ಗರ್ಭಕೋಶ ಒಡೆಯುವುದು
ಗರ್ಭಧಾರಣೆ ಅಥವಾ ಪ್ರಸವದ ಸಮಯಲ್ಲಿ ಗರ್ಭಕೋಶದ ಸ್ನಾಯುಗೋಡೆಯು ಬಿರುಕುಬಿಡುವುದು ಅಥವಾ ಒಡೆಯುವುದನ್ನು ಗರ್ಭಕೋಶ ಒಡೆಯುವುದು ಅಥವಾ ಗರ್ಭಕೋಶದ ಛಿದ್ರ ಎನ್ನುತ್ತಾರೆ.[೧] ಯೋನಿಯಲ್ಲಿ ರಕ್ತಸ್ರವಾವವಾಗುವುದು ಅಥವಾ ಹೆಚ್ಚಿದ ನೋವು ಇದರ ಲಕ್ಷಣಗಳು.ಇದರಿಂದಾಗಿ ಮಗುವಿನ ಅಥವಾ ತಾಯಿಯ ಮರಣ ಅಥವಾ ಅಂಗಾಂಗ ಊನವಾಗಬಹುದು.[೨]
ಸಾಮಾನ್ಯವಾಗಿ ಈ ಒಡೆಯುವಿಕೆಯು ಪ್ರಸವದ ಸಮಯದಲ್ಲಿ ಸಂಭವಿಸುತ್ತದಾದರೂ ಕೆಲವೊಮ್ಮೆ ಗರ್ಭಧಾರಣೆಯ ಪ್ರಾಥಮಿಕ ಹಂತಗಳಲ್ಲೂ ಆಗಬಹುದು. ಪ್ರಸವದ ಸಮಯದಲ್ಲಿ ಮಗುವಿನ ಹೃದಯಬಡಿತವು ಗಣನೀಯವಾಗಿ ಇಳಿಮುಖವಾದರೆ ಗರ್ಭಕೋಶವು ಒಡೆಯುವ ಅಥವಾ ಒಡೆಯಬಹುದಾದ ಸಾಧ್ಯತೆಯನ್ನು ವೈದ್ಯರು ಗಮನಿಸುತ್ತಾರೆ.[೩]
ತುರ್ತು ಶಸ್ತ್ರಚಿಕಿತ್ಸೆಯ ಮೂಲಕ ಇದನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಲಾಗುತ್ತದೆ. ರಕ್ತವನ್ನು ನೀಡುವ ಅಗತ್ಯವೂ ಕಂಡುಬರಬಹುದು. ಒಮ್ಮೆ ಗರ್ಭಕೋಶ ಒಡೆದ ಇತಿಹಾಸವಿರುವ ಮಹಿಳೆಯರಿಗೆ ಮುಂದಿನ ಸಲ ಸಿಸೇರಿಯನ್ ಶಸ್ತ್ರಚಿಕಿತ್ಸೆಯನ್ನು ಸಲಹೆ ಮಾಡಲಾಗುತ್ತದೆ.
ಚಿಹ್ನೆಗಳು ಮತ್ತು ಲಕ್ಷಣಗಳು
[ಬದಲಾಯಿಸಿ]ಆರಂಭದ ಹಂತದಲ್ಲಿ ಇದರ ಲಕ್ಷಣಗಳು ಅಷ್ಟು ಗಮನಾರ್ಹವಾಗಿ ಗೋಚರಿಸದು. ಹೊಟ್ಟೆ ನೋವು ಮತ್ತು ಯೋನಿ ಸ್ರಾವ - ಈ ಚಿಹ್ನೆಗಳು ಸಾಮಾನ್ಯವಾಗಿ ಎಲ್ಲ ಗರ್ಭಧಾರಣೆಯಲ್ಲೂ ಇರುವ ಕಾರಣ ಇವು ಗರ್ಭಕೋಶ ಒಡೆಯುವರ ಪೂರ್ವಭಾವಿ ಸೂಚನೆ ಎಂದು ಕಂಡುಹಿಡಿಯುವುದು ಸ್ವಲ್ಪ ಕಷ್ಟ. ಭ್ರೂಣದ ಹೃದಯ ಬಡಿತ ಕಡಿಮೆಯಾಗುತ್ತಿರುವುದು ಒಂದು ಪ್ರಮುಖ ಸೂಚನೆ ಆಗಿರಬಹುದು. ಇದನ್ನು ಯೋನಿ ಮತ್ತು ಗರ್ಭಕೋಶದ ಪರೀಕ್ಷೆಯ ಮೂಲಕವೇ ಪತ್ತೆ ಹಚ್ಚಬೇಕು.
ಗರ್ಭಕೋಶದ ಛಿದ್ರದಿಂದಾಗಿ ಗರ್ಭಕೋಶದ ಹೊರಗೆ ಮಗು ಬೆಳೆಯುವ ಸಾಧ್ಯತೆಯೂ ಇದೆ.
ತೆಗೆದುಕೊಳ್ಳಬಹುದಾದ ಎಚ್ಚರಿಕೆಗಳು
[ಬದಲಾಯಿಸಿ]ಹಿಂದಿನ ಮಗು ಜನನದಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಆಗಿದ್ದಲ್ಲಿ ಈ ಸಲ ಗರ್ಭಕೋಶ ಒಡೆಯುವ ಸಾಧ್ಯತೆ ಇರುತ್ತದೆ. ಗರ್ಭಕೋಶ ಒಡೆದ ದಾಖಲೆಗಳಲ್ಲಿ ಸುಮಾರು ೫೨% ಮಹಿಳೆಯರಿಗ ಹಿಂದಿನ ಪ್ರಸವದಲ್ಲಿ ಸಿಸೇರಿಯನ್ ಆಗಿತ್ತು ಎಂದು ಅಂಕಿ ಅಂಶಗಳು ಹೇಳುತ್ತವೆ. ಇತರೆ ನಮೂನೆಯ ಗರ್ಭಕೋಶದ ಶಸ್ತ್ರಚಿಕಿತ್ಸೆಗಳೂ ಗರ್ಭಕೋಶದ ಛಿದ್ರಕ್ಕೆ ಕಾರಣಗಳಾಗಬಹುದು. ಕೆಲವೇ ಸಂದರ್ಭಗಳಲ್ಲಿ ಪ್ರಥಮ ಗರ್ಭಧಾರಣೆಯಲ್ಲೂ ಗರ್ಭಕೋಶದ ಛಿದ್ರ ಕಂಡುಬಂದಿವೆ.
ಚಿಕಿತ್ಸೆ
[ಬದಲಾಯಿಸಿ]ತುರ್ತು ಲಪರೋಟೊಮಿ ಮತ್ತು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಪ್ರಸವ ಜೊತೆಗೆ ರಕ್ತ ವರ್ಗಾವಣೆ -ಇವುಗಳನ್ನು ಗರ್ಭಾಶಯದ ಛಿದ್ರದ ಚಿಕಿತ್ಸೆಗೆ ಸೂಚಿಸಲಾಗುತ್ತದೆ. ರೋಗಿಯ ಪರಿಸ್ಥಿತಿಯನ್ನು ಅವಲಂಬಿಸಿ ಗರ್ಭಕೋಶವನ್ನು ದುರಸ್ತಿ ಮಾಡುಲಾಗುವುದು ಅಥವಾ ತೆಗೆದುಹಾಕಲಾಗುವುದು. ಸರಿಯಾದ ಚಿಕಿತ್ಸೆಯನ್ನು ಮಾಡದಿದ್ದಲ್ಲಿ ತಾಯಿ ಮತ್ತು ಮಗುವಿನ ಇಬ್ಬರ ಜೀವಕ್ಕೂ ಅಪಾಯವಾಗಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ Murphy, DJ (April 2006). "Uterine rupture". Current Opinion in Obstetrics & Gynecology. 18 (2): 135–40. doi:10.1097/01.gco.0000192989.45589.57. PMID 16601473.
- ↑ Lang, CT; Landon, MB (March 2010). "Uterine rupture as a source of obstetrical hemorrhage". Clinical Obstetrics and Gynecology. 53 (1): 237–51. doi:10.1097/GRF.0b013e3181cc4538. PMID 20142660.
- ↑ Mirza, FG; Gaddipati, S (April 2009). "Obstetric emergencies". Seminars in Perinatology. 33 (2): 97–103. doi:10.1053/j.semperi.2009.01.003. PMID 19324238.