ವಿಷಯಕ್ಕೆ ಹೋಗು

ಜಾರ್ಜ್ ಲಾರೆನ್ಸ್ ಗೊಮ್ಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸರ್ ಲಾರೆನ್ಸ್ ಗೊಮ್ಮೆ

ಜಾರ್ಜ್ ಲಾರೆನ್ಸ್ ಗೊಮ್ಮೆ (1853-1916) ಒಬ್ಬ ಪ್ರಸಿದ್ಧ ಜಾನಪದ ವಿದ್ವಾಂಸ. ಈತ ಒಬ್ಬ ಸರಕಾರಿ ನೌಕರ ಮತ್ತು ಪುರಾವಸ್ತು ಶೋಧಕನಾಗಿದ್ದ.[]

ಜೀವನ, ಸಾಧನೆಗಳು

[ಬದಲಾಯಿಸಿ]

1853 ಡಿಸೆಂಬರ್ 17ರಂದು ಲಂಡನ್ನಿನಲ್ಲಿ ಜನ್ಮತಾಳಿದ. ಅಲ್ಲೇ ಈತನ ವಿದ್ಯಾಭ್ಯಾಸ ನಡೆಯಿತು. ಆಂಗ್ಲ ಪುರಾತತ್ವಶಾಸ್ತ್ರಜ್ಞನನಾದ ಈತನಿಗೆ 1911ರಲ್ಲಿ ಸರ್ ಎಂಬ ಬಿರುದು ದೊರಕಿತು.[] ಹುಡುಗನಾಗಿದ್ದಾಗಲೇ ಮೆಟ್ರೊಪಾಲಿಟನ್ ಬೋರ್ಡ್ ಆಫ್ ವರ್ಕ್ಸ್‌ನಲ್ಲಿ ಕೆಲಸಕ್ಕೆ ಸೇರಿದ. 1891ರ ವೇಳೆಗೆ ಲಂಡನ್‌ನ ಕೌಂಟಿ ಕೌನ್ಸಿಲ್‌ನಲ್ಲಿ ಅಂಕಿಅಂಶಗಳ ಅಧಿಕಾರಿಯಾಗಿ ನೇಮಕಗೊಂಡ. 1900ರ ವೇಳೆಗೆ ಕೌನ್ಸಿಲ್‌ನ ಕಾರ್ಯದರ್ಶಿಯಾದ. ಈತ ಬರೆದಿರುವ ದ ಮೇಕಿಂಗ್ ಆಫ್ ಲಂಡನ್ ಎನ್ನುವ ಪುಸ್ತಕ ಆ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಅಧಿಕೃತ ಕೃತಿಯಾಗಿದೆ. ಅಂದಿನ ಮತ್ತು ಅದಕ್ಕೆ ಹಿಂದಿನ ಲಂಡನ್ನಿನ ಚರಿತ್ರೆಯನ್ನು ತಿಳಿಯಲು ಇದು ತುಂಬ ಉಪಯುಕ್ತವೆನ್ನಲಾಗಿದೆ.

1878ರಲ್ಲಿ ಇಂಗ್ಲೆಂಡಿನಲ್ಲಿ ಡಬ್ಲೂ. ಜೆ. ಥಾಮ್ಸ್ ಸ್ಥಾಪಿಸಿದ ಇಂಗ್ಲಿಷ್ ಫೋಕ್‌ಲೋರ್ ಸಂಸ್ಥೆಗೆ ಗೊಮ್ಮೆಯೂ ಒಬ್ಬ ಸದಸ್ಯನಾಗಿದ್ದ. ಅದರ ಕಾರ್ಯಕಲಾಪಗಳಲ್ಲಿ ಈತ ಸಕ್ರಿಯ ಪಾತ್ರ ವಹಿಸುತ್ತಿದ್ದನೆನ್ನಲಾಗಿದೆ. ಗೊಮ್ಮೆ ಜಾನಪದವನ್ನು ಕುರಿತು ಬರೆದ ಗ್ರಂಥಗಳಲ್ಲಿ ಹ್ಯಾಂಡ್‍ಬುಕ್ ಆಫ್ ಫೋಕ್‌ಲೋರ್ ಮತ್ತು ಎತ್ನಾಲಜಿ ಇನ್ ಫೋಕ್‌ಲೋರ್ ಎಂಬುವು ಮುಖ್ಯವಾದುವು.

ಉಲ್ಲೇಖಗಳು

[ಬದಲಾಯಿಸಿ]
  1. "GOMME, George Laurence". Who's Who. Vol. 59. 1907. p. 696.
  2. You must specify issue=, startpage=, and date= when using {{London Gazette}}. Available parameters:

    {{London Gazette
    |issue= 
    |date=
    |startpage= 
    |endpage=
    |supp=
    |city=
    |accessdate=
    |nolink=
    |separator=
    |ps=
    }}


ಹೊರಗಿನ ಕೊಂಡಿಗಳು

[ಬದಲಾಯಿಸಿ]