ಜುಬೇದಾ (ಚಲನಚಿತ್ರ)
ಜುಬೈದ | |
---|---|
ನಿರ್ದೇಶನ | ಶ್ಯಾಮ್ ಬೆನಗಲ್ |
ನಿರ್ಮಾಪಕ | ಫರೂಕ್ ರತ್ತೊಂಸೆ |
ಚಿತ್ರಕಥೆ | ಖಲೀದ್ ಮೊಹಮ್ಮದ್ |
ಕಥೆ | ಖಲೀದ್ ಮೊಹಮ್ಮದ್ |
ಪಾತ್ರವರ್ಗ |
|
ಸಂಗೀತ | ಎ.ಆರ್.ರೆಹಮಾನ್ |
ಛಾಯಾಗ್ರಹಣ | ರಾಜನ್ ಕೊಠಾರಿ |
ಸಂಕಲನ | ಅಸೀನ್ ಸಿಂಹ |
ಸ್ಟುಡಿಯೋ | ಎಫ್. ಕೆ.ಆರ್ ಪ್ರೊಡಕ್ಷನ್ಸ್ |
ವಿತರಕರು | ಯಶ್ ರಾಜ್ ಫಿಲ್ಸ್ಂ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೯".
|
ಅವಧಿ | 153 ನಿಮಿಷ |
ದೇಶ | ಭಾರತ |
ಭಾಷೆ | ಹಿಂದಿ |
ಬಂಡವಾಳ | ₹೫ ಕೋಟಿ (ಯುಎಸ್$೧.೧೧ ದಶಲಕ್ಷ) [೧] |
ಬಾಕ್ಸ್ ಆಫೀಸ್ | ₹೫.೬ ಕೋಟಿ (ಯುಎಸ್$೧.೨೪ ದಶಲಕ್ಷ)[೨] |
ಜುಬೈದಾ ಚಲನಚಿತ್ರ ೨೦೦ರಲ್ಲಿ ತೆರೆಕಂಡಿತು. ಇದನ್ನು ಶ್ಯಾಮ್ ಬೆನಗಲ್ ಅವರು ನಿರ್ದೇಶಿಸಿದರು. ಇದರ ಕತೆಗಾರರು ಖಲೀದ್ ಮೊಹಮ್ಮದ್. ಇದರಲ್ಲಿ
ಕರಿಷ್ಮಾ ಕಪೂರ್ , ರೇಖಾ , ಮನೋಜ್ ಬಾಜಪಾಯ್ , ಅಮರೀಶ್ ಪುರಿ ,ಫರೀದಾ ಜಲಾಲ್ ,ಲಿಲೇಟ್ ದುಬೆ ,ಶಕ್ತಿ ಕಪೂರ್ ಮುಂತಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದರ ಹಿನ್ನೆಲೆ ಸಂಗೀತ ನಿರ್ದೇಶಕರು ಎ.ಆರ್. ರೆಹಮಾನ್ [೩]
ಚಿತ್ರ ಕತೆ
[ಬದಲಾಯಿಸಿ]ಅಜ್ಜಿಯ ಜೊತೆಯಲ್ಲಿಯೇ ಬೆಳೆದ ರಿಯಾಜ್(ರಜಿತ್ ಕಪೂರ್)ನ ತಾಯಿಯ ಹುಡುಕಾಟದ ಕತೆಯೇ ಜುಬೈದ. ಆತನ ತಾಯಿಯೇ ಜುಬೈದ(ಕರಿಷ್ಮಾ ಕಪೂರ್). ಆಕೆ ಚಲನಚಿತ್ರ ನಿರ್ಮಾಪಕ ಸುಲೇಮಾನ್ ಸೇತ್(ಅಮರೀಶ್ ಪುರಿ)ಯ ಏಕೈಕ ಪುತ್ರಿ. ಆಕೆ ತನ್ನ ತಂದೆಗೆ ಗೊತ್ತಿಲ್ಲದಂತೆ ಚಲನಚಿತ್ರಗಳಲ್ಲಿ ನಟಿಸುತ್ತಿರುತ್ತಾಳೆ. ಈ ವಿಷಯ ಆಕೆಯ ತಂದೆಗೆ ತಿಳಿದಾಗ ಸಿಟ್ಟಿಗೆದ್ದ ಆತ ಆಕೆ ಮುಂದೆಂದೂ ಚಲನಚಿತ್ರಗಳಲ್ಲಿ ನಟಿಸದಂತೆ ಆದೇಶಿಸುತ್ತಾನೆ . ಶೀಘ್ರದಲ್ಲಿಯೇ ತನ್ನ ಗೆಳೆಯನ ಮಗ ಡಾ| ಮೆಹಬೂಬ್ ಆಲಂ ಜೊತೆ ಆಕೆಯ ವಿವಾಹವನ್ನೂ ಮಾಡುತ್ತಾನೆ. ಮೆಹಬೂಬ್ ಮನೆಯಳಿಯನಾಗಿ ಅಲ್ಲೇ ಉಳಿಯುತ್ತಾನೆ. ಸುಖೀ ಸಂಸಾರವನ್ನು ನಡೆಸುವ ಆಕೆ ರಿಯಾಜ್ ಗೆ ಜನ್ಮ ನೀಡುತ್ತಾಳೆ. ಅದಾದ ಕೆಲವು ದಿನಗಳಲ್ಲೇ ಮೆಹಬೂಬಿನ ತಂದೆ ಮತ್ತು ಸುಲೇಮಾನ್ ಸೇತ್ ನಡುವೆ ವೈಮನಸ್ಯ ಬೆಳೆದು ಮೆಹಬೂಬ್ ಮತ್ತು ಜುಬೈದಾಳ ವೈವಾಹಿಕ ಜೀವನ ಮುರಿದು ಬೀಳುತ್ತದೆ.
ಬೇಸರಗೊಂಡ ಜುಬೈದ ಫತೇಪುರದ ಮಹಾರಾಜ ವಿಜಯೇಂದ ಸಿಂಗ(ಮನೋಜ್ ಬಾಜಪೇಯಿ)ರನ್ನು ಭೇಟಿ ಮಾಡುತ್ತಾಳೆ. ವಿಜಯೇಂದ್ರ ಸಿಂಗರಿಗೆ ಆಗಲೇ ಮಹಾರಾಣಿ ಮಂದಿರಾ ದೇವಿ(ರೇಖಾ) ಜೊತೆಗೆ ವಿವಾಹವಾಗಿರುತ್ತದೆ. ಅವರಿಗೆ ಎರಡು ಮಕ್ಕಳೂ ಇರುತ್ತಾರೆ. ಆದರೂ ಅವರಿಗೆ ಜುಬೈದಾಳೊಂದಿಗೆ ಪ್ರೇಮಾಂಕುರವಾಗಿ ಅವಳೊಂದಿಗೆ ವಿವಾಹವಾಗುತ್ತಾರೆ. ಜುಬೈದಾಳಿಗೆ ಮಹಾರಾಜರ ಬಗ್ಗೆ ಅತೀವ ಪ್ರೇಮವಿದ್ದರೂ ಅರಮನೆಯ ಆಚರಣೆಗಳು ಮತ್ತು ಆಕೆಯ ಮೈದುನನ ನಡುವಳಿಕೆಗಳು ಅವಳಿಗೆ ಕಿರಿಕಿರಿ ಉಂಟು ಮಾಡುತ್ತಿರುತ್ತದೆ. ಮೈದುನ ತನ್ನೊಂದಿಗೆ ಅನೈತಿಕ ಸಂಬಂಧ ಹೊಂದುವಂತೆ ಆಕೆಯನ್ನು ಒತ್ತಾಯಿಸುತ್ತಿರುತ್ತಾನೆ ಎಂಬುವ ವಿಷಯ ಆಕೆಯ ದಿನಚರಿಯ ಮೂಲಕ ರಿಯಾಜ್ಗೆ ತಿಳಿಯುತ್ತದೆ.
ರಿಯಾಜ್ ಫತೇಪುರಿಗೆ ತೆರಳಿ ಅಲ್ಲಿನ ಜನರನ್ನು ತನ್ನ ತಾಯಿಯ ಬಗ್ಗೆ ಕೇಳುತ್ತಾನೆ. ಕೆಲವರು ಆ ಹೆಸರಿನ ಮಹಿಳೆ ಇಲ್ಲವೇ ಇಲ್ಲವೆಂದು ಹೇಳಿದರೆ ಕೆಲವರು ಆಕೆ ತಮ್ಮ ರಾಜನನ್ನು ವಂಚಿಸಿ ವಿಮಾನ ಅಪಘಾತದಲ್ಲಿ ಸಾಯುವಂತೆ ಮಾಡಿದ ಕೆಟ್ಟವಳೆಂದು ಹೇಳುತ್ತಾರೆ. ಆದರೆ "ಮಂದಿ ದೀದಿ" ಎಂದು ಜುಬೈದಾ ಕರೆಯುತ್ತಿದ್ದ ರಾಣಿ ಮಂದಿರಾ ದೇವಿಯಿಂದ ರಿಯಾಜ್ಗೆ ಬೇರೆ ಸಂಗತಿಗಳು ತಿಳಿಯುತ್ತವೆ.
ಅರಮನೆಯಲ್ಲಿ ಜುಬೈದಳ ದಿನಚರಿ ಪಡೆದ ರಿಯಾಜ್ಗೆ ವಿಜಯೇಂದ್ರ ಸಿಂಹರು ರಾಜಕಾರಣಿಯಾದ ವಿಷಯ ತಿಳಿಯುತ್ತದೆ. ಅವರು ದೆಹಲಿಗೆ ಅವಶ್ಯಕ ಮೀಟಿಂಗಿಗೆ ವಿಮಾನದಲ್ಲಿ ಹೋಗಬೇಕಾಗಿರುತ್ತದೆ. ರಾಜರ ಎಲ್ಲಾ ಅಗತ್ಯಗಳಿಗೂ ರಾಣಿ ಮಂದಿರಾ ದೇವಿಯೇ ಸಹಾಯ ಮಾಡುತ್ತಿರುತ್ತಾಳೆ. ಇದರಿಂದ ಕಿರಿಕಿರಿಗೊಳ್ಳುವ ಜುಬೈದಾ ಈ ಬಾರಿ ತಾನೇ ಬರುವೆ ಎಂದು ವಿಮಾನದಲ್ಲಿ ಹೊರಡುತ್ತಾಳೆ. ಅಪಘಾತಕ್ಕೊಳಗಾಗುವ ವಿಮಾನದಲ್ಲಿ ವಿಜಯೇಂದ್ರ ಸಿಂಗ್ ಮತ್ತು ಜುಬೈದಾ ಸಾಯುತ್ತಾರೆ. ಮೈದುನ ಉದಯ ಸಿಂಗ್ ವಿಜಯೇಂದ್ರ ಸಿಂಗ್ ಮತ್ತು ಮಂದಿರಾಳನ್ನು ಅಪಘಾತದಲ್ಲಿ ಸಾಯಿಸಿ ಜುಬೈದಾಳನ್ನು ಪಡೆಯುವ ಸಂಚು ಹೂಡಿರುತ್ತಾನೆ. ಆದರೆ ಅದರಲ್ಲಿ ವಿಜಯೇಂದ್ರ ಸಿಂಗ್ ಮತ್ತು ಜುಬೈದಾ ಸಾಯುತ್ತಾರೆ.
ಚಿತ್ರದ ಕೊನೆಗೆ ರಿಯಾಜ್ಗೆ ತನ್ನ ತಾಯಿ ನಟಿಸಿದ್ದ ಚಿತ್ರದ ಏಕೈಕ ಟೇಪ್ ಸಿಗುತ್ತದೆ. ಆತ ತನ್ನ ತಾಯಿ ಯಾರು ಅಂತ ತಿಳಿದುಕೊಂಡು ಆಕೆಯ ಚಿತ್ರ ನೋಡುವಲ್ಲಿ ಮತ್ತು ಆತನ ಅಜ್ಜಿ ತನ್ನ ಮಗಳು ಖುಷಿಯಾಗಿ ನರ್ತಿಸುತ್ತಿದ್ದ ಚಿತ್ರ ನೋಡುತ್ತಾ ಆನಂದ ಭಾಷ್ಪ ಸುರಿಸುವ ದೃಶ್ಯದಲ್ಲಿ ಕೊನೆಗೊಳ್ಳುತ್ತದೆ.
ತಾರಾಗಣ
[ಬದಲಾಯಿಸಿ]- ಕರಿಷ್ಮಾ ಕಪೂರ್
- ರೇಖಾ
- ಮನೋಜ್ ಬಾಜಪಾಯ್
- ಅಮರೀಶ್ ಪುರಿ
- ಫರೀದಾ ಜಲಾಲ್
- ಲಿಲೇಟ್ ದುಬೆ
- ಶಕ್ತಿ ಕಪೂರ್
- ರಜಿತ್ ಕಪೂರ್
ಉಲ್ಲೇಖಗಳು
[ಬದಲಾಯಿಸಿ]- ↑ "Boxoffice". Archived from the original on 17 ನವೆಂಬರ್ 2015. Retrieved 22 ಅಕ್ಟೋಬರ್ 2015.
- ↑ "Zubeidaa - Movie - Box Office India". Archived from the original on 10 ಜೂನ್ 2023. Retrieved 5 ಫೆಬ್ರವರಿ 2017.
- ↑ "Film Review: Zubeidaa". The Hindu. ಫೆಬ್ರವರಿ 2001. Archived from the original on 2 ಮೇ 2022. Retrieved 2 ಮೇ 2022.