ವಿಷಯಕ್ಕೆ ಹೋಗು

ಜಾನ್ ಒ'ಹಾರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾನ್ ಒ'ಹಾರಾ
O'Hara in 1945
ಜನನ(೧೯೦೫-೦೧-೩೧)೩೧ ಜನವರಿ ೧೯೦೫
Pottsville, Pennsylvania, U.S.
ಮರಣApril 11, 1970(1970-04-11) (aged 65)
Princeton, New Jersey, U.S.
ಪ್ರಕಾರ/ಶೈಲಿShort story, drama, essay
ಪ್ರಮುಖ ಕೆಲಸ(ಗಳು)

ಒ’ಹಾರಾ, ಜೆ ಎಚ್ : 1905-70. ಅಮೆರಿಕದ ಕಾದಂಬರಿಕಾರ, ಪತ್ರಿಕೋದ್ಯಮಿ, ನಾಟಕಕಾರ, ಚಲನಚಿತ್ರ ಲೇಖಕ, ಸಣ್ಣಕಥೆಗಾರ ಮತ್ತು ವಿಮರ್ಶಕ.

ಜೀವನ[ಬದಲಾಯಿಸಿ]

ಕೂಲಿಗಾರನಾಗಿ, ಉಕ್ಕಿನ ಕಾರ್ಖಾನೆಯಲ್ಲಿ ಕಾವಲುಗಾರನಾಗಿ, ಸೋಡಾ ಮಾರುವವನಾಗಿ, ವಿಹಾರಕೇಂದ್ರವೊಂದರ ರಕ್ಷಕನಾಗಿ, ಸುದ್ಧಿಗಾರನಾಗಿ, ಸಹಸಂಪಾದಕನಾಗಿ-ಹೀಗೆ ಬೇರೆ ಬೇರೆ ವೃತ್ತಿಗಳಲ್ಲಿ ಪಳಗಿದ. ಅಪಾಯಿಂಟ್ಮೆಂಟ್ ಇನ್ ಸಮಾರಾ ಕಾದಂಬರಿ ಪ್ರಕಟವಾದೊಡನೆ (1934) ಅಮೆರಿಕದಲ್ಲಿ ಈತನ ಕೀರ್ತಿ ಹರಡಿತು. ಅನಂತರ ಬಂದ ಡಾಕ್ಟರ್ಸ್‌ಸನ್ ಅಂಡ್ ಅದರ್ ಸ್ಟೋರೀಸ್ (1935) ಎಂಬ ಕಥಾಸಂಗ್ರಹ, ಬಟರ್ಫೀಲ್ಡ್‌ 8 ಎಂಬ ಕಾದಂಬರಿಗಳು ಸಾಹಿತ್ಯಕ್ಷೇತ್ರದಲ್ಲಿ ಇವನ ಸ್ಥಾನವನ್ನು ಭದ್ರಪಡಿಸಿದುವು. ಆಮೇಲೆ ಈತ ಪ್ರಮುಖ ಪತ್ರಿಕೆಯೊಂದಕ್ಕೆ ಫುಟ್ಬಾಲ್ ಪಂದ್ಯಗಳ ವಿವರಣೆ ಬರೆಯುವ ಕ್ರೀಡಾ ವಿಮರ್ಶಕನಾದ. ಗಟ್ಟಿಗಡಸು ಮೈಉಳ್ಳ ಈತ ಕುಸ್ತಿಯ ಅಂಗಣಕ್ಕೂ ಇಳಿದುದುಂಟು. ಹಾಲಿವುಡ್ಡಿನಲ್ಲಿ ಈತ ಚಿತ್ರಕಥೆ ಬರೆದು ಪ್ರಸಿದ್ಧನಾದ. ತನ್ನ ಕಾಲದ ಜನರ ಸಮಾಜದ ಬಗ್ಗೆ ಈತನಿಗಿದ್ದ ಅಪಾರ ಅರಿವು, ಅನುಕಂಪ, ತೀವ್ರ ಸಂವೇದನೆಗಳ ಜೊತೆಗೆ ಇವನ ಚಾಟಿಯಂಥ ಮಾತು, ಚುಚ್ಚುನುಡಿ, ಕಟು ವಿಮರ್ಶೆಗಳಿಂದಾಗಿ ಈತನ ಕೃತಿಗಳು ಜನಪ್ರಿಯವಾಗಿವೆ. ಪಾಲ್ ಜೋಯಿ (1940) ಟೆನ್ ನಾರ್ತ್ ಫ್ರೆಡರಿಕ್ (1955), ಸ್ವೀಟ್ ಅಂಡ್ ಸವರ್ (1954), ಸರ್ಮನ್ಸ್‌ ಎಂಡ್ ಸೋಡಾವಾಟರ್ (1961)-ಇವು ಈತನ ಪ್ರಮುಖ ಕೃತಿಗಳು.

ಈತನಿಗೆ ಬಣ್ಣಗುರುಡುತನ ಇದ್ದುದರಿಂದ ಈತನ ಕೃತಿಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳನ್ನುಳಿದು ಬೇರೆ ಯಾವ ಬಣ್ಣಗಳ ವರ್ಣನೆಯೂ ಇಲ್ಲದಿರುವುದು ಒಂದು ವಿಚಿತ್ರ, ವೈಶಿಷ್ಟ್ಯ, ಹೂಗಳು, ಹಕ್ಕಿಗಳು ನಿಸರ್ಗ-ಇವುಗಳ ವರ್ಣನೆಗಳು ಇವನಲ್ಲಿ ಅಪೂರ್ವ.

ಕೃತಿಗಳು[ಬದಲಾಯಿಸಿ]

ಕಾದಂಬರಿಗಳು

  • ಅಪಾಯಿಂಟ್ಮೆಂಟ್ ಇನ್ ಸಮಾರಾ (1934)
  • ಬಟರ್‌ಫೀಲ್ಡ್ 8 (1935)
  • ಹೋಪ್ ಆಫ್ ಹೆವನ್ (1938)
  • ಪಾಲ್ ಜೋಯ್ (1940)
  • ಎ ರೇಜ್ ಟು ಲೈವ್ (1949)
  • ದಿ ಫಾರ್ಮರ್ಸ್ ಹೋಟೆಲ್ (1951) - ಒ'ಹಾರಾ ಅವರ ಮೂಲ ನಾಟಕದಿಂದ ಅಳವಡಿಸಲಾಗಿದೆ
  • ಟೆನ್ ನಾರ್ತ್ ಫ್ರೆಡೆರಿಕ್ (1955) - ಕಾದಂಬರಿಗಾಗಿ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ ವಿಜೇತ[೧]
  • ಎ ಫ್ಯಾಮಿಲಿ ಪಾರ್ಟಿ (1956)
  • ಫ್ರಮ್ ದಿ ಟೆರೇಸ್ (1958)
  • ಅವರ್‌ಸೆಲ್ವ್ಸ್ ಟು ನೋ (1960)
  • ದಿ ಬಿಗ್ ಲಾಫ್ (1962)
  • ಎಲಿಜಬೆತ್ ಆಪಲ್ಟನ್ (1963)
  • ದಿ ಲಾಕ್‌ವುಡ್ ಕನ್ಸರ್ನ್ (1965)
  • ದಿ ಇನ್‌ಸ್ಟ್ರುಮೆಂಟ್ (1967) )
  • ಲವ್ವಿ ಚೈಲ್ಡ್ಸ್: ಎ ಫಿಲಡೆಲ್ಫಿಯನ್ಸ್ ಸ್ಟೋರಿ (1969)
  • ದಿ ಎವಿಂಗ್ಸ್ (1970)
  • ದಿ ಸೆಕೆಂಡ್ ಎವಿಂಗ್ಸ್ (1972)

ಸಣ್ಣ ಕಥೆಗಳು

  • ಡಾಕ್ಟರ್ಸ್ ಸನ್ ಮತ್ತು ಇತರ ಕಥೆಗಳು (1935)
  • ಪರೇಡ್‌ನಲ್ಲಿ ಫೈಲ್ಸ್ (1939)
  • ಪೈಪ್ ನೈಟ್ (1945)
  • ಹೆಲ್ಬಾಕ್ಸ್ (1947)
  • ಧರ್ಮೋಪದೇಶಗಳು ಮತ್ತು ಸೋಡಾ ವಾಟರ್: ಮೂರು ಕಾದಂಬರಿಗಳ ಟ್ರೈಲಾಜಿ (1960)
  • ಅಸೆಂಬ್ಲಿ (1961)
  • ದಿ ಕೇಪ್ ಕಾಡ್ ಲೈಟರ್ (1962)
  • ದಿ ಹ್ಯಾಟ್ ಆನ್ ದಿ ಬೆಡ್ (1963)
  • ದಿ ಹಾರ್ಸ್ ನೋಸ್ ದಿ ವೇ (1964)
  • ವೇಟಿಂಗ್ ಫಾರ್ ವಿಂಟರ್ (1966)
  • ಮತ್ತು ಇತರ ಕಥೆಗಳು (1968)
  • ದಿ ಟೈಮ್ ಎಲಿಮೆಂಟ್ ಮತ್ತು ಇತರ ಕಥೆಗಳು (1972)
  • ಗುಡ್ ಸಮರಿಟನ್ ಮತ್ತು ಇತರ ಕಥೆಗಳು (1974)
  • ಗಿಬ್ಸ್ವಿಲ್ಲೆ, PA (ಕ್ಯಾರೊಲ್ & ಗ್ರಾಫ್, 1992, ISBN 0-88184-899-9)

ನಾಟಕಗಳು ಮತ್ತು ಚಿತ್ರಕಥೆಗಳು

  • ಹಿ ಮ್ಯಾರೀಡ್ ಹಿಸ್ ವೈಫ್ (1940)
  • ಮೂಂಟೈಡ್ (1942)
  • ಫೈವ್ ಪ್ಲೇಸ್ (1961)

(ದಿ ಫಾರ್ಮರ್ಸ್ ಹೋಟೆಲ್, ದಿ ಸರ್ಚಿಂಗ್ ಸನ್, ದಿ ಶಾಂಪೇನ್ ಪೂಲ್, ವೆರೋನಿಕ್, ದಿ ವೇ ಇಟ್ ವಾಸ್)

  • ಟು ಬೈ ಒ'ಹರಾ (1979)

(ದಿ ಮ್ಯಾನ್ ಹೂ ಕುಡ್ ನಾಟ್ ಲೂಸ್ [ಸ್ಕ್ರೀನ್ ಟ್ರೀಟ್ಮೆಂಟ್] ಮತ್ತು ಫಾರ್ ಫ್ರಮ್ ಹೆವೆನ್ [ಪ್ಲೇ]) ಇತರ

  • ಸ್ವೀಟ್ ಅಂಡ್ ಸೋರ್ (೧೯೫೪)
  • ಮೈ ಟರ್ನ್ (೧೯೬೬)
  • ಲೆಟರ್ಸ್ (೧೯೭೮)

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. "National Book Awards – 1956". National Book Foundation. Retrieved 2012-03-31. With essay by Harold Augenbraum from the Awards 60-year anniversary blog.