ಜಸ್ಪಾಲ್ ಭಟ್ಟಿ
ಪಂಜಾಬಿನ ಚಿತ್ರ ನಿರ್ಮಾಪ(೩, ಮಾರ್ಚ್,೧೯೫೫– ೨೫ ಅಕ್ಟೋಬರ್, ೨೦೧೨) ನಿರ್ದೇಶಕ, ವ್ಯಂಗ್ಯಚಿತ್ರ ಲೇಖಕ, ಜಸ್ಪಾಲ್ ಭಟ್ಟಿಯವರು, ಸಾಮಾನ್ಯ ಮನುಷ್ಯನ ಭಾವನೆಗಳಿಗೆ ಸ್ಪಂದಿಸಿ ಹಾಸ್ಯದ ಮೂಲಕ ನಿತ್ಯಜೀವನದಲ್ಲಿ ಕಾಣುವ ಲಂಚ ಮೊದಲಾದ ಹಲವಾರು ಅನಿಷ್ಟ ಸಂಪ್ರದಾಯಗಳನ್ನು ವಿರೋಧಿಸಿ, ವೀಕ್ಷಕರ ಹೃದಯವನ್ನು ಮೀಟುವ ಸನ್ನಿವೇಶಗಳನ್ನು ಕಿರುತೆರೆಯಮೇಲೆ ಸಮರ್ಥವಾಗಿ ತಂದ ಒಬ್ಬ ವಿಶೇಷ ವ್ಯಕ್ತಿ.[೧]
ಜನನ
[ಬದಲಾಯಿಸಿ]ಜಸ್ಪಾಲ್ ಭಟ್ಟಿ ಯವರು ಅಮೃತ್ಸರ್ ನಲ್ಲಿ, ರಾಜ್ಪುತ್ ಸಿಖ್ ಪರಿವಾರದಲ್ಲಿ, ೩, ಮಾರ್ಚ್ ೧೯೫೫ ರಲ್ಲಿ ಜನಿಸಿದರು. ಚಂದೀಘಡದ, ಪಂಜಾಬ್ ಇಂಜಿನಿಯರಿಂಗ್ ಕಾಲೇಜ್ ನ ಇಲೆಕ್ಟಿಕಲ್ ಇಂಜನಿಯರಿಂಗ್ ಪದವೀಧರ. ಬಾಲ್ಯದಿಂದಲೂ ನಾಟಕ ಕಲೆಯಲ್ಲಿ ಆಸಕ್ತರು. ಕಾಲೇಜಿನ ದಿನಗಳಲ್ಲೂ ಲಂಚದ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ಎಲ್ಲಾ ವಲಯಗಳಲ್ಲೂ ಪ್ರಮುಖಪಾತ್ರ ವಹಿಸಿ ದುಡಿದರು. ಫ್ಲಾಪ್ ಶೊ ಎಂಬ ಅತ್ಯಂತ ಜನಪ್ರಿಯ ಧಾರಾವಾಹಿಯಿಂದ ರಾಷ್ಟ್ರದ ಜನತೆಗೆ ಪರಿಚಿತರಾದರು. ಅವರ ಜೊತೆ ನಟಿಸಿದ ವಿವೇಕ್ ಶೌಕ್ ಎಂಬ ಕಲಾವಿದರು, ಮುಂದೆ ಹಿಂದಿ ಸಿನಿಮಾದಲ್ಲೂ ನಟಿಸಿ ಹೆಸರುಗಳಿಸಿದರು. ಆದರೆ ಅವರು ಅನಾರೋಗ್ಯದಿಂದ ಬಳಲಿ, ಸನ್. ೨೦೦೧ ರ, ಜನವರಿ, ೧೦ ರಂದು ವಿಧಿವಶರಾದರು.
ಮದುವೆ
[ಬದಲಾಯಿಸಿ]'ಸವಿತ'ರವರನ್ನು ಜಸ್ಪಾಲ್ ಭಟ್ಟಿಯವರು, ೨೪, ಮಾರ್ಚ್, ೧೯೮೫ ರಲ್ಲಿ ವಿವಾಹವಾದರು. 'ಸವಿತಾ', ಜಸ್ಪಾಲ್ ಭಟ್ಟಿಯವರ ಹಲವಾರು ಧಾರಾವಾಹಿಗಳಲ್ಲಿ ಪ್ರಮುಖ ಭೂ,ಮಿಕೆಯಲ್ಲಿ ಅಭಿನಯಿಸಿದ್ದಾರೆ
ಕಾರ್ ಅಪಘಾತ
[ಬದಲಾಯಿಸಿ]ಭಾಟಿಂಡ-ಜಲಂಧರ್ ದಾರಿಯಲ್ಲಿ ಕಾರ್ ನಲ್ಲಿ 'ಜಸ್ಪಾಲ್ ಭಟ್ಟಿ,ಮಗ ಜಸ್ರಾಜ್,ಹಾಗೂ'ಸುರಿಲಿ ಗೌತಮ್ 'ಸಹಿತ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದರು. ೨-೩೦ ಬೆಳಿಗ್ಯೆ ಅವರ ಕಾರು ಒಂದು ಮರಕ್ಕೆ ಡಿಕ್ಕಿ ಹೊಡೆದಪರಿಣಾಮವಾಗಿ, ತಲೆಗೆ ತೀವ್ರವಾಗಿ ಗಾಯವಾಗಿ ಸಾವನ್ನಪ್ಪಿದರು.
ಪುರಸ್ಕಾರ, ಪ್ರಶಸ್ತಿಗಳು
[ಬದಲಾಯಿಸಿ]- ಐ.ಡಿ.ಪಿ.ಎ-೨೦೦೮ ರಲ್ಲಿ ಮುಂಬೈನಲ್ಲಿ ಪ್ರಪ್ರಥಮ ಸಜೀವ ಪುರಸ್ಕಾರ, 'ಗೋಲ್ಡನ್ ಕೇಲಾ ಅವಾರ್ಡ್' ಜಸ್ಪಾಲ್ ಭಟ್ಟಿಯವರಿಗೆ ಲಭಿಸಿತು.
- ಅಡ್ವಾಂಟೇಜ್ ಇಂಡಿಯಾ ಆಯೋಜಿಸಿದ, 'ಒನ್ ಟೇಕ್ ಮೀಡಿಯ'ರವರ, 'ಸರ್ಟಿಫಿಕೇಟ್ ಆಫ್ ಮೆರಿಟ್ ಪ್ರಶಸ್ತಿ'.
ಜಸ್ಪಾಲ್ ರವರ ಪರಿವಾರ
[ಬದಲಾಯಿಸಿ]೫೭ ವರ್ಷ ಪ್ರಾಯದ ಜಸ್ಪಾಲ್ ಭಟ್ಟಿಯವರು,ಹೆಂಡತಿ ಸವಿತ ,ಮಗ ಜಸ್ರಾಜ್, ಮತ್ತು ಮಗಳು ರಾಬಿಯವರನ್ನು ಅಗಲಿ ಸಾಗಿದ್ದಾರೆ.
ಜಸ್ಪಾಲ್ ಭಟ್ಟಿಯವರು ನಿರ್ದೇಶಿಸಿದ ಸುಪ್ರಸಿದ್ಧ ನಗೆ ಧಾರಾವಾಹಿಗಳು
[ಬದಲಾಯಿಸಿ]ದೂರದರ್ಶನದಲ್ಲಿ ಇವರ ಕೆಳಗೆ ಕಂಡ ಧಾರಾವಾಹಿಗಳು ಪ್ರಚಂಡ ಜನಪ್ರಿಯತೆಯನ್ನು ಹಾಸಿಲ್ ಮಾಡಿದ್ದವು.
- ಉಲ್ಟಾ ಪುಲ್ಟಾ,
- ಫ್ಲಾಪ್ ಶೊ,
ಜಸ್ಪಾಲ್ ಭಟ್ಟಿಯವರು ನಟಿಸಿದ ಚಿತ್ರಗಳು
[ಬದಲಾಯಿಸಿ]- Power Cut (2012) – Actor and Director
- Mausam (2011)
- Hum Tum Shabana (2011) Guest Appearance
- Chak De Phatte (2009) – Pyara Singh Lovely
- Ek: The Power of One (2009)
- Fanaa (2006) – Jolly Good Singh
- Nalaik (2006) – Daku Mann Singh
- Mera Dil Leke Dekkho (2006)
- Kuch Meetha Ho Jaye (2005) – Ram Saran Dubey
- Nalayak (2005)
- Kuch Naa Kaho (2003) – Monty Ahluwalia
- Tujhe Meri Kasam (2003) – Sardarji
- Jaani Dushman: Ek Anokhi Kahani (2002)
- Koi Mere Dil Se Poochhe (2002) – Naraaz Shankar
- Shakti: The Power (2002) – Nandini's uncle
- Yeh Hai Jalwa (2002) – Buta Singh
- Hamara Dil Aapke Paas Hai (2000) – Balwinder (Balu)
- Khauff (2000) – Hava Singh/Dava Singh
- Woh Bewafa Thi (2000)
- Kartoos (1999) – Mini's uncle
- Mahaul Teek Hai (1999)
- Aa Ab Laut Chalen (1999) – Iqbal
- Jaanam Samjha Karo (1999) – Tubby, Rahul's Secretary
- Kaala Samrajya (1999)
ಟೀವಿ ಸೀರಿಯಲ್ಸ್
[ಬದಲಾಯಿಸಿ]- Serial Channel Role Notes
- Ulta Pulta DD National
- Flop Show DD National
- Full Tension
- Thank you Jijaji SAB TV[14] Jijaji (brother-in-law)
- Hye Zindagi Bye Zindagi
- ಚಿತ್ರ : ಪ್ರಜಾವಾಣಿ ದೈನಿಕದ ಸೌಜನ್ಯತೆಯಿಂದ.
ಉಲ್ಲೇಖಗಳು
[ಬದಲಾಯಿಸಿ]