ಜುದಾಸ್ ಪ್ರೀಸ್ಟ್
Judas Priest | |
---|---|
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | Birmingham, ಇಂಗ್ಲೆಂಡ್ |
ಸಂಗೀತ ಶೈಲಿ | Heavy metal |
ಸಕ್ರಿಯ ವರ್ಷಗಳು | 1969-1992 1996-present |
Labels | Epic, Columbia, CMC, Koch, RCA, Gull |
Associated acts | Trapeze, Fight, The Flying Hat Band, Halford, 2wo, Racer X, Iced Earth, Al Atkins, Beyond Fear |
ಅಧೀಕೃತ ಜಾಲತಾಣ | www.judaspriest.com |
ಸಧ್ಯದ ಸದಸ್ಯರು | Rob Halford Glenn Tipton K. K. Downing Ian Hill Scott Travis |
ಮಾಜಿ ಸದಸ್ಯರು | See: List of Judas Priest band members |
ಜುದಾಸ್ ಪ್ರೀಸ್ಟ್ ಬರ್ಮಿಂಘಮ್‌ನ 1969ರಲ್ಲಿ ರೂಪುಗೊಂಡ ಗ್ರಾಮಿ ಪ್ರಶಸ್ತಿ ವಿಜೇತ ಇಂಗ್ಲಿಷ್ ಹೆವಿ ಮೆಟಲ್(ಬಲವಾದ ತಾಳ ಯಾ ಲಯದ) ವಾದ್ಯ-ವೃಂದವಾಗಿದೆ. ಜುದಾಸ್ ಪ್ರೀಸ್ಟ್‌ನ ಮುಖ್ಯ ತಂಡವು ಗಾಯಕ ರಾಬ್ ಹಾಲ್ಫರ್ಡ್, ಗಿಟಾರ್-ವಾದಕರಾದ ಗ್ಲೆನ್ನ್ ಟಿಪ್ಟಾನ್ ಮತ್ತು K.K. ಡೌವ್ನಿಂಗ್ ಹಾಗೂ ಬೇಸ್-ವಾದ್ಯಗಾರ ಅಯನ್ ಹಿಲ್ ಮೊದಲಾದವರನ್ನು ಒಳಗೊಂಡಿದೆ. ಈ ವಾದ್ಯ-ವೃಂದವು ಅನೇಕ ವರ್ಷ ಹಲವಾರು ಡ್ರಮ್-ವಾದ್ಯ ಬಾರಿಸುವವರನ್ನು ಕಂಡಿತು, ಆ ನಂತರ 1989ರಿಂದ ಸ್ಕಾಟ್ ಟ್ರಾವಿಸ್ ಆ ಸ್ಥಾನವನ್ನು ಪಡೆದುಕೊಂಡನು. ಇದು ಅನೇಕ ಹೆವಿ ಮೆಟಲ್ ಸಂಗೀತಗಾರರು ಮತ್ತು ವಾದ್ಯ-ವೃಂದಗಳ ಮೇಲೆ ಪ್ರಭಾವ ಬೀರಿದ ಒಂದು ಮಾದರಿ ವಾದ್ಯ-ಮೇಳವಾಗಿದೆ. ವಿಶ್ವಾಸಾರ್ಹ ಹೆವಿ ಮೆಟಲ್ ವಾದ್ಯ-ವೃಂದಗಳಲ್ಲಿ ಒಂದಾದ ಅದರ ಜನಪ್ರಿಯತೆ ಮತ್ತು ಹಿರಿಮೆಯು ಅದಕ್ಕೆ "ಮೆಟಲ್ ಗಾಡ್ಸ್" ಎಂಬ ಅಡ್ಡ ಹೆಸರನ್ನು ಅದರ ಅದೇ ಹೆಸರಿನ ಹಾಡಿನಿಂದ ಗಳಿಸಿಕೊಟ್ಟಿತು.[೧] ಈ ವಾದ್ಯ-ವೃಂದವು ಪ್ರಪಂಚದಾದ್ಯಂತ ಸುಮಾರು 35 ದಶಲಕ್ಷ ಆಲ್ಬಂಗಳನ್ನು ಮಾರಾಟ ಮಾಡಿದೆ.[೨]
ಇತಿಹಾಸ
[ಬದಲಾಯಿಸಿ]ಮೂಲಗಳು
[ಬದಲಾಯಿಸಿ]K. K. ಡೌವ್ನಿಂಗ್ ಮತ್ತು ಅಯನ್ ಹಿಲ್ ಅಕ್ಕಪಕ್ಕ ವಾಸಿಸುತ್ತಿದ್ದು, ಪಶ್ಚಿಮ ಬ್ರೋಮ್ವಿಚ್‌ನಲ್ಲಿ ಒಂದೇ ನರ್ಸರಿ ಮತ್ತು ಶಾಲೆಗೆ ಸೇರಿದುದರಿಂದ ಬಾಲ್ಯದಿಂದಲೇ ಒಬ್ಬರನ್ನೊಬ್ಬರು ತಿಳಿದಿದ್ದರು. ಅವರು ಹದಿಹರೆಯದಲ್ಲಿ ನಿಕಟ-ಸ್ನೇಹಿತರಾದರು, ಒಂದೇ ರೀತಿಯ ಸಂಗೀತ ಆಸಕ್ತಿಗಳನ್ನು (ಜಿಮಿ ಹೆಂಡ್ರಿಕ್ಸ್, ದ ಹು, ಕ್ರೀಮ್, ದ ಯಾರ್ಡ್‌ಬರ್ಡ್ಸ್) ಪರಸ್ಪರ ಹಂಚಿಕೊಂಡರು ಹಾಗೂ ಸಂಗೀತ ವಾದ್ಯಗಳನ್ನು ನುಡಿಸಲು ಕಲಿತರು. ಈ ವಾದ್ಯ-ವೃಂದವು ಜುದಾಸ್ ಪ್ರೀಸ್ಟ್ ಹೆಸರಿನ ಸ್ಥಳೀಯ ವಾದ್ಯ-ಮೇಳವು (ಜಾನ್ ವೆಸ್ಲೆ ಹಾರ್ಡಿಂಗ್ ಆಲ್ಬಂನ ಬಾಬ್ ಡೈಲನ್‌ನ ಹಾಡು "ದ ಬಲ್ಲಾಡ್ ಆಫ್ ಫ್ರ್ಯಾಂಕ್ ಲೀ ಆಂಡ್ ಜುದಾಸ್ ಪ್ರೀಸ್ಟ್"ನ[೩] ನಂತರ) ವಿಭಾಗವಾದ ನಂತರ 1969ರಲ್ಲಿ ಇಂಗ್ಲೆಂಡ್‌ನ ಬರ್ಮಿಂಘಮ್‌ನಲ್ಲಿ ಸ್ಥಾಪನೆಯಾಯಿತು. ಈ ವಾದ್ಯ-ವೃಂದದ ಹಾಡುಗಾರ ಆಲ್ ಆಟ್ಕಿನ್ಸ್, ಡ್ರಮ್-ವಾದ್ಯ ಬಾರಿಸುವವನಾದ ಜಾನ್ ಎಲ್ಲಿಸ್‌ನೊಂದಿಗೆ ಪ್ರಬಲ ಟ್ರಿಯೊ(ಮೂವರು ವಾದ್ಯಗಾರರ ತಂಡ) ಆಗಿ ಪ್ರದರ್ಶನ ನೀಡುತ್ತಿದ್ದ ಡೌವ್ನಿಂಗ್ ಮತ್ತು ಹಿಲ್‌ರನ್ನು ತಾನು ಅವರ ತಂಡದ ಗಾಯಕನಾಗಬಹುದೇ ಎಂದು ಕೇಳಿ, ಸೇರಿಕೊಂಡನು. ವಾದ್ಯ-ವೃಂದಕ್ಕೆ ಆಟ್ಕಿನ್ಸ್‌ನನ್ನು ಸೇರಿಸಿಕೊಂಡು ಡೌವ್ನಿಂಗ್ ಅವರ ತಂಡದ ಹೆಸರನ್ನು, ಮೂಲ ಜುದಾಸ್ ಪ್ರೀಸ್ಟ್ ವಾದ್ಯ-ವೃಂದದ ಅಭಿಮಾನಿಯಾಗಿದ್ದರಿಂದ ಅದೇ ಹೆಸರನ್ನು ಇಡೋಣವೆಂದು ಸೂಚಿಸಿದನು. ಡೌವ್ನಿಂಗ್‌ನ ಮುಖಂಡತ್ವದಲ್ಲಿ ವಾದ್ಯ-ವೃಂದವು ಅದರ ಮೂಲತಃ ಬ್ಲೂಸ್ ಪ್ರಭಾವದಿಂದ ದೂರಸರಿದು ಹಾರ್ಡ್ ರಾಕ್ಅನ್ನು ನುಡಿಸಿತು ಹಾಗೂ ನಂತರ ಅದು ಹೆವಿ ಮೆಟಲ್ ಆಯಿತು.[ಸೂಕ್ತ ಉಲ್ಲೇಖನ ಬೇಕು] ಈ ನಾಲ್ವರ ತಂಡವು ಬರ್ಮಿಂಘಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿವಿಧ ಡ್ರಮ್-ವಾದ್ಯ ಬಾರಿಸುವವರೊಂದಿಗೆ 1974ರವರೆಗೆ ಪ್ರದರ್ಶನ ನೀಡಿತು. ಕೆಲವೊಮ್ಮೆ ಬಡ್ಗೀ, ಥಿನ್ ಲಿಜ್ಜಿ ಮತ್ತು ಟ್ರ್ಯಾಪೆಜೆ ಮೊದಲಾದ ವಾದ್ಯ-ವೃಂದಗಳ ಪ್ರಾರಂಭದಲ್ಲಿ ಪ್ರದರ್ಶನ ಕೊಟ್ಟಿತು. ಅಂತಿಮವಾಗಿ ವಾದ್ಯ-ವೃಂದದ ನಿರ್ವಹಣೆ ಟೋನಿ ಐಯೋಮಿಯ ಕಂಪೆನಿ IMA ಒಂದಿಗಿನ ಹಣಕಾಸಿನ ಕಷ್ಟಗಳು ಮತ್ತು ಸಮಸ್ಯೆಗಳು ಅಲನ್ ಆಟ್ಕಿನ್ಸ್ ಮತ್ತು ಡ್ರಮ್-ವಾದ್ಯ ಬಾರಿಸುವವನಾದ ಅಲನ್ ಮೂರ್ ಹೊರಹೋಗುವಂತೆ ಮಾಡಿದವು.
ಆ ಸಂದರ್ಭದಲ್ಲಿ ಅಯನ್ ಹಿಲ್ ವಾಲ್ಸಲ್‌ನ ಹತ್ತಿರದ ನಗರದ ಮಹಿಳೆಯೊಬ್ಬಳೊಂದಿಗೆ ಸಂಬಂಧವನ್ನು ಹೊಂದಿದ್ದನು. ಅವಳು ಅವಳ ಸಹೋದರ ಬಾಬ್ ಹಾಲ್ಫರ್ಡ್‌ನನ್ನು[೪] ಗಾಯಕನಾಗಿ ಪರಿಗಣಿಸುವಂತೆ ಸೂಚಿಸಿದಳು. ಅದರಿಂದಾಗಿ ಹಾಲ್ಫರ್ಡ್ ವಾದ್ಯ-ವೃಂದವನ್ನು ಸೇರಿದನು. ನಂತರ ಅವನ ಹಿಂದಿನ ವಾದ್ಯ-ವೃಂದ ಹಿರೋಷಿಮಾದಿಂದ ಡ್ರಮ್-ವಾದ್ಯ ನುಡಿಸುವವನಾದ ಜಾನ್ ಹಿಂಚ್‌ನನ್ನು ಕರೆತಂದನು. ಈ ತಂಡವು ಬಡ್ಗೀಯನ್ನು ಬೆಂಬಲಿಸುತ್ತಾ UKಯಾದ್ಯಂತ ಪ್ರವಾಸ ಮಾಡಿತು ಹಾಗೂ ನಾರ್ವೆ ಮತ್ತು ಜರ್ಮನಿಯಲ್ಲಿ ಕೆಲವು ಪ್ರದರ್ಶನಗಳಿಗೆ ಪ್ರಚಾರವನ್ನೂ ನೀಡಿತು.
ರೋಕ ರೋಲ ಮತ್ತು ಸ್ಯಾಡ್ ವಿಂಗ್ಸ್ ಆಫ್ ಡೆಸ್ಟಿನಿ
[ಬದಲಾಯಿಸಿ]ವಾದ್ಯ-ವೃಂದವು ಅದರ ಮೊದಲ ಆಲ್ಬಂನ್ನು ಧ್ವನಿಮುದ್ರಣ ಮಾಡಲು ಸ್ಟುಡಿಯೊಗೆ ಪ್ರವೇಶಿಸುವ ಮೊದಲು, ಅದರ ಧ್ವನಿಮುದ್ರಣ ಕಂಪೆನಿಯು ತಂಡಕ್ಕೆ ಮತ್ತೊಬ್ಬ ಸಂಗೀತಗಾರನನ್ನು ಸೇರಿಸಿಕೊಳ್ಳುವಂತೆ ಸೂಚಿಸಿತು. ಡೌವ್ನಿಂಗ್‌ಗೆ ಕೀಬೋರ್ಡ್ ಅಥವಾ ಹಾರ್ನ್ ನುಡಿಸುವವರನ್ನು ವಾದ್ಯ-ವೃಂದಕ್ಕೆ ಸೇರಿಸಲು ಇಷ್ಟವಿಲ್ಲದಿದ್ದುದರಿಂದ, ಅವನು ಮತ್ತೊಬ್ಬ ಗಿಟಾರ್-ವಾದಕ ಗ್ಲೆನ್ನ್ ಟಿಪ್ಟನ್‌ನನ್ನು ಸ್ಟ್ಯಾಫರ್ಡ್-ಆಧಾರಿತ ಫ್ಲೈಯಿಂಗ್ ಹ್ಯಾಟ್ ವಾದ್ಯ-ವೃಂದದಿಂದ ತಂಡದ ಹೊಸ ಸದಸ್ಯನಾಗಿ ಸೇರಿಸಿಕೊಂಡನು. ಇಬ್ಬರು ಗಿಟಾರ್-ವಾದಕರು ಪ್ರಸ್ತುತವಿದ್ದ ಅಂಶವನ್ನು ಮಾರ್ಪಡಿಸಲು ಒಟ್ಟಿಗೆ ಸೇರಿ ಕೆಲಸ ಮಾಡಿದರು ಹಾಗೂ ಟಿಪ್ಟನ್ ಸಹ ಹಾಡು-ರಚನೆಗಾರನಾಗಿ ಪ್ರಸಿದ್ಧಿಯನ್ನು ಪಡೆದನು. 1974ರ ಆಗಸ್ಟ್‌ನಲ್ಲಿ ವಾದ್ಯ-ವೃಂದವು ಅದರ ಮೊದಲ ಏಕಗೀತ "ರೋಕ ರೋಲ"ವನ್ನು ಬಿಡುಗಡೆ ಮಾಡಿತು. ಒಂದು ತಿಂಗಳ ನಂತರ ಅದೇ ಹೆಸರಿನ ಆಲ್ಬಂವೊಂದು ಬಿಡುಗಡೆಗೊಂಡಿತು. ಧ್ವನಿಮುದ್ರಣ ಮಾಡುವಾಗಿನ ಸಂದರ್ಭದ ತಾಂತ್ರಿಕ ದೋಷಗಳಿಂದಾಗಿ ಧ್ವನಿಮುದ್ರಣದ ಧ್ವನಿಯು ಕಳಪೆ ಮಟ್ಟದ್ದಾಗಿತ್ತು. ಬ್ಲ್ಯಾಕ್ ಸಬ್ಬತ್ನ ಮೊದಲ ಮೂರು ಆಲ್ಬಂಗಳನ್ನು ಮತ್ತು ಬಡ್ಗೀಯ ಮೊದಲ ಆಲ್ಬಂನ್ನು ಮಾಡಿದ ಪ್ರಸಿದ್ಧಿಯನ್ನು ಹೊಂದಿರುವ ನಿರ್ಮಾಪಕ ರಾಡ್ಗರ್ ಬೈನ್ ಈ ಆಲ್ಬಂನ ನಿರ್ಮಾಣವನ್ನು ವಹಿಸಿಕೊಂಡಿದ್ದನು ಮತ್ತು ವಾದ್ಯ-ವೃಂದವು ಒಪ್ಪದ ನಿರ್ಧಾರಗಳನ್ನು ಮಾಡಿದನು.[೫] ಬೈನ್ ವಾದ್ಯ-ವೃಂದದ ನೇರ ಪ್ರದರ್ಶನದ ವ್ಯವಸ್ಥೆಯಿಂದ "ಟೈರಂಟ್", "ಜೀನೊಸೈಡ್" ಮತ್ತು "ದ ರಿಪ್ಪರ್" ಮೊದಲಾದ ಅಭಿಮಾನಿಗಳ ಅಚ್ಚುಮೆಚ್ಚಿನ ಹಾಡುಗಳನ್ನು ಬಿಟ್ಟುಬಿಡುವಂತೆ ಹೇಳಿದನು ಹಾಗೂ 10-ನಿಮಿಷದ ಹಾಡು "ಕ್ಯಾವಿಯರ್ ಆಂಡ್ ಮೆಥ್ಸ್"ಅನ್ನು ಕತ್ತರಿಸಿ 2-ನಿಮಿಷದ ವಾದ್ಯಸಂಗೀತವಾಗಿ ಮಾಡಿದನು. ವಾದ್ಯ-ವೃಂದವು ಅದರ ನಂತರದ ಆಲ್ಬಂನ ನಿರ್ಮಾಣದಲ್ಲಿ ಹೆಚ್ಚು ಆಸಕ್ತಿ ವಹಿಸಿತು, 1976ರ ಜನವರಿ ಮತ್ತು ಫೆಬ್ರವರಿಯಲ್ಲಿ ಧ್ವನಿಮುದ್ರಣ ಮಾಡಿತು ಹಾಗೂ ತಂಡದವರೇ ನಿರ್ಮಾಪಕರನ್ನು ಆಯ್ಕೆ ಮಾಡಿದರು. ಪರಿಣಾಮವಾಗಿ ಸ್ಯಾಡ್ ವಿಂಗ್ಸ್ ಆಫ್ ಡೆಸ್ಟಿನಿ (1976) ಹಿಂದಿನ ವೇದಿಕೆ-ಅಚ್ಚುಮೆಚ್ಚಿನವುಗಳನ್ನು ಮತ್ತು ಮಹಾಕೃತಿ "ವಿಕ್ಟಿಮ್ ಆಫ್ ಚೇಂಜಸ್"ಅನ್ನೂ ಒಳಗೊಂಡಂತೆ ಭಿನ್ನ ಹಳೆಯ ಅಂಶವನ್ನು ಒಳಗೊಂಡಿತ್ತು. ಈ ಹಾಡು ಜುದಾಸ್ ಪ್ರೀಸ್ಟ್‌ನಲ್ಲಿನ ಆಲ್ ಆಟ್ಕಿನ್ಸ್‌ನ ಕಾಲದ ವೇದಿಕೆಯ-ಮೇರುಕೃತಿ "ವಿಸ್ಕಿ ವುಮನ್"ನ ಮತ್ತು ಹಾಲ್ಫರ್ಡ್ ಅವನ ಹಿಂದಿನ ತಂಡ ಹಿರೋಷಿಮಾದಲ್ಲಿ ಬರೆದ "ರೆಡ್ ಲೈಟ್ ಲೇಡಿ"ಯ ಸಂಯೋಗವಾಗಿತ್ತು. ಈ ಆಲ್ಬಂ ಮತ್ತು 1975ರ ರೀಡಿಂಗ್ ಫೆಸ್ಟಿವಲ್ನಲ್ಲಿನ ಪ್ರಬಲ ನಿರ್ವಹಣೆಯು ವಾದ್ಯ-ವೃಂದದಲ್ಲಿನ ಆಸಕ್ತಿಯನ್ನು ಹೆಚ್ಚಿಸಲು ಮತ್ತು ಅದರ ಅಭಿಮಾನಿ ಬಳಗವನ್ನು ವಿಸ್ತರಿಸಲು ಸಹಾಯ ಮಾಡಿತು.
ಲೆಸ್ ಬಿಂಕ್ಸ್‌ನ ಅವಧಿ
[ಬದಲಾಯಿಸಿ]ಅದರ ಮುಂದಿನ ಆಲ್ಬಂ ಮಾಜಿ-ಡೀಪ್ ಪರ್ಪಲ್ ಮಂದ್ರ-ವಾದ್ಯ ವಾದಕ ರಾಗರ್ ಗ್ಲೋವರ್ ನಿರ್ಮಾಣದ 1977ರ ಸಿನ್ ಆಫ್ಟರ್ ಸಿನ್ ಗಾಗಿ ವಾದ್ಯ-ವೃಂದವು ಧ್ವನಿಮುದ್ರಣಕ್ಕಾಗಿ ಡ್ರಮ್-ವಾದ್ಯ ಬಾರಿಸುವವನಾದ ಸೈಮನ್ ಫಿಲಿಪ್ಸ್ನನ್ನು ಬಳಸಿಕೊಳ್ಳಲು ಆರಿಸಿತು. ನಂತರದ ಪ್ರವಾಸದಲ್ಲಿ ಲೆಸ್ (ಜೇಮ್ಸ್ ಲೆಸ್ಲಿ) ಬಿಂಕ್ಸ್ ವಾದ್ಯ-ವೃಂದದೊಂದಿಗೆ ಪ್ರದರ್ಶನ ನೀಡಿದನು. ಅವನ ನಿರ್ವಹಣೆಯಿಂದ ಪ್ರಭಾವಿತರಾಗಿ ತಂಡದವರು ಅವನನ್ನು ತಂಡದಲ್ಲೇ ಉಳಿದುಕೊಳ್ಳುವಂತೆ ಕೇಳಿದರು. ಅವರೆಲ್ಲರೂ ಒಟ್ಟಿಗೆ ಸೇರಿ 1978ರ ಸ್ಟೈನ್ಡ್ ಕ್ಲಾಸ್ ಮತ್ತು ಕಿಲ್ಲಿಂಗ್ ಮೆಶಿನ್ (ಅಮೆರಿಕದಲ್ಲಿ ಹೆಲ್ ಬೆಂಟ್ ಫಾರ್ ಲೆದರ್ ಆಗಿ ಬಿಡುಗಡೆಯಾಯಿತು)ಅನ್ನು ಧ್ವನಿಮುದ್ರಣ ಮಾಡಿದರು. ಪ್ರಬಲ ಹಾಡು "ಬಿಯಾಂಡ್ ದ ರಿಯಾಲ್ಮ್ಸ್ ಆಫ್ ಡೆತ್"ಅನ್ನು ಬರೆದ ಪ್ರಸಿದ್ಧಿಗೆ ಪಾತ್ರನಾದ ಬಿಂಕ್ಸ್ ನಿಪುಣ ಮತ್ತು ತಾಂತ್ರಿಕವಾಗಿ ಪರಣಿತನಾದ ಡ್ರಮ್-ವಾದಕನಾಗಿದ್ದನು ಹಾಗೂ ಅವನ ಸೇರ್ಪಡೆಯು ವಾದ್ಯ-ವೃಂದದ ಧ್ವನಿಗೆ ಕರಕೌಶಲದ ತೀವ್ರತೆಯನ್ನು ಸೇರಿಸಿತು. ಬಿಂಕ್ಸ್ ಅನ್‌ಲೀಶ್ಡ್ ಇನ್ ದ ಈಸ್ಟ್ ಅನ್ನೂ ನುಡಿಸಿದನು. ಅದನ್ನು ಜಪಾನಿನಲ್ಲಿ ಕಿಲ್ಲಿಂಗ್ ಮೆಶಿನ್ ಪ್ರವಾಸದ ಸಂದರ್ಭದಲ್ಲಿ ನೇರವಾಗಿ ಧ್ವನಿಮುದ್ರಣ ಮಾಡಲಾಗಿತ್ತು. ಹಿಂದಿನ ಧ್ವನಿಮುದ್ರಣಗಳಿಗೆ ಹೋಲಿಸಿದರೆ ಕಿಲ್ಲಿಂಗ್ ಮೆಶಿನ್ ಸಣ್ಣ ಹಾಡುಗಳನ್ನು ಒಳಗೊಂಡಿತ್ತು. ಇದು ವಾದ್ಯ-ವೃಂದದ ಹೆವಿ ಮೆಟಲ್ ಪಂಚನ್ನು ಉಳಿಸಿಕೊಂಡು ವಾಣಿಜ್ಯ ಬೇಡಿಕೆಯನ್ನು ಹೆಚ್ಚಿಸಿತು.
ಮೈನ್‌ಸ್ಟ್ರೀಮ್(1930ರ ದಶಕದ ಓಲಾಟದ ಶೈಲಿಯನ್ನು ಆಧರಿಸಿದ ಜಾಸ್ ಸಂಗೀತ) ಯಶಸ್ಸು
[ಬದಲಾಯಿಸಿ]ಕಿಲ್ಲಿಂಗ್ ಮೆಶಿನ್ ನ ಬಿಡುಗಡೆಯ ನಂತರ ಬೆಂಬಲದ ಪ್ರವಾಸದ ನೇರ-ಬಿಡುಗಡೆಯೆಂದರೆ ಅನ್‌ಲೀಶ್ಡ್ ಇನ್ ದ ಈಸ್ಟ್ ಎಂಬ ಹೆಸರಿನ ಆಲ್ಬಂ ಆಗಿದೆ. ಇದು ಪ್ಲಾಟಿನಂವರೆಗೆ ಹೋದ ಜುದಾಸ್ ಪ್ರೀಸ್ಟ್‌ನ ಅನೇಕ ಆಲ್ಬಂಗಳಲ್ಲಿ ಮೊದಲನೆಯದಾಗಿದೆ. ಆ ಸಂದರ್ಭದಲ್ಲಿ, ನೇರ-ಆಲ್ಬಂ ಆಗಿ ಮಾರಾಟ ಮಾಡಿದುದರಲ್ಲಿ ವಾದ್ಯ-ವೃಂದದ ಸ್ಟುಡಿಯೊ-ಹೆಚ್ಚುವರಿಯ ಬಳಕೆ ಮತ್ತು ಓವರ್‌ಡಬ್-ಮಾಡುವ ಬಗ್ಗೆ ಕೆಲವು ವಿವಾದವಿತ್ತು.[೬] ಲೆಸ್ ಬಿಂಕ್ಸ್ ಬಿಟ್ಟುಹೋದ ನಂತರ ವಾದ್ಯ-ವೃಂದದ ನಿರ್ದೇಶನದಂತೆ ಅವನ ಸ್ಥಾನಕ್ಕೆ ಹಿಂದೆ ಟ್ರ್ಯಾಪೆಜೆ ವಾದ್ಯ-ವೃಂದದಲ್ಲಿದ್ದ ಡೇವ್ ಹಾಲಂಡ್ನನ್ನು ನೇಮಿಸಲಾಯಿತು. ಈ ತಂಡದೊಂದಿಗೆ ಜುದಾಸ್ ಪ್ರೀಸ್ಟ್ ಆರು ಸ್ಟುಡಿಯೊ ಮತ್ತು ಒಂದು ನೇರ ಆಲ್ಬಂಗಳನ್ನು ಧ್ವನಿಮುದ್ರಣ ಮಾಡಿತು. ಅವು ವಿವಿಧ ಪ್ರಮಾಣದಲ್ಲಿ ವಿಮಾರ್ಶಾತ್ಮಕ ಮತ್ತು ಹಣಕಾಸಿನ ಯಶಸ್ಸನ್ನು ತಂದುಕೊಟ್ಟವು. ಒಟ್ಟಿಗೆ ವಾದ್ಯ-ವೃಂದವು ಪ್ರಪಂಚದಾದ್ಯಂತ 30 ದಶಲಕ್ಕಿಂತಲೂ ಹೆಚ್ಚು ಆಲ್ಬಂಗಳನ್ನು ಮಾರಾಟ ಮಾಡಿತು.[೭] 1980ರಲ್ಲಿ ವಾದ್ಯ-ವೃಂದವು ಬ್ರಿಟಿಷ್ ಸ್ಟೀಲ್ ಅನ್ನು ಬಿಡುಗಡೆ ಮಾಡಿತು. ಅದರ ಹಾಡುಗಳು ಸಣ್ಣಕ್ಕಿದ್ದವು ಹಾಗೂ ಹೆಚ್ಚು ಮೈನ್‌ಸ್ಟ್ರೀಮ್ ರೇಡಿಯೊ ಕೊಂಡಿಗೆರೆಯನ್ನು ಹೊಂದಿದ್ದವು, ಆದರೆ ಹೆವಿ ಮೆಟಲ್ ಭಾವನೆಯನ್ನು ಉಳಿಸಿಕೊಂಡಿದ್ದವು. "ಯುನೈಟೆಡ್", "ಬ್ರೇಕಿಂಗ್ ದ ಲಾವ್" ಮತ್ತು "ಲಿವಿಂಗ್ ಆಫ್ಟರ್ ಮಿಡ್‌ನೈಟ್" ಮೊದಲಾದ ಹಾಡುಗಳು ರೇಡಿಯೊದಲ್ಲಿ ಹೆಚ್ಚಾಗಿ ಪ್ರಸಾರವಾಗುತ್ತಿದ್ದವು ನಂತರದ ಬಿಡುಗಡೆ 1981ರ ಪಾಯಿಂಟ್ ಆಫ್ ಎಂಟ್ರಿ ಸಹ ಅದೇ ಸೂತ್ರವನ್ನು ಅನುಸರಿಸಿತು, ಆದರೆ ವಿಮರ್ಶಕರು ಅದನ್ನು ಟೀಕಿಸಿದರು. ಆದರೆ ಅದರ ಬೆಂಬಲ ಪ್ರವಾಸವು "ಸೋಲಾರ್ ಏಂಜೆಲ್ಸ್" ಮತ್ತು "ಹೆಡಿಂಗ್ ಔಟ್ ಟು ದ ಹೈವೆ"ಯಂತಹ ಹೊಸ ಹಾಡುಗಳೊಂದಿಗೆ ಯಶಸ್ವಿಯಾಗಿತ್ತು. 1982ರ ಆಲ್ಬಂ ಸ್ಕ್ರೀಮಿಂಗ್ ಫಾರ್ ವೆಂಜನ್ಸ್ "ಯು ಹ್ಯಾವ್ ಗಾಟ್ ಎನದರ್ ಥಿಂಗ್ ಕಾಮಿನ್'" ಎಂಬ ಹಾಡೊಂದನ್ನು ಹೊಂದಿತ್ತು, ಅದು ಪ್ರಬಲ US ರೇಡಿಯೊ ಪ್ರಸಾರವನ್ನು ಪಡೆಯಿತು. "ಎಲೆಕ್ಟ್ರಿಕ್ ಐ" ಮತ್ತು "ರೈಡಿಂಗ್ ಆನ್ ದ ವಿಂಡ್"ನಂತಹ ಹಾಡುಗಳೂ ಸಹ ಈ ಆಲ್ಬಂನಲ್ಲಿದ್ದವು ಹಾಗೂ ಅವೂ ಜನಪ್ರಿಯ ನೇರ ಹಾಡುಗಳಾದವು. "(ಟೋಕ್ ದೀಸ್) ಚೈನ್ಸ್" (ಬಾಬ್ ಹ್ಯಾಲಿಗನ್, ಜೂನಿಯರ್ನ) ಏಕಗೀತವಾಗಿ ಬಿಡುಗಡೆಗೊಂಡಿತು ಹಾಗೂ ಭಾರೀ ಪ್ರಸಾರವನ್ನು ಪಡೆಯಿತು. ಈ ಆಲ್ಬಂ ಎರಡು ಬಾರಿ ಪ್ಲಾಟಿನಂ ಸ್ಥಾನಕ್ಕೆ ಹೋಯಿತು.[೮] ಡಿಫೆಂಡರ್ಸ್ ಆಫ್ ದ ಫೈತ್[[]] 1984ರಲ್ಲಿ ಬಿಡುಗಡೆಗೊಂಡಿತು. ಇದು ವಾದ್ಯ-ವೃಂದದ ಆರಂಭಿಕ ಪ್ರಯತ್ನಗಳಿಗಿಂತ ಹೆಚ್ಚು ಆಧುನಿಕವಾಗಿದ್ದರೂ, ಅದರ ಸಂಗೀತವು ಹಿಂದಿನ ಆಲ್ಬಂಗೆ ಹೋಲುತ್ತಿದ್ದುದರಿಂದ ಕೆಲವು ವಿಮರ್ಶಕರು ಇದನ್ನು "ಸ್ಕ್ರೀಮಿಂಗ್ ಫಾರ್ ವೆಂಜನ್ಸ್ II" ಎಂಬುದಾಗಿ ಟೀಕಿಸಿದರು.[೯] 1985ರ ಜುಲೈ 13ರಲ್ಲಿ, ಬ್ಲ್ಯಾಕ್ ಸಬ್ಬತ್ಅನ್ನು ಹೊರತುಪಡಿಸಿ ಜುದಾಸ್ ಪ್ರೀಸ್ಟ್ ಲೈವ್ ಏಡ್ ಕಾರ್ಯಕ್ರಮದಲ್ಲಿ ನಿರ್ವಹಿಸಿದ ಏಕಮಾತ್ರ ವಾದ್ಯ-ವೃಂದವಾಗಿತ್ತು. ಈ ವಾದ್ಯ-ವೃಂದವು ಫಿಲಡೆಲ್ಫಿಯಾದ JFK ಸ್ಟೇಡಿಯಂನಲ್ಲಿ ಪ್ರದರ್ಶನ ನಡೆಸಿಕೊಟ್ಟಿತು. ಅಲ್ಲಿ ನಡೆಸಿಕೊಟ್ಟ ಪ್ರಮುಖ ಹಾಡುಗಳೆಂದರೆ - "ಲಿವಿಂಗ್ ಆಫ್ಟರ್ ಮಿಡ್‌ನೈಟ್", "ದ ಗ್ರೀನ್ ಮನಾಲಿಶಿ (ವಿದ್ ದ ಟು-ಪ್ರೋಂಗ್ಡ್ ಕ್ರೌನ್)" ಮತ್ತು "(ಯು ಹ್ಯಾವ್ ಗಾಟ್) ಅನದರ್ ಥಿಂಗ್ ಕಾಮಿನ್'". ಟರ್ಬೊ 1986ರ ಎಪ್ರಿಲ್‌ನಲ್ಲಿ ಬಿಡುಗಡೆಗೊಂಡಿತು. ವಾದ್ಯ-ವೃಂದವು ವೇದಿಕೆಯನ್ನು ಹೆಚ್ಚು ಆಕರ್ಷಕಗೊಳಿಸಿತು ಹಾಗೂ ಗಿಟಾರ್ ಸಂಯೋಜಕರನ್ನು ಸೇರಿಸಿಕೊಂಡು ಅದರ ಸಂಗೀತಕ್ಕೆ ಹೆಚ್ಚು ಮೈನ್‌ಸ್ಟ್ರೀಮ್ ಭಾವನೆಯನ್ನು ನೀಡಿತು. ಈ ಆಲ್ಬಂ ಪ್ಲಾಟಿನಂ ಸ್ಥಾನವನ್ನೂ ಪಡೆಯಿತು ಮತ್ತು ಬೆಂಬಲವಾಗಿ ಯಶಸ್ವಿ ಪ್ರವಾಸವನ್ನು ಮಾಡಿತು. ಆ ಪ್ರವಾಸದ ಸಂದರ್ಭದಲ್ಲಿ ಪ್ರೀಸ್ಟ್... ಲೈವ್! ಎಂಬ ಹೆಸರಿನ ಒಂದು ನೇರ ಆಲ್ಬಂನ್ನು ಧ್ವನಿಮುದ್ರಣಮಾಡಲಾಯಿತು. ಅದು ಮುಂದಿನ ವರ್ಷ ಬಿಡುಗಡೆಗೊಂಡಿತು ಹಾಗೂ ಅಭಿಮಾನಿಗಳಿಗೆ 1980ರ ಅವಧಿಯ ಹಾಡುಗಳನ್ನು ನೀಡಿತು. ಹೆವಿ ಮೆಟಲ್ ಪಾರ್ಕಿಂಗ್ ಲಾಟ್ ಎಂಬ ವೀಡಿಯೊ ಸಾಕ್ಷ್ಯಚಿತ್ರವನ್ನು ಜೆಫ್ ಕ್ರುಲಿಕ್ ಮತ್ತು ಜಾನ್ ಹೆಯ್ನ್ 1986ರಲ್ಲಿ ರಚಿಸಿದರು. ಹೆವಿ ಮೆಟಲ್ ಅಭಿಮಾನಿಗಳು 1986ರ ಮೇ 31ರಂದು ಜುದಾಸ್ ಪ್ರೀಸ್ಟ್‌ನ ಸಂಗೀತ ಕಛೇರಿಗೆ (ವಿಶೇಷ ಅತಿಥಿ ಡೊಕ್ಕನ್ ಒಂದಿಗೆ) ಮೇರಿಲ್ಯಾಂಡ್‌ನ ಲ್ಯಾಂಡೋವರ್ನ ಕ್ಯಾಪಿಟಲ್ ಸೆಂಟರ್‌ನಲ್ಲಿ (ನಂತರ US ಏರ್‌ವೇಸ್ ಅರೇನ ಎಂದು ಮರುಹೆಸರಿಸಲಾಯಿತು) ತೀವ್ರ ಆಸಕ್ತಿಯಿಂದ ಸೇರಿದರು. 1988ರ ಮೇಯಲ್ಲಿ ರ್ಯಾಮ್ ಇಟ್ ಡೌವ್ನ್ ಬಿಡುಗಡೆಗೊಂಡಿತು. ಇದು ಹೊಸ ಹಾಡುಗಳೊಂದಿಗೆ ಟರ್ಬೊ ದ ಉಳಿದ, ಮತ್ತೆಹಾಡಿದ ಕೆಲವು ಹಾಡುಗಳನ್ನು ಒಳಗೊಂಡಿತ್ತು. ವಾದ್ಯ-ವೃಂದದ "ತಾಂತ್ರಿಕ ಸಂಯೋಜಕರಾಗಬೇಕೆಂಬ ಹಾಗೂ ಘನತೆ ಕುಗ್ಗಿದ್ದ ದಿನಗಳ ಸಾಂಪ್ರದಾಯಿಕ ಮೆಟಲ್‌ಗೆ ಹಿಂದಿರುಗಬೇಕೆಂಬ ಪ್ರಯತ್ನದಿಂದ" ರಚಿತವಾದ ರ್ಯಾಮ್ ಇಟ್ ಡೌವ್ನ್ ಅನ್ನು ವಿಮರ್ಶಕನೊಬ್ಬನು "ಉತ್ತಮ ಶೈಲಿಯ ವಿಕಾಸ"ವೆಂದು ಕರೆದನು. "ತಂಡವು ಎಷ್ಟು ಹಿಂದಿನಿಂದ ನಿಧಾನಗತಿಯಲ್ಲಿ ಸಾಗಿ ಬಂದಿದೆ ಎಂಬ ಬಗ್ಗೆ ಹಾಗೂ ಆರಂಭದ ವರ್ಷಗಳಲ್ಲಿ ಅವರಿಗೆ ನೆರವಾದ ಬಾರಿಸುವವರ ಬಗ್ಗೆ" ಈ ಆಲ್ಬಂ ತಿಳಿಸುತ್ತದೆಂದು ವಿಮರ್ಶಕರು ವಾದಿಸಿದ್ದಾರೆ.[೧೦] 1980ರ ಉತ್ತರಾರ್ಧದಲ್ಲಿ ದೀರ್ಘಕಾಲದ ಡ್ರಮ್-ವಾದ್ಯ ಬಾರಿಸುವವನಾದ ಡೇವ್ ಹಾಲಂಡ್ ವಾದ್ಯ-ವೃಂದವನ್ನು ಬಿಟ್ಟುಹೋದನು. 1990ರ ಸೆಪ್ಟೆಂಬರ್‌ನಲ್ಲಿ ಪೈನ್‌ಕಿಲ್ಲರ್ ಆಲ್ಬಂ ಹೊಸ ಡ್ರಮ್-ವಾದ್ಯ ನುಡಿಸುವವನಾದ ಸ್ಕಾಟ್ ಟ್ರಾವಿಸ್‌ನನ್ನು (ಹಿಂದೆ ರೇಸರ್ Xನಲ್ಲಿದ್ದ) ಸೇರಿಸಿಕೊಂಡಿತು. ಈ ಆಲ್ಬಂ "ಎ ಟಚ್ ಆಫ್ ಎವಿಲ್" ಒಂದನ್ನು ಹೊರತುಪಡಿಸಿ ಎಲ್ಲಾ ಹಾಡುಗಳಿಗೆ 1980ರ-ಶೈಲಿಯ ಸಂಯೋಜಕರನ್ನು ಬಳಸಿಕೊಳ್ಳಲಿಲ್ಲ. ಇದರ ಪ್ರವಾಸವು ಪಂಟೇರ, ಮೇಗಾದೆತ್ ಮತ್ತು ಸೆಪಲ್ಟುರ ಮೊದಲಾದ ವಾದ್ಯ-ವೃಂದಗಳನ್ನು ಪ್ರಾರಂಭದ ವಾದ್ಯ-ವೃಂದಗಳಾಗಿ ಬಳಸಿಕೊಂಡಿತು ಹಾಗೂ ಬ್ರೆಜಿಲ್‌ನಲ್ಲಿ 100,000+ ಸಂಗೀತ ಅಭಿಮಾನಿಗಳೆದುರಲ್ಲಿ ರಾಕ್ ಇನ್ ರಿಯೊ ಪ್ರದರ್ಶನದಲ್ಲಿ ಕೊನೆಗೊಂಡಿತು. ಜುದಾಸ್ ಪ್ರೀಸ್ಟ್ ವೇದಿಕೆ ಪ್ರದರ್ಶನಗಳು ಹೆಚ್ಚಾಗಿ ರಾಬ್ ಹಾಲ್ಫರ್ಡ್ ಮೋಟಾರುಸೈಕಲ್ ಚರ್ಮಗಳನ್ನು ಮತ್ತು ಸನ್‌ಗ್ಲಾಸ್‌ಗಳನ್ನು ಧರಿಸಿಕೊಂಡು ಹಾರ್ಲಿ-ಡೇವಿಡ್ಸನ್ ಮೋಟಾರುಬೈಕನ್ನು ಸವಾರಿ ಮಾಡುವುದನ್ನು ಒಳಗೊಳ್ಳುತ್ತಿತ್ತು. 1991ರ ಆಗಸ್ಟ್‌ನಲ್ಲಿ ಟೊರೊಂಟೊದಲ್ಲಿ ನಡೆದ ಪ್ರದರ್ಶನವೊಂದರಲ್ಲಿ ಹಾಲ್ಫರ್ಡ್ ವೇದಿಕೆಯಲ್ಲಿ ಬೈಕ್ ಸವಾರಿ ಮಾಡುವಾಗ ಡ್ರೈ-ಐಸ್ ಮಂಜಿನ ಮರೆಯಲ್ಲಿದ್ದ ಡ್ರಮ್-ರೈಸರ್‌ಗೆ ಢಿಕ್ಕಿಹೊಡೆದು ಗಂಭೀರವಾಗಿ ಗಾಯಗೊಂಡನು. ಪ್ರದರ್ಶನವು ತಡವಾದರೂ, ಅವನು ಆಸ್ಪತ್ರೆಗೆ ಹೋಗುವುದಕ್ಕಿಂತ ಮೊದಲು ಸಂಪೂರ್ಣ ಕಾರ್ಯಕ್ರಮವನ್ನು ನಿರ್ವಹಿಸಿದನು. ಹಿಲ್ ನಂತರ "ಅವನು ತೀವ್ರಯಾತನೆಯನ್ನು ಅನುಭವಿಸುತ್ತಿದ್ದಿರಬಹುದು" ಎಂದು ಹೇಳಿದ್ದಾನೆ. ನಂತರ 2007ರ ಸಂದರ್ಶನವೊಂದರಲ್ಲಿ ರಾಬ್, ಅವನು ವಾದ್ಯ-ವೃಂದದಿಂದ ಹೊರಹೋಗಲು ಅಪಘಾತವು ಯಾವುದೇ ಕಾರಣವಲ್ಲವೆಂದು ಸೂಚಿಸಿದ್ದಾನೆ..[೧೧]
ಸಂವೇದನಾ ಪೂರ್ವಭಾವಿ ಸಂದೇಶದ ವಿಚಾರಣೆ
[ಬದಲಾಯಿಸಿ]1985ರಲ್ಲಿ USAಯ ನೇವಡಾದ ರೆನೊದಲ್ಲಿ 20-ವರ್ಷ ವಯಸ್ಸಿನ ಜೇಮ್ಸ್ ವ್ಯಾನ್ಸ್ ಮತ್ತು 18-ವರ್ಷ ವಯಸ್ಸಿನ ರೇಮಂಡ್ ಬೆಲ್ಕ್‌ನ್ಯಾಪ್ ಸ್ವಂತವಾಗಿ ಗನ್‌ನಿಂದ ಗುರಿಯಿಟ್ಟುಕೊಂಡು ಮಾಡಿಕೊಂಡ ಅನಾಹುತಕ್ಕೆ ವಾದ್ಯ-ವೃಂದವು ಕಾರಣವೆಂದು ಆರೋಪಿಸಿ 1990ರ ಬೇಸಿಗೆಯಲ್ಲಿ ವಾದ್ಯ-ವೃಂದದ ವಿರುದ್ಧ ಸಿವಿಲ್ ಮೊಕದ್ದಮೆಯನ್ನು ಹೂಡಲಾಯಿತು.[೧೨] 1985ರ ಡಿಸೆಂಬರ್ 23ರಂದು, ವ್ಯಾನ್ಸ್ ಮತ್ತು ಬೆಲ್ಕ್‌ನ್ಯಾಪ್ ಹಲವು ಗಂಟೆಗಳ ಕಾಲ ಬೀರ್ ಕುಡಿದು, ಗಾಂಜಾ ಸೇದಿಕೊಂಡು, ಜುದಾಸ್ ಪ್ರೀಸ್ಟ್ ಸಂಗೀತ ಕೇಳಿಕೊಂಡು, 12-ಗೇಜ್ ಗನ್ಅನ್ನು ಹಿಡಿದುಕೊಂಡು ತಮ್ಮ ಜೀವನವನ್ನು ಕೊನೆಗೊಳಿಸಲು ರೆನೊದಲ್ಲಿನ ಚರ್ಚ್‌ನ ಆಟದ ಮೈದಾನಕ್ಕೆ ಹೋದರು. ಮೊದಲು ಬೆಲ್ಕ್‌ನ್ಯಾಪ್ ಗನ್ಅನ್ನು ತನ್ನ ಗಲ್ಲದ ಕೆಳಗೆ ಹಿಡಿದು, ಟ್ರಿಗ್ಗರ್ ಒತ್ತಿದನು, ತಕ್ಷಣವೇ ಅವನು ಸತ್ತುಹೋದನು. ವ್ಯಾನ್ಸ್ ಸಹ ಅದನ್ನೇ ಅನುಸರಿಸಿದನು. ಆದರೆ ಅವನ ಮುಖದ ಕೆಳಗಿನ ಭಾಗ ಮಾತ್ರ ಸಿಡಿದುಹೋಯಿತು. ಗನ್ ರಕ್ತದಿಂದ ಜಾರುತ್ತಿದ್ದುದರಿಂದ ಅದು ಸಂಭವಿಸಿತು.[೧೩] ಅವರ ಪೋಷಕರು ಮತ್ತು ಕಾನೂನು ತಂಡವು, "ಇದನ್ನು ಮಾಡು(ಡು ಇಟ್)" ಎಂಬ ಸಂವೇದನಾ ಪೂರ್ವಭಾವಿ ಸಂದೇಶವು ಜುದಾಸ್ ಪ್ರೀಸ್ಟ್‌ನ ಸ್ಟೈನ್ಡ್ ಕ್ಲಾಸ್ ಆಲ್ಬಂನ (ನಿಜವಾಗಿ ಸ್ಪೂಕಿ ಟೂತ್ ಸಂಖ್ಯೆಯ ಮುಖಪುಟ) ಹಾಡು "ಬೆಟ್ಟರ್ ಬೈ ಯು, ಬೆಟ್ಟರ್ ದ್ಯಾನ್ ಮಿ"ನಲ್ಲಿ ಸೇರಿತ್ತು ಎಂದು ದೂರಿದರು. ಅವರು ಹಾಡಿನಲ್ಲಿನ ಆದೇಶವು ಆತ್ಮಹತ್ಯೆಯ ಪ್ರಯತ್ನಕ್ಕೆ ಪ್ರೇರೇಪಿಸಿತು ಎಂದು ಆಪಾದಿಸಿದರು.[೧೨] ವಿಚಾರಣೆಯು 1990ರ ಜುಲೈ 16ರಿಂದ ಆಗಸ್ಟ್ 24ವರೆಗೆ ನಡೆಯಿತು, ನಂತರ ಆ ಮೊಕದ್ದಮೆಯು ರದ್ದುಗೊಂಡಿತು.[೧೨] ಆರೋಪಿಯ ಪರವಾದ ಸಾಕ್ಷಿಗಳಲ್ಲಿ ಒಬ್ಬನಾದ ಡಾ. ತಿಮೋತಿ E. ಮೂರ್ ಸ್ಕೆಪ್ಟಿಕಲ್ ಎಂಕ್ವೈರರ್ ಗಾಗಿ ವಿಚಾರಣೆಯನ್ನು ವರದಿ ಮಾಡುವ ಲೇಖನವೊಂದನ್ನು ಬರೆದನು.[೧೨] ಆ ವಿಚಾರಣೆಯನ್ನು 1991ರ ಸಾಕ್ಷ್ಯಚಿತ್ರ ಡ್ರೀಮ್ ಡಿಸೀವರ್ಸ್: ದ ಸ್ಟೋರಿ ಬಿಹೈಂಡ್ ಜೇಮ್ಸ್ ವ್ಯಾನ್ಸ್ ವರ್ಸಸ್ ಜುದಾಸ್ ಪ್ರೀಸ್ಟ್ ನಲ್ಲಿ ತೋರಿಸಲಾಯಿತು. ಈ ಸಾಕ್ಷ್ಯಚಿತ್ರದಲ್ಲಿ ಹಾಲ್ಫರ್ಡ್, ಅವರು ಸಂಗೀತದಲ್ಲಿ ಸಂವೇದನಾ ಪೂರ್ವಭಾವಿ ಸಂದೇಶವನ್ನು ಸೇರಿಸಲು ಬಯಸಿದ್ದರೆ, ಅಭಿಮಾನಿಗಳನ್ನು ಸಾಯಿಸುವುದು ವಿರುದ್ಧ-ಪರಿಣಾಮವಾಗುತ್ತಿತ್ತು ಹಾಗೂ ಅವರು "ನಮ್ಮ ಧ್ವನಿಮುದ್ರಣಗಳನ್ನು ಹೆಚ್ಚು ಖರೀದಿಸಿ" ಎಂಬ ಆದೇಶವನ್ನು ಸೇರಿಸಬಹುದಿತ್ತು ಎಂದು ಪ್ರತಿಕ್ರಿಯಿಸಿದನು. "ಇದನ್ನು ಮಾಡು" ಎಂಬುದು ಆತ್ಮಹತ್ಯೆ ಮಾಡಲು ಆದೇಶವಾಗಿದೆ ಎಂಬ ಆಪಾದಕ ಸಮರ್ಥನೆಗೆ ಸಂಬಂಧಿಸಿದಂತೆ, ಹಾಲ್ಫರ್ಡ್ "ಇದನ್ನು ಮಾಡು" ಎಂಬುದು ನೇರವಾದ ಸಂದೇಶವನ್ನು ಹೊಂದಿಲ್ಲವೆಂದು ಸೂಚಿಸಿದನು.
ಹಾಲ್ಫರ್ಡ್‌ನ ಬಿಟ್ಟುಹೋಗುವಿಕೆ
[ಬದಲಾಯಿಸಿ]ಪೈನ್‌ಕಿಲ್ಲರ್ ಪ್ರವಾಸವು 1991ರಲ್ಲಿ ಕೊನೆಗೊಂಡ ನಂತರ, ಹಾಲ್ಫರ್ಡ್ ಜುದಾಸ್ ಪ್ರೀಸ್ಟ್‌ಅನ್ನು ಬಿಟ್ಟುಬಿಟ್ಟನು. 1991ರ ಸೆಪ್ಟೆಂಬರ್‌ನಲ್ಲಿ, ವಾದ್ಯ-ವೃಂದದಲ್ಲಿ ಆಂತರಿಕ ಸಮಸ್ಯೆಗಳಿದ್ದ ಸೂಚನೆಗಳಿದ್ದವು. ಹಾಲ್ಫರ್ಡ್ 1993ರ ಬೇಸಿಗೆಯಲ್ಲಿ ಧ್ವನಿಮುದ್ರಣ ಕಾಲಕ್ಕಾಗಿ ಡ್ರಮ್-ನುಡಿಸುವ ಸ್ಕಾಟ್ ಟ್ರಾವಿಸ್ ಒಂದಿಗೆ ಫೈಟ್ ಎಂಬ ಹೆಸರಿನ ಬೀದಿ-ಶೈಲಿಯ ಟ್ರ್ಯಾಶ್ ಮೆಟಲ್ ಗುಂಪನ್ನು ರೂಪಿಸಿದನು. ಹೊಸ ಸಂಗೀತದ ಕ್ಷೇತ್ರವನ್ನು ಪರಿಶೋಧಿಸಬೇಕೆಂಬ ಅಪೇಕ್ಷೆಯಿಂದಾಗಿ ಅವನು ಈ ವಾದ್ಯ-ವೃಂದವನ್ನು ರೂಪಿಸಿದನು. ಆದರೆ ಒಪ್ಪಂದದ ಸಮಸ್ಯೆಗಳಿಂದಾಗಿ ಅವನು ಜುದಾಸ್ ಪ್ರೀಸ್ಟ್‌ಅನ್ನು 1992ರ ಮೇಯಲ್ಲಿ ತೊರೆದನು.[೧೪] ವಾದ್ಯ-ವೃಂದದ 20ನೇ ವಾರ್ಷಿಕೋತ್ಸವದ ನೆನಪಿನಲ್ಲಿ ಬಿಡುಗಡೆಗೊಂಡ ಮೆಟಲ್ ವರ್ಕ್ಸ್ '73-'93 ಎಂಬ ಹೆಸರಿನ ಸಂಕಲನ ಆಲ್ಬಂನಲ್ಲಿ ಹಾಲ್ಫರ್ಡ್ ಜುದಾಸ್ ಪ್ರೀಸ್ಟ್ ಒಂದಿಗೆ ಜತೆಗೂಡಿ ಕೆಲಸ ಮಾಡಿದನು. ಅವನು ವಾದ್ಯ-ವೃಂದದ ಕತೆಯನ್ನು ಬಿಂಬಿಸುವ ಅದೇ ಹೆಸರಿನ ವೀಡಿಯೊದಲ್ಲೂ ಕಾಣಿಸಿಕೊಂಡನು. ಅದರಲ್ಲಿ ಅವನ ವಾದ್ಯ-ವೃಂದದ ನಿರ್ಗಮನವನ್ನು ಆ ವರ್ಷದ ನಂತರ ಅಧಿಕೃತವಾಗಿ ಘೋಷಿಸಲಾಗಿತ್ತು. MTVರ 1998ರ ಸಂದರ್ಶನವೊಂದರಲ್ಲಿ ಹಾಲ್ಫರ್ಡ್ ಅವನ ಸಲಿಂಗಕಾಮದ ಬಗ್ಗೆ ಬಹಿರಂಗ ಪಡಿಸಿದನು. ಆದರೆ ಅದು ಅಭಿಮಾನಿಗಳಿಗೆ ಅಥವಾ ಹಾಲ್ಫರ್ಡ್‌ನ ವಾದ್ಯ-ವೃಂದದ ಸಹಚರರಿಗೆ ಯಾವುದೇ ಆಶ್ಚರ್ಯವನ್ನು ತರಲಿಲ್ಲ.
ರಿಪ್ಪರ್ ಓವೆನ್ಸ್
[ಬದಲಾಯಿಸಿ]ಬ್ರಿಟಿಷ್ ಸ್ಟೀಲ್ ಎಂಬ ಹೆಸರಿನ ಜುದಾಸ್ ಪ್ರೀಸ್ಟ್‌ನ ಅಧೀನ ವಾದ್ಯ-ವೃಂದದಲ್ಲಿ ಹಿಂದೆ ಹಾಡಿದ ಟಿಮ್ "ರಿಪ್ಪರ್" ಓವೆನ್ಸ್ 1996ರಲ್ಲಿ ಜುದಾಸ್ ಪ್ರೀಸ್ಟ್‌ನ ಹೊಸ ಗಾಯಕನಾಗಿ ನೇಮಕಗೊಂಡನು. ಈ ತಂಡವು ಜುಗುಲೇಟರ್ ಮತ್ತು ಡೆಮೋಲಿಷನ್ ಎಂಬ ಎರಡು ಆಲ್ಬಂಗಳನ್ನು ಹಾಗೂ '98 ಲೈವ್ ಮೆಲ್ಟ್‌ಡೌವ್ನ್ ಮತ್ತು ಲಿವ್ ಇನ್ ಲಂಡನ್ ಎಂಬ ದ್ವಿ-ಆಲ್ಬಂಗಳನ್ನು ಬಿಡುಗಡೆ ಮಾಡಿತು. ಇದರಲ್ಲಿ ಲಿವ್ ಇನ್ ಲಂಡನ್ ಆಲ್ಬಂ ನೇರ DVD ಪ್ರತಿಯನ್ನು ಹೊಂದಿತ್ತು. ಜುಗುಲೇಟರ್ ಹೆಚ್ಚುಕಡಿಮೆ ಚೆನ್ನಾಗಿ ಮಾರಾಟವಾಯಿತು. ಓವೆನ್ಸ್ ಅಭಿಮಾನಿ ಮತ್ತು ವಾರಾಂತ್ಯದ ಅಧೀನ ವಾದ್ಯ-ವೃಂದದ ಗಾಯಕ ಸ್ಥಾನದಿಂದ ನಿಜವಾದ ವಾದ್ಯ-ವೃಂದದ ಫ್ರಂಟ್‌ಮ್ಯಾನ್ ಆಗಿ ಬದಲಾದುದು, ರಾಕ್ ಸ್ಟಾರ್ ಚಲನಚಿತ್ರಕ್ಕೆ ಪ್ರೇರಣೆಯನ್ನು ನೀಡಿತು. ಚಲನಚಿತ್ರದ ವಿಷಯವು ಓವೆನ್ಸ್‌ನ ವಾದ್ಯ-ವೃಂದದೊಂದಿಗಿನ ನೈಜ ಇತಿಹಾಸಕ್ಕೆ ಅಪ್ರಸಕ್ತವಾದ ಹೋಲಿಕೆಯನ್ನು ಹೊಂದಿದ್ದುದರಿಂದ, ಜುದಾಸ್ ಪ್ರೀಸ್ಟ್ ನಂತರ ತಂಡವನ್ನು ಚಲನಚಿತ್ರದಿಂದ ಪ್ರತ್ಯೇಕಿಸಲು ಮುಂದುವರಿಯಿತು.
ಮರುಒಗ್ಗೂಡುವಿಕೆ
[ಬದಲಾಯಿಸಿ]ಹೆಚ್ಚುಕಡಿಮೆ ಹನ್ನೆರಡು ವರ್ಷದ ನಂತರ, ಮರುಒಗ್ಗೂಡುವಿಕೆಗೆ ಆದೇಶಗಳು ಹೆಚ್ಚುತ್ತಿದ್ದುದರಿಂದ ಜುದಾಸ್ ಪ್ರೀಸ್ಟ್ ಮತ್ತು ಮೂಲ ಪ್ರಮುಖ ಗಾಯಕ ರಾಬ್ ಹಾಲ್ಫರ್ಡ್ 2003ರ ಜುಲೈನಲ್ಲಿ ಮೆಟಾಲಜಿ ಬಿಡುಗಡೆಯ ಸಂದರ್ಭದಲ್ಲಿ ಮತ್ತೆ ಒಂದುಗೂಡುತ್ತೇವೆಂದು ಘೋಷಿಸಿದರು. ನಂತರ ಆ ತಂಡವು 2004ರಲ್ಲಿ ಯುರೋಪಿನಲ್ಲಿ ನೇರ ಸಂಗೀತ ಕಛೇರಿ ಪ್ರವಾಸವನ್ನು ಮಾಡಿತು ಹಾಗೂ 2004ರ ಆಜ್‌ಫೆಸ್ಟ್ ಸಹ-ಪ್ರಚಾರ ನೀಡಿತು. ಇದು ಆ ಕಾರ್ಯಕ್ರಮದ ಹೆಚ್ಚುಕಡಿಮೆ ಎಲ್ಲಾ U.S. ಮಾಧ್ಯಮಗಳಿಂದ "ಪ್ರಧಾನ ಕಾರ್ಯ"ವೆಂಬ ಹೆಸರು ಪಡೆಯಿತು. ಹೊಸ ಸ್ಟುಡಿಯೊ ಆಲ್ಬಂ ಏಂಜೆಲ್ ಆಫ್ ರಿಟ್ರಿಬ್ಯೂಷನ್ 2005ರ ಮಾರ್ಚ್ 1ರಂದು (U.S.) ಸೋನಿ ಮ್ಯೂಸಿಕ್/ಎಪಿಕ್ ರೆಕಾಡ್ಸ್ನಲ್ಲಿ ಬಿಡುಗಡೆಗೊಂಡಿತು. ಇದು ವಿಮರ್ಶಾತ್ಮಕ ಮತ್ತು ವಾಣಿಜ್ಯಕ ಯಶಸ್ಸನ್ನು ಗಳಿಸಿತು. ತಂಡವು ಈ ಆಲ್ಬಂನ ಬೆಂಬಲವಾಗಿ ಜಾಗತಿಕ ಪ್ರವಾಸವನ್ನು ಕೈಗೊಂಡಿತು ಹಾಗೂ ಅದು ಭಾರಿ ಯಶಸ್ಸು ಕಂಡಿತು. ಜುದಾಸ್ ಪ್ರೀಸ್ಟ್ ಮತ್ತು "ರಿಪ್ಪರ್" ಓವೆನ್ಸ್ ಸೌಹಾರ್ದದಿಂದ ಪ್ರತ್ಯೇಕಿಸಲ್ಪಟ್ಟರು. ನಂತರ ಓವೆನ್ಸ್ ಅಮೆರಿಕಾದ ಹೆವಿ ಮೆಟಲ್ ವಾದ್ಯ-ವೃಂದ ಐಸ್ಡ್ ಅರ್ಥ್ಗೆ ಸೇರಿಕೊಂಡನು. ವಾದ್ಯ-ವೃಂದಕ್ಕೆ ಹಾಲ್ಫರ್ಡ್ ನಾಲ್ಕನೆ ಬಿಡುಗಡೆಗೆ ಬರೆಯುವುದನ್ನು ನಿಲ್ಲಿಸಲಾಯಿತು. ಆದರೆ ರಿಟ್ರಿಬ್ಯೂಷನ್ ಪ್ರವಾಸದ ನಂತರ 2006ರ ಜೂನ್‌ನಲ್ಲಿ ಹಾಲ್ಫರ್ಡ್ ತಾನು ಮೆಟಲ್ ಗಾಡ್ ಎಂಟರ್ಟೈನ್ಮೆಂಟ್ ಎಂಬ ಹೆಸರಿನ ಸ್ವಂತ ಧ್ವನಿಮುದ್ರಣ ಕಂಪೆನಿಯನ್ನು ಸ್ಥಾಪಿಸಿ, ಅದರಲ್ಲೇ ತನ್ನೆಲ್ಲಾ ರಚನೆಗಳನ್ನು ಸ್ವಂತ ನಿಯಂತ್ರಣದಡಿಯಲ್ಲಿ ಬಿಡಗಡೆ ಮಾಡುವುದಾಗಿ ಘೋಷಿಸಿದನು. 2006ರ ನವೆಂಬರ್‌ನಲ್ಲಿ ಅವನ ಅನುಕ್ರಮಣಿಕೆಯ ಮರುಮಾದರಿ ತಯಾರಿಸಿದನು ಹಾಗೂ ಅದನ್ನು ಆಪಲ್ಸ್ ಐಟ್ಯೂನ್ಸ್ ಸ್ಟೋರ್ನ ಮೂಲಕ ಬಿಡುಗಡೆಗೊಳಿಸಿದನು. "ಫೊರ್ಗಾಟನ್ ಜನರೇಷನ್" ಮತ್ತು "ಡ್ರಾಪ್ ಔಟ್" ಎಂಬ ಎರಡು ಹೊಸ ಹಾಡುಗಳನ್ನು ನಾಲ್ಕನೇ ಬಿಡುಗಡೆಗಾಗಿ ವ್ಯವಸ್ಥೆಗೊಳಿಸಿದನು. ಅವೂ ಸಹ ಐಟ್ಯೂನ್ಸ್ ಮೂಲಕ ಬಿಡುಗಡೆಗೊಂಡವು.
VH1 ರಾಕ್ ಹಾನರ್ಸ್
[ಬದಲಾಯಿಸಿ]ಕಿಸ್, ಕ್ವೀನ್ ಮತ್ತು ಡೆಫ್ ಲೆಪ್ಪಾರ್ಡ್ ಒಂದಿಗೆ ಜುದಾಸ್ ಪ್ರೀಸ್ಟ್ ಸಹ "VH1 ರಾಕ್ ಹಾನರ್ಸ್"ನ ಉದ್ಘಾಟನೆಗೆ ದಾಖಲಾದ ತಂಡವಾಗಿತ್ತು. ಆ ಕಾರ್ಯಕ್ರಮವು 2006ರ ಮೇ 25ರಂದು ನೇವಡಾದ ಲಾಸ್ ವೆಗಾಸ್ನಲ್ಲಿ ನೆರವೇರಿತು ಹಾಗೂ 2006ರ ಮೇ 31ರಂದು ಮೊದಲು ಪ್ರದರ್ಶನ ನಡೆಯಿತು. ಜುದಾಸ್ ಪ್ರೀಸ್ಟ್‌ನ ಪ್ರದರ್ಶನಕ್ಕಿಂತ ಮೊದಲು ಗಾಡ್ಸ್‌ಮ್ಯಾಕ್ ವಾದ್ಯ-ವೃಂದವು "ಎಲೆಕ್ಟ್ರಿಕ್ ಐ"/"ವಿಕ್ಟಿಮ್ ಆಫ್ ಚೇಂಜಸ್"/"ಹೆಲ್ ಬೆಂಟ್ ಫಾರ್ ಲೆದರ್" ಮೊದಲಾದವುಗಳ ಮಿಶ್ರಗೀತವನ್ನು ಪ್ರದರ್ಶಿಸಿತು. ನಂತರ ಜುದಾಸ್ ಪ್ರೀಸ್ಟ್ "ಬ್ರೇಕಿಂಗ್ ದ ಲಾವ್", "ದ ಗ್ರೀನ್ ಮನಾಲಿಶಿ (ವಿದ್ ದ ಟು-ಪ್ರೋಂಗ್ಡ್ ಕ್ರೌನ್)" ಮತ್ತು "ಯು ಹ್ಯಾವ್ ಗಾಟ್ ಎನದರ್ ಥಿಂಗ್ ಕಾಮಿನ್'" ಮೊದಲಾದವುಗಳನ್ನು ಪ್ರದರ್ಶಿಸಿತು, ಅದಕ್ಕಿಂತ ಮೊದಲು ಹಾಲ್ಫರ್ಡ್ ಹಾರ್ಲಿ ಬೈಕಿನಲ್ಲಿ ಸವಾರಿ ನಡೆಸಿದನು.
ನಾಸ್ಟ್ರಡಮಸ್ ಮತ್ತು ಇತ್ತೀಚಿನ ಕಾರ್ಯಕ್ರಮಗಳು
[ಬದಲಾಯಿಸಿ]MTV.com ಒಂದಿಗಿನ 2006ರ ಜೂನ್‌ನ ಸಂದರ್ಶನವೊಂದರಲ್ಲಿ ಫ್ರಂಟ್‌ಮ್ಯಾನ್ ರಾಬ್ ಹಾಲ್ಫರ್ಡ್, ಪೌರಾಣಿಕ 16ನೇ ಶತಮಾನದ ಫ್ರೆಂಚ್ ಪ್ರವಾದಿಯ ಬಗೆಗಿನ ತಂಡದ ವಿಷಯಾಧಾರಿತ-ಆಲ್ಬಂ ನಾಸ್ಟ್ರಡಮಸ್ನ ಕುರಿತು ಹೀಗೆ ಹೇಳಿದ್ದಾನೆ - "ನಾಸ್ಟ್ರಡಮಸ್ ಮೆಟಲ್‌ನ ಬಗ್ಗೆಯಾಗಿದೆ, ಅವನಲ್ಲ? ಅವನೊಬ್ಬ ರಸವಿದ್ಯಾತಜ್ಞ ಹಾಗೂ ತತ್ವದರ್ಶಿಯಾಗಿದ್ದಾನೆ-ಅತ್ಯದ್ಭುತ ಪ್ರತಿಭೆಯನ್ನು ಹೊಂದಿರುವ ವ್ಯಕ್ತಿ. ಅವನು ಆಶ್ಚರ್ಯಕರ ಜೀವನವನ್ನು ಹೊಂದಿದ್ದನು, ಅದು ಸಂಪೂರ್ಣವಾಗಿ ವಿಷಮ ಪರೀಕ್ಷೆ ಮತ್ತು ಕ್ಲೇಶಗಳಿಂದ ಹಾಗೂ ಸಂತೋಷ ಮತ್ತು ದುಃಖದಿಂದ ಕೂಡಿತ್ತು. ಅವನು ತುಂಬಾ ಮಾನವೀಯ ವ್ಯಕ್ತಿಯಾಗಿದ್ದನು ಮತ್ತು ಪ್ರಪಂಚ-ಪ್ರಸಿದ್ಧನಾಗಿದ್ದನು. ನೀವು ಅವನ ಹೆಸರನ್ನು ತೆಗೆದುಕೊಳ್ಳಬಹುದು ಮತ್ತು ಯಾವುದೇ ಭಾಷೆಗೆ ಅನುವಾದ ಮಾಡಬಹುದು. ಪ್ರತಿಯೊಬ್ಬರು ಅವನ ಬಗ್ಗೆ ತಿಳಿದಿದ್ದಾರೆ. ಅದು ಅತಿಮುಖ್ಯವಾಗಿದೆ ಏಕೆಂದರೆ ನಾವು ಪ್ರಪಂಚದಾದ್ಯಂತದ ಕೇಳುಗರೊಂದಿಗೆ ಸಂಪರ್ಕವನ್ನು ಹೊಂದಿದ್ದೇವೆ."[೧೫] ವಾದ್ಯ-ವೃಂದಕ್ಕೆ ಹೊಸ ಸಾಹಿತ್ಯದ ಆಧಾರವನ್ನು ಕೊಡುವುದರೊಂದಿಗೆ, ಆಲ್ಬಂ ಅದರ ಅಭಿಮಾನಿಗಳಿಗೆ ಅಚ್ಚರಿಯನ್ನು ತರುವಂಥ ಸಂಗೀತದ ಅಂಶಗಳನ್ನು ಹೊಂದಿರಬೇಕು. ಹಾಲ್ಫರ್ಡ್ ಹೀಗೆ ಹೇಳಿದ್ದಾನೆ - "ಅಧಿಕ ಆಳವನ್ನು ಹೊಂದಲು ಮುಂದುವರಿಯಲಾಗುತ್ತದೆ. ಹೆಚ್ಚು ಸ್ವರಮೇಳದ ಅಂಶಗಳಿರಬಹುದು. ನಾವು ಅದನ್ನು ಚದುರಿಹೋಗದಂತೆ ತಡೆದು, ಸಂಗೀತ ಕಛೇರಿಯಲ್ಲಿ ಹೊಂದಿಸಬಹುದು. ಹಲವಾರು ವಾದ್ಯ-ಮೇಳಗಳಿರಬಹುದು ಹಾಗೂ ಕೀಬೋರ್ಡ್‌ಗಳು ಹೆಚ್ಚು ಪ್ರಾಧಾನ್ಯತೆಯನ್ನು ಪಡೆದಿರಬಹುದು. ಅವರೆಲ್ಲರೂ ಹೆಚ್ಚಾಗಿ ಹಿನ್ನೆಲೆಯನ್ನು ಹೊಂದಿರುತ್ತಾರೆ."[೧೫] ನಾಸ್ಟ್ರಡಮಸ್ ಆಲ್ಬಂ 2008ರ ಜೂನ್‌ನಲ್ಲಿ ಬಿಡುಗಡೆಗೊಂಡಿತು; ವಾದ್ಯ-ವೃಂದವು ಅದೇ ತಿಂಗಳಲ್ಲಿ ಆಲ್ಬಂನ ಬೆಂಬಲದ ಪ್ರವಾಸವನ್ನು ಕೈಗೊಂಡಿತು. 2009ರ ಆರಂಭಿಕ ಫೆಬ್ರವರಿಯಲ್ಲಿ, ವಾದ್ಯ-ವೃಂದವು ಟಿಕೇಟು-ಕೊಳ್ಳುವಂತೆ ಪೀಡಿಸುವುದರ ("ಸ್ಕಾಲ್ಪಿಂಗ್(ಸುಲಿಗೆ ಬೆಲೆಗೆ ಮಾರುವುದು)") ವಿರುದ್ಧ ಧ್ವನಿಯೆತ್ತಿದ ವಾದ್ಯ-ವೃಂದಗಳೊಂದಿಗೆ ಸೇರಿಕೊಂಡಿತು. ಟಿಕೇಟುಗಳನ್ನು ಮುಖಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಅಭ್ಯಾಸವನ್ನು ಖಂಡಿಸುವ ಮತ್ತು ಅಭಿಮಾನಿಗಳು ಅಧಿಕೃತ ಮೂಲಗಳಿಂದ ಮಾತ್ರ ಟಿಕೇಟುಗಳನ್ನು ಖರೀದಿಸುವಂತೆ ಪ್ರೋತ್ಸಾಹಿಸುವ ನಿರೂಪಣೆಯನ್ನು ನೀಡಿತು.[೧೬] ಅದೇ ತಿಂಗಳಲ್ಲಿ ಜುದಾಸ್ ಪ್ರೀಸ್ಟ್ ಅದರ ಪ್ರವಾಸವನ್ನು ಮುಂದುವರಿಸಿತು ಹಾಗೂ ಅದರ "ಪ್ರೀಸ್ಟ್ ಫೀಸ್ಟ್"ಅನ್ನು (ಅತಿಥಿಗಳಾದ ಮೇಗಾದೆತ್ ಮತ್ತು ಟೆಸ್ಟಮೆಂಟ್ ಒಂದಿಗೆ) ಇಂಗ್ಲೆಂಡ್, ವೇಲ್ಸ್, ಸ್ಕಾಟ್‌ಲ್ಯಾಂಡ್ ಮತ್ತು ಐರ್ಲ್ಯಾಂಡ್ನ ಅನೇಕ ಪ್ರದೇಶಗಳಿಗೆ 2009ರ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಕೊಂಡೊಯ್ಯಿತು. ಅಲ್ಲಿಂದ ಪ್ರವಾಸವು ಸ್ವೀಡನ್ನ ಹಲವಾರು ಜಾಗಗಳಿಗೆ ಮುಂದುವರಿಯಿತು. ನಂತರ 2009ರ ಮಾರ್ಚ್‌ನಲ್ಲಿ ಜುದಾಸ್ ಪ್ರೀಸ್ಟ್ 2005ರವರೆಗೆ ಭೇಟಿ ನೀಡಿರದ ಪೋರ್ಚುಗಲ್ನಲ್ಲಿ (ಅಟ್ಲಾಂಟಿಕ್ ಪೆವಿಲಿಯನ್‌ನಲ್ಲಿ ಲಿಸ್ಬನ್‌ನಲ್ಲಿ) ಪ್ರದರ್ಶನ ನಡೆಸಿಕೊಟ್ಟಿತು. ಪ್ರವಾಸವು ನಂತರ ಇಟಲಿಯ ಮಿಲನ್ಗೆ, ನಂತರ ಫ್ರಾನ್ಸ್‌ನ ಪ್ಯಾರಿಸ್ಗೆ ಮುಂದುವರಿಯಿತು; ಹಾಲ್ಫರ್ಡ್ ಜುದಾಸ್ ಪ್ರೀಸ್ಟ್ ಒಂದಿಗೆ ಕೊನೆಯದಾಗಿ 1991ರಲ್ಲಿ ಪ್ಯಾರಿಸ್‌ನಲ್ಲಿ ನಿರ್ವಹಿಸಿದನು. 2009ರ ಜೂನ್‌ನಿಂದ ಆಗಸ್ಟ್‌ವರೆಗೆ, ಬ್ರಿಟಿಷ್ ಸ್ಟೀಲ್ ಆಲ್ಬಂನ ಬಿಡುಗಡೆಯ 30ನೇ ವಾರ್ಷಿಕೋತ್ಸವವನ್ನು ಕೊಂಡಾಡಲು ಜುದಾಸ್ ಪ್ರೀಸ್ಟ್ ಉತ್ತರ ಅಮೆರಿಕದ ಪ್ರವಾಸವನ್ನು ಪೂರ್ಣಗೊಳಿಸಿತು; ಈ ಆಲ್ಬಂನ್ನು ಪ್ರತಿ ಪ್ರವಾಸದಲ್ಲಿ ಅದರ ಸಂಪೂರ್ಣತೆಯಲ್ಲಿ ಪ್ರದರ್ಶಿಸಲಾಯಿತು. ಜುದಾಸ್ ಪ್ರೀಸ್ಟ್‌ನ ಇತರ ಹಾಡುಗಳು ಪಟ್ಟಿಯಲ್ಲಿ ಸೇರಿಕೊಂಡವು. ಈ ಪ್ರವಾಸವು ಇಂಗ್ಲಿಷಿನವನಾದ ಡೇವಿಡ್ ಕವರ್ಡೇಲ್ ಮತ್ತು ವೈಟ್‌ಸ್ನೇಕ್ ಒಂದಿಗಿನ ಜಂಟಿ ಪ್ರಯತ್ನವಾಗಿತ್ತು. ದುರದೃಷ್ಟವಶಾತ್ ಡೇವಿಡ್ ಕವರ್ಡೇಲ್ ಗಂಭೀರ ಗಂಟಲು ಸೋಂಕಿನಿಂದ ಅನಾರೋಗ್ಯಕ್ಕೆ ಒಳಗಾದುದರಿಂದ ವೈಟ್‌ಸ್ನೇಕ್ 2009ರ ಆಗಸ್ಟ್ 11ರಲ್ಲಿ ಕೊಲೊರ್ಯಾಡೊದ ಡೆನ್ವರ್‌ನಲ್ಲಿ ನಡೆದ ಪ್ರದರ್ಶನದ ನಂತರ ಪ್ರವಾಸವನ್ನು ಕೈಬಿಡಬೇಕಾಯಿತು; ಅವನ ಧ್ವನಿಯ ತಂತು ಶಾಶ್ವತವಾಗಿ ಹಾನಿಗೊಳಗಾಗುವುದನ್ನು ತಡೆಯಲು ಅವನಿಗೆ ತಕ್ಷಣವೇ ಹಾಡುವುದನ್ನು ನಿಲ್ಲಿಸುವಂತೆ ಸೂಚಿಸಲಾಯಿತು.[೧೭][೧೮] ಜುದಾಸ್ ಪ್ರೀಸ್ಟ್ 2009ರ ಅಕ್ಟೋಬರ್ 17ರಂದು ಚಿಬಾ ಸಿಟಿಯಲ್ಲಿ ಲೌಡ್ ಪಾರ್ಕ್ ಫೆಸ್ಟಿವಲ್ನಲ್ಲಿ ಶ್ರೇಷ್ಠ ನಟರ ಸ್ಥಾನದೊಂದಿಗೆ ಜಪಾನ್‌ಗೆ ಹಿಂದಿರುಗಿತು. ಆ ನಂತರ ವಾದ್ಯ-ವೃಂದವು ಹೆಚ್ಚುವರಿ ಶ್ರೇಷ್ಠ ನಟರ ದಿನಾಂಕಗಳನ್ನು ಒಸಾಕದಲ್ಲಿ, ಅಕ್ಟೋಬರ್ 14ರಂದು ಕೋಬ್ ಕೊಕುಸೈ ಹಾಲ್‌ನಲ್ಲಿ ಮತ್ತು ಅಕ್ಟೋಬರ್ 15ರಂದು ನ್ಯಾಗೋಯ ಸಿಟಿಯಲ್ಲಿ ಘೋಷಿಸಿತು. 2009ರ ಜುಲೈ 14ರಲ್ಲಿ, ಜುದಾಸ್ ಪ್ರೀಸ್ಟ್ 2005 ಮತ್ತು 2008ರ ಪ್ರಪಂಚ ಪ್ರವಾಸಗಳಿಂದ ಹಿಂದೆ ಬಿಡುಗಡೆಯಾಗದ 11 ನೇರ ಹಾಡುಗಳನ್ನು ಹೊಂದಿರುವ ಒಂದು ಹೊಸ ನೇರ ಆಲ್ಬಂ A Touch of Evil: Live ಅನ್ನು ಬಿಡುಗಡೆ ಮಾಡಿತು. "ಡಿಸ್ಸಿಡೆಂಟ್ ಅಗ್ರೆಸ್ಸರ್"ನ ಪ್ರದರ್ಶನವು 2010ರ ಅತ್ಯುತ್ತಮ ಮೆಟಲ್ ನಿರ್ವಹಣೆಗಾಗಿ ಗ್ರಾಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.[೧೯]
ವೀಡಿಯೊ ಗೇಮ್‌ಗಳಲ್ಲಿ
[ಬದಲಾಯಿಸಿ]2000ರಲ್ಲಿ, ಜುದಾಸ್ ಪ್ರೀಸ್ಟ್‌ನ ಸಂಗೀತವು ಅನೇಕ ಪ್ರಸಿದ್ಧ ವೀಡಿಯೊ ಗೇಮ್‌ಗಳ ಧ್ವನಿಪಥದಲ್ಲಿ ಸೇರಿಕೊಂಡು ಜನಪ್ರಿಯವಾಯಿತು. 2006 PC ಮತ್ತು ಎಕ್ಸ್‌ಬಾಕ್ಸ್ 360 ವೀಡಿಯೊ ಗೇಮ್ ಪ್ರಿ ಹಾಗೂ ಪ್ಲೆಸ್ಟೇಷನ್ 2 2005 ಆಸರೆಯ ಆಟಗಳಾದ ಗಿಟಾರ್ ಹೀರೊ ಮತ್ತು ರೋಡ್‌ಕಿಲ್ ಅವುಗಳ ಧ್ವನಿಪಥದಲ್ಲಿ "ಯು ಹ್ಯಾವ್ ಗಾಟ್ ಎನದರ್ ಥಿಂಗ್ ಕಾಮಿನ್'" ಹಾಡನ್ನು ಸೇರಿಸಿಕೊಂಡವು. 2002ರ Grand Theft Auto: Vice City ಈ ಹಾಡನ್ನು V-ರಾಕ್ ಎಂಬ ರಾಕ್ ಸ್ಟೇಷನ್‌ನಲ್ಲಿ ಒಳಗೊಂಡಿದೆ. ಪ್ರೀಕ್ವೆಲ್(ಕೃತಿಯ ಘಟನೆಗಳನ್ನೇ ಹೊಂದಿರುವ ಚಲನಚಿತ್ರ) 2006ರ Grand Theft Auto: Vice City Stories ನಲ್ಲಿ V-ರಾಕ್ "ಎಲೆಕ್ಟ್ರಿಕ್ ಐ" ಹಾಡನ್ನು ಒಳಗೊಂಡಿದೆ. ರೋಡ್‌ಕಿಲ್ ಅದರ ಸಂಪ್ರದಾಯಿಕ ರಾಕ್ ಸ್ಯೂಡೊ(ಸುಳ್ಳು)-ರೇಡಿಯೊ ಸ್ಟೇಷನ್‌ನಲ್ಲಿ ಪೂರ್ವೋಕ್ತ ಹಾಡಿನೊಂದಿಗೆ "ಹೆಡಿಂಗ್ ಔಟ್ ಟು ದ ಹೈವೆ" ಹಾಡನ್ನೂ ಒಳಗೊಂಡಿದೆ. Guitar Hero Encore: Rocks the 80s ಅದರ ಪರಿಚಯದ ಹಾಡು "ದ ಹೆಲಿಯನ್"ಅನ್ನೂ ಒಳಗೊಂಡಂತೆ "ಎಲೆಕ್ಟ್ರಿಕ್ ಐ"ಅನ್ನೂ ಹೊಂದಿದೆ. 2001 ಪ್ಲೇಸ್ಟೇಷನ್ 2 ವೀಡಿಯೊ ಗೇಮ್ Gran Turismo 3: A-Spec ಅದರ ಧ್ವನಿಪಥದಲ್ಲಿ "ಟರ್ಬೊ ಲವರ್"ಅನ್ನು ಒಳಗೊಂಡಿದೆ. ಅದರ ಉತ್ತರಭಾಗ ಗ್ರ್ಯಾನ್ ಟುರಿಸ್ಮೊ 4 "ಫ್ರೀವೀಲ್ ಬರ್ನಿಂಗ್" ಹಾಡನ್ನು ಹೊಂದಿದೆ. ಅಲ್ಲದೆ ಸ್ಕೇಟ್ ಇಟ್ ಮತ್ತು ಸ್ಕೇಟ್ 2 ಇದನ್ನು ಅದರ ಧ್ವನಿಪಥದಲ್ಲಿ ಬಳಸಿಕೊಂಡಿದೆ. "ಬ್ರೇಕಿಂಗ್ ದ ಲಾವ್" ಹಾಡನ್ನು 2006 PC, PS2 ಮತ್ತು ಎಕ್ಸ್‌ಬಾಕ್ಸ್ ಗೇಮ್ Scarface: The World is Yours ಮೊದಲಾದವುಗಳಲ್ಲೂ ಬಳಸಲಾಗಿದೆ. ಹೆಚ್ಚುವರಿಯಾಗಿ, ಹಾರ್ಮೋನಿಕ್ಸ್ 2008ರ ಎಪ್ರಿಲ್ 18ರಂದು, ತುಂಬಾ ಪ್ರಸಿದ್ಧ ವೀಡಿಯೊ ಗೇಮ್ ರಾಕ್ ಬ್ಯಾಂಡ್ ನ ಡೌನ್‌ಲೋಡ್‌ಗಾಗಿ ಲಭ್ಯಯಿರುವ ಮೊದಲ ಸಂಪೂರ್ಣ-ಆಲ್ಬ ಎಂದರೆ ಜುದಾಸ್ ಪ್ರೀಸ್ಟ್‌ನ ಸ್ಕ್ರೀಮಿಂಗ್ ಫಾರ್ ವೆಂಜನ್ಸ್ ಎಂದು ಘೋಷಿಸಿತು. ಆ ಆಲ್ಬಂ ಎಕ್ಸ್‌ಬಾಕ್ಸ್ 360ಗೆ ಎಪ್ರಿಲ್ 22ರಂದು ಮತ್ತು ಪ್ಲೇಸ್ಟೇಷನ್ 3ಗೆ ಎಪ್ರಿಲ್ 24ರಂದು ಲಭ್ಯವಾಯಿತು. ಅದರ ಉತ್ತರಭಾಗ ರಾಕ್ ಬ್ಯಾಂಡ್ 2 "ಪೈನ್‌ಕಿಲ್ಲರ್"ಅನ್ನು ಆಟದಲ್ಲಿ ಎಲ್ಲಾ ಸಂಗೀತಸಾಧನಗಳೊಂದಿಗೆ ಹೆಚ್ಚು ತೀವ್ರವಾಗಿ ಹೊಂದಿದೆ ಹಾಗೂ Guitar Hero: Metallica "ಹೆಲ್ ಬೆಂಟ್ ಫಾರ್ ಲೆದರ್"ಅನ್ನು ಒಳಗೊಂಡಿದೆ. 2009ರ ಜುಲೈ 14ರಂದು ರಾಕ್ ಬ್ಯಾಂಡ್ ಜುದಾಸ್ ಪ್ರೀಸ್ಟ್‌ನ "ಡಿಸ್ಸಿಡೆಂಟ್ ಅಗ್ರೆಸ್ಸರ್", "ಈಟ್ ಮಿ ಎಲೈವ್" ಮತ್ತು "ಪ್ರೋಫೆಸಿ"ಯ ನೇರ ಆವೃತ್ತಿಗಳನ್ನು ಹೊಂದಿರುವ ಮೂರು ಪ್ಯಾಕ್ಅನ್ನು ಬಿಡುಗಡೆಗೊಳಿಸಿತು. Guitar Hero: Smash Hits ಇದು ಹಿಂದಿನ ಗಿಟಾರ್ ಹೀರೋದ ಹಾಡುಗಳನ್ನು ಪರಿಷ್ಕರಿಸಿದ ಸಂಕಲನವಾಗಿದೆ ಮತ್ತು ಇದು "ಎಲೆಕ್ಟ್ರಿಕ್ ಐ" ಹಾಡನ್ನೂ ಒಳಗೊಂಡಿದೆ. "ಪೈನ್‌ಕಿಲ್ಲರ್" ಮ್ಯಾಡನ್ 2010ರಲ್ಲಿ ಮತ್ತು Guitar Hero: Van Halen ರಲ್ಲೂ ವೈಶಿಷ್ಟ್ಯವಾಗಿದೆ. ಸ್ಕ್ರೀಮಿಂಗ್ ಫಾರ್ ವೆಂಜನ್ಸ್ ಆಲ್ಬಂನ "ದ ಹೆಲಿಯನ್" ಮತ್ತು "ಸ್ಕ್ರೀಮಿಂಗ್ ಫಾರ್ ವೆಂಜನ್ಸ್" ಹಾಡುಗಳನ್ನು ಬ್ರೂಟಲ್ ಲೆಜೆಂಡ್ ಎಂಬ ವೀಡಿಯೊ ಗೇಮ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನುಡಿಸಲಾಗಿದೆ. "ಬ್ಯಾಟಲ್ ಹಿಮ್ನ್", "ದ ಹೆಲಿಯನ್/ಎಲೆಕ್ಟ್ರಿಕ್ ಐ", "ಲೆದರ್ ರೆಬೆಲ್", "ಒನ್ ಶಾಟ್ ಅಟ್ ಗ್ಲೋರಿ" ಮತ್ತು "ಪೈನ್‌ಕಿಲ್ಲರ್" ಮೊದಲಾದ ಹಾಡುಗಳು ಬ್ರೂಟಲ್ ಲೆಜೆಂಡ್ ವೀಡಿಯೊ ಗೇಮ್‌ನ 100 ಹಾಡುಗಳ ಆಟದಲ್ಲಿನ-ಪಟ್ಟಿಯಲ್ಲಿ ಸೇರಿವೆ. ಅದು 2009ರ ಅಕ್ಟೋಬರ್ 13ರಂದು ಬಿಡುಗಡೆಯಾಯಿತು. ರಾಬ್ ಹಾಲ್ಫರ್ಡ್ ಅದೇ ಆಟದಲ್ಲಿ ಜನರಲ್ ಲೈಯನ್‌ವೈಟ್ ಮತ್ತು ಫೈರ್ ಬ್ಯಾರನ್‌ನ ಧ್ವನಿ ನೀಡುತ್ತಾನೆ. ಜುದಾಸ್ ಪ್ರೀಸ್ಟ್‌ನ ಗಿಟಾರ್-ವಾದಕ ಗ್ಲೆನ್ನ್ ಟಿಪ್ಟಾನ್ ಬ್ರೂಟಲ್ ಲೆಜೆಂಡ್‌ನ ಪ್ರಮುಖ ಪಾತ್ರ ಎಡ್ಡಿ ರಿಗ್ಸ್‌ಗೆ ಒಂಟಿ-ವಾದನವನ್ನು ನುಡಿಸಿದನು. ಅಲ್ಲದೆ ಜುದಾಸ್ ಪ್ರೀಸ್ಟ್‌ನ ಗಿಟಾರ್-ವಾದಕ K. K. ಡೌವ್ನಿಂಗ್ ಮುಖ್ಯ ಇಬ್ಬರು ಖಳನಾಯಕರು ನಿರ್ವಹಿಸುವ ಪಾತ್ರಗಳಿಗೆ ಒಂಟಿ-ವಾದನವನ್ನು ನುಡಿಸಿದನು. ಫಾಲೌಟ್ 3 "ಲೆದರ್ ರೆಬೆಲ್" ಹಾಡಿನ ನಂತರ ಹೆಸರಿಸಿದ ಅನನ್ಯ ಲಾಂಛನವನ್ನು ಹೊಂದಿದೆ. ಗಿಲ್ಟಿ ಗೀರ್ ಫ್ರ್ಯಾಂಕೈಸ್‌ನಲ್ಲಿನ ಪಾತ್ರಗಳಲ್ಲಿ ಒಂದು ಪಾತ್ರ ಆರ್ಡರ್ ಸೋಲ್ ಜುದಾಸ್ ಪ್ರೀಸ್ಟ್‌ಅನ್ನು ಆಧರಿಸಿದೆ ಹಾಗೂ ಅವನ ಓವರ್‌ಡ್ರೈವ್‌ಅನ್ನು "ಆಲ್ ಗನ್ಸ್ ಬ್ಲೇಜಿಂಗ್" ಹಾಡಿನ ನಂತರ ಹೆಸರಿಲಾಗಿದೆ.
ಸಂಗೀತದ ಶೈಲಿ ಮತ್ತು ಪ್ರಭಾವಗಳು
[ಬದಲಾಯಿಸಿ]K. K. ಡೌವ್ನಿಂಗ್ ಮತ್ತು ಗ್ಲೆನ್ನ್ ಟಿಪ್ಟಾನ್ ಜೋಡಿ ಕಲಾವಿದರೊಂದಿಗೆ ಟ್ವಿನ್-ಗಿಟಾರ್ ಧ್ವನಿಯನ್ನು ಆಧುನಿಕಗೊಳಿಸಿದ ಹೆವಿ ಮೆಟಲ್ ವಾದ್ಯ-ವೃಂದಗಳಲ್ಲಿ ಜುದಾಸ್ ಪ್ರೀಸ್ಟ್ ಮೊದಲನೆಯದಾಗಿದೆ. ಅವರು ಈ ಧ್ವನಿಯನ್ನು ರಾಬ್ ಹಾಲ್ಫರ್ಡ್‌ನ ಭಿನ್ನ ಗಾಯನ ಶೈಲಿಯೊಂದಿಗೆ ಸೇರಿಸಿದರು. ಇದು ಅವರದೇ ಆದ ಒಂದು ಹೆವಿ-ರಾಕ್ ಶೈಲಿಯನ್ನು ಸೃಷ್ಟಿಸಿತು. ಹೆವಿ ಮೆಟಲ್‌ನ ಮೇಲಿನ ಪ್ರಭಾವಕ್ಕಾಗಿ ಈ ತಂಡವು ಒಂದು ದೃಷ್ಟಾಂತವಾಗಿದೆ. ಪ್ರಧಾನ ಹಾರ್ಡ್ ರಾಕ್ ಮತ್ತು ಹೆವಿ ಮೆಟಲ್ ವಾದ್ಯ-ವೃಂದಗಳ ಪ್ರಭಾವಿ ಸಂಗೀತಗಾರರು ಮತ್ತು ಸದಸ್ಯರು, "ಶುದ್ಧ" ಹೆವಿ ಮೆಟಲ್ ಎಂದು ನಿರೂಪಿಸುವುದಕ್ಕೆ ಆಧಾರಗಳೆಂದರೆ ಜುದಾಸ್ ಪ್ರೀಸ್ಟ್‌ನ ಮೂರು ಆರಂಭಿಕ ಆಲ್ಬಂಗಳು ಎಂದು ನಂಬಿದ್ದಾರೆ: ಸ್ಯಾಡ್ ವಿಂಗ್ಸ್ ಆಫ್ ಡೆಸ್ಟಿನಿ (1976), ಸಿನ್ ಆಫ್ಟರ್ ಸಿನ್ (1977) ಮತ್ತು ಸ್ಟೈನ್ಡ್ ಕ್ಲಾಸ್ (1978). ಈ ವಾದ್ಯ-ವೃಂದವು ಆ ಕಾಲದ ರಾಕ್ ತಂಡಗಳಿಗಿಂತ ಹೆಚ್ಚು ವೇಗವಾಗಿ ನುಡಿಸಿತು ಹಾಗೂ ಗಿಟಾರ್‌ಗಳಿಗೆ ಅಧಿಕ "ಲೋಹನಾದ"ವನ್ನು ನೀಡಿತು. ಹಾಡುಗಳು ಸರಳ, ನೇರ ಸ್ವರಗಳಿಂದ ("ಸ್ಟಾರ್‌ಬ್ರೇಕರ್") ಸಂಪೂರ್ಣವಾಗಿ ವ್ಯವಸ್ಥಿತ ಅಂಶಗಳವರೆಗೆ ವ್ಯತ್ಯಾಸಗೊಳ್ಳುತ್ತದೆ. ಒಂದು ಹಾಡಿನಲ್ಲಿ ಧ್ವನಿಯು ವೇಗ ಮತ್ತು ಉಚ್ಚಸ್ವರದಿಂದ, ತಗ್ಗಿದ ಮತ್ತು ಹಿತವಾದ ನಾದಕ್ಕೆ ಬದಲಾಗುತ್ತದೆ (ಉದಾ, "ವಿಕ್ಟಿಮ್ ಆಫ್ ಚೇಂಜಸ್", "ರನ್ ಆಫ್ ದ ಮಿಲ್", "ಬಿಯಾಂಡ್ ದ ರಿಯಾಲ್ಮ್ಸ್ ಆಫ್ ಡೆತ್"). 1978ನ "ಎಕ್ಸೈಟರ್"ನಂತಹ ಕೆಲವು ಹಾಡುಗಳು ಅವುಗಳ ಸಂಪೂರ್ಣ ತೀವ್ರತೆ ಮತ್ತು ವೇಗಕ್ಕೆ ಅತ್ಯದ್ಭುತವಾಗಿವೆ; "ಡಿಸ್ಸಿಡೆಂಟ್ ಅಗ್ರೆಸ್ಸರ್", "ಸಿನ್ನರ್" ಮತ್ತು "ಟೈರಂಟ್"ನಂತಹ ಇತಹ ಹಾಡುಗಳನ್ನು ಆ ಕಾಲದಲ್ಲಿ ಭಾರಿ ತಾಳ-ಲಯಗಳ ಹಾಡುಗಳೆಂದು ಪರಿಗಣಿಸಲಾಗಿತ್ತು, ಅವನ್ನು ಇಂದು ಸಾಂಪ್ರದಾಯಿಕ ಮೆಟಲ್ ಹಾಡುಗಳೆಂದು ತಿಳಿಯಲಾಗುತ್ತದೆ. ಅದರ 1978ರ ಆಲ್ಬಂ ಕಿಲ್ಲಿಂಗ್ ಮೆಶಿನ್ (ಹೆಲ್ ಬೆಂಟ್ ಫಾರ್ ಲೆದರ್ ಎಂದು ಮರುಹೆಸರಿಸಲ್ಪಟ್ಟು, 1979ರಲ್ಲಿ USAಯಲ್ಲಿ ಬಿಡುಗಡೆಗೊಂಡಿತು) ಸಣ್ಣ, ಪಾಪ್-ಮಾದರಿಯ, ಹೆಚ್ಚು ಅಮೆರಿಕನ್-ಪ್ರಭಾವಿತ ಹಾಡುಗಳ ಅಭಿಮುಖದಲ್ಲಿ ಬದಲಾವಣೆ ಕಂಡಿತು. ನಂತರದ ಬಿಡುಗಡೆ ಬ್ರಿಟಿಷ್ ಸ್ಟೀಲ್ (1980ರ ಎಪ್ರಿಲ್ 14) ಅದೇ ದಿಕ್ಕಿನಲ್ಲಿ ಮತ್ತಷ್ಟು ತೀವ್ರ ತಿರುವನ್ನು ಪಡೆದುಕೊಂಡಿತು. ಸಂಕ್ಷಿಪ್ತ ರೂಪದಲ್ಲಿ ಪಾಪ್ ಹುಕ್ಸ್ ಒಂದಿಗೆ ರೇಡಿಯೊ-ಸ್ನೇಹಿ ಹಾಡುಗಳನ್ನು ಧ್ವನಿಮುದ್ರಣ ಮಾಡಿದ ಮೊದಲ ಹೆವಿ ಮೆಟಲ್ ಆಲ್ಬಂ ಇದಾಗಿದೆ. ವಾದ್ಯ-ವೃಂದದ ನಂತರದ ಪ್ರಯತ್ನ ಪಾಯಿಂಟ್ ಆಫ್ ಎಂಟ್ರಿ (1981ರ ಫೆಬ್ರವರಿ 26) ತುಂಬಾ ಕಳಪೆ ಮಟ್ಟದ್ದಾಗಿತ್ತು. ಅದರ ಧ್ವನಿಯು ಹೆಚ್ಚು "ನಯವಾಗಿರಲಿಲ್ಲ" (ಅಂದರೆ ಕನಿಷ್ಠ ಧ್ವನಿ ಕುಶಲಬಳಕೆಯಿಂದ ಕೂಡಿತ್ತು) ಹಾಗೂ ಹಾಡುಗಳು ಹೆಚ್ಚುಕಡಿಮೆ ಮಂಕುಕವಿದಂತಿದ್ದವು ಮತ್ತು ಸಾಮಾನ್ಯ ಲಯಕ್ಕಿಂತ ನಿಧಾನ ಗತಿಯನ್ನು ಹೊಂದಿದ್ದವು. ನಂತರ ಗಿಟಾರ್-ವಾದಕ ಗ್ಲೆನ್ನ್ ಟಿಪ್ಟಾನ್ ಹೇಳಿದಂತೆ ಪಾಯಿಂಟ್ ಆಫ್ ಎಂಟ್ರಿ ಆಲ್ಬಂಗೆ ಹಿಂದಿನ ಪ್ರಮಾಣಕ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಕಷ್ಟವಾಯಿತು ಮತ್ತು ವಿಫಲವಾಯಿತು. ಆನಂತರದ ಆಲ್ಬಂಗಳಾದ, "ಯು ಹ್ಯಾವ್ ಗಾಟ್ ಎನದರ್ ಥಿಂಗ್ ಕಾಮಿನ್'" ಎಂಬ ರೇಡಿಯೊ-ಪ್ರಸಿದ್ಧವಾದ ಹಾಡನ್ನು ಹೊಂದಿರುವ ಸ್ಕ್ರೀಮಿಂಗ್ ಫಾರ್ ವೆಂಜನ್ಸ್ (ಜುಲೈ 17, 1982) ಹಾಗೂ ಡಿಫೆಂಡರ್ಸ್ ಆಫ್ ದ ಫೈತ್ (ಜನವರಿ 4, 1984) ಮತ್ತೆ ಉತ್ತಮ ಗುಣಮಟ್ಟದಲ್ಲಿ ಮೂಡಿಬಂದವು ಹಾಗೂ ಹೆವಿ ಮೆಟಲ್‌ನ ಭಾರಿ ಧ್ವನಿಯ ಪ್ರಭಾವ ಬೀರುವುದನ್ನು ಮುಂದುವರಿಸಿದವು. ಟರ್ಬೊ (ಎಪ್ರಿಲ್ 15, 1986) ಆಲ್ಬಂ ವಾದ್ಯ-ವೃಂದದ ಮೆಟಲ್ ಪ್ರಮಾಣಕ-ಫಲಕಕ್ಕೆ "ಸಂಯೋಜಕ-ಗಿಟಾರ್" ಧ್ವನಿಯನ್ನು ತಂದುಕೊಟ್ಟಿತು. ಹಿಂದಿನ ಆಲ್ಬಂ ಟರ್ಬೊ [೨೦]ದಿಂದ ಕೈಬಿಟ್ಟ ಮತ್ತು ಪರಿಷ್ಕರಿಸಿದ ಅನೇಕ ಹಾಡುಗಳನ್ನು ಒಳಗೊಂಡ ರ್ಯಾಮ್ ಇಟ್ ಡೌವ್ನ್ (1988) ನಾಮಸೂಚಕ ರಾಗವನ್ನು ಹೊಂದಿದೆ. ಇದು ವಾಣಿಜ್ಯಿಕವಾಗಿ ಹೆಚ್ಚು ಗಮನ ಸೆಳೆಯಲಿಲ್ಲ. ಅದರ ಶೈಲಿಯು ಟರ್ಬೊ ದಲ್ಲಿನ ಅಂಶಗಳಿಗಿಂತ ಅಧಿಕವಾಗಿತ್ತು. ಆದರೆ ಮತ್ತೂ ಹಿಂದಿನ ಆಲ್ಬಂನ ಸಂಯೋಜಕ ಅಂಶವನ್ನು ಒಳಗೊಂಡಿತ್ತು. ಪೈನ್‌ಕಿಲ್ಲರ್ ಗೆ (1990) ಜುದಾಸ್ ಪ್ರೀಸ್ಟ್ ಹೆಚ್ಚು ನೇರ ಹೆವಿ ಮೆಟಲ್ ಶೈಲಿಗೆ ಹಿಂದಿರುಗಿತು. ಅದರಲ್ಲಿ ಹೊಸ ಸದಸ್ಯ ಸ್ಕಾಟ್ ಟ್ರಾವಿಸ್‌ನ ಅಧಿಕ ತಾಂತ್ರಿಕ ಮತ್ತು ದ್ವಿ-ಮಂದ್ರವಾದ್ಯ ವಾದನವನ್ನು ಬಳಸಿಕೊಂಡಿತು. ಇದು ವಾದ್ಯ-ವೃಂದದ ಧ್ವನಿಮುದ್ರಿಕೆ ಪಟ್ಟಿಯಲ್ಲೇ ಹೆಚ್ಚು ಬಿರುಸಿನ ಮತ್ತು ಅಧಿಕ ತೀವ್ರತೆಯ ಆಲ್ಬಂ ಆಗಿದೆ. ಕೆಲವು ಹಾಡುಗಳಲ್ಲಿ ಹಾಲ್ಫರ್ಡ್‌ನ ವಿಶಿಷ್ಟ ಎತ್ತರದ-ಸ್ಥಾಯಿಯ ಪ್ರಲಾಪವು ಕಿವಿತಮಟೆ-ಒಡೆದು ಹೋಗುವಂತೆ ಇತ್ತು. ಫ್ಲೋರಿಡಾದ ಡೆತ್ ಮೆಟಲ್ ವಾದ್ಯ-ವೃಂದ ಡೆತ್ ಈ ಶೀರ್ಷಿಕೆ ಹಾಡನ್ನು ಅದರ ಆಲ್ಬಂ ದ ಸೌಂಡ್ ಆಫ್ ಪರ್ಸಿವರೆನ್ಸ್ನಲ್ಲಿ ಬಳಸಿಕೊಂಡಿತು. ರಾಬ್ ಹಾಲ್ಫರ್ಡ್ ಬಿಟ್ಟುಹೋದ ನಂತರ ಜುದಾಸ್ ಪ್ರೀಸ್ಟ್ ಟಿಮ್ 'ರಿಪ್ಪರ್' ಓವೆನ್ಸ್ ಒಂದಿಗೆ ಎರಡು ಆಲ್ಬಂಗಳನ್ನು ಬಿಡುಗಡೆ ಮಾಡಿತು. ಜುಗುಲೇಟರ್ (1997) ರಿಪ್ಪರ್‌ನ ಹೆಚ್ಚು ಪ್ರಸಿದ್ಧ ಹಾಡುಗಳಲ್ಲಿ ಒಂದಾದ "ಕ್ಯಾಥೆಡ್ರಲ್ ಸ್ಪೈರ್ಸ್" ಎಂಬ ಭಾರಿ ಹಾಡನ್ನು ಹೊಂದಿದ್ದರೂ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು. ಡೆಮೋಲಿಷನ್ (2001) ಕೆಲವು ಸ್ಮರಣೀಯ ಹಾಡುಗಳನ್ನು ಹೊಂದಿದ್ದರೂ, ಅದನ್ನು ಸಾಮಾನ್ಯವಾಗಿ ಮತ್ತೊಂದು ವಿಫಲತೆಯೆಂದು ಪರಿಗಣಿಸಲಾಯಿತು. 1990ರ ನಂತರ ರಾಬ್ ಹಾಲ್ಫರ್ಡ್‌ನ ಮೊದಲ ಜುದಾಸ್ ಪ್ರೀಸ್ಟ್ ಆಲ್ಬಂ ಏಂಜೆಲ್ ಆಫ್ ರಿಟ್ರಿಬ್ಯೂಷನ್ (2005) ಸಾಂಪ್ರದಾಯಿಕ ಹೆವಿ ಮೆಟಲ್‌ನ ಪ್ರಸ್ತುತದ ನವಚೈತನ್ಯಕ್ಕೆ ಕೊಡುಗೆಯನ್ನು ನೀಡಿತು. ಇದು "ಜುದಾಸ್ ರೈಸಿಂಗ್" ಮತ್ತು "ಹೆಲ್‌ರೈಡರ್"ನಂತಹ ವಾದ್ಯ-ವೃಂದದ ಸಾಂಪ್ರದಾಯಿಕ ಶೈಲಿಯ ಹಾಡುಗಳನ್ನು ಒಳಗೊಂಡಿದೆ. ಅಲ್ಲದೆ ಸ್ಪಷ್ಟ ಮತ್ತು ಪ್ರಧಾನ ಡ್ರಮ್ಗಳು ಮತ್ತು ಕಡಿಮೆ-ಪ್ರಧಾನ ಗಿಟಾರ್‌ಗಳೊಂದಿಗೆ ಮಧ್ಯಮ-ಲಯದ ಹಾಡುಗಳು ("ವರ್ತ್ ಫೈಟಿಂಗ್ ಫಾರ್", "ವೀಲ್ಸ್ ಆಫ್ ಫೈರ್"), ಒಂದು ಕಿರುಗೀತೆ ("ಏಂಜೆಲ್") ಹಾಗೂ ದೀರ್ಘ ಹಾಡು ("ಲಾಚ್ನೆಸ್") ಮೊದಲಾದವನ್ನೂ ಒಳಗೊಂಡಿದೆ. ಇದು 13:28 ನಷ್ಟು ಕಾಲ ಉದ್ದವಿದ್ದು, ವಾದ್ಯ-ವೃಂದವು 1970ರ ಆರಂಭಿಕ ಅವಧಿಯ ಸಂಗೀತಕಛೇರಿಯ ನಂತರ ಅದುವರೆಗೆ ಸಂಯೋಜಿಸಿರದ ದೀರ್ಘ ಹಾಡಾಗಿದೆ. ಜುದಾಸ್ ಪ್ರೀಸ್ಟ್ ಧ್ವನಿಮುದ್ರಿಕೆ ಪಟ್ಟಿಯಲ್ಲಿನ ಇತ್ತೀಚಿನ ಆಲ್ಬಂ ನಾಸ್ಟ್ರಡಮಸ್ 2008ರ ಜೂನ್‌ನಲ್ಲಿ ಬಿಡುಗಡೆಗೊಂಡಿತು. ಡಬಲ್-CD/ಟ್ರಿಪಲ್-LP ವಿಷಯ-ಆಲ್ಬಂ 16ನೇ ಶತಮಾನದ ಫ್ರೆಂಚ್ ಪ್ರವಾದಿ ಮೈಕೆಲ್ ದಿ ನಾಸ್ಟ್ರೆಡೇಮ್‌ನ ಜೀವನದ ಬಗ್ಗೆ ತಿಳಿಸುತ್ತದೆ. ಇದರ ಶೈಲಿಯು ಹೆಚ್ಚುಕಡಿಮೆ ನಿಧಾನದಿಂದ ಮಧ್ಯಮ-ಗತಿಯ ಹೆವಿ ಮೆಟಲ್ ಆಗಿದೆ. ಆದರೂ ಕೆಲವು ಹಾಡುಗಳು (ನಿರ್ದಿಷ್ಟವಾಗಿ ಶೀರ್ಷಿಕೆ ಗೀತೆ) ವಾದ್ಯ-ವೃಂದದ ವಿಶಿಷ್ಟ ವೇಗದ ಮೆಟಲ್ ಧ್ವನಿಯನ್ನು ಪ್ರದರ್ಶಿಸುತ್ತವೆ.
ಶೈಲಿಯ ಮೇಲಿನ ಪ್ರಭಾವ
[ಬದಲಾಯಿಸಿ]ಜುದಾಸ್ ಪ್ರೀಸ್ಟ್ ಕೊನೆಯ-ಮಧ್ಯ 70ರ ದಶಕದಿಂದ ಈವರೆಗಿನ ಎಲ್ಲಾ ಮೆಟಲ್ ಸಂಗೀತದ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಭಾವವನ್ನು ಬೀರಿದೆ. ಅದರ ಪ್ರಭಾವವು ಎಷ್ಟು ಮುಖ್ಯವಾದುದೆಂದರೆ MTV.com ಬ್ಲ್ಯಾಕ್ ಸಬ್ಬತ್ನ ನಂತರ ಜುದಾಸ್ ಪ್ರೀಸ್ಟ್ ಹೆವಿ ಮೆಟಲ್‌ನಲ್ಲಿ ಎರಡನೇ ಅತಿ ಪ್ರಮುಖ ವಾದ್ಯ-ವೃಂದವಾಗಿದೆ ಎಂದು ಹೆಸರಿಸಿದೆ.[೨೧] ಜುದಾಸ್ ಪ್ರೀಸ್ಟ್ ಧ್ವನಿಗೆ ಮಾತ್ರವಲ್ಲದೆ ಹೆವಿ ಮೆಟಲ್ ಶೈಲಿಯಲ್ಲಿನ ಕ್ರಾಂತಿಕಾರಕ ಬದಲಾವಣೆಗೂ ಹೆಸರುವಾಸಿಯಾಗಿದೆ. ರಾಬ್ ಹಾಲ್ಫರ್ಡ್ ಇಂದು ಹಾರ್ಡ್‌ಕೋರ್ ಮೆಟಲ್/ಬೈಕರ್/S&M ಶೈಲಿ ಎಂದು ಪ್ರಸಿದ್ಧವಾದ ಪುರುಷತ್ವ ಪ್ರದರ್ಶನವನ್ನು ಮಾಡಲು 1978ರಲ್ಲೇ (ಈ ವಾದ್ಯ-ವೃಂದದ ಕಿಲ್ಲಿಂಗ್ ಮೆಶಿನ್ ಎಂಬ ಆಲ್ಬಂ ಬಿಡುಗಡೆಯಾಗುವ ಸಂದರ್ಭದಲ್ಲಿ) ಆರಂಭಿಸಿದನು. ಇದನ್ನು ಉಳಿದ ವಾದ್ಯ-ವೃಂದಗಳು ಅನುಸರಿಸಿದವು. ಇದು ಹೆವಿ ಮೆಟಲ್‌ಗೆ ಮೂಲಧಾರವಾಯಿತು; ಅತಿಶೀಘ್ರದಲ್ಲಿ ಅನೇಕ ಇತರ ವಾದ್ಯ-ವೃಂದಗಳು ನಿರ್ದಿಷ್ಟವಾಗಿ NWOBHM ಮತ್ತು ಆರಂಭಿಕ ಬ್ಲ್ಯಾಕ್ ಮೆಟಲ್ ಕಾರ್ಯಾವಳಿಗಳು ಹಾಲ್ಫರ್ಡ್‌ನ ಶೈಲಿಯನ್ನು ಅವುಗಳ ಪ್ರದರ್ಶನದಲ್ಲಿ ಸೇರಿಸಿಕೊಳ್ಳಲು ಆರಂಭಿಸಿದವು.[೨೨] ಇದು 80ರ ದಶಕದಲ್ಲಿ ಮೆಟಲ್‌ನಲ್ಲಿ ಪುನರುಜ್ಜೀವನವನ್ನು ಉಂಟುಮಾಡಿತು ಹಾಗೂ ವಾದ್ಯ-ವೃಂದಕ್ಕೆ ಮೈನ್‌ಸ್ಟ್ರೀಮ್ ಮತ್ತು ಅಸಾಂಪ್ರಾದಾಯಿಕ ಎರಡರಲ್ಲೂ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಇಂದೂ ಸಹ ಮೆಟಲ್ ಕಲಾವಿದರು ಸಂಗೀತಕಛೇರಿಗಳಲ್ಲಿ ಅಂತಹ ಪ್ರದರ್ಶನವನ್ನು ನೀಡುವುದು ಸಾಮಾನ್ಯವಾಗಿದೆ.
ಪ್ರವಾಸಗಳು
[ಬದಲಾಯಿಸಿ]- ಜುದಾಸ್ ಪ್ರೀಸ್ಟ್ ಪ್ರವಾಸ 1969 (ವಾದ್ಯ-ವೃಂದದಲ್ಲಿ ಪ್ರಸ್ತುತವಿರುವ ಸದಸ್ಯರು ಆ ಸಂದರ್ಭದಲ್ಲಿ ವಾದ್ಯ-ವೃಂದದಲ್ಲಿರಲಿಲ್ಲ)
- ಪ್ರೀಸ್ಟ್ ಪ್ರವಾಸ 1970-1971ರ ಹಿಂದಿರುಗುವಿಕೆ (KK. ಡೌವ್ನಿಂಗ್ ಮತ್ತು ಅಯನ್ ಹಿಲ್ ಒಂದಿಗಿನ ಮೊದಲ ಪ್ರವಾಸ + ಬ್ಲ್ಯಾಕ್ ಸಬ್ಬತ್ ಒಂದಿಗಿನ ಮೊದಲ ಗಿಗ್ ಪ್ರವಾಸ)
- ವಿಸ್ಕಿ ವುಮನ್ ಪ್ರವಾಸ 1972
- ನೆವರ್ ಟರ್ನ್ ಯುವರ್ ಬ್ಯಾಕ್ ಆನ್ ಎ ಫ್ರೆಂಡ್ ಪ್ರವಾಸ 1973 (ರಾಬ್ ಹಾಲ್ಫರ್ಡ್ ಒಂದಿಗಿನ ಮೊದಲ ಪ್ರವಾಸ, ಜುದಾಸ್ ಪ್ರೀಸ್ಟ್ ಬಡ್ಗೀಯ ಬೆಂಬಲ ಕಾರ್ಯವಾಗಿದೆ)
- ಗಲ್ ರೆಕಾರ್ಡ್ ಪ್ರವಾಸ 1974 (ಗ್ಲೆನ್ನ್ ಟಿಪ್ಟಾನ್ ಒಂದಿಗಿನ ಮೊದಲ ಪ್ರವಾಸ, ಜುದಾಸ್ ಪ್ರೀಸ್ಟ್ ಮತ್ತೊಮ್ಮೆ ಬಡ್ಗೀಯ ಬೆಂಬಲ ಕಾರ್ಯವಾಗಿದೆ)
- ರೋಕ ರೋಲ ಪ್ರವಾಸ 1974
- ಸ್ಯಾಡ್ ವಿಂಗ್ಸ್ ಆಫ್ ಡೆಸ್ಟಿನಿ ಪ್ರವಾಸ 1975-1976
- ಸಿನ್ ಆಫ್ಟರ್ ಸಿನ್ ಪ್ರವಾಸ 1977
- ಸ್ಟೈನ್ಡ್ ಕ್ಲಾಸ್ ಪ್ರವಾಸ 1978
- ಕಿಲ್ಲಿಂಗ್ ಮೆಶಿನ್ ಪ್ರವಾಸ 1978
- ಕಿಲ್ಲಿಂಗ್ ಮೆಶಿನ್/ಹೆಲ್ ಬೆಂಟ್ ಫಾರ್ ಲೆದರ್ ಪ್ರವಾಸ 1979
- ಬ್ರಿಟಿಷ್ ಸ್ಟೀಲ್ ಪ್ರವಾಸ 1980
- ವರ್ಲ್ಡ್ ವೈಡ್ ಬ್ಲಿಟ್ಜ್ ಪ್ರವಾಸ 1981
- ವರ್ಲ್ಡ್ ವೆಂಜನ್ಸ್ ಪ್ರವಾಸ 1982-1983
- ಮೆಟಲ್ ಕಂಕ್ವೆರರ್ ಪ್ರವಾಸ 1984
- ಲೈವ್ ಏಡ್ 1985
- ಫುಯೆಲ್ ಫಾರ್ ಲೈಫ್ ಪ್ರವಾಸ 1986
- ಮರ್ಸೆನರೀಸ್ ಆಫ್ ಮೆಟಲ್ ಪ್ರವಾಸ 1988
- ಪೈನ್‌ಕಿಲ್ಲರ್ ಪ್ರವಾಸ 1990
- ಓಪರೇಷನ್ ರಾಕ್ ಆಡ್ ರಾಲ್ ಪ್ರವಾಸ 1991
- ಜುಗುಲೇಟರ್ ವರ್ಲ್ಡ್ ಪ್ರವಾಸ 1998
- ಡೆಮೋಲಿಷನ್ ವರ್ಲ್ಡ್ ಪ್ರವಾಸ 2001-2002
- ರಿಯುನೈಟೆಡ್ ಸಮ್ಮರ್ ಪ್ರವಾಸ 2004
- ಆಜ್‌ಫೆಸ್ಟ್ ಪ್ರವಾಸ 2004
- ರಿಟ್ರಿಬ್ಯೂಷನ್ ವರ್ಲ್ಡ್ ಪ್ರವಾಸ 2004-2005
- ಪ್ರೀಸ್ಟ್ ಫೀಸ್ಟ್ ಪ್ರವಾಸ 2008 (+ ಮೆಟಲ್ ಮಾಸ್ಟರ್ಸ್ ಪ್ರವಾಸ ಎನ್ನುವ US ಸಮ್ಮರ್ ಪ್ರವಾಸ w/ ಹೆವನ್ ಆಂಡ್ ಹೆಲ್, ಮೋಟಾರ್ಹೆಡ್, ಟೆಸ್ಟಮೆಂಟ್)
- ಪ್ರೀಸ್ಟ್ ಫೀಸ್ಟ್ ಪ್ರವಾಸ 2009 (w/ ಮೇಗಾದೆತ್, ಟೆಸ್ಟಮೆಂಟ್)
- ಬ್ರಿಟಿಷ್ ಸ್ಟೀಲ್ 30ನೇ ವಾರ್ಷಿಕೋತ್ಸವದ ಪ್ರವಾಸ 2009 (w/ ವೈಟ್‌ಸ್ನೇಕ್, ಪಾಪ್ ಎವಿಲ್)
ವಾದ್ಯ-ವೃಂದದ ಸದಸ್ಯರು
[ಬದಲಾಯಿಸಿ]ಪ್ರಸ್ತುತವಿರುವ ಸದಸ್ಯರು
[ಬದಲಾಯಿಸಿ]- K. K. ಡೌವ್ನಿಂಗ್ – ಲಯಬದ್ಧ ಮತ್ತು ಪ್ರಮುಖ ಗಿಟಾರ್-ವಾದಕ, ಹಿನ್ನಲೆ ಗಾಯಕ (1969–ಇಂದಿನವರೆಗೆ)
- ಅಯನ್ ಹಿಲ್ – ಮಂದ್ರವಾದ್ಯ, ಹಿನ್ನೆಲೆ ಗಾಯಕ (1969–ಇಂದಿನವರೆಗೆ)
- ಗ್ಲೆನ್ನ್ ಟಿಪ್ಟಾನ್ – ಪ್ರಮುಖ ಮತ್ತು ಲಯಬದ್ಧ ಗಿಟಾರ್, ಕೀಬೋರ್ಡ್-ವಾದಕ, ಸಂಯೋಜಕ, ಹಿನ್ನೆಲೆ ಗಾಯಕ (1974–ಇಂದಿನವರೆಗೆ)
- ರಾಬ್ ಹಾಲ್ಫರ್ಡ್ – ಪ್ರಮುಖ ಗಾಯಕ (1973–1992, 2003–ಇಂದಿನವರೆಗೆ)
- ಸ್ಕಾಟ್ ಟ್ರಾವಿಸ್ – ಡ್ರಮ್, ತಾಳವಾದ್ಯ-ವಾದಕ (1989–ಇಂದಿನವರೆಗೆ)
ಹಿಂದಿನ ಸದಸ್ಯರು
[ಬದಲಾಯಿಸಿ]- ಆಲ್ ಆಟ್ಕಿನ್ಸ್ – ಪ್ರಮುಖ ಗಾಯಕ (1970–1973)
- ಜಾನ್ ಎಲ್ಲಿಸ್ – ಡ್ರಮ್, ತಾಳವಾದ್ಯ-ವಾದಕ (1970–1971)
- ಅಲನ್ ಮೂರ್ – ಡ್ರಮ್, ತಾಳವಾದ್ಯ-ವಾದಕ (1971–1972, 1975–1976)
- ಕ್ರಿಸ್ ಕ್ಯಾಂಪ್ಬೆಲ್ – ಡ್ರಮ್, ತಾಳವಾದ್ಯ-ವಾದಕ (1972–1973)
- ಜಾನ್ ಹಿಂಚ್ – ಡ್ರಮ್, ತಾಳವಾದ್ಯ-ವಾದಕ (1973–1975)
- ಲೆಸ್ ಬಿಂಕ್ಸ್ – ಡ್ರಮ್, ತಾಳವಾದ್ಯ-ವಾದಕ (1977–1979)
- ಡೇವ್ ಹಾಲಂಡ್ – ಡ್ರಮ್, ತಾಳವಾದ್ಯ-ವಾದಕ (1979-1989)
- ಟಿಮ್ "ರಿಪ್ಪರ್" ಓವೆನ್ಸ್ – ಗಾಯಕ (1996–2003)
ಅವಧಿಯ(ಸೆಷನ್) ಸಂಗೀತಗಾರರು
[ಬದಲಾಯಿಸಿ]- ಸೈಮನ್ ಫಿಲಿಪ್ಸ್ – ಸಿನ್ ಆಫ್ಟರ್ ಸಿನ್ ನಲ್ಲಿ ಡ್ರಮ್, ತಾಳವಾದ್ಯ ವಾದಕನಾಗಿದ್ದನು (1977 – ಎಲ್ಲಾ ಹಾಡುಗಳು)
- ಡಾನ್ ಏರಿ – ಪೈನ್‌ಕಿಲ್ಲರ್ (1990 – "ಎ ಟಚ್ ಆಫ್ ಎವಿಲ್" ಹಾಡು), ಡೆಮೋಲಿಷನ್ (2001 – ಅನೇಕ ಹಾಡುಗಳು), ಏಂಜೆಲ್ ಆಫ್ ರಿಟ್ರಿಬ್ಯೂಷನ್ (2005 – ಅನೇಕ ಹಾಡುಗಳು), ನಾಸ್ಟ್ರಡಮಸ್ (2008 – ಅನೇಕ ಹಾಡುಗಳು) ಮೊದಲಾದವುಗಳಲ್ಲಿ ಕೀಬೋರ್ಡ್-ವಾದಕ, ಸಂಯೋಜಕನಾಗಿದ್ದನು.
- ಜೆಫ್ ಮಾರ್ಟಿನ್ – ಟರ್ಬೊ ದಲ್ಲಿ ಹಿನ್ನೆಲೆ ಗಾಯಕನಾಗಿದ್ದನು (1986 – "ವೈಲ್ಡ್ ನೈಟ್ಸ್, ಹಾಟ್ ಆಂಡ್ ಕ್ರೇಜಿ ಡೇಸ್" ಹಾಡು)
- ಟಾಮ್ ಅಲಮ್ – ಬ್ರಿಟಿಷ್ ಸ್ಟೀಲ್ ನಲ್ಲಿ ಹಾಲು ಮತ್ತು ಬೀರ್ ಬಾಟಲ್ ಪುಡಿಪುಡಿ ಮಾಡಿದನು (1980 – "ಬ್ರೇಕಿಂಗ್ ದ ಲಾವ್" ಹಾಡು)
ಧ್ವನಿಮುದ್ರಿಕೆ ಪಟ್ಟಿ
[ಬದಲಾಯಿಸಿ]- ರೋಕ ರೋಲ (1974)
- ಸ್ಯಾಡ್ ವಿಂಗ್ಸ್ ಆಫ್ ಡೆಸ್ಟಿನಿ (1976)
- ಸಿನ್ ಆಫ್ಟರ್ ಸಿನ್ (1977)
- ಸ್ಟೈನ್ಡ್ ಕ್ಲಾಸ್ (1978)
- ಕಿಲ್ಲಿಂಗ್ ಮೆಶಿನ್/ಹೆಲ್ ಬೆಂಟ್ ಫಾರ್ ಲೆದರ್ (1978)
- ಬ್ರಿಟಿಷ್ ಸ್ಟೀಲ್ (1980)
- ಪಾಯಿಂಟ್ ಆಫ್ ಎಂಟ್ರಿ (1981)
- ಸ್ಕ್ರೀಮಿಂಗ್ ಫಾರ್ ವೆಂಜನ್ಸ್ (1982)
- ಡಿಫೆಂಡರ್ಸ್ ಆಫ್ ದ ಫೈತ್ (1984)
- ಟರ್ಬೊ (1986)
- ರ್ಯಾಮ್ ಇಟ್ ಡೌವ್ನ್ (1988)
- ಪೈನ್‌ಕಿಲ್ಲರ್ (1990)
- ಜುಗುಲೇಟರ್ (1997)
- ಡೆಮೋಲಿಷನ್ (2001)
- ಏಂಜೆಲ್ ಆಫ್ ರಿಟ್ರಿಬ್ಯೂಷನ್ (2005)
- ನಾಸ್ಟ್ರಡಮಸ್ (2008)
ಆಕರಗಳು
[ಬದಲಾಯಿಸಿ]- ↑ Berelian, Essi. The Rough Guide to Heavy Metal. Rough Guides. p. 172. ISBN 1-84353-415-0.
- ↑ http://www.ticketluck.com/concert-tickets/Judas-Priest/index.php
- ↑ "ಆಲ್ ಆಟ್ಕಿನ್ಸ್ ರಿಕೌಂಟಿಂಗ್ ಆಫ್ ದ ಫೌಂಡಿಂಗ್ ಆಫ್ ಜುದಾಸ್ ಪ್ರೀಸ್ಟ್". Archived from the original on 2011-09-03. Retrieved 2010-07-01.
- ↑ "ಜುದಾಸ್ ಪ್ರೀಸ್ಟ್ ಇನ್ಫೊ ಪೇಜಸ್ - ಫೋರ್ಜಿಂಗ್ ದ ಮೆಟಲ್". Archived from the original on 2008-09-15. Retrieved 2010-07-01.
- ↑ "ಜುದಾಸ್ ಪ್ರೀಸ್ಟ್ ಇನ್ಫೊ ಪೇಜಸ್ - ರೋಕ ರೋಲ". Archived from the original on 2007-10-16. Retrieved 2010-07-01.
- ↑ "Unleashed in the East > Overview'". Allmusic. Retrieved 2007-04-23.
- ↑ "Judas Priest CD & DVD release on Sony BMG'". JudasPriest.com. Retrieved 2007-04-23.
- ↑ "Screaming for Vengeance Info Page". Judas Priest Info Pages.
- ↑ "Defenders of the Faith Info Page". Judas Priest Info Pages. Archived from the original on 2007-02-05. Retrieved 2010-07-01.
- ↑ "ಜುದಾಸ್ ಪ್ರೀಸ್ಟ್ - ರ್ಯಾಮ್ ಇಟ್ ಡೌವ್ನ್ ರಿವ್ಯೂ". Archived from the original on 2009-12-06. Retrieved 2010-07-01.
- ↑ with Rob Halford "Q&A with Rob Halford > Overview'". Montreal Gazette. Retrieved 2009-08-22.
{{cite news}}
: Check|url=
value (help) - ↑ ೧೨.೦ ೧೨.೧ ೧೨.೨ ೧೨.೩ Moore, Timothy (November/December 1996). "Scientific Consensus and Expert Testimony: Lessons from the Judas Priest Trial". Skeptical Inquirer. Archived from the original on 2009-08-05. Retrieved 2006-11-18.
{{cite news}}
: Check date values in:|date=
(help) - ↑ Cooper, Candy (July 1, 2005). "The Judas Priest Trial: 15 Years Later". Blabbermouth.net. Archived from the original on 2007-10-01. Retrieved 2006-11-18.
- ↑ "War of Words Info Page". Judas Priest Info Pages.
- ↑ ೧೫.೦ ೧೫.೧ "Work On New Album Is 'Going Incredibly Well'". Blabbermouth.net. September 12, 2006. Archived from the original on 2007-10-01. Retrieved 2006-11-18.
- ↑ "Judas Priest Issues Warning About Ticket Prices". idiomag. 2009-02-12. Retrieved 2009-02-13.
- ↑ ಮೆಸೇಜ್ ಫ್ರಮ್ ಜುದಾಸ್ ಪ್ರೀಸ್ಟ್ ಆಫ್ಟರ್ US ಟೂರ್
- ↑ ವೈಟ್‌ಸ್ನೇಕ್ ಟೂರ್ ಅನೌಂಸ್ಮೆಂಟ್
- ↑ ಜುದಾಸ್ ಪ್ರೀಸ್ಟ್ ಗ್ರಾಮಿ ನೋಮಿನೇಶನ್ ಫಾರ್ ಡಿಸ್ಸಿಡೆಂಟ್ ಅಗ್ರೆಸ್ಸರ್
- ↑ "ಜುದಾಸ್ ಪ್ರೀಸ್ಟ್ ಇನ್ಫೊ ಪೇಜಸ್ - ಟರ್ಬೊ". Archived from the original on 2008-09-19. Retrieved 2010-07-01.
- ↑ "Greatest Metal Bands of All Time". MTV.com. Archived from the original on 2010-07-24. Retrieved 2010-07-01.
- ↑ "Hell Bent for Leather/Killing Machine Info Page". Judas Priest Info Pages. Archived from the original on 2008-09-19. Retrieved 2010-07-01.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Find more about ಜುದಾಸ್ ಪ್ರೀಸ್ಟ್ at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- ಜುದಾಸ್ ಪ್ರೀಸ್ಟ್ – ಅಧಿಕೃತ ವೆಬ್ಸೈಟ್
- Judas Priest on Myspace
- ರಾಬ್ ಹಾಲ್ಫರ್ಡ್ – ಅಧಿಕೃತ ವೆಬ್ಸೈಟ್
- Moore, Timothy (November/December 1996). "Scientific Consensus and Expert Testimony: Lessons from the Judas Priest Trial". Skeptical Inquirer. Archived from the original on 2009-08-05. Retrieved 2010-07-01.
{{cite news}}
: Check date values in:|date=
(help) - ಹೋಮ್ ಆಫ್ ಮೆಟಲ್ ಹೋಮ್ ಆಫ್ ಮೆಟಲ್ ಡಿಜಿಟಲ್ ಆರ್ಕೈವ್
- Cooper, Candy (September 29, 1989). "Subliminal messages, heavy metal music and teen-age suicide". San Francisco Examiner. Archived from the original on ಜುಲೈ 6, 2010. Retrieved ಜುಲೈ 1, 2010.
- "The Judas Priest Trial: 15 Years Later". Blabbermouth.net. July 1, 2005. Archived from the original on ಅಕ್ಟೋಬರ್ 1, 2007. Retrieved ಜುಲೈ 1, 2010.
ಸಂದರ್ಶನಗಳು
[ಬದಲಾಯಿಸಿ]- ರಾಬ್ ಹಾಲ್ಫರ್ಡ್ ಒಂದಿಗಿನ ಸಂದರ್ಶನ
- ಮ್ಯಾಕ್ಸಿಮಮ್ ತ್ರೆಶೋಲ್ಡ್ ರೇಡಿಯೊ ಪ್ರದರ್ಶನದಲ್ಲಿನ ಟಿಮ್ "ರಿಪ್ಪರ್" ಓವೆನ್ಸ್‌ನ ಸಂದರ್ಶನ
- ಮ್ಯಾಕ್ಸಿಮಮ್ ತ್ರೆಶೋಲ್ಡ್ ರೇಡಿಯೊ ಪ್ರದರ್ಶನದಲ್ಲಿನ ರಾಬ್ ಹಾಲ್ಫರ್ಡ್‌ನ ಸಂದರ್ಶನ
- MTಯಲ್ಲಿನ KK ಡೌವ್ನಿಂಗ್‌ನ ಸಂದರ್ಶನ
- ರೇಡಿಯೊ ಫ್ರೀಕ್ವೆನ್ಸಿಯಲ್ಲಿನ K.K ಡೌವ್ನಿಂಗ್ ಒಂದಿಗಿನ ಸಂದರ್ಶನ
- ನಾಸ್ಟ್ರಡಮಸ್ನಲ್ಲಿ ರಾಬ್ ಹಾಲ್ಫರ್ಡ್ Archived 2011-06-17 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- CS1 errors: URL
- CS1 errors: dates
- Pages with unresolved properties
- Articles with hCards
- Articles with unsourced statements from October 2008
- Articles with hatnote templates targeting a nonexistent page
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಜುದಾಸ್ ಪ್ರೀಸ್ಟ್
- ಇಂಗ್ಲಿಷ್ ಹೆವಿ ಮೆಟಲ್ ಸಂಗೀತ ತಂಡಗಳು
- ಇಂಗ್ಲಿಷ್ ಹಾರ್ಡ್ ರಾಕ್ ಸಂಗೀತ ತಂಡಗಳು
- ಪಶ್ಚಿಮ ಮಿಡ್ಲ್ಯಾಂಡ್ಸ್ನ ಬರ್ಮಿಂಘಮ್‌ನ ಸಂಗೀತ ತಂಡಗಳು
- 1969ರಲ್ಲಿ ರಚಿಸಲಾದ ಸಂಗೀತ ವಾದ್ಯ-ತಂಡಗಳು
- ಸಂಗೀತ ಪಂಚಮೇಳಗಳು
- 1970ರ ಸಂಗೀತ ತಂಡಗಳು
- 1980ರ ಸಂಗೀತ ತಂಡಗಳು
- 1990ರ ಸಂಗೀತ ತಂಡಗಳು
- 2000ರ ಸಂಗೀತ ತಂಡಗಳು
- 2010ರ ಸಂಗೀತ ತಂಡಗಳು
- RCA ವಿಕ್ಟರ್ ರೆಕಾರ್ಡ್ಸ್ ಕಲಾವಿದರು
- ಕೆರ್ರಾಂಗ್! ಪ್ರಶಸ್ತಿ ವಿಜೇತರು
- ಗ್ರಾಮಿ ಪ್ರಶಸ್ತಿ ವಿಜೇತರು
- ಪಾಶ್ಚಾತ್ಯ ಸಂಗೀತಗಾರರು