ಗಿರಿಧರ ಕಾಮತ
ಗಿರಿಧರ ಕಾಮತ್
ಬಾಲ್ಯ
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
೧೯೭೦ರ ಸೆಪ್ಟೆಂಬರ್ ೯ರಂದು ಮಾಸ್ತಿಯಲ್ಲಿ ಜನಿಸಿದ ಗಿರಿಧರ ಕಾಮತ್ .ಶಾಲೆಯಲ್ಲಿ ಓದುವಾಗ ಮೂರು ವರುಷ ಸತತವಾಗಿ ಮಾಸ್ತಿ ವೆಂಕಟೇಶ ಅಂಯ್ಯಂಗಾರ ಹೆಸರಿನಲ್ಲಿದ್ದ ದತ್ತಿಯ ಹಣದ ಬಹುಮಾನ ಪಡೆದದಿದ್ದರು. ತಂದೆ ಪುಟ್ಟದೊಂದು ಹೋಟೆಲ್ ನಡೆಸುತ್ತಿದ್ದರು. ಕರುಣಾಳುವಾದ ತಾಯಿ ಸುತ್ತಮುತ್ತಲಿನ ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುವ ಮೃದು ಹೃದಯಿ. ಕುಟುಂಬದ ಐದು ಗಂಡು ಮತ್ತು ಎರಡು ಹೆಣ್ಣು ಮಕ್ಕಳಲ್ಲಿ ಒಬ್ಬರಾಗಿ ಜನಿಸಿದವರು ಗಿರಿಧರ್.ಐದು ಗಂಡು ಮಕ್ಕಳಲ್ಲಿ ಮಧ್ಯಮ ಪಾಂಡವ. ಗಿರಿಧರ್ ಓದಿನ ಜೊತೆಯಲ್ಲಿ ತಂದೆಯ ಹೋಟೆಲಿನಲ್ಲಿ ಕೆಲಸ ಕೂಡಾ ಮಾಡುತ್ತಿದ್ದರು. ಶಿವ ದೇಗುಲದಲ್ಲಿ ಭಾವಿಯಲ್ಲಿ ಸೇದಿ ನೀರುಮೊದಲುಗೊಂಡು ರ್ಚಕರಾಗಿದ್ದ ಶ್ರೀಕಂಠಶಾಸ್ತಿಗಳಿಗೆ ಪೂಜೆಗೆ ವ್ಯವಸ್ಥೆಯನ್ನೂ ಸಿದ್ಧಗೊಳಿಸಿಕೊಡುವ ದಿನಚರಿ .ತಮ್ಮ ಬಾಲ್ಯವನ್ನು ಗಿರಿಧರ್ ಪಿ.ಯು.ಸಿ ನಂತರದಲ್ಲಿ ಹಣಕಾಸಿನ ಅಡಚಣೆಯ ದೃಷ್ಟಿಯಿಂದ ಓದನ್ನು ಮೊಟಕುಗೊಳಿಸಿದರು.
ಜೀವನ
[ಬದಲಾಯಿಸಿ]ತಂದೆಯ ಹೋಟೆಲಿನಲ್ಲೆ ಒಂದಷ್ಟು ಕೆಲಸ ಮಾಡುತ್ತಿದ್ದ ಗಿರಿಧರ್, ತಾಯಿಯ ಸಂಬಂಧಿಕರೊಬ್ಬರು ಮೈಸೂರಿನ ದಸರಾ ವಸ್ತುಪ್ರದರ್ಶನದ ಸಮಯದಲ್ಲಿ ಮಳಿಗೆಯಲ್ಲಿ ವಹಿವಾಟು ನಡೆಸಲು ಗಿರಿಧರನನ್ನು ಕಳುಹಿಸಿ ಎಂದು ಸಹಾಯ ಕೇಳಿದಾಗ ಕೆಲಸದಲ್ಲಿ ತೊಡಗಿದರು. ವ್ಯವಹಾರವನ್ನು ಮೈಸೂರು ವಸ್ತುಪ್ರದರ್ಶನ ಮುಗಿದ ನಂತರದಲ್ಲಿ ಮುಂದುವರೆಸಲಿಲ್ಲ.“ಕೆಲಸಕ್ಕೆ ಎಂದು ಬೇರೆ ಊರಿಗೆ ಹೋದ ಎನಿಸಿಕೊಂಡವ ಕೆಲಸ ಇಲ್ಲ ಎಂದು ಹೇಗೆ ಊರಿಗೆ ವಾಪಸ್ಸಾಗದೆ ಬೆಂಗಳೂರಿನ ಕಲಾಸಿಪಾಳ್ಯದ ಕಬ್ಬಿಣದ ಅಂಗಡಿಯಲ್ಲಿ ಕೆಲಕಾಲ ಕೆಲಸ ಮಾಡಿದರು. ನಂತರದಲ್ಲಿ ಸ್ವಯಂ ಉದ್ಯೋಗ ಆರಂಭಿಸಿದ ಗಿರಿಧರ್ ಇಂದು ಮ್ಯಾಜಿಕ್ ಟಾಯ್ಸ್ ಉದ್ಯಮದಲ್ಲಿ ಗಣನೀಯ ಯಶಸ್ಸಿನಿಂದ ಮುಂದುವರೆದಿದ್ದಾರೆ.
ವೃತ್ತಿಜೀವನ
[ಬದಲಾಯಿಸಿ]ವಿಶಿಷ್ಟ ಯಕ್ಷಿಣಿ ಆಟಿಕೆಗಳನ್ನು ವಸ್ತುಪ್ರದರ್ಶನಗಳ ಸಂರ್ಭದಲ್ಲಿ ಮಾರಾಟ ಮಾಡುತ್ತಿದ್ದ ಗಿರಿಧರ್ ಪಯಣದಲ್ಲಿ ಮಹನೀಯರುಗಳು ತೋರಿದ ವಿಶ್ವಾಸತೊರಿದ್ದರು.ಗಿರಿಧರ ಕಾಮತ್ ಆಟಿಕೆಗಳ ಪ್ರರ್ಶನವನ್ನು ಶ್ರದ್ಧೆಯನ್ನು ಪ್ರರ್ಶನವೊಂದರಲ್ಲಿ ಕಂಡು ಮೆಚ್ಚಿಕೊಂಡವರು ಪ್ರಸಿದ್ಧ ಪುಸ್ತಕೊದ್ಯಮಿ ಗಂಗಾರಾಮ್. ಸಂಸ್ಥೆ ಪಾಲ್ಗೊಂಡಿದ್ದ ಬೃಹತ್ ಉತ್ಸವದಲ್ಲಿ ಪಾಲ್ಗೊಂಡು ಆಟಿಕೆಗಳನ್ನು ಮಾರಾಟಕ್ಕೆ ಗಿರಿಧರ ಕಾಮತ್ ಅವರಿಗೆ ಅನುವು ಮಾಡಿಕೊಟ್ಟರು.ಯಕ್ಷಿಣಿ ಆಟಿಕೆಗಳ ವಹಿವಾಟನ್ನು ಸ್ವಂತವಾಗಿ ಪ್ರಾರಂಭಿಸಿದ ಸಮಯದಲ್ಲಿ ವಿದೇಶದಿಂದ ಆಮದಿಸಿದ ಆಟಿಕೆಗಳನ್ನು ಮಾರಾಟ ಮಾಡುತ್ತಿದ್ದ ಗಿರಿಧರ್ ಆಟಿಕೆಗಳ ಉತ್ಪನ್ನವನ್ನೂ ರಫ್ತು ಉದ್ಯಮಿ ಆದರು. ದೇಶೀಯ ಮಾರುಕಟ್ಟೆಯಲ್ಲೇಗುಣಮಟ್ಟದ ಹೆಸರಿನಿಂದ ಉದ್ಯಮಿಯಾಗಿ ಮುಂದುವರೆದರು. ಗಿರಿಧರ ಕಾಮತರು ಯಕ್ಷಿಣಿ ಆಟಿಕೆಗಳನ್ನು ವಿಶ್ವದ ದೇಶಗಳಲ್ಲಿ ಯಕ್ಷಿಣಿ ಉತ್ಸವಗಳ ಸಂರ್ಭಕ್ಕೆ ಹೊಂದಿಕೊಂಡಂತೆ ನಡೆಯುವ ವಸ್ತುಪ್ರಪ್ರದರ್ಶನಗಳನ್ನು ಪ್ರಸ್ತುತ ಪಡಿಸಿ ವಿಸ್ತೃತ ಅನುಭವಿಯಾಗಿದ್ದಾರೆ. ಗಿರಿಧರ ಕಾಮತರಿಗೆ ಉದ್ಯಮದ ಕೆಲಸವೂ ಸಂತಸದ ಕ್ರಿಯೆಯೇ ವಿನಃ ವಹಿವಾಟಿನಿಂದ ತಲೆಕೆಡಿಸಿಕೊಂಡು ಹಣಮಾಡುವ ಯಾಂತ್ರಿಕ ದಿನಚರಿಯಲ್ಲ. ಸಂಸ್ಥೆ ಸ್ವಯಂಚಾಲನಾ ಮನೋಭಾವವನ್ನು ರೂಢಿಸಿಕೊಂಡಿರುವಂತದ್ದಾಗಿದ್ದು, ನಿಯಮಿತವಾಗಿ ಮಾಡಬೇಕು ಎನ್ನುವಂತದ್ದು ಇಲ್ಲ. ಕೇವಲ ಕರ್ಯ ನಿಯಂತ್ರಕನಾಗಿ ಹೋಗಬೇಕಾದ ಅವಶ್ಯಕತೆ ಇಲ್ಲ ಎಂಬುದನ್ನು ಮನಗಂಡಿದ್ದೇನೆ ಮುಕ್ತಭಾವದ ಉದ್ಯಮಿಯಾಗಿದ್ದಾರೆ.
ಸಾಧನೆ
[ಬದಲಾಯಿಸಿ]ಗಿರಿಧರ ಕಾಮತರಿಗೆ ಎರಡು ದಶಕಗಳ ಕಾಲದಿಂದ ಪ್ರತೀ ದಿನ ಆತ್ಮೀಯರೊಂದಿಗೆ ಬೆಳಗಿನ ನಡೆಯನ್ನು ತಪ್ಪದೆ ನಡೆಸುತ್ತಿದ್ದರು. ಬಂದದ್ದು ಓಟಕ್ಕೆ. ಪ್ರೇರಕವಾಗಿದ್ದು ಪ್ರಸಿದ್ಧವಾದ ಕ್ರೀಡಾಕೂಟ. ೨೦೦೭ರಲ್ಲಿ ಪ್ರಾರಂಭಗೊಂಡ ‘೧೦ ರನ್’ ಎಂಬ ಸಮೂಹ ಓಟದ ಕ್ರೀಡಾಕೂಟ ೨೦೧೦ರ ರ್ಷದ ವರೆಗೆ ‘ಸನ್ ಫೀಸ್ಟ್’ ಸಂಸ್ಥೆಯ ಆಯೋಜನೆಯಲ್ಲಿ ನಡೆಯುತ್ತಿತ್ತು. ೨೦೧೧ರ ರ್ಷದಲ್ಲಿ ಪ್ರಸಿದ್ಧ ಟಾಟಾ ಸಮೂಹದ ಟಿ.ಸಿ.ಎಸ್ ಆಯೋಜನೆಯ ಪರಿವಿಡಿಯಲ್ಲಿ ಹೆಚ್ಚಿನ ಮಟ್ಟದ ವ್ಯಾಪ್ತಿ ಪ್ರಚಾರಗಳ ರೆಕ್ಕೆಗಳು ಹಬ್ಬಿಕೊಂಡವು. ಗಿರಿಧರ ಕಾಮತರ ಗೆಳೆಯರು ಇದರಲ್ಲಿ ಪಾಲ್ಗೊಳ್ಳೋಣ ಎಂದಾಗ, ಗಿರಿಧರ ಕಾಮತ್ ನಾನು ಓಟಗಾರನಲ್ಲ, ಆದ್ದರಿಂದ ಒಲ್ಲೆ ಎಂದಿದ್ದರು. ಗೆಳೆಯರು ಓಟದಲ್ಲಿ ೧೦ ಕಿಲೋ ಮೀಟರ್ ವ್ಯಾಪ್ತಿಯನ್ನು ಎರಡು ಗಂಟೆಗಳಲ್ಲಿ ಕ್ರಮಿಸಬೇಕು ಅಷ್ಟೇ ಎಂದಿದ್ದರು. ಹತ್ತು ಕಿಲೋ ಮೀಟರ್ ದೂರವನ್ನು ನಡಿಗೆಯಲ್ಲೇ ಪ್ರತೀ ದಿನ ಒಂದೂವರೆ ಗಂಟೆಗಳ ಅವಧಿಯಲ್ಲೇ ಗಿರಿಧರ್ ಸರಿ ಓಡಲು ಪ್ರಾರಂಭಿಸಿಯೇ ಬಿಟ್ಟರು. ಪ್ರತಿಷ್ಟಿತ ಮಳಿಗೆಗೆ ಹೋಗಿ ಅತ್ಯಂತ ದುಬಾರಿ ಹಣ ತೆತ್ತು ಓಟಕ್ಕಾಗಿ ಅದು ಸೂಕ್ತವೋ ಅಲ್ಲವೋ ಎಂದು ತಿಳಿಯದೆ ಬಟ್ಟೆಗಳನ್ನು ಕೊಂಡುದ್ದರು. ಗಿರಿಧರ ಕಾಮತ್ ಓಟವನ್ನು ತುಂಬಾ ಗಂಭೀರವಾಗಿ ಮನಸ್ಸಿಗೆ ತೆಗೆದುಕೊಂಡುಬಿಟ್ಟಿದ್ದರು. ಗಂಭೀರತೆ ಪ್ರಖರವಾಗಿತ್ತೆಂದರೆ “ಟಿ.ಸಿ.ಎಸ್ ೨೦೧೧ರ ೧೦ ರನ್” ಸಮೂಹ ಓಟದ ಕೂಟದಲ್ಲಿ ಮೊಟ್ಟ ಮೊದಲ ಪ್ರಯತ್ನದಲ್ಲೇ,ಗಿರಿಧರ್ ೧೦ ಕಿಲೋ ಮೀಟರ್ ಓಟವನ್ನು ಕೇವಲ ೧ ಗಂಟೆ ೩ ನಿಮಿಷದಲ್ಲಿ ಗೆಲುವಿನಿಂದ ಸಾಧಿಸಿದ್ದರು. ದೇಶ ವಿದೇಶಗಳಿಂದೆಲ್ಲಾ ಗಿರಿಧರ ಕಾಮತರಿಗೆ ಪರಿಚಿತರ ದೂರವಾಣಿ ಕರೆಗಳು ಬರಲು ತೊಡಗಿದವು. ಕಾರಣ “ಗಿರಿಧರ ಕಾಮತರು ತಮ್ಮ ಓಟವನ್ನು ಗೆಲುವಿನೋಪಾದಿಯ ಸಂಭ್ರಮವಾಗಿ ದೈಹಿಕ ಅಭಿವ್ಯಕ್ತಿಯಲ್ಲಿ ಹೊರಸೂಸುತ್ತಿದ್ದ ಚಿತ್ರವನ್ನು ಟಿ.ಸಿ.ಎಸ್ ಸಂಸ್ಥೆ ಪತ್ರಿಕೆಗಳಲ್ಲಿನ ಬೃಹತ್ ಮಧ್ಯಮ ಪುಟದ ಜಾಹೀರಾತಿನಲ್ಲಿ ಬಿಂಬಿಸಿತ್ತು”. “ಟಿ.ಸಿ.ಎಸ್ ೨೦೧೨ರ ೧೦ರನ್” ಆಯೋಜನೆಯಲ್ಲಿ ಗಿರಿಧರ ಕಾಮತ್ ತಮ್ಮ ೧೦ ಕಿಲೋ ಮೀಟರ್ ಓಟವನ್ನು ೫೩ ನಿಮಿಷಗಳಲ್ಲೇ ಸಾಧಿಸಿ ಮತ್ತಷ್ಟು ಉತ್ತಮತೆಯನ್ನು ಪ್ರತಿಬಿಂಬಿಸಿದರು. “ಟಿ.ಸಿ.ಎಸ್ ೨೦೧೩ರ ೧೦ರ ಸಮಾವೇಶದ ಸಮಯದಲ್ಲಿ ಗಿರಿಧರ ಕಾಮತರ ಗುರುಗಳು ೪೮ ನಿಮಿಷಗಳ ಸಾಧನೆಯನ್ನು ಗುರಿಯಲ್ಲಿಡುವಂತೆ ಅವರಿಗೆ ಸೂಚಿಸಿದ್ದರು. ಗಿರಿಧರ ಕಾಮತರಿಗೆ ೪೩ ನಿಮಿಷಗಳಲ್ಲೇ ಮುಗಿಸಬೇಕೆಂಬ ಆಕಾಂಕ್ಷೆ ಗರಿಗೆದರಿತ್ತು. ಪರಿಣಾಮ ಓಟದ ಪ್ರಾರಂಭಿಕ ಕ್ಷಣಗಳಲ್ಲೇ ಓರಗೆಯವರನ್ನೆಲ್ಲಾ ಮೀರಿ ಓಡುತ್ತಾ ಸಾಗಿದ್ದ ಗಿರಿಧರರಿಗೆ ತೋಳು ಪಟ್ಟಿಯಲ್ಲಿದ್ದ ಮಾಪನ ಇಪ್ಪತ್ತೇ ನಿಮಿಷಗಳಲ್ಲಿ ೬ ಕಿಲೋ ಮೀಟರ್ ಓಟವನ್ನು ಮುಗಿಸಿದ್ದುದರ ಸಂಭ್ರಮವನ್ನು ರಿಂಗಣಿಸಿತ್ತು. ಆ ಕ್ಷಣದಿಂದಲೇ ಗಿರಿಧರರಿಗೆ ಓಟದ ಅರಿವಿನ ಕೊಂಡಿ ಕಳಚಿಕೊಂಡಿತ್ತು. ಓಟ, ಕಣ್ಣು ಕಾಣದವನ ಓಟವಾಗಿತ್ತಾದರೂ ಓಘವನ್ನು ಯಾಂತ್ರಿಕವೆಂಬಂತೆ ಕ್ರಮಿಸುತ್ತಾ ಸಾಗಿತ್ತು.ಉತ್ತರ “ಇಲ್ಲೇ ೨೦೦ ಮೀಟರ್ ದೂರದಲ್ಲಿ!”. ಪುನಃ ಅರಿವಾದಾಗ ಇದ್ದದ್ದು ಗುರಿಯ ಗೆರೆಯ ನಂತರದಲ್ಲಲ್ಲ! ಇದ್ದದ್ದು ಆಸ್ಪತ್ರೆಯಲ್ಲಿ ಜೊತೆಯಲ್ಲಿದ್ದವರ ಪ್ರಕಾರ ತರ್ತುಸೇವಾ ಅಪಘಾತ ವಾಹನದಲ್ಲಿದ್ದಾಗ ಉಸಿರಾಟ ಸ್ಥಗಿತವಾಗಿ ಚಿಂತಾಕ್ರಾಂತವಾಗಿತ್ತಾದರೂ ಆಸ್ಪತ್ರೆಯಲ್ಲಿ ಸಂದ ಪ್ರಾಥಮಿಕ ಚಿಕೆತ್ಸೆಯ ಸಂರ್ಭದಲ್ಲೇ ಉಸಿರಾಟ ಸಹಜ ಸ್ಥಿತಿಗೆ ಮರಳಿತ್ತು. ಪರೀಕ್ಷೆಗಳೂ ಯಾವುದೇ ಗಂಭೀರತೆಯನ್ನು ತೋರದೆ, ಕ್ಷಣಿಕವಾಗಿ ನೀಡಿದ ದೇಹದ ಮೇಲಿನ ಹೆಚ್ಚಿನ ಒತ್ತಡ ಉಸಿರಾಟದ ಸ್ಥಗಿತತೆಯನ್ನು ನರ್ಮಿಸಿತ್ತೇ ವಿನಃ ಶ್ವಾಸಕೋಶದ ಮೇಲೆ ಪರಿಣಾಮವೂಎಂಬುದು ಖಚಿತಗೊಂಡಿತು. ಗಿರಿಧರ ಕಾಮತರು ಮರ್ನಾಲ್ಕು ತಿಂಗಳು ಓಟಕ್ಕೆ ಬಿಡುವು ನೀಡಿದರಾದರೂ ವೈದ್ಯರು ನಿರಂತರವಾಗಿ ಓಡುವ ಅಭ್ಯಾಸವನ್ನು ಮಾಡಿದ್ದರಿಂದಲೇ ಶರೀರ ಗಂಭೀರ ಒತ್ತಡವನ್ನು ತಡೆದುಕೊಂಡು ಉಳಿದುಕೊಂಡಿದೆ.ಬದುಕುಳಿಯುವುದು ಸಾಧ್ಯವೇ ಇರಲಿಲ್ಲ ಡಾಕ್ಟರರು ನುಡಿದಿದ್ದರು. [೧] ಗಿರಿಧರ ಕಾಮತರ ಜೀವನದಲ್ಲಿ ಕಂಡ ಒಂದು ಕ್ಷಣದ ಆಪತ್ತು ಇಂದಿನ ದಿನದಲ್ಲಿ ಕಿಂಚಿತ್ತೂ ಆಯಾಸವಿಲ್ಲದೆ ಹತ್ತು ಕಿಲೋಮೀಟರ್ ದೂರವನ್ನು ಕೇವಲ ೪೦ ನಿಮಿಷಗಳಲ್ಲಿ ಓಡುವ ದೇಹಾತ್ಮಶಕ್ತಿಗಳನ್ನು ತಮ್ಮೊಂದಿಗಿರಿಸಿಕೊಂಡಿದ್ದಾರೆ. ದೇಹಕ್ಕೆ ಯಾವುದೇ ಶ್ರಮ ಎನ್ನಿಸದ ದಿನಕ್ಕೆ ೬೦ರಿಂದ ೮೦ ಕಿಲೋಮೀಟರ್ ಓಡಬಲ್ಲ ಗಿರಿಧರ್ ದಿನದಲ್ಲಿ ೧೦೨ ಕಿಲೋ ಮೀಟರ್ ಓಟದಲ್ಲಿ ಕ್ರಮಿಸಿದ್ದೂ ಇದೆ. ಇದ್ಯಾವುದನ್ನೂ ಗರಿಮೆಗಾಗಿ ಮಾಡಬೇಕಿಲ್ಲ ಸಂತೋಷಕ್ಕಾಗಿ ಮಾಡಬೇಕು ಎಂಬ ದಿವ್ಯಜ್ಞಾನವನ್ನು ಕೂಡಾ ಮೈಗೂಡಿಸಿಕೊಂಡಿದ್ದರು.ಬದುಕಿನಲ್ಲಿ ಆಪತ್ತಿನ ಕ್ಷಣ ತಂದುಕೊಟ್ಟ ಹೃದಯತುಂಬಿದ ಕೃತಜ್ಞತೆ ಬೆಳೆಸಿಕೊಂಡಿದ್ದಾರೆ. ಗಿರಿಧರ ಕಾಮತರು ಓಟದ ವಿಚಾರದಲ್ಲಿ ಏಕಾತಾನತೆ ಮೂಡದಿರಲು ಸ್ಥಳಗಳು, ಸಮಯಗಳ ವೈವಿಧ್ಯಮಯ ಸೃಜನಾ ಕಲ್ಪನೆ ಓಟದಲ್ಲಿ ವಿಧಿಸಿಕೊಳ್ಳುವುದಿದೆ. ಹಲವು ಸರದಿ (ರಿಲೇ) ಓಟಗಳಲ್ಲಿ ಪಾಲ್ಗೊಳ್ಳುವುದಿದೆ . ಬೆಂಗಳೂರು ಮೈಸೂರು ನಡುವೆ ನಡೆದ ಟ್ವಿನ್ ಸಿಟಿ ರಿಲೇ ಓಟದಲ್ಲಿ ಎರಡು ತಾಸುಗಳ ಬ್ಯಾಕ್ ಟು ಬ್ಯಾಕ್ (ಒಟ್ಟು ಇಪ್ಪತ್ತು ಕಿಲೋಮೀಟರ್) ಓಟವನ್ನು ನಡೆಸಿದರು ತಾವೇ ಹಾಕಿಕೊಂಡಿದ್ದ ೨೪ ಗಂಟೆಗಳ ಸರದಿ ಓಟದ ಯೋಜನೆಯಂತೆ ನಿರಂತರ ೨೪ ದಿನಗಳಲ್ಲಿ ದಿನ ತಾಸಿನಲ್ಲಿ (ಇಂದು ರಾತ್ರಿ ೧೨ರಿಂದ ೧ ಗಂಟೆ, ನಾಳೆ ರಾತ್ರಿ ೧ರಿಂದ ೨, ದಿನ ರಾತ್ರಿ ೨ರಿಂದ ೩ ಹೀಗೆ ೨೪ ದಿನಗಳಲ್ಲಿ ೨೪ ಸರದಿ ತಾಸುಗಳ) ಓಟವನ್ನು ವಿವಿದೆಡೆಗಳಲ್ಲಿ ನಡೆಸಿದರು. ಸ್ವಯಂಸೇವಕರಾಗಿ ಕರ್ಯನರ್ವಹಿಸುವುದೂ ಇದೆ. ರ್ಷದಲ್ಲಿ ಈಶಾ ಫೌಂಡೆಶನ್ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಯೋಜನೆಗೆ ಸಹಾಯ ಒದಗಿಸುವ ಸಲುವಾಗಿ ಸೆಪ್ಟೆಂಬರ್ ೩ರಿಂದ ಮೊದಲ್ಗೊಂಡಂತೆ ಬೆಂಗಳೂರಿನಿಂದ ಕೊಯಮತ್ತೂರುವರೆಗಿನ ೪೦೦ ಕಿಲೋಮೀಟರ್ ದೂರವನ್ನು ಮೂರು ದಿನಗಳಲ್ಲಿ ೨೦೦ ಕಿಲೋಮೀಟರ್ ದೂರವನ್ನು ಬರಿಗಾಲಿನ ಓಟದಲ್ಲೂ ಉಳಿದ ಮೂರು ದಿನಗಳ ೨೦೦ ಕಿಲೋಮೀಟರ್ ದೂರವನ್ನು ಸೈಕಲ್ ಸವಾರಿಯಲ್ಲೂ ಪೂರೈಸಿದ್ದಾರೆ.
ಪ್ರಶಸ್ತಿ
[ಬದಲಾಯಿಸಿ]“ಟಿ.ಸಿ.ಎಸ್ ೨೦೧೧ರ ೧೦ರನ್” ಕೂಟದಲ್ಲಿ ಸಾಧನೆ ಮಾಡಿದ ಮೊದಲ ಹತ್ತು ಜನರಿಗೆ ಕೊಡಲಾಗುವ ‘ಟಿ-ರ್ಟ’ ಕೂಡಾ ಲಭಿಸಿತು.ಗಿರಿಧರ ಕಾಮತರಿಗೆ ಕೆ. ಸಿ.ಕೊಂದಂಡಪಾಣಿ ಓಟದ ಮರ್ಗರ್ಶನ ಲಭಿಸುವಂತಾಯಿತು.
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]