ಕ್ಯುಆರ್ ಕೋಡ್
ಕ್ಯುಆರ್ ಕೋಡ್ (QR code) Quick Response code ಎಂಬುದರ ಸಂಕ್ಷಿಪ್ತ ರೂಪ. ಇದು ಒಂದು ವಿಧದ ಮ್ಯಾಟ್ರಿಕ್ಸ್ ಬಾರ್ ಕೋಡ್ (ಅಥವಾ ಎರಡು ಆಯಾಮದ ಬಾರ್‍ಕೋಡ್)ನ ಟ್ರೇಡ್ ಮಾರ್ಕ್ ಆಗಿದೆ. ಬಾರ್ ಕೋಡ್ ಎಂಬುದು ಆಪ್ಟಿಕಲ್ ಉಪಕರನಗಳ ಮೂಲಕ ಓದಬಹುದಾದಂತ ಒಂದು ಮಾಹಿತಿಪಟ್ಟಿ (ಲೇಬಲ್) ಆಗಿದ್ದು ಸಂಬಂಧಿಸಿದ ವಸ್ತುವಿನ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಕ್ಯುಆರ್ ಕೋಡ್ ನಾಲ್ಕು ಬಗೆಯ ಪ್ರಮಾಣೀಕೃತ ಸಂಕೇತೀಕರಣ (standardized encoding)ಗಳನ್ನು ಬಳಸಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಅವೆಂದರೆ ನ್ಯೂಮೆರಿಕ್ (ಸಾಂಖ್ಯಿಕ), ಆಲ್ಫಾನ್ಯೂಮೆರಿಕ್ (ಅಕ್ಷರ ಮತ್ತು ಸಂಖ್ಯೆ ಒಳಗೊಂಡ), ಬೈಟ್/ ಬೈನರಿ ಮತ್ತು ಕಾಂಜಿ. [೧] ಕ್ಯುಆರ್ ಕೋಡಿನಲ್ಲಿ ಬಿಳಿಬಣ್ಣದ ಹಿನ್ನೆಲೆಯಲ್ಲಿ ಕಪ್ಪುಬಣ್ಣದ ಚೌಕಾಕಾರದ ಚಿಕ್ಕ ಚಿಕ್ಕ ರಚನೆಗಳು ಒಂದು ಚೌಕಾಕಾರದ ಕಟ್ಟಿನಲ್ಲಿ ವ್ಯವಸ್ಥೆಗೊಂಡಿರುತ್ತವೆ. ಇದನ್ನು ಸೂಕ್ತ ತಂತ್ರಾಂಶಗಳನ್ನು ಹೊಂದಿರುವ ಸ್ಮಾರ್ಟ್ ಫೋನ್, ಕ್ಯಾಮೆರಾದಂತಹ ಉಪಕರಣಗಳ ಮೂಲಕ ಓದಬಹುದು. ಅದರಲ್ಲಿ ಸಂಗ್ರಹಗೊಂಡ ಬೇಕಾದ ಮಾಹಿತಿಯನ್ನು ತೆಗೆದುಕೊಳ್ಳಬಹುದು.
ಜಪಾನಿನಲ್ಲಿ ಮೊತ್ತಮೊದಲಬಾರಿಗೆ ಆಟೋಮೋಟಿವ್ ಕೈಗಾರಿಕೆಗೋಸ್ಕರ ಇದನ್ನು ತಯಾರಿಸಲಾಯಿತು. ಕಾಲಕ್ರಮೇಣ ಈ ಕ್ಯುಆರ್ ಕೋಡ್ ವ್ಯವಸ್ಥೆಯು ಆಟೊಮೊಟಿವ್ ಕೈಗಾರಿಕೆಯ ಹೊರಗೂ ಕೂಡ ಜನಪ್ರಿಯವಾಯಿತು. ಅದಕ್ಕೆ ಕಾರಣ ಇದರ ಸುಲಭ ಓದುವಿಕೆ ಮತ್ತು ಮಾಮೂಲಿ ಬಾರ್ ಕೋಡುಗಳಿಗಿಂತ ಒಳ್ಳೆಯರೀತಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ. ಉತ್ಪನ್ನಗಳ ಜಾಡುಹಿಡಿಯುವಿಕೆ (ಟ್ರ್ಯಾಕಿಂಗ್), ಗುರುತುಹಿಡಿಯುವಿಕೆ, ಸಮಯದ ಲೆಕ್ಕಹಾಕುವಿಕೆ, ಕಡತಗಳ ನಿರ್ವಹಣೆ ಮತ್ತು ಸಾಮಾನ್ಯ ವ್ಯಾಪಾರದಲ್ಲಿ ಇವುಗಳ ಬಳಕೆಯಾಗುತ್ತದೆ [೨]ವಾಣಿಜ್ಯ ಉದ್ದೇಶಗಳಲ್ಲಿ ಜಾಡುಹಿಡಿಯಲು ಮತ್ತು ಅನುಕೂಲತೆಗೆ ಸಂಬಂಧಪಟ್ಟ ಉದ್ದೇಶಗಳಿಗಾಗಿ ಇದು ಬಳಕೆಯಲ್ಲಿದೆ. ಸ್ಮಾರ್ಟ್ ಫೋನುಗಳಲ್ಲಿ ಪಠ್ಯವನ್ನು ತೋರಿಸಲು, ಮೊಬೈಲ್ ಟ್ಯಾಗಿಂಗ್ ಮುಂತಾದ ಸೌಲಭ್ಯಗಳಲ್ಲಿ ಬಳಕೆಯಾಗುತ್ತದೆ. ಈ ಕ್ಯುಆರ್ ಕೋಡುಗಳನ್ನು ಸೃಷ್ಟಿಸಲು ಈ ಹಲವಾರು ತಂತ್ರಾಂಶಗಳು ಹಾಗೂ ಆನ್ ಲೈನ್ ಸಲಕರಣೆಗಳು ಇವೆ.[೩] ಇದು ಈಗ ಅತಿಹೆಚ್ಚು ಬಳಸಲ್ಪಡುತ್ತಿರುವ ಎರಡು ಆಯಾಮದ ಬಾರ್ ಕೋಡ್ ವಿಧಗಳಲ್ಲಿ ಒಂದಾಗಿದೆ.[೪]
ಇತಿಹಾಸ
[ಬದಲಾಯಿಸಿ]೧೯೯೪ರಲ್ಲಿ Denso Wave ಎಂಬ ಜಪಾನಿ ಕಂಪನಿಯು ಇದನ್ನು ಮೊದಲು ಆವಿಷ್ಕರಿಸಿತು. ವಾಹನಗಳ ತಯಾರಿಕೆಯಲ್ಲಿ ಅದರ ಜಾಡುಹಿಡಿಯುವುದು (ಟ್ರ್ಯಾಕಿಂಗ್) ಇದರ ಉದ್ದೇಶವಾಗಿತ್ತು.ಅತಿವೇಗವಾಗಿ ಭಾಗಗಳ ಸ್ಕ್ಯಾನಿಂಗ್ ಆಗಲು ಅನುವುಮಾಡಲು ಇದನ್ನು ತಯಾರಿಸಲಾಗಿತ್ತು..[೫] ಈಗ ಕ್ಯು ಆರ್ ಕೋಡ್ ಗಳು ವಿಸ್ತಾರವಾಗಿ ಬಳಕೆಯಾಗುತ್ತಿವೆ.
ಪ್ರಮಾಣಗಳು (ಸ್ಟ್ಯಾಂಡರ್ಡ್ಸ್)
[ಬದಲಾಯಿಸಿ]ಮಾಹಿತಿಯನ್ನು ಕ್ಯು ಆರ್ ಕೋಡ್ ನಂತೆ ಎನ್ಕೋಡ್ ಮಾಡಲು ಹಲವು ಪ್ರಮಾಣಗಳಿವೆ.:[೬]
- ಅಕ್ಟೋಬರ್ ೧೯೯೭ – AIM (Association for Automatic Identification and Mobility) International[೭]
- ಜನವರಿ ೧೯೯೯ – JIS X 0510
- ಜೂನ್ ೨೦೦೦ – ISO/IEC 18004:2000 Information technology – Automatic identification and data capture techniques – Bar code symbology – QR code (now withdrawn)
Defines QR code models 1 and 2 symbols. - ೧ ಸೆಪ್ಟೆಂಬರ್ ೨೦೦೬ – ISO/IEC 18004:2006 Information technology – Automatic identification and data capture techniques – QR code 2005 bar code symbology specification (now withdrawn)[೮]
Defines QR code 2005 symbols, an extension of QR code model 2. Does not specify how to read QR code model 1 symbols, or require this for compliance. - ೧ ಫೆಬ್ರವರಿ ೨೦೧೫ – ISO/IEC 18004:2015 Information – Automatic identification and data capture techniques – QR Code barcode symbology specification
Renames the QR Code 2005 symbol to QR Code and adds clarification to some procedures and minor corrections.
ಬಳಕೆಗಳು
[ಬದಲಾಯಿಸಿ]ಮೊಬೈಲ್ ಕಾರ್ಯಾಚರಣ ವ್ಯವಸ್ಥೆಗಳು
[ಬದಲಾಯಿಸಿ]ಜಾಲಕೊಂಡಿಗಳು (URLs)
[ಬದಲಾಯಿಸಿ]ವಾಸ್ತವ ಅಂಗಡಿಗಳು (Virtual stores)
[ಬದಲಾಯಿಸಿ]ಕೋಡ್ ಪಾವತಿಗಳು
[ಬದಲಾಯಿಸಿ]ಜಾಲತಾಣದ ಲಾಗಿನ್
[ಬದಲಾಯಿಸಿ]ವೈಫೈ ನೆಟ್ವರ್ಕ್ ಲಾಗಿನ್
[ಬದಲಾಯಿಸಿ]ಎನ್ಕ್ರಿಪ್ಷನ್ (Encryption)
[ಬದಲಾಯಿಸಿ]ವೀಡಿಯೊ ಗೇಮ್ಸ್
[ಬದಲಾಯಿಸಿ]ಈ ಕೆಳಗಿನವು ಕೆಲವು ಕ್ಯು ಆರ್ ಕೋಡ್ ನ ಮಾದರಿಗಳಾಗಿವೆ.
-
Version 1 (21×21). Content: "Ver1"
-
Version 2 (25×25). Content: "Version 2"
-
Version 3 (29×29). Content: "Version 3 QR Code"
-
Version 4 (33×33). Content: "Version 4 QR Code, up to 50 char"
-
Version 10 (57×57). Content: "Version 10 QR Code, up to 174 char at H level, with 57X57 modules and plenty of Error-Correction to go around. Note that there are additional tracking boxes"
-
Version 25 (117×117 enlarged to 640x640)
-
Version 40 (177×177). Content: 1,264 characters of ASCII text describing QR codes
ಉಲ್ಲೇಖಗಳು
[ಬದಲಾಯಿಸಿ]- ↑ "QR Code features". Denso-Wave. Archived from the original on 2013-01-29. Retrieved 3 October 2011.
- ↑ "QR Code Essentials". Denso ADC. 2011. Archived from the original on 12 May 2013. Retrieved 12 March 2013.
{{cite web}}
: Unknown parameter|dead-url=
ignored (help) - ↑ Joe Waters. "How to Use the Top QR Code Generators". Dummies.com. Archived from the original on 11 September 2017. Retrieved 5 June 2017.
{{cite web}}
: Unknown parameter|dead-url=
ignored (help) - ↑ "QR Code—About 2D Code". Denso-Wave. Archived from the original on 5 June 2016. Retrieved 27 May 2016.
{{cite web}}
: Unknown parameter|dead-url=
ignored (help) - ↑ Borko Furht (2011). Handbook of Augmented Reality. Springer. p. 341. ISBN 9781461400646. Archived from the original on 21 ಡಿಸೆಂಬರ್ 2016.
{{cite book}}
: Unknown parameter|dead-url=
ignored (help) - ↑ "QR Code Standardization". QR Code.com. Denso-Wave. Archived from the original on 10 May 2016. Retrieved 23 May 2016.
{{cite web}}
: Unknown parameter|dead-url=
ignored (help) - ↑ "ISS QR Code|AIM Store: Historical Archive". Aimglobal.org. Archived from the original on 8 August 2016. Retrieved 26 May 2016.
{{cite web}}
: Unknown parameter|dead-url=
ignored (help) - ↑ "ISO/IEC 18004:2006 - Information technology – Automatic identification and data capture techniques – QR Code 2005 bar code symbology specification". www.iso.org (in ಇಂಗ್ಲಿಷ್). Archived from the original on 8 March 2017. Retrieved 2017-03-07.
{{cite web}}
: Unknown parameter|dead-url=
ignored (help) - ↑ "QR codes on China's train tickets may leak personal information". Want China Times. Archived from the original on 12 December 2013. Retrieved 16 March 2013.
{{cite news}}
: Unknown parameter|dead-url=
ignored (help)