ವಿಷಯಕ್ಕೆ ಹೋಗು

ಕೇಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇಕ್/ಕೇಕು
thump
ಬಾದಾಮಿ ಕೇಕು
ನಮೂನೆಸಿಹಿ

ಕೇಕ್ ಸಾಮಾನ್ಯವಾಗಿ ಸಿಹಿಯಾಗಿರುವ ಮತ್ತು ಹಲವುವೇಳೆ ಬೇಯಿಸಲಾಗುವ ಆಹಾರದ ಒಂದು ಪ್ರಕಾರ.

ಕೇಕ್‌ಗಳು ಸಾಮಾನ್ಯವಾಗಿ ಯಾವುದೋ ಪ್ರಕಾರದ ಹಿಟ್ಟು, ಒಂದು ಸಿಹಿಕಾರಕ (ಸಾಧಾರಣವಾಗಿ ಸಕ್ಕರೆ), ಒಂದು ಬಂಧಕ ವಸ್ತು (ಸಾಧಾರಣವಾಗಿ ಮೊಟ್ಟೆ, ಆದರೆ ಸಸ್ಯಾಹಾರಿಗಳು ಮತ್ತು ವೆಜನ್‌ರಿಂದ ಹಲವುವೇಳೆ ಗ್ಲೂಟನ್ ಅಥವಾ ಪಿಷ್ಟ ಬಳಸಲ್ಪಡುತ್ತದೆ), ಕೊಬ್ಬುಗಳು (ಸಾಮಾನ್ಯವಾಗಿ ಬೆಣ್ಣೆ, ಶಾರ್ಟನಿಂಗ್, ಅಥವಾ ಕೃತಕ ಬೆಣ್ಣೆ, ಆದರೆ ಕೆಲವೊಮ್ಮೆ ಕೊಬ್ಬನ್ನು ಬಳಸದೇ ಇರಲು ಆಪಲ್‌ಸಾಸ್‌ನಂತಹ ಒಂದು ಹಣ್ಣಿನ ತಿಳ್ಳನ್ನು ಬಳಸಲಾಗುತ್ತದೆ), ಒಂದು ದ್ರವ (ಹಾಲು, ನೀರು ಅಥವಾ ಹಣ್ಣಿನ ರಸ), ಸ್ವಾದಗಳು ಮತ್ತು (ಮಡ್ಡಿ ಅಥವಾ ಒದಗುಪುಡಿಯಂತಹ) ಯಾವುದೋ ಬಗೆಯ ಹುದುಗುಕಾರಕವನ್ನು ಸೇರಿಸುತ್ತವೆ.

ಕಾಫಿ ಕೇಕ್‌ನ ಒಂದು ಉದಾಹರಣೆ.

ಆದರೂ ಹಲವು ಕೇಕ್‌ಗಳು ಈ ಅಂಶಗಳನ್ನು ಹೊಂದಿರುವುದಿಲ್ಲ, ಬದಲಾಗಿ ಕೇಕನ್ನು ಮೇಲೇಳುವಂತೆ ಮಾಡಲು ಮತ್ತು ಅರಳಲು ಕಣಕದಲ್ಲಿನ ವಾಯು ಗುಳ್ಳೆಗಳ ಮೇಲೆ ಅವಲಂಬಿಸುತ್ತವೆ. ಕೇಕನ್ನು ಹಲವುವೇಳೆ ಬಟರ್‌ಕ್ರೀಮ್ ಅಥವಾ ಮಾರ್ಜಪ್ಯಾನ್‌ನಿಂದ ಆಚ್ಛಾದಿಸಲಾಗುತ್ತದೆ, ಮತ್ತು ಅಂಚುಗಳು ಹಾಗೂ ಸಕ್ಕರೆ ಹಾಕಿದ ಹಣ್ಣುಗಳಿಂದ ಮೆರುಗು ಕೊಡಲಾಗುತ್ತದೆ.


[]

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಕೇಕ್&oldid=1250203" ಇಂದ ಪಡೆಯಲ್ಪಟ್ಟಿದೆ