ವಿಷಯಕ್ಕೆ ಹೋಗು

ಚಕ್ಕುಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಕ್ಕುಲಿ
ಮೂಲ
ಪರ್ಯಾಯ ಹೆಸರು(ಗಳು)ಚಕ್ಲಿ, ಮುರುಕ್ಕು
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಶ್ರೀಲಂಕಾ
ವಿವರಗಳು
ಮುಖ್ಯ ಘಟಕಾಂಶ(ಗಳು)ಅಕ್ಕಿಹಿಟ್ಟು, ಕಡಲೆಹಿಟ್ಟು, ಉದ್ದಿನಹಿಟ್ಟು

ಚಕ್ಕುಲಿ ಅಥವಾ ಚಕ್ಲಿ (ತಮಿಳು: முறுக்கு/Murukku, ತೆಲುಗು:మురుకులు/Murkoo, ಮರಾಠಿ: चकली/Chakali, ಗುಜರಾತಿ:ચકરી/Chakri) ಭಾರತ ಮತ್ತು ಶ್ರೀಲಂಕಾದ ಒಂದು ರುಚಿಯಾದ ತಿನಿಸು. ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇರುವ ಫಿಜಿ ಮತ್ತು ಮಲೇಶಿಯ ದೇಶಗಳಲ್ಲೂ ಕೂಡ ಇದು ಪರಿಚಿತ. ಚಕ್ಕುಲಿ ಸಾಮಾನ್ಯವಾಗಿ ಸುರುಳಿಯಾಕಾರವಾಗಿದ್ದು ಒರಟಾದ ಮೇಲ್ಮೈ ಹೊಂದಿರುತ್ತದೆ.[]

ಚಕ್ಕುಲಿ ದಕ್ಷಿಣ ಮತ್ತು ಪಶ್ಚಿಮ ಭಾರತ ಮೂಲದ ತಿನಿಸಾಗಿದೆ.[] ಇದರ ರುಚಿ ಮತ್ತು ಸುಲಭ ತಯಾರಿಕೆಯಿಂದಾಗಿ ಈಗ ಇದು ಎಲ್ಲಾ ಕಡೆಗಳಲ್ಲೂ ತಯಾರಾಗುವ ತಿಂಡಿಯಾಗಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಇದು ಹೆಚ್ಚು ಪ್ರಚಲಿತವಾಗಿದೆ. ಇದು ಫಿಜಿ ಮತ್ತು ಉತ್ತರ ಅಮೆರಿಕಾದಲ್ಲಿರುವ ಭಾರತೀಯರಲ್ಲೂ ಜನಪ್ರಿಯವಾಗಿದೆ. ಚಕ್ಕುಲಿಯು ದೀಪಾವಳಿ ಹಬ್ಬದ ಒಂದು ಸಾಂಪ್ರದಾಯಿಕ ತಿನಿಸಾಗಿ ಬಳಸಲ್ಪಡುತ್ತದೆ. ಇತ್ತೀಚೆಗೆ ಚಕ್ಕುಲಿಯು ಉತ್ತರ ಅಮೆರಿಕ ಮತ್ತು ಯುನೈಟೆಡ್ ಕಿಂಗ್‌ಡಂ ಮಾರುಕಟ್ಟೆಯಲ್ಲೂ ಕೂಡ ಸಿಗುತ್ತಿದೆ.

ಪದಾರ್ಥಗಳು

[ಬದಲಾಯಿಸಿ]

ಸಾಮಾನ್ಯವಾಗಿ ಚಕ್ಕುಲಿಯು ಅಕ್ಕಿಹಿಟ್ಟು, ಕಡಲೆಹಿಟ್ಟು, ಉದ್ದಿನಹಿಟ್ಟುಗಳ ಮಿಶ್ರಣದಿಂದ ತಯಾರಾಗುತ್ತದೆ. ಜೊತೆಗೆ ಉಪ್ಪು ಮತ್ತಿತರ ಸಾಂಬಾರ ಪದಾರ್ಥಗಳಾದ ಮೆಣಸು, ಇಂಗು, ಅಜ್ವಾನ ಅಥವಾ ಜೀರಿಗೆಗಳನ್ನೂ ಒಳಗೊಂಡಿರುತ್ತದೆ.[]

ತಯಾರಿಕೆ

[ಬದಲಾಯಿಸಿ]

ಸ್ವಲ್ಪ ನೀರು ಮತ್ತು ಪದಾರ್ಥ ಮಿಶ್ರಣವನ್ನು ಹಿಟ್ಟನ್ನಾಗಿ ಕಲೆಸಿ ಅದನ್ನು ವೃತ್ತ ಮತ್ತು ಇನ್ನಿತರ ಆಕಾರಗಳಲ್ಲಿ ಸುತ್ತಲಾಗುತ್ತದೆ. ಅನಂತರ ಅದನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಚಕ್ಕುಲಿಯನ್ನು ಚಪ್ಪಟೆಯಾಗಿ ರಿಬ್ಬನ್ನಿನಂತೆಯೂ ಮಾಡಬಹುದಾಗಿದೆ ಮತ್ತು ಕೈಯಿಂದಲೂ ಸುತ್ತಬಹುದಾಗಿದೆ. (ಕೈಚಕ್ಕುಲಿ) ಕೈಚಕ್ಕುಲಿಯನ್ನು ಹಿಟ್ಟನ್ನು ಕೈಯಿಂದಲೇ ಒಂದು ಎಳೆಯನ್ನಾಗಿ ತೆಗೆದುಕೊಳ್ಳುತ್ತಾ ಅದನ್ನು ತಿರುಚುತ್ತಾ ಮತ್ತು ಹಾಗೆಯೇ ಅದನ್ನು ಬಳೆಯಾಕಾರದಲ್ಲಿ ಸುತ್ತುತ್ತಾ ತಯಾರಿಸಲಾಗುತ್ತದೆ. ಇದಕ್ಕೆ ಕಷ್ಟದ ಕೆಲಸವಾಗಿದ್ದು ಅಪಾರ ತಾಳ್ಮೆ, ಅಭ್ಯಾಸ ಬೇಕಾಗುತ್ತದೆ.

ಸಿದ್ದಗೊಳ್ಳುತ್ತಿರುವ ಚಕ್ಕುಲಿ
ಚಕ್ಲಿ ತಯಾರಿಕೆ ವಿಡಿಯೋ

ಉಲ್ಲೇಖಗಳು

[ಬದಲಾಯಿಸಿ]
  1. J. Smartt; Emmanuel Nwokolo (30 June 1996). Food and feed from legumes and oilseeds. Chapman & Hall. ISBN 978-0-412-45930-6.
  2. ಮಳೆಗಾಲದ ಈ ಸಂಜೆ ಬಿಸಿ ಬಿಸಿ ಚಕ್ಕುಲಿ ಸವಿಯಿರಿ, ಈನಾಡು ಇಂಡಿಯ, ೧೫ಜುಲೈ2015
  3. Edmund W. Lusas; Lloyd W. Rooney (5 June 2001). Snack Foods Processing. CRC Press. pp. 488–. ISBN 978-1-4200-1254-5.


ಹೊರ ಕೊಂಡಿಗಳು

[ಬದಲಾಯಿಸಿ]

ಚಿತ್ರಗಳು

[ಬದಲಾಯಿಸಿ]
"https://kn.wikipedia.org/w/index.php?title=ಚಕ್ಕುಲಿ&oldid=1212498" ಇಂದ ಪಡೆಯಲ್ಪಟ್ಟಿದೆ