ವಿಷಯಕ್ಕೆ ಹೋಗು

ಗುರುನಾನಕ್ ವಿಶ್ವವಿದ್ಯಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುರುನಾನಕ್ ವಿಶ್ವವಿದ್ಯಾಲಯವು ಗುರುನಾನಕರ 500ನೆಯ ಜನ್ಮದಿನಾಚರಣೆಯ ಸ್ಮಾರಕವಾಗಿ 1969ರಲ್ಲಿ ಅಮೃತಸರದಲ್ಲಿ ಸ್ಥಾಪನೆಯಾದ ಸಂಸ್ಥೆ.[] ರಾಷ್ಟ್ರಾಧ್ಯಕ್ಷ ವಿ. ವಿ. ಗಿರಿಯವರಿಂದ ಅದೇ ವರ್ಷ ಅದರ ಶಂಕುಸ್ಥಾಪನೆಯಾಯಿತು. ಮಾರನೆಯ ವರ್ಷದಿಂದ ಅದು ತನ್ನ ಕಾರ್ಯವನ್ನಾರಂಭಿಸಿತು. ಪಂಜಾಬಿನ ಅಮೃತಸರ, ಗುರುದಾಸಪುರ, ಜಲಂಧರ ಮತ್ತು ಕಪೂರ್ಥಲ ಜಿಲ್ಲೆಗಳ ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿರುವ ಈ ವಿಶ್ವವಿದ್ಯಾಲಯಕ್ಕೆ 1971-72ನೆಯ ಸಾಲಿನಿಂದ ಅಂತರವಿಶ್ವವಿದ್ಯಾನಿಲಯದ ಸದಸ್ಯತ್ವ ದೊರಕಿತು. ಅಮೃತಸರದ ಖಾಲ್ಸಾ ಕಾಲೇಜಿನಲ್ಲಿ ಇದರ ತಾತ್ಕಾಲಿಕ ಕಾರ್ಯಾಲಯವಿತ್ತು.

ವಿಶ್ವವಿದ್ಯಾನಿಲಯಕ್ಕೆ ಮೇಲಿನ ನಾಲ್ಕು ಜಿಲ್ಲೆಗಳ 64 ಕಾಲೇಜುಗಳು ಅಂಗಸಂಸ್ಥೆಗಳಾಗಿವೆ. ಅಮೃತಸರದಲ್ಲಿ ರಸಾಯನಶಾಸ್ತ್ರ, ಗುರುನಾನಕ್ ಅಧ್ಯಯನ, ಇತಿಹಾಸ, ಗಣಿತಶಾಸ್ತ್ರ, ಮನೋವಿಜ್ಞಾನ ಈ ಐದು ವಿಷಯಗಳ ವ್ಯಾಸಂಗಕ್ಕೆ ಅವಕಾಶವಿದ್ದು ಸ್ನಾತಕೋತ್ತರ ಶಿಕ್ಷಣಕ್ಕೆ ಯುಕ್ತ ವ್ಯವಸ್ಥೆ ಇದೆ. ಸ್ಥಳೀಯ ಕಾಲೇಜುಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ಸ್ನಾತಕೋತ್ತರ ಶಿಕ್ಷಣದ ವ್ಯವಸ್ಥೆಯೂ ವಿಶ್ವವಿದ್ಯಾನಿಲಯದ ಜವಾಬ್ದಾರಿಯೇ ಆಗಿದೆ. ವಿಜ್ಞಾನ, ವೈದ್ಯ, ದಂತವೈದ್ಯ, ಕೃಷಿ ಮತ್ತು ಅರಣ್ಯಶಾಸ್ತ್ರ, ಕಲಾಶಾಸ್ತ್ರ ಮತ್ತು ಮಾನವಿಕ ವಿಜ್ಞಾನಗಳು, ಭಾಷೆಗಳು, ಶಿಕ್ಷಣ, ಲಲಿತಕಲೆ ಮತ್ತು ಪ್ರಾಚೀನ ಶಾಸ್ತ್ರ-ಈ ಎಂಟು ವಿಷಯಗಳ ವಿದ್ವನ್ಮಂಡಲಿಗಳಿವೆ (ಫ್ಯಾಕಲ್ಟಿ). 17 ಪಠ್ಯಪರಿಷತ್ತುಗಳಿವೆ (ಬೋರ್ಡ್ ಆಫ್ ಸ್ಟಡೀಸ್). 1972ರ ಜನವರಿ ತಿಂಗಳಿನಲ್ಲಿ ವಿಶ್ವವಿದ್ಯಾಲಯ ತನ್ನ ಪ್ರಥಮ ಘಟಿಕೋತ್ಸವವನ್ನು ನಡೆಸಿತು.

ಸ್ಥಾನ

[ಬದಲಾಯಿಸಿ]

ಗುರುನಾನಕ್ ದೇವ್ ವಿಶ್ವವಿದ್ಯಾಲಯಕ್ಕೆ ೨೦೨೩ರಲ್ಲಿ ರಾಷ್ಟ್ರೀಯ ಸಾಂಸ್ಥಿಕ ವರ್ಗೀಕರಣ ಚೌಕಟ್ಟು (NIRF) ಭಾರತದಲ್ಲಿನ ವಿಶ್ವವಿದ್ಯಾಲಯಗಳ ಪೈಕಿ ೪೮ನೇ ಸ್ಥಾನ ನೀಡಿತು[] ಮತ್ತು ಒಟ್ಟಾರೆಯಾಗಿ 87ನೇ ಸ್ಥಾನ ಪಡೆದಿದೆ.[]

ಚಿತ್ರಸಂಪುಟ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Basic Information About University (NAAC SSR Information Sheet), retrieved 28 October 2024
  2. "University Ranking".
  3. "Ranking".


ಹೊರಗಿನ ಕೊಂಡಿಗಳು

[ಬದಲಾಯಿಸಿ]