ಜೂನ್ ಆರ್
ಜೂನ್ ಆರ್ | |
---|---|
![]() ಡಿವಿಡಿ ಕವರ್ | |
ನಿರ್ದೇಶನ | ರೇವತಿ ಎಸ್. ವರ್ಮ |
ನಿರ್ಮಾಪಕ | ಎ. ಅನ್ಸಾರಿ |
ಪಾತ್ರವರ್ಗ | ಜ್ಯೋತಿಕಾ ಖುಷ್ಬೂ ಸುಂದರ್ ಸರಿತಾ ಬಿಜು ಮೆನನ್ |
ಸಂಗೀತ | ಶರತ್ |
ಛಾಯಾಗ್ರಹಣ | ಮಧು ಅಂಬಟ್ |
ಸಂಕಲನ | ಜ್ಯೋತಿ ಜಯಮಾರುತಿ |
ಸ್ಟುಡಿಯೋ | ಐಡಿಯಾವೋಲ್ಡ್ 1 ಸೆಲ್ಯುಲಾಯ್ಡ್ ಪ್ರೈವೇಟ್ ಲಿಮಿಟೆಡ್ |
ಬಿಡುಗಡೆಯಾಗಿದ್ದು |
|
ಅವಧಿ | ೧೨೦ ನಿಮಿಷಗಳು |
ದೇಶ | ಭಾರತ |
ಭಾಷೆ | ತಮಿಳು |
ಜೂನ್ ಆರ್ ಇದು ೨೦೦೬ ರ ಭಾರತೀಯ ತಮಿಳು ಭಾಷೆಯ ನಾಟಕ ಚಲನಚಿತ್ರವಾಗಿದ್ದು, ರೇವತಿ ವರ್ಮಾರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಜ್ಯೋತಿಕಾರವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ಖುಷ್ಬೂ ಸುಂದರ್, ಸರಿತಾ ಮತ್ತು ಬಿಜು ಮೆನನ್ ಅವರೊಂದಿಗಿನ ೨೫ ನೇ ತಮಿಳು ಚಿತ್ರವಾಗಿದೆ. ಚಿತ್ರದ ಧ್ವನಿಪಥಗಳನ್ನು ಮಲಯಾಳಂ ಸಂಯೋಜಕರಾದ ಶರತ್‌ರವರು ಸಂಯೋಜಿಸಿದರೆ, ಮಧು ಅಂಬಟ್ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರವು ಫೆಬ್ರವರಿ ೨೦೦೬ ರಲ್ಲಿ, ಬಿಡುಗಡೆಯಾಯಿತು. ಆದರೆ, ಚಿತ್ರದ ಹಿಂದಿ ರಿಮೇಕ್ ಆಪ್ ಕೆ ಲಿಯೆ ಹಮ್ ಇನ್ನೂ ಬಿಡುಗಡೆಯಾಗಿಲ್ಲ.[೧]
ಕಥಾವಸ್ತು
[ಬದಲಾಯಿಸಿ]ಜೂನ್ ಆರ್ (ಜ್ಯೋತಿಕಾ) ಎಂಬ ಹೆಸರಿನ ಅನಾಥೆ, ಜೂನ್ ತಿಂಗಳಲ್ಲಿ ಜನಿಸಿದ್ದರಿಂದ ಈ ಹೆಸರು ಬಂದಿದೆ. ಅವರು ಜಾಹೀರಾತು ಏಜೆನ್ಸಿಯಲ್ಲಿ ಕೆಲಸ ಮಾಡುತ್ತಾರೆ. ಒಂದು ದಿನ ಅವರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಮಧ್ಯವಯಸ್ಕ ಮಹಿಳೆಯನ್ನು (ಸರಿತಾ) ಭೇಟಿಯಾಗುತ್ತಾರೆ. ಜೀವವನ್ನು ಉಳಿಸುವ ಸಲುವಾಗಿ ಅವರು ತಮ್ಮ ತಾಯಿ ರಾಜಲಕ್ಷ್ಮಿ ಎಂಬ ನೆಪದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ.
ರಾಜಲಕ್ಷ್ಮಿ ವಾಸ್ತವವಾಗಿ ರಾಣಿಯಮ್ಮಾಳ್, ವಿಧವೆ. ಅವರ್ರು ತಮ್ಮ ಏಕೈಕ ಮಗ ಅರುಣ್ (ಬಿಜು ಮೆನನ್) ನನ್ನು ಬೆಳೆಸಲು ಶ್ರಮಿಸುತ್ತಾರೆ. ಅರುಣ್ ಮತ್ತು ಅವನ ಹೆಂಡತಿ ರಾಣಿಯಮ್ಮಾಳ್ ಅವರನ್ನು ಅನಾಥಾಶ್ರಮಕ್ಕೆ ಕಳುಹಿಸಿ ನ್ಯೂಯಾರ್ಕ್‌ನಲ್ಲಿ ನೆಲೆಸಲು ಯೋಜಿಸುತ್ತಾರೆ. ಬಾಲ್ಯದಿಂದಲೂ ತಾಯಿ ಪ್ರೀತಿಗಾಗಿ ಯಾವಾಗಲೂ ಹಂಬಲಿಸುತ್ತಿರುವ ಜೂನ್‌ನ ಕಂಪನಿಯಲ್ಲಿ ರಾಣಿಯಮ್ಮಾಳ್ ಸಮಾಧಾನವನ್ನು ಕಂಡುಕೊಳ್ಳುತ್ತಾರೆ. ಜೂನ್ ಮತ್ತು ರಾಣಿಯಮ್ಮಾಳ್ ಒಟ್ಟಿಗೆ ಜೀವನವನ್ನು ಕಳೆಯುತ್ತಾರೆ.
ನಂತರ, ಅರುಣ್ ರಾಣಿಯಮ್ಮಾಳ್‌ನನ್ನು ಮರಳಿ ಕರೆದೊಯ್ಯಲು ಹಿಂತಿರುಗುತ್ತಾನೆ. ಆದರೆ, ಅವರು ಅವನೊಂದಿಗೆ ಹೋಗಲು ನಿರಾಕರಿಸುತ್ತಾರೆ. ಅರುಣ್ ತನ್ನ ತಾಯಿಯನ್ನು ಹಿಂತಿರುಗಿಸಲು ಜೂನ್‌ನೊಂದಿಗೆ ಜಗಳವಾಡುತ್ತಾನೆ. ರಾಣಿಯಮ್ಮಾಳ್ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಮತ್ತು ಸಾಯುವ ಮೊದಲು ಭೇಟಿಯಾಗಲು ಹಂಬಲಿಸುತ್ತಿರುವ ತಮ್ಮ ಸಹೋದರನನ್ನು (ರವಿಕುಮಾರ್) ಕರೆತರಲು ಜೂನ್ ನಿರ್ಧರಿಸುತ್ತಾರೆ. ರಾಜಲಕ್ಷ್ಮಿಯ ತವರು ಪಟ್ಟಣಕ್ಕೆ ಭೇಟಿ ನೀಡಿದಾಗ ಜೂನ್‌ರವರು ಅರುಣ್ ತಮ್ಮ ತಾಯಿಯ ಮೇಲಿನ ಹಠಾತ್ ಪ್ರೀತಿಯ ಹಿಂದಿನ ರಹಸ್ಯವನ್ನು ಬಹಿರಂಗಪಡಿಸುತ್ತಾನೆ.
ಪ್ರಮುಖ ವಕೀಲೆಯಾದ ಅಮುಧಾ (ಖುಷ್ಬೂ ಸುಂದರ್) ತಮ್ಮ ಹೊಸ ತಾಯಿಯನ್ನು ಕಾನೂನುಬದ್ಧವಾಗಿ ಮರಳಿ ಪಡೆಯಲು ಜೂನ್‌ರವರಿಗೆ ಸಹಾಯ ಮಾಡುತ್ತಾರೆ. ನ್ಯಾಯಾಲಯದ ತೀರ್ಪು ಜೂನ್‌ರವರ ಪರವಾಗಿದ್ದರೂ, ವಿಧಿಯು ಬೇರೆಯದನ್ನು ಕಾದಿತ್ತು. ರಾಣಿಯಮ್ಮಾಳ್ ಸತ್ತಿದ್ದಾರೆಂದು ಜೂನ್‌ರವರಿಗೆ ತಿಳಿಯುತ್ತದೆ. ಜೂನ್‌ರವರ ಜಾಹೀರಾತು ಏಜೆನ್ಸಿಯ ಶ್ರೀಮಂತ ಗ್ರಾಹಕರಾದ ರಾಜಾ (ಸೂರ್ಯ) ಜೂನ್‌ರವರನ್ನು ಪ್ರೀತಿಸುತ್ತಾನೆ ಮತ್ತು ರಾಣಿಯಮ್ಮಾಳ್ ಬಯಸಿದಂತೆ ಅವರನ್ನು ತನ್ನೊಂದಿಗೆ ಕರೆದೊಯ್ಯುತ್ತಾನೆ.
ಪಾತ್ರವರ್ಗ
[ಬದಲಾಯಿಸಿ]- ಜೂನ್ ಆರ್ ಪಾತ್ರದಲ್ಲಿ ಜ್ಯೋತಿಕಾ
- ರಾಜಾ ಪಾತ್ರದಲ್ಲಿ ಸುರಿಯಾ (ಅತಿಥಿ ಪಾತ್ರ)
- ರಾಣಿಯಮ್ಮಾಳ್/ರಾಜಲಕ್ಷ್ಮಿ ಪಾತ್ರದಲ್ಲಿ ಸರಿತಾ
- ಅಮುದಾ ಪಾತ್ರದಲ್ಲಿ ಖುಷ್ಬು
- ಅರುಣ್ ಪಾತ್ರದಲ್ಲಿ ಬಿಜು ಮೆನನ್
- ರಾಣಿಯಮ್ಮಾಳ್ ಸಹೋದರನಾಗಿ ರವಿಕುಮಾರ್
- ಸುಂದರ್ ಪಾತ್ರದಲ್ಲಿ ಸಿದ್ಧಾರ್ಥ್ ವೇಣುಗೋಪಾಲ್
ಉತ್ಪಾದನೆ
[ಬದಲಾಯಿಸಿ]ರೇವತಿ ಎಸ್ ವರ್ಮಾ ಅವರು ಜೂನ್ ಆರ್ ಚಿತ್ರವನ್ನು ಇಂಗ್ಲಿಷ್ ನಿಯತಕಾಲಿಕವಾದ ವುಮೆನ್ಸ್ ಎರಾದಲ್ಲಿ ಕಾದಂಬರಿಯಾಗಿ ಪ್ರಕಟಿಸಿದ್ದರು ಮತ್ತು ಕಥೆಯನ್ನು ಚಲನಚಿತ್ರವಾಗಿ ಮಾಡಲು ಬಯಸಿದ್ದರು. ಅವರು ಮುಂಬೈನಲ್ಲಿ ಹಿಂದಿ ಚಲನಚಿತ್ರ ನಿರ್ಮಾಪಕರನ್ನು ಸಂಪರ್ಕಿಸಿದರು ಮತ್ತು ಜಯಾ ಬಚ್ಚನ್, ತಬು ಮತ್ತು ಕರೀನಾ ಕಪೂರ್ ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಲು ನಿರ್ಧರಿಸಿದರು.[೨] ಜ್ಯೋತಿಕಾರವರು ಈ ಚಿತ್ರವನ್ನು ಮೊದಲು ತಮಿಳಿನಲ್ಲಿ ನಿರ್ಮಿಸಬೇಕೆಂದು ಸಲಹೆ ನೀಡಿದರು. ನಿರ್ಮಾಣ ಹಂತವು ಪ್ರಾರಂಭವಾಯಿತು ಮತ್ತು ಖುಷ್ಬುರವರು ಪ್ರಮುಖ ಪಾತ್ರಕ್ಕಾಗಿ ಸಹಿ ಹಾಕಿದರು.[೩] ಚಿತ್ರದ ಮತ್ತೊಂದು ಹಿರಿಯ ಪಾತ್ರಕ್ಕಾಗಿ ಊರ್ವಶಿ ಬದಲಿಗೆ ಸರಿತಾ ಅವರನ್ನು ಆಯ್ಕೆ ಮಾಡಲಾಯಿತು. ಮಲಯಾಳಂ ನಟ ಬಿಜು ಮೆನನ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲು ಆಯ್ಕೆಯಾದರು.[೪]
ಧ್ವನಿಪಥ
[ಬದಲಾಯಿಸಿ]ಚಿತ್ರದ ಧ್ವನಿಪಥವನ್ನು ಶರತ್‌ರವರು ಸಂಯೋಜಿಸಿದ್ದಾರೆ. ಇದು ಮ್ಯಾಜಿಕ್ ಮ್ಯಾಜಿಕ್ ೩ಡಿ (೨೦೦೩) ನಂತರ ತಮಿಳಿನಲ್ಲಿ ಅವರ ಎರಡನೇ ಯೋಜನೆಯಾಗಿದೆ. ಜೂನ್ ಆರ್ ಚಿತ್ರದ ಧ್ವನಿಸುರುಳಿಯನ್ನು ೧೦ ಸೆಪ್ಟೆಂಬರ್ ೨೦೦೫ ರಂದು ಚೆನ್ನೈನ ಗ್ರೀನ್ ಪಾರ್ಕ್ ಹೋಟೆಲ್‌ನಲ್ಲಿ ಬಾಲಮುರಳಿ ಕೃಷ್ಣರವರು ಬಿಡುಗಡೆ ಮಾಡಿದರು.[೫][೬]
ಟ್ರ್ಯಾಕ್ ಪಟ್ಟಿ | |||
---|---|---|---|
ಸಂ. | ಹಾಡು | ಗಾಯಕರು | ಸಮಯ |
1. | "ಮಜಯೇ ಮಜಯೇ" | ಹರಿಹರನ್ | |
2. | "ಪುತ್ತು ಪುತ್ತು" | ಉಷಾ ಉತ್ತುಪ್, ಕೆ ಎಸ್ ಚಿತ್ರಾ | |
3. | "ಅಂಬೆ ಅಂಬೆ" | ಗಾಯತ್ರಿ ವರ್ಮಾ | |
4. | "ಈನೋ ಈನೋ" | ಶರತ್ | |
5. | "ಮಜಯೇ ಮಜಯೇ" | ಸುಜಾತಾ | |
6. | "ಪುತ್ತು ಪುತ್ತು" (ಆವೃತ್ತಿ ೨) | ಉಷಾ ಉತ್ತುಪ್, ಕೆ ಎಸ್ ಚಿತ್ರಾ |
ಬಿಡುಗಡೆ ಮತ್ತು ಸ್ವಾಗತ
[ಬದಲಾಯಿಸಿ]ಈ ಚಿತ್ರವು ಆರಂಭದಲ್ಲಿ ಜೂನ್ ೨೦೦೫ ರಲ್ಲಿ, ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರವನ್ನು ಹೆಚ್ಚು ಪ್ರಚಾರ ಮಾಡಲು ೨೦೦೫ ರ ದೀಪಾವಳಿ ಋತುವಿನಲ್ಲಿ ಬಿಡುಗಡೆ ಮಾಡಲು ಮುಂದೂಡಲಾಯಿತು.[೭] ವಿವಾಹಪೂರ್ವ ಲೈಂಗಿಕತೆಯ ಬಗ್ಗೆ ಖುಷ್ಬು ಅವರ ಹೇಳಿಕೆಗಳು ಭಾರತೀಯ ರಾಜಕೀಯ ಪಕ್ಷಗಳನ್ನು ಕೆರಳಿಸಿದ ನಂತರ ಅವರ ಚಲನಚಿತ್ರಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದಾಗ ಈ ಚಿತ್ರವು ಸ್ಥಗಿತಗೊಂಡಿತು.[೮] ಚೆನ್ನೈ ಆನ್‌ಲೈನ್‌ನ ಮಾಲಿನಿ ಮನ್ನತ್ ಹೀಗೆ ಬರೆದರು, "ಇದು ಸ್ತ್ರೀ ಬಂಧದ ಕುರಿತಾದ ಚಿತ್ರವಾಗಿದ್ದು, ಜೀವನವು ಪರಸ್ಪರ ಬೆಸೆದುಕೊಂಡಿದೆ. ಪರಸ್ಪರ ನೈತಿಕ ಬೆಂಬಲ ಮತ್ತು ಸಹಾಯವನ್ನು ಕಂಡುಕೊಳ್ಳುವ ಮೂವರು ಮಹಿಳೆಯರ ಚಿತ್ರವಾಗಿದೆ.[೯] ಆದರೆ, ಪಾತ್ರಗಳು ಆಳವಿಲ್ಲದ ಕಾರಣ ಮತ್ತು ಸಂಬಂಧಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸದ ಅಥವಾ ನಿಭಾಯಿಸದ ಕಾರಣ, ಸ್ತ್ರೀ ಬಂಧದ ಕಥೆಯು ಒಂದು ರಾಗವನ್ನು ಮುಟ್ಟಲು ವಿಫಲವಾಗಿದೆ ". ಮಾಲತಿ ರಂಗರಾಜನ್ ಮಾತನಾಡಿ, ರೇವತಿ ವರ್ಮಾರವರು ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಕಾರ್ತಿ ಮತ್ತು ನಿರ್ದೇಶಕಿಯಾದರು.[೧೦] ತಯಾರಕರಿಗೆ ಸಮಸ್ಯೆಗಳಿಗೆ ಸಂವೇದನಾಶೀಲತೆ ಮಾತ್ರ ಸಾಕಾಗುತ್ತದೆಯೇ, ಜೂನ್ ಆರ್ ತರ್ಕವನ್ನು ನೋಡುವಾಗ ಉದ್ಭವಿಸುವ ಪ್ರಶ್ನೆ ಅಥವಾ ಅದರ ಕೊರತೆ (ಕೆಲವು ಅನುಕ್ರಮಗಳಲ್ಲಿ) ಕಿರಿಕಿರಿ ಉಂಟುಮಾಡುತ್ತದೆ. ಸಿನಿಸೌತ್ ಪ್ರಕಾರ, "ರೇವತಿ ವರ್ಮಾ ಮಹಿಳಾ ನಿರ್ದೇಶಕಿಯಾಗಿರುವುದರಿಂದ, ವಿಭಿನ್ನವಾದದ್ದನ್ನು ನೋಡಲು ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಅದು ಔತಣಕೂಟವನ್ನು ಬಡಿಸದ ಔತಣಕೂಟದಲ್ಲಿ ಭಾಗವಹಿಸಿದಂತಿತ್ತು" ಎಂದು ಬರೆದಿದ್ದಾರೆ.[೧೧]
ಉಲ್ಲೇಖಗಳು
[ಬದಲಾಯಿಸಿ]- ↑ "I'm glad to make a comeback with Chaasni: Raveena". News18. 22 July 2009. Archived from the original on 1 February 2024. Retrieved 1 February 2024.
- ↑ "Ladies special!". Sify. 30 June 2005. Archived from the original on 6 August 2015. Retrieved 9 August 2022.
- ↑ "June R a tale of three women: Revathy". IndiaGlitz. 1 August 2005. Archived from the original on 6 December 2005. Retrieved 7 April 2012.
- ↑ "It's Biju Menon in June R". IndiaGlitz. 20 September 2005. Archived from the original on 2 December 2005. Retrieved 7 April 2012.
- ↑ "'June R' audio launched!". Sify. 11 September 2005. Archived from the original on 20 March 2014. Retrieved 9 August 2022.
- ↑ "Music Review : June R". Behindwoods. Archived from the original on 20 December 2008. Retrieved 26 April 2022.
- ↑ "'June R' for Diwali". Sify. 16 September 2005. Archived from the original on 20 November 2015. Retrieved 9 August 2022.
- ↑ "Ban on Kushboo films to be lifted". Sify. 19 November 2005. Archived from the original on 1 July 2016. Retrieved 9 August 2022.
- ↑ Mannath, Malini (22 February 2006). "June R". Chennai Online. Archived from the original on 14 October 2006. Retrieved 27 April 2022.
- ↑ Rangarajan, Malathi (17 February 2006). "Going overboard with sentiment". The Hindu. Archived from the original on 26 July 2013. Retrieved 16 February 2024.
- ↑ "June R". Cinesouth. Archived from the original on 18 October 2006. Retrieved 8 October 2024.