ಗಂಗನಾಥ ಝಾ
ಸರ್ ಗಂಗನಾಥ ಝಾ(೨೫ ಡಿಸೆಂಬರ್ ೧೮೭೨ - ೯ ನವೆಂಬರ್ ೧೯೪೧)[೧] ಸಂಸ್ಕೃತ , ಭಾರತೀಯ ತತ್ವಶಾಸ್ತ್ರ ಮತ್ತು ಬೌದ್ಧ ತತ್ತ್ವಶಾಸ್ತ್ರದ ವಿದ್ವಾಂಸರಾಗಿದ್ದರು. ಇವರು ನ್ಯಾಯಶಾಸ್ತ್ರದ ಪಂಡಿತರಾಗಿದ್ದರು.
ಆರಭಿಕ ಜೀವನ
[ಬದಲಾಯಿಸಿ]ಗಂಗನಾಥ್ ಝಾ ಬಿಹಾರದ ಮಧುಬನಿ ಜಿಲ್ಲೆಯ ಸರಿಸಾಬ್ ಪಾಹಿ ಗ್ರಾಮದ ಮೈಥಿಲ್ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.[೨] ಅವರಿಗೆ ಮೊದಲು ಪರ್ಷಿಯನ್ ಲಿಪಿಯನ್ನು ಕಲಿಸಲಾಯಿತು, ನಂತರ ಅವರ ಕುಟುಂಬವು ಏಳು ವರ್ಷದವನಿದ್ದಾಗ ಬೆನಾರಸ್‌ಗೆ ಹೋದರು , ಅಲ್ಲಿ ಅವರು ಸಂಸ್ಕೃತವನ್ನು ಕಲಿತರು. ೧೮೮೦ ರಲ್ಲಿ ಅವರು ತಮ್ಮ ಸಂಬಂಧಿಕರಿದಲ್ಲಿಗೆ ಮರಳಿದರು ಮತ್ತು ಒಂದು ಆಂಗ್ಲ ಮಾಧ್ಯಮ ಶಾಲೆಗೆ ದಾಖಲಾದರು. ೧೮೮೬ ರಲ್ಲಿ, ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ , ಹೆಚ್ಚಿನ ಅಧ್ಯಯನಕ್ಕಾಗಿ ಬನಾರಸ್‌ಗೆ ಮರಳಿದರು ಮತ್ತು ಅಲ್ಲಿನ ಸರ್ಕಾರಿ ಸಂಸ್ಕೃತ ಕಾಲೇಜಿನಲ್ಲಿ ಪ್ರವೇಶ ಪಡೆದರು. ಅವರು ೧೮೯೨ ರಲ್ಲಿ ಪ್ರಥಮ ಶ್ರೇಣಿಯೊಂದಿಗೆ ಸಂಸ್ಕೃತದಲ್ಲಿ ಎಂ.ಎ ಪದವಿಯನ್ನು ಪಡೆದರು.
ಸೇವೆ
[ಬದಲಾಯಿಸಿ]ತನ್ನ ೨೪ ನೇ ವಯಸ್ಸಿನಲ್ಲಿ, ಅವರನ್ನು ದರ್ಭಂಗಾ ರಾಜ್ಯದ ಮಹಾರಾಜರು ಗ್ರಂಥಪಾಲಕರನ್ನಾಗಿ ನೇಮಿಸಿದರು. ೧೯೦೨ ರಲ್ಲಿ, ಅಲಹಾಬಾದ್‌ನ ಮುಯಿರ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ನೇಮಕಗೊಂಡರು . ಅವರು ೧೯೧೮ ರಲ್ಲಿ ಹೊರಟು ಬನಾರಸ್‌ನ ಸರ್ಕಾರಿ ಸಂಸ್ಕೃತ ಕಾಲೇಜಿನ ಮೊದಲ ಭಾರತೀಯ ಪ್ರಾಂಶುಪಾಲರಾದರು. ೧೯೨೦-೧೯೨೩ ರ ನಡುವೆ ಅವರು ಸೆಂಟ್ರಲ್ ಬ್ರಿಟಿಷ್ ಗವರ್ನಮೆಂಟ್ ನಲ್ಲಿ ಕೌನ್ಸಿಲ್ ಆಫ್ ಸ್ಟೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಅವರು ೧೯೨೩ -೩೨ ಅವಧಿಯಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದ (ಪ್ರಯಾಗ್ ವಿಶ್ವವಿದ್ಯಾಲಯ) ಉಪಕುಲಪತಿಯಾಗಿದ್ದರು. ಅಲಹಾಬಾದ್ ವಿಶ್ವವಿದ್ಯಾಲಯವು ಅವರ ಗೌರವಾರ್ಥವಾಗಿ ಗಂಗನಾಥ್ ಝಾ ಹಾಸ್ಟೆಲ್ ಅನ್ನು ಸ್ಥಾಪಿಸಲಾಯಿತು.[೩]
ಗೌರವಗಳು ಮತ್ತು ಪ್ರಶಸ್ತಿಗಳು
[ಬದಲಾಯಿಸಿ]ಡಿ. ಲಿಟ್ - ೧೯೦೦[೪]
ಮಹಾಮಹೋಪಾಧ್ಯಾಯ - ೧೯೦೧
ಸದಸ್ಯ, ಕೌನ್ಸಿಲ್ ಆಫ್ ಸ್ಟೇಟ್ (೧೯೨೦-೨೩)
ಕ್ಯಾಂಪ್ಬೆಲ್ ಪದಕ, ರಾಯಲ್ ಏಷಿಯಾಟಿಕ್ ಸೊಸೈಟಿ, ಲಂಡನ್
ಗೌರವ ಸದಸ್ಯ, ರಾಯಲ್ ಏಷಿಯಾಟಿಕ್ ಸೊಸೈಟಿ, ಲಂಡನ್
ನೈಟ್ ಬ್ಯಾಚುಲರ್, ೧೯೪೧ ಜನ್ಮದಿನ ಗೌರವ ಪಟ್ಟಿ
ಸಾಹಿತ್ಯಿಕ ಸೇವೆ
[ಬದಲಾಯಿಸಿ]ಸರ್ ಜಿ.ಎನ್ ಝಾ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಅನೇಕ ಸಂಸ್ಕೃತ ಪುಸ್ತಕಗಳನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ .
ಅನುವಾಸಿದ ಪುಸ್ತಕಗಳು
[ಬದಲಾಯಿಸಿ]ಚಂದೋಗ್ಯೋಪನಿಷದ್, ಜಿ.ಎ ನೆಲ್ಸನ್ ಅಂಡ್ ಕೊ., ಮದ್ರಾಸ್, ೧೮೯೯.
ಯೋಗ-ದರ್ಶನ, ಥಿಯೊಸಾಫಿಕಲ್ ಪಬ್ಲಿಕೇಷನ್, ಬಾಂಬೆ, ೧೯೦೭.
ಗೌತಮ್ ಕಾ ನ್ಯಾಯ ಸೂತ್ರ, ಓರಿಯಂಟಲ್ ಬುಕ್ ಏಜೆನ್ಸಿ, ಪೂನಾ, ೧೯೧೩.
ಪೂರ್ವ- ಮೀಮಾನ್ಸ ಶಾಸ್ತ್ರ ಆಫ್ ಜೆಮಿನಿ, ಪಾಣಿನಿ ಕಚೇರಿ, ಅಲಹಾಬಾದ್, ೧೯೧೬.[೫]
ಸ್ಲೋಕಾ ವಾರ್ತಿಕಾ, ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್, ಕಲ್ಕತ್ತಾ, ೧೯೨೪.
ತಂತ್ರ-ಭಾಸ, ಓರಿಯಂಟಲ್ ಬುಕ್ ಏಜೆನ್ಸಿ, ಪೂನಾ, ೧೯೨೫.
ಮನುಸ್ಮೃತಿ, ಐದು ಸಂಪುಟಗಳಲ್ಲಿ, ಕಲ್ಕತ್ತಾ ವಿಶ್ವವಿದ್ಯಾಲಯ, ೧೯೨೦-೧೯೨೬.[೬]
ಯೋಗ ಸರ್ ಸಂಗ್ರಾಹ್, ಓರಿಯಂಟಲ್ ಬುಕ್ ಏಜೆನ್ಸಿ, ಪೂನಾ, ೧೯೩೧.
ಬರೆದ ಪುಸ್ತಕಗಳು
[ಬದಲಾಯಿಸಿ]ದ ಪ್ರಭಕರ್ ಸ್ಕೂಲ್ ಆಫ್ ಪೂರ್ವ-ಮೀಮಾನ್ಸ , ಅಲಹಬಾದ್ ವಿಶ್ವವಿದ್ಯಾನಿಲಯ - ೧೯೧೧
ಕವಿ ರಹಸ್ಯ, ಹಿಂದೂಸ್ತಾನ್ ಅಕಾಡೆಮಿ ಪ್ರೆಸ್, ಪ್ರಯಾಗ್.
ನ್ಯಾಯಾ ಪ್ರಕಾಶ್, ನಗರಿ ಪ್ರಚಾರಿನಿ ಸಭೆ, ಬನಾರಸ್ - ೧೯೨೦.
ವೈಶ್ವೇಶಿಕ್ ದರ್ಶ, ನಗರಿ ಪ್ರಚಾರಿಣಿ ಸಭಾ, ಬೆನಾರಸ್, ೧೯೨೧ .
ದಿ ಫಿಲಾಸಫಿಕಲ್ ಡಿಸಿಪ್ಲಿನ್, ಕಲ್ಕತ್ತಾ ವಿಶ್ವವಿದ್ಯಾಲಯ, ೧೯೨೮ .
ಸೋರ್ಸಸ್ ಆಫ್ ಹಿಂದೂ ಲಾ, ಇಂಡಿಯನ್ ಪ್ರೆಸ್, ಅಲಹಾಬಾದ್, ೧೯೩೦.[೭]
ಹಿಂದೂ ವಿಧಿ ಕಾ ಸ್ರೋತಾ, ಪಾಟ್ನಾ ವಿಶ್ವವಿದ್ಯಾಲಯ, ೧೯೩೧ .[೮]
ಶಂಕರ್ ವೇದಾಂತ್, ಅಲಹಾಬಾದ್ ವಿಶ್ವವಿದ್ಯಾಲಯ, ೧೯೩೯ .
ಪೂರ್ವ - ಮೀಮಾನ್ಸ ಇನ್ ಇಟ್ಸ್ ಸೋರ್ಸಸ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ೧೯೪೨ .[೯]
ಯೋಗ ದರ್ಶನ, ಥಿಯೊಸಾಫಿಕಲ್ ಸೊಸೈಟಿ, ಮದ್ರಾಸ್ .
ಶಿಷ್ಯರು
[ಬದಲಾಯಿಸಿ]ಪ್ರೊ. ಕ್ಷೇತ್ರೇಶ ಚಂದ್ರ ಚಟೋಪಾಧ್ಯಾಯ
ಡಾ.ಬಾಬುರಾಮ್ ಸಕ್ಸೇನಾ
ಡಾ.ಉಮೇಶ್ ಮಿಶ್ರಾ[೧೦]
ಡಾ. ಸಹದೇವ ಝಾ
ಉಲ್ಲೇಖಗಳು
[ಬದಲಾಯಿಸಿ]- ↑ "Amarnath Jha: (n/a-1947) - Biography, Life, Family, Career, Facts, Information". peoplepill.com. Retrieved 11 January 2020.
- ↑ https://www.myheritage.com/names/ganganath_jha
- ↑ "Sir Ganga Nath Jha Hostel". maps.mapmyindia.com (in ಇಂಗ್ಲಿಷ್). Retrieved 11 January 2020.
- ↑ "Ganganath Jha Campus". www.sanskrit.nic.in. Retrieved 11 January 2020.
- ↑ "The Purva Mimamsa Sutras Of Jaimini". 1916. Retrieved 11 January 2020.
- ↑ "Manusmriti With Bhashya Of Medhatithi Volume 2 Sanskrit Text Ganganath Jha 1939bis" (in English). Retrieved 11 January 2020.
{{cite web}}
: CS1 maint: unrecognized language (link) - ↑ Prasad, Rajendra (2009). "A Historical-developmental Study of Classical Indian Philosophy of Morals" (in ಇಂಗ್ಲಿಷ್). Concept Publishing Company. Retrieved 11 January 2020.
- ↑ Bilimoria, Purushottama. "The idea of Hindu law". Journal of Oriental Society of Australia (in ಇಂಗ್ಲಿಷ್). Retrieved 11 January 2020.
- ↑ "Purva Mimamsa Sutras of Jaimini". www.goodreads.com. Retrieved 11 January 2020.
- ↑ ": : G N JHA CAMPUS : :". www.gnjhacampusrsks.org. Archived from the original on 27 ಡಿಸೆಂಬರ್ 2019. Retrieved 11 January 2020.