ಗೌರಿ ದೇವಿ
ಗೌರೀ ದೇವಿ | |
---|---|
Born | ೧೪ ಏಪ್ರಿಲ್ ೧೯೨೦ |
Died | ೨೯ ಜೂನ್ ೧೯೮೮ |
Nationality | ಭಾರತೀಯ |
Other names | ಗೌರೀ ಬಾಯಿ |
Occupation | ಜಾನಪದ ಗಾಯಕಿ |
Awards | ರಾಜಸ್ಥಾನ ರತ್ನ, ೨೦೧೩ ಮತ್ತು ಸಂಗೀತ ಅಕಾಡೆಮಿ ೧೯೮೬ |
ಗೌರಿ ದೇವಿ (ಗವಾರಿ ಬಾಯಿ ಎಂದೂ ಕರೆಯುತ್ತಾರೆ) (೧೪ ಏಪ್ರಿಲ್ ೧೯೨೦-೨೯ ಜೂನ್ ೧೯೮೮) ಭಾರತದ ರಾಜಸ್ಥಾನದ ಭಾರತೀಯ ಜಾನಪದ ಗಾಯಕಿಯಾಗಿದ್ದು, ಜಾನಪದ ಸಂಗೀತದ ಗಾಯನ ಶೈಲಿಯಾದ ಮಾಂಡ್‌ಗೆ ಹೆಸರುವಾಸಿಯಾಗಿದ್ದಾರೆ. [೧] [೨] [೩] ಮಾಂಡ್ ಗಾಯನದ ಜೊತೆಗೆ, ಅವರು ಠುಮ್ರಿ, ಭಜನ್ ಮತ್ತು ಗಜಲ್ ಅನ್ನು ಹಾಡುತ್ತಿದ್ದರು. ಆಕೆಯನ್ನು ರಾಜಸ್ಥಾನದ ಮಾರು ಕೋಗಿಲೆ ಎಂದೂ ಕರೆಯಲಾಗುತ್ತಿತ್ತು. [೧] ಕಲೆ ಮತ್ತು ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ರಾಜಸ್ಥಾನ ಸರ್ಕಾರವು ೨೦೧೩ ರಲ್ಲಿ ರಾಜಸ್ಥಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ರಾಜಸ್ಥಾನ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿತು. [೪] [೫]
೨೦ ನೇ ವಯಸ್ಸಿನಲ್ಲಿ, ಅವರು ಜೋಧ್‌ಪುರದ ಮೋಹನ್‌ಲಾಲ್ ಗಮೆಟಿ ಅವರನ್ನು ವಿವಾಹವಾದರು. ಈ ದಂಪತಿಗಳಿಗೆ ಒಬ್ಬಳು ಮಗಳಿದ್ದಳು. ಜೋಧ್‌ಪುರದ ಮಹಾರಾಜರಾದ ಉಮೈದ್ ಸಿಂಗ್ ಅವರಿಂದ ಸಂಗೀತವನ್ನು ಮುಂದುವರಿಸಲು ಅವರು ಪ್ರೋತ್ಸಾಹವನ್ನು ಪಡೆದರು. ಅವರು ಒರಿಸ್ಸಾ, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಬಂಗಾಳ, ಕೇರಳ, ತಮಿಳುನಾಡು ಸೇರಿದಂತೆ ಭಾರತದಾದ್ಯಂತ ಸಂಗೀತವನ್ನು ಪ್ರದರ್ಶಿಸಿದರು. [೧]
೧೯೫೭ ರಲ್ಲಿ, ಗೌರಿ ದೇವಿ ಅವರು ಬಾನುಲಿ ಮತ್ತು ದೂರದರ್ಶನದಲ್ಲಿ ಮಂಡ್ ಗಾಯನ ಕಾರ್ಯಕ್ರಮವನ್ನು ನೀಡಲು ಪ್ರಾರಂಭಿಸಿದ್ದು, ಜನಪ್ರಿಯವಾಯಿತು. ರಾಜಸ್ಥಾನ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಪ್ರತಿ ವರ್ಷ ಆಯೋಜಿಸುವ ಸಮಾರಂಭದಲ್ಲಿ ಅವರು ಮಂಡ್ ಗಾಯನದ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ೧೯೮೩ ರಲ್ಲಿ, ಅವರು ರಷ್ಯಾದ ಮಾಸ್ಕೋದಲ್ಲಿ ಭಾರತವು ಆಯೋಜಿಸಿದ್ದ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ, ಕೇಸರಿಯಾ ಬಾಲಮ್ ಆವೋ ಹಮಾರೆ ದೇಸ್ ಎಂಬ ತಮ್ಮ ವಿಶೇಷ ಪ್ರದರ್ಶನವನ್ನು ನೀಡಿದರು. [೧] ೧೯೮೦ ರಲ್ಲಿ ಹೂ ಈಸ್ ಹೂ ಇನ್ ಏಷ್ಯಾ ಎಂಬ ಪಟ್ಟಿಯಲ್ಲಿ ಇವರ ಹೆಸರು ದಾಖಲಾಗಿದೆ. [೬]
೧೯೮೬ ರಲ್ಲಿ , ಭಾರತ ಸರ್ಕಾರವು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇದು ಜಾನಪದ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಅಭ್ಯಾಸ ಮಾಡುವ ಕಲಾವಿದರಿಗೆ ನೀಡಲಾದ ಅತ್ಯುನ್ನತ ಭಾರತೀಯ ಮನ್ನಣೆಯಾಗಿದೆ. [೭] ಈ ಪ್ರಶಸ್ತಿಯನ್ನು ಅಂದಿನ ಭಾರತದ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ನೀಡಿ ಗೌರವಿಸಿದರು. [೧] ಗೌರಿ ದೇವಿ ೨೯ ಜೂನ್ ೧೯೮೮ ರಲ್ಲಿ ನಿಧನರಾದರು [೮]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ Sharma, Nandkishor (29 June 2020). "हजारों दुख सहे लेकिन मांड गायकी से बनाई देश-दुनिया में पहचान". Patrika.com.
- ↑ Rājasthāna vārshikī. 1997. p. 9.
- ↑ Rāmasiṃha Solaṅkī; Sukhvir Singh Gahlot (1997). Jodhapura mahilā samāja [लोक संगीत गायिका गवरी देवी]. Jodhapura Mahilā Samāja. pp. 16, 17, 18.
- ↑ "Rajsthan Ratan award for 2013". Ibn live. 16 August 2013. Archived from the original on 24 September 2013. Retrieved 16 August 2013.
- ↑ "Gavri Devi gets Rajasthan Ratna Award 2013". Rajasthan gk.net. 2 September 2013.
- ↑ Nāṭāṇī, Kamaleśa Kumāra (1999). Rājasthāna jñāna kosha. Jain Prakash Mandir Publication. p. 20.
- ↑ "Sangeet Natak Akademi Puraskar (Akademi Awards)". Sangeetnatak.org. 27 July 2011. Archived from the original on 2011-10-02.
- ↑ "मांड गायिका गवरी नहीं रहीं" (in Hindi). Dainik Jagran. 30 June 1988.
{{cite news}}
: CS1 maint: unrecognized language (link)