ಚಿರೋಂಜಿ
ಗೋಚರ
ಚಿರೋಂಜಿ (ಬ್ಯೂಕ್ಯಾನಾನೀಯಾ ಲ್ಯಾನ್ಜ಼್ಯಾನ್) ತಿನ್ನಲರ್ಹ ಬೀಜಗಳನ್ನು ಉತ್ಪಾದಿಸುವ ಒಂದು ಮರ. ಈ ಬೀಜಗಳನ್ನು ಮುಖ್ಯವಾಗಿ ಭಾರತದಲ್ಲಿ ಅಡುಗೆ ಸಂಬಾರ ಪದಾರ್ಥವಾಗಿ ಬಳಸಲಾಗುತ್ತದೆ. ಚಿರೋಂಜಿ ಮರ ಭಾರತದಾದ್ಯಂತ ಬೆಳೆಯಲಾಗುತ್ತದೆ, ಮುಖ್ಯವಾಗಿ ವಾಯವ್ಯ ಭಾರತದಲ್ಲಿ, ಮತ್ತು ಇದರ ಬೀಜಗಳು ಸಣ್ಣದಾಗಿದ್ದು ಬಾದಾಮಿಗೆ ಹೋಲುವ ಪರಿಮಳವನ್ನು ಹೊಂದಿರುತ್ತವೆ. ಗಟ್ಟಿಯಾದ ಚಿಪ್ಪನ್ನು ಒಡೆದ ನಂತರ, ಪೀತದಾರು ಕಾಯಿಯಷ್ಟೇ ಮೆತ್ತಗಿರುವ ಒಳಗಿನ ಮೋಟುಮೋಟಾದ ಬೀಜ ದೊರೆಯುತ್ತದೆ.