ವಿಷಯಕ್ಕೆ ಹೋಗು

ಜೀವನ್ಮುಖಿ ಸುರೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೀವನ್ಮುಖಿ ಸುರೇಶ್
ಜೀವನ್ಮುಖಿ ಸುರೇಶ್
Born25-05-1976
ಮಂಗಲ, ಮಂಡ್ಯ ತಾಲ್ಲೂಕು ಮತ್ತು ಜಿಲ್ಲೆ
Educationಪಿ.ಯು.ಸಿ.
Occupation(s)ಪತ್ರಿಕೋದ್ಯಮ ಮತ್ತು ಪುಸ್ತಕ ಪ್ರಕಾಶನ ಪತ್ರಿಕೋದ್ಯಮ : ಸಂಪಾದಕ, ಜೀವನ್ಮುಖಿ ಪಾಕ್ಷಿಕ ಪತ್ರಿಕೆ, ಬೆಂಗಳೂರು
Organization(s)ಸಂಸ್ಥಾಪಕ ಅಧ್ಯಕ್ಷರು, ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ, ಬೆಂಗಳೂರು ಹಾಗೂ ಜೀವನ್ಮುಖಿ ಟ್ರಸ್ಟ್

ಗೌರವ ಅಧ್ಯಕ್ಷರು, ಅಖಿಲ ಭಾರತ ಸರ್ವಜ್ಞ ವೇದಿಕೆ, ಬೆಂಗಳೂರು ಹಸಿರು ಭೂಮಿ ಸಾಂಸ್ಕೃತಿಕ ಟ್ರಸ್ಟ್ , ಬೆಂಗಳೂರು ಮಾಜಿ ಸದಸ್ಯರು, ಕನ್ನಡಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ದಳ, ಕರ್ನಾಟಕ ಸರ್ಕಾರ ಸದಸ್ಯರು : ಕರ್ನಾಟಕ ಸಂಸ್ಕೃತಿ ವಿಶ್ವ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಸಲಹಾ ಸಮಿತಿ ಸಂಚಾಲಕರು : ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು ಪ್ರತಿಭಾ ಪ್ರಕಾಶನ, ಮಂಡ್ಯ ಗೌರವ ಸಲಹೆಗಾರರು : ಜಿಲ್ಲಾಯುವ ಬರಹಗಾರರ ಬಳಗ, ಮಂಡ್ಯ ನೆಲದನಿ ಸಾಂಸ್ಕೃತಿಕ ಸಂಸ್ಥೆ, ಮೈಸೂರು, ಸ್ಪಂದನ ಸಾಂಸ್ಕೃತಿಕ ಪರಿಷತ್ತು, ಹುಣಸೂರು ಅಜೀವ ಸದಸ್ಯರು : ಕೇಂದ್ರಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕರ್ನಾಡಕ ಸ್ವಾಭಿಮಾನಿ ವೇದಿಕೆ,

ರಾಜ್ಯಒಕ್ಕಲಿಗರ ಸಂಘ,
Known forಕನ್ನಡ ಸಾಸ್ಕೃತಿಕ ಪರಿಚಾರಿಕೆ : ಕನ್ನಡ ನುಡಿ ಸಮ್ಮೇಳನ, ಕನ್ನಡ ಹಬ್ಬ, ರಾಜ್ಯ ಮಟ್ಟದ ಕವಿಗೋಷ್ಠಿ, ಕಾವ್ಯಕಮ್ಮಟ, ಗೀತಗಾಯನ, ನಾಟಕ ಪ್ರದರ್ಶನ. ವಿಚಾರ ಸಂಕಿರಣ ಮತ್ತು ಸಂವಾದ, ವಿಶೇಷ ಉಪನ್ಯಾಸ, ನೃತ್ಯ ಪ್ರದರ್ಶನ, ಕನ್ನಡ ಸಾಹಿತ್ಯ ಸಂಭ್ರಮ, ಕನ್ನಡ ಪ್ರತಿಭಾ ಪುರಸ್ಕಾರ, ಉಚಿತ ನೋಟ್ ಬುಕ್ ಮತ್ತು ಸಮವಸ್ತ್ರವಿತರಣೆ, ಪುಸ್ತಕ ಬಿಡುಗಡೆ ಸಮಾರಂಭ, ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಇತ್ಯಾದಿ... ಸೇರಿದಂತೆ ನೂರಾರು ಸಮಾರಂಭ ಮತ್ತು ಸಮ್ಮೇಳನ ಆಯೋಜನೆ ಮಾಡುವ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಚಾರಿಕೆಯ ಸೇವೆ, ಪ್ರತಿಭಾವಂತ ಹಿರಿಯ-ಕಿರಿಯರಿಗೆ ಅವಕಾಶ ಮತ್ತು ಪ್ರೋತ್ಸಾಹ, ಸಂಘಟನೆಗಳ ಜೊತೆ ಒಡನಾಟ.
Notable workಸ್ಥಾಪಿಸಿರುವ ಪ್ರಶಸ್ತಿಗಳು : ಜೀವನ್ಮುಖಿ ಪ್ರಶಸ್ತಿ, ಕದಂಬ ರತ್ನ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಕರುನಾಡ ಚೇತನ ಪ್ರಶಸ್ತಿ, ಕುವೆಂಪು ಸಮಾಜಮುಖಿ ಪ್ರಶಸ್ತಿ, ಯುವಚೇತನ ಪ್ರಶಸ್ತಿ
Parents
  • ಎಂ.ಜೆ. ತಿಮ್ಮೇಗೌಡ (father)
  • ಶ್ರೀಮತಿ ಮಂಚಮ್ಮ (mother)
Awardsಸೇವಾ-ಸಾಧನೆಗೆ ದೊರೆತ ಮನ್ನಣೆ : ಸ್ವಾಮಿ ವಿವೇಕಾನಂದ ಪ್ರಶಸ್ತಿ, ಗಾಂಧಿ-ಬುದ್ಧ-ಬಸವ ಟ್ರಸ್ಟ್(ರಿ), ಬೆಂಗಳೂರು., ಡಾ. ಬಾಲಗಂಗಾಧರನಾಥ ಸ್ವಾಮೀಜಿ ಸಮಾಜ ಸೇವಾ ಪ್ರಶಸ್ತಿ, ಹಾರ್ಟ್ ಸಂಸ್ಥೆ(ರಿ), ನಾಗಮಂಗಲ., ಡಾ. ರಾಜ್‌ಕುಮಾರ್ ಪ್ರಶಸ್ತಿ, ಡಾ. ರಾಜ್‌ಕುಮಾರ್ ಪ್ರತಿಷ್ಠಾನ, ಬೆಂಗಳೂರು., ನೇಸರ ಬದುಕು ಪತ್ರಿಕೆ ವಾರ್ಷಿಕ ಸಂಪಾದಕ ಪ್ರಶಸ್ತಿ, ಬೆಂಗಳೂರು., ಜನಪರರಾಜಕಾರಿಣಿ ಹೆಚ್.ಡಿ. ಕುಮಾರಸ್ವಾಮಿ ಪ್ರಶಸ್ತಿ, ಮುಕುಂದ ಗ್ರಾಮ ವಿವಿದೋದ್ದೇಶಗಳ ಸಂಘ, ಚನ್ನಪಟ್ಟಣ., ಮಂಡ್ಯ ಜಿಲ್ಲಾ ಕನ್ನಡರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ., ಸಮಾಜ ಸೇವಾ ರತ್ನ ಪ್ರಶಸ್ತಿ, ಕನ್ನಡ ಸೇನೆ(ರಿ), ಮಂಡ್ಯ ಜಿಲ್ಲಾ ಘಟಕ., ಸೇವಾ ಭೂಷಣ ಪ್ರಶಸ್ತಿ, ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ(ರಿ), ಮೈಸೂರು., ಕನ್ನಡರತ್ನ ಪ್ರಶಸ್ತಿ, ಡಾ. ಜೀಶಂಪ ಸಾಹಿತ್ಯ ವೇದಿಕೆ, ಮಂಡ್ಯ. ಕಾಯಕ ಯೋಗಿ ಪ್ರಶಸ್ತಿ, ಒಕ್ಕಲಿಗ ಸಮುದಾಯ ನೌಕರರ ಒಕ್ಕೂಟ ಬೆಂಗಳೂರು ಹಾಗೂ ಇತ್ಯಾದಿ.

ಜೀವನ್ಮುಖಿ ಸುರೇಶ್ ಟಿ.

ಸಾಂಸ್ಕೃತಿಕ ವಲಯದಲ್ಲಿ `ಜೀವನ್ಮುಖಿ ಸುರೇಶ್’ಯೆಂದು ಚಿರಪರಿಚಿತವಾಗಿರುವ ಟಿ. ಸುರೇಶ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಮಂಗಲ ಗ್ರಾಮದವರು. 1976ರಲ್ಲಿ ಜನಿಸಿರುವ ಇವರು ಶ್ರೀ ಎಂ.ಜೆ. ತಿಮ್ಮೇಗೌಡ ಮತ್ತು ಶ್ರೀಮತಿ ಮಂಚಮ್ಮ ಅವರ ಸುಪುತ್ರರು. ಕೃಷಿಕ ಕುಟುಂಬದಿoದ ಬಂದಿರುವ ಇವರು ಭಕ್ತಿಗೀತೆಗಳ ಧ್ವನಿಸುರುಳಿಗಳನ್ನು ಹೊರತರುವ ಮೂಲಕ ಸಮಾಜಿಕ ರಂಗಕ್ಕೆ ಬಂದವರು. ಅ ಬಳಿಕ ಸಿನಿಮಾ ವಿತೆರಣೆಯ ರಂಗದಲ್ಲೂ ಕೂಡ ಕೆಲಸ ಮಾಡಿ, ಕಿರುತೆರೆಯಲ್ಲೂ ಕೈ ಆಡಿಸಿದವರು.

ಅಕ್ಷರದ ಸಂಸ್ಕೃತಿಯ ಮೂಲಕ ಸಮಾಜಿಕ ಪರಿವರ್ತನೆಯ ಹಂಬಲ ಹೊಂದಿರುವ ಟಿ. ಸುರೇಶ್‌ರವರು, ಜೀವನ್ಮುಖಿ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿ, ಅದರ ಸಂಪಾದಕರಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ, ರಾಜಕಾರಣ, ಸಿನಿಮಾ, ಸೇರಿದಂತೆ ವಿವಿಧ ಸಮಾಜಿಕ ರಂಗದ ವಿಚಾರಗಳನ್ನು ತಮ್ಮ ಪತ್ರಿಕೆಯಲ್ಲಿ ಒತ್ತು ನಿಷ್ಟವಾಗಿ ಪ್ರಕಟಿಸುವ ಮೂಲಕ, ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿ ಇಡಿಯಲು ಶ್ರಮಿಸುತ್ತಿದ್ದಾರೆ. ಹಲವಾರು ಹೊಸ ಬರಹಗಾರರಿಗೆ ಪತ್ರಿಕೆಯ ಮೂಲಕ ಅಕ್ಷರ ಕೃಷಿಗೆ ವೇದಿಕೆ ಕಟ್ಟಿಸಿಕೊಟ್ಟಿದ್ದಾರೆ.

ಬೆಂಗಳೂರಿನ ಸಾಂಸ್ಕೃತಿಕ ಸಂಘಟನೆಯಲ್ಲಿ ಜೀವನ್ಮುಖಿ ಸುರೇಶ್‌ರವರು ಗಮರ್ನಾಹ ಹೆಸರು. ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯನ್ನು ಸಂಸ್ಥಾಪನೆ ಮಾಡಿ, ಅದರ ಮೂಲಕ ಹಲವಾರು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳನ್ನು ಸಂಘಟಿಸಿ, ಸಮರ್ಥವಾಗಿ ಮುನ್ನೆಡೆಸುತ್ತಾ ಸಮಾಜಿಕ ಸೇವೆಯಲ್ಲಿ ನಿರಂತರಾಗಿದ್ದಾರೆ. ಈ ವೇದಿಕೆಯ ಮಹಿಳಾ ಘಟಕವನ್ನು ಆರಂಭಿಸಿರುವುದು ಇವರ ಸಂಘಟನಾ ಚತುರಕ್ಕೆ ಹಿಡಿದ ಕನ್ನಡಿ.

ಜೀವನ್ಮುಖಿ ಟ್ರಸ್ಟ್ ಸಂಸ್ಥಾಪಕರಾಗಿರುವ ಸುರೇಶ್‌ರವರು ಹತ್ತಾರು ಜನಪರ ಕಾರ್ಯಕ್ರಮಗಳ ಮೂಲಕ ಆರೋಗ್ಯ ಪೂರ್ಣ ಸಧಾಭಿರುಚಿ ಸಮಾಜವನ್ನು ಕಟ್ಟಲು ದುಡಿಯುತ್ತಿದ್ದಾರೆ. ತಮ್ಮ ಎರಡು ಸಂಘಟನೆಗಳ ಮೂಲಕ ಹಲವಾರು ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಲೇಖನಿ ಸಮಾಗ್ರಿ ಸಮವಸ್ತ್ರಗಳನ್ನು ನೀಡಿ ಅವರ ವಿದ್ಯಾಭ್ಯಾಸಕ್ಕೆ ನೇರವಾಗಿದ್ದಾರೆ ಹಾಗೂ ನೂರಾರು ಮಂದಿ ಕಿರಿಯ ಮತ್ತು ಹಿರಿಯ ಸಾಧಕರನ್ನು ಗುರುತಿಸಿ ಪ್ರಶಸ್ತಿ-ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವುದು ಅವರ ಹೃದಯ ವೈಶಾಲ್ಯತೆ ಸಾಕ್ಷಿ ಪ್ರಜ್ಞೆಯಾಗಿದೆ.

ನಾಡಿನ ಹಲವಾರು ಪ್ರಮುಖ ಗಣ್ಯ ಸಾಹಿತಿಗಳ ಜೊತೆಗೆ ನಿಕಟವಾದ ಸಂಪರ್ಕ ಇಟ್ಟುಕೊಂಡಿರುವ ಜೀವನ್ಮುಖಿ ಸುರೇಶ್‌ರವರು ಪತ್ರಿಕೋದ್ಯಮ, ಸಾಂಸ್ಕೃತಿಕ ಸಂಘಟನೆ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಜನ ಮುಖಿಯಾಗಿ ಗುರುತಿಸಿ ಕೊಂಡಿದ್ದಾರೆ. ಇಂತಹ ಕ್ರಿಯಾಶೀಲ ಪ್ರತಿಭೆಗೆ ನಾಡಿನ ಹಲವಾರು ಸಂಘ-ಸAಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿರುವುದು, ಸಾಧಕ ವ್ಯಕ್ತಿತ್ವಕೆ ಸಂದಾಯವಾದ ಗೌರವವಾಗಿದೆ.