ವಿಷಯಕ್ಕೆ ಹೋಗು

ಚೇತನ್ ಜೋಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೇತನ್ ಜೋಶಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಂಪ್ರದಾಯದಲ್ಲಿ ಪ್ರಸಿದ್ಧ ಕೊಳಲು ವಾದಕರು. ಅವರು ಝರಿಯಾದಲ್ಲಿ ಜನಿಸಿದರು ಮತ್ತು ನೊಮುಂಡಿ ಮತ್ತು ಬೊಕಾರೊ ಸ್ಟೀಲ್ ಸಿಟಿಯಲ್ಲಿ ಬೆಳೆದರು. ಅವರು ದಿವಂಗತ ಆಚಾರ್ಯ ಜಗದೀಶ್ (ಬೊಕಾರೊ), ದಿವಂಗತ ಪಂಡಿತ್ ಭೋಲಾನಾಥ್ ಪ್ರಸನ್ನ (ಅಲಹಾಬಾದ್), ದಿವಂಗತ ಪಂಡಿತ್ ರಘುನಾಥ್ ಸೇಠ್ (ಮುಂಬೈ) [] ಮತ್ತು ಪಂಡಿತ್ ಅಜೋಯ್ ಚಕ್ರವರ್ತಿ (ಕೋಲ್ಕತ್ತಾ) ಅವರಲ್ಲಿ ಸಂಗೀತ ತರಬೇತಿಯನ್ನು ಪಡೆದರು. []

ಆರಂಭಿಕ ಜೀವನ

[ಬದಲಾಯಿಸಿ]

ಅವರು ಬಿಹಾರದ (ಈಗಿನ ಜಾರ್ಖಂಡ್ ) ಧನ್ಬಾದ್ ಜಿಲ್ಲೆಯ ಝರಿಯಾದಲ್ಲಿ ಜನಿಸಿದರು. ಅವರ ತಂದೆ ಭೂಪೇಂದ್ರ ಜೋಶಿಯವರು ಚಹಾ ವ್ಯಾಪಾರಿಯಾಗಿದ್ದರು. ಅವರು ತಮ್ಮ ಮೆಟ್ರಿಕ್ಯುಲೇಷನ್ ಅನ್ನು ರಾಮಚಂದ್ರ ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಅಲಹಾಬಾದ್ ಪದವಿ ಕಾಲೇಜಿನಿಂದ ಪ್ರಯಾಗರಾಜ್‌ನಲ್ಲಿ ಪೂರ್ಣಗೊಳಿಸಿದರು. ಅವರು ಬೊಕಾರೊ ಕಾಲೇಜಿನಿಂದ ಪದವಿಯನ್ನು ಪಡೆದರು. [] []

ವೃತ್ತಿ

[ಬದಲಾಯಿಸಿ]

ಅವರು ೧೯೮೭ ರಿಂದ ಗುರು ಗೋಬಿಂದ್ ಸಿಂಗ್ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಕೊಳಲು ಪಾಠವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲು ಆರಂಭಿಸಿದರು. ನಂತರ ಅವರು ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ೧೯೮೮ರಿಂದ ೨೦೧೨ರವರೆಗೆ ಸಂಗೀತ ಶಿಕ್ಷಕರಾಗಿದ್ದರು. ೨೦೧೨ ರಿಂದ, ಅವರು ನೋಯ್ಡಾದ ವಿವಿಧ ಪ್ರದರ್ಶನಗಳಲ್ಲಿ ಕೊಳಲು ನುಡಿಸಿದರು.

ಪ್ರದರ್ಶನಗಳು

[ಬದಲಾಯಿಸಿ]

ದೆಹಲಿಯ ಪ್ರಮುಖ ಶಾಸ್ತ್ರೀಯ ವಾದ್ಯಗಾರರಲ್ಲಿ ಒಬ್ಬರಾಗಿದ್ದ, ಚೇತನ್ ಜೋಶಿ ಕಳೆದ ಮೂವತ್ತು ವರ್ಷಗಳಿಂದ ವಿವಿಧ ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಡಿಸೆಂಬರ್ ೨೦೦೪ರ ಮೊದಲ ಮತ್ತು ಎರಡನೇ ವಾರದಲ್ಲಿ, ಹಜಾರಿಬಾಗ್, ಧನ್ಬಾದ್, ಬೊಕಾರೊ, ರಾಂಚಿ, ಮುಂಗೇರ್ ಮತ್ತು ಕೋಲ್ಕತ್ತಾ ಮುಂತಾದ ಸ್ಥಳಗಳಲ್ಲಿ ಆಯೋಜಿಸಲಾದ ಜುಗಲ್ಬಂದಿ ಕಛೇರಿಗಳ ಸರಣಿಯಲ್ಲಿ ವೇಣು ನಾಡ್ (ಕೊಳಲಿನ ಧ್ವನಿ) ಎಂಬ ಕಾರ್ಯಕ್ರಮಕ್ಕಾಗಿ ಅವರು ಜಪಾನಿನ ಕಲಾವಿದರೊಂದಿಗೆ ಪ್ರದರ್ಶನಗಳನ್ನು ನೀಡಿದರು. . ಅವರು ದೇಶದ ವಿವಿಧ ಭಾಗಗಳಿಂದ ಸಂತೂರ್, ಪಿಟೀಲು, ಗಿಟಾರ್, ಸಿತಾರ್, ಸರೋದ್ ಮತ್ತು ಕೊಳಲು ಕಲಾವಿದರೊಂದಿಗೆ ಜುಗಲ್ಬಂದಿಯನ್ನು ಪ್ರದರ್ಶಿಸಿದ್ದಾರೆ.

೨೦೦೬ರಲ್ಲಿ ಜೆಮ್ಷೆಡ್ಪುರದ ಎಕ್ಸ್ಎಲ್ಆರ್ಐನಲ್ಲಿ, ೨೦೦೮ರಲ್ಲಿ ಗುವಾಹಟಿಯ ರವೀಂದ್ರ ಭವನದಲ್ಲಿ ಮತ್ತು ೨೦೧೨ರಲ್ಲಿ ಐಐಎಂ ರಾಂಚಿಯಲ್ಲಿ ಪ್ರದರ್ಶನ ನೀಡಿದ್ದರು.

ಸೆಪ್ಟೆಂಬರ್ ೨೦೧೬ರಲ್ಲಿ ನೆಡೆದ ರಸ್ರಂಗ್ ವರ್ಲ್ಡ್ ಕೊಳಲು ಉತ್ಸವದ ೭ನೇ ಆವೃತ್ತಿಯಲ್ಲಿ ಪ್ರದರ್ಶನ ನೀಡಿದರು, ಇದು ಐದು ದಿನಗಳ ಕಾಲ ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿತ್ತು. ಇದರಲ್ಲಿ ಇಟಲಿ, ಸ್ಲೋವಾಕಿಯಾ ಮತ್ತು ಅಫ್ಘಾನಿಸ್ತಾನದಂತಹ ಹಲವಾರು ದೇಶಗಳ ಕಲಾವಿದರು ಭಾಗವಹಿಸಿದರು. ಹರಿಪ್ರಸಾದ್ ಚೌರಾಸಿಯಾ ಮತ್ತು ರೋನು ಮಜುಂದಾರ್ ಅವರಂತಹ ಭಾರತದ ಇತರ ಪ್ರಮುಖ ಕೊಳಲುವಾದಕರು ಈ ಉತ್ಸವದಲ್ಲಿ ಭಾಗವಹಿಸಿದ್ದರು. ಉತ್ಸವವು ವಿಶೇಷವಾಗಿ ಯುಎನ್ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಸಂಬಂಧ ಹೊಂದಿದೆ ಮತ್ತು ವಿಶ್ವ ಶಾಂತಿಯನ್ನು ಪ್ರಚಾರ ಮಾಡುವುದು ಇದರ ಗುರಿಯಾಗಿದೆ. [] []

ಅವರು ೮ ಏಪ್ರಿಲ್ ೨೦೧೭ ರಂದು ಪಂಜಾಬ್ ಕಲಾ ಭವನದಲ್ಲಿ ಸಂಸ್ಕಾರ ಭಾರತಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದರು []

೨೦೨೨ ರ ಡಿಸೆಂಬರ್ ೪ನೇ ಭಾನುವಾರ ಅವರು ಸೆಲೆಬ್ರಿಟಿ ಶೋ ನಿರುಪಕಿಯಾದ ಶ್ರೀಮತಿ ನಿಧಿ ಕುಮಾರ್ ಅವರೊಂದಿಗೆ ಸ್ಕೂಲ್ಜ್ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದರು. []

ಪ್ರಶಸ್ತಿಗಳು

[ಬದಲಾಯಿಸಿ]

ಅವರಿಗೆ ಜಾರ್ಖಂಡ್ ಸರ್ಕಾರವು ರಾಜಕೀಯ ಸಾಂಸ್ಕೃತಿಕ ಸಮ್ಮಾನ್ (ರಾಜ್ಯ ಗೌರವ) ಪ್ರಶಸ್ತಿಯನ್ನು ನೀಡಿದೆ ಸನ್ಮಾನಿಸಿದೆ. ಅವರು ಸುರ್ ಮಣಿ, ಬಿಸ್ಮಿಲ್ಲಾ ಸಮ್ಮಾನ್, ಸಂಗೀತ ಕಲಾ ಗೌರವ ಪ್ರಶಸ್ತಿ, ಕಲಾ ರತ್ನ ಸಮ್ಮಾನ್, ಸಂಗಮ ಸಮ್ಮಾನ್ ಮತ್ತು ಇತರ ಅನೇಕ ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಸಹ ಪಡೆದಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. Rajan, Anjana (7 March 2014). "On wings of harmony". The Hindu, New Delhi. Mumbai, India. Retrieved 14 March 2014.
  2. Kumar, Navtan (16 November 2005). "State flautist to play in reel life - Mumbai-based producer to make docu-drama on musician from Jharkhand". The Telegraph. Calcutta, India. Archived from the original on 24 October 2012. Retrieved 21 May 2010.
  3. "संगीत नाटक अकादमी अवार्ड 2019 के लिए बोकारो के चेतन जोशी का हुआ चयन" (in Hindi). thefollowup. 28 November 2022. Retrieved 28 November 2022.{{cite news}}: CS1 maint: unrecognized language (link)
  4. "झारखंड के चेतन जोशी को संगीत नाटक अकादमी अवार्ड 2019, बांसुरी वादन में बेहतरीन प्रदर्शन के लिए सम्मान" (in Hindi). etvbharat. 27 November 2022. Retrieved 28 November 2022.{{cite news}}: CS1 maint: unrecognized language (link)
  5. "7th World Flute Festival to propagate global peace". Business Standard, New Delhi. 8 June 2016. Retrieved 27 October 2016.
  6. "Bamboo tunes to bring a message of peace". The Hindu, New Delhi. 9 June 2016. Retrieved 27 October 2016.
  7. "Chetan's flute recital captivates audience". The Tribune, Chandigarh. 9 April 2017. Archived from the original on 9 ಏಪ್ರಿಲ್ 2017. Retrieved 10 April 2017.
  8. "Fish Tank- MUSIC OF INDIA: FLUTE". Skoolz. Skoolz. Archived from the original on 14 ಮಾರ್ಚ್ 2023. Retrieved 4 December 2022.