ವಿಷಯಕ್ಕೆ ಹೋಗು

ಚೆಲ್ವಾಂಬಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಚೆಲ್ವಾಂಬೆ ಮೈಸೂರುದೊರೆ ಕೃಷ್ಣರಾಜ ಒಡೆಯರ (೧೭೧೩-೧೭೩೨) ಪಟ್ಟಮಹಿಷಿ. ಇವಳು ಬರೆದ ವರನಂದಿ ಕಲ್ಯಾಣದಲ್ಲಿ ೭ ಸಂಧಿಗಳು ಹಾಗು ೮೮೧ ಪದ್ಯಗಳಿವೆ. ದಿಲ್ಲಿಬಾದಶಹನ ಮಗಳಾದ ವರನಂದಿ ಹಾಗು ಮೇಲುಕೋಟೆಯ ದೈವ ಚೆಲುವರಾಯಸ್ವಾಮಿಯ ವಿವಾಹವು ಈ ಕಾವ್ಯದ ವಸ್ತು.

ಇವಳ ಇತರ ಕೃತಿಗಳು:

  • ವೆಂಕಟಾಚಲ ಮಹಾತ್ಮ್ಯ ಲಾಲಿ ಪದ
  • ಅಲಮೇಲು ಮುಂಗೈ ಲಾಲಿಪದ
  • ತಲಕಾವೇರಿ ಮಹಾತ್ಮ್ಯ ಟೀಕೆ.

'ಕೃಷ್ಣಕರ್ಣಾಮೃತ ಟೀಕೆ'ಯನ್ನೂ ಈಕೆ ಬರೆದಿದ್ದಳೆನ್ನಲಾಗಿದೆ.