ಕ್ಯಾಸನೂರು ಅಡಿಕೆ ತಳಿ
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಹಣ್ಣಡಕೆ | |
---|---|
Fruiting specimen | |
Scientific classification | |
ಸಾಮ್ರಾಜ್ಯ: | plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | A. catechu
|
Binomial name | |
ಅರೆಕಾ ಕಾಟೇಚು |
ಕ್ಯಾಸನೂರು ಅಡಿಕೆ
ಇದೊಂದು ಅತ್ಯುತ್ತಮ ಉತ್ಕೃಷ್ಟವಾದ ಯಾವುದೇ ರೋಗಗಳು ಬಾರದಂತ ನಾಟಿ ಅಡಿಕೆ ತಳಿ. ಸದೃಢವಾಗಿ ಬೆಳೆಯುವ ಕಡಿಮೆ ಕಾಳಜಿಯಲ್ಲೂ ಅಧಿಕ ಇಳುವರಿ ಕೊಡುವ ಗುಟ್ಕಾ ತಯಾರಿಸಲು ಬಹುಬೇಡಿಕೆಯ ಅಡಿಕೆ. ಇದಕ್ಕೆ ಇತ್ತೀಚೆಗೆ ತೀರ್ಥಹಳ್ಳಿ, ಭೀಮಸಮುದ್ರ, ಚನ್ನಗಿರಿ ಭಾಗಗಳಲ್ಲಿ ಅತಿಯಾಗಿ ಭಾದಿಸುವ ಎಲೆಚುಕ್ಕೆ ರೋಗ ಬರುವುದೇ ಇಲ್ಲ. ಈ ತಳಿ ಬಗ್ಗೆ ಅಧ್ಯಯನ ಮಾಡಿ ನೋಡಿದರೆ ಕ್ಯಾಸನೂರು ಅಡಿಕೆ ತಳಿ ಅತೀ ಉತ್ತಮ ಎಂದು ಸಾಬೀತಾಗಿದೆ. ಕರ್ನಾಟಕದಲ್ಲಿ ಈಗ ಕರಾವಳಿ, ಮಲೆನಾಡು, ಅರೆ ಮಲೆನಾಡು ಹಾಗೂ ಅದಕ್ಕೆ ತಾಗಿಕೊಂಡ ಬಯಲು ಸೀಮೆ ಪ್ರದೇಶಗಳಲ್ಲಿ ಅಡಿಕೆ ಬೆಳೆ ಬೆಳೆಯುತ್ತಿದ್ದು, ಇದರಷ್ಟು ಆದಾಯ ಕೊಡಬಲ್ಲ ಬೆಳೆ ಬೇರೊಂದು ಇಲ್ಲದ ಕಾರಣ ಇನ್ನೂ ಇನ್ನೂ ಬೆಳೆ ಪ್ರದೇಶ ವಿಸ್ತರಣೆ ಆಗುತ್ತಲೇ ಇರುತ್ತದೆ. ಲೋಕಲ್ ತಳಿಗಳಲ್ಲಿ ಕರಾವಳಿ ಭಾಗದ ತಳಿಯೇ ಬೇರೆ. (ದಕ್ಷಿಣ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಇತ್ಯಾದಿ) ಉಳಿದೆಡೆಯ ತಳಿಯೇ ಬೇರೆ. ದಾವಣಗೆರೆ, ಭೀಮ ಸಮುದ್ರ, ಸಾಗರದ ಕೆಳದಿ ಕ್ಯಾಸನೂರು ಸೀಮೆಯಲ್ಲಿ ಬೆಳೆಯುತ್ತಿರುವ ಅಡಿಕೆ ಎಲ್ಲಾ ಪ್ರದೇಶಕ್ಕೂ ಹೊಂದಿಕೆಯಾಗುವ ವಿಶಿಷ್ಟ ಗುಣದ ತಳಿ. ಅಲ್ಲದೇ ಅಭಿವೃದ್ಧಿ ಪಡಿಸಿದ ತಳಿಗಳು ಇವೆ ಇವು ಕ್ಯಾಸನೂರು ತಳಿಯಷ್ಟು ಇಳುವರಿಯು ಇಲ್ಲ ಅರೋಗ್ಯವಂತ ಮರಗಳು ಆಗುವುದಿಲ್ಲ. ಆಗಾಗ ಎಲ್ಲ ಬಗೆಯ ರೋಗಬಾದೆಗೆ ತುತ್ತಾಗಿ ಸಾಯುತ್ತವೆ. ಅಧಿಕ ಆರೈಕೆ ಬೇಡುತ್ತವೆ ಮುತುವರ್ಜಿಯಿಂದ ನೋಡಿಕೊಳ್ಳುವುದೇ ತ್ರಾಸದಾಯಕವಗಿರುತ್ತದೆ. ಅಂತಹ ಸುಧಾರಿತ ಹಾಗೂ ಅಭಿವೃದ್ಧಿ ಪಡಿಸಿದ ತಳಿಗಳೆಂದರೆ ಮಂಗಳ (ಚೀನಾ ಮೂಲದ್ದು), ಸುಮಂಗಳ (ಇಂಡೋನೇಷ್ಯಾ) ಶ್ರೀ ವರ್ಧನ ( ಮಹಾರಾಷ್ಟ್ರ), ಶ್ರೀಮಂಗಳ (ಸಿಂಗಾಪುರ್), ಮೋಹಿತ್ ನಗರ (ಪಶ್ಚಿಮ ಬಂಗಾಳ), ಹಿರೇಹಳ್ಳಿ ( ಕರ್ನಾಟಕದ ಮಂಡ್ಯ, ಹಾಸನ, ಬೆಂಗಳೂರು, ತುಮಕೂರು ನಾನಾ ಜಿಲ್ಲೆಯಲ್ಲಿದ್ದರು ಇಳುವರಿ ಕಮ್ಮಿ ದಾಟುಗಣ್ಣು ಅಂದರೆ ಬೇಗ ಬೆಳೆದು ಬೇಗ ಬೀಳುತ್ತದೆ), ಸಮೃದ್ದಿ (ಅಂಡಮಾನ್ ಮತ್ತು ನಿಕೋಬಾರ್), ಸ್ವರ್ಣಮಂಗಳ ಕೇರಳ), ಕಾಹಿಕುಚಿ (ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳು), ಮಧುರಮಂಗಳ (ಕರ್ನಾಟಕದ ಕೊಂಕಣ್ ಪ್ರದೇಶ), ನಲ್ ಬರಿ (ಉತ್ತರ ಬಂಗಾಲ), ಶತಮಂಗಳ, ಸಂಕರಣ ಮಾಡಿದ ತಳಿಗಳಾದ ವಿಟಿಎಲ್ಎಹೆಚ್ -1 ಮತ್ತು ವಿಟಿಎಲ್ಎಹೆಚ್ -2 ಇವುಗಳನ್ನ ಬೆಳೆದು ಕೈಸುಟ್ಟಕೊಂಡವರಿದ್ದಾರೆ.
ಆದರೆ ಕ್ಯಾಸನೂರು ಅಡಿಕೆ ತಳಿಯನ್ನ ಮೇಲೆ ಹೇಳಿದ ಈ ಎಲ್ಲಾ ಭೂಪ್ರದೇಶದಲ್ಲಿ ಬೆಳದವರಿದ್ದಾರೆ ಅಲ್ಲೆಲ್ಲ ಉತ್ತಮವಾಗಿಯೇ ಹೊಂದಿಕೊಂಡು ಬೆಳೆದು ಕಡಿಮೆ ಕಾಳಜಿಯಲ್ಲಿ ವರ್ಷಕ್ಕೆ ಗಿಡ ಒಂದರಲ್ಲಿ ಸರಾಸರಿ 3.7 ರಿಂದ 4.9 kg ವರೆಗೆ ಇಳುವರಿ ನೀಡುತ್ತಿದೆ. ಬಹಳ ಮುತುವರ್ಜಿ ಮತ್ತು ಸಾವಯವ ಗೊಬ್ಬರದಲ್ಲಿ ಬೆಳೆದರೆ 5 ರಿಂದ 6 kg ಇಳುವರಿ ಇದೆ. ಕೆಲವರು ಇದನ್ನೇ ಹೈಟೆಕ್ ಆಗಿ ರಸಗೊಬ್ಬರಗಳು, ರಾಸಾಯನಿಕ ಸೂಕ್ಷ್ಮ ಪೋಷಕಾಂಶಗಳನ್ನ ಹಾಗೂ ಹಲವು ಒಳಸುರಿಗಳನ್ನ ಹಾಕಿ ಬೆಳೆದು ಸರಾಸರಿ 10 ಕೆಜಿಗೂ ಅಧಿಕ ಇಳುವರಿ ಪಡೆದ ದಾಖಲೆ ಇದೆ. ಮರದ ಬಾಳಿಕೆ ಅಧಿಕ ರೋಗಬಾದೆ ತೀರ ಕಡಿಮೆ.
ಕರಾವಳಿ ಜನ, ಮಂಗಳೂರು ಹಾಗೂ ಚಿಕ್ಕಮಗಳೂರು ಜನ, ಹಾವೇರಿ, ಹಾನಗಲ್, ದಾವಣಗೆರೆ, ತೀರ್ಥಹಳ್ಳಿ, ತಮಿಳುನಾಡು, ಆಂಧ್ರ, ಬೆಂಗಳೂರಿನ ನಾನಾ ಕಡೆ ಈ ತಳಿ ಬೆಳೆದು ಇದೇ ತಳಿ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಂತ ಈ ತಳಿಯು ಅಲ್ಲಲ್ಲಿ ಬೆಳೆದ ಬೀಜಕ್ಕಿಂತ ಇಲ್ಲಿನ ಮೂಲ ಸಸ್ಯಗಳ ಬೀಜದ ಸಸಿಗಳೇ ಉತ್ತಮ ಎಂದು ಬೆಳೆದವರು ಹೇಳುತ್ತಾರೆ. ಜೊತೆಗೆ ಸಹಜವಾಗಿ ಯಾವುದೇ ರಾಸಾಯನಿಕ ಬಳಸದೆ ಬೆಳಸಿದ ಸಸಿಗಳನ್ನು ಕೊಂಡು ತರಬೇಕು. ಇತ್ತೀಚೆಗೆ ಅಡಿಕೆ ಸಸಿ ಲಾಭದಾಯಕ ಕಸುಬಾಗಿದೆ ಹಾಗಾಗಿ ರೈತರೇ ರೈತರಿಗೆ ಮೋಸ ಮಾಡಿ ಯಾವ ಯಾವುದೋ ತಳಿಯನ್ನ ಕ್ಯಾಸನೂರು ತಳಿ ಎಂದು ಹೇಳಿಕೊಂಡು ಮಾರತ್ತಾರೆ. ಗಿಡಗಳು ದಷ್ಟ ಪುಷ್ಟವಾಗಿ ಕಾಣಲೆಂದು ಟಾನಿಕ್ ಬಳಸಿರುತ್ತಾರೆ. ಇವು ಉತ್ತಮವಲ್ಲ. ಕ್ಯಾಸನೂರು ಗ್ರಾಮಕ್ಕೆ ಸೇರಿದ ರೈತರು ರಾಸಾಯನಿಕ ಮುಕ್ತ ಸಹಜವಾಗಿ ಸಸಿ ಬೆಳೆಸಿ ಮಾರುತ್ತಾರೆ.
ಕ್ಯಾಸನೂರು ಸೀಮೆ ಅಡಿಕೆ
ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ತಾಲೂಕಿನ ತನಕವೂ ಈ ಪ್ರದೇಶ ವ್ಯಾಪಿಸಿಕೊಂಡಿದೆ. ಕೆಳದಿಯ ಅರಸರ ಆಳ್ವಿಕೆಯ ವ್ಯಾಪ್ತಿ ಎಲ್ಲಿ ತನಕ ಇತ್ತೋ ಅಲ್ಲೆಲ್ಲಾ ಈ ಅಡಿಕೆ ತಳಿಯೇ ಇರುವುದು. ಆದರೆ ಕ್ಯಾಸನೂರಿನ ಅಡಿಕೆಯೇ ಬಹಳ ಸೂಕ್ತ. ಇದಕ್ಕೆ ಸುಮಾರು 400 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಸ್ಥಳೀಯ ನಾಟಿ ತಳಿ. ಇದನ್ನ ಕ್ಯಾಸನೂರು - ಕೆಳದಿ ಸೀಮೆ ಅಡಿಕೆ ಎಂದು ಸಂಬೋದಿಸುತ್ತಾರೆ.
ಕೆಳದಿಯ ಅರಸರ ಕಾಲದಲ್ಲಿ ಅಂದರೆ 15-16 ನೇ ಶತಮಾನದಲ್ಲಿ ಅಡಿಕೆ ಬೇಸಾಯ ಹೇಗೆ ಮಾಡಬೇಕು, ಅಂತರ ಎಷ್ಟು ಇಡಬೇಕು, 18 ಅಡಿ ಅಂತರ ಮತ್ತು ಮತ್ತೆ 9 ಅಡಿಗೆ ಎಡೆ ಸಸಿ ಆದರೆ ಆಯಾಗಿಡ ನೆಡಬೇಕು ಎಂಬ ಪದ್ದತಿ ಇತ್ತು. ಯಾವ ಯಾವ ಪ್ರದೇಶದಲ್ಲಿ ಹೇಗೇಗೆ ಬೆಳೆಸಬೇಕು ಎಂಬ ಬಗ್ಗೆ ಅಧ್ಯಯನಗಳೂ ನಡೆದಿತ್ತು ಎನ್ನುತ್ತಾರೆ ಇಲ್ಲಿನ ಪೂರ್ಜರು. ಅತ್ತ ತೀರಾ ಮಲೆನಾಡು ಅಲ್ಲ, ಅರೆ ಮಲೆನಾಡೂ ಅಲ್ಲದ ಪ್ರದೇಶ.
ತಳಿಯ ವಿಶೇಷ
ಈ ಪ್ರದೇಶದಲ್ಲಿ ಅಡಿಕೆ ಬೆಳೆಗಾರರು ತೋಟದ ಆರೈಕೆ ಮಾಡುವುದು ತುಂಬಾ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಹೊಸ ತಲೆಮಾರಿನವರು ಪೋಷಕಾಂಶ, ನೀರಾವರಿ ಮಾಡುತ್ತಿದ್ದಾರೆ. ಹಿಂದೆ ಅದೂ ಇರಲಿಲ್ಲ. ಆದರೂ ಎಕರೆಗೆ ಸರಾಸರಿ 17-18 ಕ್ವಿಂಟಾಲು ಇಳುವರಿ ಪಡೆಯುತ್ತಿದ್ದರು. ಈಗ ಕೆಲವರು ಉತ್ತಮ ರೀತಿಯಲ್ಲಿ ಆರೈಕೆ ಮಾಡಿದ ಕಾರಣ ಎಕ್ರೆಗೆ 22-27 ಕ್ವಿಂಟಾಲು ಸಹ ಪಡೆಯುತ್ತಾರೆ. ಕೆಂಪಾದರೆ ಎರಡು ಕ್ವಿಂಟಾಲು ಕಡಿಮೆಯಾಗಬಹುದು. ಚಾಲಿ ಅಷ್ಟು ಬರುತ್ತದೆ. ಈ ಅಡಿಕೆಯ ತೂಕ ಜಾಸ್ತಿ. ದುಂಡಗೆ ಅಡಿಕೆ. ಸುಂದರವಾದ ಅಡಿಕೆ ಗೊನೆ. ಕಟ್ಟಿಂಗ್ ಉತ್ತಮ. ಬಾರೀ ಗಟ್ಟಿಯೂ ಅಲ್ಲ ಮೆದುವೂ ಅಲ್ಲ. ಜಗಿಯಲು ಕಷ್ಟ ಇಲ್ಲದ್ದು. ಮರಕ್ಕೆ ಅಂಟಿಕೊಂಡಂತೆ ದೊಡ್ದ ಗೊನೆ. ಇದನ್ನು ಮಟ್ಟು ಗೊನೆ ಎನ್ನುತ್ತಾರೆ. ಗೊನೆಗೆ ಕೈ ಹಾಕಲೂ ಸಾಧ್ಯವಿಲ್ಲದಷ್ಟು ಒತ್ತೊತ್ತಾಗಿ ಕಾಯಿಗಳು. ಅಡಿಕೆಯಲ್ಲಿ ಕೆಲವರು ತೀರ್ಥಹಳ್ಳಿ ತಳಿ ಉತ್ತಮ ಎನ್ನುತ್ತಾರೆ. ಆದರೆ ಅದು ಚಾಲಿಗೆ ಆಗುವುದಿಲ್ಲ. ಇದು ಎರಡಕ್ಕೂ ಆಗುತ್ತದೆ. ಈ ತಳಿಯ ಅಡಿಕೆ ಚಾಲಿ ಕಿಲೋ ಗೆ 190-210 ಅಡಿಕೆ ಮತ್ತು ಕೆಂಪಾದರೆ 280-310 ಸಂಖ್ಯೆಯಲ್ಲಿ ಬರುತ್ತದೆ. ಇಲ್ಲಿ ರೋಗ ಬಾಧೆ ಕಡಿಮೆ ಎಂದೇ ಹೇಳಬಹುದು.
ಲಕ್ಷಣಗಳು
ಕ್ಯಾಸನೂರು ಗಿಡದ ಲಕ್ಷಣಗಳು, [೧] 1) ಮರದ ಗಣ್ಣು ಹತ್ತಿರವಾಗಿರುತ್ತವೆ. ಇದಕ್ಕೆ ಅಂತರ ಮತ್ತು ಸಮರ್ಪಕ ಬಿಸಿಲಿನ ಲಭ್ಯತೆಯೂ ಕಾರಣ ಇರಬಹುದು. ಪ್ರಾರಂಭದ ಕೆಲವು ವರ್ಷ ಗಣ್ಣು ಸ್ವಲ್ಪ ದೂರ ಇರುತ್ತದೆ. ನಂತರ ಅದು ಹತ್ತಿರವಾಗುತ್ತಾ ಬರುತ್ತದೆ.
2) ಇದುವೇ ಮರಕ್ಕೆ ತಾಕತ್ತು ಕೊಡುವುದು. ಈಗಲೂ ಈ ಪ್ರದೇಶದಲ್ಲಿ 70 ರಿಂದ 100 ವರ್ಷದ ಅಡಿಕೆ ಮರಗಳು ಇವೆ.
3) ಈ ತಳಿಯಲ್ಲದೆ ಇಲ್ಲಿ ಬೇರೆ ತಳಿಗಳೇ ಇಲ್ಲ. ಇರುವ ಬಹುತೇಕ ಮರಗಳೂ ಏಕ ಪ್ರಕಾರ ಇಳುವರಿ ಕೊಡುವವುಗಳು.
4) ಆದ ಕಾರಣ ಮೂರು ನಾಲ್ಕು ಶತಮಾನಗಳಾದರೂ ಇಲ್ಲಿನ ಅಡಿಕೆ ತಳಿ ಗುಣ ವ್ಯತ್ಯಾಸ ಆಗಿಲ್ಲ.
ಶಿವಮೊಗ್ಗ ತೋಟಗಾರಿಕೆ ಇಲಾಖೆಯಿಂದ ತಳಿ ಅಧ್ಯಯನ: ಕರ್ನಾಟಕ ತೋಟಗಾರಿಕೆ ಇಲಾಖೆಯ ಸಲಹೆ ಮೆರೆಗೆ ಅಡಿಕೆ ತೋಟದ ಅಧ್ಯಯನ ಕೈಗೊಂಡಾಗ ಕ್ಯಾಸನೂರು ಅಡಿಕೆ ಉತ್ತಮವಾಗಿರುವುದು ಕಂಡುಬಂತು ಎಲ್ಲಾ ಮರಗಳ ಅಡಿಕೆಯನ್ನೂ ಸುಮಾರು 25 ವರ್ಷಗಳಿಂದ ಪರೀಕ್ಷಿಸುತ್ತಾ ಬಂದಿದ್ದಾರೆ. ಅದೇ ರೀತಿ ಪ್ರಪಂಚದ ನಾನಾ ಭಾಗಗಳಲ್ಲಿ ಬೆಳೆಸಿ ಅಧ್ಯಯನ ಮಾಡಿದರು. ಎಲ್ಲ ಕಡೆ ಇಲ್ಲಿಯ ತಳಿ ಉತ್ತಮವಾಗಿಯೇ ಬಂದಿತು. ಇವರ ಅಧ್ಯಯನದಲ್ಲಿ ಕಂಡು ಬಂದ ಮತ್ತೊಂದು ಅಂಶ ಏನೆಂದರೇ ಇಲ್ಲಿಯ ತಳಿ ಬೇರೆಡೆ ಬೆಳೆದರೂ ಅಲ್ಲಿಯ ಬೀಜ ಸರಿ ಬರುವುದಿಲ್ಲ. ಇಲ್ಲಿಂದಲೇ ಬೀಜ ತೆಗೆದುಕೊಳ್ಳಬೇಕು. ಹಾಗೆಂದು ಎಲ್ಲಾ ಮರಗಳೂ ಬೀಜಕ್ಕೆ ಆಗುವುದಿಲ್ಲ. ಮರಗಳ ಅಡಿಕೆಯನ್ನು ಹಲವಾರು ವರ್ಷಗಳ ಕಾಲ ಪರೀಕ್ಷಿಸಿ ಅದರಲ್ಲಿ ಯಾವ ಮರ ಉತ್ತಮ ಅದರಿಂದ ಬೀಜ ಆಯ್ಕೆ ಮಾಡಬೇಕು. ಹಲವಾರು ವರ್ಷಗಳಿಂದಲೂ ಬಹಳಷ್ಟು ಜನ ಅಡಿಕೆ ಬೆಳೆಗಾರರು ಕ್ಯಾಸನೂರಿನ ರೈತರು ಕೊಟ್ಟ ಬೀಜ ಹಾಗೂ ಸಸಿಗಳನ್ನೇ ಬೆಳೆಸುವುದು. ಸೊರಬ - ಸಾಗರ - ಶಿಕಾರಿಪುರ - ಶಿವಮೊಗ್ಗ ಸುತ್ತಮುತ್ತ ಅಡಿಕೆ ಬೀಜದ ಬಗ್ಗೆ ಕೇಳಿದರೆ ಇಲ್ಲಿನ ರೈತರು ಮಾಹಿತಿ ನೀಡುವರು. ಇಲ್ಲಿನ ಬೀಜ ತಂದು ತೋಟ ಮಾಡಿದವರಿಗೆ ಎಲ್ಲರಿಗೂ ಗೊತ್ತು ತೋಟ ಮಾಡುವ ವಿಧಾನ. ಕ್ಯಾಸನೂರು ಅಡಿಕೆ ಬಗ್ಗೆ ಅಧ್ಯಯನ ಮಾಡಿದ ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುವಂತೆ ಈ ತಳಿ ಇಳುವರಿಯ ಮಟ್ಟಿಗೆ ಅತ್ಯುತ್ತಮ.
ಉಲ್ಲೇಖಗಳು
- ↑ "ಅಡಿಕೆ ಯಾವ ತಳಿ ಬೆಸ್ಟ್? ಯಾವುದು ಉತ್ತಮ ಸಸಿ? ಸಸಿ ಮಾಡುವುದರಲ್ಲೂ ನಡೆಯುತ್ತಾ ಮೋಸ? ಇಲ್ಲಿದೆ ಕಂಪ್ಲೀಟ್ ಡಿಟೈಲ್". Just Shivamogga News. Just Shivamogga digital daily newspaper. Archived from the original on 25 ಆಗಸ್ಟ್ 2022. Retrieved 28 December 2021.