ವಿಷಯಕ್ಕೆ ಹೋಗು

ಕೋಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮರ್ಷ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಹೊಟ್ಟೆಕಿಚ್ಚು ಲೇಖನಕ್ಕಾಗಿ ಇಲ್ಲಿ ನೋಡಿ.
ದಿ ಆಂಗರ್ ಆಪ್ ಅಚಿಲೆಸ್‌ನಲ್ಲಿ ಜಿಯೊವಾನಿ ಬಟ್ಟಿಸ್ಟ ಟೈಪೋಲೊ ಗ್ರೀಕ್ ಮುಖಂಡನು ಆಗಮೆಮ್ನನ್‌ನ ಮೇಲೆ ದಾಳಿ ನಡೆಸುವುದನ್ನು ಈ ರೀತಿ ಚಿತ್ರಿಸಿದ್ದಾನೆ.

ಕೋಪ ವು ಒಂದು ಭಾವಪ್ರಧಾನ ವಿಷಯವಾಗಿದೆ. ಕೋಪದ ದೈಹಿಕ ಪರಿಣಾಮವಾಗಿ ಹೃದಯ ಬಡಿತ, ರಕ್ತದೊತ್ತಡ ಹಾಗೂ ಅಡ್ರೀನಲೈನ್‌‌ ಮತ್ತು ನಾರ್ಅಡ್ರೀನಲೈನ್‌‌ ಮಟ್ಟವು ಏರುತ್ತದೆ.[] ಕೋಪವು ಗ್ರಹಿಸಿದ ಹಾನಿಯ ಅಪಾಯಕ್ಕೆ ಕಾದಾಡುವ ಅಥವಾ ವ್ಯತ್ಯಾಸಗೊಳಿಸುವ ಮಿದುಳಿನ ಪ್ರತಿಕ್ರಿಯೆಯ ಭಾಗವಾಗಿದೆ ಎಂದು ಕೆಲವರು ಹೇಳುತ್ತಾರೆ.[] ವ್ಯಕ್ತಿಯು ಮತ್ತೊಂದು ಹೊರಗಿನ ಬಲದ ಬೆದರಿಕೆಯ ವರ್ತನೆಯನ್ನು ತಕ್ಷಣವೇ ನಿಲ್ಲಿಸಲು ಪ್ರಯತ್ನಿಸುವ ಪ್ರಜ್ಞೆಯುಳ್ಳ ಆಯ್ಕೆಯನ್ನು ಮಾಡುವಾಗ ಕೋಪವು ವರ್ತನೆಯ, ಅರಿವಿನ ಮತ್ತು ಮಾನಸಿಕ ಪ್ರಬಲ ಭಾವನೆಯಾಗುತ್ತದೆ.[] ಇಂಗ್ಲಿಷ್ ಪದವು ಮೂಲತಃ ಹಳೆಯ ನಾರ್ಸ್ ಭಾಷೆಯ ಆಂಗರ್ ‌ನಿಂದ ಬಂದಿದೆ.[] ಕೋಪವು ಅನೇಕ ದೈಹಿಕ ಮತ್ತು ಮಾನಸಿಕ ಪರಿಣಾಮಗಳನ್ನು ಹೊಂದಿರುತ್ತದೆ.

ಕೋಪದ ಬಾಹ್ಯ ಅಭಿವ್ಯಕ್ತಿಯು ಮುಖಭಾವಗಳು, ಆಂಗಿಕ ವರ್ತನೆಗಳು, ಮಾನಸಿಕ ಪ್ರತಿಕ್ರಿಯೆಗಳು ಮತ್ತು ಆಕ್ರಮಣಶೀಲ ಸಾರ್ವಜನಿಕ ವರ್ತನೆಗಳಲ್ಲಿ ಕಂಡುಬರುತ್ತದೆ.[] ಉದಾಹರಣೆಗಾಗಿ, ಮಾನವರು ಮತ್ತು ಮಾನವರಲ್ಲದ ಪ್ರಾಣಿಗಳು ಗಟ್ಟಿಯಾಗಿ ಶಬ್ಧ ಮಾಡುತ್ತವೆ, ದೈಹಿಕವಾಗಿ ಬೃಹತ್ ಆಗಿರುವಂತೆ ಕಾಣಲು ಪ್ರಯತ್ನಿಸುತ್ತವೆ, ಹಲ್ಲು ತೋರಿಸುತ್ತವೆ, ಮತ್ತು ಬಿರುನೋಟ ಬೀರುತ್ತವೆ.[] ಕೋಪವು ಆಕ್ರಮಣಶೀಲರಿಗೆ ಅವರ ಬೆದರಿಸುವ ವರ್ತನೆಯನ್ನು ನಿಲ್ಲಿಸುವಂತೆ ಎಚ್ಚರಿಸಲು ಬಳಸುವ ಒಂದು ವರ್ತನೆಯ ರೂಪವಾಗಿದೆ. ಕೋಪಗೊಂಡವರಲ್ಲಿ ಯಾರಾದರೊಬ್ಬರು ಕೋಪವನ್ನು ಮುಂಚಿತವಾಗಿ ವ್ಯಕ್ತಪಡಿಸದೆ ವಿರಳವಾಗಿ ದೈಹಿಕ ವಾಕ್ಕಲಹ ಮಾಡುತ್ತಾರೆ .[] "ತಮಗೆ ಸಂಭವಿಸಿದುದರ" ಪರಿಣಾಮವಾಗಿ ಕೋಪವು ಪ್ರಚೋದಿಸಲ್ಪಡುತ್ತದೆಂದು ಕೋಪವನ್ನು ಅನುಭವಿಸಿದ ಹೆಚ್ಚಿನವರು ಹೇಳುತ್ತಾರೆ. ಕೋಪವು ಸ್ವ-ನಿಯಂತ್ರಣ ಸಾಮರ್ಥ್ಯವನ್ನು ಮತ್ತು ವಸ್ತುನಿಷ್ಠ ವೀಕ್ಷಣೆಯನ್ನು ಕಳೆದುಕೊಳ್ಳುವಂತೆ ಮಾಡುವುದರಿಂದ ಕೋಪಗೊಂಡ ವ್ಯಕ್ತಿಯು ತಪ್ಪು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಮನಶ್ಶಾಸ್ತ್ರಜ್ಞರು ಸೂಚಿಸುತ್ತಾರೆ.[]

ಆಧುನಿಕ ಮನಶ್ಶಾಸ್ತ್ರಜ್ಞರು ಕೋಪವು ಎಲ್ಲಾ ಮಾನವರು ಅನುಭವಿಸುವ ಪ್ರಾಥಮಿಕ, ನೈಸರ್ಗಿಕ ಮತ್ತು ಪರಿಪಕ್ವ ಭಾವನೆಯಾಗಿದೆ; ಅದಲ್ಲದೇ ಅದರ ಉಳಿಕೆಗಾಗಿ ಕ್ರಿಯಾತ್ಮಕ ಮೌಲ್ಯವನ್ನು ಹೊಂದಿರುವ ಅಂಶವೆಂದು ಹೇಳುತ್ತಾರೆ. ಕೋಪವು ಸರಿಪಡಿಸುವ ಕ್ರಿಯೆಗಾಗಿ ಮಾನಸಿಕ ಮೂಲಗಳನ್ನು ಚಲನಗೊಳಿಸಬಹುದು. ಅನಿಯಂತ್ರಿತ ಕೋಪವು ವೈಯಕ್ತಿಕ ಅಥವಾ ಸಾಮಾಜಿಕ ಸದ್ವರ್ತನೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಉಂಟುಮಾಡಬಹುದು.[][] ಅನೇಕ ತತ್ವಜ್ಞಾನಿಗಳು ಮತ್ತು ಬರಹಗಾರರು ಅನೈಚ್ಛಿಕ ಮತ್ತು ಅನಿಯಂತ್ರಿತ ಕೋಪದ ಮನಸ್ಸು ಅಪಾಯಕಾರಿಯಾಗಿರುತ್ತದೆಂದು ಹೇಳಿದ್ದಾರೆ. ಕೋಪದ ವಾಸ್ತವಿಕ ಮೌಲ್ಯದ ಬಗ್ಗೆ ವಾಗ್ವಾದವಿದೆ.[] ಕೋಪದಿಂದ ವರ್ತಿಸುವುದರ ಬಗ್ಗೆ ಬಹುಹಿಂದಿನ ತತ್ವಜ್ಞಾನಿಗಳಿಂದ ಹಿಡಿದು ಆಧುನಿಕ ಕಾಲದವರೆಗೂ ಅನೇಕ ಬರಹಗಳಲ್ಲಿ ಸೂಚಿಸಲಾಗಿದೆ. ಪುರಾತನ ಬರಹಗಾರರಿಗೆ ವಿರುದ್ಧವಾಗಿ ಆಧುನಿಕ ಮನಶ್ಶಾಸ್ತ್ರಜ್ಞರು ಕೋಪವನ್ನು ನಿಗ್ರಹಿಸುವುದರಿಂದ ಹಾನಿಕರ ಪರಿಣಾಮಗಳು ಉಂಟಾಗಬಹುದೆಂದು ಸೂಚಿಸಿದ್ದಾರೆ.[] ಕೋಪದ ವ್ಯಕ್ತಪಡಿಸುವಿಕೆಯನ್ನು ಸಾಮಾಜಿಕ ಪ್ರಭಾವಕ್ಕೆ ಕುಶಲಬಳಕೆಯ ನಿರ್ವಹಣಾ ಚಾತುರ್ಯವಾಗಿ ಬಳಸಬಹುದು.[೧೦][೧೧]

ಸೆವೆನ್ ಡೆಡ್ಲಿ ಸಿನ್ಸ್ (ಏಳು ಮಾರಕ ಪಾಪ)ನಲ್ಲಿ ಕೋಪವನ್ನು ವ್ರಾತ್(ಕಡುಕ್ರೋಧ) ಎಂದು ಪರಿಗಣಿಸಲಾಗುತ್ತದೆ.

ಮನಶ್ಶಾಸ್ತ್ರ ಮತ್ತು ಸಮಾಜಶಾಸ್ತ್ರ

[ಬದಲಾಯಿಸಿ]
Visualizing Anger - Petar Pavlov
"ಕೋಪ" ಪದದ ರೂಪಕಾಲಂಕಾರದ ದೃಶ್ಯೀಕರಣ.

ಕೋಪ ಬೆದರಿಕೆಗಳೊಂದಿಗೆ ಸಮನಾಗಿ ಸ್ಪಂದಿಸಲು ವ್ಯಕ್ತಿಗಳನ್ನು ಸಕ್ರಿಯಗೊಳಿಸಲು ಉದ್ಭವವಾಗುವ ಪ್ರತಿಕ್ರಿಯೆಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ.[] ಮನಶ್ಶಾಸ್ತ್ರಜ್ಞರು ಮೂರು ಪ್ರಕಾರದ ಕೋಪಗಳನ್ನು ಗುರುತಿಸಿದ್ದಾರೆ: ಮೊದಲ ಪ್ರಕಾರದ ಕೋಪವನ್ನು "ಆತುರದ ಮತ್ತು ತಕ್ಷಣದ ಕೋಪ"ವೆಂದು ಹೆಸರಿಸಲಾಗಿದೆ, ಇದನ್ನು 18ನೇ ಶತಮಾನದ ಇಂಗ್ಲಿಷ್ ಬಿಷಪ್ ಜೋಸೆಫ್ ಬಟ್ಲರ್ ಸೂಚಿಸಿದನು. ಇದು ಸ್ವ-ರಕ್ಷಣೆಯ ಅಂತಃಪ್ರೇರಣೆಯೊಂದಿಗೆ ಸಂಬಂಧವನ್ನು ಹೊಂದಿದೆ. ಇದು ಮಾನವರಲ್ಲಿ ಮತ್ತು ಮಾನವರಲ್ಲದ ಪ್ರಾಣಿಗಳಲ್ಲಿ ಕಂಡುಬರುತ್ತದೆ; ಹಾಗೂ ಚಿತ್ರಹಿಂಸೆಗೆ ಒಳಗಾದಾಗ ಅಥವಾ ಸೆರೆಗೆ ಸಿಕ್ಕಿದಾಗ ಪ್ರಕಟಗೊಳ್ಳುತ್ತದೆ. ಎರಡನೇ ಪ್ರಕಾರದ ಕೋಪವನ್ನು "ವಿವೇಚಿತ ಮತ್ತು ಉದ್ದೇಶಪೂರ್ವಕ" ಕೋಪವೆಂದು ಹೆಸರಿಸಲಾಗಿದೆ. ಇದು ಮತ್ತೊಬ್ಬರ ಉದ್ದೇಶಪೂರ್ವಕ ಹಾನಿಗೆ ಅಥವಾ ಅನುಚಿತ ವರ್ತನೆಗೆ ಪ್ರತಿಕ್ರಿಯೆಯಾಗಿ ಕಂಡುಬರುತ್ತದೆ. ಈ ಎರಡು ಪ್ರಕಾರದ ಕೋಪಗಳು ಕ್ರಮರಹಿತ ವಾದವು. ಮೂರನೇ ಪ್ರಕಾರದ ಕೋಪವು ಕ್ರಮಬದ್ಧವಾದುದಾಗಿದೆ ಅಲ್ಲದೇ ಇದು ಹುಟ್ಟುಗುಣ ಅಥವಾ ಗ್ರಾಹ್ಯ ಶಕ್ತಿಯ ಬದಲಿಗೆ ಹೆಚ್ಚು ವರ್ತನೆಯ ವಿಶೇಷ ಲಕ್ಷಣಗಳೊಂದಿಗೆ ಸಂಬಂಧಿಸಿರುತ್ತದೆ. ಈ ಪ್ರಕಾರದ ಕೋಪಕ್ಕೆ ಉದಾಹರಣೆಗಳೆಂದರೆ ಮುಂಗೋಪ, ಮುನಿಸು ಮತ್ತು ಒರಟುತನ.[೧೨]

ಕೋಪವು ಮಾನಸಿಕ ಮೂಲಗಳನ್ನು ಪ್ರಬಲವಾಗಿ ಚಲನಗೊಳಿಸಬಹುದು, ತಪ್ಪು ವರ್ತನೆಗಳ ಸರಿಪಡಿಸುವ ದೃಢ ನಿಶ್ಚಯವನ್ನು ಹೆಚ್ಚಿಸಬಹುದು,ಸಾಮಾಜಿಕ ನ್ಯಾಯವನ್ನು ಪ್ರೇರೇಪಿಸಬಹುದು, ಋಣಾತ್ಮಕ ಭಾವನೆಯ ಸಂವಹನ ಮಾಡಬಹುದು. ಅಲ್ಲದೇ ಸಿಡುಕಿನ ನಿವಾರಣೆ ಮಾಡಬಹುದು. ಇದು ಸಹನೆಯನ್ನೂ ಸುಗಮಗೊಳಿಸುತ್ತದೆ. ಮತ್ತೊಂದು ರೀತಿಯಲ್ಲಿ, ಕೋಪದ ವ್ಯಕ್ತಪಡಿಸುವಿಕೆಗೆ ಸೂಕ್ತವಾದ ಅಭಿವ್ಯಕ್ತಿ-ಮಾರ್ಗ ಸಿಗದಿದ್ದಾಗ ಅದು ಹಾನಿಕರವಾಗಬಹುದು. ಕೋಪವು ಅದರ ಪ್ರಬಲ ರೂಪದಲ್ಲಿ ಮಾಹಿತಿ ಪ್ರಕ್ರಿಯೆಯ ಮತ್ತು ತಮ್ಮ ವರ್ತನೆಯ ಮೇಲೆ ಅರಿವಿನ ನಿಯಂತ್ರಣವನ್ನು ತರುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಕೋಪಗೊಂಡ ವ್ಯಕ್ತಿಯು ಆತನ ವಸ್ತುನಿಷ್ಠತೆ, ಪರಾನುಭೂತಿ ಶಕ್ತಿ, ವಿವೇಕ ಅಥವಾ ಆಲೋಚನಾಶೀಲತೆಯನ್ನು ಕಳೆದುಕೊಳ್ಳಬಹುದು. ಅದಲ್ಲದೇ ಇತರರಿಗೆ ಹಾನಿಯನ್ನು ಉಂಟುಮಾಡಬಹುದು.[] ಕೋಪ ಮತ್ತು ಆಕ್ರಮಣಶೀಲತೆಯು ಪರಸ್ಪರ ಪ್ರಭಾವ ಬೀರಿದರೂ ಅವುಗಳ ಮಧ್ಯೆ ಸ್ಪಷ್ಟವಾದ ವ್ಯತ್ಯಾಸವಿದೆ. (ಶಾಬ್ದಿಕ ಅಥವಾ ದೈಹಿಕ, ನೇರ ಅಥವಾ ಪರೋಕ್ಷ). ಕೋಪವು ಆಕ್ರಮಣಶೀಲತೆಯನ್ನು ಸಕ್ರಿಯಗೊಳಿಸಬಹುದು ಅಥವಾ ಅದರ ಸಂಭಾವ್ಯತೆ ಅಥವಾ ತೀವ್ರತೆಯನ್ನು ಹೆಚ್ಚಿಸಬಹುದು. ಇದು ಆಕ್ರಮಣಶೀಲತೆಗೆ ಅವಶ್ಯಕ ಅಥವಾ ಸಾಕಾಗುವ ಸ್ಥಿತಿಯಲ್ಲ.[]

ಆಧುನಿಕ ಸಮಾಜದಲ್ಲಿ

[ಬದಲಾಯಿಸಿ]

ಕೋಪ ಮತ್ತು ಕ್ರೋಧ ಪದಗಳನ್ನು ಹೆಚ್ಚಾಗಿ ಭಾವನೆಗಳ ಸಮೂಹದಲ್ಲಿ ವಿರುದ್ಧ ಕೊನೆಗಳಲ್ಲಿರುವಂತೆ ನಿರೂಪಿಸಲಾಗುತ್ತದೆ: ಸೌಮ್ಯವಾದ ಕೋಪ ಮತ್ತು ಸಿಟ್ಟು ಒಂದು ಕೊನೆಯಲ್ಲಿ ಹಾಗೂ ರೋಷ ಅಥವಾ ವಿಪರೀತ ಕ್ರೋಧ ಮತ್ತೊಂದು ಕೊನೆಯಲ್ಲಿ. ಎರಡನ್ನೂ ಇಂಗ್ಲಿಷ್ ಭಾಷೆಯಲ್ಲಿ ಪರಸ್ಪರ ಬಿಡಿಸಿಕೊಳ್ಳಲಾಗದಂತಹ ಸಂಬಂಧವನ್ನು ಕಲ್ಪಿಸಲಾಗಿದೆ. ಹೆಚ್ಚಿನ ನಿಘಂಟಿನ ಅರ್ಥನಿರೂಪಣೆಗಳಲ್ಲಿ ಒಂದನ್ನು ಮತ್ತೊಂದಕ್ಕೆ ಸೂಚಿಸಲಾಗಿದೆ. ಇತ್ತೀಚೆಗೆ ಸ್ಯೂ ಪಾರ್ಕರ್ ಹಾಲ್ ಈ ಅಭಿಪ್ರಾಯವನ್ನು ವಿರೋಧಿಸಿದಳು; ಆಕೆ ಕೋಪವನ್ನು ಧನಾತ್ಮಕ, ನಿರ್ಮಲ ಮತ್ತು ರಚನಾತ್ಮಕ ಭಾವನೆ ಎಂದು ಹಾಗೂ ಅದು ಇತರರಿಗೆ ಗೌರವ ತೋರಿಸುತ್ತದೆಂದು ನಿರೂಪಿಸುತ್ತಾಳೆ; ಇದನ್ನು ಯಾವಾಗಲೂ ತಮ್ಮತನವನ್ನು ಸಂಬಂಧಗಳಲ್ಲಿ ದೈಹಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನಗಳಲ್ಲಿ ರಕ್ಷಿಸಿಕೊಳ್ಳಲು ಬಳಸಲಾಗುತ್ತದೆ.[೧೩] ಕೋಪವು ವ್ಯಕ್ತಿತ್ವ ಬೆಳೆವಣಿಗೆಯ ಹಂತಕ್ಕೆ ಪ್ರಚೋದನೆ ಮತ್ತು ಶಕ್ತಿಯನ್ನು ಒದಗಿಸಲು 18 ತಿಂಗಳಿನಿಂದ ಹಿಡಿದು 3 ವರ್ಷಗಳವರೆಗಿನ ವಯಸ್ಸಿನಲ್ಲಿ ಹುಟ್ಟಿಕೊಳ್ಳುತ್ತದೆ. ಅಲ್ಲಿಂದ ಮಗುವು ತನ್ನನ್ನು ನೋಡಿಕೊಳ್ಳುವವರಿಂದ ಬೇರೆಯಾಗಲು ಮತ್ತು ಭಿನ್ನತೆಗಳನ್ನು ತೋರಲು ಆರಂಭಿಸುತ್ತದೆ ಎಂದು ಆಕೆ ಹೇಳುತ್ತಾಳೆ. ಕೋಪವು ಆಲೋಚನೆಯು ಬೆಳೆಯುವ ಸಂದರ್ಭದಲ್ಲೇ ಹೊರಹೊಮ್ಮುತ್ತದೆ. ಆದ್ದರಿಂದ ಒಂದೇ ಸಮಯದಲ್ಲಿ ಅರಿವಿನ ಕೌಶಲಗಳನ್ನು ಪಡೆಯಲು ಮತ್ತು ಕೋಪ ಬರಲು ಸಾಧ್ಯವಾಗುತ್ತದೆ.

ಸಮಸ್ಯಾತ್ಮಕವಾದುದು ಕೋಪವಲ್ಲ ಅದು ಕ್ರೋಧ[೧೪] ಎಂದು ಪಾರ್ಕರ್ ಹಾಲ್ ಸೂಚಿಸುತ್ತಾಳೆ, ಇದು ಸಂಪೂರ್ಣವಾಗಿ ಒಂದು ಭಿನ್ನವಾದ ಸಂಗತಿಯಾಗಿದೆ; ಕ್ರೋಧವನ್ನು ಶಾಬ್ದಿಕ-ಪೂರ್ವ, ಅರಿವಿನ-ಪೂರ್ವ, ಮಾನಸಿಕ ರಕ್ಷಣಾತ್ಮಕ ವಿಧಾನವೆಂದು ನಿರೂಪಿಸಲಾಗಿದೆ. ಇದು ಶಿಶುವು ಅದರ ಬೇಡಿಕೆಗಳನ್ನು ಪಡೆಯಲು ವಿಫಲವಾದಾಗ ಆಘಾತವನ್ನು ಅನುಭವಿಸಿದುದಕ್ಕೆ ಪ್ರತಿಕ್ರಿಯೆಯಾಗಿ ಆರಂಭಿಕ ಎಳೆತನದಲ್ಲೇ ಹುಟ್ಟಿಕೊಳ್ಳುತ್ತದೆ. ಕ್ರೋಧವನ್ನು, ಭೀತಿಯನ್ನು ಅನುಭವಿಸುವ ಮತ್ತು ಜೀವಂತವಾಗಿ ಉಳಿಯುವುದರಲ್ಲಿ ಅಪಾಯವಿದೆ ಎಂದು ಭಾವಿಸುವ ಶಿಶು ಸಹಾಯಕ್ಕಾಗಿ (ಅರಚಲು)ಆದೇಶಿಸಲು ಮಾಡುವ ಪ್ರಯತ್ನವೆಂದು ವ್ಯಾಖ್ಯಾನಿಸಲಾಗುತ್ತದೆ. ಶಿಶು ತನ್ನಲ್ಲಿ ಹುಟ್ಟಿಕೊಳ್ಳುವ ಸಹಿಸಲಾಗದ ಭಾವನೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಅದಲ್ಲದೇ ಅದನ್ನು ಅನುಗೊಳಿಸಲು, ಅದರ ಬೇಡಿಕೆಗಳೇನು ಎಂಬುದನ್ನು ಸರಿಯಾಗಿ ನಿರ್ಣಯಿಸಲು ಮತ್ತು ಸಾಂತ್ವನಗೊಳಿಸಲು ಅದಕ್ಕೆ ಬೇರೆಯವರ ಕಾಳಜಿಯ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಸೂಕ್ತ ಬೆಂಬಲವನ್ನು ಪಡೆದರೆ ಶಿಶು ಅಂತಿಮವಾಗಿ ಅದರ ಸ್ವಂತ ಭಾವನೆಗಳನ್ನು ನಿರ್ವಹಿಸಲು ಕಲಿತುಕೊಳ್ಳುತ್ತದೆ.

ಕ್ರೋಧದ ಸಮಸ್ಯೆಗಳನ್ನು, "ಭಾವನೆಗಳನ್ನು ಅಥವಾ ಜೀವನದ ಅನುಭವಗಳನ್ನು ನಿರ್ವಹಿಸುವ ಅಸಮರ್ಥತತೆ" ಎಂಬುದಾಗಿ ನಿರೂಪಿಸಲಾಗುತ್ತದೆ,[೧೩] ಏಕೆಂದರೆ ಭಾವನೆಯನ್ನು ನಿಯಂತ್ರಿಸುವ ಸಾಮರ್ಥ್ಯವು (ಸ್ಕೋರ್, 1994)[೧೫] ಸಾಕಷ್ಟು ಬೆಳೆಯದಿರುವುದು (ಇದು ಹೆಚ್ಚು ಸಾಮಾನ್ಯವಾಗಿರುತ್ತದೆ) ಅಥವಾ ಇದನ್ನು ತೀರ ಇತ್ತೀಚಿನ ಆಘಾತದಿಂದಾಗಿ ತಾತ್ಕಾಲಿಕವಾಗಿ ಕಳೆದುಕೊಂಡಿರುವುದು. ಕ್ರೋಧವೆಂದರೆ "ಒಮ್ಮೆಲೆ ಹೊರಬರಲು ಪ್ರಯತ್ನಿಸುವ ವಿವಿಧ ಭಾವನೆಗಳ ಒಂದು ಸಂಪೂರ್ಣ ಹೊರೆ"ಯೆಂದು ತಿಳಿಯಲಾಗುತ್ತದೆ. (ಹಾರ್ವೆ, 2004)[೧೬] ಅಥವಾ ನಿರ್ವಹಿಸಲು ಅಸಾಧ್ಯವಾದ ಜೀವನದ ಘಟನೆಯೊಂದು, ಅದು ಎಷ್ಟು ಕ್ಷುಲ್ಲಕವೆಂಬುದನ್ನು ಲಕ್ಷಿಸದೆ, ಜೀವಿಯು ಸಹಿಸಿಕೊಳ್ಳಲಾಗದಷ್ಟು ಒತ್ತಡವನ್ನು ಹೇರಿದಾಗ ಹೊರಹೊಮ್ಮುವ ಹಸಿ, ವ್ಯತ್ಯಾಸ ತೋರಿಸದ ಭಾವನೆಗಳೆಂದು ತಿಳಿಯಲಾಗುತ್ತದೆ.

ಕ್ರೋಧವನ್ನು ಈ ರೀತಿಯಲ್ಲಿ ನಿರೂಪಿಸುವುದು ಅಂತಹ ಸಮಸ್ಯೆಗಳನ್ನು ಹೊಂದಿರುವವರಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಾಮವನ್ನು ಹೊಂದಿರುತ್ತದೆ. ಕ್ರೋಧವನ್ನು ಶಾಬ್ದಿಕ-ಪೂರ್ವ, ಅರಿವಿನ-ಪೂರ್ವ ಸಂಗತಿಯಾಗಿ ನಿರೂಪಿಸಿದರೆ (ಮತ್ತು ಅದರಿಂದ ಬಳಲುವವರು ಅದನ್ನು ಆಡುಮಾತಿನಲ್ಲಿ "ಮುಖ್ಯ ವಿಷಯವನ್ನು ಕಳೆದುಕೊಳ್ಳುವುದೆಂದು" ವಿವರಿಸುತ್ತಾರೆ), ಬದ್ಧತೆಗಳನ್ನು ಭಿನ್ನವಾಗಿ ವರ್ತಿಸುವಂತೆ ಮಾಡುವ ಅರಿವಿನ ಕೌಶಲಗಳು ಅಥವಾ ತಿಳಿವಳಿಕೆಯ ಕ್ರಿಯೆಗಳು (ಪ್ರಸ್ತುತ UKಯಲ್ಲಿ ಹೆಚ್ಚು ಸಾಮಾನ್ಯವಾಗಿರುವ ಮಧ್ಯಸ್ಥಿಕೆಗಳು) ವಿರುದ್ಧವಾಗಿ ಸೂಚಿಸಲ್ಪಡುತ್ತವೆ. ಪಾರ್ಕರ್ ಹಾಲ್ ಹೆಚ್ಚಿನ ಪ್ರಮಾಣದ ಆಘಾತಗಳನ್ನು ನಿರ್ವಹಿಸಲು ರೋಗಿಗಳ ಅಂತರಾತ್ಮದ (ಆಂತರಿಕ)ಸಾಮರ್ಥ್ಯವನ್ನು (ರೋಗರ್ಸ್, 1951)[೧೭] ಬೆಳೆಸಲು ಅಥವಾ ಚೇತರಿಸಿಕೊಳ್ಳಲು ಬೆಂಬಲಿಸುವ ಪರಾನುಭೂತಿ ಶಕ್ತಿಯುಳ್ಳ ಚಿಕಿತ್ಸೆಯೊಂದನ್ನು ಸೂಚಿಸುತ್ತಾಳೆ. ಈ ಪ್ರಯತ್ನವು ನೈತಿಕ ಶಿಕ್ಷಣ, ಬಂಧನ ಮತ್ತು ಮಾನಸಿಕ ಮಾದರಿಗಳನ್ನೂ ಒಳಗೊಂಡಂತೆ UKಯಲ್ಲಿರುವ ಕೋಪ ಮತ್ತು ಕ್ರೋಧದ ಪ್ರಮುಖ ಮಧ್ಯಸ್ಥಿಕೆಗಳಿಗೆ ವಿಮರ್ಶಾತ್ಮಕವಾಗಿದೆ. ಇವು ಕೋಪವನ್ನು ಸಾಕಷ್ಟು ಸ್ಪಷ್ಟವಾಗಿ ನಿರೂಪಿಸುವುದಿಲ್ಲವೆಂದು ಆಕೆ ವಾದಿಸುತ್ತಾಳೆ.

ಲಕ್ಷಣಗಳು

[ಬದಲಾಯಿಸಿ]

ಕೋಪದಲ್ಲಿ ಎರಡು ಪ್ರಮುಖ ಪ್ರಕಾರಗಳಿರುತ್ತವೆ: ಅವ್ಯಕ್ತ ಕೋಪ ಮತ್ತು ಆಕ್ರಮಣಶೀಲ ಕೋಪ . ಈ ಎರಡು ಪ್ರಕಾರದ ಕೋಪಗಳು ಕೆಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿರುತ್ತವೆ:

ಅವ್ಯಕ್ತ ಕೋಪ

[ಬದಲಾಯಿಸಿ]

ಅವ್ಯಕ್ತ ಕೋಪವು ಈ ಕೆಳಗಿನ ವಿಧಾನಗಳಲ್ಲಿ ವ್ಯಕ್ತಗೊಳ್ಳಬಹುದು:

  • ಗೌಪ್ಯ ನಡವಳಿಕೆ - ಉದಾಹರಣೆಗಾಗಿ, ಒಬ್ಬರ ಬೆನ್ನಹಿಂದೆ ಮುನಿಸು ತೋರುವುದು, ಉದಾಸೀನ ತೋರುವುದು ಅಥವಾ ಗೊಣಗುಟ್ಟವುದು, ದೃಷ್ಟಿ ಬೆರೆಸಿ ನೋಡುವುದನ್ನು ತಪ್ಪಿಸುವುದು, ಗದರಿಸಿ ಅವಮಾನ ಮಾಡುವುದು, ಅಪಪ್ರಚಾರ ಮಾಡುವುದು, ದೂರುವುದು, ಅನಾಮಧೇಯ ಪತ್ರ ಬರೆಯುವುದು, ಕದಿಯುವುದು ಮತ್ತು ಮೋಸಮಾಡುವುದು.
  • ಮಾನಸಿಕ ದುರುಪಯೋಗ - ಉದಾಹರಣೆಗಾಗಿ, ಒಬ್ಬರನ್ನು ಆಕ್ರಮಣಶೀಲತೆಗೆ ಪ್ರೇರೇಪಿಸುವುದು. ನಂತರ ಅವರನ್ನು ಪ್ರೋತ್ಸಾಹಿಸುವುದು, ಆಕ್ರಮಣಶೀಲತೆಯನ್ನು ಉತ್ತೇಜಿಸಿ ಅದರಿಂದ ದೂರವಾಗಿ ಉಳಿಯುವುದು, ಭಾವನಾತ್ಮಕ ಬೆದರಿಕೆ, ಮೊಸಳೆ ಕಣ್ಣೀರು ಸುರಿಸುವುದು, ಅಸ್ವಸ್ಥರಂತೆ ನಟಿಸುವುದು, ಸಂಬಂಧಗಳನ್ನು ಹಾಳುಮಾಡಿಕೊಳ್ಳುವುದು, ಲೈಂಗಿಕ ಪ್ರಚೋದನೆಯನ್ನು ಮಾಡುವುದು, ನಿಷೇಧಾತ್ಮಕ ಭಾವನೆಗಳನ್ನು ಹಂಚಿಕೊಳ್ಳಲು ಮತ್ತೊಬ್ಬರನ್ನು ಬಳಸಿಕೊಳ್ಳುವುದು, ಹಣ ಅಥವಾ ಸಂಪನ್ಮೂಲಗಳನ್ನು ನೀಡದಿರುವುದು.
  • ಸ್ವ-ನಿಂದನೆ ಮಾಡುವುದು - ಉದಾಹರಣೆಗಾಗಿ, ಅನೇಕ ಬಾರಿ ಕ್ಷಮಾಪಣೆ ಕೇಳುವುದು, ಅತಿಯಾದ ಟೀಕೆಗೊಳಗಾಗುವುದು, ವಿಮರ್ಶೆಗೆ ಎಡೆಮಾಡಿಕೊಡುವುದು.
  • ಸ್ವ-ತ್ಯಾಗ - ಉದಾಹರಣೆಗಾಗಿ, ಮಿತಿಮೀರಿ ಸಹಾಯ ಮಾಡುವುದು, ದೀರ್ಘ ಕಾಲದಿಂದ ನರಳುತ್ತಿರುವವರ ಹಾಗೆ ನಟಿಸಿ ನೆರವನ್ನು ನಿರಾಕರಿಸುವುದು ಅಥವಾ ಕೃತಜ್ಞತಾ ಭಾವವನ್ನು ಸುತ್ತಿಕೊಳ್ಳುವುದು.
  • ವ್ಯರ್ಥತೆ - ಉದಾಹರಣೆಗಾಗಿ, ತಮ್ಮನ್ನು ತಾವು ಅಥವಾ ಬೇರೆಯವರು ವಿಫಲಗೊಳ್ಳುವಂತೆ ಮಾಡುವುದು, ನಂಬಿಕೆಗೆ ಅರ್ಹವಲ್ಲದವರನ್ನು ಅವಲಂಬಿಸುವುದು, ಅಪಘಾತ ಸಂಭವಕ್ಕೆ ಒಳಗಾಗುವುದು, ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಸಾಧಿಸುವುದು, ಲೈಂಗಿಕ ನಪುಂಸಕತೆ, ಗಂಭೀರ ವಿಷಯಗಳನ್ನು ನಿರ್ಲಕ್ಷಿಸಿ ಮುಖ್ಯವಲ್ಲದ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ತೋರುವುದು.
  • ಉದ್ವೇಗರಹಿತ - ಉದಾಹರಣೆಗಾಗಿ, ನಿರಾಸಕ್ತಿ ತೋರುವುದು ಅಥವಾ ಕಪಟದ ನಗು ಬೀರುವುದು, ಉದಾಸೀನರಂತೆ ಕಾಣುವುದು, ಬೇರೆಯವರು ಸಮಸ್ಯೆಯನ್ನು ಪರಿಹರಿಸುತ್ತಿರುವಾಗ ಅಡ್ಡಗೋಡೆ ಮೇಲೆ ದೀಪ ಇಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದರೊಂದಿಗೆ ಭಾವನೆಗಳಿಗೆ ತಣ್ಣೀರೆರಚುವುದು, ಮಿತಿಮೀರಿ ತಿನ್ನುವುದು, ವಿಪರೀತ ನಿದ್ದೆ ಮಾಡುವುದು, ಮತ್ತೊಬ್ಬರ ಕೋಪಕ್ಕೆ ಪ್ರತಿಕ್ರಿಯಿಸದಿರುವುದು, ತಾತ್ಸಾರ ತೋರುವುದು, ಮತ್ತೊಬ್ಬರ ಸ್ವಯಂಪ್ರೇರಣೆಯನ್ನು ಕುಗ್ಗಿಸುವ ಮತ್ತು ಅಸಮ್ಮತಿ ತೋರುವ ಲೈಂಗಿಕ ಆಸಕ್ತಿಯನ್ನು ಹೊಂದಿರುವುದು, ಯಂತ್ರಗಳು, ವಿಷಯಗಳು ಅಥವಾ ಬೌದ್ಧಿಕ ಕಸುಬುಗಳಿಗೆ ವಿಪರೀತ ಸಮಯ ವಿನಿಯೋಗಿಸುವುದು, ನಿಷ್ಫಲಗೊಳಿಸುವುದರ ಬಗ್ಗೆ ಮಾತನಾಡುವುದು; ಆದರೆ ಯಾವುದೇ ಭಾವನೆಗಳನ್ನು ತೋರದಿರುವುದು.
  • ಗೀಳಿನಂಥ ವರ್ತನೆ - ಉದಾಹರಣೆಗಾಗಿ, ಸ್ವಚ್ಛ ಮತ್ತು ಅಚ್ಚುಕಟ್ಟಾಗಿರುವುದು ಅವಶ್ಯಕವೆಂಬಂತಿರುವುದು, ತಪ್ಪದೆ ವಿಷಯಗಳನ್ನು ಪರಿಶೀಲಿಸುವ ಹವ್ಯಾಸವನ್ನು ಹೊಂದಿರುವುದು, ಮಿತಿಮೀರಿ ಪಥ್ಯ ಮಾಡುವುದು ಅಥವಾ ವಿಪರೀತಿ ತಿನ್ನುವುದು, ಎಲ್ಲಾ ಕೆಲಸಗಳನ್ನು ಸರಿಯಾಗಿ ಮಾಡಬೇಕೆಂದು ಆದೇಶಿಸುವುದು.
  • ನುಣುಚಿಕೊಳ್ಳುವುದು - ಉದಾಹರಣೆಗಾಗಿ, ಸಮಸ್ಯೆಗಳಿಗೆ ಬೆನ್ನುತೋರಿಸುವುದು, ಸಂಘರ್ಷಗಳಿಂದ ತಪ್ಪಿಸಿಕೊಳ್ಳುವುದು, ಹಿಂದಕ್ಕೆ ವಾದಿಸದಿರುವುದು, ಹೆದರಿಕೆಯನ್ನು ಬೆಳೆಸಿಕೊಳ್ಳುವುದು.

ಆಕ್ರಮಣಶೀಲ ಕೋಪ

[ಬದಲಾಯಿಸಿ]

ಆಕ್ರಮಣಶೀಲ ಕೋಪದ ಲಕ್ಷಣಗಳೆಂದರೆ:

  • ಬೆದರಿಕೆಗಳು - ಉದಾಹರಣೆಗಾಗಿ, ಬೇರೆಯವರಿಗೆ, ಅವರ ಸ್ವತ್ತಿಗೆ ಅಥವಾ ಅವರ ನಿರೀಕ್ಷೆಗಳಿಗೆ ತಾವು ಯಾವ ರೀತಿಯಲ್ಲಿ ಹಾನಿಯನ್ನುಂಟುಮಾಡಬಹುದೆಂದು ಬೆದರಿಕೆ ನೀಡುವುದು, ಒಬ್ಬರ ಕಡೆಗೆ ಬೆರಳು ತೋರಿಸಿ ಗದರಿಸುವುದು, ಮುಷ್ಟಿ ತಿರುಗಿಸುವುದು, ರೋಷಾವೇಶದ ವರ್ತನೆಗೆ ಸಂಬಂಧಿಸಿದ ಬಟ್ಟೆಗಳನ್ನು ಅಥವಾ ಚಿಹ್ನೆಗಳನ್ನು ಧರಿಸುವುದು, ಬಹಳ ಹತ್ತಿರದಿಂದ ಹಿಂಬಾಲಿಸುವುದು, ಮಿತಿಮೀರಿ ಕಾರಿನ ಹಾರ್ನ್ ಬಾರಿಸುವುದು, ಬಾಗಿಲುಗಳನ್ನು ದಡಾರನೆ ಮುಚ್ಚುವುದು.
  • ನೋವುಂಟುಮಾಡುವಿಕೆ - ಉದಾಹರಣೆಗಾಗಿ, ದೈಹಿಕ ಹಿಂಸೆ, ಪದಗಳಿಂದ ನಿಂದಿಸುವುದು, ಪೂರ್ವಗ್ರಹ ಪೀಡಿತ ಅಥವಾ ಅಶ್ಲೀಲ ತಮಾಷೆಗಳನ್ನು ಹೇಳುವುದು, ಆತ್ಮವಿಶ್ವಾಸ ಮುರಿಯುವುದು, ನೀತಿಗೆಟ್ಟ ಭಾಷೆಯನ್ನು ಬಳಸುವುದು, ಮತ್ತೊಬ್ಬರ ಭಾವನೆಗಳನ್ನು ನಿರ್ಲಕ್ಷಿಸುವುದು, ಉದ್ದೇಶಪೂರ್ವಕವಾಗಿ ಪಕ್ಷಪಾತ ತೋರುವುದು, ದೂಷಿಸುವುದು, ಅಧಿಕಾರಯುಕ್ತವಲ್ಲದ ಕಾರ್ಯಗಳಿಗಾಗಿ ಶಿಕ್ಷಿಸುವುದು, ಬೇರೆಯವರ ಬಗ್ಗೆ ಕುಹುಕವಾಡುವುದು.
  • ವಿಧ್ವಂಸಕತೆ - ಉದಾಹರಣೆಗಾಗಿ ವಸ್ತುಗಳನ್ನು ಹಾಳುಮಾಡುವುದು, ಪ್ರಾಣಿಗಳಿಗೆ ಹಿಂಸೆ ನೀಡುವುದು, ಇಬ್ಬರ ನಡುವಿನ ಸಂಬಂಧವನ್ನು ಕೆಡಿಸುವುದು, ಎಚ್ಚರಿಕೆ ಇಲ್ಲದೆ ವಾಹನ ಚಲಾಯಿಸುವುದು, ಕೆಟ್ಟಶಬ್ದಗಳಿಂದ ಬೈಯುವುದು.
  • ಪೀಡಿಸುವುದು - ಉದಾಹರಣೆಗಾಗಿ, ನೇರವಾಗಿ ಬೆದರಿಕೆ ಹಾಕುವುದು, ಕಿರುಕುಳ ಕೊಡುವುದು, ತಳ್ಳುವುದು ಅಥವಾ ನೂಕುವುದು, ಹಿಂಸಿಸಲು ಶಕ್ತಿಯನ್ನು ಬಳಸಿಕೊಳ್ಳುವುದು, ಕಿರುಚುವುದು, ಒಬ್ಬರನ್ನು ಮಾರ್ಗದಿಂದ ದೂರಕ್ಕೆ ಸರಿಸಲು ಕಾರಿನ ಬಲವನ್ನು ಬಳಸುವುದು, ಮತ್ತೊಬ್ಬರ ಬಲಹೀನತೆಯೊಂದಿಗೆ ಆಟವಾಡುವುದು.
  • ನ್ಯಾಯವಲ್ಲದ ನಿಂದನೆ - ಉದಾಹರಣೆಗಾಗಿ, ತಮ್ಮ ತಪ್ಪುಗಳಿಗೆ ಮತ್ತೊಬ್ಬರನ್ನು ಆರೋಪಿಸುವುದು, ತಮ್ಮದೇ ಭಾವನೆಗಳಿಗೆ ಇನ್ನೊಬ್ಬರನ್ನು ನಿಂದಿಸುವುದು, ಸಾಮಾನ್ಯವಾಗಿ ಯಾವಾಗಲೂ ತಪ್ಪುಹೊರಿಸುವುದು.
  • ಉನ್ಮಾದಗ್ರಸ್ತ ವರ್ತನೆ - ಉದಾಹರಣೆಗಾಗಿ, ಅತ್ಯಂತ ವೇಗವಾಗಿ ಮಾತನಾಡುವುದು, ವಿಪರೀತ ವೇಗವಾಗಿ ನಡೆಯುವುದು, ಅತಿ ಹೆಚ್ಚು ಕೆಲಸ ಮಾಡುವುದು ಮತ್ತು ಇತರರೂ ಸಹ ಹಾಗೆ ಮಾಡಬೇಕೆಂದು ನಿರೀಕ್ಷಿಸುವುದು, ಅತ್ಯಂತ ವೇಗವಾಗಿ ವಾಹನ ಚಲಾಯಿಸುವುದು, ಲೆಕ್ಕವಿಲ್ಲದೆ ಖರ್ಚುಮಾಡುವುದು.
  • ಡಾಂಭಿಕತೆ(ಆಡಂಬರ) - ಉದಾಹರಣೆಗಾಗಿ, ಆಡಂಬರ ತೋರುವುದು, ಸಂಶಯ ವ್ಯಕ್ತಪಡಿಸುವುದು, ನಿಯೋಜಿಸದಿರುವುದು, ನೋವು ಅನುಭವಿಸಿದವರಂತಿರುವುದು, ಎಲ್ಲಾ ಸಂದರ್ಭದಲ್ಲೂ ಕೇಂದ್ರ ಸ್ಥಾನವನ್ನು ಬಯಸುವುದು, ಲಕ್ಷಿಸದೆ ಇರುವುದು, ಮತ್ತೊಬ್ಬರ ಬಗ್ಗೆ ತಲೆಹರಟೆ ಮಾಡುವುದು, ಸಮಸ್ಯೆಗಳನ್ನು ಪರಿಹರಿಸಲು ಚುಂಬನದ ನಿರೀಕ್ಷೆ ಮತ್ತು ಸಭೆಗಳನ್ನು ಕರೆಯುವುದು.
  • ಸ್ವಾರ್ಥತೆ - ಉದಾಹರಣೆಗಾಗಿ, ಬೇರೆಯವರ ಬೇಡಿಕೆಗಳನ್ನು ಅಲಕ್ಷಿಸುವುದು, ಸಹಾಯ ಕೋರಿಕೆಗಳಿಗೆ ಪ್ರತಿಕ್ರಿಯಿಸದಿರುವುದು, ಕ್ಯೂ ಹಾರುವುದು.(ಸರದಿಯ ಶಿಸ್ತು ಮೀರು)
  • ಸೇಡು - ಉದಾಹರಣೆಗಾಗಿ, ವಿಪರೀತ ಪ್ರತೀಕಾರವನ್ನು ಹೊಂದಿರುವುದು, ಕ್ಷಮಿಸಲು ಮತ್ತು ಮರೆಯಲು ನಿರಾಕರಿಸುವುದು, ಹಿಂದಿನ ಮನನೋಯಿಸುವ ನೆನಪುಗಳನ್ನು ಪುನಃಜ್ಞಾಪಿಸಿಕೊಳ್ಳುವುದು.
  • ಮುಂದಾಗುವುದನ್ನು ಊಹಿಸಲಾಗದಿರುವಿಕೆ - ಉದಾಹರಣೆಗಾಗಿ, ಸಣ್ಣ ಆಶಾಭಂಗಕ್ಕೆ ವಿಪರೀತ ಕ್ರೋಧ ವ್ಯಕ್ತಪಡಿಸುವುದು, ಸ್ವಚ್ಛಂದವಾಗಿ ಆಕ್ರಮಣ ಮಾಡುವುದು, ನ್ಯಾಯವಲ್ಲದ ಶಿಕ್ಷೆಯನ್ನು ನೀಡುವುದು, ಮತ್ತೊಬ್ಬರಿಗೆ ಹಾನಿಯನ್ನುಂಟುಮಾಡುವುದು, ಆಲ್ಕೊಹಾಲ್ ಮತ್ತು ಮಾದಕ ಪದಾರ್ಥಗಳನ್ನು ಸೇವಿಸುವದು[೧೮], ತರ್ಕಬದ್ಧವಲ್ಲದ ವಾದಗಳನ್ನು ಮಾಡುವುದು.

ಇವುಗಳಲ್ಲಿ ಯಾವುದಾದರೂ ವರ್ತನೆಗಳನ್ನು ವ್ಯಕ್ತಪಡಿಸುವವರು ಯಾವಾಗಲೂ ಕೋಪವನ್ನು ನಿರ್ವಹಿಸುವ ಸಮಸ್ಯೆ ಹೊಂದಿದ್ದಾರೆಂಬ ಅರ್ಥವಲ್ಲವೆಂಬುದನ್ನು ಗಮನಿಸಬೇಕು.

ಕಾರಣಗಳು

[ಬದಲಾಯಿಸಿ]

ಒಬ್ಬ ವ್ಯಕ್ತಿಗೆ ಕೋಪವು, ಆತನಿಗೆ ಅಥವಾ ಆತ ಕಾಳಜಿ ತೋರುವವರಿಗೆ ಏನಾದರೂ ಹಾನಿಯಾದಾಗ, ಕೋಪಬರಿಸುವ ಘಟನೆಯ ಲಕ್ಷಣ ಮತ್ತು ಕಾರಣದ ಬಗ್ಗೆ ಖಾತ್ರಿಯಾಗಿರುವಾಗ, ಮತ್ತೊಬ್ಬರು ಜವಾಬ್ದಾರರೆಂದು ನಿಖರವಾಗಿ ತಿಳಿದಿರುವಾಗ ಹಾಗೂ ಸಂದರ್ಭದ ಮೇಲೆ ಮತ್ತೂ ಪ್ರಭಾವ ಬೀರಬಹುದಿತ್ತೆಂದು ಅಥವಾ ನಿಭಾಯಿಸಬಹುದಿತ್ತೆಂದು ಭಾವಿಸಿದಾಗ ಬರುತ್ತದೆ.[೧೯] ಉದಾಹರಣೆಗಾಗಿ, ಒಬ್ಬ ವ್ಯಕ್ತಿಯ ಕಾರು ಹಾನಿಗೊಳಗಾದರೆ, ಅದನ್ನು ಬೇರೆಯವರು ಮಾಡಿದ್ದರೆ ಆತನು ಕೋಪಪಡುತ್ತಾನೆ (ಉದಾ. ಮತ್ತೊಬ್ಬ ಚಾಲಕನು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆಯುವುದು), ಸಾಂದರ್ಭಿಕ ಕಾರಣಗಳಿಂದ ಉಂಟಾಗಿದ್ದರೆ ಆತನು ದುಃಖಿಸುತ್ತಾನೆ. (ಉದಾ. ಬಿರುಗಾಳಿ ಮಳೆ) ಅಥವಾ ವೈಯಕ್ತಿಕವಾಗಿ ಆತನೇ ಕಾರಣವಾಗಿದ್ದರೆ ತಪ್ಪಿತಸ್ಥ ಭಾವನೆ ಮತ್ತು ನಾಚಿಕೆಯಿಂದ ಸಂಕೋಚಪಡುತ್ತಾನೆ.

ಸಾಮಾನ್ಯವಾಗಿ, ಕೋಪವನ್ನು ಅನುಭವಿಸಿದ ಹೆಚ್ಚಿನವರು ಅದು "ಅವರಿಗೆ ಸಂಭವಿಸಿದುದರ" ಪರಿಣಾಮವಾಗಿ ಪ್ರಚೋದಿಸಲ್ಪಡುತ್ತದೆಂದು ವಿವರಿಸುತ್ತಾರೆ. ಅದಲ್ಲದೇ ಹೆಚ್ಚಿನ ಸಂದರ್ಭಗಳಲ್ಲಿ ಸೂಚಿಸಲಾದ ಪ್ರಚೋದನೆಗಳು ಕೋಪವನ್ನು ಅನುಭವಿಸುವುದಕ್ಕಿಂತ ಸ್ವಲ್ಪ ಮೊದಲು ಕಂಡುಬರುತ್ತವೆ. ಅಂತಹ ವಿವರಣೆಗಳು ಕೋಪವು ವಿಭಿನ್ನವಾದ ಹೊರಗಿನ ಕಾರಣವನ್ನು ಹೊಂದಿದೆ ಎಂಬ ಕಲ್ಪನೆಯನ್ನು ದೃಢಪಡಿಸುತ್ತವೆ. ಕೋಪಗೊಂಡವರು ಸಾಮಾನ್ಯವಾಗಿ ಅವರ ಕೋಪದ ಕಾರಣವನ್ನು ಮತ್ತೊಬ್ಬರ ನಡವಳಿಕೆಯ ಉದ್ದೇಶಪೂರ್ವಕ, ವೈಯಕ್ತಿಕ ಮತ್ತು ನಿಯಂತ್ರಿಸಬಹುದಾದ ದೃಷ್ಟಿಕೋನದಲ್ಲಿ ಕಂಡುಹಿಡಿಯುತ್ತಾರೆ. ಆದರೆ ಈ ವಿವರಣೆಯು, ಕೋಪಗೊಂಡಾಗ ಭಾವನೆಯ ಪರಿಣಾಮವಾಗಿ ಸ್ವ-ನಿಯಂತ್ರಣ ಸಾಮರ್ಥ್ಯವನ್ನು ಮತ್ತು ವಸ್ತುನಿಷ್ಠ ವೀಕ್ಷಣೆಯನ್ನು ಕಳೆದುಕೊಳ್ಳುವವರ ಅಂತಃಪ್ರಜ್ಞೆಯನ್ನು ಆಧರಿಸಿರುತ್ತದೆ. ಕೋಪವು ಹುಟ್ಟಲು ಹಲವಾರು ಕಾರಣಗಳಿರಬಹುದು, ಅವುಗಳಲ್ಲಿ ಕೆಲವು ಪರೋಕ್ಷ ಘಟನೆಗಳಾಗಿರಬಹುದು. ಆದರೆ ಜನರು ಅವರ ಕೋಪಕ್ಕೆ ವಿರಳವಾಗಿ ಒಂದಕ್ಕಿಂತ ಹೆಚ್ಚು ಕಾರಣವನ್ನು ಗುರುತಿಸುತ್ತಾರೆ.[] ನೊವ್ಯಾಕೊ ಪ್ರಕಾರ, "ಕೋಪದ ಅನುಭವಗಳು ಪರಿಸರದ-ಅಲ್ಪಕಾಲಿಕ ಪರಿಸ್ಥಿತಿಯೊಳಗೆ ಆವರಿಸಲ್ಪಟ್ಟಿರುತ್ತವೆ ಅಥವಾ ಅಡಕವಾಗಿರುತ್ತವೆ. ಕೆಲವು ಪ್ರಕ್ಷುಬ್ಧ ಸ್ಥಿತಿಗಳು ಕೋಪವನ್ನು ಭರಿಸದಿದ್ದರೂ, ಅವು ಸುಲಭವಾಗಿ ಗುರುತಿಸಲಾಗದ ಅವಶೇಷಗಳನ್ನು ಉಳಿಸಿಹೋಗುತ್ತವೆ. ಅವು ಸಾವಕಾಶವಾಗಿ ಕೋಪದ ಪ್ರಚೋದನೆಯನ್ನು ಮಾಡುವ ಹಿನ್ನೆಲೆಯಾಗುತ್ತವೆ."[] ಎನ್‌ಸೈಕ್ಲೊಪೀಡಿಯಾ ಬ್ರಿಟಾನಿಕ ಪ್ರಕಾರ, ಆಂತರಿಕ ಕಲಂಕವು ನೋವನ್ನುಂಟುಮಾಡುತ್ತದೆ, ಅದು ಕೋಪ ಬರಲು ಕಾರಣವಾಗುತ್ತದೆ.[೨೦]

ಅರಿವಿನ ಪ್ರಭಾವಗಳು

[ಬದಲಾಯಿಸಿ]

ಕೋಪವು ಹೆಚ್ಚು ಆಶಾವಾದದಿಂದ ಯೋಚಿಸುವಂತೆ ಮಾಡುತ್ತದೆ. ಅಪಾಯಗಳು ಸಣ್ಣದಾಗಿ ಕಾಣುತ್ತವೆ, ಕ್ರಿಯೆಗಳು ಕಡಿಮೆ ಅಪಾಯವನ್ನುಂಟುಮಾಡುವಂತೆ ಗೋಚರಿಸುತ್ತವೆ, ಸಾಹಸಗಳಲ್ಲಿ ತುಂಬಾ ಸುಲಭವಾಗಿ ಯಶಸ್ಸಾಗಬಹುದೆಂಬಂತೆ ಕಾಣುತ್ತವೆ, ದುರದೃಷ್ಟ ಘಟನೆಗಳು ಕಡಿಮೆ ಪರಿಣಾಮವನ್ನು ಹೊಂದಿರುವಂತೆ ಗೋಚರವಾಗುತ್ತವೆ. ಕೋಪಗೊಂಡವರು ಹೆಚ್ಚಾಗಿ ಅಪಾಯಕಾರಿ ನಿರ್ಧಾರಗಳನ್ನು ಹಾಗೂ ಆಶಾವಾದಿ ಗಂಡಾಂತರದ ನಿರ್ಣಯಗಳನ್ನು ಮಾಡುತ್ತಾರೆ. ಅಧ್ಯಯನವೊಂದರಲ್ಲಿ ಪರಿಶೀಲನೆಗಳು, ಭಯಗ್ರಸ್ತರಿಗೆ ಹೋಲಿಸಿದರೆ ಕೋಪವನ್ನು ಅನುಭವಿಸುವವರು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ಸಂಭವವನ್ನು ಕಡಿಮೆ ಹೊಂದಿರುತ್ತಾರೆ ಹಾಗೂ ಅವರು ಹೆಚ್ಚು ಕಾಲ ದುಡಿಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ತೋರಿಸಿಕೊಟ್ಟಿವೆ.[೨೧] ಈ ಕಲ್ಪನೆಯು ಸಿಂಹಾವಲೋಕನರೂಪದ ಆಲೋಚನೆಯಲ್ಲೂ ರುಜುವಾತುಪಡಿಸುತ್ತದೆ: 2005ರ ಅಧ್ಯಯನವೊಂದರಲ್ಲಿ, ಭಯಗ್ರಸ್ತ ಮತ್ತು ತಟಸ್ಥ ಜನರು ಯೋಚಿಸಿದುದಕ್ಕೆ ಹೋಲಿಸಿದರೆ ಕೋಪಗೊಂಡ ಜನರು 9/11ರ ನಂತರದ ವರ್ಷದ ಭಯೋತ್ಪಾದನೆಯ ಅಪಾಯಗಳು ಸಿಂಹಾವಲೋಕನ ಮಾಡಿದಾಗ ಕಡಿಮೆಯಾಗಿ ಆಲೋಚಿಸಿದ್ದೆವೆಂದು ಹೇಳಿದ್ದಾರೆ.[೨೨]

ಅಂತರ-ಸಮೂಹ ಸಂಬಂಧಗಳಲ್ಲಿ, ಕೋಪವು ಹೊರಗಿನವರ ಬಗ್ಗೆ ಹೆಚ್ಚು ಋಣಾತ್ಮಕ ಮತ್ತು ಪೂರ್ವಕಲ್ಪಿತ ಭಾವನೆಯಲ್ಲಿ ಯೋಚಿಸುವಂತೆ ಮಾಡುತ್ತದೆ. ಕೋಪವು ಹೊರಗಿನವರನ್ನು ಕಡಿಮೆ ನಂಬುವಂತೆ ಮಾಡುತ್ತದೆ ಮತ್ತು ಅವರಿಗೆ ಉತ್ತಮ ಗುಣಗಳನ್ನು ತೋರಿಸುವುದನ್ನು ನಿಧಾನಗೊಳಿಸುತ್ತದೆ.[೨೩]

ಗುಂಪೊಂದು ವಿರೋಧಿ ಗುಂಪಿನೊಂದಿಗೆ ಸಂಘರ್ಷವನ್ನು ಹೊಂದಿರುವಾಗ, ಅದು ರಾಜಕೀಯವಾಗಿ ಪ್ರಬಲ ಗುಂಪಾಗಿದ್ದರೆ ಹೆಚ್ಚು ಕೋಪಕ್ಕೆ ಒಳಗಾಗುತ್ತದೆ; ಹಾಗೂ ಆ ಗುಂಪು ದುರ್ಬಲವಾಗಿದ್ದರೆ ಕಡಿಮೆ ಕೋಪವನ್ನು ಅನುಭವಿಸುತ್ತದೆ.[೨೪]

ದುಃಖ ಮತ್ತು ಭಯದಂತಹ ಋಣಾತ್ಮಕ ಭಾವನೆಗಳಿಗೆ ಭಿನ್ನವಾಗಿ, ಕೋಪಗೊಂಡವರು ಹೆಚ್ಚಾಗಿ ಹೋಲಿಕೆಯ ಒಲವನ್ನು ವ್ಯಕ್ತಪಡಿಸುತ್ತಾರೆ - ಅಂದರೆ ಒಬ್ಬನ ವರ್ತನೆಯನ್ನು ಆತನ ಪರಿಸ್ಥಿತಿಗಿಂತ ಹೆಚ್ಚು ಆತನ ಗುಣಲಕ್ಷಣದ ಆಧಾರದಲ್ಲಿ ನಿಂದಿಸುವ ಪ್ರವೃತ್ತಿ. ಅವರು ರೂಢಮಾದರಿಯನ್ನು ಹೆಚ್ಚು ಅವಲಂಬಿಸುತ್ತಾರೆ ಹಾಗೂ ವಿವರಗಳಿಗೆ ಕಡಿಮೆ ಗಮನವನ್ನು ಮತ್ತು ತೋರಿಕೆಗೆ ಹೆಚ್ಚು ಗಮನ ಹರಿಸುತ್ತಾರೆ. ಈ ವಿಷಯದಲ್ಲಿ, ಕೋಪವು ವಿಶ್ಲೇಷಕ ಚಿಂತೆಯನ್ನು ಪ್ರೇರೇಪಿಸುವ ದುಃಖ ಮತ್ತು ಭಯದಂತಹ ಇತರ "ಋಣಾತ್ಮಕ" ಭಾವನೆಗಳಿಗಿಂತ ಭಿನ್ನವಾಗಿದೆ.[೨೫]

ಕೋಪಗೊಂಡ ವ್ಯಕ್ತಿಯು ಆತನಿಗೆ ಸಿಟ್ಟನ್ನು ಬರಿಸಬಹುದಾದ ಇತರ ಘಟನೆಗಳನ್ನು ನಿರೀಕ್ಷಿಸಲು ಬಯಸುತ್ತಾನೆ. ಆತನು ದುಃಖ ಬರಿಸುವ ಘಟನೆಗಳಿಗಿಂತ (ಉದಾ. ಒಬ್ಬ ಉತ್ತಮ ಸ್ನೇಹಿತ ದೂರವಾಗುವುದು) ಕೋಪಕ್ಕೆ ಕಾರಣವಾಗುವ ಘಟನೆಗಳಿಗೆ (ಉದಾ. ದೋಷಯುಕ್ತ ಕಾರನ್ನು ಮಾರುವುದು) ಹೆಚ್ಚು ಬೆಲೆ ಕೊಡುತ್ತಾನೆ.[೨೬]

ಕೋಪಗೊಂಡ ವ್ಯಕ್ತಿಯು ಅವನ ದುಃಸ್ಥಿತಿಗಾಗಿ ಮತ್ತೊಬ್ಬನ ಮೇಲೆ ಹೆಚ್ಚು ಆರೋಪ ಹೊರಿಸಲು ಬಯಸುತ್ತಾನೆ. ಈ ಹೆಚ್ಚುವರಿ ಆರೋಪವು ಕೋಪಗೊಂಡ ವ್ಯಕ್ತಿಯು ಮತ್ತಷ್ಟು ಕೋಪಗೊಳ್ಳುವಂತೆ ಮಾಡುತ್ತದೆ, ಅದರಿಂದ ಆತನು ಮತ್ತೊಬ್ಬನ ಮೇಲೆ ಮತ್ತಷ್ಟು ಆರೋಪವನ್ನು ಹೊರಿಸುವಂತಾಗುತ್ತದೆ.

ಕೆಲವು ಭಾವನೆಗಳನ್ನು ಹೊಂದಿರುವಾಗ ವ್ಯಕ್ತಿಗಳು ಅಂತಹುದೇ ಭಾವನೆಯನ್ನು ಹೊಂದಿರುವ ಅಂಶಗಳಿಗೆ ಹೆಚ್ಚು ಗಮನ ಹರಿಸಲು ಬಯಸುತ್ತಾರೆ; ಹಾಗೆಯೇ ಅದು ಕೋಪಕ್ಕೂ ಸಂಬಂಧಿಸಿರುತ್ತದೆ. ಉದಾಹರಣೆಗಾಗಿ, ತೆರಿಗೆ ಏರಿಕೆಯ ಅವಶ್ಯಕವೆಂದು ಒಬ್ಬರಿಗೆ ಮನಗಾಣಿಸಲು ಪ್ರಯತ್ನಿಸುವಾಗ, ಆ ಸಂದರ್ಭದಲ್ಲಿ ಆ ವ್ಯಕ್ತಿಯು ಕೋಪಿಷ್ಟನಾಗಿದ್ದರೆ ದುಃಖ ತರುವ ವಾದಕ್ಕಿಂತ ("ಅನರ್ಹ ಮಕ್ಕಳಿಗೆ ಕಡಿಮೆ ಕಾಳಜಿಯ ಪ್ರಯೋಜನಗಳಿರುತ್ತವೆ"ಎಂಬ ಮಾತಿಗೆ ಪೂರಕವಾಗಿ) ಕೋಪವನ್ನು ಪ್ರಕಟಗೊಳಿಸುವ ವಾದವನ್ನು ("ಹೆಚ್ಚಿನ ಅಪರಾಧಿಗಳು ನ್ಯಾಯಾಲಯದಿಂದ ತಪ್ಪಿಸಿಕೊಳ್ಳುತ್ತಾರೆ") ಬಳಸುವುದು ಉತ್ತಮವಾಗಿರುತ್ತದೆ.[೨೭] ಎಲ್ಲಾ ನಿಷೇಧಾತ್ಮಕ ಘಟನೆಗಳನ್ನು ಕೇಂದ್ರೀಕರಿಸುವ ಇತರ ಋಣಾತ್ಮಕ ಭಾವನೆಗಳಿಗೆ ಭಿನ್ನವಾಗಿ, ಕೋಪವು ಕೇವಲ ಕೋಪವನ್ನು-ಬರಿಸುವ ಘಟನೆಗಳ ಮೇಲೆ ಮಾತ್ರ ಗಮನವನ್ನು ಹರಿಸುತ್ತದೆ.

ನಿರ್ವಹಣಾ ಚಾತುರ್ಯವಾಗಿ

[ಬದಲಾಯಿಸಿ]

ಇತರ ಭಾವನೆಗಳಂತೆ ಕೋಪ ವ್ಯಕ್ತಪಡಿಸುವಿಕೆಯು ಕಲ್ಪಿತವಾಗಿರಬಹುದು ಅಥವಾ ಉತ್ಪ್ರೇಕ್ಷಿತವಾಗಿರಬಹುದು. ಹಾಚ್ಸ್‌ಚೈಲ್ಡ್ ಮತ್ತು ಸುಟ್ಟನ್‌ರ ಅಧ್ಯಯನಗಳು, ಕೋಪದ ಅಭಿವ್ಯಕ್ತಿಯು ವರ್ತನೆಗಳನ್ನು ಬದಲಾಯಿಸಲು ಮತ್ತು ರೂಪಿಸಲು ಮಾಡುವ ಪರಿಣಾಮಕಾರಿ ಕುಶಲಬಳಕೆಯ ನಿರ್ವಹಣಾ ಚಾತುರ್ಯವಾಗಿದೆ ಎಂದು ತೋರಿಸಿಕೊಟ್ಟಿವೆ. ಕೋಪವು ಸಾಮಾಜಿಕ ಪ್ರಭಾವದ ಒಂದು ವಿಭಿನ್ನ ನಿರ್ವಹಣಾ ಚಾತುರ್ಯವಾಗಿದೆ. ಅದಲ್ಲದೇ ಗುರಿ ಸಾಧಿಸುವ ವಿಧಾನವಾಗಿ ಅದರ ಬಳಕೆಯು (ಅಂದರೆ ಜಗಳಗಂಟಿ ವರ್ತನೆಗಳು) ಯಶಸ್ವಿ ನಿರ್ವಹಣಾ ಚಾತುರ್ಯವೆಂಬುದನ್ನು ಸಾಬೀತುಪಡಿಸುತ್ತದೆ.[೧೦][೧೧]

ಕೋಪದ ಬಗೆಗಿನ ಅಧ್ಯಯನಗಳಿಗೆ ಹೆಸರುವಾಸಿಯಾದ ಲರಿಸ್ಸಾ ಟೈಡೆನ್ಸ್, ಭಾವನೆಗಳ ವ್ಯಕ್ತಪಡಿಸುವಿಕೆಯು ವ್ಯಕ್ತಪಡಿಸುವವರ ಅರಿವಿನ ಮೇಲೆ ಮಾತ್ರವಲ್ಲದೆ ಸಮಾಜದಲ್ಲಿನ ಅವರ ಪ್ರಬಲ ಸ್ಥಾನದ ಮೇಲೂ ಅಧಿಕ ಪ್ರಭಾವ ಬೀರುತ್ತದೆ ಎಂದು ನಿರೂಪಿಸಿದ್ದಾಳೆ. ಕೋಪದ ಅಭಿವ್ಯಕ್ತಿ ಮತ್ತು ಸಾಮಾಜಿಕ ಪ್ರಭಾವದ ಅರಿವಿನ ನಡುವಿನ ಪರಸ್ಪರ ಸಂಬಂಧದ ಬಗ್ಗೆ ಆಕೆ ಅಧ್ಯಯನ ಮಾಡಿದ್ದಾಳೆ. ಕೀಟಿಂಗ್‌ನಂತಹ ಹಿಂದಿನ ಸಂಶೋಧಕರು 1985ರಲ್ಲಿ, ಕೋಪಿಷ್ಟ ಮುಖಭಾವವನ್ನು ಹೊಂದಿರುವವರನ್ನು ಪ್ರಬಲ ವ್ಯಕ್ತಿಗಳಾಗಿ ಮತ್ತು ಉನ್ನತ ಸಾಮಾಜಿಕ ಸ್ಥಾನವನ್ನು ಹೊಂದಿರುವವರಾಗಿ ಕಾಣಲಾಗುತ್ತದೆ ಎಂದು ಕಂಡುಹಿಡಿದರು.[೨೮] ಅದೇ ರೀತಿ, ಕೋಪಗೊಂಡ ಮತ್ತು ದುಃಖಿತ ವ್ಯಕ್ತಿಗಳನ್ನೊಳಗೊಂಡ ವಿವರಗಳನ್ನು ಹೋಲಿಸಿದವರು ಕೋಪಿತ ವ್ಯಕ್ತಿಗಳು ಹೆಚ್ಚಿನ ಸಾಮಾಜಿಕ ಸ್ಥಾನಮಾನವನ್ನು ಹೊಂದಿರುವುದಾಗಿ ನಿರೂಪಿಸಿದ್ದಾರೆ ಎಂದು ಟೈಡೆನ್ಸ್ ಮತ್ತು ಇತರರು ಪ್ರಕಟಗೊಳಿಸಿದರು.[೨೯] ಕೋಪದ ವ್ಯಕ್ತಪಡಿಸುವಿಕೆಯು ಸ್ಥಾನದ ಗುಣಲಕ್ಷಣವನ್ನು ಉತ್ತೇಜಿಸುತ್ತದೆಯೇ ಎಂಬ ಬಗ್ಗೆ ಟೈಡೆನ್ಸ್ ಆಕೆಯ ಅಧ್ಯಯನದಲ್ಲಿ ಪರಿಶೀಲಿಸಿದಳು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಕೋಪವು ಇತರರ ವರ್ತನೆಗಳ ಗ್ರಹಿಕೆಯನ್ನು ಅಥವಾ ಕಾನೂನು ಸಮ್ಮತವಾಗಿಸುವಿಕೆಯನ್ನು ಉಂಟುಮಾಡುತ್ತದೆಯೇ ಎಂಬ ವಿಷಯ. ಕೋಪಗೊಂಡ ಅಥವಾ ದುಃಖಿತ ವ್ಯಕ್ತಿಯೊಂದಿಗೆ ಇದ್ದವರು ದುಃಖಿತ ವ್ಯಕ್ತಿಯ ಬದಲಿಗೆ ಕೋಪಗೊಂಡವನಿಗೆ ಬೆಂಬಲ ನೀಡಲು ಹೆಚ್ಚು ಒಲವು ತೋರಿದರು ಎಂದು ಆಕೆಯ ಆವಿಷ್ಕಾರಗಳು ಸ್ಪಷ್ಟವಾಗಿ ಸೂಚಿಸಿದವು. ಇದಕ್ಕೆ ಹೆಚ್ಚುವರಿಯಾಗಿ, ಇಂತಹ ನಿರ್ಧಾರಕ್ಕೆ ಕಾರಣವೆಂದರೆ ಕೋಪವನ್ನು ವ್ಯಕ್ತಪಡಿಸುವ ವ್ಯಕ್ತಿಯನ್ನು ಪ್ರಬಲ ಸಾಮರ್ಥ್ಯವನ್ನು ಹಾಗೂ ಕೆಲವು ಸಾಮಾಜಿಕ ಸ್ಥಾನಮಾನವನ್ನು ಹೊಂದಿರುವವನೆಂದು ತಿಳಿಯಲಾಗುವುದು.[೨೮]

ಸಮಾಲೋಚನೆಯ ಸಂದರ್ಭದಲ್ಲಿ ಕೋಪವನ್ನು ಅಭಿವ್ಯಕ್ತಿಪಡಿಸುವುದು ಕೋಪವನ್ನು-ವ್ಯಕ್ತಪಡಿಸುವವನ ಗೆಲ್ಲುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕೋಪ ವ್ಯಕ್ತಪಡಿಸುವವರನ್ನು ಹಠಮಾರಿ, ಪ್ರಬಲ ಮತ್ತು ಶಕ್ತಿಯುತ ವ್ಯಕ್ತಿಗಳೆಂದು ತಿಳಿಯಲಾಗುತ್ತದೆಂದು ಟೈಡೆನ್ಸ್ ಮತ್ತು ಇತರರ ಅಧ್ಯಯನವೊಂದು ಸೂಚಿಸಿದೆ. ಇದಕ್ಕೆ ಹೆಚ್ಚುವರಿಯಾಗಿ, ಮೃದು ಮತ್ತು ನಮ್ರ ವ್ಯಕ್ತಿಗಳ ಬದಲಿಗೆ ಜನರು ಪ್ರಬಲ ಮತ್ತು ಹಠಮಾರಿಗಳೆಂದು ತಿಳಿಯಲಾದವರಿಗೆ ಹೆಚ್ಚು ಸುಲಭವಾಗಿ ಬಿಟ್ಟುಕೊಡುತ್ತಾರೆ ಎಂಬುದನ್ನು ಕಂಡುಹಿಡಿಯಲಾಗಿದೆ.[೨೯] ಈ ಆವಿಷ್ಕಾರಗಳ ಆಧಾರದಲ್ಲಿ ಸಿನಾಸ್ಯುರ್ ಮತ್ತು ಟೈಡೆನ್ಸ್, ಜನರು ಕೋಪಗೊಳ್ಳದರಿಗಿಂತ ಕೋಪಿತ ವ್ಯಕ್ತಿಗಳನ್ನು ಹೆಚ್ಚು ಅನುಮೋದಿಸುತ್ತಾರೆ ಎಂಬುದನ್ನು ಕಂಡುಹಿಡಿದರು.[೩೦]

ಈ ಆವಿಷ್ಕಾರಗಳ ಆಧಾರದಲ್ಲಿ ವ್ಯಾನ್ ಕ್ಲೀಫ್ ಮತ್ತು ಇತರರಲ್ಲಿ ಕಂಡುಬಂದ ಒಂದು ಪ್ರಶ್ನೆಯೆಂದರೆ ಭಾವನೆಯ ವ್ಯಕ್ತಪಡಿಸುವಿಕೆಯು ಬೇರೆಯವರ ಮೇಲೆ ಪ್ರಭಾವ ಬೀರುತ್ತದೆಯೇ, ಏಕೆಂದರೆ ಜನರು ಇತರರ ಮಿತಿಗಳನ್ನು ತರ್ಕಿಸಲು ಭಾವನಾತ್ಮಕ ಅಂಶವನ್ನು ಬಳಸುತ್ತಾರೆ, ಮತ್ತು ಅವರ ಬೇಡಿಕೆಗಳನ್ನು ಸಂಧಾನದಲ್ಲಿ ಸರಿಹೊಂದಿಸುತ್ತಾರೆ ಎಂಬುದು ತಿಳಿದುಬಂದಿದೆ. ವ್ಯಾನ್ ಕ್ಲೀಫ್ ಮತ್ತು ಇತರರು, ಜನರು ಕೋಪಿತ ವಿರೋಧಿಗೆ ಹೆಚ್ಚು ಸುಲಭವಾಗಿ ಬಿಟ್ಟುಕೊಡುತ್ತಾರೆಯೇ ಅಥವಾ ಸಂತೋಷದಿಂದಿರುವ ವಿರೋಧಿಗೆ ಸುಲಭವಾಗಿ ಬಿಟ್ಟುಕೊಡುತ್ತಾರೆಯೇ ಎಂಬುದನ್ನು ಪರಿಶೋಧಿಸಲು ಬಯಸಿದರು. ಆವಿಷ್ಕಾರಗಳು ಜನರು ಸಂತೋಷದಿಂದಿರುವ ವಿರೋಧಿಗೆ ಹೋಲಿಸಿದರೆ ಕೋಪಿತ ವಿರೋಧಿಗೆ ಹೆಚ್ಚು ಸುಲಭವಾಗಿ ಬಾಗುತ್ತಾರೆಂದು ತೋರಿಸಿಕೊಟ್ಟವು. ಈ ಫಲಿತಾಂಶಗಳು, ಜನರು ವಿರೋಧಿಗಳ ಮಿತಿಗಳ ಬಗ್ಗೆ ನಿರ್ಧರಿಸಲು ಮತ್ತು ನಿರ್ಣಯಗಳನ್ನು ಮಾಡಲು ಅವರ ಭಾವನೆಯನ್ನು ವಿಶ್ಲೇಷಿಸುತ್ತಾರೆ ಎಂಬ ವಾದವನ್ನು ಪ್ರಬಲಗೊಳಿಸಿದವು.[೩೧]

ನಿಭಾಯಿಸುವ ನಿರ್ವಹಣಾ ಚಾತುರ್ಯ

[ಬದಲಾಯಿಸಿ]

ಲೆಲ್ಯಾಂಡ್ R. ಬಿಯಾಮಂಟ್‌ನ ಪ್ರಕಾರ, ಕೋಪಗೊಂಡ ಪ್ರತಿಯೊಬ್ಬನೂ ಆಯ್ಕೆ ಮಾಡಿಕೊಂಡು ತಗಾದೆ ಮಾಡುತ್ತಾನೆ.[೩೨] ಕೋಪಿತ ವ್ಯಕ್ತಿಯು ಪ್ರಕಟ ಹಿಂಸೆಯನ್ನು ಒಳಗೊಂಡಂತೆ ಪ್ರತಿಕೂಲ ಕ್ರಿಯೆಯೊಂದಿಗೆ ಪ್ರತಿಕ್ರಿಯಿಸಬಹುದು ಅಥವಾ ವಿರುದ್ಧವಾದ ನಿಷ್ಕ್ರಿಯತೆಯೊಂದಿಗೆ ಪ್ರತಿಕ್ರಿಯೆ ನೀಡಬಹುದು, ಉದಾಹರಣೆಗಾಗಿ ಹಿಂದಕ್ಕೆ ಸರಿಯುವುದು ಅಥವಾ ನುಣುಚಿಕೊಳ್ಳುವ ಮೂಲಕ ಅಡ್ಡಿಪಡಿಸುವುದು. ಇತರ ಆಯ್ಕೆಗಳೆಂದರೆ - ಪ್ರಾಬಲ್ಯತೆಯ ಪೈಪೋಟಿ ನಡೆಸುವುದು; ಗೋಪ್ಯವಾಗಿ ಮುನಿಸುತೋರುವುದು; ಅಥವಾ ಸಮಸ್ಯೆಯನ್ನು ಚೆನ್ನಾಗಿ ಅರ್ಥೈಸಲು ಮತ್ತು ರಚನಾತ್ಮಕವಾಗಿ ಪರಿಹರಿಸಲು ಪ್ರಯತ್ನಿಸುವುದು.

R. ನೊವ್ಯಾಕೊ ಪ್ರಕಾರ, ಕೋಪವು ಕೆರಳಿಸುವಿಕೆಯ ಒಂದು ಭಾವನಾತ್ಮಕ ಪ್ರತಿಕ್ರಿಯೆಯಾಗಿದೆ. R. ನೊವ್ಯಾಕೊ ಮೂರು ರೀತಿಯ ಕೋಪಗಳನ್ನು ಗುರುತಿಸಿದ್ದಾನೆ: ಅರಿವಿನ (ಮೌಲ್ಯ ನಿರ್ಣಯಿಸುವುದು), ಶಾರೀರಿಕ-ಭಾವಾತ್ಮಕ (ಉದ್ವೇಗ ಮತ್ತು ತಳಮಳ) ಹಾಗೂ ನಡವಳಿಕೆ (ಹಿಂದಕ್ಕೆ ಸರಿಯುವುದು ಮತ್ತು ವಿರೋಧ) ಈ ಭಾವನೆಯೊಂದಿಗೆ ನಿಭಾಯಿಸುವ ಪ್ರಯತ್ನದಲ್ಲಿ ಹಲವಾರು ಹಂತಗಳಿವೆ ಎಂದು ಸಂಶೋಧಿಸಲಾಗಿದೆ. ಕೋಪವನ್ನು ನಿರ್ವಹಿಸಲು ಅದರಲ್ಲಿ ಅಡಕವಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕೆಂದು ನೊವ್ಯಾಕೊ ಸೂಚಿಸುತ್ತಾನೆ. ಮೊದಲು ಕೋಪಕ್ಕೆ ಕಾರಣವಾಗುವ ಸ್ಥಿತಿಗಳನ್ನು ಆ ವ್ಯಕ್ತಿಯು ಪರಿಶೋಧಿಸಬೇಕು. ನಂತರ ಆತನು ಇತ್ತೀಚಿನ ಕೋಪದ ಅನುಭವಗಳಿಂದ ಕಲ್ಪನೆ-ಆಧಾರದ ನೆಮ್ಮದಿಯನ್ನು ಪಡೆಯಲು ಪ್ರಯತ್ನಿಸಬೇಕು.[][೩೩]

ಕೋಪದ ಆಧುನಿಕ ಚಿಕಿತ್ಸೆಗಳು ಕೋಪದಲ್ಲಿ ಕಾರಣವನ್ನು ಕಡಿಮೆ ಮಾಡಲು ಆಲೋಚನೆ ಮತ್ತು ನಂಬಿಕೆಗಳ ಪುನಃರೂಪಿಸುವುದನ್ನು ಒಳಗೊಳ್ಳುತ್ತದೆ. ಈ ಚಿಕಿತ್ಸೆಗಳು ಹೆಚ್ಚಾಗಿ REBT (ರೇಷನಲ್ ಇಮೋಟಿವ್ ಬಿಹೇವಿಯರ್ ಥೆರಪಿ)ಯಂತಹ ಆಧುನಿಕ ವ್ಯವಸ್ಥೆಗಳಂತೆ CBT (ಅಥವಾ ಕಾಗ್ನಿಟಿವ್ ಬೆಹೇವಿಯರಲ್ ಥೆರಪೀಸ್)ಯ ಶಾಲೆಗಳಲ್ಲಿ ಕಂಡುಬರುತ್ತವೆ. ವಿಪರೀತ ಕೋಪದಿಂದ ನರಳುವವನು ಹೆಚ್ಚಾಗಿ ಅಸಾಮಾನ್ಯ ಕಾರ್ಯದ ಗುಣಲಕ್ಷಣಗಳು, ಕಲ್ಪನೆಗಳು ಮತ್ತು ಯೋಗ್ಯತೆ ನಿರ್ಣಯಗಳಲ್ಲಿ ವರ್ತಿಸುತ್ತಾನೆ ಎಂದು ಸಂಶೋಧನೆಯು ತೋರಿಸುತ್ತದೆ. ತರಬೇತಿ ಪಡೆದ ವೃತ್ತಿಪರರಿಂದ ಪಡೆಯುವ ಚಿಕಿತ್ಸೆಯಿಂದ ವ್ಯಕ್ತಿಗಳು ತಮ್ಮ ಕೋಪವನ್ನು ಹೆಚ್ಚು ಹತೋಟಿಯಲ್ಲಿಟ್ಟುಕೊಳ್ಳುವ ಮಟ್ಟಕ್ಕೆ ತಂದುಕೊಳ್ಳಬಹುದೆಂದು ಕಂಡುಹಿಡಿಯಲಾಗಿದೆ.[೩೪] ಈ ಚಿಕಿತ್ಸೆಯ ನಂತರ "ಒತ್ತಡ ಚುಚ್ಚುಮದ್ದು(ಇನಾಕ್ಯುಲೇಷನ್)" ಎನ್ನುವುದನ್ನು ಅನುಸರಿಸಲಾಗುತ್ತದೆ, ಇದರಲ್ಲಿ ಕೋಪಗೊಂಡವರಿಗೆ "ಅವರ ಪ್ರಚೋದನೆಯನ್ನು ನಿಯಂತ್ರಿಸಲು ಸಮಾಧಾನಗೊಳ್ಳುವ ಕೌಶಲಗಳನ್ನು ಹಾಗೂ ಅವರ ಗಮನ, ಆಲೋಚನೆಗಳು, ಕಲ್ಪನೆಗಳು ಮತ್ತು ಭಾವನೆಗಳಲ್ಲಿ ಶಿಕ್ಷಣ ನೀಡಲು ಅನೇಕ ಅರಿವಿನ ನಿಯಂತ್ರಣಗಳನ್ನು ಕಲಿಸಿಕೊಡಲಾಗುತ್ತದೆ. ಅವರಿಗೆ ಅನೇಕ ಹಂತಗಳಲ್ಲಿ ಕಂಡುಬರುವ ಕೆರಳಿಸುವಿಕೆ ಮತ್ತು ಕೋಪವನ್ನು ಗಮನಿಸುವಂತೆ ಮತ್ತು ಪ್ರತಿಯೊಂದನ್ನು ಪರಿಹರಿಸುವ ವಿಧಾನವನ್ನು ತಿಳಿಸಿಕೊಡಲಾಗುತ್ತದೆ."[]

ತಡೆಹಿಡಿಯುವುದು

[ಬದಲಾಯಿಸಿ]

ಕೋಪದ ತಡೆಹಿಡಿಯುವಿಕೆಯು ಹಾನಿಕರ ಪರಿಣಾಮಗಳನ್ನು ಹೊಂದಿರಬಹುದೆಂದು ಆಧುನಿಕ ಮನಶ್ಶಾಸ್ತ್ರಜ್ಞರು ಸೂಚಿಸುತ್ತಾರೆ. ತಡೆಹಿಡಿದ ಕೋಪವು ದೈಹಿಕ ಲಕ್ಷಣಗಳಂತಹ ಮತ್ತೊಂದು ರೀತಿಯ ಪರಿಣಾಮವನ್ನು ಉಂಟುಮಾಡಬಹುದು ಅಥವಾ ಹೆಚ್ಚು ತೀವ್ರವಾಗಬಹುದು.[][೩೫] 1992ರ ಲಾಸ್ ಏಂಜಲೀಸ್ ದಂಗೆಗಳು ತಡೆಹಿಡಿದ ಕೋಪದ ತಕ್ಷಣದ ಸ್ಫೋಟಕ ರೀತಿಯ ವ್ಯಕ್ತಪಡಿಸುವಿಕೆಗೆ ಒಂದು ಉದಾಹರಣೆಯಾಗಿದೆ ಎಂದು ಜಾನ್ W. ಫಿಯೆರೊ ಹೇಳುತ್ತಾನೆ. ಆ ಕೋಪವು ನಂತರ ಆ ವಿಷಯಕ್ಕೆ ಸಂಬಂಧಿಸಿದಂತೆ ಏನನ್ನೂ ಮಾಡದವರ ವಿರುದ್ಧ ಹಿಂಸೆಯಾಗಿ ಪರಿವರ್ತನೆಯಾಯಿತು. ಕೋಪವು ಅದರ ನೈಜ ಕಾರಣದಿಂದ ಬೇರೆಯವರನ್ನು ಅದಕ್ಕೆ ಬಲಿಪಶು ಮಾಡುವತ್ತ ವಾಲಿದುದಕ್ಕೆ ಮತ್ತೊಂದು ಉದಾಹರಣೆಯೆಂದರೆ ನಾಜಿಗಳು ಜರ್ಮನಿಯ ಆರ್ಥಿಕ ಹಾನಿಗೆ ಯೆಹೂದಿಗಳನ್ನು ದೂರಿದುದು.[]

ತಡೆದಿಟ್ಟ ಕೋಪದ "ಹಿಡಿತ ಸಡಿಲಿಸುವಿಕೆಯು" ಆಕ್ರಮಣಶೀಲತೆಯನ್ನು ಕಡಿಮೆ ಮಾಡುತ್ತದೆಂದು ಸೂಚಿಸುವ ಆಕ್ರಮಣಶೀಲತೆಯ "ರೇಚನ ಅಧ್ಯಯನ"ವನ್ನು ಮನಶ್ಶಾಸ್ತ್ರಜ್ಞರು ಟೀಕಿಸಿದ್ದಾರೆ.[೩೬]

ಉಭಯ ಮಿತಿ ಮಾದರಿ

[ಬದಲಾಯಿಸಿ]

ಕೋಪ ವ್ಯಕ್ತಪಡಿಸುವಿಕೆಯು ವ್ಯಕ್ತಿಗಳಿಗೆ ಮಾತ್ರವಲ್ಲದೆ ಸಂಸ್ಥೆಗಳಿಗೂ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ, ಉದಾಹರಣೆಗಾಗಿ, ಉತ್ಪಾದಕತೆಯು ಕುಂಠಿತಗೊಳ್ಳುತ್ತದೆ.[೩೭] ಅಲ್ಲದೇ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಇದು ಧನಾತ್ಮಕ ಪರಿಣಾಮಗಳನ್ನೂ ಹೊಂದಿದೆ, ಉದಾಹರಣೆಗಾಗಿ, ಕೆಲಸದ ಆಸಕ್ತಿ ಹೆಚ್ಚುತ್ತದೆ, ಸಂಬಂಧಗಳು ಸುಧಾರಿಸುತ್ತವೆ, ಪರಸ್ಪರ ಸಾಮರಸ್ಯ ಹೆಚ್ಚುತ್ತದೆ, ಇತ್ಯಾದಿ (ಉದಾ. ಟೈಡೆನ್ಸ್, 2000[೩೮]). ಗೆಡ್ಡೆಸ್ ಮತ್ತು ಕ್ಯಾಲಿಸ್ಟರ್‌ರ ಸಂಸ್ಥೆಗಳಲ್ಲಿ ಕೋಪದ ಉಭಯ ಮಿತಿಗಳ ಮಾದರಿಯು (2007) ಕೋಪ ವ್ಯಕ್ತಪಡಿಸುವಿಕೆಯ ಪರಿಣಾಮಗಳ ಬಗೆಗಿನ ವಿವರಣೆಯನ್ನು ಒದಗಿಸುತ್ತದೆ. ಸಾಂಸ್ಥಿಕ ರಚನೆಗಳು ಭಾವನೆಯ ಮಿತಿಗಳನ್ನು ಸ್ಥಾಪಿಸುತ್ತವೆ, ಉದ್ಯೋಗಿಗಳು ಕೋಪವನ್ನು ಅನುಭವಿಸಿದಾಗ ಅವುಗಳನ್ನು ಮೀರುತ್ತಾರೆ ಎಂದು ಈ ಮಾದರಿಯು ಸೂಚಿಸುತ್ತದೆ. ಸಂಸ್ಥೆಯೊಂದರ ಸದಸ್ಯನು ಕೋಪ-ಬರಿಸುವ ಸ್ಥಿತಿಯೊಂದಿಗೆ ಸಂಬಂಧಿಸಿದ ಅಥವಾ ಅದನ್ನು ಹೇಳಬಹುದಾದ ವ್ಯಕ್ತಿಗಳ ಬಗ್ಗೆ ಕೋಪಗೊಂಡಿದುದನ್ನು ವ್ಯಕ್ತಪಡಿಸಿದಾಗ ಮೊದಲ "ಅಭಿವ್ಯಕ್ತಿ ಮಿತಿ"ಯನ್ನು ಮೀರಿಸಲಾಗುತ್ತದೆ. ಸಂಸ್ಥೆಯೊಂದರ ಸದಸ್ಯರು ವ್ಯಕ್ತಪಡಿಸಿದ ಕೋಪವನ್ನು ವೀಕ್ಷಕರು ಮತ್ತು ಇತರ ಕಂಪೆನಿಯ ಉದ್ಯೋಗಿಗಳು ಸಾಮಾಜಿಕವಾಗಿ ಮತ್ತು/ಅಥವಾ ಸಾಂಸ್ಕೃತಿಕವಾಗಿ ಅಸಮಂಜಸವಾದುದೆಂದು ಗುರುತಿಸಿದಾಗ ಎರಡನೇ "ಅನುಚಿತ ಮಿತಿ"ಯನ್ನು ಮೀರಲಾಗುತ್ತದೆ.

ಕೆಲಸದ ಸ್ಥಳದಲ್ಲಿನ ಕೋಪದ ಋಣಾತ್ಮಕ ಪರಿಣಾಮಗಳ ಹೆಚ್ಚಿನ ಸಂಭಾವ್ಯತೆಯು ಎರಡು ಸ್ಥಿತಿಗಳಲ್ಲಿ ಕಂಡುಬರಬಹುದು. ಮೊದಲನೆಯದೆಂದರೆ ಸಂಸ್ಥೆಯ ಸದಸ್ಯರು ಅವರ ಕೋಪವನ್ನು ವ್ಯಕ್ತಪಡಿಸುವ ಬದಲಿಗೆ ತಡೆಹಿಡಿದಿಟ್ಟುಕೊಳ್ಳುವುದು - ಅಂದರೆ "ಅಭಿವ್ಯಕ್ತಿ ಮಿತಿ"ಯನ್ನು ಮೀರಿಸಲು ವಿಫಲರಾಗುವುದು. ಈ ಸಂದರ್ಭದಲ್ಲಿ ಕೋಪ-ಬರಿಸುವ ಸ್ಥಿತಿ ಅಥವಾ ಘಟನೆಯ ಬಗ್ಗೆ ತಿಳಿದಿರುವ ಅಥವಾ ಪರಿಹರಿಸುವ ಸಾಮರ್ಥ್ಯವನ್ನು ಹೊಂದಿರುವ ಉದ್ಯೋಗಿಗಳು ಪ್ರಭಾವಕ್ಕೆ ಒಳಗಾದ ವ್ಯಕ್ತಿಗಳನ್ನೂ ಸೇರಿಸಿಕೊಂಡು ಸಮಸ್ಯೆಯ ಬಗ್ಗೆ ಗಮನವಿಲ್ಲದಂತೆ ಇದ್ದು, ಅದು ಮುಂದುವರಿಯಲು ಅವಕಾಶ ಮಾಡಿಕೊಡುತ್ತಾರೆ. ಎರಡನೆಯದು ಸಂಸ್ಥೆಯ ಸದಸ್ಯರು ಎರಡೂ ಮಿತಿಗಳನ್ನು ದಾಟಿದರೆ ಕಂಡುಬರುತ್ತದೆ - ಇದನ್ನು "ಜೋಡಿ ಮೀರಿಸುವಿಕೆ" ಎನ್ನಲಾಗುತ್ತದೆ, ವಕ್ರವೆಂದು ತಿಳಿಯಲಾಗುವ ರೀತಿಯಲ್ಲಿ ಕೋಪವನ್ನು ವ್ಯಕ್ತಪಡಿಸುವುದು. ಅಂತಹ ಸಂದರ್ಭಗಳಲ್ಲಿ, ಕೋಪಿತ ವ್ಯಕ್ತಿಯನ್ನು ಸಮಸ್ಯೆಯೆಂದು ಪರಿಗಣಿಸಲಾಗುತ್ತದೆ - ಆರಂಭಿಕ ಕೋಪ-ಬರಿಸುವ ಘಟನೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸುವಾಗ ಆತನ ವಿರುದ್ಧ ಸಂಸ್ಥೆಯ ನಿರ್ಬಂಧವನ್ನು ಹೇರುವ ಅವಕಾಶಗಳನ್ನು ಹೆಚ್ಚಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಕೆಲಸದ ಸ್ಥಳದಲ್ಲಿ ಕೋಪವನ್ನು ವ್ಯಕ್ತಪಡಿಸುವುದರ ಧನಾತ್ಮಕ ಪರಿಣಾಮಗಳ ಸಂಭಾವ್ಯತೆಯು, ಒಬ್ಬನ ಕೋಪ ಸ್ವಭಾವ ವ್ಯಕ್ತಪಡಿಸುವಿಕೆಯು ಅಭಿವ್ಯಕ್ತಿ ಮತ್ತು ಅನುಚಿತ ಮಿತಿಗಳ ನಡುವಿನ ಅವಕಾಶದಲ್ಲಿ ಉಳಿದಾಗ ಕಂಡುಬರುತ್ತದೆ. ಇಲ್ಲಿ ಒಬ್ಬನು ಕೋಪವನ್ನು ಸಂಸ್ಥೆಯ ಉಳಿದ ಸದಸ್ಯರು ಸ್ವೀಕರಿಸುವ ರೀತಿಯಲ್ಲಿ, ಚರ್ಚೆಗಳಿಗೆ ಮತ್ತು ಭಾವನೆಗಳ ವಿನಿಮಯಕ್ಕೆ ಅವಕಾಶ ಮಾಡಿಕೊಡುವ ರೀತಿಯಲ್ಲಿ ವ್ಯಕ್ತಪಡಿಸುತ್ತಾನೆ. ಇದು ಸಮಸ್ಯೆಗಳನ್ನು ಒಳಗೊಳ್ಳುವ ಎಲ್ಲರಿಗೆ ಸಮ್ಮತವಾಗುವಂತೆ ಪರಿಹರಿಸಲು ಸಹಾಯ ಮಾಡುತ್ತದೆ. ಈ ಮಿತಿಗಳ ನಡುವಿನ ಅವಕಾಶವು ಬೇರೆ ಬೇರೆ ಸಂಸ್ಥೆಗಳಲ್ಲಿ ಬೇರೆ ಬೇರೆಯಾಗಿರುತ್ತದೆ ಹಾಗೂ ಒಂದು ಸಂಸ್ಥೆಯೊಳಗೇ ವ್ಯತ್ಯಾಸಗೊಳ್ಳಬಹುದು: ಕೋಪದ ವ್ಯಕ್ತಪಡಿಸುವಿಕೆಯನ್ನು ಬೆಂಬಲಿಸಲು ಬದಲಾವಣೆಯನ್ನು ನಿರ್ದೇಶಿಸಿದಾಗ ಮಿತಿಗಳ ನಡುವಿನ ಅವಕಾಶವು ವಿಸ್ತರಿಸಲ್ಪಡುತ್ತದೆ ಮತ್ತು ಅಂತಹ ಅಭಿವ್ಯಕ್ತಿಗಳನ್ನು ತಡೆಹಿಡಿಯಲು ಬದಲಾವಣೆಯನ್ನು ನಿರ್ದೇಶಿಸಿದಾಗ ಆ ಅವಕಾಶವು ಕಡಿಮೆಯಾಗುತ್ತದೆ.[೩೯]

ನರಶಾಸ್ತ್ರ

[ಬದಲಾಯಿಸಿ]

ಕೋಪದ ನ್ಯೂರೊಇಮೇಜಿಂಗ್ ಅಧ್ಯಯನದಲ್ಲಿ, ಮಿದುಳಿನ ಹೆಚ್ಚು ದೃಢವಾಗಿ ಸಕ್ರಿಯಗೊಳ್ಳುವ ಭಾಗವೆಂದರೆ ಸಾರ್ಶ್ವದ ಆರ್ಬಿಟೊಫ್ರಂಟಲ್ ಕಾರ್ಟೆಕ್ಸ್ ಎಂದು ಕಂಡುಹಿಡಿಯಲಾಗಿದೆ.[೪೦] ಈ ಭಾಗವು ಪ್ರಚೋದನೆ ಮತ್ತು ಧನಾತ್ಮಕ ಭಾವನಾತ್ಮಕ ಕ್ರಿಯೆಗಳನ್ನು ಸಾಧಿಸುವುದರೊಂದಿಗೆ ಸಂಬಂಧಿಸಿದೆ.[೪೧]

ಶರೀರಶಾಸ್ತ್ರ

[ಬದಲಾಯಿಸಿ]
ಇಬ್ಬರು ದೇವರ ಅಸ್ತಿತ್ವದ ಬಗ್ಗೆ ಚರ್ಚಿಸುತ್ತಿರುವುದು.ಇಬ್ಬರು ಪ್ರತಿಭಟನಕಾರರು ಕೋಪಗೊಂಡು, ಆಕ್ರಮಣಶೀಲರಾಗಿರುವುದು ಅವರ ಆಂಗಿಕ ವರ್ತನೆ ಮತ್ತು ಮುಖಭಾವಗಳಿಂದ ತಿಳಿಯುತ್ತದೆ.ಕೋಪದ ವ್ಯಕ್ತಪಡಿಸುವಿಕೆಯನ್ನು ಕೇಳಲು, ಈ ಕೆಳಗಿನ ಆಡಿಯೊ ಕೇಳಿ.
ಕೋಪವನ್ನು ಪ್ರತಿಭಟನೆಯ ರೂಪದಲ್ಲಿ ವ್ಯಕ್ತಪಡಿಸುವುದರ ಆಡಿಯೊ ಫೈಲ್ .

ಕೋಪದ ಬಾಹ್ಯ ಅಭಿವ್ಯಕ್ತಿಯು ಮುಖಭಾವ, ಆಂಗಿಕ ವರ್ತನೆ, ಮಾನಸಿಕ ಪ್ರತಿಕ್ರಿಯೆಗಳಲ್ಲಿ ಮತ್ತು ಆಕ್ರಮಣಶೀಲ ಸಾರ್ವಜನಿಕ ವರ್ತನೆಗಳಲ್ಲಿ ಕಂಡುಬರುತ್ತದೆ.[] ಮುಖಭಾವಗಳು ಮತ್ತು ಆಂಗಿಕ ವರ್ತನೆಗಳು ಈ ಕೆಳಗಿನಂತಿರುತ್ತವೆ:[] ಮುಖದ ಮತ್ತು ಅಸ್ಥಿಪಂಜರದ ಸ್ನಾಯು ವ್ಯವಸ್ಥೆಯು ಹೆಚ್ಚು ಪ್ರಬಲವಾಗಿ ಕೋಪದ ಪ್ರಭಾವಕ್ಕೆ ಒಳಗಾಗುತ್ತದೆ. ಮುಖವು ಕೆಂಪೇರುತ್ತದೆ. ಅಲ್ಲದೇ ಹುಬ್ಬಿನ ಸ್ನಾಯುಗಳು ಒಳಕ್ಕೆ ಮತ್ತು ಕೆಳಕ್ಕೆ ಸರಿಯುತ್ತವೆ. ಈ ರೀತಿ ಮಾಡಿಕೊಂಡು ಕೋಪವನ್ನುಂಟುಮಾಡಿದವರ ಮೇಲೆ ಬಿರುನೋಟ ಬೀರುತ್ತಾರೆ. ಮೂಗಿನ ಹೊಳ್ಳೆಗಳನ್ನು ಕೆರಳಿಸಿಕೊಂಡು, ದವಡೆಯನ್ನು ಬಲವಾಗಿ ಕಚ್ಚಿಹಿಡಿದುಕೊಳ್ಳುತ್ತಾರೆ. ಇದು ಹುಟ್ಟಿನಿಂದ ಬರುವ ಮುಖಭಾವವಾಗಿದ್ದು, ಇದನ್ನು ಆಗತಾನೆ ನಡೆಯಲಾರಂಭಿಸಿದ ಮಗುವಿನಲ್ಲಿ ಕಾಣಬಹುದಾಗಿದೆ. ಭುಜಗಳನ್ನು ಎತ್ತುವುದು, ಸ್ಕ್ವೇರ್ಡ್-ಆಫ್ ಭಂಗಿ, ಅಸ್ಥಿಪಂಜರದ ಸ್ನಾಯುವ್ಯವಸ್ಥೆಯಲ್ಲಿ ಒತ್ತಡ ಹೆಚ್ಚಾಗುವುದು, ಮೊದಲಾದವು ದಾಳಿ ಮತ್ತು ಆಕ್ರಮಣ ಮಾಡುವುದರ ಪ್ರಾಥಮಿಕ ಹಂತದ ಕ್ರಿಯೆಗಳಾಗಿರುತ್ತವೆ. ಸ್ನಾಯುವಿನ ಒತ್ತಡ ಏರಿಕೆಯು ಬಲ ಮತ್ತು ಆತ್ಮವಿಶ್ವಾಸವನ್ನು ಒದಗಿಸುತ್ತದೆ. ಆಕ್ರಮಣ ಮಾಡುವ ಪ್ರಚೋದನೆಯು ಈ ಬಲದ ವೈಯಕ್ತಿಯ ಭಾವನೆಯನ್ನು ಜತೆಗೂಡುತ್ತದೆ.

ಕೋಪದ ಮಾನಸಿಕ ಪ್ರತಿಕ್ರಿಯೆಗಳೆಂದರೆ ಹೃದಯ ಬಡಿತವು ಹೆಚ್ಚಾಗಿ ಕೋಪಕ್ಕೆ ಕಾರಣನಾದವನನ್ನು ಸರಿಸಲು ತಯಾರಾಗುವುದು. ಅದಲ್ಲದೇ ಕೈಗಳಿಗೆ ರಕ್ತದ ಹರಿವು ಹೆಚ್ಚಾಗಿ ಆತನಿಗೆ ಹೊಡೆಯಲು ಅವುಗಳನ್ನು ಸಿದ್ಧಗೊಳಿಸುವುದು. ಆಗ ಹೆಚ್ಚಾಗಿ ಬೆವರುತ್ತವೆ. (ವಿಶೇಷವಾಗಿ ಕೋಪವು ತೀವ್ರವಾಗಿದ್ದಾಗ).[೪೨] ಕೋಪದ ಮಾನಸಿಕ ದೃಷ್ಟಿಕೋನಕ್ಕೆ ಒಂದು ಸಾಮಾನ್ಯ ರೂಪಕವೆಂದರೆ ಒಂದು ಧಾರಕದಲ್ಲಿರುವ ಬಿಸಿ ದ್ರಾವಕ.[] ನೊವ್ಯಾಕೊ ಪ್ರಕಾರ, "ಸ್ವನಿಯಂತ್ರಿತ ಪ್ರಚೋದನೆಯು ಪ್ರಾಥಮಿಕವಾಗಿ ಅಡ್ರಿನೊಮೆಡುಲ್ಲರಿ ಮತ್ತು ಅಡ್ರನೊಕಾರ್ಟಿಕಲ್ ಹಾರ್ಮೋನ್‌ನ ಕ್ರಿಯೆಯಿಂದ ಕಂಡುಬರುತ್ತದೆ. ಅಡ್ರೀನಲ್ ಮೆಡುಲದಿಂದ ಕ್ಯಾಟೆಕೊಲಮೈನ್‌ಗಳು, ಎಪಿನ್‌ಫ್ರೈನ್ ಮತ್ತು ನಾರ್‌ಎಪಿನ್‌ಫ್ರೈನ್‌ನ ಹಾಗೂ ಅಡ್ರೀನಲ್ ಕಾರ್ಟೆಕ್ಸ್‌ನಿಂದ ಗ್ಲೂಕೊಕಾರ್ಟಿಕಾಯ್ಡ್‌ಗಳ ಸ್ರವಿಸುವಿಕೆಯು ಅನುವೇದನೆಯ ವ್ಯವಸ್ಥೆ ಪರಿಣಾಮವನ್ನು ಒದಗಿಸುತ್ತದೆ. ಇದು ದೇಹವು ತಕ್ಷಣ ಪ್ರತಿಕ್ರಿಯಿಸುವಂತೆ ಮಾಡುತ್ತದೆ (ಉದಾ. ಪಿತ್ತಕೋಶದಲ್ಲಿ ಮತ್ತು ಸ್ನಾಯುಗಳಲ್ಲಿ ಗೈಕೋಜನ್‌ ಆಗಿ ಸಂಗ್ರಹಿಸಲ್ಪಟ್ಟಿರುವ ಗ್ಲುಕೋಸ್‌ನ ಬಿಡುಗಡೆ). ಕೋಪದಲ್ಲಿ, ಕ್ಯಾಟೆಕೊಲಮೈನ್‌‌ನ ಸಕ್ರಿಯತೆಯು ಎಪಿನ್‌ಫ್ರೈನ್‌ಗಿಂತ ಹೆಚ್ಚು ಪ್ರಬಲ ನಾರ್‌ಎಪಿನ್‌ಫ್ರೈನ್ ಆಗಿರುತ್ತದೆ (ಭಯದಲ್ಲಿ ಇದಕ್ಕೆ ವಿರುದ್ಧವಾಗಿರುತ್ತದೆ). ಅಡ್ರಿನೊಮೆಡುಲ್ಲರಿ‌ಗಿಂತ ಹೆಚ್ಚು ದೀರ್ಘಾವಧಿ ಹೊಂದಿರುವ ಅಡ್ರಿನೊಕಾರ್ಟಿಕಲ್ ಪರಿಣಾಮಗಳಲ್ಲಿ ಪಿಟ್ಯುಟರಿ ಗ್ರಂಥಿಯ ಸ್ರವಿಸುವಿಕೆಗಳು ಮಧ್ಯಸ್ಥಿಕೆ ವಹಿಸುತ್ತವೆ. ಇವು ಟೆಸ್ಟೊಸ್ಟಿರಾನ್ ಮಟ್ಟದ ಮೇಲೂ ಪರಿಣಾಮ ಬೀರುತ್ತವೆ. ಪಿಟ್ಯುಟರಿ-ಅಡ್ರಿನೊಕಾರ್ಟಿಕಲ್ ಮತ್ತು ಪಿಟ್ಯುಟರಿ-ಗೊನಾಡಲ್ ವ್ಯವಸ್ಥೆಗಳು ಕೋಪದ ಪ್ರತಿಕ್ರಿಯೆಗೆ ಚುರುಕು ಅಥವಾ ಪ್ರಬಲತೆಯನ್ನು ಒದಗಿಸುತ್ತದೆಂದು ಹೇಳಲಾಗುತ್ತದೆ."[]

ನರವಿಜ್ಞಾನವು ಭಾವನೆಗಳು ಮಿದುಳಿನಲ್ಲಿರುವ ಅನೇಕ ರಚನೆಗಳಿಂದ ಹುಟ್ಟುತ್ತವೆಂದು ತೋರಿಸಿಕೊಟ್ಟಿದೆ. ಇಂದ್ರಿಯಗಳ ಸಂಕೇತದ ಭಾವನಾತ್ಮಕ ಪ್ರಾಮುಖ್ಯತೆಯ ಶೀಘ್ರ ಮತ್ತು ಮೌಲ್ಯನಿರ್ಣಾಯಕ ಕ್ರಿಯೆಯು, ಆ ಸಂಕೇತವು ಸಂವೇದನೆಯ ಅಂಗಗಳಿಂದ ಕೆಲವು ನರ ಮಾರ್ಗಗಳ ಮೂಲಕ ಲಿಂಬಿಕ್ ಮುಮ್ಮುದೆಳಿಗೆ ಹೋಗುವಾಗ (ಗಂಟಲೊಳಗಿನ ಗ್ರಂಥಿ)ಅಮಿಗ್ಡಲದ ಮೂಲಕ ಸಾಗಿಹೋಗುವಾಗ ನಡೆಯುತ್ತದೆ. ಪ್ರಚೋದಕ ಗುಣಲಕ್ಷಣಗಳು, ಆಲೋಚನೆಗಳು ಅಥವಾ ನೆನಪುಗಳ ವ್ಯತ್ಯಾಸ ಗುರುತಿಸುವಿಕೆಯಿಂದ ಉಂಟಾಗುವ ಭಾವನೆಯು ಅದರ ಸಂಕೇತ (ಮುಮ್ಮಿದುಳಿನಲ್ಲಿರುವ)ಥಾಲಮಸ್‌ನಿಂದ (ಮಿದುಳಿನ ಸೆರಿಬ್ರೆಲ್ ಭಾಗ)ನಿಯೊಕಾರ್ಟೆಕ್ಸ್‌ಗೆ ಸಾಗುವಾಗ ಕಂಡುಬರುತ್ತದೆ.[೨೦] ಕೆಲವು ಅಂಕಿಅಂಶಗಳ ವಿಶ್ಲೇಷಣೆಯ ಆಧಾರದಲ್ಲಿ ಕೆಲವು ವಿದ್ವಾಂಸರು ಕೋಪದ ಪ್ರವೃತ್ತಿಯು ಆನುವಂಶಿಕವಾಗಿರಬಹುದೆಂದು ಸೂಚಿಸುತ್ತಾರೆ. ಆನುವಂಶಿಕತೆ ಮತ್ತು ಪರಿಸರ ಅಂಶಗಳ ನಡುವೆ ವ್ಯತ್ಯಾಸ ಕಲ್ಪಿಸಲು ಹೆಚ್ಚಿನ ಸಂಶೋಧನೆಯ ಹಾಗೂ ನಿರ್ದಿಷ್ಟ ಜೀನ್‌ಗಳ ಮತ್ತು ಪರಿಸರದ ನಿಜವಾದ ಮಾಪನಗಳ ಅವಶ್ಯಕತೆ ಇದೆ.[೪೩][೪೪]

ತತ್ತ್ವಶಾಸ್ತ್ರದ ದೃಷ್ಟಿಕೋನಗಳು

[ಬದಲಾಯಿಸಿ]
ದಿ ಫರಿ ಆಫ್ ಆಥಮಾಸ್ - ಜಾನ್ ಫ್ಲ್ಯಾಕ್ಸ್‌ಮ್ಯಾನ್ (1755-1826).

ಪುರಾತನ ಯುಗ

[ಬದಲಾಯಿಸಿ]

ಪುರಾತನ ಗ್ರೀಕ್ ತತ್ವಶಾಸ್ತ್ರಜ್ಞರು, ವಿಶೇಷವಾಗಿ ಜೀತದಾಳುಗಳ ವಿರುದ್ಧ ಅನಿಯಂತ್ರಿತ ಕೋಪವನ್ನು ತೋರಿಸುವುದರ ಬಗ್ಗೆ ವಿವರಿಸುತ್ತಾ ಅವರ ಸಮಾಜದಲ್ಲಿ ಸಾಮಾನ್ಯವಾಗಿ ಕೋಪದ ಬಗ್ಗೆ ಪ್ರತಿಕೂಲ ವರ್ತನೆಯನ್ನು ವ್ಯಕ್ತಪಡಿಸಿದ್ದಾರೆ. ಗ್ಯಾಲೆನ್ ಮತ್ತು ಸೆನೆಕ ಕೋಪವನ್ನು ಒಂದು ರೀತಿಯ ಹುಚ್ಚು ಎಂದು ಪರಿಗಣಿಸಿದ್ದಾರೆ. ಅವರೆಲ್ಲರೂ ಕೋಪದ ಸ್ವಯಂಪ್ರೇರಿತ, ಅನಿಯಂತ್ರಿತ ಭಾವನೆಗಳ ವ್ಯಕ್ತಪಡಿಸುವಿಕೆಯನ್ನು ನಿರಾಕರಿಸುತ್ತಿದ್ದರು. ಅಲ್ಲದೇ ಕೋಪವನ್ನು ನಿಯಂತ್ರಿಸುವುದರ ಸಂಭಾವ್ಯತೆ ಮತ್ತು ಮಹತ್ವವನ್ನು ಒಪ್ಪುತ್ತಿದ್ದರು. ಅಂದು ಕೋಪದ ಮಹತ್ವಕ್ಕೆ ಸಂಬಂಧಿಸಿದಂತೆ ಒಮ್ಮತವಿರಲಿಲ್ಲ. ಸೆನೆಕನಿಗೆ ಕೋಪವು "ಯುದ್ಧಕ್ಕೂ ಸಹ ನಿಷ್ಪ್ರಯೋಜಕ"ವಾದದ್ದಾಗಿತ್ತು. ಶಿಸ್ತುಬದ್ದ ರೋಮನ್ ಸೈನ್ಯವು ರೋಷಕ್ಕೆ ಹೆಸರುವಾಸಿಯಾದ ಜರ್ಮನರನ್ನು ಸೋಲಿಸಲು ಎಂದಿಗೂ ಸಮರ್ಥರಾಗಿರುತ್ತಾರೆ, ಎಂಬ ನಂಬಿಕೆಯನ್ನು ಸೆನೆಕ ಹೊಂದಿದ್ದನು. ಆತನು ಹೀಗೆಂದು ವಾದಿಸಿದ್ದಾನೆ - "ಕ್ರೀಡಾ ಸ್ಪರ್ಧೆಗಳಲ್ಲಿ, ಕೋಪಭಾವವನ್ನು ಹೊಂದುವುದು ಒಂದು ತಪ್ಪು".[]

ಅರಿಸ್ಟಾಟಲ್ ಅನ್ಯಾಯದಿಂದ ಹುಟ್ಟಿದ ಕೋಪಕ್ಕೆ ಮಹತ್ವ ನೀಡಿದ್ದಾನೆ, ಏಕೆಂದರೆ ಅದು ಅನ್ಯಾಯವನ್ನು ತಡೆಗಟ್ಟಲು ಉಪಯುಕ್ತವಾಗಿರುತ್ತದೆ.[][೪೫] ಕೋಪದ ವಿರೋಧವು ಒಂದು ರೀತಿಯ ಭಾವಶೂನ್ಯತೆ ಎಂದು ಅರಿಸ್ಟಾಟಲ್ ಹೇಳಿದ್ದಾನೆ.[] ಜನರ ಮನೋಧರ್ಮಗಳ ವ್ಯತ್ಯಾಸವನ್ನು ಸಾಮಾನ್ಯವಾಗಿ ಅವರು ಹೊಂದಿರುವ ವಿವಿಧ ಗುಣಲಕ್ಷಣಗಳ ಅಥವಾ ಮನೋಭಾವಗಳ ಮಿಶ್ರಣವು ಕಾರಣವೆಂದು ಪರಿಗಣಿಸಲಾಗಿತ್ತು. "ಕೆಂಪು ಕೂದಲಿನ ಮತ್ತು ಕೆಂಪು ಮುಖದವರು ವಿಪರೀತ ಉದ್ರಿಕ್ತ ಮತ್ತು ಶುಷ್ಕ ಮನೋಭಾವಗಳನ್ನು ಹೊಂದಿರುವುದರಿಂದ ಅವರು ಉದ್ರಿಕ್ತ-ಮನೋಧರ್ಮವುಳ್ಳವರಾಗಿರುತ್ತಾರೆ" ಎಂದು ಸೆನೆಕ ಸೂಚಿಸಿದ್ದಾನೆ.[] ಪುರಾತನ ತತ್ತ್ವಜ್ಞಾನಿಗಳು ಮಹಿಳೆಯರ ಕೋಪದ ಬಗ್ಗೆ ವಿರಳವಾಗಿ ಸೂಚಿಸಿದ್ದಾರೆ, ಸೈಮನ್ ಕೆಂಪ್ ಮತ್ತು K. T. ಸ್ಟ್ರಾಂಗ್‌ಮ್ಯಾನ್‌ರ ಪ್ರಕಾರ ಇದಕ್ಕೆ ಕಾರಣವೆಂದರೆ ಅವರ ಕೆಲಸಗಳು ಮಹಿಳೆಯರನ್ನು ಉದ್ದೇಶಿಸಿರಲಿಲ್ಲ. ಸೆನೆಕ ಮೊದಲಾದ ಕೆಲವರು, ಪುರುಷರಿಗಿಂತ ಮಹಿಳೆಯರು ಕೋಪಕ್ಕೆ ಒಳಗಾಗುವ ಹೆಚ್ಚಿನ ಸಂಭಾವ್ಯವನ್ನು ಹೊಂದಿರುತ್ತಾರೆ ಎಂದು ಪರಿಗಣಿಸಿದ್ದಾರೆ.[]

ನಿಯಂತ್ರಣ ವಿಧಾನಗಳು

[ಬದಲಾಯಿಸಿ]

ಸೆನೆಕನು ಕೋಪವನ್ನು ನಿಯಂತ್ರಿಸುವುದನ್ನು ಮೂರು ಭಾಗಗಳಾಗಿ ಸೂಚಿಸಿದ್ದಾನೆ: 1. ಮೊದಲನೆಯದಾಗಿ ತಕ್ಷಣದಲ್ಲಿ ಕೋಪ ಬರದ ಹಾಗೆ ಹೇಗೆ ಮಾಡುವುದು, 2. ಕೋಪವನ್ನು ತಡೆಗಟ್ಟುವುದು ಹೇಗೆ, 3. ಇತರರ ಕೋಪದೊಂದಿಗೆ ಹೇಗೆ ವರ್ತಿಸುವುದು.[] ಮೊದಲ ಸ್ಥಳದಲ್ಲಿ ಕೋಪ ಬರದ ಹಾಗೆ ಮಾಡಲು ಕೋಪದ ಹಲವಾರು ದೋಷಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು ಎಂದು ಸೆನೆಕ ಸೂಚಿಸುತ್ತಾನೆ. ವಿಪರೀತವಾಗಿ ಕೆಲಸದಲ್ಲಿ ತೊಡಗಿರುವುದನ್ನು ಅಥವಾ ಕೋಪವನ್ನು-ಪ್ರೇರೇಪಿಸುವವರೊಂದಿಗೆ ವ್ಯವಹರಿಸುವುದನ್ನು ದೂರಮಾಡಬೇಕು. ಅನಾವಶ್ಯಕ ಹಸಿವು ಅಥವಾ ಬಾಯಾರಿಕೆಯನ್ನು ತೊರೆಯಬೇಕು; ಅದಲ್ಲದೇ ಆಪ್ಯಾಯಮಾನವಾದ ಸಂಗೀತವನ್ನು ಕೇಳಬೇಕು.[] ಕೋಪ ಬರದ ಹಾಗೆ ತಡೆಗಟ್ಟಲು ಸೆನೆಕ ಹೀಗೆಂದು ಸೂಚಿಸುತ್ತಾನೆ - "ಮಾತು ಮತ್ತು ಮಾನಸಿಕ ಪ್ರಚೋದನೆಗಳನ್ನು ಪರಿಶೀಲಿಸಿಕೊಳ್ಳಬೇಕು. ತಕ್ಕಂತೆ ವೈಯಕ್ತಿಕ ಕೆರಳಿಕೆಯನ್ನುಂಟುಮಾಡುವ ನಿರ್ದಿಷ್ಟ ಮೂಲಗಳ ಬಗ್ಗೆ ಜಾಗೃತೆವಹಿಸಬೇಕು. ಮತ್ತೊಬ್ಬರೊಂದಿಗೆ ವ್ಯವಹರಿಸುವಾಗ ತೀರ ಕುತೂಹಲ ಪ್ರವೃತ್ತಿಯನ್ನು ಹೊಂದಿರಬಾರದು: ಎಲ್ಲವೂ ಕೇಳಲು ಮತ್ತು ನೋಡಲು ಯಾವಾಗಲೂ ಹಿತವಾಗಿರುವುದಿಲ್ಲ. ಯಾರಾದರೂ ನಿಮ್ಮನ್ನು ತಾತ್ಸಾರ ಮಾಡುವಂತೆ ಕಂಡುಬಂದರೆ, ನೀವು ಅದಕ್ಕೆ ಸುಲಭವಾಗಿ ಬಗ್ಗದವರೆಂದು ತೋರಿಸಿಕೊಡಬೇಕು. ಅಲ್ಲದೇ ಸಂಪೂರ್ಣ ನಿಜ ಸಂಗತಿಯನ್ನು ಕೇಳುವವರೆಗೆ ಕಾಯಬೇಕು. ನೀವು ಮತ್ತೊಬ್ಬರ ಸ್ಥಾನದಲ್ಲಿದ್ದುಕೊಂಡೂ ಯೋಚಿಸಬೇಕು, ಆತನ ಪ್ರಚೋದನೆಗಳನ್ನು ಮತ್ತು ವಯಸ್ಸು ಅಥವಾ ಅನಾರೋಗ್ಯದಂತಹ ಯಾವುದೇ ದುರ್ಬಲಗೊಳಿಸುವ ಅಂಶಗಳನ್ನು ತಿಳಿಯಲು ಪ್ರಯತ್ನಿಸಬೇಕು."[] ಮತ್ತೊಬ್ಬರ ಬಗ್ಗೆ ಪ್ರತಿದಿನ ಕುತೂಹಲ ಪ್ರವೃತ್ತಿಯನ್ನು ಹೊಂದಿರುವುದು ಒಂದು ಕೆಟ್ಟ ಅಭ್ಯಾಸವೆಂದು ಸೆನೆಕ ಸಲಹೆ ನೀಡುತ್ತಾನೆ.[]. ಇತರರ ಕೋಪದೊಂದಿಗೆ ವ್ಯವಹರಿಸಲು, ಒಂದು ಅತ್ಯುತ್ತಮ ಪ್ರತಿಕ್ರಿಯೆಯೆಂದರೆ ಸುಮ್ಮನೆ ಪ್ರಶಾಂತವಾಗಿರುವುದು ಎಂದು ಸೆನೆಕ ಸೂಚಿಸುತ್ತಾನೆ. ಕೋಪಗೊಂಡವರೊಂದಿಗೆ ವ್ಯವಹರಿಸುವಾಗ ಕೆಲವು ರೀತಿಯ ವಂಚನೆಯು ಅವಶ್ಯಕವಾಗಿರುತ್ತದೆಂದೂ ಆತನು ಹೇಳುತ್ತಾನೆ.[]

ಗ್ಯಾಲೆನ್ ಸೆನೆಕನ ಸೂಚನೆಗಳನ್ನೇ ಪುನರಾವರ್ತಿಸುತ್ತಾನೆ, ಆದರೆ ಹೊಸದೊಂದನ್ನು ಸೇರಿಸುತ್ತಾನೆ: ಒಬ್ಬ ಮಾರ್ಗದರ್ಶಿ ಮತ್ತು ಬೋಧಕರನ್ನು ಕಂಡುಕೊಳ್ಳುವುದು ಭಾವೋದ್ರೇಕಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಗ್ಯಾಲೆನ್ ಉತ್ತಮ ಬೋಧಕರನ್ನು ಕಂಡುಕೊಳ್ಳಲೂ ಕೆಲವು ಸೂಚನೆಗಳನ್ನು ನೀಡುತ್ತಾನೆ.[] ಕೋಪದ ನಿಯಂತ್ರಣ ಕ್ರಿಯೆಯನ್ನು ಹೊಂದಿಕೊಳ್ಳಬಲ್ಲ ಸ್ವಭಾವದ ಆಧಾರದಲ್ಲಿ ಬಾಲ್ಯದಲ್ಲೇ ಆರಂಭಿಸಬೇಕು ಎಂದು ಸೆನೆಕ ಮತ್ತು ಗ್ಯಾಲೆನ್ (ಅನಂತರದ ತತ್ತ್ವಜ್ಞಾನಿಗಳು) ಇಬ್ಬರೂ ಹೇಳುತ್ತಾರೆ. ಈ ಶಿಕ್ಷಣವು ಮಕ್ಕಳ ಚೈತನ್ಯವನ್ನು ಕುಂಠಿತಗೊಳಿಸಬಾರದು ಮತ್ತು ಅವರಿಗೆ ತೇಜೋವಧೆ ಮಾಡಬಾರದು ಅಥವಾ ಕ್ರೂರವಾಗಿ ನಡೆಸಿಕೊಳ್ಳಬಾರದು ಎಂದು ಸೆನೆಕ ಎಚ್ಚರಿಕೆ ನೀಡುತ್ತಾನೆ. ಹಾಗೆಯೇ ಅವರಿಗೆ ಅತಿಯಾದ ಪ್ರೀತಿ ತೋರಿಸಿ ಹಾಳುಮಾಡಬಾರದು. ಮಕ್ಕಳು ಆಡುವಾಗ ಇತರ ಆಟಗಾರರಿಗೆ ಹೊಡೆಯದ ಹಾಗೆ ಮತ್ತು ಅವರೊಂದಿಗೆ ಕೋಪದಿಂದ ವರ್ತಿಸದ ಹಾಗೆ ತಿಳಿಹೇಳಬೇಕು ಎಂದು ಸೆನೆಕ ಹೇಳುತ್ತಾನೆ. ಮಕ್ಕಳ ಬೇಡಿಕೆಗಳನ್ನು ಅವರು ಕೋಪದಿಂದಿದ್ದಾಗ ಈಡೇರಿಸಬಾರದೆಂದೂ ಆತನು ಸಲಹೆ ನೀಡುತ್ತಾನೆ.[]

ಮಧ್ಯಕಾಲೀನ ಯುಗ

[ಬದಲಾಯಿಸಿ]

ರೋಮನ್ ಸಾಮ್ರಾಜ್ಯದ ಮತ್ತು ಮಧ್ಯಕಾಲೀನ ಯುಗದ ಸಂದರ್ಭದಲ್ಲಿ, ತತ್ತ್ವಜ್ಞಾನಿಗಳು ಕೋಪದ ಬಗ್ಗೆ ಅಸ್ತಿತ್ವದಲ್ಲಿದ ಕಲ್ಪನೆಯನ್ನು ವಿಸ್ತಾರವಾಗಿ ನಿರೂಪಿಸಿದರು, ಹೆಚ್ಚಿನವರು ಆ ಕಲ್ಪನೆಗೆ ಯಾವುದೇ ಪ್ರಮುಖ ಕೊಡುಗೆಗಳನ್ನು ನೀಡಲಿಲ್ಲ. ಉದಾಹರಣೆಗಾಗಿ, ಇಬ್ನ್ ಸಿನ (ಅವಿಸೆನ್ನಾ), ರೋಗರ್ ಬ್ಯಾಕನ್ ಮತ್ತು ಥೋಮಸ್ ಅಕ್ವಿನಾಸ್ ಮೊದಲಾದ ಹೆಚ್ಚಿನ ಮಧ್ಯಕಾಲೀನ ತತ್ತ್ವಜ್ಞಾನಿಗಳು ಪುರಾತನ ತತ್ತ್ವಜ್ಞಾನಿಗಳೊಂದಿಗೆ, ಪ್ರಾಣಿಗಳು ಕೋಪಗೊಳ್ಳುವುದಿಲ್ಲವೆಂದು ನಂಬಿದ್ದರು.[] ಅನೇಕ ವಿಷಯಗಳಲ್ಲಿ ಅರಿಸ್ಟಾಟಲ್ ಮತ್ತು ಇಬ್ನ್ ಸಿನ (ಅವಿಸೆನ್ನಾ)ರೊಂದಿಗೆ ಅಸಮ್ಮತಿಯನ್ನು ಹೊಂದಿದ್ದ ಅಲ್-ಘಜಲಿ (ಯುರೋಪ್‌ನಲ್ಲಿ "ಅಲ್ಗಜೆಲ್" ಎಂದೂ ಕರೆಯುತ್ತಾರೆ), ಪ್ರಾಣಿಗಳು ಕೋಪವನ್ನು ಅವುಗಳ ಕಾಲ್ಬ್ ("ಹೃದಯ")ನಲ್ಲಿನ ಮೂರು "ಶಕ್ತಿ"ಗಳಲ್ಲಿ ಒಂದಾಗಿ ಹೊಂದಿರುತ್ತವೆ, ಉಳಿದೆರಡು ಹಸಿವು ಮತ್ತು ಉದ್ರೇಕ ಎಂದು ವಾದಿಸಿದ್ದಾನೆ. ಪ್ರಾಣಿಗಳ ಇಚ್ಛೆಯು "ಕೋಪ ಮತ್ತು ಹಸಿವನ್ನು ಆಧರಿಸಿರುತ್ತದೆ." ಆದರೆ ಇದಕ್ಕೆ ವಿರುದ್ಧವಾಗಿ ಮಾನವರ ಇಚ್ಛೆಯು "ಬುದ್ಧಿಶಕ್ತಿಯನ್ನು ಅವಲಂಬಿಸಿರುತ್ತದೆ," ಎಂದೂ ಅವನು ಹೇಳಿದ್ದಾನೆ.[೪೬] ಮಧ್ಯಕಾಲದಲ್ಲಿದ್ದ ಒಂದು ಸಾಮಾನ್ಯ ನಂಬಿಕೆಯೆಂದರೆ ಕೋಪಕ್ಕೆ ಒಳಗಾಗುವವರು ವಿಪರೀತ ಹಳದಿ ಪಿತ್ತರಸ ಸೃವಿಸುವ ಶರೀರದವರಾಗಿರುತ್ತಾರೆ; ಇದರ ಪರಿಣಾಮವಾಗಿ ಅಥವಾ ಅದಕ್ಕೆ ಸಂಬಂದಿಸಿದಂತೆ ಉಂಟಾಗುವ ಮುಂಗೋಪ ಕಾಲರ್ಅನ್ನು ಹೊಂದಿರುತ್ತಾರೆ. (ಆದ್ದರಿಂದ "ಕಾಲರಿಕ್" ಎಂಬ ಪದ ಬಳಕೆಯಲ್ಲಿತ್ತು).[] ಈ ನಂಬಿಕೆಯು "ಕೆಂಪು ಕೂದಲಿನ ಮತ್ತು ಕೆಂಪು ಮುಖದವರು ವಿಪರೀತ ಉದ್ರಿಕ್ತ ಮತ್ತು ಶುಷ್ಕ ಮನೋಭಾವಗಳನ್ನು ಹೊಂದಿರುವುದರಿಂದ ಅವರು ಉದ್ರಿಕ್ತ-ಮನೋಧರ್ಮವುಳ್ಳವರಾಗಿರುತ್ತಾರೆ" ಎಂಬ ಸೆನೆಕನ ನಂಬಿಕೆಯೊಂದಿಗೆ ಸಂಬಂಧಿಸಿದೆ.

ನಿಯಂತ್ರಿಸುವ ವಿಧಾನಗಳು

[ಬದಲಾಯಿಸಿ]

ಮೈಮೊನಿಡ್ಸ್ ಅನಿಯಂತ್ರಿತ ಭಾವೋದ್ರೇಕವನ್ನು ಹೊಂದುವುದು ಒಂದು ರೀತಿಯ ಅನಾರೋಗ್ಯವೆಂದು ಪರಿಗಣಿಸಿದ್ದನು. ಗ್ಯಾಲೆನ್‌ನಂತೆ ಮೈಮೊನಿಡ್ಸ್, ಈ ಅನಾರೋಗ್ಯವನ್ನು ಗುಣಪಡಿಸಲು ಒಬ್ಬ ತತ್ತ್ವಜ್ಞಾನಿಯನ್ನು ಅರಸುವುದು ದೈಹಿಕ ಅನಾರೋಗ್ಯಕ್ಕಾಗಿ ವೈದ್ಯನೊಬ್ಬನನ್ನು ಹುಡುಕುವ ಹಾಗೆಯೇ ಇರುತ್ತದೆ ಎಂದು ಸೂಚಿಸಿದ್ದಾನೆ. ರೋಗರ್ ಬ್ಯಾಕನ್ ಸೆನೆಕನ ಸಲಹೆಗಳನ್ನು ವಿಸ್ತಾರವಾಗಿ ನಿರೂಪಿಸಿದ್ದಾನೆ. ಹೆಚ್ಚಿನ ಮಧ್ಯಕಾಲೀನ ಬರಹಗಾರರು ಕೋಪದ ಕೆಡುಕಿನ ಬಗ್ಗೆ ಮತ್ತು ರೋಷತಪ್ತ ಗುಣಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಿದ್ದಾರೆ. ಜಾನ್ ಮಿರ್ಕ್ "ಜನರ ಮುಂದೆ ದೇವದೂತರು ಹೇಗೆ ಅದೃಶ್ಯವಾಗುತ್ತಾರೆ ಮತ್ತು ಅವರನ್ನು ನರಕಕ್ಕೆ ಕೊಂಡೊಯ್ಯಲು ಸೈತಾನರು ಹೇಗೆ ಹಿಂಬಾಲಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ" ಎಂದು ಸೂಚಿಸುತ್ತಾನೆ.[] ದಿ ಕ್ಯಾನನ್ ಆಫ್ ಮೆಡಿಸಿನ್ ‌ ನಲ್ಲಿ ಇಬ್ನ್ ಸಿನ (ಅವಿಸೆನ್ನ) ಮನೋಧರ್ಮದ ಅಧ್ಯಯನವನ್ನು ಮಾರ್ಪಡಿಸಿದ್ದಾನೆ. ಅಲ್ಲದೇ ಕೋಪವು ವಿಷಾದರೋಗದಿಂದ ಬುದ್ಧಿವಿಕಲ್ಪಕ್ಕೆ ಪರಿವರ್ತನೆ ಹೊಂದುವಂತೆ ಮಾಡುತ್ತದೆಂದು ಅಭಿಪ್ರಾಯ ಪಟ್ಟಿದ್ದಾನೆ. ಮನಸ್ಸಿನೊಳಗಿನ ಆರ್ದ್ರತೆ(ಜಡತ್ವ)ಯು ಅಂತಹ ಭಾವನಾತ್ಮಕ ಕಾಯಿಲೆಗಳು ಹೆಚ್ಚಾಗುವಂತೆ ಮಾಡುತ್ತವೆಂದು ವಿವರಿಸಿದ್ದಾನೆ.[೪೭]

ಅಹ್ಮದ್ ಇಬ್ನ್ ಸಾಹಲ್ ಅಲ್-ಬಾಲ್ಖಿ ಕೋಪವನ್ನು (ಆಕ್ರಮಣಶೀಲತೆಯೊಂದಿಗೆ) ಒಂದು ರೀತಿಯ ನರವ್ಯಾಧಿಯೆಂದು ವರ್ಗೀಕರಿಸಿದ್ದಾನೆ.[೪೮] ಅದೇ ರೀತಿ ಅಲ್-ಘಜಲಿ (ಅಲ್ಗಜೆಲ್)), ಕೋಪವು ಕ್ರೋಧ, ರೋಷ ಮತ್ತು ದ್ವೇಷ ಮೊದಲಾದ ರೂಪಗಳನ್ನು ತಾಳುತ್ತದೆ ಹಾಗೂ "ಆತ್ಮ ಶಕ್ತಿಯು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಅದು ಸಮತೋಲನ ಸ್ಥಿತಿಯಲ್ಲಿರುತ್ತದೆ" ಎಂದು ಹೇಳಿದ್ದಾನೆ.[೪೯]

ಆಧುನಿಕ ಕಾಲ

[ಬದಲಾಯಿಸಿ]

ಕೋಪದ ಬಗೆಗಿನ ಆಧುನಿಕ ಜ್ಞಾನವು ಅರಿಸ್ಟಾಟಲ್‌ನ ಅಭಿಪ್ರಾಯಕ್ಕಿಂತ ಹೆಚ್ಚು ಬೆಳವಣಿಗೆ ಹೊಂದಿಲ್ಲ.[] ಇಮ್ಯಾನ್ಯುವೆಲ್ ಕ್ಯಾಂಟ್ ಪ್ರತೀಕಾರದ ದುಷ್ಪರಿಣಾಮವನ್ನು ಅಲ್ಲಗಳೆಯುತ್ತಾನೆ, ಏಕೆಂದರೆ ಇದು ಒಬ್ಬನ ಗೌರವದ ರಕ್ಷಣೆಯನ್ನು ಮೀರಿಸುತ್ತದೆ; ಹಾಗೂ ಅದೇ ಸಂದರ್ಭದಲ್ಲಿ ಸಾಮಾಜಿಕ ಅನ್ಯಾಯಕ್ಕೆ ಪ್ರತಿಕ್ರಿಯೆ ತೋರದಿರುವುದನ್ನು ನಿರಾಕರಿಸುತ್ತದೆ.ಅಲ್ಲದೇ "ಮಾನವೀಯತೆ"ಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದಕ್ಕೆ ಸಂಬಂಧಿಸಿದಂತೆ ಡೇವಿಡ್ ಹ್ಯೂಮ್ "ಕೋಪ ಮತ್ತು ದ್ವೇಷವು ನಮ್ಮ ಭಾವ ಮತ್ತು ಮನೋಧರ್ಮದಲ್ಲಿ ಅಂತರ್ಗವಾಗಿರುವ ಭಾವನೆಗಳಾಗಿರುವುದರಿಂದ, ಅವುಗಳ ಕೊರತೆಯು ಕೆಲವೊಮ್ಮೆ ದುರ್ಬಲತೆ ಮತ್ತು ಮಾನಸಿಕ ಅಶಕ್ತತೆಯಾಗಿ ಕಂಡುಬರುತ್ತದೆ" ಎಂದು ಅಭಿಪ್ರಾಯ ಪಟ್ಟಿದ್ದಾನೆ.[೧೨] ಕೋಪದ ಆಧುನಿಕ ಜ್ಞಾನ ಮತ್ತು ಪುರಾತನ ಜ್ಞಾನದ ನಡುವಿನ ಎರಡು ಪ್ರಮುಖ ವ್ಯತ್ಯಾಸಗಳನ್ನು ಕೆಂಪ್ ಮತ್ತು ಸ್ಟ್ರಾಂಗ್‌ಮ್ಯಾನ್ ಹೀಗೆಂದು ಹೇಳಿದ್ದಾರೆ: ಒಂದು, ಆರಂಭಿಕ ತತ್ತ್ವಜ್ಞಾನಿಗಳು ಕೋಪವನ್ನು ತಡೆಗಟ್ಟುವುದರ ಹಾನಿಕರ ಪರಿಣಾಮಗಳ ಬಗ್ಗೆ ಸೂಚಿಸಿಲ್ಲ; ಮತ್ತೊಂದು, ಇತ್ತೀಚಿನ ಕೋಪದ ಅಧ್ಯಯನಗಳು ಲಿಂಗ ಭಿನ್ನತೆಗಳ ಸಮಸ್ಯೆಯನ್ನು ಗಣನೆಗೆ ತೆಗೆದುಕೊಂಡಿವೆ. ಇದರ ಬಗ್ಗೆ ಆರಂಭಿಕ ತತ್ತ್ವಜ್ಞಾನಿಗಳು ಹೆಚ್ಚು ಗಮನಹರಿಸಿರಲಿಲ್ಲ.[]

ಅಮೆರಿಕನ್ ಮನಶ್ಶಾಸ್ತ್ರಜ್ಞ ಆಲ್ಬರ್ಟ್ ಎಲ್ಲಿಸ್ ಕೋಪ, ಕ್ರೋಧ, ಮತ್ತು ರೋಷವು ಭಾಗಶಃ ಮಾನವನು ಉಲ್ಲಂಘನೆಯನ್ನು ಗ್ರಹಿಸುವ ತತ್ತ್ವಶಾಸ್ತ್ರದ ಅರ್ಥ ಮತ್ತು ಕಲ್ಪನೆಗಳಲ್ಲಿ ಮೂಲವನ್ನು ಹೊಂದಿದೆ ಎಂದು ಸೂಚಿಸಿದ್ದಾನೆ.[೫೦]. ಎಲ್ಲಿಸ್ ಪ್ರಕಾರ, ಈ ಭಾವನೆಗಳು ಹೆಚ್ಚಾಗಿ ಜನರು ಅವರ ವೈಯಕ್ತಿಕ ನಿಮಯಗಳು ಮತ್ತು ವ್ಯಾಪ್ತಿಗಳು ಉಲ್ಲಂಘನೆಯಾದಾಗ ಇತರರ ಮಾನವೀಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆಯುವ ಮತ್ತು ತೆಗಳುವ ಪ್ರವೃತ್ತಿಗೆ ಸಂಬಂಧಿಸಿವೆ.

ಧಾರ್ಮಿಕ ದೃಷ್ಟಿಕೋನಗಳು

[ಬದಲಾಯಿಸಿ]

ಕ್ಯಾಥೋಲಿಕ್ ಪಂಥ

[ಬದಲಾಯಿಸಿ]
ದಿ ಸೆವೆನ್ ಡೆಡ್ಲಿ ಸಿನ್ಸ್ ಆಂಡ್ ದಿ ಫೋರ್ ಲಾಸ್ಟ್ ಥಿಂಗ್ಸ್ - ಹೈರೊನಿಮಸ್ ಬಾಸ್ಚ್ (1485). "ಕೋಪ"ವನ್ನು ಹಲವಾರು ವೃತ್ತಾಕಾರದ ಚಿತ್ರಗಳಲ್ಲಿ ಬುಡದಲ್ಲಿ ಚಿತ್ರಿಸಲಾಗಿದೆ.ಚಿತ್ರದ ಕೆಳಗೆ ಲ್ಯಾಟಿನ್ ಲಿಪಿ ಕೇವ್ ಕೇವ್ ಡ್ಯೂಸ್ ವಿಡೆಟ್ ಇದೆ ("ಬಿವೇರ್, ಬಿವೇರ್, ಗಾಡ್ ಈಸ್ ವಾಚಿಂಗ್").

ಕ್ಯಾಥೋಲಿಕ್ ಪಂಥದಲ್ಲಿ ಕೋಪವನ್ನು ಏಳು ಮಾರಕ ಪಾಪಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಮಧ್ಯಕಾಲೀನ ಕ್ರೈಸ್ತ ಧರ್ಮವು ಕೋಪವನ್ನು ಏಳು ಕಾರ್ಡಿನಲ್ ಅಥವಾ ಮಾರಕ ಪಾಪಗಳಲ್ಲಿ ಒಂದೆಂದು ಸೂಚಿಸಿದೆ. ಆ ಕಾಲದ ಕೆಲವು ಕ್ರಿಶ್ಚಿಯನ್ ಬರಹಗಾರರು ಅನ್ಯಾಯದಿಂದ ಉಂಟಾಗುವ ಕೋಪವು ಕೆಲವು ಮಹತ್ವವನ್ನು ಹೊಂದಿರುತ್ತದೆಂದು ಹೇಳಿದ್ದಾರೆ.[][] ಸೇಂಟ್ ಬೇಸಿಲ್ ಕೋಪವನ್ನು "ನಿಂದನೀಯ ತಾತ್ಕಾಲಿಕ ಹುಚ್ಚು" ಎಂದು ಅಭಿಪ್ರಾಯ ಪಟ್ಟಿದ್ದಾನೆ.[] ಕ್ಯಾಥೋಲಿಕ್ ಎನ್‌ಸೈಕ್ಲೊಪೀಡಿಯಾದಲ್ಲಿ (1914) ಜೋಸೆಫ್ ಎಫ್. ಡೆಲನಿಯು ಕೋಪವನ್ನು "ಪ್ರತೀಕಾರದ ಆಸೆ" ಎಂಬುದಾಗಿ ನಿರೂಪಿಸಿದ್ದಾನೆ. ಅದಲ್ಲದೇ ತರ್ಕಬದ್ಧವಾದ ಪ್ರತೀಕಾರ ಮತ್ತು ಕೆಲಸಂದರ್ಭದಲ್ಲಿ ಭಾವೋದ್ರೇಕವು ಜನಾಂಗೀಯ ಪರವಾಗಿ ಮತ್ತು ಪ್ರಶಂಸನೀಯವಾದದ್ದು ಎಂದು ಹೇಳಿದ್ದಾನೆ. ಪ್ರತೀಕಾರವು ಅದರ ಮಿತಿಗಳನ್ನು ಮೀರಿದರೆ ಪಾಪಕೃತ್ಯವಾಗುತ್ತದೆ, ಆಗ ಅದು ನ್ಯಾಯ ಮತ್ತು ಧರ್ಮವನ್ನು ವಿರೋಧಿಸುತ್ತದೆ. ಉದಾಹರಣೆಗಾಗಿ, "ಒಬ್ಬನು ಸಹಿಸಿಕೊಳ್ಳಲಾಗದ ಪ್ರತೀಕಾರ ಅಥವಾ ತಡೆದುಕೊಳ್ಳಲಾಗುವುದಕ್ಕಿಂತ ಹೆಚ್ಚಿನ ಪ್ರತೀಕಾರ ಅಥವಾ ಕಾನೂನಿನ ಕ್ರಮದೊಂದಿಗೆ ಸಂಘರ್ಷವನ್ನು ಹೊಂದಿರುವ ಪ್ರತೀಕಾರ ಅಥವಾ ಅನುಚಿತ ಪ್ರಚೋದನೆಯಿಂದ ಹುಟ್ಟಿಕೊಂಡ ಪ್ರತೀಕಾರ" ಇವೆಲ್ಲವೂ ಪಾಪಪೂರಿತವಾಗಿರುತ್ತವೆ. ಅನುಚಿತ ಭಾವೋದ್ವೇಗದ ಸೇಡು ದೇವರ ಅಥವಾ ಆಪ್ತರ ಪ್ರೀತಿಯನ್ನು ಗಂಭೀರವಾಗಿ ವಿರೋಧಿಸದಿದ್ದರೆ ಕ್ಷಮಾರ್ಹ ಪಾಪವೆಂದು ಪರಿಗಣಿಸಲಾಗುತ್ತದೆ.[೫೧]

ಹಿಂದೂ ಧರ್ಮ

[ಬದಲಾಯಿಸಿ]

ಹಿಂದೂ ಧರ್ಮದಲ್ಲಿ, ಕೋಪವನ್ನು ಒಂದು ರೀತಿಯ ಪ್ರತಿಯಾಗಿ ಹಿಂದಿರುಗಿಸದ ಅಪೇಕ್ಷೆಯಾಗಿ ದುಃಖದೊಂದಿಗೆ ಹೋಲಿಸಲಾಗುತ್ತದೆ. ಆಸೆಗಳಿಗೆ ತಡೆ ಉಂಟಾಗುವುದರಿಂದ ಕೋಪವು ಹುಟ್ಟಿಕೊಳ್ಳುತ್ತದೆಂದು ತಿಳಿಯಲಾಗುತ್ತದೆ.[೫೨] ಪರ್ಯಾಯವಾಗಿ, ಒಬ್ಬನು ಶ್ರೇಷ್ಠನೆಂದು ಭಾವಿಸಿದರೆ ಅದರ ಪರಿಣಾಮವೆಂದರೆ ದುಃಖ. ಕೋಪವು ಅಪೇಕ್ಷೆಗಿಂತ ಹೆಚ್ಚು ಕೆಡುಕಿನೊಂದಿಗೆ ಸಂಬಂಧಿಸಿದೆಯೆಂದು ಪರಿಗಣಿಸಲಾಗುತ್ತದೆ.[೫೩]. ಭಗವದ್ಗೀತೆಯಲ್ಲಿ ಕೃಷ್ಣನು ದುರಾಶೆ, ಕೋಪ ಮತ್ತು ಭೋಗಾಪೇಕ್ಷೆ ಮೊದಲಾದವು ನರಕಕ್ಕೆ ದಾರಿಮಾಡಿಕೊಡುತ್ತವೆಂದು ಹೇಳಿದ್ದಾನೆ. "ಅದೇ ರೀತಿ, ಕೋಪವನ್ನು ನಿಯಂತ್ರಿಸಲೂಬಹುದು. ನಮಗೆ ಕೋಪವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುವುದಿಲ್ಲ, ಆದರೆ ದೇವರನ್ನು ಅಥವಾ ಆತನ ಭಕ್ತರನ್ನು ದೂಷಣೆ ಮಾಡುವವರ ಬಗ್ಗೆ ನಾವು ಕೋಪಗೊಂಡರೆ, ನಮ್ಮ ಕೋಪವನ್ನು ಕೃಷ್ಣನ ಇಂದ್ರಿಯ ನಿಗ್ರಹದ ಸಿದ್ದಾಂತದ ಆಲೋಚನೆಗಳಿಂದ ನಿಯಂತ್ರಿಸಿಕೊಳ್ಳಬಹುದು. ನಿತ್ಯಾನಂದ ಪ್ರಭುವನ್ನು ದೂಷಣೆ ಮಾಡಿ ಹೊಡೆದ ದುಷ್ಟ ಸಹೋದರರಾದ ಜಗೈ ಮತ್ತು ಮಧೈ ವಿರುದ್ಧ ಚೈತನ್ಯ ಮಹಾಪ್ರಭು ಕೋಪಗೊಂಡರು. ಶಿಕ್ಷಾಷ್ಟಕದಲ್ಲಿ ಚೈತನ್ಯ ಮಹಾಪ್ರಭು ಹೀಗೆ ಬರೆದಿದ್ದಾರೆ: "ಹುಲ್ಲಿಗಿಂತಲೂ ಹೆಚ್ಚು ವಿನೀತರಾಗಿರಬೇಕು ಹಾಗೂ ಮರಕ್ಕಿಂತಲೂ ಹೆಚ್ಚು ಸಹಿಷ್ಣುವಾಗಿರಬೇಕು." ಹಾಗಾದರೆ ದೇವರು ಏಕೆ ಕೋಪವನ್ನು ತೋರಿಸಿದನೆಂದು ಕೇಳಬಹುದು. ಇದಕ್ಕೆ ಕಾರಣವೆಂದರೆ ಒಬ್ಬನು ಅವನಿಗೆ ಸಾಧ್ಯವಾಗುವಷ್ಟು ನಿಂದನೆಗಳನ್ನು ಸಹಿಸಿಕೊಳ್ಳಬಹುದು, ಆದರೆ ಕೃಷ್ಣ ಮತ್ತು ಅವನ ಭಕ್ತನು ಅತೀವ ದೂಷಣೆಗಳನ್ನು ಪಡೆದರು, ಒಬ್ಬ ನಿಜವಾದ ಭಕ್ತನು ಅಪರಾಧಿಯ ವಿರುದ್ಧ ಕೋಪಗೊಳ್ಳುತ್ತಾನೆ ಮತ್ತು ಬೆಂಕಿಚೆಂಡಿನಂತೆ ವರ್ತಿಸುತ್ತಾನೆ. ಕ್ರೋಧ, ಕೋಪವನ್ನು ತಡೆಗಟ್ಟಲು ಸಾಧ್ಯವಿಲ್ಲ, ಆದರೆ ಇವನ್ನು ಸೂಕ್ತರೀತಿಯಲ್ಲಿ ಬಳಸಬಹುದು. ಹನುಮಂತನು ಕೋಪದಿಂದ ಲಂಕೆಗೆ ಬೆಂಕಿಹಚ್ಚಿದನು, ಆದರೆ ಅವನನ್ನು ಭಗವಂತನಾದ ರಾಮಚಂದ್ರನ ಶ್ರೇಷ್ಠ ಭಕ್ತನೆಂದು ಪೂಜಿಸಲಾಗುತ್ತದೆ. ಅವನು ಅವನ ಕೋಪವನ್ನು ಸರಿಯಾದ ರೀತಿಯಲ್ಲಿ ಬಳಸಿದ್ದಾನೆಂದು ಅದರರ್ಥ. ಅರ್ಜುನನ್ನು ಮತ್ತೊಂದು ಉದಾಹರಣೆಯಾಗಿ ಪರಿಗಣಿಸಲಾಗುತ್ತದೆ. ಅವನು ಯುದ್ಧ ಮಾಡಲು ಒಪ್ಪಲಿಲ್ಲ, ಆದರೆ ಕೃಷ್ಣನು ಅವನಿಗೆ ಕೋಪ ಬರುವಂತೆ ಮಾಡಿದನು: "ನೀನು ಯುದ್ಧ ಮಾಡಲೇ ಬೇಕು!" ಕೋಪವಿಲ್ಲದೆ ಕಾದಾಡಲು ಸಾಧ್ಯವಿಲ್ಲ. ಕೋಪವನ್ನು ದೇವರ ಅಪ್ಪಣೆಗೆ ಅನುಗುಣವಾಗಿ ಬಳಸಿದರೆ ಅದನ್ನು ನಿಯಂತ್ರಿಸಬಹುದು." "ಅಂತಿಮ ನಿರ್ಣಯವೆಂದರೆ ದೇವರ ಶ್ರೇಷ್ಠತೆಗೆ ಮಾಡುವ ಭಕ್ತಿಯ ಸೇವೆಯ ಬಗ್ಗೆ ಮಾತನಾಡುವ ಮೂಲಕ ಅನುಪಯುಕ್ತ ಅಸಂಬದ್ಧ ಮಾತನ್ನು ಅಡಗಿಸಬಹುದು. ನಮ್ಮ ಮಾತನಾಡುವ ಶಕ್ತಿಯನ್ನು ಕೇವಲ ಕೃಷ್ಣ ಪ್ರಜ್ಞೆಯ ಸಾಕ್ಷಾತ್ಕಾರ ಪಡೆಯುವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಲು ಪ್ರಯತ್ನಿಸಬೇಕು. ಕಾದಾಡುವ ಮನಸ್ಸಿನ ತಳಮಳಕ್ಕೆ ಅನುಗುಣವಾಗಿ ಅವುಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ಅವಿರೋಧ-ಪ್ರೀತಿ ಮತ್ತು ಎರಡನೆಯದು ವಿರೋಧ-ಯುಕ್ತ-ಕ್ರೋಧ. ಮಾಯವಾದಿಗಳ ತತ್ತ್ವಶಾಸ್ತ್ರದ ದೃಢವಾದ ಪಾಲನೆ, ಕರ್ಮ-ವಾದಿಗಳ ಫಲಪ್ರದ ಪರಿಣಾಮಗಳಲ್ಲಿನ ನಂಬಿಕೆ ಮತ್ತು ಐಹಿಕ ಆಕಾಂಕ್ಷೆಗಳನ್ನು ಆಧಾರಿತ ನಂಬಿಕೆ ಮೊದಲಾದವನ್ನು ಅವಿರೋಧ-ಪ್ರೀತಿ ಎನ್ನುತ್ತಾರೆ. ಜ್ಞಾನಿಗಳು, ಕರ್ಮಿಗಳು ಮತ್ತು ಐಹಿಕ ಆಲೋಚನೆಗಳನ್ನು ರೂಪಿಸುವವರು ಸಾಮಾನ್ಯವಾಗಿ ಸುಸ್ಥಿತಿಯ ಆತ್ಮದ ಬಗ್ಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಆದರೆ ಭೌತವಾದಿಗಳಿಗೆ ಅವರ ಯೋಜನೆಗಳನ್ನು ಪೂರೈಸಲು ಅಸಾಧ್ಯವಾದಾಗ ಮತ್ತು ಅವರ ಸಾಧನಗಳಿಗೆ ಭಂಗ ಉಂಟಾದಾಗ, ಅವರು ಕೋಪಗೊಳ್ಳುತ್ತಾರೆ. ಭೌತಿಕ ವಸ್ತುಗಳ ಮೇಲಿನ ವ್ಯಾಮೋಹಕ್ಕೆ ಅಡ್ಡಿಯುಂಟಾದಾಗ ಕೋಪವು ಹುಟ್ಟಿಕೊಳ್ಳುತ್ತದೆ." (ದಿ ನೆಕ್ಟರ್ ಆಫ್ ಇನ್‌ಸ್ಟ್ರಕ್ಷನ್ 1)

ಬೌದ್ಧ ಧರ್ಮ

[ಬದಲಾಯಿಸಿ]

ಬೌದ್ಧ ಧರ್ಮದಲ್ಲಿ ಕೋಪವನ್ನು ಹೀಗೆಂದು ನಿರೂಪಿಸಿಲಾಗಿದೆ: "ಭೌತಿಕ ವಸ್ತುವನ್ನು ಸಹಿಕೊಳ್ಳಲು ಅಸಮರ್ಥವಾಗುವುದು ಅಥವಾ ಆ ವಸ್ತುವಿಗೆ ಹಾನಿಯನ್ನುಂಟುಮಾಡುವ ಉದ್ದೇಶ ಹೊಂದುವುದು." ಕೋಪವನ್ನು ಪ್ರಬಲ ಉತ್ಪ್ರೇಕ್ಷೆಯೊಂದಿಗೆ ದ್ವೇಷವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಐದು ಅಡ್ಡಿಗಳಲ್ಲಿ ಒಂದೆಂದು ಪಟ್ಟಿಮಾಡಲಾಗಿದೆ. ಗಡೀಪಾರಾದ ಟಿಬೇಟಿನ ಆಧ್ಯಾತ್ಮಿಕ ನಾಯಕ ದಲೈ ಲಾಮ ಮೊದಲಾದ ಬೌದ್ಧ ಸಂನ್ಯಾಸಿಗಳು ಕೆಲವೊಮ್ಮೆ ಕೋಪಗೊಳ್ಳುತ್ತಾರೆ.[೫೪] ಆದರೂ ಕೆಲವು ಭಿನ್ನತೆಗಳಿವೆ; ಹೆಚ್ಚಾಗಿ ಆಧ್ಯಾತ್ಮಿಕ ವ್ಯಕ್ತಿಯು ಭಾವನೆಯ ಬಗ್ಗೆ ಮತ್ತು ಅದನ್ನು ನಿರ್ವಹಿಸುವ ಬಗ್ಗೆ ತಿಳಿದಿರುತ್ತಾನೆ. ಆದ್ದರಿಂದ "ಬೌದ್ಧ ಧರ್ಮದಲ್ಲಿ ಕೋಪವು ಸ್ವೀಕಾರ್ಹವಾಗಿದೆಯೇ?' ಎಂಬ ಪ್ರಶ್ನೆಗೆ, ದಲೈ ಲಾಮ ಹೀಗೆಂದು ಉತ್ತರಿಸಿದ್ದಾರೆ:

"ಬೌದ್ಧ ಧರ್ಮವು ಸಾಮಾನ್ಯವಾಗಿ ಕೋಪವು ವಿನಾಶಕಾರಿ ಭಾವನೆಯಾಗಿದೆ, ಆದರೂ ಅದು ಉಳಿವಿನ ಅಥವಾ ನೈತಿಕ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೆಲವು ಧನಾತ್ಮಕ ಪರಿಣಾಮಗಳನ್ನು ಹೊಂದಿದೆ ಎಂದು ಹೇಳುತ್ತದೆ. ನಾನು ಯಾವುದೇ ರೀತಿಯ ಕೋಪವನ್ನು ಧಾರ್ಮಿಕ ಭಾವನೆಯೆಂಬುದನ್ನು ಅಥವಾ ರಚನಾತ್ಮಕ ವರ್ತನೆಯಾಗಿ ಆಕ್ರಮಣಶೀಲತೆಯೆಂಬುದನ್ನು ಒಪ್ಪುವುದಿಲ್ಲ. ಗೌತಮ ಬುದ್ಧನು ಸಂಸಾರದ (ಬಂಧನ, ಭ್ರಮೆ) ಮೂಲದಲ್ಲಿ ಮತ್ತು ಪುನರ್ಜನ್ಮದ ಕೆಡುಕಿನ ಚಕ್ರದಲ್ಲಿ ಮೂರು ಪ್ರಮುಖ ಕ್ಲೇಶಗಳಿವೆಯೆಂದು ಹೇಳಿದ್ದಾನೆ. ಅವುಗಳೆಂದರೆ ದುರಾಶೆ, ದ್ವೇಷ ಮತ್ತು ಭ್ರಾಂತಿ - ಹೀಗೆಂದೂ ಹೇಳಬಹುದು ಒಲವು, ಕೋಪ ಮತ್ತು ಅಜ್ಞಾನ. ಅವು ನಮಗೆ ಶಾಂತಿ, ಸಂತೋಷ ಮತ್ತು ತೃಪ್ತಿಯ ಬದಲಿಗೆ ಗೊಂದಲ ಮತ್ತು ದುಃಖವನ್ನುಂಟುಮಾಡುತ್ತವೆ. ಅವನ್ನು ಪುನೀತಮಾಡಿಕೊಳ್ಳುವುದು ಮತ್ತು ಬದಲಾಯಿಸಿಕೊಳ್ಳುವುದು ನಮ್ಮ ಸ್ವಂತ ಆಸಕ್ತಿಯನ್ನು ಅವಲಂಬಿಸಿರುತ್ತದೆ."[೫೪]

ಬೌದ್ಧಧರ್ಮದ ಪಂಡಿತ ಮತ್ತು ಲೇಖಕ ಗೆಶೆ ಕೆಲ್ಸಂಗ್ ಗ್ಯಾಟ್ಸೊ ಸಹ ಕೋಪವನ್ನು ಕಂಡುಕೊಳ್ಳುವಲ್ಲಿನ ಮತ್ತು ಕಷ್ಟಗಳನ್ನು ಪರಿವರ್ತಿಸುವ ಮೂಲಕ ಅದರಿಂದ ಹೊರಬರುವಲ್ಲಿನ ಆಧ್ಯಾತ್ಮಿಕ ಆಜ್ಞಾರ್ಥಗಳ ಬಗೆಗಿನ ಬುದ್ಧನ ಬೋಧನೆಯನ್ನು ವಿವರಿಸಿದ್ದಾನೆ:

ಜೀವನದಲ್ಲಿ ಯಾವುದೇ ಕೆಡುಕು ಸಂಭವಿಸಿದರೆ ಮತ್ತು ಕಷ್ಟ ಪರಿಸ್ಥಿಗಳು ಎದುರಾದರೆ, ನಾವು ಆ ಪರಿಸ್ಥತಿಯನ್ನೇ ಸಮಸ್ಯೆಯಾಗಿ ಪರಿಗಣಿಸುತ್ತೇವೆ. ಆದರೆ ನಿಜವಾಗಿ ನಾವು ಎದುರಿಸುವ ಸಮಸ್ಯೆಗಳೆಲ್ಲವೂ ಮನಸ್ಸಿನ ಭಾವನೆಗಳಿಂದ ಬರುತ್ತವೆ. ನಾವು ಕಷ್ಟದ ಪರಿಸ್ಥಿತಿಗಳಿಗೆ ಧನಾತ್ಮಕವಾಗಿ ಅಥವಾ ಶಾಂತವಾಗಿ ಪ್ರತಿಕ್ರಿಯಿಸಿದರೆ, ಅವು ನಮಗೆ ಸಮಸ್ಯೆಯಾಗುವುದಿಲ್ಲ. ಅಂತಿಮವಾಗಿ, ಅವುಗಳನ್ನು ನಾವು ಸುಧಾರಣೆ ಮತ್ತು ಅಭಿವೃದ್ಧಿಯ ಸವಾಲುಗಳೆಂದು ಅಥವಾ ಅವಕಾಶಗಳೆಂದು ಪರಿಗಣಿಸಬಹುದು. ನಾವು ಕಷ್ಟಗಳಿಗೆ ನಿಷೇಧಾತ್ಮಕ ಮನಸ್ಸಿನಿಂದ ಪ್ರತಿಕ್ರಿಯಿಸಿದರೆ ಮಾತ್ರ ಸಮಸ್ಯೆಗಳು ಏಳುತ್ತವೆ. ಆದ್ದರಿಂದ ನಾವು ಸಮಸ್ಯೆಗಳಿಂದ ದೂರವಾಗಬೇಕೆಂದು ಬಯಸಿದರೆ, ನಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಬೇಕು.[೫೫]

ಬುದ್ಧನು ಕೋಪದ ಬಗ್ಗೆ ಹೀಗೆಂದು ಹೇಳಿದ್ದಾನೆ:

ಕೋಪಗೊಂಡ ವ್ಯಕ್ತಿಯು ದುಷ್ಟನಾಗಿರುತ್ತಾನೆ ಮತ್ತು ಅತಿ ಕಡಿಮೆ ನಿದ್ರಿಸುತ್ತಾನೆ. ಅನುಕೂಲ ಪಡೆದರೂ ಆತನು ಅದನ್ನು ಕಳೆದುಕೊಳ್ಳುತ್ತಾನೆ, ಮಾತು ಮತ್ತು ಕಾರ್ಯದೊಂದಿಗೆ ಹಾನಿಯನ್ನುಂಟುಮಾಡುತ್ತಾನೆ. ವಿಪರೀತ ಕೋಪವನ್ನು ಹೊಂದಿರುವ ವ್ಯಕ್ತಿಯು ಅವನ ಸಂಪತ್ತನ್ನು ನಾಶಮಾಡಿಕೊಳ್ಳುತ್ತಾನೆ. ಕೋಪದಿಂದ ಹುಚ್ಚನಾಗಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾನೆ. ಸಂಬಂಧಿಗಳು, ಸ್ನೇಹಿತರು ಮತ್ತು ಸಹೋದ್ಯೋಗಿಗಳು ಆತನನ್ನು ದೂರವಿಡುತ್ತಾರೆ. ಕೋಪವು ನಷ್ಟವನ್ನುಂಟುಮಾಡುತ್ತದೆ. ಕೋಪವು ಮನಸ್ಸನ್ನು ಕೆರಳಿಸುತ್ತದೆ. ಆತನ ಅಪಾಯವು ಆತನಿಂದಲೇ ಹುಟ್ಟಿಕೊಂಡಿದೆ ಎಂಬುದನ್ನು ಆತನು ಕಂಡುಕೊಳ್ಳುವುದಿಲ್ಲ. ಕೋಪಗೊಂಡ ವ್ಯಕ್ತಿಯು ಅವನ ಸ್ವಂತ ಪ್ರಯೋಜನದ ಬಗ್ಗೆ ತಿಳಿದಿರುವುದಿಲ್ಲ. ಕೋಪಿತ ವ್ಯಕ್ತಿಯು ಧಮ್ಮವನ್ನು ಗಮನಿಸುವುದಿಲ್ಲ. ಕೋಪಕ್ಕೆ ಒಳಗಾದವನು ತೀವ್ರ ಅಂಧಕಾರದಲ್ಲಿರುತ್ತಾನೆ. ಆತನು ಕೆಟ್ಟ ಕೆಲಸಗಳಲ್ಲಿ ಅವು ಉತ್ತಮವಾದುದೆಂದು ತಿಳಿದುಕೊಂಡು ಸಂತೋಷ ಪಡುತ್ತಾನೆ. ಆದರೆ ನಂತರ ಆತನ ಕೋಪವು ತಗ್ಗಿದಾಗ ಬೆಂಕಿಯಲ್ಲಿ ಬೆಂದಂತೆ ನರಳುತ್ತಾನೆ. ಕೆಂಡ ಮುಚ್ಚಿದ ಬೆಂಕಿಯಂತೆ ಆತನು ನಾಶವಾಗುತ್ತಾನೆ, ಅಳಿಸಿಹೋಗುತ್ತಾನೆ. ವ್ಯಕ್ತಿಯು ಕೋಪಗೊಂಡಾಗ ಅವನು ಯಾವುದೇ ರೀತಿಯ ನಾಚಿಕೆಯನ್ನು, ದುಷ್ಪರಿಣಾಮದ ಭಯವನ್ನು ಮತ್ತು ಮಾತಿನಲ್ಲಿ ಗೌರವವನ್ನು ಹೊಂದಿರುವುದಿಲ್ಲ. ಕೋಪದಿಂದ ಹೊರಬರಲು ಯಾವುದೇ ಪರಿಹಾರವಿಲ್ಲ.[೫೬]

ಇಸ್ಲಾಂ

[ಬದಲಾಯಿಸಿ]

ಇಸ್ಲಾಂ ಧರ್ಮದ ಪ್ರಮುಖ ಧಾರ್ಮಿಕ ಗ್ರಂಥ ಖುರಾನ್ ಪ್ರವಾದಿಗಳು, ಅನುಯಾಯಿಗಳು ಮತ್ತು ಮಹಮ್ಮದ್‌ರ ಶತ್ರುಗಳ ಕೋಪದ ಬಗ್ಗೆ ನಿರೂಪಿಸುತ್ತದೆ. ಮ್ಯೂಸ (ಮೋಸಸ್ ಎಂದೂ ಕರೆಯುತ್ತಾರೆ) ಅವನ ಜನರು ಚಿನ್ನದ ಕರುವನ್ನು ಪೂಜಿಸುತ್ತಿದ್ದುದಕ್ಕಾಗಿ ಅವರ ವಿರುದ್ಧ ಕೋಪಗೊಂಡನು; ಯೂನಸ್ (ಜೊನಾಹ್ ಎಂದೂ ಕರೆಯುತ್ತಾರೆ) ಅಂತಿಮವಾಗಿ ತನ್ನ ತಪ್ಪನ್ನು ಕಂಡುಕೊಂಡು ಪಶ್ಚಾತಾಪ ಪಟ್ಟಿದುದಕ್ಕಾಗಿ ಕೋಪಗೊಂಡನು; ಮಹಮ್ಮದ್‌ರ ಶತ್ರುಗಳ ವಿರುದ್ಧ ಹೋರಾಡಿದ ನಂತರ ದೇವರು ಶ್ರದ್ಧಾಭಕ್ತಿಯಿರುವವರ ಮನಸ್ಸಿನಿಂದ ಕೋಪವನ್ನು ಹೊಡೆದೋಡಿಸಿದುದು ಮತ್ತು ಅವರನ್ನು ಕರುಣಾಮಯಿಗಳನ್ನಾಗಿ ಮಾಡಿದುದು ಮೊದಲಾದವನ್ನು ಖುರಾನ್‌ನಲ್ಲಿ ಸೂಚಿಸಲಾಗಿದೆ.[೫೭][೫೮]. ಸಾಮಾನ್ಯವಾಗಿ ಕೋಪದ ತಡೆಹಿಡಿಯುವಿಕೆಯನ್ನು ಪ್ರಶಂಸಾರ್ಹ ಗುಣಲಕ್ಷಣವೆಂದು ಪರಿಗಣಿಸಲಾಗುತ್ತದೆ, ಹಾಗೂ ಮಹಮ್ಮದ್ ಹೀಗೆ ಹೇಳಿದ್ದಾರೆಂದು ನಂಬಲಾಗುತ್ತದೆ; - "ನಿಜವಾದ ಶಕ್ತಿಯು ಮತ್ತೊಬ್ಬರನ್ನು ಹೊಡೆಯುವವರಲ್ಲಿ ಇಲ್ಲದೆ, ಕೋಪ ಬಂದಾಗ ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಮರ್ಥರಾಗಿರುವವರಲ್ಲಿ ಇರುತ್ತದೆ."[೫೮][೫೯][೬೦]

ಯೆಹೂದ್ಯ ಧರ್ಮ

[ಬದಲಾಯಿಸಿ]

ಯೆಹೂದ್ಯ ಧರ್ಮದಲ್ಲಿ, ಕೋಪವು ಒಂದು ನಿಷೇಧಾತ್ಮಕ ಸ್ವಭಾವವಾಗಿದೆ. ಬುಕ್ ಆಫ್ ಜನೆಸಿಸ್‌ನಲ್ಲಿ ಜಾಕಬ್ ಅವನ ಮಕ್ಕಳಾದ ಸೈಮನ್ ಮತ್ತು ಲೆವಿಯಲ್ಲಿ ಕಂಡುಬಂದ ಕೋಪವನ್ನು ಹೀಗೆಂದು ಖಂಡಿಸಿದ್ದಾನೆ: "ಅವರ ಸಾಮಾನ್ಯ ಕೋಪಕ್ಕೆ ಅದು ತೀವ್ರವಾಗಿದ್ದುದರಿಂದ ಮತ್ತು ಅವರ ಸಿಟ್ಟಿಗೆ ಅದು ಕ್ರೂರವಾಗಿದ್ದುದರಿಂದ ದೇವರು ಶಾಪಹಾಕಲಿ."[೬೧]

ಎಥಿಕ್ಸ್ ಆಫ್ ಫಾದರ್ಸ್ ಹೇಳಿದಂತೆ ಕೋಪವನ್ನು ನಿಗ್ರಹಿಸುವುದನ್ನು ಶ್ರೇಷ್ಠ ಮತ್ತು ಅಪೇಕ್ಷಣೀಯವಾಗಿ ತಿಳಿಯಲಾಗುತ್ತದೆ:

"ಬೆನ್ ಜೋಮ ಹೀಗೆಂದು ಹೇಳಿದ್ದಾನೆ: ಯಾರು ಪ್ರಬಲರು? ಯಾರು ಅವರ ದುಷ್ಟ ಪ್ರವೃತ್ತಿಯನ್ನು ನಿಗ್ರಹಿಸುತ್ತಾರೊ ಅವರು ಎಂದು ವಿವರಿಸಿದ್ದಾನೆ. "ಕೋಪವನ್ನು ಸಾವಕಾಶವಾಗಿ ನಿರ್ವಹಿಸುವವನು ಪ್ರಬಲ ವ್ಯಕ್ತಿಗಿಂತ ಉತ್ತಮನಾಗಿರುತ್ತಾನೆ, ಅಲ್ಲದೇ ತನ್ನ ಭಾವೋದ್ರೇಕಗಳನ್ನು ನಿಯಂತ್ರಿಸುವವನು ನಗರವೊಂದನ್ನು ಆಳುವವನಿಗಿಂತ ಉತ್ತಮನಾಗಿರುತ್ತಾನೆ" (ನಾಣ್ಣುಡಿಗಳು 16:32). " [೬೨]

ಕೋಪಗೊಳ್ಳುವವನು ದೇವರ ವಿಗ್ರಹಗಳನ್ನು ಪೂಜಿಸುವವನ ಹಾಗೆಯೇ ಎಂದು ಮೈಮೊನಿಡ್ಸ್ ಹೇಳುತ್ತಾನೆ.[೬೩] ರಬ್ಬಿ ಶ್ನಿಯರ್ ಜಲ್ಮಾನ್ ಆಫ್ ಲಿಯಾದಿ, ಕೋಪದ ಮತ್ತು ದೇವರ ವಿಗ್ರಹದ ಪೂಜೆಯ ನಡುವಿನ ಹೋಲಿಕೆಯೆಂದರೆ ಕೋಪಗೊಂಡಾಗ ವ್ಯಕ್ತಿಯು ಪೂಜನೀಯ ದೇವರನ್ನು ಕಡೆಗಣಿಸುತ್ತಾನೆ, ಕೋಪಕ್ಕೆ ಏನೇ ಕಾರಣವಾಗಿದ್ದರೂ ಅಂತಿಮವಾಗಿ ಆತನನ್ನೇ ದೂರುತ್ತಾನೆ ಹಾಗೂ ಕೋಪವನ್ನು ಬರಿಸಿಕೊಳ್ಳುವ ಮೂಲಕ G-dಯ(ದೇವರ) ಸಹಾಯಹಸ್ತವನ್ನು ನಿರಾಕರಿಸುತ್ತಾನೆ ಎಂದು ವಿವರಿಸುತ್ತದೆ.[೬೪]

ಕೋಪಗೊಂಡಾಗ ವ್ಯಕ್ತಿಯು ನೈತಿಕ ಸ್ವಭಾವದೊಂದಿಗೆ ವ್ಯವಹರಿಸಬೇಕೆಂದು ಕಿಟ್ಜುರ್ ಶುಲ್ಚಾನ್ ಅರುಚ್ ಸೂಚಿಸುತ್ತದೆ:

"ಕೋಪವು ಒಂದು ದುಷ್ಟ ಸ್ವಭಾವವಾಗಿದೆ ಮತ್ತು ಅದನ್ನು ಸಂಪೂರ್ಣವಾಗಿ ತೊರೆಯಬೇಕು. ಕೋಪಗೊಳ್ಳಲು ಉತ್ತಮ ಕಾರಣವನ್ನು ಹೊಂದಿದ್ದರೂ ಸಹ ಕೋಪಗೊಳ್ಳದಂತೆ ತಮ್ಮನ್ನು ತಾವು ಪಳಗಿಸಿಕೊಳ್ಳಬೇಕು." [೬೫]
ದಿ ಗ್ರೇಟ್ ಡೈ ಆಫ್ ಹಿಸ್ ವ್ರಾಥ್ - ಜಾನ್ ಮಾರ್ಟಿನ್ (1789-1854).

ಹೆಚ್ಚಿನ ಧರ್ಮಗಳಲ್ಲಿ, ಕೋಪವನ್ನು ಹೆಚ್ಚಾಗಿ ದೇವರ ವಿಶೇಷ ಲಕ್ಷಣವಾಗಿ ಸೂಚಿಸಲಾಗುತ್ತದೆ. ದೇವರು ಕೋಪಕ್ಕೆ ಒಳಗಾಗುತ್ತಾನೆ ಮತ್ತು ಮಾನವರೂಪದಲ್ಲಿ ಪ್ರತೀಕಾರ ತೀರಿಸುತ್ತಾನೆ ಎಂದು ಪುರಾತನ ಜನರು ನಂಬಿದ್ದರು.[೬೬] ಯೆಹೂದ್ಯರ ಬೈಬಲ್ ದೇವರ ಇಚ್ಛೆಗೆ ವಿರುದ್ಧವಾಗಿ ವರ್ತಿಸುವುದು ದೇವರ ಕೋಪಕ್ಕೆ ಗುರಿಯಾಗುವಂತೆ ಮಾಡುತ್ತದೆಂದು ಹೇಳುತ್ತದೆ.[೬೬] ಯೆಹೂದ್ಯರ ಬೈಬಲ್ ವಿವರಿಸುತ್ತದೆ:

ದೇವರು ಬೌದ್ಧಿಕ ಅಮೂರ್ತೀಕರಣವಲ್ಲ ಅಥವಾ ಆತನನ್ನು ಮಾನವರ ಕಾರ್ಯಗಳಿಗೆ ನಿಷ್ಪಕ್ಷಪಾತವಾಗಿ ಭಾವಿಸಲಾಗುವುದಿಲ್ಲ; ಆತನ ನಿರ್ಮಲ ಮತ್ತು ಶ್ರೇಷ್ಠ ಗುಣಲಕ್ಷಣವು ನೈತಿಕ ಜಗತ್ತಿನಲ್ಲಿ ಏನಾದರೂ ತಪ್ಪು ಮತ್ತು ಅನೈತಿಕತೆ ಕಂಡುಬಂದರೆ ಪ್ರಬಲವಾಗಿ ಸಿಟ್ಟಾಗುತ್ತದೆ: "ಓ ದೇವರೇ, ನಿನ್ನ ಕಣ್ಣುಗಳು ದುಷ್ಟಕೃತ್ಯವನ್ನು ಅವಲೋಕಿಸಲು ತುಂಬಾ ನಿರ್ಮಲವಾಗಿವೆ ಹಾಗೂ ಅವು ಅನ್ಯಾಯವನ್ನು ಸಹಿಸುವುದಿಲ್ಲ."[೬೧]

ಕ್ರಿಶ್ಚಿಯನ್ನರೂ ದೇವರ ಪಾವಿತ್ರ್ಯತೆ ಮತ್ತು ದುಷ್ಕೃತ್ಯದ ವಿರುದ್ಧದ ಅವನ ಕೋಪವನ್ನು ಅನುಮೋದಿಸುತ್ತಾರೆ. ಅವರು ಹೊಂದುವ ಕೋಪವು ದೇವರ ಪ್ರೀತಿಯೊಂದಿಗೆ ಹೊಂದಿಕೆಯಾಗುವುದಿಲ್ಲ. ಜೀಸಸ್‌ನನ್ನು ಅಲಕ್ಷಿಸುವವರಿಗೆ ದೇವರು ಸಿಟ್ಟು ತೋರಿಸುತ್ತಾನೆಂದೂ ಅವರು ನಂಬುತ್ತಾರೆ.[೬೬]

ಇಸ್ಲಾಂ ಧರ್ಮದಲ್ಲಿ, ದೇವರ ಕರುಣೆಯು ಅವನ ಸಿಟ್ಟನ್ನು ಮೀರಿಸುತ್ತದೆ ಅಥವಾ ಅಗ್ರಸ್ಥಾನವನ್ನು ಪಡೆಯುತ್ತದೆ.[೬೭] ದೇವರು ಸಿಟ್ಟಿಗೆ ಗುರಿಯಾಗುವವರ ಗುಣಲಕ್ಷಣಗಳು ಈ ಕೆಳಗಿನಂತಿವೆ: ದೇವರನ್ನು ಅಲಕ್ಷಿಸುವವರು; ಅವನ ಗುರುತನ್ನು ನಿರಾಕರಿಸುವವರು; ಯೇಸುಕ್ರಿಸ್ತನ ಪುನರುತ್ಥಾನವನ್ನು ಮತ್ತು ಅಂತಿಮ ವಿಚಾರಣೆಯ ದಿನದ ನೈಜತೆಯನ್ನು ನಂಬಲು ಅನುಮಾನಿಸುವವರು; ಮಹಮ್ಮದ್‌ರನ್ನು ಮಾಟಗಾರ, ಹುಚ್ಚು ಅಥವಾ ಕವಿಯೆಂದು ಹೇಳುವವರು; ಕೇಡನ್ನು ಉಂಟುಮಾಡುವವರು, ಸೊಕ್ಕಿನಿಂದ ವರ್ತಿಸುವವರು, ಬಡವರ (ಗಮನಾರ್ಹವಾಗಿ ಅನಾಥರ) ಬಗ್ಗೆ ಅನಾದರಣ ತೋರಿಸುವವರು; ವಿಲಾಸಿ ಅಥವಾ ಹೇರಳ ಸಂಪತ್ತಿನಲ್ಲಿ ಜೀವಿಸುವವವರು; ಧರ್ಮಶ್ರದ್ಧಾಳಿಗಳಿಗೆ ಕಿರುಕುಳ ಕೊಡುವವರು ಅಥವಾ ಅವರು ಪ್ರಾರ್ಥನೆ ಮಾಡದಂತೆ ಅಡ್ಡಿಪಡಿಸುವವರು;...[೬೮]

ಆಕರಗಳು

[ಬದಲಾಯಿಸಿ]
  1. "Anger definition". Medicine.net. Archived from the original on 2014-01-23. Retrieved 2008-04-05. {{cite encyclopedia}}: Cite has empty unknown parameter: |coauthors= (help)
  2. ಹ್ಯಾರಿಸ್, W., ಸ್ಕೊಯೆನ್‌ಫೆಲ್ಡ್, C. D., ಗ್ವೈನ್, P. W., ವೈಸ್ಲರ್, A. M.,ಸರ್ಕ್ಯುಲೇಟರಿ ಆಂಡ್ ಹ್ಯೂಮರಲ್ ರೆಸ್ಪಾನ್ಸಸ್ ಟು ಫಿಯರ್ ಆಂಡ್ ಆಂಗರ್ , ದಿ ಸೈಕಾಲಜಿಸ್ಟ್, 1964, 7, 155.
  3. ರೇಮಂಡ್ ಡಿಗಿಯುಸೆಪ್ಪೆ, ರೇಮಂಡ್ ಚಿಪ್ ಟಫ್ರೇಟ್, ಅಂಡರ್‌ಸ್ಟ್ಯಾಂಡಿಂಗ್ ಆಂಗರ್ ಡಿಸಾರ್ಡರ್ಸ್ , ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, 2006, ಪುಟ 133-159.
  4. ಆಂಗರ್,ದಿ ಅಮೆರಿಕನ್ ಹೆರಿಟೇಜ್ ಡಿಕ್ಶನರಿ ಆಫ್ ದಿ ಇಂಗ್ಲಿಷ್ ಲ್ಯಾಂಗ್ವೇಜ್ , ನಾಲ್ಕನೇ ಆವೃತ್ತಿ, 2000, ಹಘ್ಟನ್ ಮಿಫ್ಲಿನ್ ಕಂಪೆನಿ.
  5. ೫.೦ ೫.೧ ೫.೨ ಮೈಕೆಲ್ ಕೆಂಟ್, ಆಂಗರ್ , ದಿ ಆಕ್ಸ್‌ಫರ್ಡ್ ಡಿಕ್ಶನರಿ ಆಫ್ ಸ್ಪೋರ್ಟ್ಸ್ ಸೈನ್ಸ್ ಆಂಡ್ ಮೆಡಿಸಿನ್, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ISBN 0-19-262845-3
  6. ೬.೦ ೬.೧ ಪ್ರೈಮೇಟ್ ಇತಾಲಜಿ, 1967, ಡೆಸ್ಮಂಡ್ ಮೋರಿಸ್ (ಸಂಪಾದಕ). ವೈಡೆನ್ಫೆಲ್ಡ್ ಆಂಡ್ ನಿಕೋಲ್ಸನ್ ಪಬ್ಲಿಶರ್ಸ್: ಲಂಡನ್, ಪುಟ 55
  7. ೭.೦ ೭.೧ ೭.೨ ೭.೩ ೭.೪ ೭.೫ ೭.೬ ೭.೭ ೭.೮ ರೇಮಂಡ್ W. ನೊವ್ಯಾಕೊ, ಆಂಗರ್ , ಎನ್‌ಸೈಕ್ಲೊಪೀಡಿಯಾ ಆಫ್ ಸೈಕಾಲಜಿ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, 2000
  8. ೮.೦ ೮.೧ ೮.೨ ೮.೩ ಜಾನ್ W. ಫಿಯೆರೊ, ಆಂಗರ್ , ಎಥಿಕ್ಸ್, ಪರಿಷ್ಕೃತ ಆವೃತ್ತಿ, ಸಂಪುಟ 1
  9. ೯.೦೦ ೯.೦೧ ೯.೦೨ ೯.೦೩ ೯.೦೪ ೯.೦೫ ೯.೦೬ ೯.೦೭ ೯.೦೮ ೯.೦೯ ೯.೧೦ ೯.೧೧ ೯.೧೨ ೯.೧೩ ೯.೧೪ ೯.೧೫ ೯.೧೬ ೯.೧೭ ೯.೧೮ ೯.೧೯ ೯.೨೦ ೯.೨೧ ೯.೨೨ ಸೈಮನ್ ಕೆಂಪ್, K.T. ಸ್ಟ್ರಾಂಗ್‌ಮ್ಯಾನ್, ಆಂಗ್ ಥೆರಪಿ ಆಂಡ್ ಮ್ಯಾನೇಜ್ಮೆಂಟ್: ಎ ಹಿಸ್ಟೋರಿಕಲ್ ಅನಾಲಿಸಿಸ್ , ದಿ ಅಮೆರಿಕನ್ ಜರ್ನಲ್ ಆಫ್ ಸೈಕಾಲಜಿ, ಸಂಪುಟ. 108, ಸಂ. 3. (ಆಟಮ್ನ್, 1995), ಪುಟ 397-417
  10. ೧೦.೦ ೧೦.೧ ಸ್ಯೂಟನ್, R. I. ಮೆಂಟೈನಿಂಗ್ ನಾರ್ಮ್ಸ್ ಎಬೌಟ್ ಎಕ್ಸ್‌ಪ್ರೆಸ್ಡ್ ಇಮೋಷನ್ಸ್: ದಿ ಕೇಸ್ ಆಫ್ ಬಿಲ್ ಕಲೆಕ್ಟರ್ಸ್ , ಅಡ್ಮಿನಿಸ್ಟ್ರೇಟಿವ್ ಸೈನ್ಸ್ ಕ್ವಾರ್ಟರ್ಲಿ, 1991, 36:245-268
  11. ೧೧.೦ ೧೧.೧ ಹಾಚ್ಸ್‌ಚೈಲ್ಡ್, AR, ದಿ ಮ್ಯಾನೇಜ್ಡ್ ಹಾರ್ಟ್: ಕಮರ್ಶಿಯಲೈಸೇಶನ್ ಆಫ್ ಹ್ಯೂಮನ್ ಫೀಲಿಂಗ್ , ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೆಸ್, 1983
  12. ೧೨.೦ ೧೨.೧ ಪಾಲ್ M. ಹಘೆಸ್, ಆಂಗರ್ , ಎನ್‌ಸೈಕ್ಲೊಪೀಡಿಯಾ ಆಫ್ ಎಥಿಕ್ಸ್, ಸಂಪುಟ I, ಎರಡನೇ ಆವೃತ್ತಿ, ರಟ್ಲೆಡ್ಜ್ ಪ್ರೆಸ್
  13. ೧೩.೦ ೧೩.೧ ಪಾರ್ಕರ್ ಹಾಲ್, 2008, ಆಂಗರ್, ರೇಜ್ ಆಂಡ್ ರಿಲೇಶನ್‌ಶಿಪ್ಸ್: ಆನ್ ಎಂಪಾಥಿಕ್ ಅಪ್ರೋಚ್ ಟು ಆಂಗರ್ ಮ್ಯಾನೇಜ್ಮೆಂಟ್ , ರೌಟ್ಲೆಡ್ಜ್
  14. ಪಾರ್ಕರ್ ಹಾಲ್, 2008, ಆಂಗರ್, ರೇಜ್ ಆಂಡ್ ರಿಲೇಶನ್‌ಶಿಪ್ಸ್: ಆನ್ ಎಂಪಾಥಿಕ್ ಅಪ್ರೋಚ್ ಟು ಆಂಗರ್ ಮ್ಯಾನೇಜ್ಮೆಂಟ್ , ರೌಟ್ಲೆಡ್ಜ್, ಲಂಡನ್
  15. ಸ್ಕೋರ್ AN, 1994, ಎಫೆಕ್ಟ್ ರೆಗ್ಯುಲೇಷನ್ ಆಂಡ್ ದಿ ಒರಿಜಿನ್ ಆಫ್ ಸೆಲ್ಫ್ , ಹಿಲ್ಸ್‌ಡೇಲ್, NJ, ಎರ್ಲ್‌ಬಾಮ್ ಅಸೋಸಿಯೇಟ್ಸ್, ಇಂಕ್
  16. ಹಾರ್ವೆ D, 2004, ಪರ್ಸನಲ್ ಕಮ್ಯೂನಿಕೇಶನ್
  17. ರೋಗರ್ಸ್, CR, 1951, ಕ್ಲೈಂಟ್-ಸೆಂಟರ್ಡ್ ಥೆರಪಿ , ಲಂಡನ್, ಕಾನ್ಸ್ಟೇಬಲ್
  18. angermgmt.com
  19. ಇಂಟರ್‌ನ್ಯಾಷನಲ್ ಹ್ಯಾಂಡ್‌ಬುಕ್ ಆಫ್ ಆಂಗರ್. ಪುಟ 290
  20. ೨೦.೦ ೨೦.೧ "ಇಮೋಷನ್." ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ. 2007. ಎನ್‌ಸೈಕ್ಲೊಪೀಡಿಯಾ ಬ್ರಿಟಾನಿಕಾ ಆನ್‌ಲೈನ್, ಪುಟ 11
  21. Jennifer S. Lerner and Dacher Keltner (2001). "Fear, Anger, and Risk" (PDF). Journal of Personality and Social Psychology. 81(1): 146–159. Archived from the original (PDF) on 2011-05-16. Retrieved 2010-08-24.
  22. Baruch Fischhoff, Roxana M. Gonzalez, Jennifer S. Lerner, Deborah A. Small (2005). "Evolving Judgments of Terror Risks: Foresight, Hindsight, and Emotion" (PDF). Journal of Experimental Psychology: Applied. 11(2): 134–139. Archived from the original (PDF) on 2011-07-19. Retrieved 2010-08-24.{{cite journal}}: CS1 maint: multiple names: authors list (link)
  23. David DeSteno, Nilanjana Dasgupta, Monica Y. Bartlett, and Aida Cajdric (2004). "Prejudice From Thin Air: The Effect of Emotion on Automatic Intergroup Attitudes" (PDF). Psychological Science. 15(5): 319–324. Archived from the original (PDF) on 2011-07-23. Retrieved 2010-08-24.{{cite journal}}: CS1 maint: multiple names: authors list (link)
  24. Diane M. Mackie, Thierry Devos, Eliot R. Smith (2000). "Intergroup Emotions: Explaining Offensive Action Tendencies in an Intergroup Context" (PDF). Journal of Personality and Social Psychology. 79(4): 602–616. Archived from the original (PDF) on 2011-09-28. Retrieved 2010-08-24.{{cite journal}}: CS1 maint: multiple names: authors list (link)
  25. ಇಂಟರ್‌ನ್ಯಾಷನಲ್ ಹ್ಯಾಂಡ್‌ಬುಕ್ ಆಫ್ ಆಂಗರ್. ಚ್ಯಾಪ್ಟರ್ 17
  26. D. DeSteno, R. E. Petty, D. T. Wegener, & D.D. Rucker (2000). "Beyond valence in the perception of likelihood: The role of emotion specificity". Journal of Personality and Social Psychology. 78(3): 397–416.{{cite journal}}: CS1 maint: multiple names: authors list (link)
  27. DeSteno, D., Petty, R. E., Rucker, D. D., Wegener, D. T., & Braverman, J. (2004). "Discrete emotions and persuasion: The role of emotion-induced expectancies". Journal of Personality and Social Psychology. 86(1): 43–56.{{cite journal}}: CS1 maint: multiple names: authors list (link)
  28. ೨೮.೦ ೨೮.೧ ಟೈಡೆನ್ಸ್ LZ, ಆಂಗರ್ ಆಂಡ್ ಅಡ್ವಾನ್ಸ್‌ಮೆಂಟ್ ವರ್ಸಸ್ ಸ್ಯಾಡ್ನೆಸ್ ಆಂಡ್ ಸಬ್ಜುಗೇಶನ್: ದಿ ಎಫೆಕ್ಟ್ ಆಫ್ ನೆಗೇಟಿವ್ ಇಮೋಷನ್ ಎಕ್ಸ್‌ಪ್ರೆಶನ್ಸ್ ಆನ್ ಸೋಷಿಯಲ್ ಸ್ಟೇಟಸ್ ಕನ್ಫೆರಲ್ , ಲಿಂಕ್: [೧], ಜರ್ನಲ್ ಆಫ್ ಪರ್ಸನಾಲಿಟಿ ಆಂಡ್ ಸೋಷಿಯಲ್ ಸೈಕಾಲಜಿ, 2001 ಜನವರಿ; 80(1):86-94.
  29. ೨೯.೦ ೨೯.೧ ಟೈಡೆನ್ಸ್, ಎಲ್ಸ್‌ವರ್ತ್ ಆಂಡ್ ಮೆಸ್ಕ್ಯುಟ, ಸೆಂಟಿಮೆಂಟಲ್ ಸ್ಟೀರಿಯೊಟೈಪ್ಸ್: ಇಮೋಷನಲ್ ಎಕ್ಸ್‌ಪೆಕ್ಟೇಶನ್ಸ್ ಫಾರ್ ಹೈ-ಆಂಡ್-ಲೊ-ಸ್ಟೇಟಸ್ ಗ್ರೂಪ್ ಮೆಂಬರ್ಸ್, 2000
  30. M ಸಿನಾಸ್ಯುರ್, LZ ಟೈಡೆನ್ಸ್, ಗೆಟ್ ಮ್ಯಾಡ್ ಆಂಡ್ ಗೆಟ್ ಮೋರ್ ದ್ಯಾನ್ ಈವನ್: ವೆನ್ ಆಂಡ್ ವೈ ಆಂಗರ್ ಎಕ್ಸ್‌ಪ್ರೆಶನ್ ಈಸ್ ಇಫೆಕ್ಟಿವ್ ಇನ್ ನೆಗೋಟಿಯೇಶನ್ಸ್, ಜರ್ನಲ್ ಆಫ್ ಎಕ್ಸ್‌ಪರಿಮೆಂಟಲ್ ಸೋಷಿಯಲ್ ಸೈಕಾಲಜಿ, 2006
  31. ವ್ಯಾನ್ ಕ್ಲೀಫ್, ಡಿ ಡ್ರ್ಯೂ ಮತ್ತು ಮ್ಯಾನ್ಸ್ಟೆಡ್, ದಿ ಇಂಟರ್‌ಪರ್ಸನಲ್ ಇಫೆಕ್ಟ್ಸ್ ಆಫ್ ಆಂಗರ್ ಆಂಡ್ ಹ್ಯಾಪಿನೆಸ್ ಇನ್ ನೆಗೋಟಿಯೇಶನ್ಸ್ , ಜರ್ನಲ್ ಆಫ್ ಪರ್ಸನಾಲಿಟಿ ಆಂಡ್ ಸೋಷಿಯಲ್ ಸೈಕಾಲಜಿ, 2004, ಸಂಪುಟ 86, ಸಂ. 1, 57–76
  32. ಲೆಲ್ಯಾಂಡ್ R. ಬಿಯಾಮಂಟ್, ಇಮೋಷನಲ್ ಕಾಂಪಿಟೆನ್ಸ್, ಆಂಗರ್, ಆನ್ ಅರ್ಜೆಂಟ್ ಪ್ಲಿಯಾ ಫಾರ್ ಜಸ್ಟಿಸ್ ಆಂಡ್ ಆಕ್ಷನ್, ಎಂಟ್ರಿ ಡಿಸ್ಕ್ರೈಬಿಂಗ್ ಪಾಥ್ಸ್ ಆಫ್ ಆಂಗರ್
  33. ನೊವ್ಯಾಕೊ, R. (1975). ಆಂಗರ್ ಕಂಟ್ರೋಲ್: ದಿ ಡೆವಲಪ್ಮೆಂಟ್ ಆಂಡ್ ಇವಾಲ್ವೇಶನ್ ಆಫ್ ಆನ್ ಎಕ್ಸ್‌ಪರಿಮೆಂಟಲ್ ಟ್ರೀಟ್ಮೆಂಟ್. ಲೆಕ್ಸಿಂಗ್ಟನ್, MA: ಹೀತ್.
  34. Beck, Richard (1998). "Cognitive-Behavioral Therapy in the Treatment of Anger: A Meta-Analysis" (PDF). Cognitive Therapy and Research. 22 (1): 63–74. doi:10.1023/A:1018763902991. Archived from the original (pdf) on 2006-09-05. Retrieved 2007-02-05. {{cite journal}}: Unknown parameter |coauthors= ignored (|author= suggested) (help)CS1 maint: postscript (link)
  35. "ಆಂಗರ್." ಗಲೆ ಎನ್‌ಸೈಕ್ಲೊಪೀಡಿಯಾ ಆಫ್ ಸೈಕಾಲಜಿ, 2ನೇ ಆವೃತ್ತಿ. ಗಲೆ ಗ್ರೂಪ್, 2001.
  36. ಎವಿಡೆನ್ಸ್ ಎಗೈನೆಸ್ಟ್ ಕ್ಯಾಥರ್ಸಿಸ್ ಥಿಯರಿ:
    • ಬರ್ಕೆಮ್ಯಾನ್ (2006) ಆಂಗರ್ ಮ್ಯಾನೇಜ್ಮೆಂಟ್.
    • ಗ್ರೀನ್ ಮತ್ತು ಇತರರು. (1975). ದಿ ಫೆಸಿಲಿಟೇಶನ್ ಆಫ್ ಅಗ್ರೆಶನ್ ಬೈ ಅಗ್ರೆಶನ್: ಎವಿಡೆನ್ಸ್ ಎಗೈನೆಸ್ಟ್ ದಿ ಕ್ಯಾಥರ್ಸಿಸ್ ಹೈಪಾಥಿಸಿಸ್. ಅಬ್‌ಸ್ಟ್ರಾಕ್ಟ್. ಜರ್ನಲ್ ಆಫ್ ಪರ್ಸನಾಲಿಟಿ ಆಂಡ್ ಸೋಷಿಯಲ್ ಸೈಕಾಲಜಿ .
    ಎವಿಡೆನ್ಸ್ ಫಾರ್: ಮುರ್ರೆ ಆಂಡ್ ಫೆಸ್‌ಬ್ಯಾಚ್. (1978). ಲೆಟ್ಸ್ ನಾಟ್ ಥ್ರೊ ದಿ ಬೇಬಿ ಔಟ್ ವಿದ್ ಬಾತ್‌ವಾಟರ್: ದಿ ಕ್ಯಾಥರ್ಸಿಸ್ ಹೈಪಾಥಿಸಿಸ್ ರಿವಿಸ್ಟೆಡ್. doi:10.1111/j.1467-6494.1978.tb01012.x
  37. ಜೆನ್, K. A. 1995. ಎ ಮಲ್ಟಿಮೆಥಡ್ ಎಕ್ಸಾಮಿನೇಶ್ ಆಫ್ ದಿ ಬೆನಿಫಿಟ್ಸ್ ಆಂಡ್ ಡೆಟ್ರಿಮೆಂಟ್ಸ್ ಆಫ್ ಇಂಟ್ರಾಗ್ರೂಪ್ ಕಾಂಫ್ಲಿಕ್ಟ್. ಅಡ್ಮಿನಿಸ್ಟ್ರೇಟಿವ್ ಸೈನ್ಸ್ ಕ್ವಾರ್ಟರ್ಲಿ, 40: 256–282.
  38. ಟೈಡೆನ್ಸ್, L. Z. 2000. ಪವರ್‌ಫುಲ್ ಇಮೋಷನ್ಸ್: ದಿ ವಿಶಿಯಸ್ ಸೈಕಲ್ ಆಫ್ ಸೋಷಿಯಲ್ ಸ್ಟೇಟಸ್ ಪೊಸಿಶನ್ಸ್ ಆಂಡ್ ಇಮೋಶನ್ಸ್. N. M. ಆಶ್ಕನಸಿ, C. E. J. ಹಾರ್ಟೆಲ್ ಮತ್ತು W. J. ಜರ್ಬೆ (ಸಂಪಾದಕರು), ಇಮೋಷನ್ಸ್ ಇನ್ ವರ್ಕ್‌ಪ್ಲೇಸ್: ರಿಸರ್ಚ್, ಥಿಯರಿ ಆಂಡ್ ಪ್ರ್ಯಾಕ್ಟೀಸ್: 71–81. ವೆಸ್ಟ್‌ಪೋರ್ಟ್, CT: ಕ್ಯೋರಮ್.
  39. ಗೆಡ್ಡೆಸ್, D. ಮತ್ತು ಕ್ಯಾಲಿಸ್ಟರ್, R. 2007 ಕ್ರಾಸಿಂಗ್ ದಿ ಲೈನ್ಸ್: ಎ ಡ್ಯುಯೆಲ್ ಥ್ರೆಶೋಲ್ಡ್ ಮಾಡೆಲ್ ಆಫ್ ಆಂಗರ್ ಇನ್ ಆರ್ಗನೈಸೇಶನ್ಸ್, ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ರಿವ್ಯೂ. 32 (3): 721–746.
  40. ಇಂಟರ್‌ನ್ಯಾಷನಲ್ ಹ್ಯಾಂಡ್‌ಬುಕ್ ಆಫ್ ಆಂಗರ್. ಚ್ಯಾಪ್ಟರ್ 4: ಕಂಸ್ಟ್ರಕ್ಟಿಂಗ್ ಎ ನ್ಯೂರಾಲಜಿ ಆಫ್ ಆಂಗರ್ . ಮೈಕೆಲ್ ಪಾಟೆಗಲ್ ಮತ್ತು ಗೆರ್ಹಾರ್ಡ್ ಸ್ಟೆಮ್ಲರ್. 2010
  41. ಇಂಟರ್‌ನ್ಯಾಷನಲ್ ಹ್ಯಾಂಡ್‌ಬುಕ್ ಆಫ್ ಆಂಗರ್. ಚ್ಯಾಪ್ಟರ್ 17 . ಮೈಕೆಲ್ ಪಾಟೆಗಲ್ ಮತ್ತು ಗೆರ್ಹಾರ್ಡ್ ಸ್ಟೆಮ್ಲರ್. 2010
  42. ಪಾಲ್ ಎಕ್‌ಮ್ಯಾನ್, ಇಮೋಷನ್ಸ್ ರಿವೀಲ್ಡ್: ರೆಕೊಗ್ನೈಜಿಂಗ್ ಫೇಸಸ್ ಆಂಡ್ ಫೀಲಿಂಗ್ಸ್ ಟು ಇಂಪ್ರೂವ್ ಕಮ್ಯೂನಿಕೇಶನ್ , ಹಾಲ್ಟ್ ಪೇಪರ್‌ಬ್ಯಾಕ್ಸ್, ISBN 0-8050-7516-X, 2004, ಪುಟ 63
  43. ಕ್ಸಿಯೊಲಿಂಗ್ ವಾಂಗ್, ರಣಕ್ ಟ್ರಿವೇಡಿ, ಫ್ರ್ಯಾಂಕ್ ಡೈಬರ್ ಮತ್ತು ಹ್ಯಾರೋಲ್ಡ್ ಸ್ನೈಡರ್, ಜನೆಟಿಕ್ ಆಂಡ್ ಎನ್ವೈರ್ಮೆಂಟಲ್ ಇನ್‌ಫ್ಲುಯೆನ್ಸನ್ ಆನ್ ಆಂಗರ್ ಎಕ್ಸ್‌ಪ್ರೆಶನ್: ದಿ ಜಾರ್ಜಿಯಾ ಕಾರ್ಡಿಯೊವಾಸ್ಕುಲಾರ್ ಟ್ವಿನ್ ಸ್ಟಡಿ , ಸೈಕೊಸೊಮಾಟಿಕ್ ಮೆಡಿಸಿನ್ 67:16–23 (2005)
  44. ಬ್ಯಾರಿ ಸ್ಟಾರ್ Archived 2012-03-19 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಟೆಕ್ ಮ್ಯಾಸಿಯಂ ಆಫ್ ಇನೋವೇಶನ್
  45. ಅರಿಸ್ಟಾಟಲ್ ಪ್ರಕಾರ: "ಸರಿಯಾದ ವಿಷಯದ ಮತ್ತು ವ್ಯಕ್ತಿಗಳ ಬಗ್ಗೆ ಸರಿಯಾದ ಕ್ರಮದಲ್ಲಿ ಕೋಪಗೊಂಡಿದ್ದರೆ, ಸೂಕ್ತ ಸಮಯ ಮತ್ತು ಸಮಯದ ಅಂತರವು ನೈತಿಕವಾಗಿ ಶ್ಲಾಘನೀಯವಾಗಿರುತ್ತದೆ." cf. ಪಾಲ್ M. ಹಘೆಸ್, ಆಂಗರ್ , ಎನ್‌ಸೈಕ್ಲೊಪೀಡಿಯಾ ಆಫ್ ಎಥಿಕ್ಸ್, ಸಂಪುಟ I, ಎರಡನೇ ಆವೃತ್ತಿ, ರಟ್ಲೆಡ್ಜ್ ಪ್ರೆಸ್
  46. Haque, Amber (2004). "Psychology from Islamic Perspective: Contributions of Early Muslim Scholars and Challenges to Contemporary Muslim Psychologists". Journal of Religion and Health. 43 (4): 357–377 [367]. doi:10.1007/s10943-004-4302-z.
  47. Haque, Amber (2004). "Psychology from Islamic Perspective: Contributions of Early Muslim Scholars and Challenges to Contemporary Muslim Psychologists". Journal of Religion and Health. 43 (4): 357–377 [366]. doi:10.1007/s10943-004-4302-z.
  48. Haque, Amber (2004). "Psychology from Islamic Perspective: Contributions of Early Muslim Scholars and Challenges to Contemporary Muslim Psychologists". Journal of Religion and Health. 43 (4): 357–377 [362]. doi:10.1007/s10943-004-4302-z.
  49. Haque, Amber (2004). "Psychology from Islamic Perspective: Contributions of Early Muslim Scholars and Challenges to Contemporary Muslim Psychologists". Journal of Religion and Health. 43 (4): 357–377 [366–8]. doi:10.1007/s10943-004-4302-z.
  50. ಎಲಿಸ್, ಆಲ್ಬರ್ಟ್ (2001). ಓವರ್‌ಕಮಿಂಗ್ ಡಿಸ್ಟ್ರಕ್ಟಿವ್ ಬಿಲೀಫ್ಸ್, ಫೀಲಿಂಗ್ ಆಂಡ್ ಬಿಹೇವಿಯರ್ಸ್: ನ್ಯೂ ಡೈರೆಕ್ಷನ್ಸ್ ಫಾರ್ ರೇಶನಲ್ ಇಮೋಟಿವ್ ಬಿಹೇವಿಯರ್ ಥೆರಪಿ. ಪ್ರೊಮೋಥಿಯಸ್ ಬುಕ್ಸ್.
  51. "Anger" in the 1913 Catholic Encyclopedia.
  52. ಆಂಗರ್, (ಹಿಂದುಧರ್ಮ: ಧರ್ಮಾಸ್ ಕಾಮನ್ ಟು ಆಲ್), ಶ್ರೀ ಕಂಚಿ ಕಾಮಕೋಟಿ ಪೀಠಮ್
  53. ಆಂಗರ್ ಮ್ಯಾನೇಜ್ಮೆಂಟ್: ಹೌ ಟು ಟೇಮ್ ಅವರ್ ಡೆಡ್‌ಲೀಸ್ಟ್ ಇಮೋಷನ್ Archived 2008-12-26 ವೇಬ್ಯಾಕ್ ಮೆಷಿನ್ ನಲ್ಲಿ. - ಸತ್ಗುರು ಬೋಧಿನಾಥ ವೈಲನ್‌ಸ್ವಾಮಿ
  54. ೫೪.೦ ೫೪.೧ ದಿ ಅರ್ಬನ್ ಧರ್ಮ ನ್ಯೂಸ್‌ಲೆಟರ್, ಮಾರ್ಚ್ 9, 2004
  55. ಹೌ ಟು ಸಾಲ್ವ್ ಅವರ್ ಹ್ಯೂಮನ್ ಪ್ರಾಬ್ಲೆಮ್ಸ್, ಥಾರ್ಪ ಪಬ್ಲಿಕೇಶನ್ಸ್ (2005, US ಆವೃತ್ತಿ, 2007) ISBN 978-0-9789067-1-9
  56. "ಕೋಧನ ಸುಟ್ಟ: ಆನ್ ಆಂಗ್ರಿ ಪರ್ಸನ್"(AN 7.60) - ಪಾಲಿಯಿಂದ ಥಾನಿಸ್ಸಾರೊ ಭಿಖು ಅನುವಾದಿಸಿರುವುದು.ಆಕ್ಸೆಸ್ ಟು ಇನ್‌ಸೈಟ್, ಜೂನ್ 8, 2010
  57. ಉದಾಹರಣೆಗಳೆಂದರೆ: ಪ್ರಾಫೆಟ್ ಮ್ಯೂಸಾಸ್ ಆಂಗರ್: ಖುರಾನ್ 7:150, 154; 20:86; ಪ್ರಾಫೆಟ್ ಯುನಸ್ ಆಂಗರ್: ಖುರಾನ್ 21:87-8; ಮತ್ತು ಬಿಲೀವರ್ಸ್ ಆಂಗರ್: ಖುರಾನ್ 9:15
  58. ೫೮.೦ ೫೮.೧ ಬಶೀರ್, ಶಾಜಾದ್. ಆಂಗರ್ , ಎನ್‌ಸೈಕ್ಲೊಪೀಡಿಯಾ ಆಫ್ ದಿ ಖುರಾನ್, ಬ್ರಿಲ್, 2007.
  59. ಉದಾಹರಣೆಗಾಗಿ ಗಮನಿಸಿ - ಖುರಾನ್ 3:134; 42:37; ಸಹಿಹ್ ಅಲ್-ಬುಖಾರಿ, ಸಂಪುಟ 8, ಪುಸ್ತಕ 73, ಸಂ. 135.
  60. ಮೊಹಮ್ಮದ್ ಅಬು-ನೈಮರ್, ನಾನ್-ವೈಲೆನ್ಸ್, ಪೀಸ್‌ಬಿಲ್ಡಿಂಗ್, ಕಾನ್ಫ್ಲಿಕ್ಟ್ ರೆಸೊಲ್ಯೂಷನ್ ಆಂಡ್ ಹ್ಯೂಮನ್ ರೈಟ್ಸ್ ಇನ್ ಇಸ್ಲಾಂ:ಎ ಫ್ರೇಮ್‌ವರ್ಕ್ ಫಾರ್ ನಾನ್‌ವೈಯಲೆನ್ಸ್ ಆಂಡ್ ಪೀಸ್‌ಬಿಲ್ಡಿಂಗ್ ಇನ್ ಇಸ್ಲಾಂ , ಜರ್ನಲ್ ಆಫ್ ಲಾ ಆಂಡ್ ರಿಲೀಜನ್, ಸಂಪುಟ 15, ಸಂ. 1/2. (2000 - 2001), pp. 217-265.
  61. ೬೧.೦ ೬೧.೧ ಕಾಫ್‌ಮ್ಯಾನ್ ಕೊಹ್ಲರ್, ಆಂಗರ್, ಜ್ಯೂಯಿಶ್ ಎನ್‌ಸೈಕ್ಲೊಪೀಡಿಯಾ
  62. ಎಥಿಕ್ಸ್ ಆಫ್ ಫಾದರ್ಸ್ 4:1
  63. ರಾಂಬಮ್, ಹಿಲ್ಚಾಟ್ ಡಿಯೋಟ್ 2
  64. ಸೆಫೆರ್ ಹತಾನ್ಯ
  65. ಕಿಟ್ಜರ್ ಶುಲ್ಚನ್ ಅರುಚ್ 29:4
  66. ೬೬.೦ ೬೬.೧ ೬೬.೨ ಶೈಲರ್ ಮ್ಯಾಥೀವ್ಸ್, ಗೆರಾಲ್ಡ್ ಬರ್ನೆ ಸ್ಮಿಥ್, ಎ ಡಿಕ್ಶನರಿ ಆಫ್ ರಿಲೀಜನ್ ಆಂಡ್ ಎಥಿಕ್ಸ್, ಕೆಸಿಂಗರ್ ಪಬ್ಲಿಷಿಂಗ್, ಪುಟ 17
  67. ಗಾರ್ಡೆಟ್, L. ಅಲ್ಲಾಹ್ , ಎನ್‌ಸೈಕ್ಲೊಪೀಡಿಯಾ ಆಫ್ ಇಸ್ಲಾಂ, ಬ್ರಿಲ್, 2007.
  68. ಪವೆನ್, ವಿಮ್, ರಿವಾರ್ಡ್ ಆಂಡ್ ಪನಿಶ್ಮೆಂಟ್ , ಎನ್‌ಸೈಕ್ಲೊಪೀಡಿಯಾ ಆಫ್ ಖುರಾನ್, ಬ್ರಿಲ್, 2007


ಹೆಚ್ಚಿನ ಓದಿಗಾಗಿ - ವಿದ್ವತ್ಪೂರ್ಣ ಲೇಖನಗಳು

[ಬದಲಾಯಿಸಿ]
"https://kn.wikipedia.org/w/index.php?title=ಕೋಪ&oldid=1171377" ಇಂದ ಪಡೆಯಲ್ಪಟ್ಟಿದೆ