ವಿಷಯಕ್ಕೆ ಹೋಗು

ಖಾಸಿ ಮತ್ತು ಜೈಂತಿಯ ಬೆಟ್ಟಗಳ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖಾಸಿ-ಜೈಂತಿಯ ಬೆಟ್ಟಗಳು
ಜಿಲ್ಲೆ of ಅಸ್ಸಾಂ ಪ್ರಾಂತ್ಯ, ಬ್ರಿಟಿಷ್ ಭಾರತ
1912–1947
Location of ಖಾಸಿ-ಜೈಂತಿಯ ಬೆಟ್ಟಗಳು
Location of ಖಾಸಿ-ಜೈಂತಿಯ ಬೆಟ್ಟಗಳು
ಬೆಂಗಾಲ್ ಗಜ಼ೆಟಿಯರ್, 1907ನಲ್ಲಿ ಖಾಸಿ ಮತ್ತು ಜೈಂತಿಯ ಬೆಟ್ಟಗಳು
History
 •  ಪೂರ್ವ ಬಂಗಾಳ ಮತ್ತು ಅಸ್ಸಾಮ್‍ನ ಇಬ್ಭಾಗ ಮಾಡಿದ್ದು[] 1912
 •  ಭಾರತದ ಸ್ವಾತಂತ್ರ್ಯ 1947
Area
 •  1901 ೧೫,೯೪೭ km2 (೬,೧೫೭ sq mi)
Population
 •  1901 ೧,೯೭,೯೦೪ 
Density ೧೨.೪ /km2  (೩೨.೧ /sq mi)
ಖಾಸಿ ರಾಜ್ಯಗಳು, 1947

ಖಾಸಿ ಮತ್ತು ಜೈಂತಿಯ ಬೆಟ್ಟಗಳ ಜಿಲ್ಲೆ ಎನ್ನುವುದು ಬ್ರಿಟಿಷ್ ಆಡಳಿತದ ಸಮಯದಲ್ಲಿ, ಭಾರತದಲ್ಲಿ, ಬ್ರಹ್ಮಪುತ್ರ ಮತ್ತು ಸುರ್ಮಾ ಕಣಿವೆಗಳ ನಡುವೆ ಇದ್ದ ಎರಡು ಬೆಟ್ಟ ಪ್ರದೇಶಗಳನ್ನೊಳಗೊಂಡ ಜಿಲ್ಲೆಯಾಗಿತ್ತು. ವಿಸ್ತೀರ್ಣ 6,157 ಚ. ಮೈ. ಜನಸಂಖ್ಯೆ 5,84,812 (1971). ಈಗ ಇದನ್ನು ನಾಲ್ಕು ಜಿಲ್ಲೆಗಳಾಗಿ ವಿಭಾಗಿಸಲಾಗಿದ್ದು, ಇವುಗಳು ಮೇಘಾಲಯ ರಾಜ್ಯದಲ್ಲಿವೆ. ಈ ನಾಲ್ಕು ಜಿಲ್ಲೆಗಳೆಂದರೆ ಪೂರ್ವ ಜೈಂತಿಯ ಬೆಟ್ಟಗಳ ಜಿಲ್ಲೆ (ಕೇಂದ್ರ ಕಾರ್ಯಸ್ಥಳ ಖಿಲೇರಿಯಾಟ್), ಪಶ್ಚಿಮ ಜೈಂತಿಯ ಬೆಟ್ಟಗಳ ಜಿಲ್ಲೆ (ಕೇಂದ್ರ ಕಾರ್ಯಸ್ಥಳ ಜೋವಾಯ್), ಪೂರ್ವ ಖಾಸಿ ಬೆಟ್ಟಗಳ ಜಿಲ್ಲೆ (ಕೇಂದ್ರ ಕಾರ್ಯಸ್ಥಳ ಶಿಲಾಂಗ್) ಮತ್ತು ಪಶ್ಚಿಮ ಖಾಸಿ ಬೆಟ್ಟಗಳ ಜಿಲ್ಲೆ (ಕೇಂದ್ರ ಕಾರ್ಯಸ್ಥಳ ನಾಂಗ್‍ಸ್ಟಾಯ್ನ್).[]

ಭೌಗೋಳಿಕ ಲಕ್ಷಣಗಳು

[ಬದಲಾಯಿಸಿ]

ಪೂರ್ವಪಶ್ಚಿಮವಾಗಿ ಹಬ್ಬಿದ ಕಡಿದಾದ ಬೆಟ್ಟಸಾಲುಗಳೂ, ನಡುವೆ ಪ್ರಸ್ಥಭೂಮಿಗಳೂ ಈ ಪ್ರದೇಶದ ಲಕ್ಷಣಗಳು. ದಕ್ಷಿಣದಲ್ಲಿ ಸುರ್ಮಾ ಕಣಿವೆಯಿಂದ ಮೇಲೇರಿರುವ ಪರ್ವತಗಳು ಸಮುದ್ರಮಟ್ಟದಿಂದ 4000'-6,000' ಗಳ ಎತ್ತರವಿರುವ ಪ್ರಸ್ಥಭೂಮಿಯಾಗಿ ಪರಿಣಮಿಸುತ್ತವೆ. ಇದರ ಆಡಳಿತ ಕೇಂದ್ರವಾಗಿದ್ದ ಷಿಲಾಂಗ್ ಈ ಪ್ರಸ್ಥಭೂಮಿಯ ಮೇಲಿತ್ತು. ಷಿಲಾಂಗ್ ಈಗ ಮೇಘಾಲಯದ ರಾಜಧಾನಿಯಾಗಿದೆ. ಹೆಚ್ಚು ಮಳೆಯಾಗುವ ಚಿರಾಪುಂಜಿ ಮೊದಲು ಇದ್ದದ್ದು ಈ ಜಿಲ್ಲೆಯಲ್ಲೇ. ಉತ್ತರದಲ್ಲೂ ಎರಡು ಪ್ರಸ್ಥಭೂಮಿಗಳಿವೆ. ಇವು ಸ್ವಲ್ಪ ತಗ್ಗು. ಒಟ್ಟಿನಲ್ಲಿ ಇಡೀ ಪ್ರಸ್ಥಭೂಮಿ ಪ್ರದೇಶ ಹುಲ್ಲಿನಿಂದ ತುಂಬಿ ಹಸಿರಾಗಿದೆ. ಸಸ್ಯಸಂಪತ್ತು ವೈವಿಧ್ಯಮಯವಾದ್ದು. ಆರ್ಕಿಡ್‌ಗಳು ವಿಶೇಷ. 3,000' ಎತ್ತರದಲ್ಲಿ ಪೀತದಾರು ಹೆಚ್ಚಾಗಿ ಬೆಳೆಯುತ್ತದೆ. ಇನ್ನೂ ಎತ್ತರದಲ್ಲಿ ಓಕ್ ಮತ್ತು ಚೆಸ್‍ನಟ್ ಉಂಟು. ಕಬ್ಬಿಣದ ಅದುರು ಮತ್ತು ಕಲ್ಲಿದ್ದಲ ಕೆಲವು ಮಾದರಿಗಳು ಇಲ್ಲಿವೆ.

ಕೃಷಿ, ಜನಜೀವನ

[ಬದಲಾಯಿಸಿ]

ಕೃಷಿ ಇಲ್ಲಿಯ ಮುಖ್ಯ ಕಸಬು. ಕೈಗಾರಿಕೆ, ಸೇವಾವೃತ್ತಿ, ವ್ಯಾಪಾರ, ಸರಕುಸಾರಿಗೆ ಮುಂತಾದವುಗಳಲ್ಲಿ ನಿರತರಾದವರೂ ಇದ್ದಾರೆ. ಅಕ್ಕಿ ಮುಖ್ಯ ಆಹಾರ. ಬೆಟ್ಟಗಳ ಪಕ್ಕಗಳಲ್ಲೂ, ಕಣಿವೆಗಳ ಕೆಳ ಭೂಪ್ರದೇಶಗಳಲ್ಲೂ ಬತ್ತ ಬೆಳೆಯುತ್ತಾರೆ. ಕಾಡನ್ನು ಸುಟ್ಟು ನೆಲವನ್ನು ತೆರವು ಮಾಡಿ ಅಲ್ಲಿ ಒಂದೆರಡು ವರ್ಷ ಬೆಳೆ ತೆಗೆದು ಅನಂತರ ಅದನ್ನು ಬಿಟ್ಟು ಬೇರೆಡೆಯಲ್ಲಿ ಅದೇ ರೀತಿ ಬೆಳೆ ತೆಗೆಯುವ ಕ್ರಮವೇ ಈಗಲೂ ಹೆಚ್ಚಾಗಿ ವಾಡಿಕೆಯಲ್ಲಿದೆ. ಪ್ರಕೃತಿದತ್ತ ಕಾಡನ್ನು ಹಾಳುಮಾಡುವ ಈ ಪದ್ಧತಿಯನ್ನು ಬಿಟ್ಟು ಸುಧಾರಿತ ಕೃಷಿಪದ್ಧತಿಯನ್ನು ಕೈಗೊಳ್ಳುವಂತೆ ಇಲ್ಲಿಯ ಕೃಷಿಕರನ್ನು ಪ್ರೋತ್ಸಾಹಿಸಲಾಗುತ್ತಿದೆ. ಹಿಂದೆ ಈ ಜಿಲ್ಲೆ ಕಿತ್ತಲೆಹಣ್ಣಿಗೆ ಪ್ರಸಿದ್ಧವಾಗಿತ್ತು. ಈಗ ಇದಕ್ಕೆ ಉತ್ತೇಜನ ಕಡಿಮೆಯಾಗಿದೆ. ಜಿಲ್ಲೆಯ ನಿವಾಸಿಗಳಲ್ಲಿ ಖಾಸಿ, ಸಿಂಟೆಂಗ್ ಮತ್ತು ಪ್ನಾರ್‌ಗಳು ಮುಖ್ಯರಾದವರು. ಕ್ರೈಸ್ತಮತ ಪ್ರಚಾರಕರಿಂದಾಗಿ ಇಲ್ಲಿ ಆ ಮತೀಯರ ಸಂಖ್ಯೆ ಹೆಚ್ಚಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1.  Chisholm, Hugh, ed. (1911). "Khasi and Jaintia Hills" . Encyclopædia Britannica. Vol. 15 (11th ed.). Cambridge University Press. pp. 773–774. {{cite encyclopedia}}: Cite has empty unknown parameters: |separator= and |HIDE_PARAMETER= (help)
  2. "Integration of the North East: the State Formation Process" (PDF). Archived from the original (PDF) on 19 February 2014. Retrieved 16 July 2014.


ಹೊರಗಿನ ಕೊಂಡಿಗಳು

[ಬದಲಾಯಿಸಿ]