ವಿಷಯಕ್ಕೆ ಹೋಗು

ಚಾಂದನಿ ಚಬೂತರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂದ್ರನ ಕಟ್ಟೆ ಚಂದ್ರನ ಬೆಳದಿಂಗಳನ್ನು ವೀಕ್ಷಿಸುವ ಸಲುವಾಗಿ ನಿಮಿ‍ಸಿರುವ ಕಟ್ಟೆ.ಇದು ಬೀದರ್ ಕೋಟೆಯ ಹೊರ ಗೋಡೆಗೆ ಹತ್ತಿದಂತೆ ಇರವು ಸ್ಮಾರಕ. ಇದನ್ನು ಮಲ್ಲಿಕ ಮಾರ್ಜನ್ ನ ಆಡಳಿತಗಾರನಾದ ಹಮೀದುದ್ದೀನ್ ಖಾನ್ ನಿರ್ಮಿಸಿದನು. ಇದನ್ನು ಕೋಟೆಯ ಮಹಾದ್ವಾರದ ಪಕ್ಕದ ಗೋಡೆಯ ಮೇಲಿನಿಂದ ಮಾಂಜರಾ ನದಿ ಯ ಕಣಿವೆಯ ಮೇಲೆ ಕಂಡ ಬರುವ ಚಂದ್ರೋದಯ ಹಾಗೂ ಹುಣ್ಣಿಮೆಯ ಆನಂದವನ್ನು ಅನುಭವಿಸಲು ಬಳಸಲಾಗುತ್ತಿತ್ತು. ಕಾಲ ೧೬೫೬ ರಲ್ಲಿ ದಖ್ಖನ್ನಿನ ರಾಜಕುಮಾರನಾದ ಔರಂಗಜೇಬ ನ ದಾಳಿಗೆ ಬೀದರ್ ಸಿಲುಕಿದಾಗ ಈ ಕಟ್ಟೆ ಅಸ್ತಿತ್ವದಲ್ಲಿ ಇತ್ತು ಎನ್ನುವುದಕ್ಕೆ ದಾಖಲೆಗಳಿವೆ. ಹೈದರಾಬಾದ್ ಪುರಾತತ್ವ ಇಲಾಖೆಯ ಮುಖ್ಯಸ್ಥರಾಗಿದ್ದ ಗುಲಾಮ ಯಾಝದಾನಿ ಅವರು ಬರೆದ ಬೀದರ್ ಇಟ್ಸ ಹಿಸ್ಟರಿ ಆಂಡ್ ಮಾನ್ಯುಮೆಂಟ್ಸ ಎನ್ನುವ ಪುಸ್ತಕದಲ್ಲಿ ಇದನ್ನು ನಿರ್ಮಿಸಿದ ಆಡಳಿತಗಾರನ ಬಗ್ಗೆ ಉಲ್ಲೇಖವಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "an-occasion-to-recall-aurangazebs-association-with-this-historic-city". ಹಿಂದು ಪತ್ರಿಕೆ. Retrieved 12 ಏಪ್ರಿಲ್ 2015.