ಚರ್ಚೆಪುಟ:ಅಪಘಾತಗಳು
ಗೋಚರ
ಕನ್ನಡ ವಿಕಿಪೀಡಿಯದಲ್ಲಿ ಇಂತಹ ಲೇಖನಗಳು ಬೇಕಾ? ಇದು ಪತ್ರಿಕೆಯೇ? ಅಥವಾ ವಿಶ್ವಕೋಶವೇ? ಇದು ಒಂದು ವಿಶ್ವಕೋಶದ ಲೇಖನದ ಮಾದರಿಯಲ್ಲಿ ಇಲ್ಲ. --ಗೋಪಾಲಕೃಷ್ಣ (ಚರ್ಚೆ) ೦೭:೩೧, ೨೨ ಆಗಸ್ಟ್ ೨೦೧೭ (UTC) *ಇಂಗ್ಲಿಷ್ ನಲ್ಲಿ ಒಂದೊಂದಕ್ಕೂ ಒಂದೊಂದು ಪುಟ ಮಾಡಿದ್ದಾರೆ. ಇದು ವಿಶ್ವ ಕೋಸದ ಜೊತೆ ಜೊತೆ ಮಾಹಿತಿಯ ಆಗರವೂ ಆಗಿದೆ. ಇದ್ದರೆ ಏನು ತೊದರೆ?Bschandrasgr (ಚರ್ಚೆ) ೦೭:೪೭, ೨೨ ಆಗಸ್ಟ್ ೨೦೧೭ (UTC)
- ಇದು ಪತ್ರಿಕಾ ವರದಿಯ ರೀತಿಯಲ್ಲಿದೆ. ಪತ್ರಿಕಾ ವರದಿ ವಿಕಿಪೀಡಿಯದಲ್ಲಿ ಬೇಡ. ಮಾಹಿತಿಯ ಆಗರ ಹೌದು. ಆದರೆ ಇಲ್ಲಿ ಕೊಡುವ ಮಾಹಿತಿಯನ್ನು ಬರೆಯಲು ಕೆಲವೊಂದು ನೀತಿ ನಿಯಮಗಳು ಇದೆ. --ಗೋಪಾಲಕೃಷ್ಣ (ಚರ್ಚೆ) ೦೮:೦೧, ೨೨ ಆಗಸ್ಟ್ ೨೦೧೭ (UTC)
ಕಾಲದ ಸಮಸ್ಯೆ
[ಬದಲಾಯಿಸಿ]- ನೀವು ಸರಿಪಡಿಸಿ ನೋಡೋಣ; ಮಾಹಿತಿಗಳೆಲ್ಲವೂ ವರದಿಗಳೇ! ಆದರೆ ವರ್ತಮಾನ ಕಾಲದಲ್ಲಿ ಇರದಿದ್ದರೆ ಒಳ್ಳೆಯದು; ಪ್ರಸ್ತುತ ವಿಷಗಳನ್ನು ಭಾತಕಾಲದಲ್ಲಿ ಬರೆಯುವುದು ಹೇಗೆ ತಿಳಿಸುವಿರಾ? ಅಸ್ಸಾಂ ಭೀಕರ ಪ್ರವಾಹದಲ್ಲಿ ಸುಮಾರು ೧ ಕೋಟಿ ೨೫ ಲಕ್ಷ ಜನ ನಿರಾಶ್ರಿತರಾಗಿದ್ದಾರೆ ಗಂಜಿಕೇಂದ್ರಗಲನ್ನು ತೆರೆದಿದ್ದಾರೆ. ಇದು ಸಣ್ಣ ಪ್ರಕೃತಿ ವಿಕೋಪವಲ್ಲ.; ಹಾಗೆಯೇ ರೈಲ್ವೇ ಅಪಘಾತ, ಇಂಗ್ಲಿಷನಲ್ಲಿ ಒಂದು ಪುಟವನ್ನೇ ಮಾಡಿದ್ದಾರೆ. ಅದನ್ನು ಭೂತಕಾಲದಲ್ಲಿ ಬರೆಯಿರಿ. ಇಂಗ್ಲಿಷ್ ಪುಟವನ್ನು ನಿಮಗಾಗಿ ಕೊಟ್ಟಿದ್ದೇನೆ. ನೋಡಿ. ಇಂ.ವಿಕಿಯಲ್ಲಿ ಪ್ರತಿ ಅಂಕೆಗೂ ಒಂದು ಪುಟ ಇದೆ ಗೊತ್ತಿದೆಯೇ?Bschandrasgr (ಚರ್ಚೆ) ೦೮:೪೪, ೨೨ ಆಗಸ್ಟ್ ೨೦೧೭ (UTC)
- ಎಲ್ಲದಕ್ಕೂ ನೀವು ಸರಿಪಡಿಸಿ ಎಂದು ಹೇಳುತ್ತೀರಿ. ಅದರ ಬದಲು ಬರೆಯುವಾಗಲೇ ಸರಿ ಬರೆದರೆ ಏನು ತೊಂದರೆ? ಇಂತಹ ಪತ್ರಿಕಾ ವರದಿ ವಿಕಿಪೀಡಿಯದಲ್ಲಿ ಒಳ್ಳೆಯದಲ್ಲ. ಇದನ್ನು ಅಳಿಸಬಹುದು. --ಗೋಪಾಲಕೃಷ್ಣ (ಚರ್ಚೆ) ೦೯:೨೨, ೨೨ ಆಗಸ್ಟ್ ೨೦೧೭ (UTC)