ವಿಷಯಕ್ಕೆ ಹೋಗು

ಚಪಾತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಪಾತಿಯು ಭಾರತೀಯ ಉಪಖಂಡದ ಒಂದು ಬಗೆಯ ಉಬ್ಬಿರದ ಚಪ್ಪಟೆ ರೊಟ್ಟಿ . ಇದರ ರೂಪಾಂತರಗಳು ತುರ್ಕ್‌ಮೇನಿಸ್ತಾನ್, ಯೂಗ್ಯಾಂಡಾ, ಕೀನ್ಯಾ ಮತ್ತು ಟಾಂಜಾನೀಯಾವನ್ನು ಒಳಗೊಂಡಂತೆ ಪೂರ್ವ ಆಫ್ರಿಕಾದ ರಾಷ್ಟ್ರಗಳು, ಮತ್ತು ಇತರ ರಾಷ್ಟ್ರಗಳ ಪೈಕಿ ಘಾನಾವೂ ಸೇರಿದಂತೆ ಪಶ್ಚಿಮ ಆಫ್ರಿಕಾದಲ್ಲಿ ಕಾಣುತ್ತವೆ. ಮುಘಲ್ ಸಾಮ್ರಾಟ ಅಕ್ಬರ್‌ನ ವಜೀರ್ನಾಗಿದ್ದ ಅಬುಲ್-ಫಜಲ್ ಇಬ್ನ್ ಮುಬಾರಕ್ ನಿಂದ ಬರೆಯಲ್ಪಟ್ಟ ಒಂದು ೧೬ನೆಯ ಶತಮಾನದ ದಸ್ತಾವೇಜಾದ ಐನ್-ಇ-ಅಕ್ಬರಿಯಲ್ಲಿ ಚಪಾತಿಯ ಬಗ್ಗೆ ಟಿಪ್ಪಣಿ ಮಾಡಲಾಗಿದೆ.[] ಇದು ಭಾರತದ ಉಪಖಂಡದಿಂದ ಹುಟ್ಟಿದ ಹುಳಿಯಿಲ್ಲದ ಫ್ಲಾಟ್‌ಬ್ರೆಡ್ ಎಂದೂ ಕರೆಯಲಾಗುತ್ತದೆ ಮತ್ತು ಇದನ್ನು ಭಾರತ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಪೂರ್ವ ಆಫ್ರಿಕಾ ಮತ್ತು ಕೆರಿಬಿಯನ್ ನಲ್ಲೂ ಚಪಾತಿಯು ಪ್ರಧಾನ ಖಾದ್ಯವಾಗಿದೆ . ಚಪಾತಿಗಳನ್ನು ಸಂಪೂರ್ಣ ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ,[][] ಇದನ್ನು ನೀರಿನೊಂದಿಗೆ ಹಿಟ್ಟಿನಲ್ಲಿ ಬೆರೆಸಿ , ಖಾದ್ಯ ಎಣ್ಣೆ ಮತ್ತು ಉಪ್ಪನ್ನು ಸೇರಿಸಿ ಮಿಶ್ರಣವನ್ನು ಪಾತ್ರೆಯಲ್ಲಿ ತಯಾರಿಸಿ ತವಾ (ಫ್ಲಾಟ್ ಬಾಣಲೆ) ಮೇಲೆ ಬೇಯಿಸಲಾಗುತ್ತದೆ.

ಚಪಾತಿಯು ಭಾರತೀಯ ಉಪಖಂಡದಲ್ಲಿ ಮತ್ತು ವಿಶ್ವದಾದ್ಯಂತ ಭಾರತೀಯ ಉಪಖಂಡದ ವಲಸಿಗರಲ್ಲಿ ಸಾಮಾನ್ಯ ಆಹಾರವಾಗಿದೆ. ಭಾರತೀಯ ಉಪಖಂಡದಿಂದ ವಲಸೆ ಹೋದವರು, ವಿಶೇಷವಾಗಿ ಮಧ್ಯ ಏಷ್ಯಾ , ಪೂರ್ವ ಆಫ್ರಿಕಾ ಮತ್ತು ಕೆರಿಬಿಯನ್ ದ್ವೀಪಗಳಿಗೆ ಭಾರತೀಯ ವ್ಯಾಪಾರಿಗಳಿಂದ ಹಾಗೂ ವಿಶ್ವದ ಇತರ ಭಾಗಗಳಿಗೆ ಚಪಾತಿಯನ್ನು ಪರಿಚಯಿಸಲಾಯಿತು.[][]

ಇತಿಹಾಸ

[ಬದಲಾಯಿಸಿ]

ಚಪಾತಿ ಎಂಬ ಪದದ ಅರ್ಥ "ಸ್ಲ್ಯಾಪ್" ಮತ್ತು "ಫ್ಲಾಟ್", ಇದು ಒದ್ದೆಯಾದ ಅಂಗೈ ಕೈಗಳ ನಡುವೆ ತೆಳುವಾದ ಹಿಟ್ಟಿನ ಉಂಡೆಗಳನ್ನು ತಯಾರಿಸುವ ಸಾಂಪ್ರದಾಯಿಕ ವಿಧಾನವಾಗಿದೆ. ಭಾರತೀಯ ಉಪಖಂಡದಲ್ಲಿ ಪ್ರಧಾನ ಆಹಾರವಾಗಿರುವ ಗೋಧಿಯ ಸಾಮಾನ್ಯ ರೂಪಗಳಲ್ಲಿ ಚಪಾತಿಯೂ ಒಂದು. ಮೊಹೆಂಜೊ-ದಾರೊದಲ್ಲಿನ ಉತ್ಖನ್ನದಲ್ಲಿ ಪತ್ತೆಯಾದ ಕಾರ್ಬೊನೈಸ್ಡ್ ಗೋಧಿ ಧಾನ್ಯಗಳು ಇಂದು ಭಾರತದಲ್ಲಿ ಕಂಡುಬರುವ ಸ್ಥಳೀಯ ಜಾತಿಯ ಗೋಧಿಗೆ ಹೋಲುತ್ತವೆ. ಸಿಂಧೂ ಕಣಿವೆಯಲ್ಲಿನ ಪೂರ್ವಜರು ಹೆಚ್ಚಾಗಿ ಗೋಧಿ ಬೆಳೆ ಬೆಳೆಯುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ .[]

ರೋಟಿ ಜೊತೆಗೆ ಚಪಾತಿಗಳನ್ನು ವಿಶ್ವದ ಇತರ ಭಾಗಗಳಿಗೆ ಭಾರತೀಯ ಉಪಖಂಡದ ವಲಸಿಗರು ಪರಿಚಯಿಸಿದರು . ವಿಶೇಷವಾಗಿ ದಕ್ಷಿಣ ಏಷ್ಯಾ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ನೆಲೆಸಿದ ಭಾರತೀಯ ವ್ಯಾಪಾರಿಗಳು ಪರಿಚಯಿಸಿದರು .

ಚಪಾತಿಗೆ ಮಾಲ್ಡೀವ್ಸ್ ನಲ್ಲಿರುವ ಇತರ ಹೆಸರುಗಳು

[ಬದಲಾಯಿಸಿ]

ಚಪಾತಿಗೆ ರೊಟ್ಟಿ, ರೊಟ್ಲಿ, ಸಫತಿ, ಶಬಾತಿ,[] ಫುಲ್ಕಾ ಮತ್ತು ರೋಶಿ[] ಎಂದೂ ಮಾಲ್ಡೀವ್ಸ್ ನಲ್ಲಿ ಕರೆಯುತ್ತಾರೆ .

ಬೇಕಾಗುವ ಸಾಮಾಗ್ರಿಗಳು

[ಬದಲಾಯಿಸಿ]

ಗೋಧಿ ಹಿಟ್ಟು ೫ ಕಪ್, ೧ ಚಮಚ,ತೆಂಗಿನ ಎಣ್ಣೆ ೩ ಚಮಚ,ತುಪ್ಪ ೨ ಚಮಚ, ಸ್ವಲ್ಪ ಬಿಸಿಮಾಡಿದ ನೀರು ೧ ಕಪ್, ರುಚಿಗೆ ತಕ್ಕಷ್ಟು ಉಪ್ಪು .[]

ತಯಾರಿಸುವ ವಿಧಾನ

[ಬದಲಾಯಿಸಿ]

ಒಂದು ಅಗಲವಾದ ಪಾತ್ರೆಗೆ ನೀರು, ತುಪ್ಪ, ಹಾಕಿ ಸರಿಯಾಗಿ ಕಲಸಿಕೊಳ್ಳಬೇಕು, ನಂತರ ಅದಕ್ಕೆ ಗೋಧಿ ಹಿಟ್ಟನ್ನು ಹಾಕಿ ಸರಿಯಾಗಿ ಕಲಸಿ ಕೊನೆಗೆ ಅದಕ್ಕೆ ಎಣ್ಣೆ ಹಾಕಿ ಕಲಸಿಟ್ಟು, ಅರ್ಧ ಗಂಟೆಯ ನಂತರ ಉಂಡೆಗಳನ್ನು ಮಾಡಿಟ್ಟು ಅದನ್ನು ಗೋಧಿ ಹಿಟ್ಟಿನಲ್ಲಿ ಅದ್ದಿ ಲಟ್ಟಿಸಬೇಕು . ನಂತರ ಒಲೆಯಲ್ಲಿ ತವ ಬಿಸಿ ಮಾಡಿ ಅದಕ್ಕೆ ಚಪಾತಿಯನ್ನು ಹಾಕಿ ಕಾಯಿಸಿ ಅದು ಸರಿಯಾಗಿ ಉಬ್ಬಿದ ನಂತರ ತುಪ್ಪ ಸವರಿ ಬಿಸಿ ಬಿಸಿ ಚಪಾತಿಯನ್ನು ಸವಿಯಬಹುದು . ಭಾರತೀಯ ಉಪಖಂಡದ ಕೆಲವು ಪ್ರದೇಶಗಳಲ್ಲಿ ಚಪಾತಿಗಳನ್ನು ಬಾಣಲೆಯ ಮೇಲೆ ಭಾಗಶಃ ಬೇಯಿಸಲಾಗುತ್ತದೆ , ತದನಂತರ ನೇರವಾಗಿ ಜ್ವಾಲೆಯ ಮೇಲೆ ಬೇಯಿಸಲಾಗುತ್ತದೆ , ಇದು ಚಪಾತಿ ಉಬ್ಬಲು ಕಾರಣವಾಗುತ್ತದೆ. ಇಂತಹ ಉಬ್ಬಿದ ಚಪಾತಿಯನ್ನು ಉತ್ತರ ಭಾರತ ಮತ್ತು ಪೂರ್ವ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಫುಲ್ಕಾ ಎಂದೂ ಕರೆಯಲಾಗುತ್ತದೆ .[೧೦]

ಉಲ್ಲೇಖಗಳು

[ಬದಲಾಯಿಸಿ]
  1. ಚಪಾತಿ ಮಾಡುವ ವಿಧಾನ
  2. https://kitchenkemistry.wordpress.com/2012/03/05/chapathi-whole-wheat-flat-bread/
  3. https://www.cooksinfo.com/chapati-flour
  4. https://www.thebetterindia.com/59404/chapati-movement-india-revolt/
  5. https://www.infodriveindia.com/india-export-data/roti-chapati-export/fc-united_arab_emirates/fp-dubai-report.aspx
  6. https://www.desiblitz.com/content/history-of-chapati
  7. https://maldivescook.com/recipe/roshi/
  8. https://kitchen.nine.com.au/recipes/huni-roshi-maldivian-chapati/a431478b-b5bc-4055-96e8-35c813fff731
  9. "Soft Chapati, How to make easy chapati recipe". Kannamma Cooks. 15 July 2016. Retrieved 4 January 2020.
  10. "ಆರ್ಕೈವ್ ನಕಲು". Archived from the original on 2020-09-28. Retrieved 2020-01-04.
"https://kn.wikipedia.org/w/index.php?title=ಚಪಾತಿ&oldid=1129115" ಇಂದ ಪಡೆಯಲ್ಪಟ್ಟಿದೆ