ವಿಷಯಕ್ಕೆ ಹೋಗು

ಗೋಲಗೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋಲಗೇರಿ
ಗೋಲಗೇರಿ
village

ಗೋಲಗೇರಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ.

ಮುಖ್ಯ ದೇವಸ್ಥಾನ

[ಬದಲಾಯಿಸಿ]

ಶ್ರೀಗೊಲ್ಲಾಳೇಶ್ವರ ದೇವಸ್ಥಾನ/ ಎರಡನೆ ಶ್ರೀಶೈಲಂ (ಸ್ಥಳ ಪುರಾಣ) :- ಸಾವಿರಾರು ವರ್ಷಗಳ ಹಿಂದೆ, ಗೋಲಗೇರಿಯ ಸಮೀಪದಲ್ಲಿರೋ ಢವಳಾರ ಪ್ರದೇಶದಲ್ಲಿ ಬಲ್ಲುಗ ಎಂಬ ಕುರಿಗಾಯಿಯಿದ್ದ. ಆತನಿಗೆ ಶಿವಕೃಪೆಯಿಂದ ಗೊಲ್ಲಾಳ ಎಂಬ ಪುತ್ರ ಜನಿಸಿದ್ದ. ಜಿಪುಣಾತೀತ ಬಲ್ಲುಗ ಮಗನಾಗಿದ್ದ ಗೊಲ್ಲಾಳನಿಗೆ, ಕುರಿ ಕಾಯುವುದು ಕಸುಬಾಗಿತ್ತು. ಲಕ್ಷದ ಮೇಲೆ ತೊಂಬತ್ತಾರು ಸಾವಿರ ಕುರಿಗಳನ್ನು ಮೇಯಿಸುತ್ತಾ ಗೊಲ್ಲಾಳ, ಪ್ರತಿ ದಿನವೂ ಢವಳಾರ ಗ್ರಾಮದ ಹಳ್ಳದ ಕಡೆ ಬರುತ್ತಿದ್ದ. ಇನ್ನು, ಢವಳಾರ ಗ್ರಾಮ ಮಾರ್ಗವಾಗಿಯೇ, ಸೊಲ್ಲಾಪೂರ, ಬಿಜಾಪುರ, ಕೊಲ್ಲಾಪೂರದ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ ಹೋಗ್ತಾಯಿದ್ದರು. ಹಾಗಿದ್ದಾಗ, ಅದೊಮ್ಮೆ ಗೊಲ್ಲಾಳನಿಗೆ ನಂದಯ್ಯ ಎಂಬ ಜಂಗಮರೊಬ್ಬರ ಪರಿಚಯವಾಗುತ್ತೆ. ಆಗ ಗೊಲ್ಲಾಳ, ‘ನೀವು ಶ್ರೀಶೈಲಕ್ಕೆ ಯಾಕೆ ಹೋಗ್ತಿರಿ..ಅಲ್ಲೆನಿದೆ‘ ಎಂದು ಪ್ರಶ್ನೆ ಮಾಡಿದ್ದ. ಅದಕ್ಕೆ ಆ ಜಂಗಮರು, ‘ಶ್ರೀಶೈಲದಲ್ಲಿ ಲಿಂಗರೂಪದ ಮಲ್ಲಯ್ಯ ಇದ್ದಾನೆ, ಮಲ್ಲಯ್ಯ ಅಂದ್ರೆ ಪರಮಾತ್ಮ..ಆತನ ದರ್ಶನಕ್ಕೆ ಹೋಗ್ತಾಯಿದ್ದೇವೆ‘ ಎಂದಿದ್ದರು. ಮರುಕ್ಷಣವೇ ಗೊಲ್ಲಾಳ, ‘ಆ ಲಿಂಗವನ್ನು ಇಲ್ಲಿಗೆ ತರಲು ಆಗೋದಿಲ್ಲವೇ..‘ಎಂದು ಮುಗ್ಧಭಾವದಿಂದ ಕೇಳಿದ್ದ. ಗೊಲ್ಲಾಳನ ಮುಗ್ಧತೆ ಕಂಡು ನಸುನಕ್ಕ ನಂದಯ್ಯ ಸ್ವಾಮಿಗಳು, `ನೋಡು ಗೊಲ್ಲಾಳ, ಆ ಲಿಂಗವನ್ನು ತರಲು ಆಗಲ್ಲ, ಆದ್ರೆ, ಅಲ್ಲಿ ಬಹಳಷ್ಟು ಲಿಂಗಳಿವೆ..ಅದರಲ್ಲಿ ಒಂದನ್ನ ತರಬಹುದು' ಎಂದಿದ್ದರು. ಆಗ ಗೊಲ್ಲಾಳನು, ತನ್ನ ಬಳಿಯಿದ್ದ ಚಿನ್ನದ ನಾಣ್ಯಗಳನ್ನು ಕೊಟ್ಟು ಲಿಂಗ ತರುವಂತೆ ಹೇಳಿದ್ದ. ಹದಿನೈದು ದಿನ ಕಳೆದಿದ್ದವು. ಯುಗಾದಿ ಹಬ್ಬ ಮುಗಿದಿತ್ತು. ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಮಾಡಿದ ನಂದಯ್ಯ ಸ್ವಾಮಿ, ಮತ್ತೆ ಢವಳಾರ ಮಾರ್ಗವಾಗಿಯೇ ಹಿಂದುರಿಗಿ ಬರುತ್ತಿದ್. ಆಗವವರನ್ನು ಕಂಡ ಗೊಲ್ಲಾಳ, ದೂರದಿಂದಲೇ ನಮಸ್ಕಾರ ಮಾಡಿದ್ದ. ಗೊಲ್ಲಾಳನ್ನು ನೋಡಿದ ತಕ್ಷಣ, ನಂದಯ್ಯ ಸ್ವಾಮಿಗಳಿಗೆ ಲಿಂಗದ ನೆನಪಾಗಿತ್ತು. ಅವರು ಗೊಲ್ಲಾಳನಿಂದ ಚಿನ್ನದ ವರಹಗಳನ್ನು ಪಡೆದಿದ್ದರು..ಆದ್ರೆ, ಶ್ರೀಶೈಲದಿಂದ ಲಿಂಗ ತರೋದನ್ನ ಮರೆತಿದ್ದರು. ಗೊಲ್ಲಾಳ ಖುಷಿಯಿಂದ ಸ್ವಾಮಿಗಳ ಹತ್ತಿರ ಬಂದು, ‘ನನಗೆ ಲಿಂಗ ಕೊಡಿ‘ ಎಂದಿದ್ದ. ಆಗ ನಂದಯ್ಯ ಸ್ವಾಮಿಗಳು ಗೊಲ್ಲಾಳನಿಗೆ ‘ಕಣ್ಣು ಮುಚ್ಚಿಕೋ ಕೊಡುವೆ‘ ಎಂದು ಹೇಳಿ, ಅಲ್ಲಿಯೇ ಇದ್ದ ಕುರಿಯ ಹಿಕ್ಕಿ (ಕುರಿಯ ಮಲ)ವನ್ನು ಬಲಗಾಲಿನಲ್ಲಿ ನಿಧಾನವಾಗಿ ತೆಗೆದುಕೊಂಡು, ಮಂತ್ರ ಜಪಿಸಿ ಗೊಲ್ಲಾಳ ಕೈಗೆ ಕೊಟ್ಟರು. ಆನಂತರ ಅವರು ‘ಈ ಲಿಂಗವನ್ನು ನೋಡಬೇಡ, ಅದನ್ನು ನೆಲದಲ್ಲಿಟ್ಟು, ಹೂ, ಹಣ್ಣು, ಹಾಲುಗಳನ್ನು ಹಾಕುತ್ತಾ ಪೂಜೆ ಮಾಡು‘ ಎಂದಿದ್ದರು. ತನ್ನ ಕೈಯಲ್ಲಿ ಇದ್ದದ್ದು ಕುರಿಯ ಹಿಕ್ಕಿ ಎಂಬುದು ಗೊತ್ತಿಲ್ಲದ ಗೊಲ್ಲಾಳ, ಅದನ್ನೆ ಲಿಂಗವೆಂದು ಪೂಜಿಸಲು ಆರಂಧಿಸಿದ್ದ..!

   ಇನ್ನು, ಪ್ರತಿ ದಿನ ಗೊಲ್ಲಾಳ ಎಲ್ಲ ಕುರಿಗಳ ಹಾಲು ಕರೆದು ಲಿಂಗಕ್ಕೆ ಸುರಿಯುತಿದ್ದ. ಹೀಗಾಗಿ ಹಟ್ಟಿಗೆ (ದೊಡ್ಡಿಗೆ) ಹೋದ ಮೇಲೆ ಕುರಿಗಳು ಹಾಲು ನೀಡುತ್ತಿರಲಿಲ್ಲ. ಇದರಿಂದ ಚಿಂತಿತನಾದ ಗೊಲ್ಲಾಳನ ತಂದೆ ಬಲ್ಲುಗ, ಅದೊಂದು ದಿನ ಕುರಿ ಮೇಯಿಸಲು ಹೋದ ಮಗನನ್ನು ಹಿಂಬಾಲಿಸಿಕೊಂಡು ಬಂದಿದ್ದ. 

ಗೊಲ್ಲಾಳ ಎಂದಿನಂತೆ ಕುರಿಗಳ ಹಾಲು ಕರೆದು, ಲಿಂಗದ ಮೇಲೆ ಹಾಕಲಾರಂಭಿಸಿದ್ದ. ಅದನ್ನು ಕಂಡ ಬಲ್ಲುಗನ ಸಿಟ್ಟು ಹಿಡಿತ ಮೀರಿತ್ತು. ಆ ಕೂಡಲೇ ಅವನು ಲಿಂಗವಿದ್ದ ಸ್ಥಳವನ್ನು ಚೆಲ್ಲಾಪಿಲ್ಲಿ ಮಾಡಿ, ಮಗನಿಗೆ ಬೈಯಲಾರಂಭಿಸಿದ್ದ. ತಂದೆಯ ವರ್ತನೆಯನ್ನು ಕಂಡ ಗೊಲ್ಲಾಳಿನಿಗೂ ಸಿಟ್ಟು ಬಂದಿತ್ತು. ಅವನು ಲಿಂಗವನ್ನು ಬಹಳ ಹೊತ್ತು ಹುಡುಕಿದ್ದ. ಆದ್ರೆ ಅದು ಸಿಗದಿದ್ದಾಗ, ತನ್ನ ಪೂಜೆ ಭಂಗ ಮಾಡಿದ ತಂದೆಯ ಮೇಲೆ ಕೊಡಲಿ ಎತ್ತಿದ್ದ. ಇನ್ನೇನು ಗೊಲ್ಲಾಳ ಕೊಡಲಿ ಬೀಸಬೇಕೆನ್ನುವಾಗಲೇ, ಆತ ಭಕ್ತಿಗೆ ಮೆಚ್ಚಿದ್ದ ಶ್ರೀಶೈಲ ಮಲ್ಲಿಕಾರ್ಜುನ ಪ್ರತ್ಯಕ್ಷವಾಗಿ, ಗೊಲ್ಲಾಳನ್ನ ಹರಿಸಿದ್ದ. ಬಲ್ಲುಗನ ಕಣ್ಣು ತರೆಸಿದ್ದ. ಹೀಗೆ, ಶಿವ ಸಾಕ್ಷಾತ್ಕಾರವಾದ ಮೇಲೆ ಗೊಲ್ಲಾಳ, ಬಲ್ಲುಗ ಹಾಗೂ ದುಗ್ಗಳೆ (ಗೊಲ್ಲಾಳನ ತಾಯಿ) ಎಲ್ಲರೂ ಕೈಲಾಸಕ್ಕೆ ಹೋದ್ರು. ಶಿವಸನ್ನಿಧಿಯನ್ನು ಪಡೆದ್ರು ಅನ್ನಲಾಗುತ್ತೆ.

ಇನ್ನು, ಗೊಲ್ಲಾಳನಿಂದ ಪ್ರತಿಷ್ಠಾಪಿಸಲ್ಪಟ್ಟ ಲಿಂಗ ಅಲ್ಲಿಯೇ ಉಳಿದಿತ್ತು. ಮುಂದೆ ಮರಿಯಪ್ಪ ಸಾಹುಕಾರನೆಂಬ ಮುತ್ತಿನ ವ್ಯಾಪಾರಿಗೆ, ಗೊಲ್ಲಾಳನ ದರ್ಶನವಾಗಿ, ಮರಿಯಪ್ಪ ಸಾಹುಕಾರನಿಂದ ಮಂದಿರ ನಿರ್ಮಾಣವಾಯ್ತು. ಅಷ್ಟೆಅಲ್ಲಾ, ಗೊಲ್ಲಾಳ ನೆಲೆಯಾಗಿದ್ದ ಆ ಸ್ಥಳ, ಗೋಲಗೇರಿ ಎಂದು ಪ್ರಸಿದ್ಧಿಗೆ ಬಂತು. ಸದ್ಯ ಗೋಲಗೇರಿಯಲ್ಲಿರೋ ಶ್ರೀಗೊಲ್ಲಾಳೇಶ್ವರ ದೇವಸ್ಥಾನವು ವಿಶಾಲವಾಗಿದ್ದು, ಹೊರಗಡೆಯಿಂದ ದೇವಸ್ಥಾನ ಪ್ರವೇಶಕ್ಕೆ ಮೂರು ಬಾಗಿಲು, ಗರ್ಭಗುಡಿಯ ಪ್ರವೇಶಕ್ಕೆ ಮೂರು ಬಾಗಿಲುಗಳನ್ನು ಹೊಂದಿದೆ. ಗರ್ಭಗುಡಿಯ ಎದರು ಸ್ಥಂಭಗಳಿದ್ದು, ಆ ಸ್ಥಂಭಗಳ ಪಕ್ಕದಲ್ಲೇ ದೇವಸ್ಥಾನ ಪ್ರವೇಶ ಮಾಡೋ ಮೂಲ ಬಾಗಿಲಿದೆ. ಆ ಬಾಗಿಲಿಂದ ಹೊರ ಬಂದ್ರೆ, ಬಾಗಿಲ ನೇರವಾಗಿ ಒಂದು ಬಾವಿ (ತೀರ್ಥ, ಕಲ್ಯಾಣಿ) ಕಾಣುತ್ತೆ.

ಇನ್ನು, ಗೋಲಗೇರಿಯಲ್ಲಿ, ಕರ್ನಾಟಕ ರಾಜ್ಯದಲ್ಲಿಯೇ ಅತಿ ಎತ್ತರವಾದ ಹಾಗೂ ಭಾರವಾದ ರಥವಿದೆ. ಈ ರಥಕ್ಕೆ ಆರು ಚಕ್ರಗಳಿದ್ದು, ಒಳಗಡೆ ಹಾಗೂ ಒರಗಡೆಯ ಭಾಗಗಳು ಕಬ್ಬಿಣ, ಉಕ್ಕು, ಕಟ್ಟಿಗೆಯಿಂದ ನಿರ್ಮಿತವಾಗಿವೆ. ಪ್ರತಿ ವರ್ಷದ ದವನದ ಹುಟ್ಟಿಮೆಯಂದು (ಗೊಲ್ಲಾಳೇಶ್ವರರ ಜಾತ್ರೆಯಮದು) ಈ ರಥವನ್ನು ಒಂದು ಕಿಲೋ ಮೀಟರ್ ವರೆಗೆ ಎಳದೊಯ್ಯಲಾಗುತ್ತೆ. ಶ್ರೀಗೊಲ್ಲಾಳೇಶ್ವರ ದೇವಸ್ಥಾನಕ್ಕೆ ಕರ್ನಾಟಕ ಸೇರಿದಂತೆ, ಹೊರ ರಾಜ್ಯಗಳಲ್ಲೂ ಭಕ್ತರಿದ್ದಾರೆ. ಬೇಡಿದವರಿಗೆ ಬೇಡಿದ ಭಾಗ್ಯವನ್ನು ಕೊಡುವ ಗೊಲ್ಲಾಳನ ತ್ರಿಕಾಲ ಪೂಜೆಯನ್ನು, ಗೋಲಗೇರಿಯ ಜಂಗಮರು ನೆರವೇರಿಸುತ್ತಾರೆ. ಇನ್ನು, ದೇವಸ್ಥಾನದ ಆಡಳಿತವು, ಮರಿಯಪ್ಪ ಸಾಹುಕಾರನ ವಂಶಸ್ಥರಾದ ‘ ಗೊಲ್ಲಾಳಪ್ಪ ಸಾಹು ದೇವರಮನಿ ಹಾಗೂ ಶಿವಶಂಕರೆಪ್ಪ ಸಾಹು ದೇವರಮನಿ‘ ಅವರುಗಳ ಉಸ್ತುವಾರಿಯಲ್ಲಿದೆ. ಗೋಲಗೇರಿಯಲ್ಲಿ ವಿರಕ್ತಮಠವಿದೆ. ಪೂಜ್ಯಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಈ ಮಠದ ಪೀಠಾಧಿಪತಿಗಳಾಗಿದ್ದಾರೆ. ಪೂಜ್ಯರು ಸಂಸ್ಕೃತ ಹಾಗೂ ಮಹಾನ್ ಜ್ಯೋತಿಶಾಸ್ತ್ರ ಪಂಡಿತರಾಗಿದ್ದು, ಭಕ್ತರು ಅವರನ್ನು ಕಲಿಯುಗದ ಕಾಲಜ್ಞಾನಿ ಎಂದು ಪೂಜಿಸುತ್ತಾರೆ. ಇನ್ನುಳಿದಂತೆ, ಗೋಲಗೇರಿಯ ಪಕ್ಕದ ಗ್ರಾಮವಾದ ಡಂಬಳದಲ್ಲಿ, ಗೊಲ್ಲಾಳನ ಪರಮ ಭಕ್ತೆಯಾದ ಗೌರಮ್ಮನ ಮಂದಿರವಿದೆ. ಈ ಮಂದಿರ ಹಿನ್ನಲೆ ಏನಂದ್ರೆ, ಗೊಲ್ಲಾಳನಿಗಾಗಿ ಮಲ್ಲಿಕಾರ್ಜುನ ಶ್ರೀಶೈಲ ಬಿಟ್ಟು ಬಂದಿದ್ದ. ಹೀಗಾಗಿ ಪತಿಯನ್ನು ಹುಡುಕಿಕೊಂಡು, ಗೌರಮ್ಮನ ರೂಪದಲ್ಲಿ ಬಂದಿದ್ದ ಪಾರ್ವತಿ (ಶ್ರೀಶೈಲ ಭ್ರಮರಾಂಭ), ಡಂಬಳದ ಗೌಡರ ಮನೆತನದಲ್ಲಿ ಜನಿಸಿದ್ದಳು ಎನ್ನಲಾಗುತ್ತೆ. ಹಾಗದ್ರೆ, ಶಿವನಿಗೆ ಇಬ್ಬರು ಪತ್ನಿಯರಲ್ವಾ..? ಗೌರಿ ಬಂದ್ರೆ, ಗಂಗೆ ಏಲ್ಲಿ ಹೋದಳು..? ಎಂಬ ಪ್ರಶ್ನೆಗೆ ಉತ್ತರ, ದೇವಸ್ಥಾನದ ಎದುರಿಗಿರೋ ಬಾವಿ. ಆ ಬಾವಿಯ ನೀರೇ ಗಂಗೆ ಎನ್ನಲಾಗುತ್ತೆ.

ಭೌಗೋಳಿಕ

[ಬದಲಾಯಿಸಿ]

ಗ್ರಾಮವು ಭೌಗೋಳಿಕವಾಗಿ 16*°30'8"N ಉತ್ತರ ಅಕ್ಷಾಂಶ ಮತ್ತು 75*27'51" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

[ಬದಲಾಯಿಸಿ]
  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - 35°C-42°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - 18°C-28°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗುತ್ತದೆ.
  • ಗಾಳಿ - ಗಾಳಿಯ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ)ಹಾಗೂ 17 ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

[ಬದಲಾಯಿಸಿ]

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 8000ಕ್ಕೂ ಹೆಚ್ಚಿದೆ.

ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ ಮತ್ತು ಮೊಹರಮ ಹೆಜ್ಜೆ ಕುಣಿತದ ಪದ ಮುಂತಾದವು ಗ್ರಾಮದ ಕಲೆಯಾಗಿದೆ.

ಸಂಸ್ಕೃತಿ

[ಬದಲಾಯಿಸಿ]
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ಜುಬ್ಬಾ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆಯರು ಇಲಕಲ್ಲ ಸೀರೆಗಳನ್ನು ಧರಿಸುತ್ತಾರೆ.

ಆಹಾರ (ಖಾದ್ಯ)

[ಬದಲಾಯಿಸಿ]

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಹಾಗೂ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರು ಲಭ್ಯವಿರುತ್ತದೆ.

ಗ್ರಾಮದ ಪ್ರತಿಶತ 60 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಉದ್ಯೋಗ

[ಬದಲಾಯಿಸಿ]

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 90% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಚಿಕ್ಕಪುಟ್ಟ ವ್ಯಾಪಾರ ಉಪಕಸುಬುಗಳಾಗಿವೆ.

ಬೆಳೆಗಳು

[ಬದಲಾಯಿಸಿ]

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ ವರ್ಗ

[ಬದಲಾಯಿಸಿ]

ಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ ವರ್ಗ

[ಬದಲಾಯಿಸಿ]

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ ಮತ್ತು ಕೋಗಿಲೆ ಇತ್ಯಾದಿ.

ಆರ್ಥಿಕತೆ

[ಬದಲಾಯಿಸಿ]

ಫಲವತ್ತಾದ ಭೂಮಿ ಹಾಗೂ ನೀರಾವರಿಯಿಂದಾಗಿ ಗ್ರಾಮದ ಆರ್ಥಿಕತೆ ಹಾಗೂ ಹಣಕಾಸಿನ ಸ್ಥಿತಿ ಉತ್ತಮವಾಗಿದೆ.

ಧರ್ಮಗಳು

[ಬದಲಾಯಿಸಿ]

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳು

[ಬದಲಾಯಿಸಿ]

ಗ್ರಾಮದ ಪ್ರಮುಖ ಭಾಷೆ ಕನ್ನಡ. ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯಗಳು

[ಬದಲಾಯಿಸಿ]
  • ಶ್ರೀ ಗೋಲ್ಲಾಳೇಶ್ವರ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಚೌಡೇಶ್ವರಿ ದೇವಸ್ಥಾನ
  • ಬಸವೇಶ್ವರ ದೇವಸ್ಥಾನ
  • ದ್ಯಾಮವ್ವಮ್ಮನ ದೇವಸ್ಥಾನ
  • ಹನುಮಾನ್ ದೇವಸ್ಥಾನ
  • ಗೌರಮ್ಮ ದೇವಸ್ಥಾನ (ಡಂಬಳ)

ಮಸೀದಿ

[ಬದಲಾಯಿಸಿ]

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಹಬ್ಬಗಳು

[ಬದಲಾಯಿಸಿ]

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಓಕುಳಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

[ಬದಲಾಯಿಸಿ]

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಶ್ರೀಗೊಲ್ಲಾಳೇಶ್ವರ ಪದವಿ ಪೂರ್ವ ಕಾಲೇಜು & ಶ್ರೀಸಿದ್ಧಾರಾಮೇಶ್ವರ ಪ್ರಾರ್ಥಮಿಕ ಹಾಗೂ ಪದವಿ ಪೂರ್ವ ಕಾಲೇಜು

ಸಾಕ್ಷರತೆ

[ಬದಲಾಯಿಸಿ]

ಗ್ರಾಮದ ಸಾಕ್ಷರತೆ ಪ್ರಮಾಣವು ಸುಮಾರು 75%. ಅದರಲ್ಲಿ 65% ಪುರುಷರು ಹಾಗೂ 55% ಮಹಿಳೆಯರು ಸಾಕ್ಷರತೆ ಹೊಂದಿದೆ.

ಪೆಟ್ರೋಲ್ ಪಂಪ್

[ಬದಲಾಯಿಸಿ]

ಶ್ರೀಸ್ವಾಮಿ ಪೆಟ್ರೋಲಿಯಮ್ಸ್ ಗೋಲಗೇರಿ & ಪಾಟೀಲ್ ಪೆಟ್ರೋಲಿಯಮ್ಸ್ ಗೋಲಗೇರಿ (ಡಂಬಳ)

ಪ್ರಸಿದ್ಧ ಅಂಗಡಿಗಳು

[ಬದಲಾಯಿಸಿ]

ಶ್ರೀ ಬಿ.ಸಿ.ಮಠ ಕ್ಲಾಥ್ ಮರ್ಚಂಟ್ಸ್, ರಿಟೇಲ್ & ಹೋಲ್​ಸೆಲ್ (45ವರ್ಷಗಳಿಂದ ಇದೆ) ಶ್ರೀ ಯಂಕಂಚಿ ಕಿರಾಣಾ ಮರ್ಚಂಟ್​, ಗೋಲಗೇರಿ & ಹುರಕಡ್ಲಿ ಕಿರಾಣಾ ಮರ್ಚಂಟ್ಸ್ (35ವರ್ಷಗಳಿಂದ ಇದೆ)

ರಾಜಕೀಯ

[ಬದಲಾಯಿಸಿ]

ಗ್ರಾಮವು ಸಿಂದಗಿ ವಿಧಾನ ಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

"https://kn.wikipedia.org/w/index.php?title=ಗೋಲಗೇರಿ&oldid=1161362" ಇಂದ ಪಡೆಯಲ್ಪಟ್ಟಿದೆ