ವಿಷಯಕ್ಕೆ ಹೋಗು

ಜಿಹಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಿಹಾದ್ - ಅರಬ್ಬೀ ಭಾಷೆಯ ಈ ಪದಕ್ಕೆ ಮಹಮದೀಯದ ಧಾರ್ಮಿಕ ಯುದ್ಧ ಎಂಬ ಅರ್ಥವಿದೆ. ಇದನ್ನು ಜಿಹಾದ್ ಎಂದೂ ಕರೆವುದಿದೆ. ಇಸ್ಲಾಮ್ ಮತದ ಆದಿಯಲ್ಲಿ ಪ್ರವಾದಿ ಮಹಮದ್ ಇಸ್ಲಾಮ್ ಮತಕ್ಕೆ ಶತ್ರುಗಳಾಗಿದ್ದವರ ಮೇಲೆ ಹೋರಾಟ ಮಾಡುವಾಗ ಈ ಜಿಹಾದ್ ತತ್ತ್ವ ಉದ್ಭವಿಸಿತು. ಹೀಗಿದ್ದರೂ ಕಲೀಫರು ಇಲ್ಲವೆ ಮಹಾಮಫ್ತಿಯವರು ಕರೆಕೊಟ್ಟಾಗ ಮುಸ್ಲಿಮರ ಹೋರಾಟಕ್ಕೆ ಸಿದ್ಧರಾಗುತ್ತಿದ್ದರು. ಈಗಿನ ಕಾಲದಲ್ಲಿ ಕಲೀಫರ ಬದಲು ಕೈರೋ ಪಟ್ಟಣದಲ್ಲಿ ಇಸ್ಲಾಮ್ ಧರ್ಮದ ಪುರಾತನ ಪೀಠವಾದ ಅಲ್ ಅಸರ್‍ನ ಮಹಾ ಪುರೋಹಿತರಾದ ಗ್ರ್ಯಾಂಡ್‍ಮಫ್ತಿಯವರು ಇಂಥ ಕರೆಯನ್ನು ಕೊಡುತ್ತಾರೆ.

ಜಿಹಾದ್ ನಾಲ್ಕು ಬಗೆಯಾಗಿದೆ : ಹೃದಯದಿಂದ (ಮನಸಾ), ನಾಲಗೆಯಿಂದ (ವಾಚಾ), ಕೈಗಳಿಂದ (ಬಾಹುಬಲ, ಕರ್ಮಣಾ) ಮತ್ತು ಶಸ್ತ್ರಾಸ್ತ್ರಗಳ ಸಹಾಯದಿಂದ ಯಾವನೊಬ್ಬ ಜಿಹಾದ್ ಕೈಗೊಳ್ಳಬಹುದು. ಧರ್ಮರಕ್ಷಣೆಗಾಗಿ ಹೊರ ಶತ್ರುಗಳೊಂದಿಗೆ ಹೋರಾಡುವುದಲ್ಲದೆ ಆತ್ಮಶೋಧ ಮಾಡಿಕೊಂಡು ಸಾಧುಜೀವನ ನಡೆಸುವುದು,

ಸಮಾಜದಲ್ಲಿನ ಅಜ್ಞಾನ, ಅನಕ್ಷರತೆ, ರೋಗ ರುಜಿನಗಳು ಮತ್ತು ದಾರಿದ್ರ್ಯಗಳ ವಿರುದ್ಧ ಹೋರಾಟ ಮಾಡುವುದು ಕೂಡ ಜಿಹಾದ್ ಎನಿಸಿಕೊಳ್ಳತ್ತದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಿಹಾದ್&oldid=1065437" ಇಂದ ಪಡೆಯಲ್ಪಟ್ಟಿದೆ