ವಿಷಯಕ್ಕೆ ಹೋಗು

ಗಿಡುಗ ಕೊಕ್ಕಿನ ಆಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಿಡುಗ ಕೊಕ್ಕಿನ ಆಮೆ
ಗಿಡುಗ ಕೊಕ್ಕಿನ ಆಮೆ (ಎರೆಟ್ಮೊಕೆಲಿಸ್ ಇಂಬ್ರಿಕೇಟ)
Conservation status
CITES Appendix I (CITES)[]
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ರೆಪ್ಟೀಲಿಯಾ
ಉಪಗಣ: ಕ್ರಿಪ್ಟೋಡೈರಾ
ಮೇಲ್ಕುಟುಂಬ: ಕೆಲೋನಿಯಾಯ್ಡೀ
ಕುಟುಂಬ: ಕೆಲೋನಿಯೈಡೇ
ಉಪಕುಟುಂಬ: ಕೆಲೋನಿಯೈನೇ
ಕುಲ: ಎರೆಟ್ಮೊಕೆಲಿಸ್
Fitzinger, 1843
ಪ್ರಜಾತಿ:
ಎ. ಇಂಬ್ರಿಕೇಟ
Binomial name
ಎರೆಟ್ಮೊಕೆಲಿಸ್ ಇಂಬ್ರಿಕೇಟ
Expert range map of the hawksbill sea turtle
Synonyms
  • ಟೆಸ್ಟುಡೊ ಇಂಬ್ರಿಕೇಟಾ Linnaeus, 1766
  • ಎ. ಇಂಬ್ರಿಕೇಟಾ ಸ್ಕ್ವಾಮೇಟಾ junior synonym

ಗಿಡುಗ ಕೊಕ್ಕಿನ ಆಮೆಯು ಎರೆಟ್ಮೊಕೆಲಿಸ್ ಇಂಬ್ರಿಕೇಟ ಎಂಬ ವೈಜ್ಞಾನಿಕ ಹೆಸರಿನ ಕಡಲಾಮೆ. ಮೂತಿ ಗಿಡುಗನ ಕೊಕ್ಕಿನ ಹಾಗೆ ಬಾಗಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

ವ್ಯಾಪ್ತಿ

[ಬದಲಾಯಿಸಿ]

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಂಧ್ರ ಪ್ರದೇಶ, ಗುಜರಾತ್, ಕೇರಳ, ಲಕ್ಷದ್ವೀಪ, ಒರಿಸ್ಸಾ ಮತ್ತು ತಮಿಳುನಾಡುಗಳಲ್ಲಿ ಕಂಡುಬರುತ್ತದೆ. ಆಫ್ರಿಕಾ, ಅಮೆರಿಕಾ, ಏಷಿಯಾ, ಆಸ್ಟ್ರೇಲಿಯ ಮತ್ತು ಯೂರೋಪ್‌ಗಳ ಬಹುತೇಕ ಉಷ್ಣ ಮತ್ತು ಸಮಶೀತೋಷ್ಣ ಸಾಗರಗಳಲ್ಲಿ ಸರ್ವೇಸಾಮಾನ್ಯವಾಗಿ ಹರಡಿದೆ.

ಇದು ಮಾಂಸಾಹಾರಿ ಪ್ರಾಣಿ. ಸ್ಪಂಜುಗಳನ್ನು ತಿನ್ನುವ ಏಕೈಕ ಆಮೆ ಪ್ರಭೇಧ.[]

ದೇಹರಚನೆ

[ಬದಲಾಯಿಸಿ]

ಹವಳ ದ್ವೀಪಗಳ ಬಳಿಯಿರುವ ತೀರ ಪ್ರದೇಶಗಳಲ್ಲಿ ಸಂತಾನಾಭಿವೃದ್ಧಿ ಮಾಡುವುದು ಸಾಮಾನ್ಯ. ದೇಹದ ಮೇಲೆ ಸುಮಾರು 915ಮಿ.ಮೀ. ಉದ್ದದ ಚಿಪ್ಪು ಇದೆ. ಚಿಪ್ಪಿನ ಮೇಲೆಲ್ಲ ಹೆಂಚು ಹೊದಿಸಿದಂತೆ ಕಾಣುವ ಕಂದುಬಣ್ಣದ ದಪ್ಪನೆಯ ಫಲಕಗಳಿವೆ. ಆಮೆಯ ಚಿಪ್ಪುಗಳಲ್ಲೆಲ್ಲ ಗಿಡುಗ ಕೊಕ್ಕಿನ ಆಮೆಯದು ಅತ್ಯುತ್ತಮವಾದುದೆಂದು ಹೇಳಲಾಗಿದೆ. ಇದರಿಂದ ಬಾಚಣಿಗೆ, ಕಡಗ, ಅಲಂಕಾರಿಕ ವಸ್ತು ಮುಂತಾದವನ್ನು ಮಾಡಲಾಗುತ್ತದೆ. ಚಿಪ್ಪಿಗೋಸ್ಕರ ಹಿಂದಿನ ಕಾಲದಲ್ಲಿ ಇದನ್ನು ಬಹಳವಾಗಿ ಹಿಡಿಯುವುದಿತ್ತು. ಆದರೆ ಈಗ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗಿದ್ದು ಇದರ ಚಿಪ್ಪಿಗೆ ಬೇಡಿಕೆ ಕಡಿಮೆಯಾಗಿದೆ. ಆದರೂ ಸಂಖ್ಯೆ ಕ್ಷೀಣಿಸಿರುವುದರಿಂದ ಭಾರತದ ವನ್ಯಜೀವಿ ಸಂರಕ್ಷಣಾ ಕಾಯಿದೆ ಪಟ್ಟಿ 1 ರಲ್ಲಿ ಸೇರಿಸಲ್ಪಟ್ಟಿದೆ.

ಇದು ವಿಷವುಳ್ಳ ನೈಡೇರಿಯನ್‍ಗಳನ್ನು ಸೇವಿಸುವುದರಿಂದ ಇದರ ಮಾಂಸವು ವಿಷಕಾರಿಯಾಗಬಹುದು.[]

ಉಲ್ಲೇಖಗಳು

[ಬದಲಾಯಿಸಿ]
  1. Mortimer, J.A.; Donnelly, M. (IUCN SSC Marine Turtle Specialist Group). (2008). "Eretmochelys imbricata". IUCN Red List of Threatened Species. 2008: e.T8005A12881238. doi:10.2305/IUCN.UK.2008.RLTS.T8005A12881238.en. Retrieved 16 May 2024.
  2. "Appendices | CITES". cites.org. Retrieved 2022-01-14.
  3. "Information About Sea Turtles: Hawksbill Sea Turtle – Sea Turtle Conservancy".
  4. "The Hawksbill Turtle: Eretmochelys imbricata". Auckland Zoo. Archived from the original on October 9, 2007. Retrieved 2007-07-14.

ಹೊರಗಿನ ಕೊಂಡಿಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: