ವಿಷಯಕ್ಕೆ ಹೋಗು

ಜಿಪ್ಸಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿಪ್ಸಂ
Gypsum
General
ವರ್ಗಸಲ್ಫೇಟ್ ಖನಿಜ
ರಾಸಾಯನಿಕ ಸೂತ್ರCaSO4·2H2O
ಸ್ಟ್ರೋಂಝ್ ವರ್ಗೀಕರಣ7.CD.40
ಸ್ಫಟಿಕ ಸಮರೂಪತೆMonoclinic
Space group: I2/a
ಏಕಕೋಶa = 5.679(5), b = 15.202(14)
c = 6.522(6) [Å]; β = 118.43°; Z = 4
Identification
ಬಣ್ಣಬಣ್ಣವಿಲ್ಲದ/ಬಿಳಿ ಬಣ್ಣಕ್ಕೆ ಸಮನಾಗಿ ;ಅಥವಾ ಕಲ್ಮಶಗಳಿಂದಾಗಿ ಹಳದಿ, ಕಂದುಬಣ್ಣ, ನೀಲಿ, ಗುಲಾಬಿ, ಕಂದು, ಕೆಂಪು, ಕಂದು, ಬೂದು ಇರಬಹುದು
ಸ್ಫಟಿಕ ಗುಣಲಕ್ಷಣಬೃಹತ್, ಚಪ್ಪಟ್ಟೆಯಾದ, ಉದ್ದವಾದ ಮತ್ತು ಸಾಮಾನ್ಯವಾಗಿ ಪ್ರಿಸ್ಮಾಟಿಕ್ ಸ್ಫಟಿಕಗಳು
ಸ್ಫಟಿಕ ಪದ್ಧತಿMonoclinic
ಅವಳಿ ಸಂಯೋಜನೆVery common on {110}
ಸೀಳುPerfect on {010}, distinct on {100}
ಬಿರಿತConchoidal on {100}, splintery parallel to [001]
ಜಿಗುಟುತನFlexible, inelastic
ಮೋಸ್ ಮಾಪಕ ಗಡಸುತನ1.5–2 (defining mineral for 2)
ಹೊಳಪುVitreous to silky, pearly, or waxy
ಪುಡಿಗೆರೆWhite
ಪಾರದರ್ಶಕತೆTransparent to translucent
ವಿಶಿಷ್ಟ ಗುರುತ್ವ2.31–2.33
ದ್ಯುತಿ ಗುಣಗಳುBiaxial (+)
ವಕ್ರೀಕರಣ ಸೂಚಿnα = 1.519–1.521
nβ = 1.522–1.523
nγ = 1.529–1.530
ದ್ವಿವಕ್ರೀಭವನδ = 0.010
ಬಹುವರ್ಣಕತೆNone
ಶಂಕುದರ್ಶಕ ವ್ಯತಿಕರಣ ವಿನ್ಯಾಸ58°
ಕರಗು ಗುಣ5
ಕರಗುವಿಕೆHot, dilute HCl
ಉಲ್ಲೇಖಗಳು[][][]
Major varieties
Satin sparPearly, fibrous masses
SeleniteTransparent and bladed crystals
AlabasterFine-grained, slightly colored

ಜಿಪ್ಸಮ್ ಎಂಬುದು ಕ್ಯಾಲ್ಸಿಯಂ ಸಲ್ಫೇಟ್ - CaSO4 ಡೈಹೈಡ್ರೇಟ್ - 2H2 O ನಿಂದ ಸಂಯೋಜಿತವಾದ ಮೃದು ಸಲ್ಫೇಟ್ ಖನಿಜ.

ಜಿಪ್ಸಮಿನ ಹರಳುಗಳು ಏಕನತಾಕ್ಷ (ಮಾನೋಕ್ಲಿನಿಕ್) ಸ್ಫಟಿಕಗಳು. ಅವಳಿ ಹರಳುಗಳೂ ಸಾಮಾನ್ಯ. ಹರಳಿನ ಮುಖದ ಮೇಲೆ ಗೆರೆಗಳಿವೆ. ಸಾಧಾರಣವಾಗಿ ಬಣ್ಣವಿಲ್ಲದೆಯೋ ಬೆಳ್ಳಗೋ ಬಿಳುಪಾಗಿಯೋ ಇರುವುವು. ಆದರೆ ಕಲ್ಮಷಗಳಿಂದ ಕೂಡಿದಾಗ ಬೂದಿ, ಹಳದಿ, ಊದಾ ಅಥವಾ ಕಂದುಬಣ್ಣ ಕಾಣುವುದುಂಟು. ಹರಳಿನಲ್ಲಿ ಸೀಳುಗಳಿವೆ. ಮಂದಗಾಜಿನ ಅಥವಾ ಮುತ್ತಿನ ಹೊಳಪಿರುವುದು. ಕಾಠಿನ್ಯಾಂಕ 2, ಸಾಂದ್ರತೆ 2.317. ಒರೆಹಚ್ಚಿದಾಗ ಬಿಳಿ ಪುಡಿಯನ್ನು ಕೊಡುತ್ತದೆ. ನೀರಿನಲ್ಲಿ ಸ್ವಲ್ಪ ಕರಗುತ್ತದೆ, ಆದರೆ ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ಹೆಚ್ಚಾಗಿ ಕರಗುತ್ತದೆ.

ಇತಿಹಾಸ

[ಬದಲಾಯಿಸಿ]

ಜಿಪ್ಸಮ್ ಎಂಬ ಪದವು ಗ್ರೀಕ್ ಪದದಿಂದ γύψος ( ಜಿಪ್ಸೊಸ್ ), "ಪ್ಲಾಸ್ಟರ್" ಎಂಬ ಪದದಿಂದ ಬಂದಿದೆ.[]


ಉಪಯೋಗಗಳು

[ಬದಲಾಯಿಸಿ]

ಕಚ್ಚಾರೂಪದಲ್ಲಿ ದ್ರವೀಕರಿಸುವ ವಸ್ತುವಾಗಿಯೂ ಪ್ಲಾಸ್ಟರ್ ರೂಪದಲ್ಲಿ ವಿವಿಧ ನಿರ್ಮಾಣಕಾರ್ಯದಲ್ಲಿ ಆಧಾರ ವಸ್ತುವಾಗಿಯೂ ಜಿಪ್ಸಮಿನ ಉಪಯೋಗ ಉಂಟು. ಆನ್‍ಹೈಡ್ರೇಟ್ ರೂಪದ ಜಿಪ್ಸಮಿನಿಂದ ಅಮೊನಿಯಮ್ ಸಲ್ಫೇಟ್ ಗೊಬ್ಬರ ತಯಾರಿಸುತ್ತಾರೆ. ಕೃತಕ ದಂತಪಂಕ್ತಿಗಳ ತಯಾರಿಕೆಯಲ್ಲಿ, ಅಲಂಕಾರ ಸಾಮಗ್ರಿಗಳ ನಿರ್ಮಾಣದಲ್ಲಿ, ಕೈಗಾರಿಕೆಗಳಲ್ಲಿ ಮುಂತಾದ ಕ್ಷೇತ್ರಗಳಲ್ಲಿ ಜಿಪ್ಸಮಿನ ಬಳಕೆ ಉಂಟು.

ಮೂಲಗಳು

[ಬದಲಾಯಿಸಿ]

ಪೂರ್ಣ ಅಥವಾ ಅಲ್ಪ ಆವರಿಸಿದ ಸಮುದ್ರನೀರಿನ ಪ್ರದೇಶ ಅಥವಾ ಹೆಚ್ಚು ಉಪ್ಪು ವಿಲೀನವಾದ ಸರೋವರದ ನೀರು, 42º ಅ ಗಿಂತ ಕಡಿಮೆ ಉಷ್ಣತೆ ಮತ್ತು ಸಮುದ್ರನೀರಿಗಿಂತ 3.35ರಷ್ಟು ಹೆಚ್ಚು ಲವಣತ್ವವಿದ್ದು , ಇಂಗುವುದರಿಂದ ಜಿಪ್ಸಮ್ ಸ್ತರಗಳಂತೆ ನಿಕ್ಷೇಪಗೊಳ್ಳುವುದು. ಅಲ್ಲದೇ ಪಿರೈಟ್ಸ್ ಶಿಥಿಲವಾಗುವುದರಿಂದಲೂ ಜೇಡುಶಿಲೆಗಳಲ್ಲಿರುವ ಸುಣ್ಣದಂಶದ ಮೇಲೆ ಅಥವಾ ಸುಣ್ಣಶಿಲೆಗಳ ಮೇಲೆ ಸಲ್ಫ್ಯೂರಿಕ್ ಆಮ್ಲದ ರಾಸಾಯನಿಕ ಕ್ರಿಯೆಯಿಂದಲೂ ಸುಣ್ಣಶಿಲೆ ಗುಹೆಗಳಲ್ಲಿಯ ಜಲಮಯ ದ್ರಾವಣಗಳು ಹೆಪ್ಪುಗಟ್ಟುವುದರಿಂದಲೂ ಜಿಪ್ಸಮ್ ಸ್ತರಗಳು ನಿಕ್ಷೇಪಿಸುತ್ತವೆ. ಅತಿದೊಡ್ಡ ಜಿಪ್ಸಮ್ ನಿಕ್ಷೇಪಗಳೆಲ್ಲವೂ ಸುಣ್ಣಶಿಲೆ, ಜೇಡುಶಿಲೆ ಮತ್ತು ಮರಳು ಶಿಲೆಗಳಲ್ಲಿ ಅಂತರ ಪದರಗಳಾಗಿ ಕಲ್ಲುಪ್ಪಿನ ಸಾಹಚರ್ಯದಲ್ಲಿಯೇ ಉಂಟಾದವು. ಜಿಪ್ಸಮ್ ಹಲವು ಬಾರಿ ಮೃದುವಾಗಿ ಮತ್ತು ಮಣ್ಣಿನಂತೆ ಜೇಡು ಮತ್ತು ಸಣ್ಣಜೇಡುಗಳೊಡನೆ ಮೇಲ್ಮೈಯಲ್ಲಿ ರಾಶಿಗೂಡಿರುತ್ತದೆ. ಇದಕ್ಕೆ ಜಿಪ್ಸೈಟ್ ಎಂದು ಹೆಸರು. ಇದನ್ನು ತಗ್ಗು ಮರುಭೂಮಿಯ ಶುಷ್ಕವಾತಾವರಣ ಪ್ರದೇಶಗಳಲ್ಲಿ ಕಾಣಬಹುದು. ಜಿಪ್ಸಮ್ ಪ್ರಪಂಚದಾದ್ಯಂತ ಹರಡಿದೆ. ಹೇರಳವಾದ ಮತ್ತು ಲಾಭದಾಯಕ ನಿಕ್ಷೇಪಗಳು ಅಮೆರಿಕ ಸಂಯುಕ್ತಸಂಸ್ಥಾನಗಳ ಪಶ್ಚಿಮ ಭಾಗದಲ್ಲೂ ಜರ್ಮನಿಯ ಸ್ಟಾಸ್‍ಫರ್ಢಿನಲ್ಲಿಯೂ ಇವೆ. ಭಾರತದಲ್ಲಿ ಜಿಪ್ಸಮ್ ಮಹಾರಾಷ್ಟ್ರದ ನಾಗಪುರ ಜಿಲ್ಲೆ, ಹಿಮಾಚಲಪ್ರದೇಶ, ಕಾಶ್ಮೀರ, ಕಚ್, ತಮಿಳುನಾಡಿನ ತಿರುಚಿರಾಪಲ್ಲಿ ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿ, ಆಂಧ್ರಪ್ರದೇಶ ನಿಲ್ಲೂರು ಮತ್ತು ಗುಂಟೂರು ಜಿಲ್ಲೆಗಳಲ್ಲಿ ಪಂಜಾಬ್, ರಾಜಸ್ತಾನ, ಸೌರಾಷ್ಟ್ರ , ಉತ್ತರ ಪ್ರದೇಶ ಮತ್ತು ವಿಂಧ್ಯಪ್ರದೇಶದಲ್ಲಿಯೂ ದೊರೆಯುತ್ತಿದೆ.


ಜಿಪ್ಸಮ್ ಐದು ಬಗೆಗಳಾಗಿ ಸಿಗುತ್ತದೆ : 1. ರಾಕ್ ಜಿಪ್ಸಮ್ , 2. ಜಿಪ್ಸೈಟ್-ಹುಡಿಮಣ್ಣಿನಂತಿರುವುದು, 3. ಅಲಬಾಸ್ಟರ್-ಮುದ್ದೆಯಂತೆ ನಯವಾದ ಕಣಗಳ, ಪಾರಕದಿಂದ ಅಥವಾ ಒರಟಾದ ಕಣಸಮೂಹದಿಂದಾಗಿರುವುದು, 4. ಸಾಟಿನ್-ಸ್ಟಾರ್-ರೇಷ್ಮೆಯ ಹೊಳಪಿನ ಎಳೆಯಾಕಾರದ್ದು , 5 ಸೆಲೆನೈಟ್-ಪಾರಕತ್ವ ಪಡೆದಿದ್ದು , ಗಾಜಿನಂತೆ ಹೊಳಪಿನಿಂದ ಹರಳಿನಾಕಾರದಲ್ಲಿರುವುದು.


ಗಣಿಗಾರಿಕೆ

[ಬದಲಾಯಿಸಿ]
Estimated production of Gypsum in 2015
(thousand metric tons)[]
Country Production Reserves
 ಚೀನಾ 132,000 N/A
 ಇರಾನ್ 22,000 1,600
 Thailand 12,500 N/A
 ಅಮೇರಿಕ ಸಂಯುಕ್ತ ಸಂಸ್ಥಾನ 11,500 700,000
 ಟರ್ಕಿ 10,000 N/A
 Spain 6,400 N/A
 ಮೆಕ್ಸಿಕೋ 5,300 N/A
 Japan 5,000 N/A
 Russia 4,500 N/A
 ಇಟಲಿ 4,100 N/A
 India 3,500 39,000
 ಆಸ್ಟ್ರೇಲಿಯಾ 3,500 N/A
 ಒಮಾನ್ 3,500 N/A
 Brazil 3,300 290,000
 France 3,300 N/A
 ಕೆನಡಾ 2,700 450,000
 ಸೌದಿ ಅರೇಬಿಯಾ 2,400 N/A
 ಅಲ್ಜೀರಿಯ 2,200 N/A
 Germany 1,800 450,000
 ಅರ್ಜೆಂಟೀನ 1,400 N/A
 ಪಾಕಿಸ್ತಾನ 1,300 N/A
 ಯುನೈಟೆಡ್ ಕಿಂಗ್ಡಂ 1,200 55,000
Other countries 15,000 N/A
World total 258,000 N/A

ಉಲ್ಲೇಖಗಳು

[ಬದಲಾಯಿಸಿ]
  1. Anthony, John W.; Bideaux, Richard A.; Bladh, Kenneth W.; Nichols, Monte C., eds. (2003). "Gypsum". Handbook of Mineralogy (PDF). Vol. V (Borates, Carbonates, Sulfates). Chantilly, VA, US: Mineralogical Society of America. ISBN 0962209708.
  2. Gypsum. Mindat
  3. Klein, Cornelis; Hurlbut, Cornelius S., Jr. (1985), Manual of Mineralogy (20th ed.), John Wiley, pp. 352–353, ISBN 0-471-80580-7{{citation}}: CS1 maint: multiple names: authors list (link)
  4. "Compact Oxford English Dictionary: gypsum".
  5. "GYPSUM" (PDF). U.S. Geological Survey.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಿಪ್ಸಂ&oldid=1155485" ಇಂದ ಪಡೆಯಲ್ಪಟ್ಟಿದೆ