ಗೋಡೈವ

ಗೋಡೈವ (ಸು. 1040-1080) ಮರ್ಸಿಯದ ಅರ್ಲ್ ಹಾಗೂ ಕಾವೆಂಟ್ರಿಯ ಲಾರ್ಡ್ ಆದ ಲಿಯೋಫ್ರಿಕನ ಮಡದಿ. ಅನೇಕ ಧಾರ್ಮಿಕ ಸಂಘ ಸಂಸ್ಥೆಗಳಿಗೆ ಉದಾರ ಧನಸಹಾಯ ನೀಡಿದವಳು.
ಕಥೆ
[ಬದಲಾಯಿಸಿ]ಈಕೆಯ ಬಗ್ಗೆ ಸ್ವಾರಸ್ಯವಾದ ಒಂದು ಕಥೆ ಇದೆ: ತೆರಿಗೆಗಳ ಹೊರೆಯನ್ನು ಹೊರಲಾರದೆ ಜನ ತಳಮಳಿಸುತ್ತಿರುವುದನ್ನು ಕಂಡು ಗೋಡೈವಳಿಗೆ ಸಹಿಸದ ಸಂಕಟವಾಯಿತು. ಕಂದಾಯವನ್ನು ಕಡಿಮೆ ಮಾಡುವಂತೆ ತನ್ನ ಗಂಡನನ್ನು ಕೇಳಿಕೊಂಡಳು. ಆತ ಒಂದು ಶರತ್ತು ಹಾಕಿದ. ಅದು ಕೇವಲ ಬಾಯಿಮಾತಿಗೆ ಹಾಕಿದ ಶರತ್ತೇ ವಿನಾ ಉದ್ದೇಶಪೂರ್ವಕವಾದುದಾಗಿರಲಿಲ್ಲ. ತನ್ನ ಪತಿಯ ಆದೇಶವನ್ನು ಗಂಭೀರವಾಗಿ ಪರಿಗಣಿಸಿದ ಗೋಡೈವ ನಿರ್ವಸ್ತ್ರಳಾಗಿ, ತನ್ನ ಉದ್ದನೆಯ ತಲೆಗೂದಲಿನಿಂದ ಮೈಯನ್ನು ಮುಚ್ಚಿಕೊಂಡು ಕುದುರೆಯ ಮೇಲೆ ಕುಳಿತು ಕಾವೆಂಟ್ರಿಯ ಬೀದಿಗಳಲ್ಲಿ ಹಾದುಹೋದಳು. ಇದನ್ನು ಗಮನಿಸಿದ ಕಾವೆಂಟ್ರಿಯ ಜನ ತಮ್ಮ ತಮ್ಮ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಮನೆಯೊಳಗೇ ಇದ್ದುಬಿಟ್ಟರು. ಗೋಡೈವಳ ಈ ವರ್ತನೆಯ ಪರಿಣಾಮವಾಗಿ ಊರಿನ ಜನರ ಮೇಲೆ ವಿಧಿಸಿದ ತೆರಿಗೆ ಕಡಿಮೆಯಾಯಿತು. ಗೋಡೈವ ಬೀದಿಯ ಮೂಲಕ ಹಾಯುತ್ತಿದ್ದಾಗ ನಡೆಯುತ್ತಿದ್ದುದೇನು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಕಿಟಕಿಯಂದ ಇಣಕಿ ನೋಡುತ್ತಿದ್ದ ಟಾಮ್ ಎಂಬ ಯುವಕನಿಗೆ ಅವನ ದೃಷ್ಟಿ ಹೋಯಿತೆಂತಲೋ ಇಲ್ಲವೇ ಆತ ಸಾವನ್ನಪ್ಪಿದನೆಂತಲೋ ಕಥೆಯಿರುವುದಾದರೂ[೧] ಈ ಬಗ್ಗೆ ಸಂಬಂಧಿಸಿದ ಉಲ್ಲೇಖ 17ನೆಯ ಶತಮಾನದ ಮೊದಲಿಗೆ ಎಲ್ಲಿಯೂ ಕಾಣಸಿಗದು. ಕೆಲವು ಇತಿಹಾಸಕಾರರು ಮತ್ತು ಮಾನವಶಾಸ್ತ್ರಜ್ಞರು ಈ ಕುದುರೆ ಸವಾರಿಯನ್ನು ಫಲಸಂವೃದ್ಧಿಗಾಗಿ ಕೈಗೊಳ್ಳುತ್ತಿದ್ದ ಕಟ್ಟಳೆಗಳಲ್ಲೊಂದು ಎಂದು ವ್ಯಾಖ್ಯಿಸಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "Peeping Tom Archived 24 July 2023 ವೇಬ್ಯಾಕ್ ಮೆಷಿನ್ ನಲ್ಲಿ.", Encyclopedia Britannica; accessed 24 July 2023.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Cecilia Parsons, "Countess Godiva", 1999, revised 2004: biography and developing legend
- BBC News – the unearthing of a stained glass window identified with Lady Godiva
