ್ದ ಟೈಪ್ ರೈಟರ್ ನ್ನು ಕನ್ನಡದ ಉಪಯೋಗಕ್ಕೆ ಬಳಸುವುದು ಅಸಾಧ್ಯವೆಂದು ಹಲವರ ಅಭಿಪ್ರಾಯವಾಗಿತ್ತು. ಲಿಪಿ ಸುಧಾರಣೆ ಹಾಗೂ ಲಿಪಿಗಳಲ್ಲಿ ಕಟೌತಿ ಮುಂತಾದ ಆಲೋಚನೆಗಳು ಹಲವರ ಮನಸ್ಸಿನಲ್ಲಿ ಬಂದವು. ಆದರೆ ಯಾವುದೂ ಕಾರ್ಯಗತವಾಗಲಿಲ್ಲ.
ಪ್ರಾಚಾರ್ಯ 'ಬಿ ಎಂ ಶ್ರೀ' ರವರ ಪ್ರಯೋಗ
[ಬದಲಾಯಿಸಿ]ಇಂಗ್ಲೀಷ್ ತಮಿಳು, ತಮಿಳಿನ ರೀತ್ಯ, ಕನ್ನಡದಲ್ಲೂ ರೂಪಾಂತರ ಮಾಡುವ ಪ್ರಯತ್ನ ನಡೆಯಿತು. ಅದರಂತೆ, ಒಂದು ವೇಳೆ, ಕನ್ನಡ ಬಾವುಟವೆಂದು ಬರೆಯಬೇಕಾದರೆ, 'ಕ ಅನ್ ನ್ ಅಡ್ ಅ ಬಾವ್ ಉಟ್ ಅ' ಅಥವಾ, 'ಕನ್ ನ್ ಆಡಬ ಆವ್ ಉಟ,' ಎಂದು ಬರೆಯಬೇಕಾಗಿತ್ತು. ಅನೇಕ ಗೊಂದಲಗಳ ಆಗರವಾಗಿದ್ದ ಈ ಲಿಪಿ ಸಂಗ್ರಹ, ಕನ್ನಡದ ಜನರಿಗೆ ರುಚಿಸಲಿಲ್ಲ. ಜನ ಟೈಪ್ ರೈಟರ್ ಕಂಡರೆ ಬೇಸರಪಟ್ಟುಕೊಳ್ಳುತ್ತಿದ್ದರು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಅನಂತ ಸುಬ್ಬರಾಯರು, ಮಾಡಿದ ಹೊಸ ವಿನ್ಯಾಸ ನಿಧಾನವಾಗಿ ಮಹತ್ವವನ್ನು ಪಡೆದು ತನ್ನ ಸ್ಥಾನವನ್ನು ಪಡೆದು ಕೊಂಡಿತು. ಪ್ರಚಲಿತದಲ್ಲಿ ಉಪಯೋಗದಲ್ಲಿರುವ ಕನ್ನಡ-ಕನ್ನಡ ಲಿಪಿ ವಿನ್ಯಾಸಕ್ಕೇ ಕೀಬೋರ್ಡನ್ನು ಹೊಂದಿಸಿದ ತಂತ್ರಜ್ಞಾನ ಅನಂತ ಸುಬ್ಬರಾಯರು ತಮ್ಮ ಬುದ್ಧಿಶಕ್ತಿಯನ್ನೆಲ್ಲಾ ವಿನಿಯೋಗಿಸಿದರೂ, ಸರ್ಕಾರದ ಮನಸ್ಸನ್ನು ಒಲಿಸಲು ಸಾಧ್ಯವಾಗಲಿಲ್ಲ. ೨೦ ವರ್ಷಗಳ ಸತತ ಹೋರಾಟ ಮೈಸೂರಿನ ಮೊಟ್ಟ ಮೊದಲ ಮುಖ್ಯಮಂತ್ರಿ, ಕೆ.ಸಿ.ರೆಡ್ಡಿ ಅವರಿಂದ ಹಿಡಿದು, ನಿಜಲಿಂಗಪ್ಪನ ನವರ ವರೆಗೆ, ಅವರೆಲ್ಲಾ ಮೆಚ್ಚಿದರೂ ಕನ್ನಡದ ಆಡಳಿತ ಭಾಷೆಯಾಗಿ ಮಾಡಲು ಟೈಪ್ ರೈಟರ್ ಯಂತ್ರದ ತೊಡಕನ್ನೇ ತೊಡಕುಗಳನ್ನು ಪರಿಗಣಿ ಸಲಿಲ್ಲ. ಬಿ.ಡಿ.ಜತ್ತಿಯವರ ಆಪ್ತ ಕಾರ್ಯದರ್ಶಿ, ಪಿ.ವಿ.ಆರ್. ರಾವ್, ತಮ್ಮ ವಿವೇಚನೆಯನ್ನು ಉಪಯೋಗಿಸಿ, ಕನ್ನಡ ಕೀ ಬೋರ್ಡನ್ನು ಒಪ್ಪಿಕೊಂಡ ಮೇಲೆ ೧೯೬೧ ರಲ್ಲಿ, ಸರ್ಕಾರ ಅನುಮತಿ ನೀಡಿತು. 'ಪ್ರಾಣಬಲಿಯನ್ನು ಕೊಡುವುದಾಗಿ ಬೆದರಿಸಿದಾಗ', ಅಳವಡಿಸಿದ ಯಂತ್ರಗಳು ಮಾರುಕಟ್ಟೆಯಲ್ಲಿ ಬಂದರೂ, ಸಾಮಾನ್ಯ ಜನರ ಸೇವೆಗೆ ದಕ್ಕದೇ ಹೋದದ್ದು ವಿಪರ್ಯಾಸ. ಅನಂತ ಸುಬ್ಬರಾಯರಿಗೆ ಗೌರವಧನ ಹಾಗೂ ಪುರಸ್ಕಾರಗಳು ಸಿಕ್ಕಲಿಲ್ಲ. ಕೇವಲ ೫೦೦ ರೂಪಾಯಿ ಮಾಸಾಶನದಲ್ಲೇ ತಮ್ಮ ಜೀವಿತವನ್ನು ಸವೆಸಿ, ೧೯೯೫ ರಲ್ಲಿ ವಿಧಿವಶರಾದರು.