ಕೋಮಲ್ ಸ್ವಾಮಿನಾಥನ್
ಕೋಮಲ್ ಸ್ವಾಮಿನಾಥನ್ | |
---|---|
![]() | |
ಜನನ | ಕೋಮಲ್ ಸ್ವಾಮಿನಾಥನ್ ೨೭ ಜನವರಿ ೧೯೩೫ ಕೋಮಲ್, ತಂಜಾವೂರು ಜಿಲ್ಲೆ, ತಮಿಳುನಾಡು, ಭಾರತ. |
ಸಾವು | ಅಕ್ಟೋಬರ್, ೧೯೯೫ (ವಯಸ್ಸು ೬೦) ಚೆನ್ನೈ, ತಮಿಳುನಾಡು, ಭಾರತ |
ಶಿಕ್ಷಣs |
|
Years active | ೧೯೫೯–೧೯೯೫ |
ಸಂಬಂಧಿಕರು | ಆನಂದ್ ಶಂಕರ್ (ಮೊಮ್ಮಗ)[೧] |
ಕೋಮಲ್ ಸ್ವಾಮಿನಾಥನ್ (ಜನನ ೨೭ ಜನವರಿ ೧೯೩೫, ಭಾರತದ ತಮಿಳುನಾಡಿನ ಕಾರೈಕುಡಿಯಲ್ಲಿ ಜನನ, ಮರಣ ೧೯೯೫) ಇವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ತಮಿಳು ರಂಗಭೂಮಿಯ ನಾಟಕಕಾರ, ಚಿತ್ರಕಥೆಗಾರ, ಚಲನಚಿತ್ರ ನಿರ್ದೇಶಕ ಮತ್ತು ಪತ್ರಕರ್ತರಾಗಿದ್ದಾರೆ.[೨]
ಆರಂಭಿಕ ಜೀವನ
[ಬದಲಾಯಿಸಿ]ಸ್ವಾಮಿನಾಥನ್ ಅವರು ಎಸ್.ವಿ.ಸಹಸ್ರನಾಮಂ ಅವರ ಶಾಲೆಗೆ ಸೇರಿದರು ಮತ್ತು ನಾಟಕ ರಚನೆಯ ಕಲೆ ಮತ್ತು ರಂಗ ತಂತ್ರಗಳನ್ನು ಕಲಿತರು. ೧೯೭೧ ರಲ್ಲಿ, ಸ್ಟೇಜ್ ಫ್ರೆಂಡ್ಸ್ ಸ್ಥಾಪಿಸಿದರು.[೩]
ವೃತ್ತಿಜೀವನ
[ಬದಲಾಯಿಸಿ]ಸ್ವಾಮಿನಾಥನ್‌ರವರು ತಮಿಳು ರಂಗಭೂಮಿಯಲ್ಲಿ ನಾಟಕಕಾರರಾಗಿದ್ದರು. ೧೯೮೦ ರಲ್ಲಿ, ಅವರ ತಣ್ಣೀರ್ ತಣ್ಣೀರ್ ನಾಟಕವು ಅವರನ್ನು ಬೆಳಕಿಗೆ ತಂದಿತು. ಅವರು ತಮ್ಮ ನಾಟಕ ತಂಡ "ಸ್ಟೇಜ್ ಫ್ರೆಂಡ್ಸ್" ನೊಂದಿಗೆ ಈ ನಾಟಕವನ್ನು ರಚಿಸಿ, ನಿರ್ದೇಶಿಸಿ, ಪ್ರದರ್ಶಿಸಿದರು. ಈ ನಾಟಕವನ್ನು ೨೫೦ ಕ್ಕೂ ಹೆಚ್ಚು ಬಾರಿ ಪ್ರದರ್ಶಿಸಲಾಯಿತು. ಈ ನಾಟಕ, ಥಣ್ಣೀರ್ ಥಣ್ಣೀರ್ (ನೀರಿನ ನೀರು) ಅಧಿಕಾರಶಾಹಿ ಮತ್ತು ರಾಜಕಾರಣಿಗಳು ಮತ್ತು ಅಧಿಕಾರಿಗಳ ಉದಾಸೀನ ಮನೋಭಾವದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರ ನೀರಿನ ಕೊರತೆಯನ್ನು ಎತ್ತಿ ತೋರಿಸಿತು ಮತ್ತು ನಂತರ, ೧೯೮೧ ರಲ್ಲಿ, ಕೆ.ಬಾಲಚಂದರ್ ಅವರು ಅದೇ ಹೆಸರಿನಲ್ಲಿ ಚಿತ್ರೀಕರಿಸಿದರು. ಇದು ರಾಷ್ಟ್ರೀಯ ಪ್ರಶಸ್ತಿ ಮತ್ತು ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿತು.[೪]
ಕೋಮಲ್ ಸ್ವಾಮಿನಾಥನ್‌ರವರು ಸುಮಾರು ೩೩ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಅವರು ಒರು ಇಂಧಿಯ ಕನಸು (ಆನ್ ಇಂಡಿಯನ್ ಡ್ರೀಮ್) ಚಿತ್ರವನ್ನು ನಿರ್ದೇಶಿಸಿದರು ಮತ್ತು ೧೯೮೪ ರಲ್ಲಿ, ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.[೫]
ಅವರು ಸಾಹಿತ್ಯ, ಸಾಮಾಜಿಕ-ಸಾಂಸ್ಕೃತಿಕ ತಮಿಳು ಮಾಸಿಕ ಪತ್ರಿಕೆಯಾದ ಶುಭಮಂಗಲದ ಸಂಪಾದಕರಾಗಿದ್ದರು. ಅವರು ಕಲೈಮಾಮಣಿ ಮತ್ತು ಇತರ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕೋಮಲ್ ಸ್ವಾಮಿನಾಥನ್‌ರವರು ೧೯೯೫ ರಲ್ಲಿ, ನಿಧನರಾದರು. ಅವರಿಗೆ ಲಲಿತಾ ಧಾರಿಣಿ ಎಂಬ ಮಗಳು ಇದ್ದಳು.[೬]
ಚಲನಚಿತ್ರಗಳು
[ಬದಲಾಯಿಸಿ]- ನಾಟಕಗಳು
ಕೋಮಲ್ ತಮ್ಮದೇ ತಂಡದೊಂದಿಗೆ ಈ ಕೆಳಗಿನ ನಾಟಕಗಳನ್ನು ಬರೆದು ನಿರ್ವಹಿಸಿದ್ದಾರೆ.
- ಸನ್ನತಿ ತೇರು, ೧೯೭೧
- ನವಾಬ್ ನರ್ಕಲಿ, ೧೯೭೧ (ನಂತರ ನವಾಬ್ ನರ್ಕಲಿ ಚಲನಚಿತ್ರವಾಗಿ ಅಳವಡಿಸಿಕೊಳ್ಳಲಾಯಿತು).
- ಮಂತ್ರಿ ಕುಮಾರಿ, ೧೯೭೨
- ಪಟ್ಟಿನಂ ಪರಿಪೊಗಿರತು, ೧೯೭೨
- ವಾಜ್ವಿನ್ ವಾಸಲ್, ೧೯೭೩ (ನಂತರ, ಟಿವಿ ಧಾರಾವಾಹಿಯಾಗಿ ಅಳವಡಿಸಿಕೊಳ್ಳಲಾಯಿತು).
- ಪೆರುಮಲೆ ಸಾಚಿ, ೧೯೭೪ (ನಂತರ, ಕುಮಾರ ವಿಜಯಂ ಚಲನಚಿತ್ರವಾಗಿ ಅಳವಡಿಸಿಕೊಳ್ಳಲಾಯಿತು).
- ಜೀಸಸ್ ವರುವರ್, ೧೯೭೪
- ರಾಜಾ ಪರಂಬರೈ, ೧೯೭೫ (ನಂತರ, ಪಾಲೂಟಿ ವಲರ್ತ ಕಿಲಿ ಚಲನಚಿತ್ರವಾಗಿ ಅಳವಡಿಸಿಕೊಳ್ಳಲಾಯಿತು).
- ಯುದ್ಧ ಕಾಂಡಂ, ೧೯೭೫ (ನಂತರ, ಅವರು ನಿರ್ದೇಶಿಸಿದ ಯುದ್ಧ ಕಾಂಡಂ ಚಲನಚಿತ್ರವಾಗಿ ಅಳವಡಿಸಿಕೊಳ್ಳಲಾಯಿತು).
- ಅಂಜು ಪುಲಿ ಒರು ಪೆನ್, ೧೯೭೬
- ಕೂಡು ಇಲ್ಲಾ ಕೋಲಂಗಲ್, ೧೯೭೭ (ಕೋಮಲ್ ಮೂಲತಃ ಇದನ್ನು ಇಳಕ್ಕನಂ ಮೀರಿಯ ಕವಿಥೈಗಲ್ ಎಂದು ಹೆಸರಿಸಿದ್ದರು).
- ಆಚಿ ಮಾತರಂ, ೧೯೭೭
- ಸುಲ್ತಾನ್ ಏಕತಾಸಿ, ೧೯೭೮
- ಸ್ವರ್ಗ ಬೂಮಿ, ೧೯೭೯ (ನಂತರ, ಅವರು ನಿರ್ದೇಶಿಸಿದ ಅನಲ್ ಕಾಟ್ರು ಚಲನಚಿತ್ರವಾಗಿ ಅಳವಡಿಸಿಕೊಳ್ಳಲಾಯಿತು).
- ಚೆಕ್ಕು ಮಾಡುಗಲ್, ೧೯೮೦ (ನಂತರ, ಸಾಥಿಕ್ಕೋರು ನೀತಿ ಚಲನಚಿತ್ರವಾಗಿ ಅಳವಡಿಸಿಕೊಳ್ಳಲಾಯಿತು).
- ಥಣ್ಣೀರ್ ಥಣ್ಣೀರ್, ೧೯೮೦ (ನಂತರ, ಥಣ್ಣೀರ್ ಥಣ್ಣೀರ್ ಚಲನಚಿತ್ರವಾಗಿ ಅಳವಡಿಸಿಕೊಳ್ಳಲಾಯಿತು).
- ಒರು ಇಂತಿಯ ಕನಸು, ೧೯೮೨ (ನಂತರ, ಅವರು ನಿರ್ದೇಶಿಸಿದ ಒರು ಇಂಧಿಯ ಕನಸು ಚಲನಚಿತ್ರವಾಗಿ ಅಳವಡಿಸಿಕೊಳ್ಳಲಾಯಿತು).
- ಅಶೋಕ ವನಂ, ೧೯೮೩ (ನಂತರ, ಟಿವಿ ಧಾರಾವಾಹಿಯಾಗಿ ಅಳವಡಿಸಿಕೊಳ್ಳಲಾಯಿತು).
- ನಲಿರಾವಿಲ್ ಪೆಟ್ರೋಮ್, ೧೯೮೪
- ಮನಿಥನ್ ಎನ್ನಮ್ ತೀವು, ೧೯೮೫
- ಇರುಟಿಲೆ ಥೆಡತೀಂಗಾ, ೧೯೮೫ (ನಂತರ ಟಿವಿ ಧಾರಾವಾಹಿಯಾಗಿ ಅಳವಡಿಸಿಕೊಳ್ಳಲಾಯಿತು).
- ಕರುಪ್ಪು ವಿಯಾಝಾಕಿಜಮೈ, ೧೯೮೮
- ನರ್ಕಲಿ, ೧೯೮೯ (ನಂತರ, ಟಿವಿ ನಾಟಕವಾಗಿ ಅಳವಡಿಸಿಕೊಳ್ಳಲಾಯಿತು).
- ಗ್ರಾಮ ರಾಜ್ಯಂ, ೧೯೮೯
- ಅನ್ಬುಕ್ಕು ಪಂಜಮಿಲೈ, ೧೯೯೨
- ಪುಧಿಯಾ ಪಾಧೈ
- ಮಿನ್ನಲ್ ಕೋಲಂ
- ತಿಲ್ಲೈ ನಾಯಕಂ
- ಡಾಕ್ಟರುಕ್ಕು ಮರುಂಧು
- ಕಲ್ಯಾನ ಸೂಪರ್ ಮಾರ್ಕೆಟ್
- ದೆಹಲಿ ಮಾಮಿಯಾರ್ (ನಂತರ, ಕರ್ಪಗಂ ವಂತಚು ಚಲನಚಿತ್ರವಾಗಿ ಅಳವಡಿಸಿಕೊಳ್ಳಲಾಯಿತು).
- ಅವನ್ ಪಾರ್ತುಪ್ಪನ್
- ಅಪ್ಪಾವಿ
- ಕಿಲ್ಲಿಯೂರ್ ಕಣಗಂ
- ಎನ್ ವೀಡು ಎನ್ ಕನವನ್ ಎನ್ ಕುಜಂತೈ (ನಂತರ, ಟಿವಿ ನಾಟಕವಾಗಿ ಅಳವಡಿಸಿಕೊಳ್ಳಲಾಯಿತು).
- ಚಿತ್ರಕಥೆಗಾರ
- ಕಲ್ಲುಮ್ ಕನಿಯಾಗಂ (೧೯೬೮)
- ನವಾಬ್ ನಾರ್ಕಲಿ (೧೯೭೨)
- ಪಾಲಜಿ ಮದನಂ (೧೯೭೫, ಮಲಯಾಳಂ)
- ಕುಮಾರ ವಿಜಯಂ (೧೯೭೬)
- ಥಣ್ಣೀರ್ ಥಣ್ಣೀರ್ (೧೯೮೧)
- ಕೊಡೈ ಮಜೈ (೧೯೮೬)
- ನಿರ್ದೇಶಕ
- ಒರು ಇಂಧಿಯಾ ಕನವು (೧೯೮೩)
- ಅನಲ್ ಕಾಟ್ರು (೧೯೮೩)
- ಯುದ್ಧ ಕಾಂಡಮ್ (೧೯೮೩)
ಉಲ್ಲೇಖಗಳು
[ಬದಲಾಯಿಸಿ]- ↑ Kumar, S. R. Ashok (31 May 2014). "Audio Beat: Arima Nambi - Sivamani belts it out". The Hindu. Retrieved 19 July 2020.
- ↑ Subramanian Shankar (2001). "Water!: A Tamil Play by Komal Swaminathan". Asian Theatre Journal. 18 (2): 123–173. doi:10.1353/atj.2001.0023. S2CID 161919542 – via Project MUSE.
- ↑ Rajagopalan, Sudha (2008). Indian Films in Soviet Cinemas: The Culture of Movie-going After Stalin — Sudha Rajagopalan – Google Books. Indiana University Press. ISBN 978-0253220998. Retrieved 2014-06-15.
- ↑ https://www.thehindu.com/entertainment/theatre/tribute-to-komal-swaminathan-whose-plays-focused-on-social-issues/article36754678.ece
- ↑ https://www.indiatoday.in/magazine/society-and-the-arts/films/story/19811215-komal-swaminathan-im-thoroughly-satisfied-with-thanneer-thanneer-773544-2013-10-24
- ↑ https://www.imdb.com/name/nm1138302/
ಬಾಹ್ಯ ಕೊಂಡಿಗಳು
[ಬದಲಾಯಿಸಿ]- http://tfmpage.com/forum/26339.5890.23.51.04.html Archived 2004-01-02 ವೇಬ್ಯಾಕ್ ಮೆಷಿನ್ ನಲ್ಲಿ. A Tribute to Komal Swaminathan by 'Cinema Virumbi
- Shankar, S.; Swaminathan, Komal (2001). "Water!: A Tamil Play by Komal Swaminathan". Asian Theatre Journal. 18 (2): 123–173. doi:10.1353/atj.2001.0023. JSTOR 1124150. S2CID 161919542.