ವಿಷಯಕ್ಕೆ ಹೋಗು

ಕ್ಷತ್ರಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

ಹಿಂದೂ ಧರ್ಮಚತುರ್ವರ್ಣ ಪದ್ಧತಿಯಲ್ಲಿ ಕ್ಷತ್ರಿಯ ಎಂಬುದು ರಾಜರ, ಸೈನಿಕವರ್ಗ. ಇದು ವರ್ಣಾಶ್ರಮ ಪದ್ಧತಿಯಲ್ಲಿ ಎರಡನೆಯ ಸ್ಥಾನವನ್ನು ಹೊಂದಿದೆ. ಶ್ರೀರಾಮ,ಶ್ರೀ ಕೃಷ್ಣ, ಬುದ್ಧ ಮಹಾವೀರ ಸ್ವಾಮಿ ವಿವೇಕಾನಂದರು ಈ ವರ್ಗಕ್ಕೆ ಸೇರಿದವರು.

ಕರ್ನಾಟಕದಲ್ಲಿ ಬಹುದೊಡ್ಡ ಕ್ಷತ್ರಿಯ ಜನಾಂಗವಿದೆ. ಇದು ಕರ್ನಾಟಕದ ಏಕೈಕ ಮೂಲನಿವಾಸಿ ಕ್ಷತ್ರಿಯ ಜನಾಂಗ ಎಂಬುದಾಗಿ ತಿಳಿದುಬರುತ್ತದೆ. ಕರ್ನಾಟಕದಲ್ಲಿ ಈ ಜನಾಂಗದವರ ಆಳ್ವಿಕೆ ಮಹಾಭಾರತದ ಕಾಲದಿಂದಲೂ ಇರುವುದಾಗಿ ತಿಳಿದುಬರುತ್ತದೆ. ಈ ಜನಾಂಗದವರು ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಮತ್ತು ಪಾಂಡವರ ಎರಡೂ ಪಕ್ಷಗಳ ಪರವಾಗಿ ಭಾಗವಹಿಸಿದ್ದರು. ಸಹದೇವನು ರಾಜಸೂಯ ಯಾಗದ ಪ್ರಯುಕ್ತ ತನ್ನ ದಕ್ಷಿಣ ಭಾರತದ ದಂಡಯಾತ್ರೆಯಲ್ಲಿ ಈ ಜನಾಂಗವನ್ನು ಸೋಲಿಸಿ ಕಪ್ಪ ಪಡೆದಿದ್ದಾಗಿ ಉಲ್ಲೇಖವಿದೆ. ಕರ್ನಾಟಕವನ್ನು ಆಳಿದ ಪುರಾಣಶ್ರೇಷ್ಠ ಚಕ್ರವರ್ತಿ ಚಂದ್ರಹಾಸನು ಇದೇ ಜನಾಂಗದವನು. ನಿಷಾದ ದೇಶದ ಚಕ್ರವರ್ತಿ ನಳ ಮಹಾರಾಜ, ಶೃಗಂಭೇರಪುರದ ರಾಜನಾದ ಹಿರಣ್ಯಧನುವಿನ ಪುತ್ರ ಮುಂತಾದ ಪೌರಾಣಿಕ ಅರಸರು ಈ ಜನಾಂಗದವರಾಗಿರುವರು.

ವಿಷ್ಣುಪುರಾಣ ಮತ್ತು ಕ್ಲದ ಪ್ರಕಾರ ಈ ಭೂಮಿಯ‌ ಮೊದಲ ಪಟ್ಟಾಭಿಷಿಕ್ತ ಚಕ್ರವರ್ತಿಯಾದ ಪೃಥುವಿನ ತಂದೆಯಾದ ವೇನ ಮಹಾರಾಜನು (ಪೃಥುವಿನಿಂದ ಈ ಭೂಮಿಗೆ ಪೃಥ್ವಿ ಎಂಬ ಹೆಸರು ಬಂದಿದೆ) ಬೇಡ ನಾಯಕರ ಮೂಲಪುರುಷನಾಗಿರುವನು. ಪರಶುರಾಮನು ಕ್ಷತ್ರಿಯರ ಸಂಹಾರ ಮಾಡುವ ಸಂದರ್ಭದಲ್ಲಿ ಕೆಲ ಕ್ಷತ್ರಿಯರು ಬೆದರಿ ಕಾಡು ಸೇರಿದರು. ಇವರು ಅರಣ್ಯ, ಬೆಟ್ಟಗುಡ್ಡ ಮತ್ತು ನೀರಿನ ಮೇಲೆ ತಮ್ಮ ಅಧಿಕಾರ ಸ್ಥಾಪಿಸಿದರು. ಕಾಡಿನಲ್ಲಿ ವಾಸವಿದ್ದ ಋಷಿಮುನಿಗಳಿಗೆ ರಕ್ಷಣೆ ಒದಗಿಸಿದ್ದರಿಂದ, ವಿಷ್ಣುವಿನ ಪರ್ಯಾಯ ಹೆಸರಾದ ನಾಯಕ ಎಂಬ ಬಿರುದು ಪಡೆದರು. ಹಾಗಾಗಿ ಇಂದು ಕ್ಷತ್ರಿಯರ ಕೆಲ ಉಪಪಂಗಡಗಳನ್ನು ಕ್ಷತ್ರಿಯ ಬುಡಕಟ್ಟು ಜನಾಂಗ ಎಂದು ಪರಿಗಣಿಸಿ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲಾಗಿದೆ.

ಕ್ಷತ್ರಿಯ ಜನಾಂಗದಲ್ಲಿ ಸೂರ್ಯವಂಶ,ಈ ದೇಶದ ಮೂಲ ಕ್ಷತ್ರಿಯರು ಸೂರ್ಯವಂಶಿ ಸಾಮ್ರಾಟ್ ಸಗರ ಚಕ್ರವರ್ತಿ,ರಾಜ ಮಹರ್ಷಿ ಭಗೀರಥ,ಶ್ರೀರಾಮ,ವಂಶಸ್ಥರು ಸೂರ್ಯವಂಶ ಒಡಿಯರಾಜು ಕ್ಷತ್ರಿಯ,ಒಡ್ ರಜಪೂತ್,ಒಡ್ರ ಗಜಪತಿರಾಜುಲು, ಬೋಯರ್,ಪವರ್,ಕರ್ನಾಟಕದಲ್ಲಿ(ಒಡ್ಡರ್ ಕ್ಷತ್ರಿಯ,ಉಪ್ಪಾರರಾಜು ಕ್ಷತ್ರಿಯ) ಇವರು ಸೂರ್ಯವಂಶ ಒಡಿಯರಾಜು ಕ್ಷತ್ರಿಯ ವಂಶಕ್ಕೆ ಸೇರಿದವರು ಚಂದ್ರವಂಶ ಮತ್ತು ಅಗ್ನಿವಂಶಗಳೆಂಬ ಶಾಖೆಗಳಿದ್ದು, ಇವು ಮುಂದುವರಿದು ನೂರಾರು ಉಪಶಾಖೆಗಳಾಗಿ (ಕುಲ/ಬೆಡಗು) ವಿಂಗಡಣೆಯಾಗುತ್ತದೆ. ಒಂದೊಂದು ಬೆಡಗಿನವರು ಒಂದೊಂದು ಪೌರಾಣಿಕ ರಾಜಮನೆತನಗಳಿಗೆ ಸೇರಿದವರಾಗಿರುವರು. ಉದಾಹರಣೆಗೆ ಯಾದವ್ ರಾಜವಂಶವು ಅತ್ರಿಗೋತ್ರದ ಮಹೀಪತಿ ಸೂತ್ರದ ಕಾಮಗೇತಿ ಕುಲ/ಬೆಡಗಿನವರು. ಇವರ ಪೂರ್ವಿಕರು ಹಸ್ತಿನಾವತಿ (ಆನೆಗೊಂದಿ)ಯನ್ನು ರಾಜಧಾನಿಯನ್ನಾಗಿಸಿಕೊಂಡು ಕುಂತಲ ದೇಶವನ್ನು ಆಳ್ವಿಕೆ ಮಾಡಿದ ಪ್ರಾಚೀನ ರಾಜವಂಶೀಕರು.

ಕ್ಷತ್ರಿಯ ಜನಾಂಗವು ಕರ್ನಾಟಕದ ಮೂರು ಅಥವಾ ನಾಲ್ಕನೇ ಅತೀ ದೊಡ್ಡ ಜನಾಂಗವಾಗಿದೆ. ಕದಂಬರಿಂದ ಪ್ರಾರಂಭವಾಗಿ ಕರ್ನಾಟಕದ ಬಹುತೇಕ ರಾಜಮನೆತನಗಳು ಮತ್ತು ಮೈಸೂರಿನ ಇದೇ ಜನಾಂಗದ ಮೂಲದವು ಎಂಬುದಾಗಿ ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ರಾಜ ಪರಿವಾರ, ಅರಸು, ರಾಯರು, ದೊರೆಗಳು,  ರಾಮೋಶಿ (ರಾಮವಂಶಿ), ಕನ್ನಯ್ಯ (ಕೃಷ್ಣ)ನ ಮಕ್ಕಳು ಅಥವಾ ಯಾದವರು, ದಕ್ಷಿಣಾಪಥ ರಜಪೂತರು ಎಂಬ ಮುಂತಾದ ಅಧಿಕಾರ ಸೂಚಿತ ವರ್ಗಗಳು ನಾಯಕ ಜನಾಂಗದ ವಿವಿಧ ಉಪಪಂಗಡ ಅಥವಾ ಪರ್ಯಾಯ ಪದಗಳಾಗಿವೆ.

ಮೈಸೂರು ಒಡೆಯರು ಅಲ್ಪಸಂಖ್ಯಾತ ಅರಸು ಕ್ಷತ್ರಿಯ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಇದು ಕೂಡ ವೈದಿಕಕರಣಗೊಂಡ ನಾಯಕ‌ ಜನಾಂಗದ ಒಂದು ಶಾಖೆ ಎಂದೇ ಕೆಲ ಚರಿತ್ರಕಾರರು ಅಭಿಪ್ರಾಯಪಡುವರು. ಅನೇಕ ಕ್ಷತ್ರಿಯ ಸಮುದಾಯ ಕಂಡು ಬರುವವು. ಕಲಾಲ್, ಹಳೇಪೈಕರು, ಭಾವಸಾರ ಕ್ಷತ್ರಿಯರು, ದೀವರು,ರಾಮ ಕ್ಷತ್ರಿಯ,ಮರಾಠರು ಇತ್ಯಾದಿ.