ವಿಷಯಕ್ಕೆ ಹೋಗು

ಜಲ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಲ್ಲಿ

ಜಲ್ಲಿ ಎಂದರೆ ಕಲ್ಲಿನ ತುಂಡುಗಳ ಸಡಿಲ ಸಮೂಹ. ಜಲ್ಲಿಯನ್ನು ಕಣದ ಗಾತ್ರದ ವ್ಯಾಪ್ತಿಯ ಪ್ರಕಾರ ವರ್ಗೀಕರಿಸಲಾಗುತ್ತದೆ ಮತ್ತು ಹರಳಿನಿಂದ ದೊಡ್ಡ ಕಲ್ಲು ಗಾತ್ರದ ವರ್ಗಗಳನ್ನು ಒಳಗೊಳ್ಳುತ್ತದೆ. ಒಂದು ಘನ ಮೀಟರ್ ಜಲ್ಲಿಯು ಸುಮಾರು ೧,೮೦೦ ಕೆ.ಜಿ. ತೂಕ ಹೊಂದಿರುತ್ತದೆ.

ಜಲ್ಲಿ ಒಂದು ಮುಖ್ಯವಾದ ವಾಣಿಜ್ಯ ಉತ್ಪನ್ನವಾಗಿದೆ ಮತ್ತು ಅನೇಕ ಉಪಯೋಗಗಳನ್ನು ಹೊಂದಿದೆ. ಅನೇಕ ರಸ್ತೆಗಳಿಗೆ ಜಲ್ಲಿಯಿಂದ ಮೇಲಿನ ಪದರವನ್ನು ನೀಡಲಾಗುತ್ತದೆ, ವಿಶೇಷವಾಗಿ ಕಡಿಮೆ ಸಂಚಾರವಿರುವ ಗ್ರಾಮೀಣ ಪ್ರದೇಶಗಳಲ್ಲಿ. ಜಾಗತಿಕವಾಗಿ, ಬಹಳ ಹೆಚ್ಚು ರಸ್ತೆಗಳಿಗೆ ಕಾಂಕ್ರೀಟ್ ಅಥವಾ ಆಸ್ಫಾಲ್ಟ್‌‍ನ ಬದಲಾಗಿ ಜಲ್ಲಿಯ ಮೇಲ್ಪದರವನ್ನು ನೀಡಲಾಗುತ್ತದೆ; ರಷ್ಯಾ ಒಂದೇ ೪೦೦,೦೦೦ ಕಿ.ಮಿ. ಗಿಂತ ಹೆಚ್ಚು ಜಲ್ಲಿ ರಸ್ತೆಗಳನ್ನು ಹೊಂದಿದೆ.[] ಮರಳು ಮತ್ತು ಸಣ್ಣ ಜಲ್ಲಿ ಎರಡೂ ಕಾಂಕ್ರೀಟ್‌ನ ಉತ್ಪಾದನೆಗೆ ಕೂಡ ಮುಖ್ಯವಾಗಿವೆ.

ಭಾರೀ ಜಲ್ಲಿ ನಿಕ್ಷೇಪಗಳು ಸಾಮಾನ್ಯ ಭೌಗೋಳಿಕ ಲಕ್ಷಣವಾಗಿದ್ದು, ಬಂಡೆಗಳ ಶಿಥಿಲೀಕರಣ ಮತ್ತು ಸವೆತದ ಪರಿಣಾಮವಾಗಿ ರೂಪಗೊಳ್ಳುತ್ತವೆ. ನದಿಗಳು ಮತ್ತು ಅಲೆಗಳ ಕ್ರಿಯೆಯು ದೊಡ್ಡ ಪ್ರಮಾಣದಲ್ಲಿ ಜಲ್ಲಿಯನ್ನು ಪೇರಿಸುವ ಪ್ರವೃತ್ತಿ ಹೊಂದಿರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "1 KWAME NKRUMAH UNIVERSITY OF SCIENCE AND TECHNOLOGY" (PDF). 1 KWAME NKRUMAH UNIVERSITY OF SCIENCE AND TECHNOLOGY. Archived from the original (PDF) on 2015-09-25. Retrieved 2020-03-21.


"https://kn.wikipedia.org/w/index.php?title=ಜಲ್ಲಿ&oldid=1153304" ಇಂದ ಪಡೆಯಲ್ಪಟ್ಟಿದೆ