ಚಿಕಿತ್ಸೆಯ ಸರದಿ ನಿರ್ಧಾರ
ಚಿಕಿತ್ಸೆಯ ಸರದಿ ನಿರ್ಧಾರ (pronounced /ˈtriːɑːʒ/) ಎಂಬುದು ರೋಗಿಗಳ ರೋಗಸ್ಥಿತಿಯ ತೀವ್ರತೆಯನ್ನು ಆಧರಿಸಿ ಅವರಿಗೆ ಆದ್ಯತೆ ನೀಡುವ ಒಂದು ಪ್ರಕ್ರಿಯೆಯಾಗಿದೆ. ತತ್‌ಕ್ಷಣವೇ ಉಪಚರಿಸಲ್ಪಡಬೇಕಿರುವ ಎಲ್ಲಾ ರೋಗಿಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲಗಳು ಸಾಕಷ್ಟಿಲ್ಲದ ಸಂದರ್ಭದಲ್ಲಿ ಇದು ರೋಗಿಯ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ನಿಗದಿ ಮಾಡುತ್ತದೆ. ಟ್ರೈಯೇಜ್ ಎಂಬ ಶಬ್ದವು ಟ್ರೈಯರ್ ಎಂಬ ಫ್ರೆಂಚ್ ಕ್ರಿಯಾಪದದಿಂದ ಬಂದಿದ್ದು, ಇದು ಪ್ರತ್ಯೇಕಿಸು, ವಿಂಗಡಿಸು, ಬೇರ್ಪಡಿಸು ಅಥವಾ ಆರಿಸು ಎಂಬ ಅರ್ಥವನ್ನು ನೀಡುತ್ತದೆ.[೧] ಚಿಕಿತ್ಸೆಯ ಸರದಿ ನಿರ್ಧಾರದಲ್ಲಿ ಎರಡು ಬಗೆಗಳಿವೆ: ಸರಳ ಬಗೆ ಹಾಗೂ ಮುಂದುವರಿದ ಬಗೆ.[೨] ಒಂದು ಸಾಮೂಹಿಕ-ಅಪಘಾತದಂಥ ಸನ್ನಿವೇಶದಲ್ಲಿ ರೋಗಿಯ ವರ್ಗೀಕರಣದ ಸಮತೋಲನ ಮಾಡುವಿಕೆ ಅಥವಾ ರೋಗಿಯ ವಿಶೇಷ ಅಗತ್ಯಗಳನ್ನು ಅವಲಂಬಿಸಿ, ಇದರ ಫಲಿತಾಂಶವು ತುರ್ತು ಚಿಕಿತ್ಸೆಯ ಅನುಕ್ರಮ ಹಾಗೂ ಆದ್ಯತೆ, ತುರ್ತು ಸಾಗಾಣಿಕೆಯ ಅನುಕ್ರಮ ಹಾಗೂ ಆದ್ಯತೆ, ಅಥವಾ ರೋಗಿಗೆ ಸಂಬಂಧಿಸಿದ ಸಾಗಾಣಿಕೆಯ ಗಮ್ಯಸ್ಥಾನ ಮೊದಲಾದವನ್ನು ನಿರ್ಣಯಿಸುವಲ್ಲಿ ಕಾರಣವಾಗಬಹುದು.
ಸೂಚನೆ: ಚಿಕಿತ್ಸೆಯ ಸರದಿ ನಿರ್ಧಾರ ಎಂಬುದು ಅನೇಕ ಅರ್ಥಗಳನ್ನು ಹೊಂದಿದೆ: ತುರ್ತುಚಿಕಿತ್ಸಾ ವಿಭಾಗಕ್ಕೆ ಬರುತ್ತಿರುವ ರೋಗಿಗಳಿಗೆ ಸಂಬಂಧಿಸಿದಂತೆ ಒಂದು ಆದ್ಯತೆಯ ಆಧಾರದ ಮೇಲೂ ಸಹ ಈ ಶಬ್ದವು ಸೂಕ್ತವಾಗಿ ಅನ್ವಯವಾಗಬಹುದು, ಅಥವಾ ಉಳಿದವುಗಳ ಪೈಕಿ, ಆರೈಕೆ-ಪ್ರೇರಿತ ದೂರವಾಣಿ ವೈದ್ಯಕೀಯ ಸಲಹಾ ವ್ಯವಸ್ಥೆಗಳಿಗೂ[೩] ಸಹ ಇದು ಅನ್ವಯವಾಗಬಹುದು. ಆಸ್ಪತ್ರೆ-ಪೂರ್ವಭಾವಿ ಸಂದರ್ಭ, ವಿಕೋಪಗಳು, ಮತ್ತು ತುರ್ತು ಕೋಣೆಯ ಚಿಕಿತ್ಸೆ ಮೊದಲಾದವೂ ಸೇರಿದಂತೆ, ವೈದ್ಯಕೀಯ ತುರ್ತುಸ್ಥಿತಿಗಳಲ್ಲಿ ಚಿಕಿತ್ಸೆಯ ಸರದಿ ನಿರ್ಧಾರವು ಕಂಡುಬರುವುದರಿಂದ, ಅದರ ಪರಿಕಲ್ಪನೆಯೊಂದಿಗೆ ಈ ಲೇಖನವು ವಿಷಯವನ್ನು ಪ್ರತಿಪಾದಿಸುತ್ತದೆ.
ಇತಿಹಾಸ ಮತ್ತು ಮೂಲ
[ಬದಲಾಯಿಸಿ]ಚಿಕಿತ್ಸೆಯ ಸರದಿ ನಿರ್ಧಾರವು Iನೇ ಜಾಗತಿಕ ಸಮರದ ವೇಳೆಯಲ್ಲಿ ಹುಟ್ಟಿಕೊಂಡಿತು ಮತ್ತು ಈ ಅವಧಿಯಲ್ಲಿ ಮೊದಲಬಾರಿಗೆ ಸೂತ್ರೀಕರಿಸಲ್ಪಟ್ಟಿತು. ಯುದ್ಧಭೂಮಿಯಲ್ಲಿ ಗಾಯಗೊಂಡವರಿಗೆ ಯುದ್ಧರಂಗದ ಹಿಂಭಾಗದಲ್ಲಿ ನೆಲೆಗೊಂಡಿದ್ದ ಸಹಾಯಕೇಂದ್ರಗಳಲ್ಲಿ ಉಪಚಾರ ನೀಡಲು ಫ್ರೆಂಚ್ ವೈದ್ಯರು ಮುಂದಾಗುವ ಮೂಲಕ ಇದು ಆರಂಭಗೊಂಡಿತು. ನೆಪೋಲಿಯನ್‌ನ ಯುದ್ಧಗಳ ಅವಧಿಯಲ್ಲಿ ಡೊಮಿನಿಕ್ ಜೀನ್ ಲ್ಯಾರಿ ಎಂಬಾತ ಕೈಗೊಂಡ ಕೆಲಸಕ್ಕೆ ಹೆಚ್ಚಿನ ಮನ್ನಣೆ ದೊರೆತಿದೆ. ಐತಿಹಾಸಿಕವಾಗಿ ಹೇಳುವುದಾದರೆ, ಚಿಕಿತ್ಸೆಯ ಸರದಿ ನಿರ್ಧಾರದ ರೋಗಿಗಳಿಗೆ ಸಂಬಂಧಿಸಿದಂತೆ ಒಂದು ವ್ಯಾಪಕ ಶ್ರೇಣಿಯ ಪ್ರಯತ್ನಗಳು ನಡೆದವು, ಮತ್ತು ವಿಭಿನ್ನ ದೇಶಗಳಲ್ಲಿ ವೈವಿಧ್ಯಮಯ ವಿಧಾನಗಳು ಹಾಗೂ ರೋಗಿಗೆ ನಮೂದುಪಟ್ಟಿ ಲಗತ್ತಿಸುವ ವ್ಯವಸ್ಥೆಗಳು ಬಳಸಲ್ಪಟ್ಟವು.
ಚಿಕಿತ್ಸೆಯ ಸರದಿ ನಿರ್ಧಾರವು ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆಯಾದರೂ ಸಹ, ಈ ಪರಿಪಾಠಕ್ಕೆ ಒಂದು ನಿರ್ದಿಷ್ಟ ನಾಮಕರಣವನ್ನು ಮಾಡಲಾಗಿರಲಿಲ್ಲ. ಅವು ಓರ್ವ ವೈದ್ಯ ಸಹಾಯಕರಿಂದಾಗಲೀ ಅಥವಾ ಬೇರೆ ಇನ್ನಾರಿಂದಾಗಲೀ ನಿರ್ವಹಿಸಲ್ಪಟ್ಟಿರಲಿ, ತೀರಾ ಇತ್ತೀಚಿನವರೆಗೆ ಚಿಕಿತ್ಸೆಯ ಸರದಿ ನಿರ್ಧಾರದ ಫಲಿತಾಂಶಗಳು, ಯಾವುದೇ ನಿಜವಾದ ಅಥವಾ ಅರ್ಥಪೂರ್ಣ ನಿರ್ಧಾರಣೆಗೆ ಪ್ರತಿಯಾಗಿ, ವಾಡಿಕೆಯಂತೆ 'ಅತ್ಯುತ್ತಮ ಊಹೆಯ' ಒಂದು ವಿಷಯವೇ ಆಗಿದ್ದವು.[೪] ವಾಸ್ತವವಾಗಿ, ಫಲಿತಾಂಶದ ನಿಖರತೆಗಿಂತ ಹೆಚ್ಚಾಗಿ ಕಾರ್ಯನಿರ್ವಹಣೆಯ ವೇಗದ ಮೇಲೆ ಒಂದು ಒತ್ತು ನೀಡುವಿಕೆಯೊಂದಿಗೆ, ಚಿಕಿತ್ಸೆಯ ಸರದಿ ನಿರ್ಧರಿಸುವಿಕೆಯ ಕೌಶಲವನ್ನು ಕಲಿಸಲಾಗುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು] ಇದರ ಅತ್ಯಂತ ಮೂಲಸ್ವರೂಪದಲ್ಲಿ, ಯುದ್ಧಭೂಮಿಯೊಂದರಿಂದ ಗಾಯಗೊಂಡರನ್ನು ತೆಗೆದುಹಾಕುವುದಕ್ಕೆ ಸಂಬಂಧಪಟ್ಟ ಅಥವಾ ನಂತರದಲ್ಲಿ ಅವರ ಆರೈಕೆಗೆ ಸಂಬಂಧಪಟ್ಟ ಹೊಣೆಹೊತ್ತವರು, ಹಾನಿಗೊಳಗಾದವರನ್ನು ಎಲ್ಲ ಸಮಯಗಳಲ್ಲೂ ಮೂರು ಮೂಲಭೂತ ವರ್ಗಗಳಾಗಿ ವಿಂಗಡಿಸಿದ್ದಾರೆ:
- 1) ಹಾನಿಗೊಳಗಾದವರು ಯಾವ ಆರೈಕೆಯನ್ನು ಸ್ವೀಕರಿಸುತ್ತಾರೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಬದುಕುವ ಸಂಭವವನ್ನು ಹೊಂದಿರುವವರು;
- 2) ಹಾನಿಗೊಳಗಾದವರು ಯಾವ ಆರೈಕೆಯನ್ನು ಸ್ವೀಕರಿಸುತ್ತಾರೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಸಾಯುವ ಸಂಭವವಿರುವವರು;
- 3) ಹಾನಿಗೊಳಗಾದವರಿಗೆ ತತ್‌ಕ್ಷಣದ ಆರೈಕೆಯನ್ನು ನೀಡುವುದರಿಂದ ಫಲಿತಾಂಶದಲ್ಲಿ ಒಂದು ಧನಾತ್ಮಕ ವ್ಯತ್ಯಾಸವು ಕಂಡುಬರಬಹುದಾದ ಸಾಧ್ಯತೆಯನ್ನು ಹೊಂದಿರುವವರು.[೫]
ಅನೇಕ ತುರ್ತು ವೈದ್ಯಕೀಯ ಸೇವೆಗಳ (ಎಮೆರ್ಜೆನ್ಸಿ ಮೆಡಿಕಲ್ ಸರ್ವೀಸಸ್-EMS) ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ, ಇದೇ ರೀತಿಯ ಒಂದು ಮಾದರಿಯನ್ನು ಕೆಲವೊಮ್ಮೆ ಅನ್ವಯಿಸಬಹುದು. ಒಂದು ಸಂಪೂರ್ಣ ಪ್ರತಿಕ್ರಿಯೆಯು ಒಮ್ಮೆಗೆ ಸಂಭವಿಸಿದಾಗ ಮತ್ತು ಅನೇಕ ಸಹಾಯಹಸ್ತಗಳು ಲಭ್ಯವಿರುವಾಗ, ಕಾರ್ಯತಃ ಪ್ರತಿಯೊಬ್ಬ ವೈದ್ಯ ಸಹಾಯಕನೂ ತಮ್ಮ ಸೇವಾ ಕಾರ್ಯನೀತಿ ಹಾಗೂ ಕಾಯಂ ಸೂಚನೆಗಳಲ್ಲಿ ಸೇರಿಸಲ್ಪಟ್ಟಿರುವ ಮಾದರಿಯನ್ನು ಬಳಸುತ್ತಾನೆ. ಆದಾಗ್ಯೂ, ಘಟನೆಯೊಂದರ ಆರಂಭಿಕ ಹಂತಗಳಲ್ಲಿ, ಒಂದು ಅಥವಾ ಎರಡು ವೈದ್ಯ ಸಹಾಯಕರು ಇಪ್ಪತ್ತು ಅಥವಾ ಅದಕ್ಕಿಂತ ಹೆಚ್ಚಿನ ರೋಗಿಗಳಿಗೆ ನಿಯೋಜಿಸಲ್ಪಟ್ಟಾಗ, ಕಾರ್ಯಸಾಧ್ಯತೆಯ ಬೇಡಿಕೆಯ ಅನುಸಾರ ಮೇಲೆ ಹೆಸರಿಸಲಾದ ಹೆಚ್ಚು "ಮೂಲಸ್ವರೂಪ" ಮಾದರಿಯು ಬಳಸಲ್ಪಡುವುದು ಅತ್ಯಗತ್ಯವಾಗಿರುತ್ತದೆ. ಕಾರ್ಯತಃ EMSನ ಎಲ್ಲಾ ಮಗ್ಗುಲುಗಳಲ್ಲಿರುವಂತೆ, 'ಮರಳಿ ಮೂಲಭೂತ ತತ್ತ್ವಗಳಿಗೆ' ಎಂಬುದು ಏಕೈಕ ಪರಿಣಾಮಕಾರಿ ವಿಧಾನವಾಗಿ ಹೊರಹೊಮ್ಮುವ ಸಮಯಗಳು ಕಂಡುಬರುತ್ತವೆ.[ಸೂಕ್ತ ಉಲ್ಲೇಖನ ಬೇಕು]
ಚಿಕಿತ್ಸೆಯ ಸರದಿ ನಿರ್ಧಾರಕ್ಕಿರುವ ಆಧುನಿಕ ವಿಧಾನಗಳು ಹೆಚ್ಚು ವೈಜ್ಞಾನಿಕವಾಗಿವೆ. ಹಾನಿಗೊಳಗಾದವನ ಫಲಿತಾಂಶ ಹಾಗೂ ವರ್ಗೀಕರಣವು, ವಾಡಿಕೆಯಂತೆ ಶರೀರ ವಿಜ್ಞಾನದ ಹಾಗೂ ನಿರ್ಧಾರಣೆಯ ಆವಿಷ್ಕಾರಗಳ ಪರಿಣಾಮವಾಗಿ ಹೊರಹೊಮ್ಮುತ್ತದೆ. START ಮಾದರಿಯಂಥ ಕೆಲವೊಂದು ಮಾದರಿಗಳು, ನೆನಪಿಗೆ ಬದ್ಧವಾಗಿರುತ್ತವೆ, ಮತ್ತು ಅವು ಅರಬ್ಬಿ ಅಂಕಗಣಿತ ಪದ್ಧತಿಯನ್ನೂ ಆಧರಿಸಿರುವ ಸಾಧ್ಯತೆಯೂ ಇರುತ್ತದೆ. ಚಿಕಿತ್ಸೆಯ ಸರದಿ ನಿರ್ಧಾರದ ಪರಿಕಲ್ಪನೆಗಳು ಹೆಚ್ಚು ಅತ್ಯಾಧುನಿಕ ಮತ್ತು ಸಂಕೀರ್ಣವಾಗುತ್ತಿದ್ದಂತೆ, ಆಸ್ಪತ್ರೆಗಳು ಮತ್ತು ಕ್ಷೇತ್ರಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಆರೈಕೆ ಮಾಡುವವರಿಂದ ಬಳಸಲ್ಪಡುವುದಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಯ ಸರದಿ ನಿರ್ಧಾರ ಮಾರ್ಗದರ್ಶನವೂ ಸಹ ತಂತ್ರಾಂಶ ಮತ್ತು ಯಂತ್ರಾಂಶ ತೀರ್ಮಾನದ ಬೆಂಬಲದ ವಲಯವಾಗಿ ವಿಕಸನಗೊಳ್ಳುತ್ತಿದೆ.[೬]
ಚಿಕಿತ್ಸೆಯ ಸರದಿ ನಿರ್ಧಾರ ಎಂಬುದು ಸೈನ್ಯದ ಪಾಳೆಯದ ಹಿಂಭಾಗದಲ್ಲಿ ಲಭ್ಯವಿರುವ ಆರೈಕೆ ಸಂಪನ್ಮೂಲಗಳ ಕಾರ್ಯಚಟುವಟಿಕೆಯಲ್ಲಿ, ಏಕಕಾಲಿಕವಾಗಿ ಬಹು ರೋಗಿಗಳ ತುರ್ತು ಆರೈಕೆಯನ್ನು ಮಾಡುವುದಕ್ಕೆ ಸಂಬಂಧಿಸಿದ ಆದ್ಯತೆಯ ಒಂದು ವೈದ್ಯಕೀಯ ವರ್ಗೀಕರಣ ಪ್ರಕ್ರಿಯೆಯಾಗಿದೆ. ಚಿಕಿತ್ಸೆಯ ಸರದಿ ನಿರ್ಧಾರಕನು ಓರ್ವ ಪ್ರತ್ಯೇಕಿಸಲ್ಪಟ್ಟ ಅನುಭವವೇದ್ಯವಲ್ಲದ ನಿರ್ಧಾರಕನಾಗಿರುವುದಿಲ್ಲ; ಬದಲಿಗೆ ಆತನು ಸೈನ್ಯದ ಪಾಳೆಯದ ಹಿಂಭಾಗದಲ್ಲಿ ತುರ್ತು ಆರೈಕೆ ನೀಡುವವರಿಂದ ಮಾನ್ಯತೆ ಪಡೆದ ಓರ್ವ ಪರಿಣತನಾಗಬೇಕಿರುತ್ತದೆ. ವೈದ್ಯಕೀಯ ಚಿಕಿತ್ಸೆಯ ಸರದಿ ನಿರ್ಧಾರವನ್ನು ತುರ್ತು ಆರೈಕೆ ಸಂಸ್ಥೆಯ ಪ್ರತಿ ಹಂತದಿಂದ ಮಾಡಬೇಕಿದ್ದು, ಇದನ್ನು ಮೆಡಿಕಲ್ ಸಮು ಕಾಲಿಂಗ್ ಸೆಂಟರ್‌ನ ನಿಯಂತ್ರಕ ವೈದ್ಯರು ನಿರ್ವಹಿಸುತ್ತಾರೆ; ಇದನ್ನು ಒಂದು ಸಂಪೂರ್ಣವಾಗಿ ಸಂಘಟಿತವಾಗಿಸಲ್ಪಟ್ಟ EMSನಲ್ಲಿ, ತಾಣದಿಂದ ಆದ ಮೊದಲ ಸ್ಥಳಾಂತರಿಕೆಗೆ ಸಂಬಂಧಿಸಿದ ಆಸ್ಪತ್ರೆ-ಪೂರ್ವ ಪರಿಸರದಲ್ಲಿನ ಆಸ್ಪತ್ರೆಯ ವ್ಯವಸ್ಥೆಯಲ್ಲಿ ನಡೆಸಲಾಗುತ್ತದೆ.
ಚಿಕಿತ್ಸೆಯ ಸರದಿ ನಿರ್ಧಾರದ ಬಗೆಗಳು
[ಬದಲಾಯಿಸಿ]ಸರಳವಾದ ಚಿಕಿತ್ಸೆಯ ಸರದಿ ನಿರ್ಧಾರ
[ಬದಲಾಯಿಸಿ]ಸರಳವಾದ ಚಿಕಿತ್ಸೆಯ ಸರದಿ ನಿರ್ಧಾರವನ್ನು ಒಂದು "ಸಾಮೂಹಿಕ-ಅಪಘಾತ ಘಟನೆ"ಯ (ಮಾಸ್ ಕ್ಯಾಷುಯಾಲಿಟಿ ಇನ್ಸಿಡೆಂಟ್-MCI) ಸಂದರ್ಭದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ರೋಗಿಗಳನ್ನು ವಿಷಮಸ್ಥಿತಿಯ ನಿಗಾವಣೆ ಅಗತ್ಯವಿರುವವರು ಹಾಗೂ ಆಸ್ಪತ್ರೆಗೆ ತತ್‌ಕ್ಷಣದ ಸಾಗಾಣಿಕೆ ಮಾಡಬೇಕಾದವರು ಎಂಬುದಾಗಿ ಹಾಗೂ ಕಡಿಮೆ ಗಂಭೀರ ಸ್ವರೂಪದ ಗಾಯಗಳೊಂದಿಗಿನ ರೋಗಿಗಳು ಎಂಬುದಾಗಿ ವಿಂಗಡಿಸುವ ದೃಷ್ಟಿಯಿಂದ ಈ ವಿಧಾನವನ್ನು ಬಳಸಲಾಗುತ್ತದೆ. ಸಾಗಾಣಿಕಾ ವ್ಯವಸ್ಥೆಯು ಲಭ್ಯವಾಗುವುದಕ್ಕೆ ಮುಂಚೆಯೇ ಈ ಹಂತವನ್ನು ಪ್ರಾರಂಭಿಸಬಹುದಾಗಿರುತ್ತದೆ. ರೋಗಿಗಳ ಗಾಯಗಳ ತೀವ್ರತೆಯನ್ನು ಆಧರಿಸಿದ ಅವರ ವರ್ಗೀಕರಣಕ್ಕೆ, ಮುದ್ರಿತ ಚಿಕಿತ್ಸೆಯ ಸರದಿ ನಿರ್ಧಾರದ ನಮೂದುಪಟ್ಟಿಗಳು ಅಥವಾ ಬಣ್ಣಬಣ್ಣದ ಬಾವುಟ ಸಿಕ್ಕಿಸುವಿಕೆಯ ಬಳಕೆಯೊಂದಿಗೆ ನೆರವಾಗಬಹುದು.[೭]
S.T.A.R.T. ಮಾದರಿ
[ಬದಲಾಯಿಸಿ]S.T.A.R.T. (ಸಿಂಪಲ್ ಟ್ರಯೇಜ್ ಅಂಡ್ ರ್ಯಾಪಿಡ್ ಟ್ರೀಟ್‌ಮೆಂಟ್ - ಸರಳ ಚಿಕಿತ್ಸೆಯ ಸರದಿ ನಿರ್ಧಾರ ಮತ್ತು ಕ್ಷಿಪ್ರ ಚಿಕಿತ್ಸೆ) ಎಂಬುದು ಸರಳವಾದ ಚಿಕಿತ್ಸೆಯ ಸರದಿಯ ನಿರ್ಧಾರ ವ್ಯವಸ್ಥೆಯಾಗಿದ್ದು, ಲಘುವಾಗಿ-ತರಬೇತಿ ಪಡೆದಿರುವ ಪರಿಣಿತರಲ್ಲದ ಹಾಗೂ ತುರ್ತು ಸಿಬ್ಬಂದಿಯಿಂದ ತುರ್ತುಸ್ಥಿತಿಗಳಲ್ಲಿ ಇದು ನಿರ್ವಹಿಸಲ್ಪಡುತ್ತದೆ.[೮] ಇದು ವೈದ್ಯಕೀಯ ಸಿಬ್ಬಂದಿಯನ್ನು ಅಥವಾ ಕಾರ್ಯಕೌಶಲಗಳನ್ನು ತೆಗೆದುಹಾಕುವ ಅಥವಾ ಬೋಧಿಸುವ ಉದ್ದೇಶವನ್ನು ಹೊಂದಿಲ್ಲ. ಇದು ಒಂದು ಬೋಧಪ್ರದ ಉದಾಹರಣೆಯಾಗಿ ಪಾತ್ರವಹಿಸಬಲ್ಲದು, ಹಾಗೂ ಇದನ್ನು ಭೂಕಂಪಗಳಲ್ಲಿ ಬಳಕೆಮಾಡುವುದಕ್ಕೆ ಸಂಬಂಧಿಸಿದಂತೆ ಕ್ಯಾಲಿಫೋರ್ನಿಯಾದ ತುರ್ತು ಕೆಲಸಗಾರರಿಗೆ 2003ರಲ್ಲಿ ಬೋಧಿಸಲಾಯಿತು. ತುರ್ತು ಸೇವಾ ವಲಯಗಳಿಂದ ಇದು ಬಳಸಲ್ಪಡುವುದಕ್ಕೆ ಅನುವಾಗುವಂತೆ, ಕ್ಯಾಲಿಫೋರ್ನಿಯಾದ ನ್ಯೂಪೋಟ್ ಬೀಚ್‌ನಲ್ಲಿರುವ ಹೋಗ್ ಹಾಸ್ಪಿಟಲ್‌ನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಯಿತು. ಟ್ರೇನು ಧ್ವಂಸಗಳು ಹಾಗೂ ಬಸ್ ಅಪಘಾತಗಳಂಥ ಸಾಮೂಹಿಕ ಅಪಘಾತ ಘಟನೆಗಳಲ್ಲಿ ಇದು ಕ್ಷೇತ್ರದಲ್ಲೇ-ಸಾಬೀತುಮಾಡಲ್ಪಟ್ಟಿದೆಯಾದರೂ, ಭೂಕಂಪಗಳ ನಂತರದಲ್ಲಿ ಸಮುದಾಯ ತುರ್ತು ಪ್ರತಿಕ್ರಿಯೆ ತಂಡಗಳು (ಕಮ್ಯುನಿಟಿ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ಸ್-CERTಗಳು) ಮತ್ತು ಅಗ್ನಿಶಾಮಕ ಪಡೆಗಳಿಂದ ಬಳಸಲ್ಪಡುವುದಕ್ಕಾಗಿ ಇದನ್ನು ಅಭಿವೃದ್ಧಿಪಡಿಸಲಾಗಿತ್ತು. 2009ರಲ್ಲಿ, EMSpañol ಎಂದು ಕರೆಯಲ್ಪಡುವ ಪುಸ್ತಕಗಳ ಒಂದು ಸರಣಿಯಲ್ಲಿ S.T.A.R.T. ವ್ಯವಸ್ಥೆಯ ಒಂದು ದ್ವಿಭಾಷಾ ಆವೃತ್ತಿಯನ್ನು ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದಂತೆ, ನ್ಯೂಪೋಟ್ ಬೀಚ್ ಅಗ್ನಿಶಾಮಕ ಇಲಾಖೆಯು ಅನುಮೋದನೆಯನ್ನು ನೀಡಿತು.[೯]
ಚಿಕಿತ್ಸೆಯ ಸರದಿ ನಿರ್ಧಾರವು ಗಾಯಗೊಂಡವರನ್ನು ನಾಲ್ಕು ಗುಂಪುಗಳಾಗಿ ಪ್ರತ್ಯೇಕಿಸುತ್ತದೆ:
- 0 ನೆರವಿನ ವ್ಯಾಪ್ತಿಯಿಂದ ಆಚೆಗಿರುವ ಸತ್ತವರು
- 1 ತತ್‌ಕ್ಷಣದ ಸಾಗಾಣಿಕಾ ವ್ಯವಸ್ಥೆಯಿಂದ ನೆರವು ನೀಡಲ್ಪಡಬಹುದಾದ ಗಾಯಗೊಂಡವರು
- 2 ವಿಳಂಬಗೊಳಿಸಬಹುದಾದ ಸಾಗಾಣಿಕೆಯ ವ್ಯಾಪ್ತಿಗೆ ಸೇರಿದ ಗಾಯಗೊಂಡವರು
- 3 ನೆರವಿನ ಅಗತ್ಯ ಅಷ್ಟೊಂದು ತುರ್ತಾಗಿಲ್ಲದ, ಕಿರು ಗಾಯಗಳೊಂದಿಗಿನ ಗಾಯಾಳುಗಳು
ಮುಂದುವರಿದ ಬಗೆಯ ಚಿಕಿತ್ಸೆಯ ಸರದಿ ನಿರ್ಧಾರ
[ಬದಲಾಯಿಸಿ]ಗಂಭೀರವಾಗಿ ಗಾಯಗೊಂಡವರ ಪೈಕಿ ಕೆಲವರು ಉಳಿಯುವುದು ಅಸಂಭವವೆಂದು ಕಂಡುಬಂದ ಕಾರಣದಿಂದ ಅವರು ಮುಂದುವರಿದ ಬಗೆಯ ಆರೈಕೆಯನ್ನು ಸ್ವೀಕರಿಸುವ ಅಗತ್ಯವಿಲ್ಲ ಎಂದು ವೈದ್ಯರು ಮುಂದುವರಿದ ಬಗೆಯ ಚಿಕಿತ್ಸೆಯ ಸರದಿ ನಿರ್ಧಾರದಲ್ಲಿ ತೀರ್ಮಾನಿಸಬಹುದು. ಕಡಿಮೆ ತೀವ್ರಸ್ವರೂಪದ ಗಾಯಗಳನ್ನು ಹೊಂದಿರುವ ರೋಗಿಗಳ ಮೇಲೆ ಮುಂದುವರಿದ ಬಗೆಯ ಆರೈಕೆಯನ್ನು ಪ್ರಯೋಗಿಸಲಾಗುತ್ತದೆ. ಏಕೆಂದರೆ, ನಿರ್ದಿಷ್ಟ ಗಾಯಗಳೊಂದಿಗಿನ ರೋಗಿಗಳಿಗೆ ಚಿಕಿತ್ಸೆ ನೀಡುವುದು ಉದ್ದೇಶಪೂರ್ವಕವಾಗಿ ತಡೆಹಿಡಿಯಲ್ಪಟ್ಟಿರುವುದರಿಂದ, ಮುಂದುವರಿದ ಬಗೆಯ ಚಿಕಿತ್ಸೆಯ ಸರದಿ ನಿರ್ಧಾರವು ನೈತಿಕ ಪರಿಣಾಮಗಳನ್ನು ಹೊಂದಿದೆ. ಬದುಕುಳಿಯುವ ಹೆಚ್ಚಿನ ಸಾಧ್ಯತೆಗಳನ್ನು ಹೊಂದಿರುವ ಇತರ ರೋಗಿಗಳ ಉಳಿಯುವಿಕೆಯ ಅವಕಾಶಗಳನ್ನು ಹೆಚ್ಚಿಸುವ ದೃಷ್ಟಿಯಿಂದ, ಬದುಕುಳಿಯುವ ಕಡಿಮೆ ಸಾಧ್ಯತೆಯನ್ನು ಹೊಂದಿರುವ ರೋಗಿಗಳಿಂದ ವಿರಳವಾದ ಸಂಪನ್ಮೂಲಗಳ ಮಾರ್ಗ ಬದಲಾಯಿಸಲು ಇದನ್ನು ಬಳಸಲಾಗುತ್ತದೆ.
ಸುಸಂಗತವಾಗಿ 3ರಲ್ಲಿ ಅಥವಾ ಅದಕ್ಕಿಂತ ಕೆಳಗಿರುವ ದೈಹಿಕ ಆಘಾತದ ಒಂದು ಅಂಕವನ್ನು ಪಶ್ಚಿಮ ಯುರೋಪ್‌ನಲ್ಲಿ ಈ ವರ್ಗಕ್ಕೆ ಸೇರಿದ ರೋಗಿಗೆ ಸಂಬಂಧಿಸಿದಂತೆ ಮಾನದಂಡವಾಗಿ ಬಳಸಲಾಗುತ್ತದೆ. ಚಿಕಿತ್ಸೆಯ ಸರದಿ ನಿರ್ಧಾರದ ಪರಿಷ್ಕೃತ ದೈಹಿಕ ಆಘಾತದ ಅಂಕವನ್ನು (ಟ್ರೈಯೇಜ್ ರಿವೈಸ್ಡ್ ಟ್ರೌಮಾ ಸ್ಕೋರ್-TRTS) ಬಳಸುವ ಮೂಲಕ ಇದನ್ನು ನಿರ್ಣಯಿಸಬಹುದಾಗಿದೆ; ಇದೊಂದು ವೈದ್ಯಕೀಯವಾಗಿ-ಕ್ರಮಬದ್ಧಗೊಳಿಸಲಾಗಿರುವ ಅಂಕ ದಾಖಲಿಸುವ ವ್ಯವಸ್ಥೆಯಾಗಿದ್ದು, ಕೆಲವೊಂದು ಚಿಕಿತ್ಸೆಯ ಸರದಿ ನಿರ್ಧಾರದ ಕಾರ್ಡುಗಳಲ್ಲಿ ಇದನ್ನು ಅಳವಡಿಸಲಾಗಿದೆ.[೧೦]
ಗಾಯದ ತೀವ್ರತೆಯ ಅಂಕ (ಇಂಜುರಿ ಸಿವೆರಿಟಿ ಸ್ಕೋರ್-ISS) ಎಂಬುದು ಒಂದು ದೈಹಿಕ ಆಘಾತದ ಅಂಕ ದಾಖಲಿಸುವ ವ್ಯವಸ್ಥೆಯ ಮತ್ತೊಂದು ಉದಾಹರಣೆಯಾಗಿದೆ. A (ಮುಖ/ಕುತ್ತಿಗೆ/ತಲೆ), B(ಮುಂಡಭಾಗ/ಕಿಬ್ಬೊಟ್ಟೆ), C(ಕೈಕಾಲುಗಳು/ಬಾಹ್ಯ/ಚರ್ಮ) ಎಂಬ ರೀತಿಯಲ್ಲಿ ಮೂರು ವರ್ಗಗಳಾಗಿ ವಿಭಜಿಸಲ್ಪಟ್ಟಿರುವ ಮಾನವ ದೇಹಕ್ಕೆ ಆದ ಗಾಯದ ತೀವ್ರತೆಯನ್ನು ಆಧರಿಸಿ 0ಯಿಂದ 75ರವರೆಗಿನ ಒಂದು ಅಂಕವನ್ನು ಇದು ನಿಗದಿಪಡಿಸುತ್ತದೆ. ಸಂಕ್ಷೇಪಿತ ಗಾಯ ಮಾಪಕವನ್ನು ಬಳಸಿಕೊಂಡು ಗಾಯಗೊಳ್ಳದವರಿಂದ ಮೊದಲ್ಗೊಂಡು ವಿಷಮಸ್ಥಿತಿಯಲ್ಲಿ ಗಾಯಗೊಂಡವರವರೆಗೆ, 0ಯಿಂದ 5ರವರೆಗಿನ ಅಂಕವನ್ನು ಪ್ರತಿ ವರ್ಗಕ್ಕೆ ನೀಡಲಾಗುತ್ತದೆ. ನಂತರ ಅದನ್ನು ವರ್ಗಮಾಡಿ, ಕೂಡಿಸಿ ISSನ್ನು ಸೃಷ್ಟಿಸಲಾಗುತ್ತದೆ. "ಬದುಕುಳಿಯಲಾಗದ" ಗಾಯಾಳುವಿಗೆ ಸಂಬಂಧಿಸಿದ 6 ಅಂಕವನ್ನು ಮೂರು ವರ್ಗಗಳ ಪೈಕಿ ಯಾವುದಕ್ಕಾದರೂ ಬಳಸಬಹುದಾಗಿರುತ್ತದೆ, ಮತ್ತು ಇತರ ಅಂಕಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಇದು ಸ್ವಯಂಚಾಲಿತವಾಗಿ ಅಂಕವನ್ನು 75ಕ್ಕೆ ನಿಗದಿಗೊಳಿಸುತ್ತದೆ. ಚಿಕಿತ್ಸೆಯ ಸರದಿ ನಿರ್ಧಾರದ ಸನ್ನಿವೇಶವನ್ನವಲಂಬಿಸಿ, ಆರೈಕೆಗೆ ಸಂಬಂಧಿಸಿದಂತೆ ಸದರಿ ರೋಗಿಯನ್ನು ಮೊದಲ ಆದ್ಯತೆಯಾಗಿದ್ದಾನೆ ಎಂಬುದನ್ನು ಇದು ಸೂಚಿಸಬಹುದು, ಇಲ್ಲವೇ ಇದೇ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಳಿದಿರುವವರಿಗಾಗಿ ಆರೈಕೆಯನ್ನು ಸಂರಕ್ಷಿಸುವ ಅಗತ್ಯದ ಕಾರಣದಿಂದಾಗಿ, ಅವನು ಅಥವಾ ಅವಳು ಆರೈಕೆಯನ್ನು ಸ್ವೀಕರಿಸುವುದಿಲ್ಲ ಎಂಬುದನ್ನು ಇದು ಸೂಚಿಸಬಹುದು.
ಯಾರಿಗೆಲ್ಲಾ ನೆರವಿನ ಅಗತ್ಯವಿದೆಯೋ ಅವರೆಲ್ಲರನ್ನೂ ಉಪಚರಿಸಲು ಲಭ್ಯವಿರುವ ವೈದ್ಯಕೀಯ ಸಂಪನ್ಮೂಲಗಳು ಸಾಕಷ್ಟಿಲ್ಲ ಎಂಬುದಾಗಿ ವೈದ್ಯಕೀಯ ವೃತ್ತಿಪರಿಣಿತರು ತೀರ್ಮಾನಿಸಿದಾಗ, ಮುಂದುವರಿದ ಬಗೆಯ ಚಿಕಿತ್ಸೆಯ ಸರದಿ ನಿರ್ಧಾರದ ಬಳಕೆಯು ಅವಶ್ಯಕವಾಗಿ ಕಂಡುಬರಬಹುದು. ಆದ್ಯತೆ ನೀಡುವಿಕೆಯ ವ್ಯಾಪ್ತಿಗೆ ಸೇರಲ್ಪಡುತ್ತಿರುವ ಚಿಕಿತ್ಸೆಯಲ್ಲಿ ವೈದ್ಯಕೀಯ ಆರೈಕೆ, ಅಥವಾ ಔಷಧಗಳು ಅಥವಾ ಇತರ ಸೀಮಿತ ಸಂಪನ್ಮೂಲಗಳ ಮೇಲೆ ವಿನಿಯೋಗಿಸಲಾದ ಸಮಯ ಇವೆಲ್ಲವೂ ಸೇರಿರಲು ಸಾಧ್ಯವಿದೆ. ಅಗ್ನಿಪರ್ವತದ ವಿಸ್ಫೋಟಗಳು, ಚಂಡಮಾರುತಗಳು, ಹಾಗೂ ರೈಲು ಅಪಘಾತಗಳಂಥ ವಿಕೋಪಗಳಲ್ಲಿ ಇದು ಸಂಭವಿಸಿದೆ. ಇಂಥ ಸನ್ನಿವೇಶಗಳಲ್ಲಿ, ರೋಗಿಗಳಿಗೆ ಉಂಟಾಗಿರುವ ಗಾಯಗಳ ತೀವ್ರತೆಯ ಕಾರಣದಿಂದಾಗಿ, ವೈದ್ಯಕೀಯ ಆರೈಕೆಯನ್ನು ಲೆಕ್ಕಿಸದೆಯೇ ಒಂದಷ್ಟು ಶೇಕಡಾವಾರು ರೋಗಿಗಳ ಸಾವು ಸಂಭವಿಸುತ್ತದೆ. ಒಂದು ವೇಳೆ ಇತರರಿಗೆ ತತ್‌ಕ್ಷಣದ ವೈದ್ಯಕೀಯ ಆರೈಕೆಯನ್ನು ನೀಡಿದರೆ ಅವರು ಬದುಕುತ್ತಾರಾದರೂ, ಅದಿಲ್ಲವಾದರೆ ಅವರು ಸಾಯುತ್ತಾರೆ.
ಈ ರೀತಿಯ ಪರಮಾವಧಿಯ ಸನ್ನಿವೇಶಗಳಲ್ಲಿ, ಹೇಗಿದ್ದರೂ ಸತ್ತೇಹೋಗುತ್ತಾರೆ ಎಂದು ಕಂಡುಬಂದಿರುವ ಜನರಿಗೆ ನೀಡಲಾದ ಯಾವುದೇ ವೈದ್ಯಕೀಯ ಆರೈಕೆಯನ್ನು, ಅವರ ಬದಲಿಗೆ ಒಂದು ವೇಳೆ ಚಿಕಿತ್ಸೆ ನೀಡಿದ್ದರೆ ಬದುಕುಳಿಯುವ ಸಾಧ್ಯತೆಯನ್ನು ಹೊಂದಿದ್ದ ಇತರರಿಂದ (ಅಥವಾ ತಮ್ಮ ಗಾಯಗಳ ಕಾರಣದಿಂದಾಗಿ ಕಡಿಮೆ ತೀವ್ರಸ್ವರೂಪದ ದೈಹಿಕ ಅಸಾಮರ್ಥ್ಯವನ್ನು ಪ್ರಾಯಶಃ ಅನುಭವಿಸಿದವರಿಂದ) ಹಿಂದೆಗೆದುಕೊಂಡ ಆರೈಕೆ ಎಂದು ಪರಿಗಣಿಸಬಹುದಾಗಿದೆ. ಆರೈಕೆಗೆ ಅರ್ಹರಾಗಿರುವ ಇತರ ಹಲವಾರು ಮಂದಿಗೆ ತೊಂದರೆಯನ್ನುಂಟುಮಾಡಿ, ಒಬ್ಬನ ಪ್ರಾಣವನ್ನುಳಿಸಲು ಪ್ರಯತ್ನಿಸುವುದನ್ನು ತಪ್ಪಿಸುವ ಸಲುವಾಗಿ, ತೊಂದರೆಗೊಳಗಾದ ಕೆಲಮಂದಿಯನ್ನು ಬಗೆಹರಿಸಲಾಗದ ಅಥವಾ ನಿರಾಶಾದಾಯಕ ಸ್ಥಿತಿಯಲ್ಲಿರುವವರೆಂದು ಪರಿಗಣಿಸಿ ಪ್ರತ್ಯೇಕಿಸುವುದು ವಿಕೋಪ ವೈದ್ಯಕೀಯ ಪರಿಣತರಿಗೆ ಕಾರ್ಯಭಾರವಾಗಿ ಪರಿಣಮಿಸಿಬಿಡುತ್ತದೆ.
ಒಂದು ವೇಳೆ ತತ್‌ಕ್ಷಣದ ಚಿಕಿತ್ಸೆಯು ಯಶಸ್ವಿಯಾದಲ್ಲಿ, ರೋಗಿಯು ಸುಧಾರಿಸಿಕೊಳ್ಳಬಹುದು (ಇದು ತಾತ್ಕಾಲಿಕವಾಗಿರಬಹುದಾದರೂ ಸಹ) ಮತ್ತು ಅಲ್ಪಾವಧಿಯಲ್ಲಿನ ಒಂದು ಕೆಳಮಟ್ಟದ ಆದ್ಯತೆಯ ಸ್ವರೂಪದಲ್ಲಿ ರೋಗಿಯನ್ನು ವರ್ಗೀಕರಿಸುವಲ್ಲಿ ಈ ಸುಧಾರಣೆಯು ಅವಕಾಶ ಕಲ್ಪಿಸಬಹುದು. ಚಿಕಿತ್ಸೆಯ ಸರದಿ ನಿರ್ಧಾರವು ಒಂದು ನಿರಂತರ ಪ್ರಕ್ರಿಯೆಯಾಗಬೇಕಾಗುತ್ತದೆ ಹಾಗೂ ಆದ್ಯತೆಯು ಸರಿಯಾಗಿ ಪರಿಗಣಿಸಲ್ಪಟ್ಟಿದೆ ಎಂಬುದನ್ನು ಖಾತ್ರಿಪಡಿಸುವ ಸಲುವಾಗಿ, ವರ್ಗಗಳನ್ನು ನಿಯತವಾಗಿ ತಪಾಸಿಸಬೇಕಾಗುತ್ತದೆ. ಹಾನಿಗೊಳಗಾದವನು ಮೊದಲು ಆಸ್ಪತ್ರೆಯೊಳಗೆ ಬಂದಾಗ, ಒಂದು ದೈಹಿಕ ಆಘಾತದ ಅಂಕವನ್ನು ಸ್ಥಿರಸ್ವರೂಪವಾಗಿ ತೆಗೆದುಕೊಳ್ಳಲಾಗುತ್ತದೆ ಮತ್ತು ಹಾನಿಗೊಳಗಾದವನ ಶರೀರ ವಿಜ್ಞಾನದ ಮಾಪನ ಲಕ್ಷಣಗಳಲ್ಲಿ ಯಾವುದಾದರೂ ಬದಲಾವಣೆಗಳಾಗಿವೆಯೇ ಎಂಬುದನ್ನು ನೋಡಲು, ತರುವಾಯದ ದೈಹಿಕ ಆಘಾತದ ಅಂಕಗಳನ್ನು ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ದಾಖಲೆ ವ್ಯವಸ್ಥೆಯೊಂದನ್ನು ನಿರ್ವಹಿಸಿದ್ದೇ ಆದಲ್ಲಿ, ಘಟನೆಯ ಆರಂಭದಿಂದ ಮೊದಲ್ಗೊಂಡಿರುವ ಒಂದು ದೈಹಿಕ ಆಘಾತದ ಅಂಕದ ಕಾಲ ಸರಣಿಯನ್ನು ರೋಗಿಯನ್ನು ದಾಖಲಿಸಿಕೊಳ್ಳುವ ಆಸ್ಪತ್ರೆಯ ವೈದ್ಯನು ನೋಡಲು ಸಾಧ್ಯವಾಗುತ್ತದೆ; ಇದರಿಂದ ಸಾಕಷ್ಟು ಮುಂಚಿತವಾಗಿ ನಿರ್ಣಾಯಕ ಚಿಕಿತ್ಸೆಯನ್ನು ನೀಡುವುದಕ್ಕೆ ಅವಕಾಶ ಸಿಕ್ಕಂತಾಗುತ್ತದೆ.
-
SMART TAG ವ್ಯವಸ್ಥೆ. ರೋಗಿಯ ಜಾಡೀಕರಣಕ್ಕೆ ಸಂಬಂಧಿಸಿದ ಪಟ್ಟೆ ಸಂಕೇತವನ್ನು ಗಮನಿಸಿ.
-
ಜಪಾನಿಯರಲ್ಲಿ ಇರುವ METTAG ವ್ಯವಸ್ಥೆ.
-
ಸರಳ ಟೇಪ್ನ್ನೂ ಸಹ ಒಂದು ಕೊನೆಯ ಸಾಧನೋಪಾಯವಾಗಿ ಬಳಸಿಕೊಳ್ಳಬಹುದು.
ನಿರಂತರವಾದ ಸಂಘಟಿತವಾಗಿಸಲ್ಪಟ್ಟ ಚಿಕಿತ್ಸೆಯ ಸರದಿ ನಿರ್ಧಾರ
[ಬದಲಾಯಿಸಿ]ನಿರಂತರವಾದ ಸಂಘಟಿತವಾಗಿಸಲ್ಪಟ್ಟ ಚಿಕಿತ್ಸೆಯ ಸರದಿ ನಿರ್ಧಾರವು ಸಾಮೂಹಿಕ ಅಪಘಾತದ ಸನ್ನಿವೇಶಗಳಲ್ಲಿನ ಚಿಕಿತ್ಸೆಯ ಸರದಿ ನಿರ್ಧಾರಕ್ಕೆ ಸಂಬಂಧಿಸಿದ ಒಂದು ವಿಧಾನವಾಗಿದೆ. ಮನಸ್ಸಾಮಾಜಿಕ ಹಾಗೂ ವಿಕೋಪ ವರ್ತನೆಯ ಆರೋಗ್ಯ ಸಮಸ್ಯೆಗಳಿಗೆ ಈ ವಿಧಾನವು ಪರಿಣಾಮಕಾರಿ ಹಾಗೂ ಸೂಕ್ಷ್ಮ ಸಂವೇದಿಯಾಗಿದೆ. ಆರೈಕೆಯನ್ನು ಬಯಸುತ್ತಿರುವ ರೋಗಿಗಳ ಸಂಖ್ಯೆ (ಹಠಾತ್ ಹೆಚ್ಚಳ), ಆ ಹಠಾತ್ ಹೆಚ್ಚಳವನ್ನು ಒಂದು ಆಸ್ಪತ್ರೆ ಅಥವಾ ಆರೋಗ್ಯ ರಕ್ಷಣೆ ಸೌಕರ್ಯವು ನಿಭಾಯಿಸಿಕೊಂಡು ಹೋಗುವ ರೀತಿ (ಹಠಾತ್ ಹೆಚ್ಚಳ ಸಾಮರ್ಥ್ಯ)[೧೧] ಮತ್ತು ಸದರಿ ಘಟನೆಯ ಮೇಲೆ ಬಾಗಿರುವ ವೈದ್ಯಕೀಯ ಅಗತ್ಯಗಳ ಮೇಲೆ ಈ ಆರೋಗ್ಯ ಸಮಸ್ಯೆಗಳು ಪರಿಣಾಮ ಬೀರಬಲ್ಲವಾಗಿರುತ್ತವೆ.
ನಿರಂತರವಾದ ಸಂಘಟಿತವಾಗಿಸಲ್ಪಟ್ಟ ಚಿಕಿತ್ಸೆಯ ಸರದಿ ನಿರ್ಧಾರವು, ಚಿಕಿತ್ಸೆಯ ಸರದಿ ನಿರ್ಧಾರದ ಮೂರು ಸ್ವರೂಪಗಳನ್ನು ಪ್ರಗತಿಶೀಲ ನಿರ್ದಿಷ್ಟ ಲಕ್ಷಣದೊಂದಿಗೆ ಸಂಯೋಜಿಸುತ್ತದೆ. ಅತ್ಯಂತ ಹೆಚ್ಚಿನ ಅಂದಾಜಿನ ಆರೈಕೆಯ ಅಗತ್ಯವಿರುವ ರೋಗಿಗಳನ್ನು ಕ್ಷಿಪ್ರವಾಗಿ ಗುರುತಿಸಲು ಮತ್ತು ಅದೇ ವೇಳೆಗೆ, ಲಭ್ಯವಿರುವ ಸಂಪನ್ಮೂಲಗಳಿಗೆ ಪ್ರತಿಯಾಗಿ ಪ್ರತ್ಯೇಕ ರೋಗಿಗಳ ಅಗತ್ಯಗಳನ್ನು ಹಾಗೂ ಇತರ ರೋಗಿಗಳ ಅಗತ್ಯಗಳನ್ನು ಹೊಂದಾಣಿಕೆ ಮಾಡಿಕೊಂಡು ಹೋಗಲು ಈ ಕ್ರಮವನ್ನು ಕೈಗೊಳ್ಳಲಾಗುತ್ತದೆ. ನಿರಂತರವಾದ ಸಂಘಟಿತವಾಗಿಸಲ್ಪಟ್ಟ ಚಿಕಿತ್ಸೆಯ ಸರದಿ ನಿರ್ಧಾರವು ಈ ಅಂಶಗಳನ್ನು ಅಳವಡಿಸಿಕೊಳ್ಳುತ್ತದೆ:
- ಸಮೂಹ (ಜಾಗತಿಕ) ಚಿಕಿತ್ಸೆಯ ಸರದಿ ನಿರ್ಧಾರ (ಅಂದರೆ, M.A.S.S. ಚಿಕಿತ್ಸೆಯ ಸರದಿ ನಿರ್ಧಾರ)[೧೨]
- ಶರೀರ ವೈಜ್ಞಾನಿಕ (ಪ್ರತ್ಯೇಕ) ಚಿಕಿತ್ಸೆಯ ಸರದಿ ನಿರ್ಧಾರ (ಅಂದರೆ, S.T.A.R.T.)
- ಆಸ್ಪತ್ರೆ ಚಿಕಿತ್ಸೆಯ ಸರದಿ ನಿರ್ಧಾರ (ಅಂದರೆ, E.S.I. ಅಥವಾ ತುರ್ತು ತೀವ್ರತೆ ಸೂಚಿ)
ಆದಾಗ್ಯೂ, ಯಾವುದೇ ಸಮೂಹ, ವ್ಯಕ್ತಿ ಮತ್ತು/ಅಥವಾ ಆಸ್ಪತ್ರೆಯ ಚಿಕಿತ್ಸೆಯ ಸರದಿ ನಿರ್ಧಾರ ವ್ಯವಸ್ಥೆಯನ್ನು ಮೌಲ್ಯಮಾಪನದ ಸೂಕ್ತವಾದ ಮಟ್ಟದಲ್ಲಿ ಬಳಸಿಕೊಳ್ಳಬಹುದು.
ಪ್ರಾಯೋಗಿಕ ಅನ್ವಯಿತ ಚಿಕಿತ್ಸೆಯ ಸರದಿ ನಿರ್ಧಾರ
[ಬದಲಾಯಿಸಿ]ಘಟನೆಯೊಂದರ ಆರಂಭಿಕ ಹಂತಗಳ ಅವಧಿಯಲ್ಲಿ, ರೋಗಿಗಳು ಹಾಗೂ ಗಾಯಗಳ ವ್ಯಾಪ್ತಿಯನ್ನು ಕಂಡು ಮೊದಲ ಪ್ರತಿಸ್ಪಂದಕರ ಚಿತ್ತಸ್ಥೈರ್ಯವು ಕುಂದಿಹೋಗಬಹುದು ಹಾಗೂ ಅನೇಕವೇಳೆ ಇದು ಪರಿಣಾಮಕಾರಿ ಚಿಕಿತ್ಸೆಯ ಸರದಿ ನಿರ್ಧಾರದ ತಡೆಗಟ್ಟುವಿಕೆಗೂ ಕಾರಣವಾಗಬಹುದು; ಅದರಲ್ಲೂ ವಿಶೇಷವಾಗಿ ಕಡಿಮೆ ಅನುಭವವನ್ನು ಹೊಂದಿರುವ ಚಿಕಿತ್ಸಕರು ಇಂಥದೊಂದು ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆ ಹೆಚ್ಚು. ರೋಗಿಗೆ ನೆರವಾಗುವ ವಿಧಾನವು (ಪೇಷಂಟ್ ಅಸಿಸ್ಟ್ ಮೆಥಡ್-PAM) ಒಂದು ಮೌಲ್ಯಯುತ ಕೌಶಲವಾಗಿದೆ; ಪ್ರತಿಸ್ಪಂದಕರು ಒಂದು ಅಪಘಾತಕ್ಕೀಡಾದವರನ್ನು ಒಟ್ಟುಗೂಡಿಸುವ ತಾಣವನ್ನು (ಕ್ಯಾಷುಯಾಲ್ಟಿ ಕಲೆಕ್ಷನ್ ಪಾಯಿಂಟ್-CCP) ಹಾಗೂ ಸಲಹೆಯನ್ನು ತಕ್ಷಣವೇ ಸ್ಥಾಪಿಸುತ್ತಾರೆ; ಇದಕ್ಕಾಗಿ ಅವರು ಕೂಗುವಿಕೆಯ ವಿಧಾನವನ್ನು ಅನುಸರಿಸಬಹುದು, ಇಲ್ಲವೇ ಒಂದು ಧ್ವನಿವರ್ಧಕ ಯಂತ್ರದ ನೆರವಿನಿಂದ "ಯಾರಿಗಾದರೂ ಸಹಾಯದ ಅಗತ್ಯವಿದ್ದಲ್ಲಿ ಅವರು ಆಯ್ಕೆಮಾಡಲಾದ ಪ್ರದೇಶಕ್ಕೆ (CCP) ಬರಬಹುದು" ಎಂದು ಘೋಷಣೆ ಮಾಡಬಹುದು. ಇದು ಒಮ್ಮೆಗೇ ಹಲವಾರು ಕೆಲಸಗಳನ್ನು ನೆರವೇರಿಸುತ್ತದೆ: ತುಂಬಾ ತೀವ್ರವಾಗಿ ಗಾಯಗೊಂಡಿರದ ರೋಗಿಗಳನ್ನು ಹಾಗೂ ಅವರಿಗೆ ತತ್‌ಕ್ಷಣದ ಸಹಾಯ ಬೇಕಿರುವುದನ್ನು ಇದು ಗುರುತಿಸುತ್ತದೆ; ಇದು ಅಲ್ಲಿನ ಒಟ್ಟಾರೆ ವಾತಾವರಣವನ್ನು ಅಕ್ಷರಶಃ ನಿಚ್ಚಳಗೊಳಿಸುತ್ತದೆ, ಮತ್ತು ಸಾಧ್ಯವಿರುವ ಮಟ್ಟಿಗೆ ಪ್ರತಿಸ್ಪಂದಕರಿಗೆ ಬೇಕಿರುವ ಸಹಾಯಕರನ್ನು ಒದಗಿಸುತ್ತದೆ. ಯಾರಿಗೆ ಚಲಿಸಲು ಸಾಧ್ಯವಿದೆಯೋ ಅವರು ಹಾಗೆ ಮಾಡಬಹುದಿರುತ್ತದೆ ಮತ್ತು ಪ್ರತಿಸ್ಪಂದಕರು ಆಗ "ಇನ್ನೂ ಯಾರಿಗಾದರೂ ಸಹಾಯ ಬೇಕಿದ್ದಲ್ಲಿ ಜೋರಾಗಿ ಕೂಗಿ ಇಲ್ಲವೇ ನಿಮ್ಮ ಕೈಗಳನ್ನು ಮೇಲಕ್ಕೆತ್ತಿ" ಎಂದು ಕೇಳುತ್ತಾರೆ; ಇದು ಪ್ರತಿಕ್ರಿಯಾಶೀಲರಾಗಿರುವ, ಅದರೂ ಚಲಿಸಲು ಅಸಮರ್ಥರಾಗಿರಬಹುದಾದ ಇನ್ನಷ್ಟು ರೋಗಿಗಳನ್ನು ಗುರುತಿಸುತ್ತದೆ. ನಿರೀಕ್ಷಿಸುತ್ತಿರುವ ರೋಗಿಗಳು, ಅಥವಾ ತತ್‌ಕ್ಷಣದ ನೆರವಿನ ಅಗತ್ಯದಲ್ಲಿರುವ ಉಳಿದ ರೋಗಿಗಳನ್ನು ಕ್ಷಿಪ್ರವಾಗಿ ನಿರ್ಣಯಿಸುವುದು ಪ್ರತಿಸ್ಪಂದಕರಿಗೆ ಈಗ ಸಾಧ್ಯವಾಗುತ್ತದೆ. ಆ ಹಂತದಿಂದ ಮೊದಲ್ಗೊಂಡು, ಮೊದಲ ಪ್ರತಿಸ್ಪಂದಕನು ತತ್‌ಕ್ಷಣದ ನಿಗಾವಣೆಯ ಅಗತ್ಯದಲ್ಲಿರುವ ರೋಗಿಗಳನ್ನು ತಕ್ಷಣವೇ ಗುರುತಿಸಬಲ್ಲವನಾಗುತ್ತಾನೆ; ಅದೇ ವೇಳೆಗೆ ಸನ್ನಿವೇಶದ ಅಗಾಧತೆಯಿಂದ ತನ್ನ ಚಿತ್ತಸ್ಥೈರ್ಯವನ್ನು ಕುಂದಿಸಿಕೊಳ್ಳದೆ ಅಥವಾ ದುಗುಡಕ್ಕೆ ಈಡಾಗದೆ ಸಮಸ್ಥಿತಿಯನ್ನು ಅವನು ಕಾಯ್ದುಕೊಂಡಿರುತ್ತಾನೆ.
ಹಿಮ್ಮೊಗದ ಚಿಕಿತ್ಸೆಯ ಸರದಿ ನಿರ್ಧಾರ
[ಬದಲಾಯಿಸಿ]ಮೇಲೆ ನಮೂದಿಸಲಾಗಿರುವ ಚಿಕಿತ್ಸೆಯ ಸರದಿ ನಿರ್ಧಾರದ ಶಿಷ್ಟ ಪರಿಪಾಠಗಳ ಜೊತೆಗೆ, ಹೆಚ್ಚು ತೀವ್ರಸ್ವರೂಪದದಲ್ಲಿ ಗಾಯಗೊಂಡವರಿಗಿಂತ ಮಿಗಿಲಾಗಿ ಕೆಲವೊಮ್ಮೆ ಕಡಿಮೆ ಗಾಯಗೊಂಡವರು ಉಪಚರಿಸಲ್ಪಡುವ ರೋಗಸ್ಥಿತಿಗಳ ಉದಾಹರಣೆಗಳೂ ಇವೆ. ಯುದ್ಧದಂಥ ಒಂದು ಸನ್ನಿವೇಶದಲ್ಲಿ ಇದು ಉದ್ಭವವಾಗಬಹುದಾಗಿದ್ದು, ಯುದ್ಧದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಕದನಕ್ಕೆ ಯೋಧರು ಮರಳುವುದು ಸೇನಾ ಸಂದರ್ಭದ ಅಗತ್ಯವಾಗಿರುತ್ತದೆ. ಇದೇ ರೀತಿಯಲ್ಲಿ, ವೈದ್ಯಕೀಯ ಸಂಪನ್ಮೂಲಗಳು ಸೀಮಿತವಾಗಿರುವ, ಬದುಕುಳಿಯುವ ಸಂಭವವಿದ್ದರೂ ಮುಂದುವರಿದ ವೈದ್ಯಕೀಯ ಆರೈಕೆಯ ಅಗತ್ಯವಿರುವ ರೋಗಿಗಳಿಗೋಸ್ಕರ ಸಂಪನ್ಮೂಲಗಳನ್ನು ಸಂರಕ್ಷಿಸುವ ಹಟಾತ್ತಾದ ವಿಪತ್ತಿನ ಸನ್ನಿವೇಶಗಳಲ್ಲಿ ಇದು ಉದ್ಭವವಾಗಬಹುದು.[೧೩] ಇದು ಉದ್ಭವವಾಗಬಹುದಾದ ಇನ್ನೂ ಅನೇಕ ಸನ್ನಿವೇಶಗಳಿವೆ. ಹಾನಿಗೊಳಗಾದ ರೋಗಿಗಳ ಪೈಕಿ ಗಣನೀಯ ಸಂಖ್ಯೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳಿದ್ದಾಗ, ಮುಂಬರುವ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ಒಂದು ವೇಳೆ ವೈದ್ಯಕೀಯ ಸಂಪನ್ಮೂಲಗಳು ಆಗಲೇ ವಿಸ್ತರಿಸಲ್ಪಟ್ಟಿದ್ದರೆ, ಅವರು ಆರೈಕೆಯ ಒದಗಿಸುವಿಕೆಯನ್ನು ಮುಂದುವರಿಸಲು ಉಳಿದುಕೊಳ್ಳುತ್ತಾರೆ ಎಂಬುದನ್ನು ಖಾತ್ರಿಪಡಿಸಲು ಇದು ಪ್ರಯೋಜನಕಾರಿಯಾಗಿರಲು ಸಾಧ್ಯವಿದೆ. ತಂಪಾದ ನೀರಿನಲ್ಲಿನ ಮುಳುಗುವಿಕೆಯ ಘಟನೆಗಳಲ್ಲಿ, ಹಿಮ್ಮೊಗದ ಚಿಕಿತ್ಸೆಯ ಸರದಿ ನಿರ್ಧಾರವನ್ನು ಬಳಸುವುದು ಸಾಮಾನ್ಯವಾಗಿದೆ. ಏಕೆಂದರೆ ಬಿಸಿ ನೀರಿಗೆ ಹೋಲಿಸಿದಾಗ, ತಂಪಾದ ನೀರಿನಲ್ಲಿ ಮುಳುಗಿದ ಹಾನಿಗೊಳಗಾದವರಿಗೆ ತತ್‌ಕ್ಷಣದ ಮೂಲಭೂತ ಜೀವನಾಧಾರವನ್ನು ನೀಡಿದರೆ ಅವರು ದೀರ್ಘಾವಧಿಯವರೆಗೆ ಬದುಕಬಲ್ಲರು ಮತ್ತು ಅನೇಕವೇಳೆ, ಬದುಕಿಸಲ್ಪಟ್ಟವರು ಹಾಗೂ ಸ್ವತಃ ಸ್ವತಂತ್ರವಾಗಿ ಉಸಿರಾಡಬಲ್ಲವರು ಕನಿಷ್ಟತಮ ನೆರವು ಅಥವಾ ಯಾವುದೇ ನೆರವಿಲ್ಲದೆ ಸುಧಾರಿಸಿಕೊಳ್ಳಬಲ್ಲರು.[೧೪]
ರೋಗಿಗಳಿಗೆ ಗುರುತುಪಟ್ಟಿ ಅಂಟಿಸುವಿಕೆ
[ಬದಲಾಯಿಸಿ]ವೈದ್ಯಕೀಯ ಅಥವಾ ವೈದ್ಯ ಸಹಾಯಕ ಸಿಬ್ಬಂದಿಯಿಂದ ಆರಂಭಿಕ ಹಂತದ ನಿರ್ಧಾರಣೆಯು ಸಂಪೂರ್ಣಗೊಂಡ ನಂತರ, ಪ್ರತಿ ರೋಗಿಗೂ ಚಿಕಿತ್ಸೆಯ ಸರದಿ ನಿರ್ಧಾರ ನಮೂದುಪಟ್ಟಿ ಎಂದು ಕರೆಯಲಾಗುವ ಒಂದು ಸಾಧನದೊಂದಿಗೆ ಗುರುತುಪಟ್ಟಿಯನ್ನು ಅಂಟಿಸಲಾಗುತ್ತದೆ. ಇದು ರೋಗಿಯನ್ನು ಮತ್ತು ಯಾವುದೇ ನಿರ್ಧಾರಣಾ ಆವಿಷ್ಕಾರಗಳನ್ನು ಇದು ಗುರುತಿಸುತ್ತದೆ ಮತ್ತು ವೈದ್ಯಕೀಯ ಚಿಕಿತ್ಸೆಗೆ ಹಾಗೂ ತುರ್ತು ಸಂದರ್ಭದಿಂದ ಸಾಗಾಣಿಕೆ ಮಾಡುವುದಕ್ಕೆ ಸಂಬಂಧಿಸಿದ ರೋಗಿಯ ಅಗತ್ಯದ ಆದ್ಯತೆಯನ್ನು ಇದು ಗುರುತಿಸುತ್ತದೆ. ಚಿಕಿತ್ಸೆಯ ಸರದಿ ನಿರ್ಧಾರದ ನಮೂದುಪಟ್ಟಿಗಳು ಒಂದು ವೈವಿಧ್ಯಮಯ ಸ್ವರೂಪಗಳನ್ನು ತಳೆಯಬಹುದು. ಕೆಲವೊಂದು ದೇಶಗಳು ರಾಷ್ಟ್ರೀಯವಾಗಿ ಪ್ರಮಾಣಕವಾಗಿಸಲ್ಪಟ್ಟ ಒಂದು ಚಿಕಿತ್ಸೆಯ ಸರದಿ ನಿರ್ಧಾರ ನಮೂದುಪಟ್ಟಿಯನ್ನು[೧೫] ಬಳಸಿದರೆ, ಇತರ ದೇಶಗಳಲ್ಲಿ ವಾಣಿಜ್ಯ ಸ್ವರೂಪದಲ್ಲಿ ಲಭ್ಯವಿರುವ ಚಿಕಿತ್ಸೆಯ ಸರದಿ ನಿರ್ಧಾರದ ನಮೂದುಪಟ್ಟಿಗಳನ್ನು ಬಳಸಲಾಗುತ್ತದೆ, ಮತ್ತು ಇವು ಅಧಿಕಾರ ವ್ಯಾಪ್ತಿಯ ಆಯ್ಕೆಯ ಅನುಸಾರ ಬದಲಾಗುತ್ತವೆ.[೧೬] ಅತ್ಯಂತ ಸಾಮಾನ್ಯವಾಗಿ ಬಳಸಲ್ಪಡುವ ವಾಣಿಜ್ಯಸ್ವರೂಪದ ವ್ಯವಸ್ಥೆಗಳಲ್ಲಿ METTAG,[೧೭] SMARTTAG,[೧೮] ಮತ್ತು ಶಿಲುಬೆಯಾಕಾರದ ವ್ಯವಸ್ಥೆಗಳು ಸೇರಿವೆ.[೧೯] ಹೆಚ್ಚು ಮುಂದುವರಿದ ನಮೂದುಪಟ್ಟಿ ಲಗತ್ತಿಸುವ ವ್ಯವಸ್ಥೆಗಳು ವಿಶೇಷ ಗುರುತುಕಾರಕಗಳನ್ನು ಅಳವಡಿಸುತ್ತವೆ; ರೋಗಿಗಳು ಅಪಾಯಕರ ವಸ್ತುಗಳಿಂದ ಕಲುಷಿತಗೊಳಿಸಲ್ಪಟ್ಟಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸೂಚಿಸಲು ಇವನ್ನು ಬಳಸಲಾಗುತ್ತದೆ, ಹಾಗೂ ಪ್ರಕ್ರಿಯೆಯ ಮೂಲಕದ ರೋಗಿಗಳ ಚಲನೆಯ ಜಾಡನ್ನು ಕಂಡುಹಿಡಿಯಲು ಹರಿದು ಎಸೆಯಬಹುದಾದ ಪಟ್ಟಿಗಳನ್ನೂ ಸಹ ಇವು ಬಳಸುತ್ತವೆ. ಇವುಗಳ ಪೈಕಿಯ ಕೆಲವೊಂದು ಜಾಡೀಕರಣ ವ್ಯವಸ್ಥೆಗಳು ಕೈನಲ್ಲಿ ಹಿಡಿಯಬಹುದಾದ ಕಂಪ್ಯೂಟರ್‌ಗಳ ಬಳಕೆಯನ್ನು ಅಳವಡಿಸಲು ಶುರುಮಾಡುತ್ತಿವೆ, ಮತ್ತು ಕೆಲವೊಂದು ನಿದರ್ಶನಗಳಲ್ಲಿ ಬಾರ್‌ಕೋಡ್ ಸ್ಕ್ಯಾನರ್ ಯಂತ್ರಗಳ ಬಳಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಆದಾಗ್ಯೂ, ಚಿಕಿತ್ಸೆಯ ಸರದಿ ನಿರ್ಧಾರದ ನಮೂದುಪಟ್ಟಿಗಳು ಅಲಭ್ಯವಾಗಿದ್ದಾಗ ಅಥವಾ ಸಾಕಷ್ಟಿಲ್ಲದ ಸಂದರ್ಭದಲ್ಲಿ, ಇದರ ಅತ್ಯಂತ ಮೂಲಸ್ವರೂಪದಲ್ಲಿ ಸರಳವಾಗಿ ಬಣ್ಣದ ಪಟ್ಟಿಗಳಿಂದ ರೋಗಿಗಳನ್ನು ಗುರುತುಮಾಡಬಹುದು, ಅಥವಾ ಗುರುತುಕಾರಕ ಲೇಖನಿಗಳಿಂದಲೂ ಇದನ್ನು ಕೈಗೊಳ್ಳಬಹುದು.
ಕಡಿಮೆ ಅಂದಾಜಿನ ಚಿಕಿತ್ಸೆಯ ಸರದಿ ನಿರ್ಧಾರ ಮತ್ತು ಹೆಚ್ಚಿನ ಅಂದಾಜಿನ ಚಿಕಿತ್ಸೆಯ ಸರದಿ ನಿರ್ಧಾರ
[ಬದಲಾಯಿಸಿ]ಕಡಿಮೆ ಅಂದಾಜಿನ ಚಿಕಿತ್ಸೆಯ ಸರದಿ ನಿರ್ಧಾರ ಮತ್ತು ಹೆಚ್ಚಿನ ಅಂದಾಜಿನ ಚಿಕಿತ್ಸೆಯ ಸರದಿ ನಿರ್ಧಾರಗಳು ಎರಡು ಪ್ರಮುಖ ಪರಿಕಲ್ಪನೆಗಳಾಗಿದ್ದು, ಚಿಕಿತ್ಸೆಯ ಸರದಿ ನಿರ್ಧಾರ ಪ್ರಕ್ರಿಯೆಯನ್ನು ಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಅವು ಅನಿವಾರ್ಯವಾಗಿವೆ. ಕಡಿಮೆ ಅಂದಾಜಿನ ಚಿಕಿತ್ಸೆಯ ಸರದಿ ನಿರ್ಧಾರ ಎಂಬುದು ಒಂದು ಅಸ್ವಸ್ಥತೆ ಅಥವಾ ಗಾಯದ ತೀವ್ರತೆಯನ್ನು ಕಡಿಮೆ ಮಟ್ಟದಲ್ಲಿ ಅಂದಾಜಿಸುವ ಪ್ರಕ್ರಿಯೆಯಾಗಿದೆ. ಓರ್ವ ಆದ್ಯತೆ 1ರ (ತತ್‌ಕ್ಷಣದ) ರೋಗಿಯನ್ನು ಓರ್ವ ಆದ್ಯತೆ 2ರ (ವಿಳಂಬಗೊಳಿಸಬಹುದಾದ) ಅಥವಾ ಆದ್ಯತೆ 3ರ (ಕನಿಷ್ಟತಮ) ರೋಗಿ ಎಂಬುದಾಗಿ ವರ್ಗೀಕರಿಸುವುದು ಇದಕ್ಕೊಂದು ಉದಾಹರಣೆಯಾಗಿದೆ. ಐತಿಹಾಸಿಕವಾಗಿ ಹೇಳುವುದಾದರೆ, ಕಡಿಮೆ ಅಂದಾಜಿನ ಚಿಕಿತ್ಸೆಯ ಸರದಿ ನಿರ್ಧಾರದ ಸ್ವೀಕಾರಾರ್ಹ ಪ್ರಮಾಣಗಳು 5%ನಷ್ಟು ಅಥವಾ ಅದಕ್ಕಿಂತ ಕಡಿಮೆ ಮಟ್ಟದಲ್ಲಿದ್ದಂತೆ ಪರಿಗಣಿಸಲ್ಪಟ್ಟಿವೆ. ಹೆಚ್ಚಿನ ಅಂದಾಜಿನ ಚಿಕಿತ್ಸೆಯ ಸರದಿ ನಿರ್ಧಾರ ಎಂಬುದು, ಒಬ್ಬ ವ್ಯಕ್ತಿಯು ಒಂದು ಅಸ್ವಸ್ಥತೆ ಅಥವಾ ಗಾಯವನ್ನು ಅನುಭವಿಸಿದ ಮಟ್ಟವನ್ನು ಹೆಚ್ಚು ಮಟ್ಟದಲ್ಲಿ ಅಂದಾಜಿಸುವ ಪ್ರಕ್ರಿಯೆಯಾಗಿದೆ. ಓರ್ವ ಆದ್ಯತೆ 3ರ (ಕನಿಷ್ಟತಮ) ರೋಗಿಯನ್ನು ಓರ್ವ ಆದ್ಯತೆ 2ರ (ವಿಳಂಬಗೊಳಿಸಬಹುದಾದ) ಅಥವಾ ಆದ್ಯತೆ 1ರ (ತತ್‌ಕ್ಷಣದ) ರೋಗಿಯನ್ನಾಗಿ ವರ್ಗೀಕರಿಸುವುದು ಇದಕ್ಕೊಂದು ಉದಾಹರಣೆಯಾಗಿದೆ. ಕಡಿಮೆ ಅಂದಾಜಿನ ಚಿಕಿತ್ಸೆಯ ಸರದಿ ನಿರ್ಧಾರವನ್ನು ತಪ್ಪಿಸುವ ಒಂದು ಪ್ರಯತ್ನದಲ್ಲಿ, ಹೆಚ್ಚಿನ ಅಂದಾಜಿನ ಚಿಕಿತ್ಸೆಯ ಸರದಿ ನಿರ್ಧಾರದ ಸ್ವೀಕಾರಾರ್ಹ ಮಟ್ಟಗಳು ವಿಶಿಷ್ಟವಾಗಿ 50%ವರೆಗೆ ದಾಖಲಾಗಿವೆ. ಕೆಲವೊಂದು ಅಧ್ಯಯನಗಳು ಸೂಚಿಸುವ ಪ್ರಕಾರ, ವೈದ್ಯ ಸಹಾಯಕರು ಅಥವಾ EMTಗಳ ಬದಲಿಗೆ ಆಸ್ಪತ್ರೆಯ ವೈದ್ಯಕೀಯ ತಂಡಗಳಿಂದ ಚಿಕಿತ್ಸೆಯ ಸರದಿ ನಿರ್ಧರಿಸುವಿಕೆಯು ನಿರ್ವಹಿಸಲ್ಪಟ್ಟಾಗ, ಹೆಚ್ಚಿನ ಅಂದಾಜಿನ ಚಿಕಿತ್ಸೆಯ ಸರದಿ ನಿರ್ಧಾರವು ಸಂಭವಿಸುವ ಸಾಧ್ಯತೆ ಕಡಿಮೆ.[೨೦]
ಪ್ರಾದೇಶಿಕ ಬದಲಾವಣೆ
[ಬದಲಾಯಿಸಿ]ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸೇನೆ
[ಬದಲಾಯಿಸಿ]ಯುದ್ಧವಿರದ ಸನ್ನಿವೇಶವೊಂದರಲ್ಲಿ ಚಿಕಿತ್ಸೆಯ ಸರದಿ ನಿರ್ಧಾರವು ನಾಗರಿಕ ಔಷಧಿ ನೀಡಿಕೆಯ ರೀತಿಯಲ್ಲಿಯೇ ನಿರ್ವಹಿಸಲ್ಪಡುತ್ತದೆ. ಆದಾಗ್ಯೂ, MEDEVAC ಅಥವಾ CASEVACನಲ್ಲಿನ ಅಗ್ರಸ್ಥಾನಕ್ಕೆ ಸಂಬಂಧಿಸಿದಂತೆ ಅಪಘಾತಕ್ಕೊಳಗಾದ ವ್ಯಕ್ತಿಗಳನ್ನು ಶ್ರೇಣೀಕರಿಸಲು, ಒಂದು ಯುದ್ಧಭೂಮಿ ಸನ್ನಿವೇಶಕ್ಕೆ ವೈದ್ಯ ವಿದ್ಯಾರ್ಥಿಗಳು ಹಾಗೂ ವಿಶೇಷ ತಂಡದ ಜನರ ಅಗತ್ಯ ಕಂಡುಬರುತ್ತದೆ. ಅಗ್ರಸ್ಥಾನದಲ್ಲಿರುವ ಚಿಕಿತ್ಸೆಯ ಸರದಿ ನಿರ್ಧಾರದ ವರ್ಗಗಳು (ಸಂಬಂಧಿಸಿದ ವರ್ಣ ಸಂಕೇತಗಳೊಂದಿಗೆ) ಹೀಗಿವೆ:
- ತತ್‌ಕ್ಷಣದ ವರ್ಗ: ಅಪಘಾತಕ್ಕೊಳಗಾದ ವ್ಯಕ್ತಿಗೆ ತತ್‌ಕ್ಷಣದ ವೈದ್ಯಕೀಯ ನಿಗಾವಣೆಯ ಅಗತ್ಯವಿರುತ್ತದೆ ಮತ್ತು ಒಂದು ವೇಳೆ ತಕ್ಷಣವೇ ನಿಗಾವಣೆ ಮಾಡದಿದ್ದರೆ ಆತ ಬದುಕುಳಿಯುವುದಿಲ್ಲ. ಅಪಘಾತಕ್ಕೊಳಗಾದ ವ್ಯಕ್ತಿಯ ಉಸಿರಾಟ, ಅಧಿಕ ರಕ್ತಸ್ರಾವ ನಿಯಂತ್ರಣ, ಅಥವಾ ಆಘಾತ ನಿಯಂತ್ರಣದೊಂದಿಗೆ ಮಾಡಿಕೊಳ್ಳುವ ಯಾವುದೇ ರಾಜಿಯು ಮಾರಕವಾಗಬಲ್ಲದು.
- ವಿಳಂಬಗೊಳಿಸಬಹುದಾದ ವರ್ಗ: ಅಪಘಾತಕ್ಕೊಳಗಾದ ವ್ಯಕ್ತಿಗೆ 6 ಗಂಟೆಗಳೊಳಗಾಗಿ ವೈದ್ಯಕೀಯ ನಿಗಾವಣೆಯ ಅಗತ್ಯವಿರುತ್ತದೆ. ಗಾಯಗಳು ಜೀವಕ್ಕೆ-ಬೆದರಿಕೆಯೊಡ್ಡುವಷ್ಟರ ಮಟ್ಟಿಗೆ ಸಮರ್ಥವಾಗಿರುತ್ತವೆಯಾದರೂ, ಅಪಘಾತಕ್ಕೊಳಗಾದ ವ್ಯಕ್ತಿಗಳು ದೃಢಗೊಳಿಸಲ್ಪಟ್ಟು ಸ್ಥಳಾಂತರಿಕೆಗೆ ಒಳಗಾಗುವವರೆಗೂ ಕಾಯಬಹುದಾಗಿರುತ್ತದೆ.
- ಕನಿಷ್ಟತಮ ವರ್ಗ: "ಗಾಯಗೊಂಡಿರುವಂತೆಯೇ ನಡೆದಾಡುತ್ತಿರುವ" ಅಪಘಾತಕ್ಕೊಳಗಾದ ವ್ಯಕ್ತಿಗೆ ಎಲ್ಲಾ ಉನ್ನತ ಆದ್ಯತೆ ರೋಗಿಗಳ ಸ್ಥಳಾಂತರಿಕೆಯಾದ ನಂತರ ವೈದ್ಯಕೀಯ ನಿಗಾವಣೆಯ ಅಗತ್ಯವಿರುತ್ತದೆ ಮತ್ತು ಅವರ ಸ್ಥಿರೀಕರಣದ ಅಥವಾ ಮೇಲ್ವಿಚಾರಣೆಯ ಅಗತ್ಯ ಕಂಡುಬರದಿರಬಹುದು.
- ನಿರೀಕ್ಷಿಸುತ್ತಿರುವ ವರ್ಗ: ಉನ್ನತ ಆದ್ಯತೆಯ ರೋಗಿಗಳ ಚಿಕಿತ್ಸೆಯೊಂದಿಗೆ ರಾಜಿಮಾಡಿಕೊಳ್ಳದೆಯೇ, ಅಪಘಾತಕ್ಕೊಳಗಾದ ವ್ಯಕ್ತಿಯು ಚುರುಕಾಗಿ ಹೆಚ್ಚಿನ ವೈದ್ಯಕೀಯ ಬೆಂಬಲದೆಡೆಗೆ ಧಾವಿಸುವಂತಿರುವುದಿಲ್ಲ. ತತ್‌ಕ್ಷಣದ ಹಾಗೂ ವಿಳಂಬಗೊಳಿಸಬಹುದಾದ ವರ್ಗದ ರೋಗಿಗಳಿಗೆ ಉಪಚಾರ ನೀಡಿದ ನಂತರ ಆರೈಕೆಯನ್ನು ಬಿಟ್ಟುಬಿಡಬಾರದು ಮತ್ತು ಉಳಿದ ಸಮಯ ಹಾಗೂ ಸಂಪನ್ಮೂಲಗಳನ್ನು ಹಿಡಿತಮಾಡಿ ಬಳಸಬೇಕು.[೨೧]
ಇದಾದ ನಂತರದಲ್ಲಿ, ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ಅಗತ್ಯಾನುಸಾರ ಒಂದು ಸ್ಥಳಾಂತರಿಕೆಯ ಆದ್ಯತೆಯನ್ನು ನೀಡಬೇಕು:
- ತುರ್ತಿನ ಸ್ಥಳಾಂತರಿಕೆ: ಜೀವವನ್ನು ಅಥವಾ ಅವಯವವನ್ನು ಉಳಿಸುವ ಸಲುವಾಗಿ ಎರಡು ಗಂಟೆಗಳೊಳಗಾಗಿ ಸ್ಥಳಾಂತರಿಕೆಯ ಅಗತ್ಯವಿರುತ್ತದೆ.
- ಆದ್ಯತೆ ಯ ಸ್ಥಳಾಂತರಿಕೆ: ನಾಲ್ಕು ಗಂಟೆಗಳೊಳಗಾಗಿ ಸ್ಥಳಾಂತರಿಕೆಯು ಅವಶ್ಯಕವಾಗಿರುತ್ತದೆ; ಇಲ್ಲವಾದಲ್ಲಿ ಅಪಘಾತಕ್ಕೊಳಗಾದ ವ್ಯಕ್ತಿಯ ಸ್ಥಿತಿಯು "ತುರ್ತಿನ" ಸ್ಥಳಾಂತರಿಕೆಯ ಮಟ್ಟಕ್ಕೆ ಹದಗೆಡುತ್ತದೆ.
- ವಾಡಿಕೆಯ ಸ್ಥಳಾಂತರಿಕೆ: ಚಿಕಿತ್ಸೆಯನ್ನು ಸಂಪೂರ್ಣಗೊಳಿಸುವ ಸಲುವಾಗಿ 24 ಗಂಟೆಗಳೊಳಗಾಗಿ ವ್ಯಕ್ತಿಯನ್ನು ಸ್ಥಳಾಂತರಿಸಬೇಕಾಗುತ್ತದೆ.
"ನೌಕಾಪಡೆಯ ಯುದ್ಧ ಸನ್ನಿವೇಶ"ವೊಂದರಲ್ಲಿ, ಲಭ್ಯವಿರುವ ಪೂರೈಕೆಗಳು ಹಾಗೂ ವೈದ್ಯಕೀಯ ಸಿಬ್ಬಂದಿಯ ವಾಸ್ತವಿಕ ಸಾಮರ್ಥ್ಯದೊಂದಿಗೆ ತಂತ್ರೋಪಾಯದ ಸನ್ನಿವೇಶವನ್ನು ಚಿಕಿತ್ಸೆಯ ಸರದಿ ನಿರ್ಧಾರದ ಅಧಿಕಾರಿಯು ತುಲನೆ ಮಾಡಬೇಕಾಗುತ್ತದೆ. ಸನ್ನಿವೇಶವನ್ನು ಅವಲಂಬಿಸಿ ಈ ಪ್ರಕ್ರಿಯೆಯು ಯಾವಾಗಲೂ-ಬದಲಾಗುತ್ತಿರಲು ಸಾಧ್ಯವಿದೆ ಮತ್ತು ಗರಿಷ್ಟ ಪ್ರಮಾಣದ ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ಸಾಧ್ಯವಾದಷ್ಟು ಹೆಚ್ಚಿನ ಮಟ್ಟದಲ್ಲಿ ನೆರವಾಗಲು ಇದು ಪ್ರಯತ್ನಿಸಬೇಕಾಗುತ್ತದೆ.[೨೨]
ಪ್ರಾಥಮಿಕ ಸಮೀಕ್ಷೆ (ಜೀವಕ್ಕೆ-ಬೆದರಿಕೆಯೊಡ್ಡುವ ಗಾಯಗಳನ್ನು ಪತ್ತೆಹಚ್ಚಲು ಮತ್ತು ಉಪಚರಿಸಲು ಇದನ್ನು ಬಳಸಲಾಗುತ್ತದೆ) ಹಾಗೂ ದ್ವಿತೀಯಕ ಸಮೀಕ್ಷೆ (ಜೀವಕ್ಕೆ-ಬೆದರಿಕೆಯೊಡ್ಡದ ಗಾಯಗಳಿಗೆ ಉಪಚರಿಸಲು ಇದನ್ನು ಬಳಸಲಾಗುತ್ತದೆ) ಎಂಬ ಎರಡು ವಿಧಾನಗಳಿಂದ ಈ ಕೆಳಗೆ ನಮೂದಿಸಲಾಗಿರುವ ವರ್ಗಗಳೊಂದಿಗೆ ಕ್ಷೇತ್ರ ನಿರ್ಧಾರಣೆಗಳನ್ನು ನಡೆಸಲಾಗುತ್ತದೆ:
- Iನೇ ವರ್ಗ' ದ ರೋಗಿಗಳು: ಇವರಿಗೆ ಕಿರು ಚಿಕಿತ್ಸೆಯ ಅಗತ್ಯವಿರುತ್ತದೆ ಮತ್ತು ಅಲ್ಪಕಾಲದೊಳಗಾಗಿ ಇವರು ತಮ್ಮ ಕರ್ತವ್ಯಕ್ಕೆ ಮರಳಬಹುದಾಗಿರುತ್ತದೆ.'
- IIನೇ ವರ್ಗ ದ ರೋಗಿಗಳು: ಇವರ ಗಾಯಗಳಿಗೆ ತತ್‌ಕ್ಷಣದ ಜೀವಾಧಾರಕವಾಗಿರುವ ಕ್ರಮಗಳು ಅಗತ್ಯವಾಗಿರುತ್ತವೆ.
- IIIನೇ ವರ್ಗ ದ ರೋಗಿಗಳು: ಜೀವ ಅಥವಾ ಅವಯವದ ನಷ್ಟವಿಲ್ಲದೆಯೇ ಇವರಿಗೆ ನಿರ್ಣಾಯಕ ಚಿಕಿತ್ಸೆಯನ್ನು ವಿಳಂಬಗೊಳಿಸಬಹುದಾಗಿರುತ್ತದೆ.
- VIನೇ ವರ್ಗ ದ ರೋಗಿಗಳು: ವೈದ್ಯಕೀಯ ಸಿಬ್ಬಂದಿಯ ಸಾಮರ್ಥ್ಯ ಮತ್ತು ಸಮಯದ ಆಚೆಗಿನ ವ್ಯಾಪಕ ಆರೈಕೆಯು ಇವರಿಗೆ ಅಗತ್ಯವಾಗಿರುತ್ತದೆ.
ಕೆನಡಾ
[ಬದಲಾಯಿಸಿ]1980ರ ದಶಕದ ಮಧ್ಯಭಾಗದಲ್ಲಿ, ಕೆನಡಾದ ನೋವಾ ಸ್ಕಾಟಿಯಾದ ಹ್ಯಾಲಿಫ್ಯಾಕ್ಸ್‌ನಲ್ಲಿರುವ ವಿಕ್ಟೋರಿಯಾ ಜನರಲ್ ಆಸ್ಪತ್ರೆಯು ತನ್ನ ತುರ್ತು ವಿಭಾಗದಲ್ಲಿ ವೈದ್ಯ ಸಹಾಯಕ ಚಿಕಿತ್ಸೆಯ ಸರದಿ ನಿರ್ಧಾರವನ್ನು ಪರಿಚಯಿಸಿತು. ವೈದ್ಯರ ಹಾಗೂ ಪ್ರಧಾನವಾಗಿ ದಾದಿಯರ ಚಿಕಿತ್ಸೆಯ ಸರದಿ ನಿರ್ಧಾರದ ಮಾದರಿಗಳನ್ನು ಬಳಸಿಕೊಳ್ಳುವ ಉತ್ತರ ಅಮೆರಿಕಾದಲ್ಲಿನ ಇತರ ಎಲ್ಲಾ ಕೇಂದ್ರಗಳಿಗಿಂತ ಭಿನ್ನವಾಗಿ, ಈ ಆಸ್ಪತ್ರೆಯು ಪ್ರಧಾನ ಆರೈಕೆ ಮಟ್ಟದ ವೈದ್ಯ ಸಹಾಯಕರನ್ನು ಬಳಸಿಕೊಳ್ಳುವ ಪರಿಪಾಠವನ್ನು ಶುರುಮಾಡಿತು; ತುರ್ತು ವಿಭಾಗದಲ್ಲಿ ದಾಖಲಾಗುವ ರೋಗಿಗಳ ಮೇಲೆ ಚಿಕಿತ್ಸೆಯ ಸರದಿ ನಿರ್ಧಾರವನ್ನು ನಿರ್ವಹಿಸಲು ಈ ಕ್ರಮ ಕೈಗೊಳ್ಳಲಾಯಿತು. 1997ರಲ್ಲಿ, ನಗರದ ಎರಡು ಅತಿದೊಡ್ಡ ಆಸ್ಪತ್ರೆಗಳ ವಿಲೀನವನ್ನನುಸರಿಸಿ ವಿಕ್ಟೋರಿಯಾ ಜನರಲ್ ಆಸ್ಪತ್ರೆಯ ತುರ್ತು ವಿಭಾಗವು ಮುಚ್ಚಲ್ಪಟ್ಟಿತು. ನ್ಯೂ ಹ್ಯಾಲಿಫ್ಯಾಕ್ಸ್ ಚಿಕಿತ್ಸಾಲಯದಲ್ಲಿ ನೆಲೆಗೊಂಡಿರುವ ನಗರದ ಏಕೈಕ ವಯಸ್ಕ ತುರ್ತು ವಿಭಾಗಕ್ಕೆ ವೈದ್ಯ ಸಹಾಯಕರ ಚಿಕಿತ್ಸೆಯ ಸರದಿ ನಿರ್ಧಾರ ವ್ಯವಸ್ಥೆಯು ವರ್ಗಾವಣೆಗೊಂಡಿತು. ಒಂದು ಸರ್ವವ್ಯಾಪಿ ಇನ್‌ಫ್ಲುಯೆನ್ಸ ವ್ಯಾಧಿಯು ಸಂಭವಿಸಿದಾಗ ಚಿಕಿತ್ಸೆಯಿಂದ ಯಾರನ್ನು ಹೊರಗಿಡಬೇಕು ಎಂಬುದರ ಕುರಿತಾಗಿ, 2006ರಲ್ಲಿ ಚಿಕಿತ್ಸೆಯ ಸರದಿ ನಿರ್ಧಾರದ ನಿಯಮಾವಳಿಯೊಂದನ್ನು ರೂಪಿಸಲಾಯಿತು. ಓಂಟಾರಿಯೋ ಸರ್ಕಾರದ ಅಣತಿಯ ಮೇರೆಗೆ ವಿಷಮಸ್ಥಿತಿಯ-ಆರೈಕೆಯ ವೈದ್ಯರ ಒಂದು ತಂಡವು ಇದನ್ನು ರೂಪಿಸಿತು.
ವಾಡಿಕೆಯ ತುರ್ತುಸ್ಥಿತಿಗಳಿಗೆ ಸಂಬಂಧಿಸಿದಂತೆ, ಕೆನಡಾದಲ್ಲಿನ ಅನೇಕ ಪ್ರದೇಶಗಳು, ಎಲ್ಲಾ ಒಳಬರುವ ರೋಗಿಗಳಿಗೆ ಸಂಬಂಧಿಸಿದಂತೆ ಕೆನಡಾದ ಚಿಕಿತ್ಸೆಯ ಸರದಿ ನಿರ್ಧಾರ ಹಾಗೂ ತೀಕ್ಷ್ಣತಾ ಮಾಪಕವನ್ನು ಈಗ ಬಳಸಿಕೊಳ್ಳುತ್ತವೆ.[೨೩] ಈ ವ್ಯವಸ್ಥೆಯು ರೋಗಿಗಳ ಗಾಯ ಹಾಗೂ ಶರೀರ ವಿಜ್ಞಾನದ ಆವಿಷ್ಕಾರಗಳ ಮೇಲೆ ರೋಗಿಗಳನ್ನು ವರ್ಗೀಕರಿಸುತ್ತದೆ, ಮತ್ತು 1ರಿಂದ 5ರವರೆಗಿನ ತೀವ್ರತೆಯ ಆಧಾರದ ಮೇಲೆ ಅವರಿಗೆ ಶ್ರೇಣಿಯನ್ನು ನೀಡುತ್ತದೆ. ವೈದ್ಯ ಸಹಾಯಕರು ಹಾಗೂ E/R ದಾದಿಯರು ಈ ಇಬ್ಬರಿಂದಲೂ ಈ ಮಾದರಿಯು ಬಳಸಲ್ಪಡುತ್ತದೆ, ಮತ್ತು ಕೆಲವೊಂದು ನಿದರ್ಶನಗಳಲ್ಲಿ ಆಗಮನ-ಪೂರ್ವದ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಅದು ಬಳಸಲ್ಪಡುತ್ತದೆ.
ದಾದಿಯರು ಹಾಗೂ ವೈದ್ಯ ಸಹಾಯಕರಿಬ್ಬರಿಗೂ ಸಂಬಂಧಿಸಿದಂತೆ ಉಲ್ಲೇಖದ ಒಂದು ಸಾಮಾನ್ಯ ಚೌಕಟ್ಟನ್ನು ಈ ಮಾದರಿಯು ಒದಗಿಸುತ್ತದೆಯಾದರೂ, ಫಲಿತಾಂಶಗಳನ್ನು ದಾಖಲಿಸುವುದರ (ನಿರ್ದಿಷ್ಟವಾಗಿ E/Rನಲ್ಲಿ ಲಭ್ಯವಿರುವ ಹಾಸಿಗೆಗಳ ಒಂದು ಕೊರತೆಯಿದ್ದಾಗ) ಕುರಿತಾಗಿ ಈ ಎರಡು ಗುಂಪುಗಳು ಎಲ್ಲ ಸಮಯಗಳಲ್ಲೂ ಸಮ್ಮತಿಸುವುದಿಲ್ಲ. AMPDSನ್ನು (ಎಷ್ಟು ಶೇಕಡಾವಾರು ಡೆಲ್ಟಾ ಕರೆಗಳು CTASನ 1,2,3 ಇತ್ಯಾದಿಗಳ ಮರಳುವಿಕೆಯ ಆದ್ಯತೆಗಳನ್ನು ಹೊಂದಿವೆ ಎಂಬುದನ್ನು) ಬಳಸಿಕೊಂಡು ಕರೆಗಳ ಚಿಕಿತ್ಸಾ-ಪೂರ್ವ ಸರದಿ ನಿರ್ಧಾರದ ನಿಖರತೆಯನ್ನು ಒರೆಗೆ ಹಚ್ಚುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಮುದಾಯಗಳಲ್ಲಿ ಇದು ಒಂದು ವಿಧಾನವಾಗಿಯೂ ಪಾತ್ರವಹಿಸುತ್ತದೆ ಮತ್ತು ಈ ಆವಿಷ್ಕಾರಗಳು ಓಂಟಾರಿಯೋದಲ್ಲಿನ ನಗರಸಭಾ ಕಾರ್ಯನಿರ್ವಹಣೆಯ ಒರೆಗೆ ಹಚ್ಚುವಿಕೆಯ ಒಂದು ಉಪಕ್ರಮದ ಭಾಗವಾಗಿ ವರದಿಮಾಡಲ್ಪಟ್ಟಿವೆ. ಕುತೂಹಲಕರವಾಗಿರುವ ವಿಷಯವೆಂದರೆ, ಈ ಮಾದರಿಯು ಸಾಮೂಹಿಕ ಅಪಘಾತ ಚಿಕಿತ್ಸೆಯ ಸರದಿ ನಿರ್ಧಾರಕ್ಕೆ ಸಂಬಂಧಿಸಿದಂತೆ ಪ್ರಸಕ್ತವಾಗಿ ಬಳಸಲ್ಪಡುತ್ತಿಲ್ಲ, ಮತ್ತು START ನಿಯಮಾವಳಿ ಹಾಗೂ METTAG ಚಿಕಿತ್ಸೆಯ ಸರದಿ ನಿರ್ಧಾರ ನಮೂದುಪಟ್ಟಿಗಳಿಂದ ಅದು ಬದಲಾಯಿಸಲ್ಪಟ್ಟಿದೆ.[೨೪]
ಯುನೈಟೆಡ್ ಕಿಂಗ್‌ಡಂ
[ಬದಲಾಯಿಸಿ]UKಯಲ್ಲಿ, ಸ್ಮಾರ್ಟ್ ಇನ್ಸಿಡೆಂಟ್ ಕಮ್ಯಾಂಡ್ ಸಿಸ್ಟಮ್ Archived 2006-05-19 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬುದು ಸಾಮಾನ್ಯವಾಗಿ ಬಳಸಲ್ಪಡುವ ಚಿಕಿತ್ಸೆಯ ಸರದಿ ನಿರ್ಧಾರ ವ್ಯವಸ್ಥೆಯಾಗಿದ್ದು, ಇದನ್ನು MIMMS (ಮೇಜರ್ ಇನ್ಸಿಡೆಂಟ್ ಮೆಡಿಕಲ್ ಮ್ಯಾನೇಜ್‌ಮೆಂಟ್ (ಅಮಡ್) ಸಪೋರ್ಟ್) ತರಬೇತಿ ಕಾರ್ಯಕ್ರಮದಲ್ಲಿ ಕಲಿಸಲಾಗುತ್ತದೆ.[೨೫] UK ಸಶಸ್ತ್ರ ಪಡೆಗಳು ಕೂಡಾ ತಮ್ಮ ವಿಶ್ವಾದ್ಯಂತದ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಈ ವ್ಯವಸ್ಥೆಯನ್ನು ಬಳಸುತ್ತಿವೆ. ಇದು ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ಆದ್ಯತೆ 1ರಿಂದ (ಅತ್ಯಂತ ತುರ್ತಿನ) ಆದ್ಯತೆ 4ರವರೆಗೆ (ನಿರೀಕ್ಷಿಸುತ್ತಿರುವ, ಅಂದರೆ, ಸಾಯುವ ಸಂಭವವಿರುವವರು) ದರ್ಜೆಯನ್ನು ನೀಡಿ ವರ್ಗೀಕರಿಸುತ್ತದೆ.[೨೬]
UK ಮತ್ತು ಯುರೋಪ್‌ನಲ್ಲಿ ಬಳಸಲ್ಪಡುವ ಚಿಕಿತ್ಸೆಯ ಸರದಿ ನಿರ್ಧಾರದ ಪ್ರಕ್ರಿಯೆಯು ಕೆಲವೊಮ್ಮೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳದ್ದನ್ನು ಹೋಲುವಂತೆ ಇರುತ್ತದಾದರೂ, ವರ್ಗಗಳು ವಿಭಿನ್ನವಾಗಿರುತ್ತವೆ[೨೭]:
- ಜಡ ವರ್ಗ- ಇದರಲ್ಲಿನ ರೋಗಿಗಳು 0ಯಿಂದ 2ರವರೆಗಿನ ಒಂದು ದೈಹಿಕ ಆಘಾತದ ಅಂಕವನ್ನು ಹೊಂದಿರುತ್ತಾರೆ ಮತ್ತು ಸಹಾಯದ ವ್ಯಾಪ್ತಿಯಿಂದ ಅವರು ಆಚೆಗಿರುತ್ತಾರೆ.
- ತತ್‌ಕ್ಷಣದ ವರ್ಗ - ಇದರಲ್ಲಿನ ರೋಗಿಗಳು 3ರಿಂದ 10ರವರೆಗಿನ ಒಂದು ದೈಹಿಕ ಆಘಾತದ ಅಂಕವನ್ನು (RTS) ಹೊಂದಿರುತ್ತಾರೆ ಮತ್ತು ಇವರಿಗೆ ತತ್‌ಕ್ಷಣದ ನಿಗಾವಣೆಯ ಅಗತ್ಯವಿರುತ್ತದೆ
- ತುರ್ತಿನ ವರ್ಗ - ಇದರಲ್ಲಿನ ರೋಗಿಗಳು 10 ಅಥವಾ 11ರ ಒಂದು ದೈಹಿಕ ಆಘಾತದ ಅಂಕವನ್ನು ಹೊಂದಿರುತ್ತಾರೆ ಮತ್ತು ನಿರ್ಣಾಯಕ ವೈದ್ಯಕೀಯ ನಿಗಾವಣೆಗೆ ಸಾಗಿಸಲ್ಪಡುವುದಕ್ಕೆ ಮುಂಚಿತವಾಗಿ ಒಂದು ಅಲ್ಪಾವಧಿಯವರೆಗೆ ಇವರು ಕಾಯಬಹುದಾಗಿರುತ್ತದೆ
- ವಿಳಂಬಗೊಳಿಸಬಹುದಾದ ವರ್ಗ - ಇದರಲ್ಲಿನ ರೋಗಿಗಳು 12ರಷ್ಟಿರುವ (ಗರಿಷ್ಟ ಅಂಕ) ಒಂದು ದೈಹಿಕ ಆಘಾತದ ಅಂಕವನ್ನು ಹೊಂದಿರುತ್ತಾರೆ ಮತ್ತು ಆಘಾತದ ಸಂದರ್ಭದಿಂದ ಅವರನ್ನು ಸಾಗಿಸುವುದಕ್ಕೆ ಮುಂಚಿತವಾಗಿ ಅವರನ್ನು ವಿಳಂಬಗೊಳಿಸಬಹುದಾಗಿರುತ್ತದೆ
ಫಿನ್ಲೆಂಡ್
[ಬದಲಾಯಿಸಿ]ಒಂದು ಅಪಘಾತದ ಸಂದರ್ಭದಲ್ಲಿ ಚಿಕಿತ್ಸೆಯ ಸರದಿ ನಿರ್ಧಾರವನ್ನು ಓರ್ವ ವೈದ್ಯ ಸಹಾಯಕ ಅಥವಾ ಓರ್ವ ತುರ್ತು ವೈದ್ಯನು ನಿರ್ವಹಿಸುತ್ತಾನೆ. ಇದಕ್ಕಾಗಿ ನಾಲ್ಕು-ಮಟ್ಟದ ಮಾಪಕವನ್ನು ಅವರು ಬಳಸುತ್ತಾರೆ. ಅವುಗಳೆಂದರೆ: ಕಾಯಲಾಗದ, ಕಾಯಬೇಕಾಗಿರುವ, ಕಾಯಬಲ್ಲ ಮತ್ತು ಕಳೆದುಹೋದ ಮಟ್ಟಗಳು.
ಫ್ರಾನ್ಸ್
[ಬದಲಾಯಿಸಿ]ಫ್ರಾನ್ಸ್‌ನಲ್ಲಿ, ಒಂದು ವಿಕೋಪದ ಸಂದರ್ಭದಲ್ಲಿನ ಆಸ್ಪತ್ರೆ-ಪೂರ್ವದ ಚಿಕಿತ್ಸೆಯ ಸರದಿ ನಿರ್ಧಾರವು ನಾಲ್ಕು-ಮಟ್ಟದ ಮಾಪಕವೊಂದನ್ನು ಬಳಸುತ್ತದೆ. ಅವುಗಳೆಂದರೆ:
- DCD: ಡಿಸಿಡಿ (ಸತ್ತವರು), ಅಥವಾ ಅರ್ಜೆನ್ಸ್ ಡೇಪಾಸ್ಸೀ (ಜರೂರಿನ ಆಚೆಯಿರುವವರು)
- UA: ಅರ್ಜೆನ್ಸ್ ಆಬ್‌ಸಲ್ಯೂ (ಸಂಪೂರ್ಣ ಜರೂರಿನ ಅಗತ್ಯವಿರುವವರು)
- UR: ಅರ್ಜೆನ್ಸ್ ರಿಲೇಟಿವ್ (ತುಲನಾತ್ಮಕ ಜರೂರಿನ ಅಗತ್ಯವಿರುವವರು)
- UMP: ಅರ್ಜೆನ್ಸ್ ಮೆಡಿಕೊ-ಸೈಕಾಲಜಿಕ್ (ವೈದ್ಯಕೀಯ-ಮಾನಸಿಕ ಜರೂರು) ಅಥವಾ ಇಂಪ್ಲಿಕ್ (ಸೂಚಿಸಲ್ಪಟ್ಟವರು, ಅಂದರೆ ಲಘುವಾಗಿ ಗಾಯಗೊಂಡವರು ಅಥವಾ ಕೇವಲ ಮಾನಸಿಕವಾಗಿ ಆಘಾತಕ್ಕೊಳಗಾದವರು).
ಮೆಡಿಸಿನ್ ಟ್ರೈಯುರ್ (ವಿಂಗಡಿಸುವ ವೈದ್ಯ ವಿದ್ಯಾರ್ಥಿ) ಎಂದು ಕರೆಯಲ್ಪಡುವ ಓರ್ವ ವೈದ್ಯನಿಂದ ಈ ಚಿಕಿತ್ಸೆಯ ಸರದಿ ನಿರ್ಧಾರವು ನಿರ್ವಹಿಸಲ್ಪಡುತ್ತದೆ.[೨೮] ಈ ಚಿಕಿತ್ಸೆಯ ಸರದಿ ನಿರ್ಧಾರವನ್ನು ಕ್ಷೇತ್ರ ಆಸ್ಪತ್ರೆಯಲ್ಲಿ (PMA–ಪೋಸ್ಟೆ ಮೆಡಿಕಲ್ ಅವಾನ್ಸ್ , ಅಂದರೆ, ಮುಂದುವರಿದ ವೈದ್ಯಕೀಯ ತಾಣ) ಸಾಮಾನ್ಯವಾಗಿ ನಿರ್ವಹಿಸಲಾಗುತ್ತದೆ. ನಿಸ್ಸಂದಿಗ್ಧವಾದ ಜರೂರತ್ತುಗಳನ್ನು ಸ್ಥಳದಲ್ಲೇ ಸಾಮಾನ್ಯವಾಗಿ ಉಪಚರಿಸಲಾಗುತ್ತದೆ (PMAಯು ಒಂದು ಶಸ್ತ್ರಚಿಕಿತ್ಸಾ ಕೋಣೆಯನ್ನು ಹೊಂದಿದೆ) ಅಥವಾ ಒಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ. ತುಲನಾತ್ಮಕವಾದ ಜರೂರುಗಳನ್ನು ವೀಕ್ಷಣೆಯಲ್ಲಿರಿಸಿ, ಒಂದು ಸ್ಥಳಾಂತರಿಕೆಗಾಗಿ ಕಾಯಲಾಗುತ್ತದೆ. ಇದರಲ್ಲಿ ಭಾಗಿಯಾದವರನ್ನು CUMP–ಸೆಲ್ಯುಲೆ ಡಿ'ಅರ್ಜೆನ್ಸ್ ಮೆಡಿಕೊ-ಸೈಕಾಲಜಿಕ್ (ವೈದ್ಯಕೀಯ-ಮಾನಸಿಕ ಜರೂರು ಘಟಕ) ಎಂಬ ಮತ್ತೊಂದು ವ್ಯವಸ್ಥೆಗೆ ಈಡುಮಾಡಲಾಗುತ್ತದೆ; ಇದೊಂದು ವಿಶ್ರಾಂತಿಯ ವಲಯವಾಗಿದ್ದು, ಆಹಾರ ಮತ್ತು ಪ್ರಾಯಶಃ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಹೊಂದಿರುತ್ತದೆ, ಮತ್ತು ಸಂಕ್ಷಿಪ್ತ ಪ್ರತಿಕ್ರಿಯಾಶೀಲ ಬುದ್ಧಿವಿಕಲ್ಪದ ಆರೈಕೆ ನಡೆಸಲು ಹಾಗೂ ಆಘಾತಕಾರಿಯಾದ ಒತ್ತಡದ-ನಂತರದ ಅಪಸಾಮಾನ್ಯತೆಯನ್ನು ತಪ್ಪಿಸಲು ಓರ್ವ ಮನೋಶ್ಯಾಸ್ತ್ರಜ್ಞನನ್ನು ಅಲ್ಲಿ ನಿಯೋಜಿಸಲಾಗಿರುತ್ತದೆ.
ಆಸ್ಪತ್ರೆಯೊಂದರ ತುರ್ತು ಕೋಣೆಯಲ್ಲಿ MAO–ಮೆಡಿಸಿನ್ ಡಿ'ಆಕ್ಯುಯೆಲಿ ಎಟ್ ಡಿ'ಓರಿಯೆಂಟೇಷನ್ (ದಾಖಲು ಮಾಡಿಕೊಳ್ಳುವ ಮತ್ತು ನೆಲೆಸೂಚಿಸುವ ವೈದ್ಯ) ಎಂದು ಕರೆಯಲ್ಪಡುವ ಒಬ್ಬ ವೈದ್ಯ ಹಾಗೂ IOA–ಇನ್ಫರ್ಮಿಯರೆ ಡಿ'ಆರ್ಗನೈಸೇಷನ್ ಎಟ್ ಡಿ'ಆಕ್ಯುಯೆಲ್ (ಸಂಸ್ಥೆಯ ಮತ್ತು ದಾಖಲು ಮಾಡಿಕೊಳ್ಳುವ ದಾದಿ) ಎಂಬ ಓರ್ವ ದಾದಿಯು ಚಿಕಿತ್ಸೆಯ ಸರದಿ ನಿರ್ಧಾರವನ್ನು ನಿರ್ವಹಿಸುತ್ತಾರೆ. ಕೆಲವೊಂದು ಆಸ್ಪತ್ರೆಗಳು ಹಾಗೂ ಸಮು ಸಂಸ್ಥೆಗಳು ಈಗ ಎಲ್ಲೆಡೆಗೆ ಅನ್ವಯವಾಗುವ "ಶಿಲುಬೆಯಾಕಾರದ" ಕಾರ್ಡ್‌ನ್ನು ಬಳಸುತ್ತವೆ.
ವೈದ್ಯಕೀಯ ತುರ್ತುಸ್ಥಿತಿಗಳ ದೂರವಾಣಿ ಬೇಡಿಕೆಗಳಿಗೆ ಸಂಬಂಧಿಸಿದಂತೆ ಫ್ರಾನ್ಸ್ ತನ್ನ ಸಮು ವೈದ್ಯಕೀಯ ನಿಯಂತ್ರಣಾ ಕೇಂದ್ರಗಳಲ್ಲಿ ಒಂದು ದೂರವಾಣಿ ಚಿಕಿತ್ಸೆಯ ಸರದಿ ನಿರ್ಧಾರ ವ್ಯವಸ್ಥೆಯನ್ನು ಹೊಂದಿದೆ. ಈ ಉದ್ದೇಶಕ್ಕಾಗಿ ಸದರಿ ವ್ಯವಸ್ಥೆಯು ಉಚಿತವಾದ 15 ವೈದ್ಯಕೀಯ ರಾಷ್ಟ್ರೀಯ ನೇರ ಸಂಪರ್ಕವನ್ನು ಬಳಕೆಮಾಡಿಕೊಳ್ಳುತ್ತದೆ. ಯಾವುದು ಅತ್ಯಂತ ಪರಿಣಾಮಕಾರಿ ಪರಿಹಾರೋಪಾಯ ಎಂಬುದನ್ನು "ವೈದ್ಯಕೀಯ ವೈದ್ಯ ನಿಯಂತ್ರಕ"ನು ತೀರ್ಮಾನಿಸುತ್ತಾನೆ = ತುರ್ತು ದೂರದ ಔಷಧಿ ಅಥವಾ ಒಂದು ಆಂಬ್ಯುಲನ್ಸ್, ಓರ್ವ ಸಾಮಾನ್ಯ ವೈದ್ಯ, ಅಥವಾ ಓರ್ವ ವೈದ್ಯ+ ದಾದಿ + ಆಂಬ್ಯುಲನ್ಸ್ ಸಹಾಯಕ, ಆಸ್ಪತ್ರೆ ಮೂಲದ MICU (ಮೊಬೈಲ್ ಇಂಟೆನ್ಸಿವ್ ಕೇರ್ ಯುನಿಟ್-ಸಂಚಾರಿ ತೀವ್ರ ನಿಗಾ ಘಟಕ) ರವಾನೆ ಈ ರೀತಿಯಲ್ಲಿ ಸಂದರ್ಭಾನುಸಾರ ಯಾವುದು ಪರಿಣಾಮಮಾರಿ ಎನಿಸುತ್ತದೋ ಅದನ್ನು ಆತ ತೀರ್ಮಾನಿಸುತ್ತಾನೆ.
ಜರ್ಮನಿ
[ಬದಲಾಯಿಸಿ]ಗಾಯಗಳ ಪೂರ್ವಭಾವಿ ನಿರ್ಧಾರಣೆಯನ್ನು ಆ ಸಂದರ್ಭದಲ್ಲಿ ಹಾಜರಿರುವ ಮೊದಲ ಆಂಬ್ಯುಲನ್ಸ್ ಸಿಬ್ಬಂದಿಯು ಸಾಮಾನ್ಯವಾಗಿ ಮಾಡುತ್ತಾರೆ; ಸದರಿ ಸಂದರ್ಭದಲ್ಲಿ ಮೊದಲ ನೊಟಾರ್ಜ್ಟ್ ಆಗಮಿಸಿ ಸದರಿ ಕೆಲಸವನ್ನು ಕೈಗೊಂಡಿರುವಂತೆ ಭಾವಿಸಿ ಈ ಪಾತ್ರವನ್ನು ನಿರ್ವಹಿಸಲಾಗುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ, ಅಲ್ಲಿ ಹೃದಯ-ಶ್ವಾಸಕೋಶದ ಪುನರುಜ್ಜೀವನವು ಕಂಡುಬರುವುದಿಲ್ಲವಾದ್ದರಿಂದ, ಸ್ವತಃ ಉಸಿರಾಡುವಷ್ಟು ಸಮರ್ಥರಿರದ ರೋಗಿಗಳನ್ನು ಅಥವಾ ಅವರ ಗಾಳಿದಾರಿಗಳನ್ನು ಶುದ್ಧಗೊಳಿಸಿ ನಂತರ ಪ್ರಸರಣವನ್ನು ತೋರಿಸುವ ರೋಗಿಗಳನ್ನು "ಸತ್ತವರು" ಎಂದು ನಮೂದಿಸಲಾಗುತ್ತದೆ. ಅಷ್ಟೇ ಅಲ್ಲ, ಪ್ರತಿಯೊಂದು ದೊಡ್ಡ ಗಾಯವೂ ತಾನೇತಾನಾಗಿ ಒಂದು ಕೆಂಪು ನಮೂದುಪಟ್ಟಿಗೆ ದಾಖಲಾಗುವ ಅರ್ಹತೆಯನ್ನು ಪಡೆದುಬಿಡುತ್ತದೆ ಎಂದೇನೂ ಇಲ್ಲ. ಒಂದು ಆಘಾತಕಾರಿಯಾದ ಮುಂದೋಳಿನ ಅಂಗಚ್ಛೇದನೆಗೆ ಈಡಾದ ಓರ್ವ ರೋಗಿಯು, ಹಳದಿ ನಮೂದುಪಟ್ಟಿಯ ವ್ಯಾಪ್ತಿಗೆ ಸೇರಿಕೊಳ್ಳಬಹುದು, ಹಾಗೂ ಅವನ ರಕ್ತಸ್ರಾವವನ್ನು ನಿಲ್ಲಿಸಿ, ನಂತರದಲ್ಲಿ ಸಾಧ್ಯವಾದಾಗ ಆಸ್ಪತ್ರೆಯೊಂದಕ್ಕೆ ಅವನನ್ನು ಕಳಿಸಬಹುದು. ಪೂರ್ವಭಾವಿ ನಿರ್ಧಾರಣೆಯ ನಂತರ, ಒಂದು ಕ್ಷೇತ್ರ ಚಿಕಿತ್ಸಾ ಸೌಕರ್ಯಕ್ಕೆ ರೋಗಿಗಳನ್ನು ಕರೆತಂದ ತಕ್ಷಣವೇ ಒಂದು ಹೆಚ್ಚು ನಿರ್ದಿಷ್ಟವಾದ ಮತ್ತು ಖಚಿತವಾದ ಚಿಕಿತ್ಸೆಯ ಸರದಿ ನಿರ್ಧಾರವು ಅನುಸರಿಸಿಕೊಂಡು ಬರುತ್ತದೆ. ಅಲ್ಲಿ, ಅವರ ಉಡುಪುಗಳನ್ನು ಕಳಚಲಾಗುತ್ತದೆ ಹಾಗೂ ಓರ್ವ ತುರ್ತು ವೈದ್ಯನಿಂದ ಅವರ ಸಂಪೂರ್ಣ ತಪಾಸಣೆಯನ್ನು ನಡೆಸಲಾಗುತ್ತದೆ. ಇದಕ್ಕಾಗಿ ಪ್ರತಿ ರೋಗಿಗೆ ಸರಿಸುಮಾರಾಗಿ 90 ಸೆಕೆಂಡುಗಳಷ್ಟು ಸಮಯ ಹಿಡಿಯುತ್ತದೆ.[೨೯]
ಚಿಕಿತ್ಸೆಯ ಜರೂರತ್ತನ್ನು ಸೂಚಿಸಲು ಜರ್ಮನ್ ಚಿಕಿತ್ಸೆಯ ಸರದಿ ನಿರ್ಧಾರ ವ್ಯವಸ್ಥೆಯೂ ಸಹ 4, ಕೆಲವೊಮ್ಮೆ 5 ವರ್ಣ ಸಂಕೇತಗಳನ್ನು ಬಳಸುತ್ತದೆ.[೩೦] ವಿಶಿಷ್ಟವೆನಿಸುವಂತೆ, ಪ್ರತಿಯೊಂದು ಆಂಬ್ಯುಲನ್ಸ್ ಕೂಡಾ ಒಂದು ಮಡಿಚು ಹೊದಿಕೆ ಅಥವಾ ಚೀಲವನ್ನು ಹೊಂದಿದ್ದು, ಅದರಲ್ಲಿ ಬಣ್ಣಬಣ್ಣದ ಪಟ್ಟಿಗಳು ಅಥವಾ ಚಿಕಿತ್ಸೆಯ ಸರದಿ ನಿರ್ಧಾರದ ನಮೂದುಪಟ್ಟಿಗಳಿರುತ್ತವೆ. ಜರೂರತ್ತಿನ ಸ್ವರೂಪವು ಈ ಕೆಳಕಂಡಂತೆ ಸೂಚಿಸಲ್ಪಡುತ್ತದೆ:
width="500" | |||
ವರ್ಗ | ಅರ್ಥ | ಪರಿಣಾಮಗಳು | ಉದಾಹರಣೆಗಳು |
---|---|---|---|
T1 (I) | ಜೀವಕ್ಕೆ ತೀವ್ರವಾದ ಅಪಾಯ | ತತ್‌ಕ್ಷಣದ ಚಿಕಿತ್ಸೆ, ಎಷ್ಟು ಸಾಧ್ಯವೋ ಅಷ್ಟು ಬೇಗ ಸಾಗಾಣಿಕೆ | ಶುದ್ಧರಕ್ತನಾಳದ ಅಂಗಹಾನಿಗಳು, ಆಂತರಿಕ ಅಧಿಕ ರಕ್ತಸ್ರಾವ, ದೊಡ್ಡ ಅಂಗಚ್ಛೇದನೆಗಳು |
T2 (II) | ತೀವ್ರಸ್ವರೂಪದ ಗಾಯ | ಸ್ಥಿರವಾದ ವೀಕ್ಷಣೆ ಮತ್ತು ಕ್ಷಿಪ್ರ ಚಿಕಿತ್ಸೆ, ಕಾರ್ಯಸಾಧ್ಯವಾಗಿ ಎಷ್ಟು ಸಾಧ್ಯವೋ ಅಷ್ಟು ಬೇಗ ಸಾಗಾಣಿಕೆ | ಕಿರು ಅಂಗಚ್ಛೇದನೆಗಳು, ಹೊರಗಾಯಗಳು, ಅಸ್ತಿಭಂಗಗಳು ಮತ್ತು ಕೀಲುತಪ್ಪಿಕೆಗಳು |
T3 (III) | ಕಿರು ಗಾಯ ಅಥವಾ ಯಾವುದೇ ಗಾಯವಿಲ್ಲದಿರುವಿಕೆ | ಕಾರ್ಯಸಾಧ್ಯವಾಗಿದ್ದಾಗ ಚಿಕಿತ್ಸೆ, ಸಾಧ್ಯವಾದಾಗ ಸಾಗಾಣಿಕೆ ಮತ್ತು/ಅಥವಾ ಬಿಡುಗಡೆ ಮಾಡುವಿಕೆ | ಕಿರು ಸಿಗಿದ ಗಾಯಗಳು, ಉಳುಕುವಿಕೆಗಳು, ತರಚುಗಾಯಗಳು |
T4 (IV) | ಬದುಕುಳಿಯುವಿಕೆಯ ಯಾವುದೇ ಸಾಧ್ಯತೆ ಇರದಿರುವುದು ಅಥವಾ ಅಲ್ಪ ಸಾಧ್ಯತೆಯಿರುವುದು | ವೀಕ್ಷಣೆ ಮತ್ತು ಒಂದು ವೇಳೆ ಸಾಧ್ಯವಾದರೆ ನೋವುಶಾಮಕಗಳ ಪ್ರಾಶನ ಮಾಡಿಸುವಿಕೆ | ತೀವ್ರಸ್ವರೂಪದ ಗಾಯಗಳು, ನಷ್ಟತುಂಬಲ್ಪಡದ ರಕ್ತದ ನಷ್ಟ, ಋಣಾತ್ಮಕ ನರವೈಜ್ಞಾನಿಕ ನಿರ್ಧಾರಣೆ |
T5 (V) | ಸತ್ತವರು | ಶವಗಳ ಒಟ್ಟುಗೂಡಿಸುವಿಕೆ ಮತ್ತು ಕಾಯುವಿಕೆ, ಸಾಧ್ಯವಾದಾಗ ಅವುಗಳ ಗುರುತು ಹಚ್ಚುವಿಕೆ | ಆಗಮಿಸುವಾಗಲೇ ಸತ್ತಿರುವುದು, T1-4ನಿಂದ ಕೆಳಗಿಳಿಸಲ್ಪಟ್ಟಿರುವುದು, ಗಾಳಿದಾರಿಯನ್ನು ಶುದ್ಧೀಕರಿಸಿದ ನಂತರವೂ ಸ್ವಯಂಪ್ರೇರಿತ ಉಸಿರಾಟವು ಕಾಣಬರದಿರುವುದು |
ಇಸ್ರೇಲ್
[ಬದಲಾಯಿಸಿ]S.T.A.R.T.ನ ಒಂದು ಸರಳೀಕೃತ ಆದರೆ ಪರಿಣಾಮಕಾರಿ ವಿವರಣೆಯನ್ನು ಇಸ್ರೇಲಿನ ಸೇನೆಯಲ್ಲಿ ವೈದ್ಯಕೀಯೇತರ ಸಿಬ್ಬಂದಿಗೆ ಕಲಿಸಲಾಗುತ್ತದೆ: ಮೌನವಾಗಿ ನೆಲದ ಮೇಲೆ ಮಲಗಿರುವ ಗಾಯಗೊಂಡವರು ತತ್‌ಕ್ಷಣದ ಸಾಗಾಣಿಕೆ ವ್ಯವಸ್ಥೆಗಾಗಿ ಸಿದ್ಧರಾಗಿರಬೇಕು; ನೆಲದ ಮೇಲೆ ಮಲಗಿಕೊಂಡಿದ್ದು ಕಿರುಚಾಡುತ್ತಿರುವ ಗಾಯಗೊಂಡವರು, ವಿಳಂಬಗೊಳಿಸಬಹುದಾದ ಸಾಗಾಣಿಕಾ ವ್ಯವಸ್ಥೆಯ ವ್ಯಾಪ್ತಿಗೆ ಸೇರಿದ ಗಾಯಗೊಂಡವರಾಗಿರುತ್ತಾರೆ; ಮತ್ತು ಗಾಯಗೊಂಡಿದ್ದೂ ನಡೆಯುತ್ತಿರುವ ವ್ಯಕ್ತಿಗಳಿಗೆ ಸಹಾಯದ ತುರ್ತು ಅಷ್ಟೊಂದಿರುವುದಿಲ್ಲ.[೩೧] ಓರ್ವ ಗಾಯಗೊಂಡ ವ್ಯಕ್ತಿಗೆ ಸತ್ತವ ಎಂದು ನಮೂದುಪಟ್ಟಿ ಕಟ್ಟಲು ವೈದ್ಯಕೀಯೇತರ ಸಿಬ್ಬಂದಿಗೆ ಯಾವುದೇ ಅಧಿಕಾರವಿರುವುದಿಲ್ಲ.
ಜಪಾನ್
[ಬದಲಾಯಿಸಿ]ಜಪಾನ್‌ನಲ್ಲಿ, ಚಿಕಿತ್ಸೆಯ ಸರದಿ ನಿರ್ಧಾರ ವ್ಯವಸ್ಥೆಯನ್ನು ಮುಖ್ಯವಾಗಿ ಆರೋಗ್ಯ ವೃತ್ತಿಪ್ರವೀಣರು ಬಳಸುತ್ತಾರೆ. ಸಂಬಂಧಪಟ್ಟಿರುವ ವರ್ಣ ಸಂಕೇತಗಳಲ್ಲಿನ ಚಿಕಿತ್ಸೆಯ ಸರದಿ ನಿರ್ಧಾರದ ವರ್ಗಗಳು ಹೀಗಿವೆ:
- ವರ್ಗ I : ಜೀವಕ್ಕೆ ಬೆದರಿಕೆಯೊಡ್ಡುವಷ್ಟು ಸಮರ್ಥವಾಗಿರುವ ರೋಗಸ್ಥಿತಿಗಳನ್ನು ಹೊಂದಿರುವ, ಹಾನಿಗೊಳಗಾಗಿದ್ದು ಬದುಕಬಲ್ಲ ಸಾಧ್ಯತೆ ಹೊಂದಿರುವವರಿಗೆ ಬಳಸಲಾಗುತ್ತದೆ.
- ವರ್ಗ II : ಜೀವಕ್ಕೆ ಬೆದರಿಕೆಯೊಡ್ಡುವ ಗಾಯಗಳನ್ನು ಹೊಂದಿಲ್ಲದ, ಆದರೆ ತುರ್ತಾಗಿ ಚಿಕಿತ್ಸೆಯ ಅಗತ್ಯವಿರುವಂಥ ಹಾನಿಗೊಳಗಾದವರಿಗೆ ಬಳಸಲ್ಪಡುತ್ತದೆ.
- ವರ್ಗ III : ಆಂಬ್ಯುಲನ್ಸ್ ಸಾಗಾಣಿಕೆಯ ಅವಶ್ಯಕತೆ ಕಂಡುಬರದ ಕಿರು ಗಾಯಗಳನ್ನು ಹೊಂದಿರುವ, ಹಾನಿಗೊಳಗಾದವರಿಗಾಗಿ ಬಳಸಲ್ಪಡುತ್ತದೆ.
- ವರ್ಗ 0 : ಈಗಾಗಲೇ ಸತ್ತಿರುವ, ಅಥವಾ ಬದುಕುಳಿಯುವುದು ಅಸಂಭವ ಎನ್ನುವಷ್ಟರ ಮಟ್ಟಿಗಿನ ಗಾಯಗಳನ್ನು ಹೊಂದಿರುವ ಹಾನಿಗೊಳಗಾದವರಿಗೆ ಬಳಸಲ್ಪಡುತ್ತದೆ.
ಚಿಕಿತ್ಸೆಯ ಸರದಿ ನಿರ್ಧಾರದ ಫಲಿತಾಂಶಗಳು
[ಬದಲಾಯಿಸಿ]ಸ್ಥಳಾಂತರಿಕೆ
[ಬದಲಾಯಿಸಿ]ಯಾವ ಜನರಿಗೆ ಮುಂದುವರಿದ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂಬುದನ್ನು ಸರಳ ಚಿಕಿತ್ಸೆಯ ಸರದಿ ನಿರ್ಧಾರವು ಗುರುತಿಸುತ್ತದೆ. ಆಸ್ಪತ್ರೆಗಳಿಗೆ ಸ್ಥಳಾಂತರಿಕೆಯಾಗುವುದಕ್ಕೆ ಸಂಬಂಧಿಸಿದ ಆದ್ಯತೆಗಳನ್ನೂ ಸಹ ಚಿಕಿತ್ಸೆಯ ಸರದಿ ನಿರ್ಧಾರವು ಆಯಾ ಕ್ಷೇತ್ರದಲ್ಲಿ ಸಜ್ಜುಗೊಳಿಸುತ್ತದೆ.[೩೨] S.T.A.R.T.ನಲ್ಲಿ ಅಪಘಾತಕ್ಕೊಳಗಾದ ವ್ಯಕ್ತಿಗಳನ್ನು ಈ ಕೆಳಕಂಡಂತೆ ಸ್ಥಳಾಂತರಿಸಬೇಕಾಗುತ್ತದೆ:
- ಸತ್ತವರನ್ನು ಅವರು ಬಿದ್ದಕಡೆಯೇ ಬಿಡಬೇಕಾಗುತ್ತದೆ, ಒಂದು ವೇಳೆ ಅವಶ್ಯಕವೆನಿಸಿದರೆ ಅವರ ದೇಹವನ್ನು ಮುಚ್ಚಬಹುದಾಗಿರುತ್ತದೆ; ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಜನರು ಉಸಿರಾಟವನ್ನು ನಡೆಸದೇ ಇದ್ದ ಹೊರತು ಅಥವಾ ಅವರ ಗಾಳಿದಾರಿಯ ಸ್ಥಾನ ಸರಿಪಡಿಸುವ ಒಂದು ಪ್ರಯತ್ನವು ಅಯಶಸ್ವಿಯಾಗಿ ಹೊರಹೊಮ್ಮದ ಹೊರತು, S.T.A.R.T.ನಲ್ಲಿ ಓರ್ವ ವ್ಯಕ್ತಿಯನ್ನು "ಸತ್ತವ" ಎಂಬುದಾಗಿ ಚಿಕಿತ್ಸೆಯ ಸರದಿ ನಿರ್ಧಾರವನ್ನು ಮಾಡಲಾಗುವುದಿಲ್ಲ.
- ಅವರಿಗೆ ಮುಂದುವರಿದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆಯಾದ್ದರಿಂದ ಒಂದೇ ಸಲಕ್ಕೆ ಅಥವಾ 1 ಗಂಟೆಯೊಳಗಾಗಿ, ಒಂದು ವೇಳೆ ಲಭ್ಯವಿದ್ದರೆ MEDEVACನಿಂದ ಅಥವಾ ಆಂಬ್ಯುಲನ್ಸ್‌ನಿಂದ ತತ್‌ಕ್ಷಣದ ಅಥವಾ ಆದ್ಯತೆ 1ರ (ಕೆಂಪು) ಸ್ಥಳಾಂತರಿಕೆ. ಈ ಜನರು ವಿಷಮಸ್ಥಿತಿಯಲ್ಲಿರುತ್ತಾರೆ ಮತ್ತು ತತ್‌ಕ್ಷಣದ ನೆರವು ಇಲ್ಲದೇ ಹೋದಲ್ಲಿ ಸಾಯುತ್ತಾರೆ.
- ಎಲ್ಲಾ ತತ್‌ಕ್ಷಣದ ವ್ಯಕ್ತಿಗಳೂ ಸಾಗಿಸಲ್ಪಡುವ ತನಕ, ವಿಳಂಬಗೊಳಿಸಬಹುದಾದ ಅಥವಾ ಆದ್ಯತೆ 2ರ (ಹಳದಿ) ವರ್ಗದವರು ತಮ್ಮ ವೈದ್ಯಕೀಯ ಸ್ಥಳಾಂತರಿಕೆಯನ್ನು ವಿಳಂಬಗೊಳಿಸಬಹುದಾಗಿರುತ್ತದೆ. ಈ ಜನರು ಸ್ಥಿರವಾದ ರೋಗಸ್ಥಿತಿಯಲ್ಲಿ ಇರುತ್ತಾರಾದರೂ ಅವರಿಗೆ ವೈದ್ಯಕೀಯ ನೆರವಿನ ಅಗತ್ಯವಿರುತ್ತದೆ.
- ಎಲ್ಲಾ ತತ್‌ಕ್ಷಣದ ಮತ್ತು ವಿಳಂಬಗೊಳಿಸಬಹುದಾದ ವ್ಯಕ್ತಿಗಳು ಸ್ಥಳಾಂತರಿಸಲ್ಪಡುವ ತನಕ, ಕಿರು ಅಥವಾ ಆದ್ಯತೆ 3ರ (ಹಸಿರು) ವರ್ಗದವರನ್ನು ಸ್ಥಳಾಂತರಿಸಲಾಗುವುದಿಲ್ಲ. ಕನಿಷ್ಟಪಕ್ಷ ಹಲವಾರು ಗಂಟೆಗಳವರೆಗೆ ಇವರಿಗೆ ಮುಂದುವರಿದ ವೈದ್ಯಕೀಯ ಆರೈಕೆಯ ಅಗತ್ಯವಿರುವುದಿಲ್ಲ. ಒಂದು ವೇಳೆ ಅವರ ರೋಗಸ್ಥಿತಿಯು ಇನ್ನೂ ಹಾಳಾದರೆ, ಚಿಕಿತ್ಸೆಯ ಸರದಿ ನಿರ್ಧಾರವನ್ನು ಮತ್ತೊಮ್ಮೆ ಕೈಗೊಳ್ಳಬೇಕಾಗುತ್ತದೆ. ಈ ಜನರು ನಡೆಯಬಲ್ಲವರಾಗಿರುತ್ತಾರೆ, ಮತ್ತು ಅವರಿಗೆ ಮುಲಾಮು ಪಟ್ಟಿಗಳು ಹಾಗೂ ಕೀವುಗಳೆಕಗಳಷ್ಟೇ ಸಾಕಾಗಿರುತ್ತವೆ.
ಪರ್ಯಾಯ ಆರೈಕೆ ಸೌಕರ್ಯಗಳು
[ಬದಲಾಯಿಸಿ]ಪರ್ಯಾಯ ಆರೈಕೆ ಸೌಕರ್ಯಗಳು ಎಂಬುದು ಬೃಹತ್ ಸಂಖ್ಯೆಯ ರೋಗಿಗಳ ಆರೈಕೆಗಾಗಿ ಸಜ್ಜುಗೊಳಿಸಲಾದ, ಅಥವಾ ಇಂಥ ಸೌಕರ್ಯಗಳನ್ನು ಸಜ್ಜುಗೊಳಿಸಲು ಅವಕಾಶ ಕಲ್ಪಿಸಿಕೊಡುವ ಸ್ಥಳಗಳಾಗಿವೆ. ಶಾಲೆಗಳು, ಕ್ರೀಡಾಂಗಣಗಳು, ಹಾಗೂ ಬೃಹತ್ ಶಿಬಿರಗಳು ಇದರ ಉದಾಹರಣೆಗಳಲ್ಲಿ ಸೇರಿದ್ದು, ಇವು ಒಂದು ಸಾಮೂಹಿಕ ಅಪಘಾತದ ಅಥವಾ ಮತ್ತೊಂದು ಬಗೆಯ ಘಟನೆಯಲ್ಲಿ ಹಾನಿಗೊಳಗಾದ ಬೃಹತ್ ಸಂಖ್ಯೆಯ ಜನರ ಆರೈಕೆ, ಪೋಷಣೆ, ಮತ್ತು ಆಶ್ರಯಕ್ಕೆ ಸಂಬಂಧಿಸಿದಂತೆ ಸಜ್ಜುಗೊಳಿಸಬಹುದಾದ ಮತ್ತು ಬಳಸಲ್ಪಡಬಹುದಾದ ತಾಣಗಳಾಗಿವೆ.[೩೩] ಇಂಥ ಸುಧಾರಿತ ಸೌಕರ್ಯಗಳು ಸ್ಥಳೀಯ ಆಸ್ಪತ್ರೆಯ ಸಹಕಾರದೊಂದಿಗೆ ಸಾಮಾನ್ಯವಾಗಿ ಅಭಿವೃದ್ಧಿಪಡಿಸಲ್ಪಡುತ್ತವೆ; ಸದರಿ ಸುಧಾರಿತ ಸೌಕರ್ಯಗಳನ್ನು ಸಾಮರ್ಥ್ಯದ ಹೆಚ್ಚಳವನ್ನು ಸೃಷ್ಟಿಸುವುದಕ್ಕೆ ಸಂಬಂಧಿಸಿದ ಒಂದು ಕಾರ್ಯತಂತ್ರವಾಗಿ ಸ್ಥಳೀಯ ಆಸ್ಪತ್ರೆಯು ಪರಿಗಣಿಸುತ್ತದೆ. ಒಂದು ಸಾಮೂಹಿಕ ಅಪಘಾತದ ಘಟನೆಯ ಸಂದರ್ಭದಲ್ಲಿ, ಎಲ್ಲಾ ರೋಗಿಗಳಿಗೆ ಸಂಬಂಧಿಸಿದಂತೆ ಆದ್ಯತೆಯ ಗಮ್ಯಸ್ಥಾನವಾಗಿ ಆಸ್ಪತ್ರೆಗಳು ಪರಿಗಣಿಸಲ್ಪಡುತ್ತವೆಯಾದರೂ, ಆಸ್ಪತ್ರೆಗಳು ಇಂಥ ಜಂಗುಳಿಯಿಂದ ಕಿಕ್ಕಿರಿದು ತುಂಬಲ್ಪಡುವುದನ್ನು ತಡೆಗಟ್ಟುವ ದೃಷ್ಟಿಯಿಂದ ಕಡಿಮೆ-ತೀಕ್ಷ್ಣತೆಯ ರೋಗಿಗಳನ್ನು ಆಸ್ಪತ್ರೆಗಳಿಂದ ದೂರವಿರಿಸುವುದಕ್ಕಾಗಿ ಅವರ ಮಾರ್ಗ ಬದಲಾಯಿಸಲು ಇಂಥ ಸುಧಾರಿತ ಸೌಕರ್ಯಗಳು ಅಗತ್ಯವಾಗಿರಬಹುದು.
ದ್ವಿತೀಯಕ (ಆಸ್ಪತ್ರೆಯೊಳಗಿನ) ಚಿಕಿತ್ಸೆಯ ಸರದಿ ನಿರ್ಧಾರ
[ಬದಲಾಯಿಸಿ]ಮುಂದುವರಿದ ಚಿಕಿತ್ಸೆಯ ಸರದಿ ನಿರ್ಧಾರ ವ್ಯವಸ್ಥೆಗಳಲ್ಲಿ ದ್ವಿತೀಯಕ ಚಿಕಿತ್ಸೆಯ ಸರದಿ ನಿರ್ಧಾರವು ವೈದ್ಯ ಸಹಾಯಕರು, ಯುದ್ಧಭೂಮಿ ವೈದ್ಯಕೀಯ ಸಿಬ್ಬಂದಿ, ಅಥವಾ ಆಸ್ಪತ್ರೆಗಳ ತುರ್ತು ವಿಭಾಗಗಳಲ್ಲಿನ ಪರಿಣಿತ ದಾದಿಯರಿಂದ ಅನುಷ್ಠಾನಗೊಳಿಸಲ್ಪಡುತ್ತದೆ; ವಿಕೋಪಗಳ ಸಮಯದಲ್ಲಿ ಗಾಯಗೊಂಡ ಜನರು ಐದು ವರ್ಗಗಳಾಗಿ ವಿಂಗಡಿಸಲ್ಪಡುತ್ತಾರೆ.[೩೪]
(ಕಪ್ಪು / ನಿರೀಕ್ಷಿಸುತ್ತಿರುವವರು: ಅವರು ಎಷ್ಟೊಂದು ತೀವ್ರಸ್ವರೂಪದಲ್ಲಿ ಗಾಯಗೊಂಡಿರುತ್ತಾರೆಂದರೆ, ತಮ್ಮ ಗಾಯಗಳಿಂದಾಗಿ (ದೊಡ್ಡ-ಪ್ರಮಾಣದ ಸುಟ್ಟಗಾಯಗಳು, ತೀವ್ರಸ್ವರೂಪದ ದೈಹಿಕ ಆಘಾತ, ಮಾರಣಾಂತಿಕ ವಿಕಿರಣದ ಪ್ರಮಾಣ) ಪ್ರಾಯಶಃ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಅವರು ಸಾಯುತ್ತಾರೆ, ಅಥವಾ ಜೀವಕ್ಕೆ-ಬೆದರಿಕೆಯೊಡ್ಡುವ ವೈದ್ಯಕೀಯ ಬಿಕ್ಕಟ್ಟಿನಲ್ಲಿ (ಹೃದಯ ಸ್ತಂಭನ, ಕೀವುಗಟ್ಟುವ ಆಘಾತ, ತೀವ್ರಸ್ವರೂಪದ ತಲೆ ಅಥವಾ ಎದೆ ಗಾಯಗಳು) ಲಭ್ಯವಿರುವ ಆರೈಕೆಯನ್ನು ನೀಡಿದರೂ ಸಹ ಬದುಕುಳಿಯುವ ಸಾಧ್ಯತೆ ಕಡಿಮೆ; ಅವರನ್ನು ಒಂದು ಸ್ಥಗನ ಪ್ರದೇಶಕ್ಕೆ ತೆಗೆದುಕೊಂಡು ಹೋಗುಬೇಕಾಗುತ್ತದೆ ಹಾಗೂ ನರಳಿಕೆಯನ್ನು ತಗ್ಗಿಸುವಲ್ಲಿ ಅಗತ್ಯವಾಗಿರುವ ನೋವು ನಿವಾರಕಗಳನ್ನು ಅವರಿಗೆ ನೀಡಬೇಕಾಗುತ್ತದೆ.
- ಕೆಂಪು / ತತ್‌ಕ್ಷಣದವರು: ತತ್‌ಕ್ಷಣದ ಶಸ್ತ್ರಚಿಕಿತ್ಸೆ ಅಥವಾ ಜೀವ-ಉಳಿಸುವ ಬೇರಾವುದೇ ಮಧ್ಯಸ್ಥಿಕೆಯು ಅವರಿಗೆ ಅಗತ್ಯವಾಗಿರುತ್ತದೆ, ಮತ್ತು ಶಸ್ತ್ರಚಿಕಿತ್ಸೆಯ ತಂಡಗಳಿಗೆ ಸಂಬಂಧಿಸಿದಂತೆ ಅಥವಾ ಮುಂದುವರಿದ ಸೌಕರ್ಯಗಳೆಡೆಗೆ ಸಾಗಿಸುವುದಕ್ಕೆ ಸಂಬಂಧಿಸಿದಂತೆ ಅವರು ಮೊದಲ ಆದ್ಯತೆಯನ್ನು ಹೊಂದಿರುತ್ತಾರೆ; ಅವರು "ಕಾಯಲಾಗದ" ವರ್ಗದವರಾಗಿರುತ್ತಾರೆ, ಆದರೆ ತತ್‌ಕ್ಷಣದ ಚಿಕಿತ್ಸೆ ನೀಡುವುದರಿಂದ ಬದುಕುಳಿಯುವ ಸಾದ್ಯತೆಯಿರುತ್ತದೆ.
- ಹಳದಿ / ವೀಕ್ಷಣೆಗೆ ಒಳಗಾದವರು: ಆ ಕ್ಷಣಕ್ಕೆ ಅವರ ರೋಗಸ್ಥಿತಿಯು ಸ್ಥಿರವಾಗಿರುತ್ತದೆಯಾದರೂ, ತರಬೇತಿಪಡೆದ ವ್ಯಕ್ತಿಗಳು ಅವರನ್ನು ಗಮನಿಸುತ್ತಿರುವುದು ಅಗತ್ಯವಿರುತ್ತದೆ ಹಾಗೂ ಆಗಿಂದಾಗ್ಗೆ ಮರು-ಚಿಕಿತ್ಸೆಯ ಸರದಿ ನಿರ್ಧಾರದ ಅಗತ್ಯವಿರುತ್ತದೆ; ಆಸ್ಪತ್ರೆ ಆರೈಕೆಯ ಅಗತ್ಯವೂ ಕಂಡುಬರುತ್ತದೆ (ಮತ್ತು "ಸಾಮಾನ್ಯ" ಸಂದರ್ಭಗಳ ಅಡಿಯಲ್ಲಿ ಅವರು ತತ್‌ಕ್ಷಣದ ಆದ್ಯತೆಯ ಆರೈಕೆಯನ್ನು ಸ್ವೀಕರಿಸುತ್ತಾರೆ).
- ಹಸಿರು / ಕಾಯುತ್ತಿರುವವರು (ಗಾಯಗೊಂಡಿದ್ದರೂ ನಡೆಯುತ್ತಿರುವವರು): ಹಲವಾರು ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಅವರಿಗೆ ಓರ್ವ ವೈದ್ಯನ ಆರೈಕೆಯು ಅಗತ್ಯವಾಗಿರುತ್ತದೆ, ಆದರೆ ತತ್‌ಕ್ಷಣವೇ ಇರುವುದಿಲ್ಲ. ಸಾಕಷ್ಟು ಗಂಟೆಗಳವರೆಗೆ ಅವರು ಕಾಯಬಹುದು ಅಥವಾ ಮನೆಗೆ ಹೋಗಿ ಮಾರನೆಯ ದಿನ ಬರುವಂತೆ ಅವರಿಗೆ ಹೇಳಬಹುದು (ಸಂಕೀರ್ಣ ಅಸ್ತಿಭಂಗಗಳನ್ನು ಹೊಂದಿರದ ಮುರಿದ ಮೂಳೆಗಳು, ಮೃದು ಅಂಗಾಂಶದ ಅನೇಕ ಗಾಯಗಳು).
- ಬಿಳಿ / ಕಳಿಸಿಬಿಡುವ ವರ್ಗದವರು (ಗಾಯಗೊಂಡಿದ್ದರೂ ನಡೆಯುತ್ತಿರುವವರು): ಅವರು ಕಿರು ಗಾಯಗಳನ್ನು ಹೊಂದಿರುತ್ತಾರೆ; ಪ್ರಥಮ ಚಿಕಿತ್ಸೆ ಹಾಗೂ ಮನೆಯ ಆರೈಕೆ ಅವರಿಗೆ ಸಾಕಾಗುತ್ತದೆ, ಅವರಿಗೆ ಓರ್ವ ವೈದ್ಯನ ಆರೈಕೆಯ ಅಗತ್ಯವಿರುವುದಿಲ್ಲ. ಕೊಯ್ತಗಳು ಮತ್ತು ಗೀರುಗಾಯಗಳ, ಅಥವಾ ಕಿರು ಸುಟ್ಟಗಾಯಗಳ ವರ್ಗಕ್ಕೆ ಗಾಯಗಳು ಸೇರುತ್ತವೆ.
ಈ ಮಾಪಕವು ಸರಳವಾದ ಚಿಕಿತ್ಸೆಯ ಸರದಿ ನಿರ್ಧಾರಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ ಎಂಬುದನ್ನು ಗಮನಿಸಬೇಕು. ಮುಂದುವರಿದ ಚಿಕಿತ್ಸೆಯ ಸರದಿ ನಿರ್ಧಾರವನ್ನು ಅನುಷ್ಠಾನಗೊಳಿಸುವಾಗ, ವೈದ್ಯಕೀಯ ವೃತ್ತಿಪರಿಣಿತರು ವೃತ್ತಿಪರ ಮೂಲಪಠ್ಯಗಳ ಹಾಗೂ ತರಬೇತಿಯ ಆಕರಗಳ ಪರಾಮರ್ಶನ ಮಾಡಬೇಕು; ಈ ಪಟ್ಟಿವ್ಯವಸ್ಥೆಯು ಕೇವಲ ಓರ್ವ ತಜ್ಞನಲ್ಲದವನ ಗ್ರಹಿಕೆಗೆ ಸಂಬಂಧಿಸಿದೆ ಎಂಬುದನ್ನು ಗಮನಿಸಬೇಕು.
ಕೆಲವೊಂದು ಶಕ್ತಿಗುಂದಿಸುವ ಗಾಯಗಳು, ಅವು ಒಂದು ವೇಳೆ ಜೀವಕ್ಕೆ-ಬೆದರಿಕೆಯೊಡ್ಡುವ ಸ್ವರೂಪದಲ್ಲಿ ಇರದಿದ್ದರೂ, ಲಭ್ಯವಿರುವ ಸಾಮರ್ಥ್ಯಗಳನ್ನು ಆಧರಿಸಿ ಆದ್ಯತೆಯಲ್ಲಿ ಎತ್ತರಿಸಲ್ಪಡಬಹುದು. ಶಾಂತಿಕಾಲದ ಸಮಯದಲ್ಲಿ, ಬಹುಪಾಲು ಅಂಗಚ್ಛೇದನೆಗಳು "ಕೆಂಪು" ಎಂಬುದಾಗಿ ವಿಂಗಡಿಸಲ್ಪಡಬಹುದು; ಏಕೆಂದರೆ, ಒಂದು ಹೆಬ್ಬೆಟ್ಟು ಅಥವಾ ಕೈ ಇಲ್ಲದಿದ್ದರೂ ಸಹ ಓರ್ವ ವ್ಯಕ್ತಿಯು ಎಲ್ಲಾ ಸಂಭವನೀಯತೆಯಲ್ಲೂ ಸಾಯುವುದಿಲ್ಲವಾದರೂ, ಶಸ್ತ್ರಚಿಕಿತ್ಸೆಯ ಮರುಜೋಡಣೆಯು ಕೆಲವೇ ನಿಮಿಷಗಳಲ್ಲಿ ನೆರವೇರಬೇಕಿರುತ್ತದೆ.
ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಆಸ್ಪತ್ರೆಯ ಚಿಕಿತ್ಸೆಯ ಸರದಿ ನಿರ್ಧಾರ ವ್ಯವಸ್ಥೆಗಳು
[ಬದಲಾಯಿಸಿ]ಆಸ್ಪತ್ರೆ ವ್ಯವಸ್ಥೆಯ ವ್ಯಾಪ್ತಿಯೊಳಗೆ, ತುರ್ತು ಕೋಣೆಯಲ್ಲಿನ ಆಗಮನದ ಮೊದಲ ಹಂತವನ್ನು ಆಸ್ಪತ್ರೆ ಚಿಕಿತ್ಸೆಯ ಸರದಿ ನಿರ್ಧಾರ ದಾದಿಯು ನಿರ್ಧಾರಣೆ ಮಾಡುತ್ತಾಳೆ. ರೋಗಿಯ ರೋಗಸ್ಥಿತಿಯನ್ನಷ್ಟೇ ಅಲ್ಲದೇ, ಯಾವುದಾದರೂ ಬದಲಾವಣೆಗಳಿದ್ದಲ್ಲಿ ಅದನ್ನೂ ಸಹ ಈ ದಾದಿಯು ನಿರ್ಣಯಿಸುತ್ತಾಳೆ, ಮತ್ತು ತುರ್ತು ಕೋಣೆಗೆ ಆಗಬೇಕಿರುವ ದಾಖಲಾತಿಗೆ ಸಂಬಂಧಿಸಿದಂತೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಇರುವ ಅವರ ಆದ್ಯತೆಯನ್ನು ಅವಳು ನಿರ್ಣಯಿಸುತ್ತಾಳೆ.[೩೫] ತುರ್ತು ನಿರ್ಧಾರಣೆ ಮತ್ತು ಚಿಕಿತ್ಸೆಗಳು ಒಮ್ಮೆಗೆ ಸಂಪೂರ್ಣಗೊಂಡ ನಂತರ, ರೋಗಿಯನ್ನು ಆಸ್ಪತ್ರೆಯ ಆಂತರಿಕ ಚಿಕಿತ್ಸೆಯ ಸರದಿ ನಿರ್ಧಾರ ವ್ಯವಸ್ಥೆಗೆ ಶಿಫಾರಸು ಮಾಡಬೇಕಾಗಿ ಬರಬಹುದು.
ಒಂದು ವಿಶಿಷ್ಟವಾದ ಒಳರೋಗಿ ಆಸ್ಪತ್ರೆಯ ಚಿಕಿತ್ಸೆಯ ಸರದಿ ನಿರ್ಧಾರ ವ್ಯವಸ್ಥೆಗೆ ಸಂಬಂಧಿಸಿದಂತೆ, ದಾಖಲಾತಿಯ ಅಗತ್ಯವನ್ನು ಹೊಂದಿರುವ ರೋಗಿಗಳ ಕುರಿತಾಗಿ ER ವೈದ್ಯರಿಂದ ಬಂದ ದಾಖಲಾತಿಗೆ ಸಂಬಂಧಿಸಿದ ಮನವಿಗಳನ್ನು, ಅಥವಾ ಇತರ ಸರದಿಯ ಹಕ್ಕುಗಳಿಗೆ ಸೇರಿದ ರೋಗಿಗಳ ಹಾಗೂ ಆ ಹಂತದ ಆರೈಕೆಯ ಅಗತ್ಯವನ್ನು ಹೊಂದಿಲ್ಲದ ಕಾರಣದಿಂದಾಗಿ ವರ್ಗಾಯಿಸಲ್ಪಡಬಹುದಾದ ರೋಗಿಗಳ (ಅಂದರೆ, ತೀವ್ರ ನಿಗಾ ಘಟಕ ರೋಗಿಯು ವೈದ್ಯಕೀಯ ಸರದಿಯ ಹಕ್ಕಿಗೆ ಸಂಬಂಧಿಸಿದಂತೆ ಸ್ಥಿರವಾಗಿರುತ್ತಾನೆ) ಆರೈಕೆಯನ್ನು ನೋಡಿಕೊಳ್ಳುತ್ತಿರುವ ವೈದ್ಯರಿಂದ ಬಂದ ಮನವಿಗಳನ್ನು ಓರ್ವ ಸರದಿ ನಿರ್ಧಾರದ ವೈದ್ಯನು ನಿರ್ವಹಿಸುತ್ತಾನೆ. ರೋಗಿಗಳನ್ನು ಆಸ್ಪತ್ರೆಯ ಮೂಲಕ ಒಂದು ಪ್ರಭಾವಿ ಹಾಗೂ ಪರಿಣಾಮಕಾರಿ ವಿಧಾನದಲ್ಲಿ ಸಾಗಿಸುವಲ್ಲಿ ಇದು ನೆರವಾಗುತ್ತದೆ.
ಚಿಕಿತ್ಸೆಯ ಸರದಿ ನಿರ್ಧಾರದ ಈ ಸ್ಥಾನವು ಆಸ್ಪತ್ರೆಯ ಆರೈಕೆಗಾರನೊಬ್ಬನಿಂದ ಆನೇಕವೇಳೆ ನಿರ್ವಹಿಸಲ್ಪಡುತ್ತದೆ. ಲಭ್ಯವಿರುವ ಆಸ್ಪತ್ರೆಯ ಹಾಸಿಗೆಯ ಸ್ಥಳಾವಕಾಶವು ಚಿಕಿತ್ಸೆಯ ಸರದಿ ನಿರ್ಧಾರದ ತೀರ್ಮಾನಕ್ಕೆ ತನ್ನದೇ ಆದ ಕಾಣಿಕೆಯನ್ನು ನೀಡುವ ಒಂದು ಪ್ರಮುಖ ಅಂಶವಾಗಿದೆ. ಸರದಿ ನಿರ್ಧಾರಕ್ಕೆ ಸಂಬಂಧಿಸಿದ ಆಸ್ಪತ್ರೆಯ ಆರೈಕೆಗಾರನು ಆಸ್ಪತ್ರೆಯ "ಹಾಸಿಗೆ ನಿಯಂತ್ರಣ" ಮತ್ತು ನಿರ್ವಹಿಸುವ ತಂಡದ ಜೊತೆಜೊತೆಗೆ, ಎಲ್ಲಾ ರೋಗಿಗಳಿಗೆ ಸುರಕ್ಷಿತವಾದ ಆರೈಕೆಯನ್ನು ಒದಗಿಸುವ ದೃಷ್ಟಿಯಿಂದ, ಸಂಪನ್ಮೂಲಗಳನ್ನು ಗರಿಷ್ಟ ಮಟ್ಟದಲ್ಲಿ ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಹಾಸಿಗೆಗಳು ಲಭ್ಯವಿವೆ ಎಂಬುದನ್ನೂ ನಿರ್ಣಯಿಸಬೇಕಾಗುತ್ತದೆ. ದೈಹಿಕ ಆಘಾತ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸೆ ರೋಗಿಗಳಿಗೆ ಸಂಬಂಧಿಸಿದಂತೆ, ವಿಶಿಷ್ಟವಾದ ಶಸ್ತ್ರಚಿಕಿತ್ಸೆಯ ತಂಡವೊಂದು ತನ್ನದೇ ಆದ ಚಿಕಿತ್ಸೆಯ ಸರದಿ ನಿರ್ಧಾರದ ವ್ಯವಸ್ಥೆಯನ್ನು ಹೊಂದುತ್ತದೆ. ನರವಿಜ್ಞಾನ ಹಾಗೂ ನರ ಶಸ್ತ್ರಚಿಕಿತ್ಸೆಯ ಸೇವೆಗಳಿಗೂ ಇದು ಅನ್ವಯಿಸುತ್ತದೆ. ಒಂದು ನಿರ್ದಿಷ್ಟ ಮಟ್ಟದ ಆರೈಕೆಗೆ ಸಂಬಂಧಿಸಿದಂತೆ ಓರ್ವ ರೋಗಿ ಸೂಕ್ತವಾಗಿ ಹೊಂದಿಕೊಳ್ಳುತ್ತಿದ್ದಾನೆಯೇ ಎಂಬುದನ್ನು ನಿರ್ಣಯಿಸುವುದು ಹಾಗೂ ಆಸ್ಪತ್ರೆ ಸಂಪನ್ಮೂಲಗಳು ಪರಿಣಾಮಕಾರಿಯಾಗಿ ಬಳಸಲ್ಪಡುತ್ತಿವೆಯೇ ಎಂಬುದನ್ನು ಖಾತ್ರಿಪಡಿಸುವುದು ಈ ವ್ಯವಸ್ಥೆಯಲ್ಲಿನ ಚಿಕಿತ್ಸೆಯ ಸರದಿ ನಿರ್ಧಾರದ ಒಟ್ಟಾರೆ ಗುರಿಯಾಗಿದೆ.
ಚಿಕಿತ್ಸೆಯ ಸರದಿ ನಿರ್ಧಾರದಲ್ಲಿನ ಜೀವನೈತಿಕ ಪರಿಣಾಮಗಳು
[ಬದಲಾಯಿಸಿ]ಚಿಕಿತ್ಸೆಯ ಸರದಿ ನಿರ್ಧಾರದ ತೀರ್ಮಾನಗಳಲ್ಲಿ ಜೀವನೈತಿಕ ಕಾಳಜಿಗಳು ಐತಿಹಾಸಿಕವಾಗಿ ಒಂದು ಮುಖ್ಯ ಪಾತ್ರವನ್ನು ವಹಿಸಿವೆ. 1940ರ ದಶಕದ ಪೋಲಿಯೋ ಸಾಂಕ್ರಾಮಿಕ ರೋಗಗಳ ಅವಧಿಯಲ್ಲಿ ಕಂಡುಬಂದ ಕಬ್ಬಿಣದ ಶ್ವಾಸಕೋಶಗಳ ಹಂಚಿಕೆ ಮತ್ತು 1960ರ ದಶಕದಲ್ಲಿ ರಕ್ತಶುದ್ಧೀಕರಣ ಯಂತ್ರಗಳ ಹಂಚಿಕೆ ಇದಕ್ಕೆ ಉದಾಹರಣೆಯಾಗಿವೆ.[೩೬] ಅಭಿವೃದ್ಧಿ ಹೊಂದಿರುವ ವಿಶ್ವದಲ್ಲಿನ ಅನೇಕ ಆರೋಗ್ಯ ಆರೈಕಾ ವ್ಯವಸ್ಥೆಗಳು ಒಂದು ನಿರೀಕ್ಷಿತ ಇನ್‌ಫ್ಲುಯೆನ್ಸಾ ಸರ್ವವ್ಯಾಪಿ ವ್ಯಾಧಿಗೆ ಸಂಬಂಧಿಸಿದ ಯೋಜಿಸುವಿಕೆಯನ್ನು ಮುಂದುವರಿಸುತ್ತಿದ್ದಂತೆ, ರೋಗಿಗಳ ಚಿಕಿತ್ಸೆಯ ಸರದಿ ನಿರ್ಧಾರ ಮತ್ತು ಆರೈಕೆಯ ನಿಗದಿ ಮಾಡುವಿಕೆಗೆ ಸಂಬಂಧಿಸಿದ ಜೀವನೈತಿಕ ವಿವಾದಾಂಶಗಳು ಅಥವಾ ಸಮಸ್ಯೆಗಳು ಹೊರಹೊಮ್ಮುತ್ತಲೇ ಇವೆ. ಸಾಮೂಹಿಕ ಅಪಘಾತದ ಘಟನೆಗಳ ಆರಂಭಿಕ ಹಂತಗಳಲ್ಲಿ, ಕ್ಷೇತ್ರದಲ್ಲಿರುವ ವೈದ್ಯ ಸಹಾಯಕರಿಗೆ ಸಂಬಂಧಿಸಿದಂತೆ ಇದೇ ಬಗೆಯ ಸಮಸ್ಯೆಗಳು ಕಂಡುಬರಬಹುದು; ಇಂಥದೊಂದು ಸನ್ನಿವೇಶದಲ್ಲಿ ಸಾಕಷ್ಟು ಗಂಭೀರ ಅಥವಾ ವಿಷಮಸ್ಥಿತಿಯ ರೋಗಿಗಳು, ಅತ್ಯಂತ ಸೀಮಿತ ಮಟ್ಟದಲ್ಲಿರುವ ಸಿಬ್ಬಂದಿ ವ್ಯವಸ್ಥೆ ಹಾಗೂ ಚಿಕಿತ್ಸೆ ಸಂಪನ್ಮೂಲಗಳೊಂದಿಗೆ ಸಂಯೋಜಿಸಲ್ಪಡಬಹುದು.
ಕೃತಕ ಶ್ವಾಸಸಾಧನದ ನಿಗದಿ ಮಾಡುವಿಕೆ
[ಬದಲಾಯಿಸಿ]ಒಂದು ಸಮರ್ಥವಾದ ಇನ್‌ಫ್ಲುಯೆನ್ಸಾ ಸರ್ವವ್ಯಾಪಿ ವ್ಯಾಧಿಯಲ್ಲಿ ನಿರೀಕ್ಷಿಸಲ್ಪಡುವ ಪ್ರಕಾರ, ಆಸ್ಪತ್ರೆಗಳು ಮತ್ತು ಚಿಕಿತ್ಸಾ ಕೇಂದ್ರಗಳು ಕಿಕ್ಕಿರಿದು ತುಂಬಿಕೊಳ್ಳುವುದರಿಂದ, ಕೃತಕ ಶ್ವಾಸಸಾಧನಗಳಂಥ ವಿಷಮಸ್ಥಿತಿಯ ಉಪಕರಣದ ಕೊರತೆಯು ಉದ್ಭವವಾಗುತ್ತದೆ. ಔಷಧ ಚಿಕಿತ್ಸೆಗಳಲ್ಲಿ ಕೊರತೆ ಕಂಡುಬರಬಹುದು. ಪೂರೈಕೆಯ ಸರಪಳಿಗಳು ವಿಫಲಗೊಳ್ಳಬಹುದು. ಜೀವ ಉಳಿಸುವ ತಂತ್ರಜ್ಞಾನಗಳ ಸಂಪರ್ಕವನ್ನು ಯಾರು ಸ್ವೀಕರಿಸಲಿದ್ದಾರೆ, ಮತ್ತು ಅದು ಯಾರಿಗೆ ದೊರೆಯುವುದಿಲ್ಲ ಎಂಬುದನ್ನು ನಿರ್ಣಯಿಸುವುದಕ್ಕೆ ಸಂಬಂಧಿಸಿದ ವಿಧಾನಗಳ ಅಗತ್ಯವು ಕಂಡುಬರುತ್ತದೆ. ಉದಾಹರಣೆಗೆ, ಒಂದು ವೇಳೆ ಕಾಲ್ಪನಿಕ ತುರ್ತು ವಿಭಾಗದ ಎಲ್ಲಾ ಮೂರು ಕೃತಕ ಶ್ವಾಸಸಾಧನಗಳನ್ನೂ ಇನ್‌ಫ್ಲುಯೆನ್ಸಾದೊಂದಿಗೆ ಬಳಲುತ್ತಿರುವ ವಯಸ್ಸಾದ ರೋಗಿಗಳು ಪ್ರಸಕ್ತವಾಗಿ ಬಳಸುತ್ತಿದ್ದರೆ ಮತ್ತು ಅವುಗಳಿಲ್ಲದೇ ಅವರು ಬದುಕುಳಿಯುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಮಿಕ್ಕ ವಿಷಯಗಳಲ್ಲಿ ಆರೋಗ್ಯವಾಗಿದ್ದುಕೊಂಡು ಇನ್‌ಫ್ಲುಯೆನ್ಸಾದ ಕಾರಣದಿಂದಾಗಿ ಶ್ವಾಸಸಾಧನವನ್ನು ಅಳವಡಿಸಿಕೊಳ್ಳಬೇಕಾದ ಓರ್ವ ನಲವತ್ತು ವರ್ಷ ವಯಸ್ಸಿನ ವ್ಯಕ್ತಿಯನ್ನು ವೈದ್ಯ ಸಹಾಯಕರು ಕರೆದುಕೊಂಡು ಬಂದಾಗ, ಅವನಿಗಾಗಿ ಆಸ್ಪತ್ರೆಯ ವತಿಯಿಂದ ಯಾವುದೇ ಕೃತಕ ಶ್ವಾಸಸಾಧನವು ಲಭ್ಯವಿಲ್ಲದೇ ಹೋದಾಗ, ತುರ್ತು ವಿಭಾಗವು ಹೇಗೆ ನಿರ್ವಹಿಸಬೇಕು ಎಂಬುದು ಸಂದಿಗ್ಧ ಪರಿಸ್ಥಿತಿಯಾಗುತ್ತದೆ. ತೀವ್ರವಾಗಿ ಕಾಯಿಲೆಯಿಂದ ಬಳಲುತ್ತಿರುವ ಇನ್‌ಫ್ಲುಯೆನ್ಸಾ ರೋಗಿಗಳಿಗೆ ತಮ್ಮ ಕೃತಕ ಶ್ವಾಸಸಾಧನಗಳನ್ನು ಒದಗಿಸುವಂತಾಗಲು, ದೀರ್ಘಕಾಲದಿಂದ ಆರೈಕೆಯ ಸೌಕರ್ಯಗಳಲ್ಲಿರುವ ದೀರ್ಘಾವಧಿಯ ರೋಗಿಗಳು ಜೀವನಾಧಾರ ಪೂರೈಕೆಯ ವ್ಯವಸ್ಥೆಯಿಂದ ಹೊರಗುಳಿಯಬೇಕೇ ಎಂಬ ಕುರಿತು ಇದೇ ತೆರನಾದ ಕಾಳಜಿಯು ಉದ್ಭವವಾಗುತ್ತದೆ.[೩೭]
ಮನೋವೈದ್ಯ ಟಿಯಾ ಪೋವೆಲ್ ನೇತೃತ್ವದ ನ್ಯೂಯಾರ್ಕ್ ಸಂಸ್ಥಾನದ ಒಂದು ಕಾರ್ಯಸಮೂಹವು ಇಂಥ ಚಿಕಿತ್ಸೆಯ ಸರದಿ ನಿರ್ಧಾರಕ್ಕೆ ಸಂಬಂಧಿಸಿದಂತೆ 1997ರಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಸ್ತಾವಿಸಿದೆ.[೩೮][೩೯] ಒಂದು ಸರ್ವವ್ಯಾಪಿ ವ್ಯಾಧಿಯ ಸಂದರ್ಭದಲ್ಲಿನ, ಅಂದರೆ ಸ್ಥಾನಾಂತರಣದ ಕ್ಯಾನ್ಸರ್, ತೀವ್ರಸ್ವರೂಪದ ಮಿದುಳು ಹಾನಿ, ಹೃದಯದ ಬಹು ಸ್ತಂಭನಗಳು ಹಾಗೂ ಅಂಗ ವೈಫಲ್ಯದಂಥ ಸಮಸ್ಯೆಯನ್ನು ಹೊಂದಿರುವ ರೋಗಿಗಳ ನಿರ್ದಿಷ್ಟ ಗುಂಪುಗಳನ್ನು ಜೀವನಾಧಾರದ ಪೂರೈಕೆಯ ವ್ಯವಸ್ಥೆಗಾಗಿರುವ ಅರ್ಹತೆಯಿಂದ ಸದರಿ ಕಾರ್ಯಸಮೂಹವು ಹೊರಗಿಟ್ಟಿತು. ಹೀಗೆ ಹೊರಗಿಡಲ್ಪಟ್ಟವರಲ್ಲಿ ರಕ್ತ ಶುದ್ಧೀಕರಣದ (ಡಯಾಲಿಸಿಸ್) ರೋಗಿಗಳೂ ಸೇರಿದ್ದರು. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಜೀವ ನೈತಿಕತಾವಾದಿಯಾದ ಜಾಕೋಬ್ ಅಪ್ಪೆಲ್ ಎಂಬಾತ, ರಕ್ತ ಶುದ್ಧೀಕರಣದ ರೋಗಿಗಳ ಅನುದ್ದಿಷ್ಟ ಹೊರಗಿಡುವಿಕೆಯನ್ನು ಪ್ರಶ್ನಿಸಿದ್ದಾನೆ. ಅಷ್ಟೇ ಅಲ್ಲ, ಚಿಕಿತ್ಸೆಯ ಸರದಿ ನಿರ್ಧಾರಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಆ ಯಂತ್ರಗಳ ಪೈಕಿ ಶುಶ್ರೂಷಾಗೃಹದ (ನರ್ಸಿಂಗ್ ಹೋಮ್‌ನ) ಕೃತಕ ಶ್ವಾಸಸಾಧನಗಳನ್ನು ಸೇರಿಸಿಕೊಳ್ಳದಿರುವ ಕಾರ್ಯಸಮೂಹದ ತೀರ್ಮಾನವನ್ನೂ ಅವನು ಪ್ರಶ್ನಿಸಿದ್ದಾನೆ.[೪೦] ಎಮೊರಿ ವಿಶ್ವವಿದ್ಯಾಲಯದ ತುರ್ತು ಔಷಧಿ ಪರಿಣಿತನಾದ ಆರ್ಟ್ ಕೆಲ್ಲರ್‌ಮನ್ ಎಂಬಾತ ತನ್ನ ವಾದವನ್ನು ಮಂಡಿಸುತ್ತಾ, "ದಿಗಿಲುಗೊಳಿಸುವಂತಿರುವ ಅಥವಾ ಕೆಲವೊಮ್ಮೆ ಭಯಗೊಳಿಸುವಂತೆಯೂ ಕಾಣಿಸುವ ಈ ತೆರನಾದ ಆಲೋಚನೆಯು, ಸಂಪೂರ್ಣವಾಗಿ ನಿರ್ಣಾಯಕವಾಗಿದೆ ಮತ್ತು ಒಂದು ಸರ್ವವ್ಯಾಪಿ ವ್ಯಾಧಿಯ ಮಧ್ಯದಲ್ಲಿ ಹಾರಾಡುತ್ತಿರುವುದಕ್ಕಿಂತ ಈಗ ಉತ್ತಮವಾಗಿ ಮಾಡಲ್ಪಟ್ಟಿದೆ" ಎಂದು ತಿಳಿಸಿದ್ದಾನೆ.[೪೧]
ವಿಶ್ವಾದ್ಯಂತದ ವೈದ್ಯ ವೃತ್ತಿಪರಿಣಿತರು, ಜೀವ ನೈತಿಕತಾವಾದಿಗಳು ಮತ್ತು ಇತರರು ಈ ಪ್ರಶ್ನೆಗಳೊಂದಿಗೆ ತಿಕ್ಕಾಟವನ್ನು ನಡೆಸುತ್ತಿದ್ದರು. ಪರ್ಯಾಯ ಆರೈಕೆಯ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆಯು ನಡೆಯುತ್ತಲೇ ಇದೆ, ಮತ್ತು ಇಂಥ ಸನ್ನಿವೇಶಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ತೀರ್ಮಾನದ-ಬೆಂಬಲದ ಮಾದರಿಗಳನ್ನು ಹಲವಾರು ಕೇಂದ್ರಗಳು ಪ್ರಸ್ತಾವಿಸುತ್ತವೆ.[೪೨] ಇಂಥ ಕೆಲವೊಂದು ಮಾದರಿಗಳು ಮೂಲದಲ್ಲಿ ಅಪ್ಪಟವಾಗಿ ನೈತಿಕ ಸ್ವರೂಪವನ್ನು ಹೊಂದಿದ್ದರೆ, ಇತರ ಮಾದರಿಗಳು ರೋಗಿಯ ರೋಗಸ್ಥಿತಿಯ ವೈದ್ಯಕೀಯ ವರ್ಗೀಕರಣದ ಇತರ ಸ್ವರೂಪಗಳನ್ನು ಪ್ರಮಾಣಕವಾಗಿಸಲ್ಪಟ್ಟ ಚಿಕಿತ್ಸೆಯ ಸರದಿ ನಿರ್ಧಾರದ ಒಂದು ವಿಧಾನವಾಗಿ ಬಳಸಲು ಪ್ರಯತ್ನಿಸುತ್ತವೆ.[೪೩]
ಇವನ್ನೂ ನೋಡಿ
[ಬದಲಾಯಿಸಿ]- ಯುದ್ಧಭೂಮಿ ಔಷಧಿ
- ಕದನದ ಒತ್ತಡದ ಪ್ರತಿಕ್ರಿಯೆ
- ಪ್ರಥಮ ಚಿಕಿತ್ಸೆ
- ಸಾಮೂಹಿಕ ನಿರ್ಮಲೀಕರಣ
- ದೂರದ ಶರೀರ ವಿಜ್ಞಾನದ ನಿಯಂತ್ರಣ ಕಾರ್ಯ
- ಪಾಳುಭೂಮಿಯ ಪ್ರಥಮ ಚಿಕಿತ್ಸೆ
- ಮಾನಸಿಕ ಆರೋಗ್ಯ ಚಿಕಿತ್ಸೆಯ ಸರದಿ ನಿರ್ಧಾರ - ಶಾರೀರಿಕ ಚಿಕಿತ್ಸೆಯ ಸರದಿ ನಿರ್ಧಾರವನ್ನು ಹೋಲುವಂತಿರುವ ಮನೋವೈದ್ಯಕೀಯ ತುರ್ತುಸ್ಥಿತಿಗಳನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದ ಆಸ್ಟ್ರೇಲಿಯಾದ ಪರಿಕಲ್ಪನೆಯ ಒಂದು ಸಂಕ್ಷಿಪ್ತ ಅವಲೋಕನ.
- ಕ್ಷೇತ್ರಕಾರ್ಯದಲ್ಲಿನ ಚಿಕಿತ್ಸೆಯ ಸರದಿ ನಿರ್ಧಾರ
ಆಕರಗಳು
[ಬದಲಾಯಿಸಿ]- ↑ "Merriam-Webster Online Dictionary". Retrieved 2008-12-05.
- ↑ "Merriam-Webster Online Dictionary". Retrieved 2008-12-02.
- ↑ "NHS Direct website". Archived from the original on 2014-03-30. Retrieved 2008-12-02.
- ↑ Iserson KV, Moskop JC (2007). "Triage in medicine, part I: Concept, history, and types". Ann Emerg Med. 49 (3): 275–81. doi:10.1016/j.annemergmed.2006.05.019. PMID 17141139.
{{cite journal}}
: Unknown parameter|month=
ignored (help) - ↑ Chipman M, Hackley BE, Spencer TS (1980). "Triage of mass casualties: concepts for coping with mixed battlefield injuries". Mil Med. 145 (2): 99–100. PMID 6768037.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ [www.nrccnrc.gc.ca/highlights/2006/0606triage_e.html "Transforming Triage Technology (National Research Council of Canada website)"]. Retrieved 2008-12-02.
{{cite web}}
: Check|url=
value (help) - ↑ "Webster's ONline Dictionary". Archived from the original on 2021-03-09. Retrieved 2008-12-02.
- ↑ Burstein, Jonathan L.; Hogan, David (2007). Disaster medicine. Philadelphia: Wolters Kluwer Health/Lippincott Williams & Wilkins. p. 25. ISBN 0-7817-6262-6.
{{cite book}}
: CS1 maint: multiple names: authors list (link) - ↑ http://www.emspanol.com
- ↑ "The Field Triage (European Trauma Course)". Archived from the original on 2008-12-07. Retrieved 2008-12-02.
- ↑ "Medical Surge Capacity and Capability" (PDF). Archived from the original (PDF) on 2004-11-05. Retrieved 2008-12-04.
- ↑ "National Disaster Life Support Foundation website". Archived from the original on 2008-12-07. Retrieved 2008-12-04.
- ↑ "Military Triage". Retrieved 2008-12-04.
- ↑ Elixson EM (1991). "Hypothermia. Cold-water drowning". Crit Care Nurs Clin North Am. 3 (2): 287–92. PMID 2054134.
{{cite journal}}
: Unknown parameter|month=
ignored (help) - ↑ Idoguchi K, Mizobata Y; et al. (2006). "Usefulness of Our Proposed Format of Triage Tag". Journal of Japanese Association for Acute Medicine. 17 (5): 183–191. Archived from the original on 2008-12-06. Retrieved 2010-07-12.
{{cite journal}}
: Cite has empty unknown parameter:|month=
(help); Explicit use of et al. in:|author=
(help) - ↑ Nocera A, (2000). "Australian disaster triage: a colour maze in the Tower of Babel" (PDF). Australian Journal of Emergency Management: 35–40.
{{cite journal}}
: Unknown parameter|month=
ignored (help)CS1 maint: extra punctuation (link) - ↑ "METTAG Corporate website". Archived from the original on 2019-03-28. Retrieved 2008-12-05.
- ↑ "Smart Triage Tag (TSG Associates Corporate website". Archived from the original on 2008-11-20. Retrieved 2008-12-05.
- ↑ Lakha, Raj; Tony Moore (2006). Tolley's handbook of disaster and emergency management. Amsterdam: Elsevier. ISBN 0-7506-6990-X.
{{cite book}}
: CS1 maint: multiple names: authors list (link) - ↑ Turegano-Fuentes F, Perez-Diaz D; et al. (2008). "Overall Assessment of the Response to Terrorist Bombings in Trains, Madrid, 11 March 2004". European Journal of Trauma and Emergency Surgery. 34 (5): 433–441. doi:10.1007/s00068-008-8805-2.
{{cite journal}}
: Cite has empty unknown parameter:|month=
(help); Explicit use of et al. in:|author=
(help) - ↑ "US Army Study Guide". Retrieved 2008-12-04.
- ↑ Koehler RH, Smith RS, Bacaner T (1994). "Triage of American combat casualties: the need for change". Mil Med. 159 (8): 541–7. PMID 7824145.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ "Canadian Triage and Acuity Scale (Canadian Association of Emergency Physicians website)". Archived from the original on 2008-12-10. Retrieved 2008-12-02.
- ↑ "METTAG Triage Tags". Archived from the original on 2019-03-28. Retrieved 2008-12-02.
- ↑ "Major Incident Medical Management and Support Course" (PDF). Retrieved 2008-12-04.
- ↑ Ryan J; Pérez-Díaz, Dolores; Sanz-Sánchez, Mercedes; Ortiz Alonso, Javier (2008). "Triage: Principles and Pressures". European Journal of Trauma and Emergency Surgery. 34 (5): 427–432. doi:10.1007/s00068-008-8805-2.
{{cite journal}}
: Cite has empty unknown parameter:|month=
(help) - ↑ Jill Windle; Manchester Triage Group Staff; Mackway-Jones, Kevin; Marsden, Janet (2006). Emergency triage. Cambridge, MA: Blackwell Pub. ISBN 0-7279-1542-8.
{{cite book}}
: CS1 maint: multiple names: authors list (link) - ↑ David L. Hoyt; Wilson, William J.; Grande, Christopher M. (2007). Trauma. Informa Healthcare. ISBN 0-8247-2919-6.
{{cite book}}
: CS1 maint: multiple names: authors list (link) - ↑ "Telemedical support of emergency prehospital care in mass casualty incidents" (PDF). Archived from the original (PDF) on 2011-07-19. Retrieved 2008-12-04.
- ↑ Beck A, Bayeff-Filloff M, Bischoff M, Schneider BM (2002). "[Analysis of the incidence and causes of mass casualty events in a southern Germany medical rescue area]". Unfallchirurg (in German). 105 (11): 968–73. doi:10.1007/s00113-002-0516-2. PMID 12402122.
{{cite journal}}
: Unknown parameter|month=
ignored (help)CS1 maint: multiple names: authors list (link) CS1 maint: unrecognized language (link) - ↑ "Magen David Adom: The EMS Israeli Experience" (PDF). Retrieved 2008-12-05.
- ↑ "Code Orange Plan (Assiniboine Regional Health Authority)" (PDF). Archived from the original (PDF) on 2008-12-05. Retrieved 2008-12-05.
- ↑ "Chapter 8: Clinical and Public Health Systems Issues Arising from the Outbreak of Sars in Toronto (Public Health Agency of Canada website)". Retrieved 2008-12-05.
- ↑ Mehta S (2006). "Disaster and mass casualty management in a hospital: How well are we prepared?" (PDF). J Postgrad Med. 52 (2).
{{cite journal}}
: Unknown parameter|month=
ignored (help) - ↑ Slater RR (1970). "Triage nurse in the emergency department". Am J Nurs. 70 (1). Lippincott Williams &: 127–9. doi:10.2307/3421031. PMID 5196143.
{{cite journal}}
: Unknown parameter|month=
ignored (help) - ↑ ದಿ ಕಮಿಂಗ್ ಎಥಿಕಲ್ ಕ್ರೈಸಿಸ್: ಆಕ್ಸಿಜನ್ ರೇಷನಿಂಗ್
- ↑ ದಿ ಕಮಿಂಗ್ ಎಥಿಕಲ್ ಕ್ರೈಸಿಸ್: ಆಕ್ಸಿಜನ್ ರೇಷನಿಂಗ್
- ↑ ಮಾರ್ಗದರ್ಶಿ ಸೂತ್ರಗಳು
- ↑ ಕಾರ್ನೆಲಿಯಾ ಡೀನ್, ಗೈಡ್‌ಲೈನ್ಸ್ ಫಾರ್ ಎಪಿಡಮಿಕ್ಸ್: ಹೂ ಗೆಟ್ಸ್ ಎ ವೆಂಟಿಲೇಟರ್?, ದಿ ನ್ಯೂಯಾರ್ಕ್ ಟೈಮ್ಸ್ , ಮಾರ್ಚ್ 25, 2008
- ↑ ಅಪ್ಪೆಲ್, ಜಾಕೋಬ್. ದಿ ಕಮಿಂಗ್ ಎಥಿಕಲ್ ಕ್ರೈಸಿಸ್: ಆಕ್ಸಿಜನ್ ರೇಷನಿಂಗ್ ಜೂನ್ 26, 2009
- ↑ ಕಾರ್ನೆಲಿಯಾ ಡೀನ್, ಗೈಡ್‌ಲೈನ್ಸ್ ಫಾರ್ ಎಪಿಡಮಿಕ್ಸ್: ಹೂ ಗೆಟ್ಸ್ ಎ ವೆಂಟಿಲೇಟರ್?, ದಿ ನ್ಯೂಯಾರ್ಕ್ ಟೈಮ್ಸ್ , ಮಾರ್ಚ್ 25, 2008
- ↑ "Who dies, who doesn't: docs decide flu pandemic guidelines (CBC News Item)". Archived from the original on 2007-03-11. Retrieved 2008-12-02.
- ↑ Christian MD, Hawryluck L, Wax RS; et al. (2006). "Development of a triage protocol for critical care during an influenza pandemic". CMAJ. 175 (11): 1377–81. doi:10.1503/cmaj.060911. PMC 1635763. PMID 17116904.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link)
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using the JsonConfig extension
- CS1 errors: unsupported parameter
- CS1 maint: multiple names: authors list
- CS1 errors: URL
- CS1 errors: empty unknown parameters
- CS1 errors: explicit use of et al.
- CS1 maint: extra punctuation
- CS1 maint: unrecognized language
- Articles with hatnote templates targeting a nonexistent page
- Articles with unsourced statements from May 2010
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Commons category link is on Wikidata
- ಚಿಕಿತ್ಸೆಯ ಸರದಿ ನಿರ್ಧಾರ
- ಫ್ರೆಂಚ್ ವೈದ್ಯಕೀಯ ನುಡಿಗಟ್ಟುಗಳು
- ಸ್ಪ್ಯಾನಿಷ್-ಇಂಗ್ಲಿಷ್ ಚಿಕಿತ್ಸೆಯ ಸರದಿ ನಿರ್ಧಾರ