ವಿಷಯಕ್ಕೆ ಹೋಗು

ಜಾರ್ಜ್ ಬರ್ನಾರ್ಡ್ ಷಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾರ್ಜ್ ಬರ್ನಾರ್ಡ್ ಷಾ

ಜನನ: (೧೮೫೬-೦೭-೨೬)೨೬ ಜುಲೈ ೧೮೫೬
ಜನನ ಸ್ಥಳ: ಡಬ್ಲಿನ್, ಐರ್ಲ್ಯಾಂಡ್
ನಿಧನ:2 November 1950(1950-11-02) (aged 94)
ಹೆರ್ಟ್‌ಫೋರ್ಡ್‌ಶೈರ್, ಯುನೈಟೆಡ್ ಕಿಂಗ್‌ಡಮ್
ವೃತ್ತಿ: ನಾಟಕಕಾರ, ರಾಜಕೀಯ ಕಾರ್ಯಕರ್ತ
ರಾಷ್ಟ್ರೀಯತೆ:ಐರ್ಲ್ಯಾಂಡ್
ಸಾಹಿತ್ಯದ ವಿಧ(ಗಳು):Satire, black comedy
ಸಾಹಿತ್ಯ ಶೈಲಿ:Reformist socialist
ಪ್ರಭಾವಗಳು:ಆರ್ಥರ್ ಶೊಪೆನ್ಹೌರ್, ರಿಚರ್ಡ್ ವಾಗ್ನರ್, ಹೆನ್ರಿಕ್ ಇಬ್ಸೆನ್, ಫ್ರೀಡ್ರಿಕ್ ನೀಷೆ, ಹೆನ್ರಿ ಜಾರ್ಜ್, ಕಾರ್ಲ್ ಮಾರ್ಕ್ಸ್
ಪ್ರಭಾವಿತರು:ಸಮಾಜವಾದ
ಪ್ರಶಸ್ತಿಗಳು:ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ (೧೯೨೫)
ಅಕ್ಯಾಡಮಿ ಪ್ರಶಸ್ತಿ (ಪಿಗ್ಮೇಲಿಯನ್ ಚಿತ್ರದ ಲೇಖನಕ್ಕೆ)

ಜಾರ್ಜ್ ಬರ್ನಾರ್ಡ್ ಷಾ (೧೮೫೬ - ೧೯೫೦) ಒಬ್ಬ ಪ್ರಸಿದ್ಧ ಆಂಗ್ಲ ನಾಟಕಕಾರರು. ಐರ್ಲೆಂಡಿನಲ್ಲಿ ಜನಿಸಿ ನಂತರ ಇಂಗ್ಲೆಂಡಿನಲ್ಲಿ ನೆಲೆಸಿದವರು. ಬರ್ನಾರ್ಡ್ ಷಾ ೬೦ ಕ್ಕೂ ಹೆಚ್ಚು ನಾಟಕಗಳನ್ನು ಬರೆದರು. ಇದಲ್ಲದೆ ಸಾಹಿತ್ಯ ವಿಮರ್ಶೆ ಮತ್ತು ಸಂಗೀತದ ಬಗ್ಗೆಯೂ ಬರೆದರು. ಇವರು ಪ್ರಸಿದ್ಧ ವಾಗ್ಮಿಯಾಗಿಯೂ ಹೆಸರು ಮಾಡಿದರು. ತಮ್ಮ ಕೃತಿಗಳಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಹಾಗೆಯೇ ಅವರ ಕೃತಿಗಳಲ್ಲಿ ಹಾಸ್ಯದ ಎಳೆಯೂ ಸಾಮಾನ್ಯವಾಗಿ ಇರುತ್ತದೆ. ಶಿಕ್ಷಣ, ಆರೋಗ್ಯ, ಮದುವೆ, ಧರ್ಮ ಮೊದಲಾದ ವಿಷಯಗಳನ್ನು ತಮ್ಮ ಕೃತಿಗಳಲ್ಲಿ ಚರ್ಚಿಸಿದ ಬರ್ನಾರ್ಡ್ ಷಾ, ತಮ್ಮ ಕಾಲದ ಸಾಮಾಜಿಕ ತೊಡಕುಗಳನ್ನು ಕಟುವಾಗಿ ಟೀಕಿಸಿದರು. ತಮ್ಮ ಭಾಷಣಗಳ ಮೂಲಕ ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ರಾಜಕೀಯ ಹಕ್ಕುಗಳು ಮೊದಲಾದ ವಿಷಯಗಳಿಗೆ ಶ್ರಮಿಸಿದರು.

"ಪಿಗ್ಮಾಲಿಯನ್" ಚಲನಚಿತ್ರವಾಯಿತು

[ಬದಲಾಯಿಸಿ]

ಬರ್ನಾರ್ಡ್ ಷಾ ಅವರಿಗೆ, ೧೯೨೫ ರಲ್ಲಿ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ದೊರೆಯಿತು. ತಮ್ಮ ನಾಟಕಗಳಲ್ಲಿ ಒಂದಾದ "ಪಿಗ್ಮಾಲಿಯನ್" ಚಲನಚಿತ್ರಚವಾಗಲು ಅವರು ಮಾಡಿದ ಕೆಲಸಕ್ಕಾಗಿ ಅವರಿಗೆ ಪ್ರತಿಷ್ಠಿತ 'ಆಸ್ಕರ್ ಪ್ರಶಸ್ತಿ ',ಯೂ ದೊರೆಯಿತು (೧೯೩೮ ರಲ್ಲಿ). ಮಹಾತ್ಮ ಗಾಂಧಿ, ರವೀಂದ್ರನಾಥ್ ಠಾಕೂರ್ ಎಂದರೆ ಇವರಿಗೆ ಬಲು ಪ್ರೀತಿ. ನೆಹರೂ ರವರಿಗೆ ಶಾರವರ ಕಾದಂಬರಿಗಳು ಅತಿ ಮೆಚ್ಚು. ಭಾರತೀಯ ಸಾಹಿತ್ಯಾಭಿಮಾನಿಗಳಿಗೆ ಷಾ ಒಬ್ಬ ಆಪ್ತ-ವ್ಯಕ್ತಿ. ಅವರನ್ನು ಚಿಕ್ಕ-ಮಹಾತ್ಮರಂತೆ ಗೌರವಿಸುತ್ತಿದ್ದರು. ಸಸ್ಯಾಹಾರಿಯಾಗಿದ್ದ ಷಾ, ಭಾರತೀಯರ ಮೆಚ್ಚುಗೆ ಗಳಿಸಿದ್ದರು. ಆಗಾಗ ಅವರು ಬೀರುತ್ತಿದ್ದ ನಗೆ, ಹಾಸ್ಯ-ಚಟಾಕಿ, ಚತುರೋಕ್ತಿಗಳು, ಅವರನ್ನು ಸಮಾಜದ ಎಲ್ಲ ವರ್ಗದ ಜನರೊಡನೆ ಒಡನಾಟಕ್ಕೆ ಪ್ರೇರೇಪಿಸಿದ್ದವು.

ಐರಿಷ್ ಮೂಲದ 'ಷಾ' ಜನಪ್ರಿಯ ಇಂಗ್ಲೀಷ್ ನಾಟಕಕಾರರಾಗಿ

[ಬದಲಾಯಿಸಿ]

ಬರ್ನಾರ್ಡ್ 'ಷಾ' ಮೂಲತಃ ಐರಿಷ್ ಪ್ರಾಂತ್ಯದವರು. ತಾಯಿ, ಸಂಗೀತದ ಬಗ್ಗೆ ತೀವ್ರ ಒಲವಿದ್ದವಳು. ಕಲಿಯುತ್ತಿದ್ದಳು. ಅವರ ಶಿಕ್ಷರಿಂದ ಪ್ರಭಾವಿತರಾಗಿದ್ದರು. ಸಂಗೀತವನ್ನು ಅವರು ಅಭ್ಯಾಸಮಾಡಿದ್ದಲ್ಲದೆ, ತಮ್ಮ ವಿಮರ್ಶಕರಾಗಲು ಅದು ಅವರನ್ನು ಸಿದ್ಧಗೊಳಿಸಿತ್ತು. 'ಸಂಗೀತದ ವಿಮರ್ಶೆ,' ಗಳನ್ನು ಇಂದಿಗೂ ಗೌರವದಿಂದ ನೆನೆಯುತ್ತಾರೆ. ತಂದೆ ಸ್ವಲ್ಪ ಕುಡಿಯುವ ಚಟವನ್ನು ಅಭ್ಯಾಸಮಾಡಿಕೊಂಡಿದ್ದರು. ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ 'ಷಾ' ಅಷ್ಟೇನೂ ಪ್ರತಿಭಾವಂತ ಬಾಲಕನೆಂದು ಹೆಸರು ಗಳಿಸಲಿಲ್ಲ. ಆದರೆ ಸಾಹಿತ್ಯಕೃತಿಗಳನ್ನು ಚೆನ್ನಾಗಿ ಕುಲಂಕುಶವಾಗಿ ಅಭ್ಯಾಸಮಾಡಿ ಅದರಲ್ಲಿ ಪ್ರಾವೀಣ್ಯತೆಯನ್ನು ಸಂಪಾದಿಸಿದ್ದರು. ತಾಯಿ ತಮ್ಮ ಪತಿ ಮತ್ತು ಶಾರನ್ನು ಬಿಟ್ಟು,ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಲಂಡನ್ ಗೆ ಹೋಗಿಬಿಟ್ಟರು. ಅವರಿಗೆ ಸಂಗೀತದ ಗುರುಗಳನ್ನು ತುಂಬಾ ಹಚ್ಚಿಕೊಂಡಿದ್ದರು. ಈ ಪರಿಸ್ತಿತಿಯಲ್ಲಿ 'ಷಾ' ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದೆ, ಡಬ್ಲಿನ್ ನಗರಕ್ಕೆ ಹೋಗಿ, ಅಲ್ಲಿನ ಕಚೇರಿಯೊಂದರಲ್ಲಿ ಗುಮಾಸ್ತರಾಗಿ ಸೇರಿಕೊಂಡರು. ಆಗಲೇ ಸಮಯವಿದ್ದಾಗಲೆಲ್ಲಾ ಏನಾದರೂ ಕಥೆಗಳನ್ನು ಬರೆಯುವ ಹವ್ಯಾಸ ಬೆಳೆಯಿತು. ಲೇಖಕನಾಗುವ ಆದಮ್ಯ ಆಸೆ ಮನದಾಳದಲ್ಲಿ ಬೇರೂರಿತ್ತು. ಮುಂದೆ ಅವರು ಲಂಡನ್ ನಲ್ಲಿ ಸಂಗೀತದ ಶಿಕ್ಷಕಿಯಾಗಿ ಕೆಲಸಮಾಡುತ್ತಿದ್ದ ಅವರ ತಾಯಿಯಮನೆಯಲ್ಲಿ ಇದ್ದುಕೊಂಡು, ನೌಕರಿಯ ಹುಡುಕಾಟಕ್ಕೆ ಪ್ರಯತ್ನಿಸಿದರು. ಸುಮಾರು ೫ ಕಾದಂಬರಿಗಳನ್ನು ಆಗಲೇ ಬರೆದಿದ್ದರೂ ಅದನ್ನು ಯಾರೂ ಲೆಕ್ಕಕ್ಕೆ ತಗೆದುಕೊಳ್ಳಲಿಲ್ಲ. ಅವು ಅಷ್ಟೇನೂ ಹೆಸರುಮಾಡದ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಕಾಣಿಸಿಕೊಂಡವು. ಬರೆಯುವ ಆಸಕ್ತಿಯ ಜೊತೆಗೆ ಅಪ್ರತಿಮ ಭಾಷಣ ಮಾಡುವ ಕಲೆ ಹಸ್ತಗತವಾಗಿತ್ತು. 'ಅನಿಬೆಸೆಂಟ್' ಎಂಬ ಮಹಿಳೆ, ಅವರ ಮಾತಿನಮೋಡಿಗೆ ಮರುಳಾಗಿ ಅವರನ್ನು ಮದುವೆಯಾಗಲು ಮುಂದೆಬಂದರು. ಆದರೆ 'ಷಾ' ಅದಕ್ಕೆ ಒಪ್ಪಲಿಲ್ಲ. ಬರೆಯುವ ಗೀಳು ಮನಸ್ಸಿನಲ್ಲೇ ಹೊಗೆಯಾಡುತ್ತಿತ್ತು. ಮೊದಲು ಸಂಗೀತ ನಾಟಕ-ವಿಮರ್ಶೆ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಬರೆಯುತ್ತಿದ್ದ ಷಾ, ನಾಟಕಗಳ ಕಡೆಗೆ ವಾಲಿದರು. 'ಸ್ಕಾಂಡಿನೇವಿಯನ್ ಭಾಷೆ'ಯ, 'ಇಬ್ಸನ್' ಎಂಬ ನಾಟಕ ಕಾರನ ನಾಟಕಗಳನ್ನು ಇಂಗ್ಲೆಂಡ್ ನಾಟಕರಂಗಕ್ಕೆ 'ಗ್ರೆನ್' ಎಂಬನಾಟಕಕಾರ,ತರುತ್ತಿದ್ದರು. ಅವರ ಪ್ರಕಾರ,ಇಂಗ್ಲೀಷ್ ನಲ್ಲಿ ಆ ಮಟ್ಟದ ನಾಟಕಗಳೇ ಇಲ್ಲ ಎಂದುವಾದಿಸಿದ್ದರು. 'ಷಾ' ಇದನ್ನು ಒಪ್ಪದೆ ತಾವೇ 'ವಿಡೋವರ್ಸ್ ಹೌಸ್' ಎಂಬನಾಟಕವನ್ನು ರಚಿಸಿದರು. ಅದು ೧೮೯೨ ರಲ್ಲಿ, ಲಂಡನ್ ನ 'ರಾಯಲ್ಟಿ ಥಿಯೇಟರ್' ನಲ್ಲಿ ಪ್ರದರ್ಶನ ಕಂಡಿತು, ಮತ್ತು ಹೆಸರುಮಾಡಿತು. ಇದಾದನಂತರ 'ಷಾ' ಸುಮಾರು ೬೦ ಕ್ಕೂ ಮಿಗಿಲಾಗಿ ನಾಟಕಗಳನ್ನು ಬರೆದು ಪ್ರಸಿದ್ಧರಾದರು. ಇಂಗ್ಲಿಷ್ ನ ಮಹಾನ್ ನಾಟಕಕಾರರಲ್ಲಿ ಒಬ್ಬರೆಂದು ಹೆಸರುಮಾಡಿದರು. 'ಇಬ್ಬನ್' ನ ಕೃತಿಗಳಂತೆ ಇಲ್ಲೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿಮರ್ಶೆಯಿದೆ.

'ಷಾ'ರವರ ಪ್ರಾರಂಬಿಕ ನಾಟಕಗಳು

[ಬದಲಾಯಿಸಿ]
ಜಾರ್ಜ್ ಬರ್ನಾರ್ಡ್ ಷಾ ರ ಒಂದು ಪ್ರತಿಮೆ
  • 'Mrs Warren's Profession' (1893)
  • 'Arms and the Man'(1894)
  • 'You Never Can Tell' (1897) (1894)
  • 'The Devil's Disciple' (1897) ನಾಟಕ ಅಮೆರಿಕದಲ್ಲಿ ಪ್ರದರ್ಶಿತಗೊಂಡು, ಹೆಸರು ಹಾಗೂ ಹಣವನ್ನು ಗಳಿಸಿಕೊಟ್ಟಿತು.
  • 'Plays Unpleasant' (published 1898)
  • 'Widowers' Houses' (1892)
  • 'The Philanderer' (1898)
  • 'Plays Pleasant' (published 1898)
  • 'The Man of Destiny' (1895)
  • 'Three Plays for Puritans' (published 1901)
  • 'Captain Brassbound's Conversion' (1899)
  • 'The Admirable Bashville' (1901)
  • 'John Bull's Other Island' (1904)
  • 'How He Lied to Her Husband' (1904)
  • 'Getting Married' (1908)
  • 'The Glimpse of Reality' (1909)
  • 'The Fascinating Foundling' (1909)
  • 'Press Cuttings' (1909)
  • 'Misalliance' (1910)
  • 'Annajanska', the Bolshevik Empress' (1917)
  • 'The Dark Lady of the Sonnets' (1910)

'ಷಾ'ರ ಎರಡನೆಯ ಘಟ್ಟದ ನಾಟಕಗಳು

[ಬದಲಾಯಿಸಿ]
  • 'Caesar and Cleopatra' (1898)
  • 'Man and Superman' (1902–03)
  • 'Major Barbara' (1905)
  • 'The Doctor's Dilemma' (1906)
  • 'Pygmalion' (1912–13)

'ಷಾ'ರವರ ಜನಪ್ರಿಯತೆ ಎಷ್ಟು ಹೆಚ್ಚಿತೆಂದರೆ, ಕೇವಲ'ಷಾ'ರ ನಾಟಕಗಳನ್ನಷ್ಟೇ ಅಭಿನಯಿಸುವ ನಾಟಕ ಕಂಪೆನಿಗಳು, ಅಮೆರಿಕ ಹಾಗೂ ಇಂಗ್ಲೆಂಡ್ ನಲ್ಲಿ ತಲೆಯೆತ್ತಿದವು.

  • 'Fanny's First Play' (1911)
  • 'Overruled' (1912)
  • 'Androcles and the Lion' (1912)
  • 'The Great Catherine' (1913)
  • 'The Inca of Perusalem' (1915)
  • 'O'Flaherty VC' (1915)
  • 'Augustus Does His Bit' (1916)
  • 'Heartbreak House' (1919)
  • 'Back to Methuselah' (1921)
  • 'In the Beginning'
  • 'The Gospel of the Brothers Barnabas'
  • 'The Thing Happens'
  • 'Tragedy of an Elderly Gentleman'
  • 'As Far as Thought Can Reach'
  • 'Saint Joan' (1923) ಈ ಕೃತಿಗೆ, 'ನೋಬೆಲ್ ಪ್ರಶಸ್ತಿ,' ದೊರೆಯಿತು.
  • 'The Apple Cart' (1929)
  • 'Too True To Be Good' (1931)
  • 'On the Rocks' (1933)
  • 'The Six of Calais' (1934)
  • 'The Simpleton of the Unexpected Isles' (1934)
  • 'The Shewing Up of Blanco Posnet' (1909)
  • 'The Millionairess' (1936)
  • 'Geneva' (1938)
  • 'In Good King Charles's Golden Days' (1939)
  • 'Buoyant Billions' (1947)
  • 'Shakes versus Shav' (1949)

'ಸೇಂಟ್ ಜೋನ್'-(೧೯೨೩),ನೋಬೆಲ್ ಪ್ರಶಸ್ತಿ ಕೃತಿ,

[ಬದಲಾಯಿಸಿ]

'ಸೇಂಟ್ ಜೋನ್' ನಾಟಕ, ಅಂತಾರಾಷ್ಟ್ರೀಯವಾಗಿ ಪ್ರಸಿದ್ಧಿಪಡೆದಿದ್ದಲ್ಲದೆ, 'ಷಾ' ರವರಿಗೆ, ನೋಬೆಲ್ ಪ್ರಶಸ್ತಿಯನ್ನು ತಂದುಕೊಟ್ಟಿತು. ಆದರೆ, ಬರ್ನಾರ್ಡ್ ಷಾ, ಪ್ರಶಸ್ತಿ ಪಡೆಯಲು ಒಪ್ಪಲಿಲ್ಲ. ನಂತರ ಅದರ ಹಣವನ್ನು, 'ಆಂಗ್ಲೋ ಸ್ವೀಡಿಷ್ ಲಿಟರರಿ ಫೌಂಡೇಷನ್' ದಾನವಾಗಿ ಕೊಟ್ಟುಬಿಟ್ಟರು. ಅವರ ಹಲವಾರು ನಾಟಕಗಳು, ಚಲನಚಿತ್ರವಾಗಿ ಹೆಸರುಮಾಡಿವೆ. ಸುಪ್ರಸಿದ್ಧ ’ಮೈಫೇರ್ ಲೇಡಿ’, ಷಾ, ರ ’ಪಿಗ್ಮೇಲಿಯನ್ ’ನಾಟಕದ ಆಧಾರದಿಂದ ತಂದಿದ್ದು. 'ಹೂ ಹುಡುಗಿ' ಎಂಬ ಅನುವಾದದಿಂದ 'ಜಯಂತ್ ಕಾಯ್ಕಿಣಿ'ಯವರು ಕನ್ನಡಕ್ಕೆ ತಂದಿದ್ದಾರೆ. ’ಲಿಝಾ ಡುಲಿಟ್ಸ್’ ಎಂಬ ಹೂಮಾರುವ ಹುಡುಗಿಗೆ, ಸುಪ್ರಸಿದ್ಧ ಭಾಷಾತಜ್ಞನೊಬ್ಬ, ಉನ್ನತವರ್ಗದ ಸಮಾಜದಲ್ಲಿ ಬೆರೆಯುವ ಭಾಷೆಯನ್ನು ಕಲಿಸಿ, ಆಚಾರವಿಚಾರಗಳಲ್ಲಿ ತರಬೇತಿನೀಡುತ್ತಾರೆ. ಈ ನಾಟಕ ಅಂದಿನ ಸಮಾಜದ, ಉಚ್ಚ-ನೀಚವರ್ಗಗಳ ತಾರತಮ್ಯ, ಮಾನವಸಹಜ ಸಂಬಂಧಗಳು, ಸಾಮಾಜಿಕ ಸ್ಥಾನಮಾನ, ಹಾಗೂ ಅದರಲ್ಲಿ ಉತ್ತಮ ನಡವಳಿಕೆ, ಭಾಷೆಯ ಮಹತ್ವಗಳನ್ನು ಸುಂದರವಾಗಿ ಹೆಣೆದು ಪ್ರಸ್ತುತಪಡಿಸಿದ ಕಥೆಯನ್ನು ನಾಟರೂಪದಲ್ಲಿ ರಂಗಮಂಚದಮೇಲೆ, ತಂದಿದ್ದಾರೆ.'ಷಾ', ಈ ನಾಟಕದ ಜರ್ಮನ್ ಭಾಷೆಯ ಅನುವಾದವನ್ನು ಬರ್ಲಿನ್ ಮತು ವಿಯೆನ್ನಾನಗರ ಗಳಲ್ಲಿ ಪ್ರದರ್ಶನ ಕಂಡು, ಅವು ಜಯಭೇರಿ ಹೊಡೆದು, ಗಲ್ಲಾ-ಪೆಟ್ಟಿಗೆಯಲ್ಲಿ ಯಶಸ್ವಿಯಾದ ನಂತರ, ಇಂಗ್ಲೆಂಡ್ ನಲ್ಲಿ ಪ್ರಸ್ತುತಪಡಿಸಿದರಂತೆ. ಇದು ಅವರ ಇಂಗ್ಲೆಡ್ ನ ಅಭಿಮಾನಿಗಳಿಗೆ ಬುದ್ಧಿಕಲಿಸಲು ಮಾಡಿದ ಬರ್ನಾರ್ಡ್ ಶಾ ರವರ, ತಂತ್ರವಾಗಿತ್ತು.

’ಥಿಯೇಟರ್ ಆಫ್ ಐಡಿಯಾಸ್'-ಬರ್ನಾರ್ಡ್ ಷಾರವರ ಶ್ರೇಷ್ಠ ಕೃತಿಗಳಲ್ಲೊಂದು

[ಬದಲಾಯಿಸಿ]

ನಾಟಕ ರಸಪ್ರತೀತಿ ಮಾಡಲು ಕೆಲವರು, 'ಷಾ,' ರನ್ನು ಒಪ್ಪಲಿಲ್ಲ. ಕಥೆಯ ಬೆಳವಣಿಗೆಯಲ್ಲಿ ಕುಂಠಿತವಿದೆ, ಗಂಭೀರ ವಿಚಾರಗಳಬಗ್ಗೆ ಲಭುವಾದ ಚರ್ಚೆ, ಚತುರ ಸಂಭಾಷಣೆಗಳಷ್ಟೇ ಇವೆ .'ಷಾ,' ತತ್ಕಾಲೀನ ಸಮಾಜದ ಕುಂದುಕೊರತೆಗಳಿಗೆ ಹೆಚ್ಚು ಬೆಲೆನೀಡದೆ, ಮಾನವನ ಸಾರ್ವಕಾಲಿಕ ಲೋಪದೋಷಳಿಗೆ ಕನ್ನಡಿ ಹಿಡಿದಿದ್ದಾರೆ. 'ಷಾ,' ತಮ್ಮದೇ ಆದ ರೀತಿಯಲ್ಲಿ ಮಾನವನ ಘನತೆಯನ್ನು ಎತ್ತಿ ತೋರಿಸಿ, ತಮ್ಮದೇ ಆದ ರೀತಿಯಲ್ಲಿ, ಪರಿಹಾರಗಳನ್ನೂ ಕಂಡುಕೊಂಡಿದ್ದಾರೆ. 'ಷಾ,' ರ ನಾಟಕ ಶೈಲಿ, ’ಥಿಯೇಟರ್ ಆಫ್ ಐಡಿಯಾಸ್' ಎಂಬಹೆಸರಿನಿಂದ ಪ್ರಸಿದ್ಧಿಯಾಗಿದೆ. ಷಾ ರವರ 'ಸೀಜರ್ ಅಂಡ್ ಕ್ಲಿಯೊಪಾತ್ರ' ನಾಟಕವನ್ನು ಡಾ.ಪ್ರಭಾಕರ.ಮ. ನಿಂಬರಗಿ ಅವರು ಕನ್ನಡಕ್ಕೆ ಪರಿಚಯಿಸಿದ್ದಾರೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]