ಗಂಟೆ ಹೂ
Appearance
ಗುಣ ಲಕ್ಷಣ[ಬದಲಾಯಿಸಿ]
ಕಡು ಹಳದಿ ಬಣ್ಣದಿಂದ ಕಂಗೊಳಿಸುವ ಈ ಗೊಂಚಲು ಹೂಗಳು, “ಗಂಟೆ ಹೂ” ಎಂದೇ ಚಿರಪರಿಚಿತ. ಗಂಟೆಯಂತಹ ವಿಶೇಷ ರಚನೆ ಹೊಂದಿದ ಈ ಸುಂದರ ಹೂ ತನ್ನ ನಾನಾ ರೀತಿಯ ಪ್ರಯೋಜನಗಳಿಂದ ಅನೇಕರ ಮನೆಯಂಗಳದಲ್ಲಿ ಸ್ಥಾನ ಪಡೆದಿದೆ. ಪ್ಲಾಂಟೇ ರಾಜ್ಯದ “ಬೈಗ್ನೋನಿಯೆನ್ಸೀಸ್” ಕುಟುಂಬಕ್ಕೆ ಸೇರಿದ ಈ ಹೂ ‘ಟೆಕೋಮಾ ಸ್ಟಾನ್ಸ್’,’ಯೆಲ್ಲೋ ಟ್ರಂಪೆಡ್ಬುಶ್’,ಯೆಲ್ಲೋಬೆಲ್ಸ್’ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತದೆ.
![ಗಂಟೆ ಹೂ](http://upload.wikimedia.org/wikipedia/commons/thumb/a/a7/Tecoma_stans_flower.jpg/200px-Tecoma_stans_flower.jpg)
ಎಲೆಗಳು ಚೂಪಾದ ಆಕಾರದಲ್ಲಿದ್ದು ಅಂಚಿನಲ್ಲಿ ಕತ್ತರಿಸಿದ ರೀತಿಯ ರಚನೆಯನ್ನು ಹೊಂದಿವೆ. ಗಂಟೆ ಹೂ 5 ರಿಂದ 7 ಮೀಟರ್ ಎತ್ತರದ ಸಣ್ಣ ಮರದಲ್ಲಿ ಬಿಡುತ್ತದೆ. ಬಿಸಿಲಿನಿಂದ ಕೂಡಿದ ಬೆಚ್ಚನೆಯ ವಾತಾವರಣವು ಈ ಗಿಡದ ಉತ್ತಮ ಬೆಳವಣಿಗೆಗೆ ಸೂಕ್ತವಾಗಿದೆ. ಚಿಟ್ಟೆ, ಜೇನು ಹುಳಗಳನ್ನು ಹಾಗೂ ಬಿಸಿಲಹಕ್ಕಿಗಳನ್ನು ತನ್ನೆಡೆಗೆ ಆಕರ್ಷಿಸುವಲ್ಲಿ ಗಂಟೆ ಹೂ ಪ್ರಮುಖ ಪಾತ್ರ ವಹಿಸುತ್ತದೆ[೧].
ಉಪಯೋಗಗಳು[ಬದಲಾಯಿಸಿ]
- ಗಂಟೆ ಹೂವಿನ ಎಲೆಗಳಲ್ಲಿ ಕೆಲ ಔಷಧೀಯ ಗುಣಗಳೂ ಇವೆ. ಹೊಟ್ಟೆ ನೋವಿನ ನಿವಾರಣೆಗೆ ಗಂಟೆ ಹೂವಿನ ಎಲೆಗಳನ್ನು ಉಪಯೋಗಿಸುತ್ತಾರೆ.
- ಮೆಕ್ಸಿಕೋ ಹಗೂ ದಕ್ಷಿಣ ಅಮೇರಿಕಾ ದೇಶಗಳಲ್ಲಿ ಸಕ್ಕರೆಖಾಯಿಲೆಯ ನಿಯಂತ್ರಣಕ್ಕೆ ಈ ಗಂಟೆಹೂವನ್ನು ಉಪಯೋಗಿಸುತ್ತಾರೆ.
- ೮ಗಂಟೆಹೂ ಮರದ ತೊಗಟೆಯನ್ನು ನಾಯಿಗಳ ಚಲನಾಶಕ್ತಿಯನ್ನು ಹೆಚ್ಚಿಸುವ ಸಲುವಾಗಿ, ಔಷಧಿಯಾಗಿ ಬಳಸುತ್ತಾರೆ.
ಉಲ್ಲೇಖ[ಬದಲಾಯಿಸಿ]
![](http://upload.wikimedia.org/wikipedia/commons/thumb/4/4a/Commons-logo.svg/30px-Commons-logo.svg.png)
Tecoma_stans ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
![](http://upload.wikimedia.org/wikipedia/commons/thumb/d/df/Wikispecies-logo.svg/34px-Wikispecies-logo.svg.png)
Tecoma_stans: ಇದಕ್ಕೆ ಸಂಬಂಧಿಸಿದಂತೆ ವಿಕಿಸ್ಪೀಸೀಸ್ ಮಾಹಿತಿಯನ್ನು ಹೊಂದಿದೆ.
- ↑ ಸುಧಾ ವಾರಪತ್ರಿಕೆ, ಮಾರ್ಚ್ ೧೭,೨೦೧೬, ಪುಟಸಂಖ್ಯೆ-೮